Tag: ಪಬ್ಲಿಕ್ ಟಿವಿ Buffalo

  • ಎಮ್ಮೆ ಬರ್ತ್ ಡೇ ಆಚರಿಸಿದ್ದಕ್ಕೆ ಕೇಸ್ ದಾಖಲಿಸಿಕೊಂಡ ಪೊಲೀಸರು

    ಎಮ್ಮೆ ಬರ್ತ್ ಡೇ ಆಚರಿಸಿದ್ದಕ್ಕೆ ಕೇಸ್ ದಾಖಲಿಸಿಕೊಂಡ ಪೊಲೀಸರು

    ಮುಂಬೈ: ಕೋವಿಡ್-19 ನಿರ್ಬಂಧಗಳ ನಡುವೆಯೂ ಎಮ್ಮೆಯ ಹುಟ್ಟುಹಬ್ಬವನ್ನು ಆಚರಿಸಿದ್ದ ವ್ಯಕ್ತಿ ವಿರುದ್ಧ ಮಹಾರಾಷ್ಟ್ರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಕಿರಣ್ ಮಾತ್ರೆ(30) ಎಂಬ ವ್ಯಕ್ತಿ ಗುರುವಾರ ತಮ್ಮ ಥಾಣೆಯಲ್ಲಿರುವ ಮನೆಯಲ್ಲಿ ಎಮ್ಮೆಯ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ ಎಂದು ಆರೋಪಿಸಲಾಗಿದೆ.

    ಜಿಲ್ಲೆಯಲ್ಲಿ ಕೊರೊನಾ ವೈರಸ್ ಪ್ರಕರಣ ಹೆಚ್ಚಾಗುತ್ತಿದ್ದರೂ, ಬರ್ತ್‍ಡೇಗೆಂದು ಹಾಜರಾಗಿದ್ದವರು ಮಾಸ್ಕ್ ಧರಿಸಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದೀಗ ಪೊಲೀಸರು ಭಾರತೀಯ ದಂಡ ಸಂಹಿತೆ ಐಪಿಸಿ ಸೆಕ್ಷನ್ 269 (ಜೀವಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ನಿರ್ಲಕ್ಷ್ಯದ ಕೃತ್ಯ)ದ ಅಡಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸುವುದಾಗಿ ತಿಳಿಸಿದ್ದಾರೆ.

  • ಕುತ್ತಿಗೆ ಹಾಕಿದ್ದ ಸರಪಳಿ ಬಿಚ್ಚಿಕೊಂಡ ಬುದ್ಧಿವಂತ ಎಮ್ಮೆ – ವೀಡಿಯೋ ವೈರಲ್

    ಕುತ್ತಿಗೆ ಹಾಕಿದ್ದ ಸರಪಳಿ ಬಿಚ್ಚಿಕೊಂಡ ಬುದ್ಧಿವಂತ ಎಮ್ಮೆ – ವೀಡಿಯೋ ವೈರಲ್

    ಕುತ್ತಿಗೆಗೆ ಕಟ್ಟಿದ್ದ ಸರಪಳಿಯನ್ನು ಎಮ್ಮೆಯೊಂದು ಸುಲಭವಾಗಿ ಬಿಚ್ಚಿಕೊಂಡಿರುವ ವೀಡಿಯೋವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಎಮ್ಮೆಯ ಈ ಚಟುವಟಿಕೆಯನ್ನು ನೋಡಿದ ನೆಟ್ಟಿಗರು ಮಾಲೀಕರಿಗಿಂತ ಎಮ್ಮೆಯೇ ಬಹಳ ಚುರುಕಿರಬಹುದು ಎಂದು ಹೇಳಲಾರಂಭಿಸಿದ್ದಾರೆ.

    ಸಾಮಾನ್ಯವಾಗಿ ಎಮ್ಮೆಗೆ ಬುದ್ಧಿ ಮತ್ತೆ ಎಂದು ಜನ ಹೇಳುತ್ತಾರೆ. ಆದರೀಗ ಎಮ್ಮೆ ಬುದ್ಧಿಯನ್ನು ನೋಡಿ ಎಲ್ಲರು ಮಾರುಹೋಗಿದ್ದಾರೆ. ಈ ವೀಡಿಯೋವನ್ನು ಐಪಿಎಸ್ ಅಧಿಕಾರಿ ಪಂಕಜ್ ಜೈನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ವೀಡಿಯೋನಲ್ಲಿ ಎಮ್ಮೆಯೊಂದು ಕುತ್ತಿಗೆಗೆ ಕಟ್ಟಿದ್ದ ಕಬ್ಬಿಣದ ಸರಪಳಿಯನ್ನು ಬಾಯಿಯ ಮುಖಾಂತರ ಸುಲಭವಾಗಿ ಬಿಚ್ಚಿಕೊಂಡಿದೆ. ಎಮ್ಮೆಯ ಚಾಣಕ್ಷತನ ನೋಡಿದ ಎಲ್ಲರೂ ಆಶ್ಚರ್ಯಗೊಂಡಿದ್ದಾರೆ.

    ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಎಮ್ಮೆ ಬುದ್ಧಿವಂತಿಕೆ ಕಂಡು ಎಮ್ಮೆ ಎಲ್ಲೋ ಗೋಡಂಬಿ ಮತ್ತು ಬಾದಾಮಿ ತಿಂದು ಬುದ್ಧಿ ಚುರುಕುಗೊಳಿಸಿಕೊಂಡಿರಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ.