Tag: ಪಬ್ಲಿಕ್ ಟಿವಿ Boy

  • ಹಳೆಯ ಮೊಬೈಲ್ ಬ್ಯಾಟರಿ ಸ್ಫೋಟ – 10ರ ಬಾಲಕನ ಕೈಗೆ ಗಾಯ

    ಹಳೆಯ ಮೊಬೈಲ್ ಬ್ಯಾಟರಿ ಸ್ಫೋಟ – 10ರ ಬಾಲಕನ ಕೈಗೆ ಗಾಯ

    ಹಾವೇರಿ: ಆಟವಾಡುತ್ತಿದ್ದ ವೇಳೆ ಮೊಬೈಲ್‍ನ ಹಳೆಯ ಬ್ಯಾಟರಿ ಸ್ಫೋಟಗೊಂಡು 10 ವರ್ಷದ ಬಾಲಕನ ಕೈಯ ಮೂರು ಬೆರಳುಗಳು ಕಟ್ ಹಾಗೂ ಮುಖಕ್ಕೆ ಗಾಯವಾದ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ನಡೆದಿದೆ.

    ಗಾಯಗೊಂಡ ಬಾಲಕನನ್ನ ಕಾರ್ತಿಕ್ ಕಲಾದಗಿ(10) ಎಂದು ಗುರುತಿಸಲಾಗಿದೆ. ಮನೆಯ ಪಕ್ಕದಲ್ಲಿ ಎಸೆದಿದ್ದ ಮೊಬೈಲ್ ನ ಹಾಳಾದ ಬ್ಯಾಟರಿ ತೆಗೆದುಕೊಂಡು ಆಟವಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

    ಹಳೆಯ ಮೊಬೈಲ್ ಬ್ಯಾಟರಿಯಲ್ಲಿ ಲೈಟ್ ಹಚ್ಚಲು ಹೋಗಿ ಬ್ಯಾಟರಿ ಸಾರ್ಟ್ ಆಗಿ ಸ್ಫೋಟಗೊಂಡಿದೆ. ಗಂಭೀರವಾಗಿ ಗಾಯಗೊಂಡ ಗಾಯಾಳು ಕಾರ್ತಿಕನನ್ನು ಸದ್ಯ ಸವಣೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಸವಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ:ಡಿನ್ನರ್ ಮೀಟಿಂಗ್ ಪಾಲಿಟಿಕ್ಸ್ ನಡುವೆ ಡಿಕೆಶಿ ರಿವೆಂಜ್ ಪಾಲಿಟಿಕ್ಸ್

  • ಎಮ್ಮೆ ಮೇಲೆ ಕುಳಿತು ‘ಮುಜ್ಸೆ ಶಾದಿ ಕರೋಗಿ’ ಎಂದ ಹುಡುಗ – ಬಾಲಕನ ಕಂಠಕ್ಕೆ ನೆಟ್ಟಿಗರು ಫಿದಾ

    ಎಮ್ಮೆ ಮೇಲೆ ಕುಳಿತು ‘ಮುಜ್ಸೆ ಶಾದಿ ಕರೋಗಿ’ ಎಂದ ಹುಡುಗ – ಬಾಲಕನ ಕಂಠಕ್ಕೆ ನೆಟ್ಟಿಗರು ಫಿದಾ

    ಭಾರತದಲ್ಲಿ ಪ್ರತಿಭಾವಂತರಿಗೇನು ಕೊರತೆಯಿಲ್ಲ. ನಾವು ಭೇಟಿ ಮಾಡುವ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಒಂದು ವಿಶೇಷವಾದ ಪ್ರತಿಭೆ ಅಡಗಿರುತ್ತದೆ. ಸಾಮಾಜಿಕ ಮಾಧ್ಯಮ ಇಲ್ಲದಿದ್ದರೆ ಜನರಿಗೆ ತಮ್ಮ ಪ್ರತಿಭೆಯನ್ನು ಹೊರಹಾಕಲು ವೇದಿಕೆಗಳೇ ಸಿಗುತ್ತಿರಲಿಲ್ಲ.

    ಅಂದಹಾಗೇ ಚಿಕ್ಕ ಬಾಲಕನೊರ್ವ ಎಮ್ಮೆ ಮೇಲೆ ಕುಳಿತು ಬಾಲಿವುಡ್ ಹಾಡೊಂದನ್ನು ಹಾಡಿದ್ದಾನೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಪಟ್ಟೆ ವೈರಲ್ ಆಗುತ್ತಿದೆ. ಆಟ ಆಡುವ ವಯಸ್ಸಿನಲ್ಲಿ ಈ ಬಾಲಕ ಎಮ್ಮೆ ಮೇಲೆ ಆರಾಮವಾಗಿ ಕುಳಿತುಕೊಂಡು ಸಲ್ಮಾನ್‍ಖಾನ್ ಅಭಿನಯದ ‘ಮುಜ್ಸೆ ಶಾದಿ ಕರೋಗಿ’ ಎಂಬ ಹಾಡನ್ನು ಇಂಪಾಗಿ ಹಾಡಿದ್ದಾನೆ.

    ವೀಡಿಯೋ ಎಲ್ಲಿಯದು ಎಂಬುವುದರ ಬಗ್ಗೆ ಮಾಹಿತಿ ಇಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಬಾಲಕನ ಧ್ವನಿಯನ್ನು ಕೇಳಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಮತ್ತು ಈ ಹಾಡು 2004ರಲ್ಲಿ ಹಿಟ್ ಪಡೆದುಕೊಂಡಿತ್ತು. ವೈರಲ್ ಆಗುತ್ತಿರುವ ಈ ವೀಡಿಯೋ ನೋಡಿದ ಎಲ್ಲರೂ ಬಾಲಕನ ಧ್ವನಿಗೆ ಮಾರುಹೋಗುತ್ತಿದ್ದಾರೆ.

    ಡೇವಿಡ್ ಧವನ್ ನಿರ್ದೇಶಿಸಿ, ಸಾಜಿದ್ ನಾಡಿಯಾಡ್ವಾಲಾ ನಿರ್ಮಿಸಿರುವ 2004ರ ರೊಮ್ಯಾಂಟಿಕ್ ಸಿನಿಮಾ ‘ಮುಜ್ಸೆ ಶಾದಿ ಕರೋಗಿ’ ಆಗಿದ್ದು, ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಮತ್ತು ಪ್ರಿಯಾಂಕಾ ಚೋಪ್ರಾ ಅಭಿನಯಿಸಿದ್ದಾರೆ.

  • ಬೈಕ್ ಅಲರ್ಟ್ ಟ್ಯೂನ್‍ಗೆ ನಡು ರಸ್ತೆಯಲ್ಲಿ ಬಾಲಕನ ಸ್ಟೆಪ್ಸ್

    ಬೈಕ್ ಅಲರ್ಟ್ ಟ್ಯೂನ್‍ಗೆ ನಡು ರಸ್ತೆಯಲ್ಲಿ ಬಾಲಕನ ಸ್ಟೆಪ್ಸ್

    ನೀವು ಡ್ಯಾನ್ಸ್‌ನ್ನು ಪ್ರೀತಿಸುತ್ತೀರಾ. ನೀವು ಡ್ಯಾನ್ಸ್‌ನ್ನು ನಿಜವಾಗಿಯೂ ಇಷ್ಟಪಡುವುದು ಆದರೆ, ಬೈಕ್‍ನ ಅಲರ್ಟ್ ಟ್ಯೂನ್‍ಗೆ ಈ ಬಾಲಕ ಮಾಡುವ ಡ್ಯಾನ್ಸ್‍ನನ್ನು ಖಂಡಿತವಾಗಿಯೂ ಇಷ್ಟಪಡುತ್ತೀರಿ.

    ವೀಡಿಯೋದಲ್ಲಿರುವ ಈ ಬಾಲಕ, ಬಹುಶಃ ಸ್ಥಳೀಯ ಮಾರುಕಟ್ಟೆಯಿಂದ ಚೀಲ ಹಿಡಿದುಕೊಂಡು ಮನೆಗೆ ಹಿಂದಿರುಗುತ್ತಿರುವಾಗ ಬೈಕ್ ಮೇಲೆ ಬಡಿಯುತ್ತಾನೆ. ಆಗ ಬೈಕ್‍ನ ಅಲರಾಂ ಆನ್ ಆಗಿ ಅಲರ್ಟ್ ಟ್ಯೂನ್ ಪ್ಲೇ ಆಗುತ್ತದೆ. ಈ ಟ್ಯೂನ್‍ಗೆ ತಕ್ಕಂತೆ ಬಾಲಕ ತನ್ನ ಮೈ, ಕೈ ಬಳಸಿ ಡ್ಯಾನ್ಸ್ ಮಾಡುತ್ತಾನೆ.

    ಈ ಬಾಲಕ ಡ್ಯಾನ್ಸ್ ಮೇಲೆ ಒಲವು ಹೊಂದಿದ್ದು, ಮ್ಯೂಸಿಕ್ ಹೊರತುಪಡಿಸಿ ಅಲರಾಂ ಟ್ಯೂನ್‍ಗೂ ಕೂಡ ಡ್ಯಾನ್ಸ್ ಮಾಡಿದ್ದಾನೆ. ಮ್ಯೂಸಿಕ್ ಬೀಟ್‍ಗಳಿಗೆ ತಕ್ಕಂತೆ ಆತ ಸ್ಟೆಪ್ ಹಾಕಿರುವುದು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

  • ಪೈಲಟ್ ಆಗುವ ಆಸೆ ಹೊಂದಿರೋ ಬಾಲಕನ ಆಸೆಗೆ ಸಾಥ್ ನೀಡಿದ್ರು ರಾಹುಲ್

    ಪೈಲಟ್ ಆಗುವ ಆಸೆ ಹೊಂದಿರೋ ಬಾಲಕನ ಆಸೆಗೆ ಸಾಥ್ ನೀಡಿದ್ರು ರಾಹುಲ್

    ತಿರುವನಂತಪುರ: ಪೈಲಟ್ ಆಗುವ ಕನಸು ಹೊಂದಿರುವ ಕೇರಳದ 9 ವರ್ಷದ ಬಾಲಕನ ಆಸೆಗೆ ರಾಹುಲ್ ಗಾಂಧಿ ಒಂದು ಹೆಜ್ಜೆ ಹತ್ತಿರವಾಗುವಂತೆ ಮಾಡಿದ್ದಾರೆ. ಸದ್ಯ ಈ ಕುರಿತಂತೆ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

    ವೈರಲ್ ಆಗುತ್ತಿರುವ ವೀಡಿಯೋದಲ್ಲಿ, ಪೈಲಟ್ ಆಗಬೇಕೆಂದು ಆಸೆ ಹೊಂದಿರುವ ಬಾಲಕನಿಗೆ ಫ್ಲೈಟ್ ಕಾಕ್‍ಪಿಟ್‍ನ ಕಾರ್ಯವಿಧಾನವನ್ನು ವಿವರಿಸಲಾಗಿದೆ. ರಾಹುಲ್ ಗಾಂಧಿ ಎರಡು ದಿನ ಕೇರಳ ಚುನಾವಣಾ ಪ್ರಚಾರಕ್ಕಾಗಿ ತೆರಳಿದ್ದ ವೇಳೆ ಬಾಲಕನನ್ನು ಕಣ್ಣೂರು ಜಿಲ್ಲೆಯ ಕೀಝುರ್ಕುವಿನ ಸ್ಥಳೀಯ ಚಹಾ ಅಂಗಡಿಯಲ್ಲಿ ಭೇಟಿಯಾಗಿದ್ದಾರೆ. ಈ ವೇಳೆ ಬಾಲಕನು ಮಾತನಾಡಿದ ಇಂಗ್ಲೀಷ್ ಹಾಗೂ ಹಿಂದಿ ಭಾಷೆಯನ್ನು ನೋಡಿ ಮನಸೋತು, ಬಾಲಕನಿಗೆ ನಿನ್ನ ಆಸೆ ಏನು ಎಂದು ಕೇಳಿದ್ದಾರೆ.

    ಆಗ ಬಾಲಕ ನಾನು ಹಾರಾಡಬೇಕು. ನಾನು ಪೈಲಟ್ ಆಗುವ ಕನಸನ್ನು ಹೊಂದಿದ್ದೇನೆ ಎಂದು ತಿಳಿಸಿದ್ದಾನೆ. ಹೀಗಾಗಿ ಮರುದಿನವೇ ರಾಹುಲ್ ಗಾಂಧಿ ಫ್ಲೈಟ್ ವ್ಯವಸ್ಥೆಗೊಳಿಸಿ ಬಾಲಕ ಹಾಗೂ ಆತನ ತಂದೆಯನ್ನು ಬರಮಾಡಿಕೊಂಡಿದ್ದಾರೆ.

    ವೀಡಿಯೋದಲ್ಲಿ ಬಾಲಕ ಕುಳಿತುಕೊಂಡಿದ್ದು, ಮಹಿಳಾ ಪೈಲಟ್ ವಿಮಾನವನ್ನು ಹಾರಿಸುವ ಕಾರ್ಯವಿಧಾನವನ್ನು ವಿವರಿಸುತ್ತಿರುವುದನ್ನು ಕಾಣಬಹುದಾಗಿದೆ. ಈ ವೀಡಿಯೋವನ್ನು ರಾಹುಲ್ ಗಾಂಧಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅದ್ವೈತ್, ಕನಸಿನ ಮೊದಲ ಹೆಜ್ಜೆ ಇಟ್ಟಿದ್ದಾನೆ. ಇದೀಗ ಸಮಾಜ ರಚಿಸುವುದು ನಮ್ಮ ಕರ್ತವ್ಯವಾಗಿದ್ದು, ಅವನಿಗೆ ಹಾರಲು ಅವಕಾಶ ನೀಡಲಾಗಿದೆ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.

     

    View this post on Instagram

     

    A post shared by Rahul Gandhi (@rahulgandhi)

    ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರ ಗಮನ ಸೆಳೆಯುತ್ತಿದ್ದು, ಹಲವಾರು ಕಾಮೆಂಟ್‍ಗಳು ಹರಿದುಬರುತ್ತಿದೆ.

  • ಪಬ್ ಜೀ ಆಟಕ್ಕಾಗಿ 12ರ ಬಾಲಕನನ್ನು ಕೊಲೆ ಮಾಡಿದ 17ರ ಸ್ನೇಹಿತ

    ಪಬ್ ಜೀ ಆಟಕ್ಕಾಗಿ 12ರ ಬಾಲಕನನ್ನು ಕೊಲೆ ಮಾಡಿದ 17ರ ಸ್ನೇಹಿತ

    ಮಂಗಳೂರು: ಪಬ್ ಜೀ ಮೊಬೈಲ್ ಆಟ ನಿಷೇಧವಾಗಿದರೂ ಆಟಕ್ಕೆ ಅಡಿಕ್ಟ್ ಆದವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಪಬ್ ಜೀ ಆಟ ಮತ್ತೊಂದು ರೂಪದಲ್ಲಿ ಮೊಬೈಲ್‍ಗೆ ಬಂದಿದೆ. ಆ ಆಟ ಈಗ ಜೀವ ತೆಗೆಯುವ ಹಂತಕ್ಕೆ ತಲುಪಿದ್ದು ಮಂಗಳೂರಿನಲ್ಲಿ ಬಾಲಕನ ಜೀವ ಪಬ್ ಜೀ ಆಟದಲ್ಲಿ ಅಂತ್ಯವಾಗಿದೆ.

    ಆಕೀಫ್(12) ಬರ್ಬರವಾಗಿ ಹತ್ಯೇಗೀಡಾದ ಬಾಲಕ. ಈತ ಮಂಗಳೂರು ನಗರ ಹೊರವಲಯದ ಕೆ.ಸಿ ರೋಡ್ ನಿವಾಸಿಯಾಗಿದ್ದು, ಪ್ರಸ್ತುತ ಕೆ.ಸಿ.ರೋಡ್‍ನ ಫಲಹಾ ಇಂಗ್ಲಿಷ್ ಮೀಡಿಯಾಂ ಶಾಲೆಯ 7 ತರಗತಿ ವಿದ್ಯಾರ್ಥಿಯಾಗಿದ್ದನು. ನಿನ್ನೆ ರಾತ್ರಿ 9 ಗಂಟೆಗೆ ಮನೆಯಿಂದ ಹೊರಟವನು ಇಂದು ಬೆಳಗ್ಗೆ ಕೊಲೆಯಾದ ಸ್ಥಿತಿಯಲ್ಲಿ ಮೈದಾನದಲ್ಲಿ ಪತ್ತೆಯಾಗಿದ್ದಾನೆ.

    ಆಕೀಫ್‍ಗೆ ಕಳೆದ ಮೂರು ತಿಂಗಳ ಹಿಂದೆ ಮೊಬೈಲ್ ಅಂಗಡಿಯಲ್ಲಿದ್ದ 17 ವರ್ಷದ ಬಾಲಕನ ಪರಿಚಯವಾಗಿದ್ದಾನೆ. ಬಳಿಕ ಇಬ್ಬರೂ ಪಬ್ ಜೀ ಗೇಮ್ ಆಟವಾಡಲು ಆರಂಭಿಸಿದ್ದಾರೆ. ಆಟದಲ್ಲಿ ಪ್ರತಿ ಬಾರಿಯೂ ಆಕೀಫ್ ಗೆಲುವು ಸಾಧಿಸಿದ್ದನು. ಇದರಿಂದ ಕೋಪಗೊಂಡ ಬಾಲಕ ಆಟದಲ್ಲಿ ಮೋಸ ಮಾಡ್ತಿದ್ದೀಯಾ, ಮುಖಾಮುಖಿ ಆಡೋಣ ಅಂತಾ ನಿನ್ನೆ ಸ್ಥಳೀಯ ಮೈದಾನಕ್ಕೆ ಕರೆದಿದ್ದಾನೆ.

    ಬಳಿಕ ರಾತ್ರಿ 9 ಗಂಟೆಗೆ ಇಬ್ಬರೂ ಮೈದಾನದಲ್ಲಿ ಪಬ್ ಜೀ ಆಡಿದ್ದಾರೆ. ಈ ವೇಳೆ ಆಟದಲ್ಲಿ ಬಾಲಕ ಸೋತಿದ್ದಾನೆ. ಇದರಿಂದ ಇಬ್ಬರ ನಡುವೆಯೂ ಗಲಾಟೆಯಾಗಿದೆ. ಗಲಾಟೆ ಮಧ್ಯೆ ಬಾಲಕ ಆಕೀಫ್‍ಗೆ ದೊಡ್ಡ ಕಲ್ಲಿನಲ್ಲಿ ಹೊಡೆದಿದ್ದು, ಆಕೀಫ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದರಿಂದ ಗಾಬರಿಗೊಂಡ ಬಾಲಕ, ಆಕೀಫ್ ಶವವನ್ನು ಮೈದಾನದ ಪೊದೆಯಲ್ಲಿ ಬಚ್ಚಿಟ್ಟು ಪರಾರಿಯಾಗಿದ್ದಾನೆ. ಬೆಳಗ್ಗಿನ ವೇಳೆ ಆಕೀಫ್ ಮೃತದೇಹ ಮೈದಾನದ ಪೊದೆಯಲ್ಲಿ ಕಂಡುಬಂದಿದ್ದು, ಬಾಲಕ ವಿಚಾರಣೆ ವೇಳೆ ಎಲ್ಲವನ್ನೂ ಬಾಯಿಬಿಟ್ಟಿದ್ದಾನೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಆಕೀಫ್‍ಗೆ ಪೋಷಕರು ಆನ್ ಲೈನ್ ಕ್ಲಾಸ್ ಉದ್ದೇಶದಿಂದ ಮೊಬೈಲ್ ತೆಗೆದುಕೊಟ್ಟಿದ್ದರು. ಮೊಬೈಲ್‍ನಲ್ಲಿ ವಿವಿಧ ಆ್ಯಪ್‍ಗಳನ್ನು ಡೌನ್ ಲೋಡ್ ಮಾಡಿಕೊಂಡಿದ್ದ. ಮೊಬೈಲ್ ಆಟದಲ್ಲೂ ಬಹಳ ಚೂಟಿಯಾಗಿದ್ದ. ಸದಾ ಮೊಬೈಲ್‍ನಲ್ಲೇ ಕಾಲ ಕಳೆಯುತ್ತಿದ್ದ ಆಕೀಫ್ ಪಬ್ ಜೀ ಆಟದ ವಿಚಾರಕ್ಕೆ ಭೀಕರ ಹತ್ಯೆಯಾಗಿದ್ದು, ಇದೀಗ ಮನೆಯವರನ್ನೂ ದಂಗುಬಡಿಸಿದೆ.

    ಒಟ್ಟಿನಲ್ಲಿ ಮಾರಕ ಪಬ್ ಜೀ ಆಟ ಬಾಳಿ ಬದುಕಬೇಕಾಗಿದ್ದ ಬಾಲಕನ ಜೀವವನ್ನು ಬಲಿಪಡೆದಿದೆ. ಮಕ್ಕಳಿಗೆ ಅನಿವಾರ್ಯವಾಗಿ ಮೊಬೈಲ್ ಕೊಟ್ಟ ಪೋಷಕರೂ ಮಕ್ಕಳ ಬಗ್ಗೆ ಜಾಗೃತವಾಗಿರಬೇಕಾಗಿದೆ.