Tag: ಪಬ್ಲಿಕ್ ಟಿವಿ.Bollywood

  • ವಿಚ್ಛೇದನದ ನಂತರ ಮಾಜಿ ಪತ್ನಿ ಜೊತೆ ಅಮೀರ್ ಖಾನ್ ಡ್ಯಾನ್ಸ್

    ವಿಚ್ಛೇದನದ ನಂತರ ಮಾಜಿ ಪತ್ನಿ ಜೊತೆ ಅಮೀರ್ ಖಾನ್ ಡ್ಯಾನ್ಸ್

    ಮುಂಬೈ: ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ನಟ ಅಮೀರ್ ಖಾನ್ ವಿಚ್ಛೇದನದ ನಂತರ ಮಾಜಿ ಪತ್ನಿ ಕಿರಣ್ ರಾವ್ ಜೊತೆ ಡ್ಯಾನ್ಸ್ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ನಟ ಅಮೀರ್ ಖಾನ್ ಅಭಿನಯದ ಬಹು ನೀರಿಕ್ಷಿ ಲಾಲ್ ಚಡ್ಡ ಸಿನಿಮಾವನ್ನು ಅಮೀರ್ ಖಾನ್, ಕಿರಣ್ ರಾವ್ ಹಾಗೂ ರಾಧಿಕ ಚೌಧರಿ ನಿರ್ಮಿಸುತ್ತಿದ್ದು, ಈ ಚಿತ್ರದ ಚಿತ್ರೀಕರಣ ಲಡಾಕ್‍ನಲ್ಲಿ ನಡೆಯುತ್ತಿರುವ ವೇಳೆ ಅಮೀರ್ ಮಾಜಿ ಪತ್ನಿ ಕಿರಣ್ ರಾವ್ ಜೊತೆ ಅಲ್ಲಿನ ಸಾಂಪ್ರದಾಯಿಕ ಉಡುಪನ್ನು ಧರಿಸಿ ಹೆಜ್ಜೆ ಹಾಕಿದ್ದಾರೆ.

    ವೀಡಿಯೋದಲ್ಲಿ ಅಮೀರ್ ಖಾನ್ ಕೆಂಪು ಬಣ್ಣದ ಧಿರುಸು ಹಾಗೂ ನೇರಳೆ ಬಣ್ಣದ ಟೋಪಿಯನ್ನು ಧರಿಸಿದರೆ, ಕಿರಣ್ ರಾವ್ ಪಿಂಕ್ ಕಲರ್ ಉಡುಪು ತೊಟ್ಟು, ಹಸಿರು ಬಣ್ಣದ ಟೋಪಿ ಧರಿಸಿದ್ದಾರೆ. ಜೊತೆಗೆ ಶಿಕ್ಷಕರೊಬ್ಬರು ಡ್ಯಾನ್ಸ್ ಮಾಡುತ್ತಿದ್ದು, ಇವರಿಬ್ಬರಿಗೂ ನೃತ್ಯ ಹೇಳಿಕೊಟ್ಟಿದ್ದಾರೆ.

     

    ಇತ್ತೀಚೆಗಷ್ಟೇ ಟಾಲಿವುಡ್ ನಟ ನಾಗಚೈತನ್ಯ ಹಾಗೂ ಲಾಲ್ ಚಡ್ಡಾ ಚಿತ್ರತಂಡಕ್ಕೆ ಸೆರ್ಪಡೆಯಾಗಿದ್ದು, ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ. ಲಾಲ್ ಚಡ್ಡಾ ಸಿನಿಮಾವು ಹಾಲಿವುಡ್‍ನ ಫಾರೆಸ್ಟ್ ಗಂಪ್ ಚಿತ್ರದ ರಿಮೇಕ್ ಆಗಿದ್ದು, ದೇಶದ ಸುಮಾರು ನೂರ್ಕೂ ಅಧಿಕ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ. ಈ ಸಿನಿಮಾದಲ್ಲಿ ಅತೀ ದೊಡ್ಡ ತಾರಾಬಳಗವೇ ಇರಲಿದೆ.

  • ರಾಮಾಯಣ ಸೀರಿಯಲ್ ಖ್ಯಾತಿಯ ಬಾಲಿವುಡ್ ನಟ ಚಂದ್ರಶೇಖರ್ ಇನ್ನಿಲ್ಲ

    ರಾಮಾಯಣ ಸೀರಿಯಲ್ ಖ್ಯಾತಿಯ ಬಾಲಿವುಡ್ ನಟ ಚಂದ್ರಶೇಖರ್ ಇನ್ನಿಲ್ಲ

    ಮುಂಬೈ: ಬಾಲಿವುಡ್ ಹಿರಿಯ ನಟ ಹಾಗೂ ಸಾಮಾಜಿಕ ಹೋರಾಟಗಾರ ಚಂದ್ರಶೇಖರ್(98)ರವರು ಇಂದು ನಿಧನರಾಗಿದ್ದಾರೆ.

    ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಚಂದ್ರಶೇಖರ್‌ರವರು  ತಮ್ಮ ನಿವಾಸದಲ್ಲಿ ಇಂದು ಬೆಳಗ್ಗೆ 7ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಪುತ್ರ ಅಶೋಕ್ ಶೇಖರ್ ತಿಳಿಸಿದ್ದಾರೆ. ಚಂದ್ರಶೇಖರ್‌ರವರು 1987ರಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣ ಧಾರಾವಾಹಿಯಲ್ಲಿ ದಶರಥ ಮಹಾರಾಜನ ಮಂತ್ರಿ ಸುಮಂತನ ಪಾತ್ರದಲ್ಲಿ ಅಭಿನಯಿಸಿದ್ದರು.

    1954ರಲ್ಲಿ ವಿ ಶಾಂತಾರಾಮ್ ನಿರ್ದೇಶಿಸಿದ್ದ ಔರತ್ ಥೇರಿ ಯೆಹಿ ಕಹಾನಿ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು, ಈವರೆಗೂ ಸುಮಾರು 250 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 1950 ದಶಕದ ಖ್ಯಾತ ನಟರಾಗಿದ್ದ ಚಂದ್ರ ಶೇಖರ್‌ರವರು ಕಾಳಿ ಟೋಪಿ ಲಾಲ್ ರುಮಾಲ್, ಬಾರದಾರಿ, ಸ್ಟ್ರೀಟ್ ಸಿಂಗರ್, ರುಸ್ತೋಮ್ ಇ ಬಾಗ್ದಾದ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

    1964ರಲ್ಲಿ ಚಾ ಚಾ ಚಾ ಎಂಬ ಮ್ಯೂಸಿಕಲ್ ಸಿನಿಮಾವನ್ನು ನಿರ್ದೇಶಿಸಿದ್ದರು. ಅಲ್ಲದೇ 1985ರಿಂದ 1996ರವರೆಗೆ ಸಿನಿ ಮತ್ತು ಕಲಾವಿದರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಇದನ್ನೂ ಓದಿ:  ಆರೋಗ್ಯ ತಪಾಸಣೆಗಾಗಿ ಅಮೆರಿಕಾಗೆ ತೆರಳಿದ ತಲೈವಾ

  • ನಟಿ ಶಿಲ್ಪಾ ಶೆಟ್ಟಿ ಕುಟುಂಬಕ್ಕೆ ಕೊರೊನಾ

    ನಟಿ ಶಿಲ್ಪಾ ಶೆಟ್ಟಿ ಕುಟುಂಬಕ್ಕೆ ಕೊರೊನಾ

    ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಮಕ್ಕಳಾದ ಸಮಿಶಾ, ವಯಾನ್ ಸೇರಿದಂತೆ ಅವರ ಇಡೀ ಕುಟುಂಬದವರಿಗೆ ಕೊರೊನಾ ಬಂದಿರುವುದು ಧೃಡಪಟ್ಟಿದೆ.

    ಈ ಬಗ್ಗೆ ಇನ್ ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿರುವ ನಟಿ, ರಾಜ್ ಕುಂದ್ರಾ ಸೇರಿದಂತೆ ಅವರ ಪೋಷಕರು ಮನೆಯವರು ಎಲ್ಲರೂ ಕೋವಿಡ್-19 ಸೋಂಕಿಗೆ ಒಳಗಾಗಿರುವುದರಿಂದ ಕಳೆದ 10 ದಿನ ನಾವು ತೀವ್ರ ಸಂಕಷ್ಟವನ್ನು ಅನುಭವಿಸಿದೆವು. ಮೊದಲಿಗೆ ನನ್ನ ಅತ್ತೆ ಹಾಗೂ ಮಾವರಿಗೆ ಕೊರೊನಾ ಪಾಸಿಟವ್ ಬಂತು, ಬಳಿಕ ಸಮಿಶಾ, ವಯಾನ್ ರಾಜ್, ನನ್ನ ತಾಯಿ ಮತ್ತು ಕೊನೆಯದಾಗಿ ರಾಜ್ ಕುಂದ್ರಾಗೆ ಕೊರೊನಾ ಧೃಡಪಟ್ಟಿತು. ಇದೀಗ ಅವರೆಲ್ಲರೂ ಹೋಂ ಐಸೋಲೇಷನ್‍ನಲ್ಲಿದ್ದು, ವೈದ್ಯರು ನೀಡಿದ್ದ ಸಲಹೆಯನ್ನು ಅನುಸರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

    ನಮ್ಮ ಮನೆಯ ಸಿಬ್ಬಂದಿ ಇಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಅವರಿಗೆ ವೈದ್ಯಕೀಯ ಸೌಲಭ್ಯದೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ದೇವರ ಅನುಗ್ರಹದಿಂದ ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ. ನಾನು ಕೂಡ ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದು ನೆಗಟಿವ್ ಬಂದಿದೆ. ಅಭಿಮಾನಿಗಳ ಪ್ರೀತಿ ಬೆಂಬಲಕ್ಕೆ ಧನ್ಯವಾದ ಎಲ್ಲರೂ ಮಾಸ್ಕ್ ಧರಿಸಿ, ಕೈಗಳನ್ನು ಸ್ವಚ್ಛಗೊಳಿಸಿ ಸುರಕ್ಷಿತವಾಗಿರಿ ಎಂದು ಶಿಲ್ಪಾ ಶೆಟ್ಟಿ ಬರೆದುಕೊಂಡಿದ್ದಾರೆ.

  • ಕೊರೊನಾ ಭೀತಿ – ಮುಂಬೈ ತೊರೆಯುತ್ತಿದ್ದಾರೆ ಬಾಲಿವುಡ್ ಸೆಲೆಬ್ರೆಟಿಗಳು

    ಕೊರೊನಾ ಭೀತಿ – ಮುಂಬೈ ತೊರೆಯುತ್ತಿದ್ದಾರೆ ಬಾಲಿವುಡ್ ಸೆಲೆಬ್ರೆಟಿಗಳು

    ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಬಾಲಿವುಡ್ ತಾರೆಯರು ಮುಂಬೈ ತೊರೆದು ವಿದೇಶಗಳತ್ತ ಹಾರುತ್ತಿದ್ದಾರೆ.

    ಕಳೆದ ವರ್ಷ ಕೊರೊನಾ ಹೆಮ್ಮಾರಿ ಭೀತಿಯಿಂದ ಜನಸಾಮಾನ್ಯರು ನಗರಗನ್ನು ಬಿಟ್ಟು ತಮ್ಮ ಊರುಗಳಿಗೆ ಸೇರಿದರು. ಆದರೆ ಇದೀಗ ಕೊರೊನಾಗೆ ಹೆದರಿ ಸೆಲೆಬ್ರೆಟಿಗಳು ಊರು ಬಿಟ್ಟು ಹೋಗುತ್ತಿದ್ದಾರೆ.

    ಸದ್ಯ ಕೋವಿಡ್-19 ಎರಡನೇ ಅಲೆ ಅಬ್ಬರಕ್ಕೆ ಮಹಾರಾಷ್ಟ್ರದಲ್ಲಿ ಲಾಕ್‍ಡೌನ್ ಜಾರಿಗೊಳಿಸಲಾಗಿದೆ. ಅದರಲ್ಲೂ ವಾಣಿಜ್ಯ ನಗರಿ ಮುಂಬೈನಲ್ಲಿ ಕೊರೊನಾ ರಣಕೇಕೆ ಹಾಕುತ್ತಿದೆ. ಹಾಗಾಗಿ ಬಾಲಿವುಡ್ ನಟ ರಣ್‍ವೀರ್ ಕಪೂರ್ ಹಾಗೂ ಆಲಿಯಾ ಭಟ್ ಸೋಮವಾರ ಮುಂಬೈನಿಂದ ಮಾಲ್ಡೀವ್ಸ್‌ಗೆ  ಹಾರಿದ್ದಾರೆ.

    ಬಾಲಿವುಡ್‍ನ ಕ್ಯೂಟೆಸ್ಟ್ ಪೇರ್ ಅಂತಲೇ ಫೇಮಸ್ ಆಗಿರುವ ರಣ್‍ವೀರ್ ಸಿಂಗ್ ಹಾಗೂ ದೀಪಿಕಾ ಕೊರೊನಾಗೆ ಹೆದರಿ ಮುಂಬೈ ತೊರೆದು ಬೆಂಗಳೂರಿನತ್ತ ಬಂದಿದ್ದಾರೆ. ಶೂಟಿಂಗ್‍ಗಾಗಿ ಮುಂಬೈಗೆ ತೆರಳಿದ್ದ ಕೊಡಗಿನ ಕುವರಿ ರಶ್ಮಿಕ ಮಂದಣ್ಣ ಮುಂಬೈನಲ್ಲಿ ಲಾಕ್‍ಡೌನ್ ಘೋಷಿಸಿದ ಹಿನ್ನೆಲೆ ಹೈದರಾಬಾದ್‍ಗೆ ವಾಪಸ್ ಆಗಿದ್ದಾರೆ.

    ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ತಾಯಿ ಜೊತೆ ಎರಡುದಿನಗಳ ಹಿಂದೆಯಷ್ಟೇ ಮುಂಬೈನಿಂದ ಮಾಲ್ಡೀವ್ಸ್‌ಗೆ  ಪ್ರಯಾಣ ಬೆಳೆಸಿದ್ದಾರೆ. ಅಲ್ಲದೆ ಇತ್ತೀಚೆಗಷ್ಟೇ ಟೈಗರ್ ಶ್ರಾಫ್ ಹಾಗೂ ದಿಶಾ ಪಟಾನಿ ಕೂಡ ಮಾಲ್ಡೀವ್ಸ್‌ಗೆ  ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

  • 25 ವರ್ಷಕ್ಕೂ ಮೇಲ್ಪಟ್ಟವರಿಗೆ ಲಸಿಕೆ ನೀಡುವಂತೆ ಸರ್ಕಾರಕ್ಕೆ ಸೋನುಸೂದ್ ಮನವಿ

    25 ವರ್ಷಕ್ಕೂ ಮೇಲ್ಪಟ್ಟವರಿಗೆ ಲಸಿಕೆ ನೀಡುವಂತೆ ಸರ್ಕಾರಕ್ಕೆ ಸೋನುಸೂದ್ ಮನವಿ

    ಮುಂಬೈ: ಬಾಲಿವುಡ್ ನಟ ಸೋನುಸೂದ್ ಬುಧವಾರ ಕೋವಿಡ್-19 ಲಸಿಕೆಯ ಮೊದಲ ಡೋಸ್ ಪಡೆದ ನಂತರ, 25 ವರ್ಷಕ್ಕೂ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

    ಈ ಬಗ್ಗೆ ಸೋನು ಸೂದ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, 25 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಬೇಕೆಂದು ನಾನು @MoHFW_INDIA ಗೆ ಒತ್ತಾಯಿಸುತ್ತೇನೆ. ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಣ್ಣ ಮಕ್ಕಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ವೈರಸ್‍ಗೆ ಒಳಗಾಗುತ್ತಿದ್ದಾರೆ. ಸದ್ಯ 25ಕ್ಕೂ ಹೆಚ್ಚು ವರ್ಷ ಮೇಲ್ಪಟ್ಟವರಿಗೆ ಲಸಿಕೆ ಘೋಷಿಸಬೇಕು. ನಾನು ಹೆಚ್ಚಿನ ಪ್ರಕರಣಗಳ ಸಂಖ್ಯೆಯನ್ನು ಯುವಕರಲ್ಲಿ ಕಾಣುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

    ಕಳೆದ ವರ್ಷ ಕೊರೊನಾ ಲಾಕ್‍ಡೌನ್ ಸಮಯದಲ್ಲಿ ವಲಸಿಗರು ತಮ್ಮ ಸ್ಥಳಗಳಿಗೆ ತಲುಪಲು ಸಹಾಯ ಮಾಡುವ ಮೂಲಕ ದೇಶದ ಗಮನ ಸೆಳೆದಿದ್ದ ಸೋನು ಸೂದ್, ಇದೀಗ ಲಸಿಕೆ ಪಡೆಯುವಂತೆ ಜನರಿಗೆ ಪ್ರೋತ್ಸಾಹ ನೀಡುವುದು ನನ್ನ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಲಸಿಕೆ ಬಗ್ಗೆ ಜಾಗೃತಿ ಮೂಡಿಸಲು ಸಂಜೀವಿನಿ ‘ಎ ಶಾಟ್ ಆಫ್ ಲೈಫ್’ ವ್ಯಾಕ್ಸಿನೇಷನ್ ಡ್ರೈವ್ ಅಭಿಯಾನವನ್ನು ಪ್ರಾರಂಭಿಸಿದರು.

  • ‘ಕಹೋ ನಾ ಪ್ಯಾರ್ ಹೈ’ ಬರಹಗಾರ ಸಾಗರ್ ಸರ್ಹಾದಿ ಇನ್ನಿಲ್ಲ

    ‘ಕಹೋ ನಾ ಪ್ಯಾರ್ ಹೈ’ ಬರಹಗಾರ ಸಾಗರ್ ಸರ್ಹಾದಿ ಇನ್ನಿಲ್ಲ

    ಮುಂಬೈ: ಹಿರಿಯ ಚಲನಚಿತ್ರ ನಿರ್ದೇಶಕ ಮತ್ತು ಬರಹಗಾರ ಸಾಗರ್ ಸರ್ಹಾದಿ(88) ಇಂದು ಬೆಳಗ್ಗೆ ಮುಂಬೈನಲ್ಲಿ ನಿಧನರಾಗಿದ್ದಾರೆ.

    ಸಾಗರ್ ಸರ್ಹಾದಿಯವರು ದಿವಾನಾ, ಕಹೋ ನ ಪ್ಯಾರ್ ಹೇ, ಸಿಲ್‍ಸಿಲಾ ಸಿನಿಮಾದಲ್ಲಿ ಕಾರ್ಯನಿರ್ವಹಿಸುವ ಮೂಲಕ ಖ್ಯಾತಿ ಪಡೆದಿದ್ದರು. ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಇತ್ತೀಚೆಗಷ್ಟೇ ಸಿಯಾನ್‍ನ ಹೃದಯ ಆರೈಕೆ ಆಸ್ಪತ್ರೆಯ ಐಸಿಯುಗೆ ದಾಖಲಾಗಿದ್ದರು.

    ಈ ವಿಚಾರವನ್ನು ಬಾಲಿವುಡ್ ಸಿನಿಮಾದ ನಿರ್ಮಾಪಕ ಅಶೋಕ್ ಪಂಡಿತ್, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಪ್ರಸಿದ್ಧ ಬರಹಗಾರ ಹಾಗೂ ನಿರ್ದೇಶಕ ಸಾಗರ್ ಸರ್ಹಾದಿಯವರಿಗೆ ಹೃದಯಾಘಾತವಾದ ಸುದ್ದಿ ಕೇಳಿ ಮನಸ್ಸಿಗೆ ಭಾರೀ ಆಘಾತವಾಗಿದೆ. ಕಭಿ ಕಭಿ, ನೂರಿ, ಚಾಂದನಿ, ಡೂಸ್ರಾಆಡ್ಮಿ, ಸಿಲ್ ಸಿಲಾ ಇವರ ಕೆಲವು ಪ್ರಸಿದ್ಧ ಸಿನಿಮಾಗಳಾಗಿದ್ದು, ಬಜಾರ್‍ನನ್ನು ಬರೆದು ನಿರ್ದೇಶಿಸಿದ್ದಾರೆ.

    https://twitter.com/ashokepandit/status/1373826749994209284

    ಇಂಡಸ್ಟ್ರಿಗೆ ಬರುವ ಮುನ್ನ ಸಾಗರ್ ಸಹಾರ್ದಿ ಒಬ್ಬ ಉರ್ದು ಬರಹಗಾರರಾಗಿದ್ದರು. ಹಲವಾರು ಸಣ್ಣ ಕಥೆಗಳು ಹಾಗೂ ನಾಟಕಗಳನ್ನು ನಿರ್ದೇಶಿಸಿದ್ದರು. ಅವರ ಸಾವಿನ ಸುದ್ದಿ ಬೆಳಕಿಗೆ ಬರುತ್ತಿದ್ದಂತೆಯೇ ಇದೀಗ ಅನೇಕ ಗಣ್ಯಾತಿಗಣ್ಯರು ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿದ್ದಾರೆ.

    https://twitter.com/rajbansal9/status/1373843417730404355

  • ಪತ್ನಿ ಎದುರೆ ಫ್ಲರ್ಟ್ ಮಾಡಿದ ರಿತೇಶ್ – ಮುಂದೆ ಜೆನಿಲಿಯಾ ಮಾಡಿದ್ದೇನು ಗೊತ್ತಾ?

    ಪತ್ನಿ ಎದುರೆ ಫ್ಲರ್ಟ್ ಮಾಡಿದ ರಿತೇಶ್ – ಮುಂದೆ ಜೆನಿಲಿಯಾ ಮಾಡಿದ್ದೇನು ಗೊತ್ತಾ?

    ಮುಂಬೈ: ಬಾಲಿವುಡ್‍ನ ಮುದ್ದಾದ ಜೋಡಿಗಳಲ್ಲಿ ರಿತೇಶ್ ದೇಶ್‍ಮುಖ್ ಹಾಗೂ ಜೆನಿಲಿಯಾ ಡಿಸೋಜಾ ಜೋಡಿ ಕೂಡ ಒಂದು. ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿ ಆಗಾಗ ಹಾಸ್ಯದ ವೀಡಿಯೋ ಹಾಗೂ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಹಲವು ದಿನಗಳು ಹಿಂದೆ ಸಮಾರಂಭವೊಂದಕ್ಕೆ ಪತ್ನಿಯೊಂದಿಗೆ ಭೇಟಿ ನೀಡಿದ ರಿತೇಶ್, ನಟಿಯೊಬ್ಬರ ಜೊತೆ ಜೆನಿಲಿಯಾ ಮುಂದೆಯೇ ಅತೀ ಸಲುಗೆಯಿಂದ ನಡೆದುಕೊಂಡಿದ್ದರು. ಇದನ್ನು ಕಂಡು ಜೆನಿಲಿಯಾ ರಿತೇಶ್ ಮೇಲೆ ಆಕ್ರೋಶಗೊಂಡಿದ್ದರು. ಇದೀಗ ಈ ವೀಡಿಯೋವನ್ನು ಜೆನಿಲಿಯಾ ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದು, ಮುಂದೇನಾಯ್ತು ಎಂದು ತಿಳಿದುಕೊಳ್ಳಬೇಕಾ? ಎಂದು ಕ್ಯಾಪ್ಷನ್ ಹಾಕಿದ್ದಾರೆ.

    ವೀಡಿಯೋದಲ್ಲಿ ರಿತೇಶ್ ದೇಶ್‍ಮುಖ್ ಪ್ರೀತಿ ಜಿಂಟಾ ಜೊತೆ ಮಾತನಾಡುತ್ತಿರುತ್ತಾರೆ. ಈ ವೇಳೆ ಜೆನಿಲಿಯಾ ಸಮಾಧಾನದಿಂದ ಕೇಳುತ್ತಿರುತ್ತಾರೆ. ನಂತರ ರಿತೇಶ್ ಪ್ರೀತಿ ಜಿಂಟಾರನ್ನು ತಬ್ಬಿಕೊಂಡು, ಕೈಗೆ ಕಿಸ್ ಮಾಡುತ್ತಾರೆ. ಇದನ್ನು ನೋಡಿ ಜೆನಿಲಿಯಾ ಗರಂ ಆಗುತ್ತಾರೆ. ಬಳಿಕ ಮನೆಗೆ ಬಂದ ಮೇಲೆ ರಿತೇಶ್‍ರನ್ನು ಜೆನಿಲಿಯಾ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ರಿತೇಶ್ ಸಾಕಪ್ಪಾ ಸಾಕು ಎಂದು ಕೈ ಮುಗಿದು ಕೇಳಿಕೊಳ್ಳುವಷ್ಟು ಪಂಚ್ ನೀಡಿದ್ದಾರೆ. ಈ ಘಟನೆಯು 2019ರ ಐಫಾ ಅವಾರ್ಡ್ ಕಾರ್ಯಕ್ರಮದಲ್ಲಿ ನಡೆದಿದೆ. ವೀಡಿಯೋದಲ್ಲಿ ಜೆನಿಲಿಯಾ ಮುಖಭಾವನೆ ಎಲ್ಲರ ಗಮನ ಸೆಳೆದಿದೆ.

    ರಿತೇಶ್ ಹಾಗೂ ಜೆನಿಲಿಯಾ 2003ರಲ್ಲಿ ತುಜೆ ಮೇರಿ ಕಸಮ್ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದರು. 2012ರ ಫೆಬ್ರವರಿ 3ರಂದು ಹಿಂದೂ ಸಂಪ್ರಾದಾಯ ಪ್ರಕಾರ ಸಪ್ತಪದಿ ತುಳಿದರು.

     

    View this post on Instagram

     

    A post shared by Genelia Deshmukh (@geneliad)

  • ಪುರಿ ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡಿದ ಕಂಗನಾ ರನೌತ್

    ಪುರಿ ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡಿದ ಕಂಗನಾ ರನೌತ್

    ಮುಂಬೈ: ಬಾಲಿವುಡ್ ನಟಿ ಕಂಗನಾ ರನೌತ್ ಶುಕ್ರವಾರ ಬೆಳಿಗ್ಗೆ ಒಡಿಶಾದ ಪವಿತ್ರ ಪುರಿ ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

    ತಮ್ಮ ಮುಂದಿನ ಧಾಕಾಡ್ ಸಿನಿಮಾದ ಚಿತ್ರೀಕರಣದಿಂದ ಕಂಗನಾ ಕೊಂಚ ಬಿಡುವು ಮಾಡಿಕೊಂಡಿದ್ದು, ಶುಕ್ರವಾರ ಮುಂಜಾನೆ 6 ಗಂಟೆಗೆ ದೇವಾಲಯಕ್ಕೆ ಭೇಟಿ ನೀಡಿಲಿರುವ ವಿಚಾರವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಖಾತೆಯಲ್ಲಿ ತಿಳಿಸಿದ್ದರು.

    ಸದ್ಯ ಇಂದು ದೇವಾಲಯಕ್ಕೆ ಭೇಟಿ ನೀಡಿದ ಅನುಭವ ಕುರಿತು ಕೆಲವೊಂದಷ್ಟು ಫೋಟೋಗಳನ್ನು ಕಂಗನಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ನಟಿ ಕಂಗನಾ, ಬಿಳಿ ಬಟ್ಟೆಯನ್ನು ಧರಿಸಿದ್ದು, ಅದಕ್ಕೆ ಸೂಟ್ ಆಗುವಂತಹ ಚಿನ್ನದ ಒಡವೆಗಳನ್ನು ಧರಿಸಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಅವರ ಕರ್ಲಿ ಹೇರ್‍ನನ್ನು ಬನ್ ಮೂಲಕ ಅಚ್ಚುಕಟ್ಟಾಗಿ ಮೇಲಕ್ಕೆತ್ತಿ ಕಟ್ಟಿದ್ದಾರೆ. ಅವರ ಉಡುಗೆ ತೊಡುಗೆಯೂ ದೇವಾಲಯಕ್ಕೆ ಭೇಟಿ ನೀಡುವವರು ಧರಿಸುವಂತ ಉಡುಗೆಯಂತೆಯೇ ಎದ್ದು ಕಾಣಿಸುತ್ತದೆ.

    ಈ ಕುರಿತ ಫೋಟೋ ಶೇರ್ ಮಾಡಿಕೊಂಡಿರುವ ಕಂಗನಾ, ನಾವು ಯಾವಾಗಲೂ ಕೃಷ್ಣ ರಾಧ, ರುಕ್ಮಿಣಿ ಜೊತೆ ಇರುವುದನ್ನು ನೋಡಿದ್ದೇವೆ. ಆದರೆ ಪುರಿ ಜಗನ್ನಾಥ ದೇವಾಲಯದಲ್ಲಿ ಕೃಷ್ಣನನ್ನು ತನ್ನ ಸಹೋದರ ಬಲರಾಮ ಮತ್ತು ಅರ್ಜುನನ ಪತ್ನಿ ಸುಭದ್ರೆ ಜೊತೆ ಇರಿಸಲಾಗಿದೆ. ಅಲ್ಲದೆ ತನ್ನ ಹೃದಯ ಚಕ್ರದ ಮೂಲಕ ಈ ಸ್ಥಳ ಎಲ್ಲವನ್ನು ಗುಣಪಡಿಸುತ್ತದೆ ಮತ್ತು ಹಿತವಾದ ಅನುಭವ ನೀಡುತ್ತದೆ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.

  • ಸೇಫ್ಟಿ ಪಿನ್ ಇರೋ 25 ಸಾವಿರದ ಸ್ವೆಟರ್ ಧರಿಸಿದ ಕತ್ರಿನಾ

    ಸೇಫ್ಟಿ ಪಿನ್ ಇರೋ 25 ಸಾವಿರದ ಸ್ವೆಟರ್ ಧರಿಸಿದ ಕತ್ರಿನಾ

    ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್ 25 ಸಾವಿರ ಬೆಲೆಯ ಸ್ವೆಟರ್‍ವೊಂದನ್ನು ಧರಿಸುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ. ದುಬಾರಿ ಬೆಲೆಯ ಸ್ವೆಟರ್ ಧರಿಸಿ ಫೋಟೋ ಕ್ಲಿಕ್ಕಿಸಿಕೊಂಡು ಕತ್ರಿನಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಹೌದು, ಹಲವು ನಟಿಯರ ಪೈಕಿ ನಟಿ ಕತ್ರಿನಾ ಕೈಫ್ ವಿಭಿನ್ನ ಶೈಲಿಯ ಉಡುಗೆಗಳನ್ನು ಆಯ್ಕೆ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಸದ್ಯ ಇತ್ತೀಚೆಗಷ್ಟೇ ಕತ್ರಿನಾ 25 ಸಾವಿರ ರೂ. ಮೌಲ್ಯದ ಸ್ವೆಟರ್‍ವೊಂದನ್ನು ಖರೀದಿಸಿದ್ದಾರೆ.

     

    View this post on Instagram

     

    A post shared by Katrina Kaif (@katrinakaif)

    ಈ ಸ್ವೆಟರ್ ವಿಶೇಷವೆನಂದರೆ ಇದು ಕ್ರಾಪ್ ಶೇಪ್ ಹೊಂದಿದ್ದು, ಸೊಂಟದಷ್ಟು ಬರುತ್ತದೆ. ಜೊತೆಗೆ ರಿಬ್ಬಿಡ್ ಕಾಲರ್‍ನನ್ನು ಹೊಂದಿದ್ದು, ಸ್ವೆಟರ್ ಮಧ್ಯದಲ್ಲಿ ಬಟನ್‍ಗಳ ಬದಲಾಗಿ ಸೆಫ್ಟಿ ಪಿನ್ ಮೂಲಕ ವಿನ್ಯಾಸಗೊಳಿಸಲಾಗಿದೆ.

    ಚಳಿಗಾಲಕ್ಕೆ ಹೇಳಿ ಮಾಡಿಸಿದಂತಿರುವ ವಿಭಿನ್ನ ಶೈಲಿಯ ಸ್ವೆಟರ್ ಧರಿಸಿ ಕತ್ರಿನಾ ಕ್ಯಾಮೆರಾಗೆ ಫೋಸ್ ನೀಡಿದ್ದಾರೆ. ಸೊಂಟದಷ್ಟು ಉದ್ದ ಬರುವ ಈ ಸ್ವೇಟರ್ ಕತ್ರಿನಾಗೆ ಸಖತ್ ಸ್ಟೆಲಿಶ್ ಲುಕ್ ನೀಡುತ್ತಿದೆ. ಸದ್ಯ ಕತ್ರಿನಾ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದ್ದು, ಹೊಸ ಟ್ರೆಂಡ್‍ನನ್ನೇ ಸೃಷ್ಟಿ ಮಾಡುತ್ತಿದೆ.

  • ಆಲ್ ದಿ ಬೆಸ್ಟ್.. ನಾನು ಇಲ್ಲದೆ ಸಂತೋಷದಿಂದ ಇರಿ: ರಶ್ಮಿಕಾ ಮಂದಣ್ಣ

    ಆಲ್ ದಿ ಬೆಸ್ಟ್.. ನಾನು ಇಲ್ಲದೆ ಸಂತೋಷದಿಂದ ಇರಿ: ರಶ್ಮಿಕಾ ಮಂದಣ್ಣ

    ಬೆಂಗಳೂರು: ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ ಮಿಷನ್ ಮಜ್ನು ಸಿನಿಮಾದ ಚಿತ್ರೀಕರಣ ಫೆಬ್ರವರಿ 6 ರಿಂದ ಲಕ್ನೋದಲ್ಲಿ ಪ್ರಾರಂಭವಾಗಿದೆ. ಆದರೆ ಸಿನಿಮಾದ ಪ್ರಮುಖ ನಾಯಕಿ ರಶ್ಮಿಕಾ ಮಂದಣ್ಣ ಚಿತ್ರೀಕರಣದಲ್ಲಿ ಸದ್ಯ ಪಾಲ್ಗೊಂಡಿಲ್ಲ. ಬದಲಾಗಿ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಚಿತ್ರಕ್ಕೆ ಆಲ್ ದಿ ಬೆಸ್ಟ್ ಎಂದು ವಿಶ್ ಮಾಡಿದ್ದಾರೆ.

    ಸಿನಿಮಾ ನಿರ್ಮಾಣ ಮಾಡುತ್ತಿರುವ ಆರ್‍ಎಸ್‍ವಿಪಿ ಇನ್‍ಸ್ಟಾಗ್ರಾಮ್ ಖಾತೆಯ ಮೂಲಕ ಮಿಷನ್ ಮಜ್ನು ಕ್ಲಾಪ್ ಬೋರ್ಡ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಭಾರತದ ಮಾರಕ ರಹಸ್ಯ ಕಾರ್ಯಚರಣೆಯ ಮೊದಲ ಅಧ್ಯಾಯವು ಇಂದು ಆರಂಭವಾಗಿದೆ ಎಂದು ಕ್ಯಾಪ್ಷನ್ ಹಾಕಿಕೊಂಡಿದೆ.

    ಜೊತೆಗೆ ಮಿಷನ್ ಮಜ್ನು ಸಿನಿಮಾದ ಚಿತ್ರೀಕರಣವನ್ನು ಲಕ್ನೋನಲ್ಲಿ ಇಂದಿನಿಂದ ಆರಂಭಿಸಲಾಗಿದ್ದು, ಮುಂದಿನ ಒಂದೆರಡು ದಿನಗಳ ಕಾಲ ಕೇವಲ ಸಿದ್ಧಾರ್ಥ್ ಮಲ್ಹೋತ್ರಾ ದೃಶ್ಯಗಳನ್ನು ಮಾತ್ರ ಚಿತ್ರೀಕರಿಸಲಾಗುತ್ತದೆ. ನಂತರದ ದಿನಗಳಲ್ಲಿ ನಟಿ ರಶ್ಮಿಕಾ ಮಂದಣ್ಣ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

    ಸಿನಿಮಾ ಕುರಿತಂತೆ ನಟಿ ರಶ್ಮಿಕಾ ಮಂದಣ್ಣ ತಮ್ಮ ಇನ್ ಸ್ಟಾಗ್ರಾಮ್ ಖಾತೆಯ ಸ್ಟೋರಿಯಲ್ಲಿ ಹಾಹಾಹಾ… ನಮ್ಮ ಹುಡುಗರು ಇಂದು ರೋಲಿಂಗ್ ಆರಂಭಿಸಿದ್ದಾರೆ. ಆಲ್ ದಿ ಬೆಸ್ಟ್ ಆಲ್. ನಾನು ಇಲ್ಲದೆ ಸಂತೋಷದಿಂದ ಇರಿ ಎಂದು ಬೇಸರದ ಸಿಂಬಲ್ ಹಾಕಿ ವಿಶ್ ಮಾಡಿದ್ದಾರೆ. ಇನ್ನೂ ಈ ಪೋಸ್ಟ್‍ನನ್ನು ಆರ್‍ಎಸ್‍ವಿಪಿ ಚಲನಚಿತ್ರ ತನ್ನ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ.

    ಮಿಷನ್ ಮಜ್ನು ಸಿನಿಮಾದ ಲೀಡ್ ರೋಲ್‍ನಲ್ಲಿ ನಟ ಸಿದ್ದಾರ್ಥ್ ಮಲ್ಹೋತ್ರಾ ಅಭಿನಯಿಸುತ್ತಿದ್ದು, ಇತ್ತೀಚೆಗಷ್ಟೇ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್‍ನನ್ನು ಶೇರ್ ಮಾಡಿಕೊಂಡಿದ್ದರು. ಜೊತೆಗೆ ನಮ್ಮ ಗುಪ್ತಚರ ಸಂಸ್ಥೆ ಶತ್ರುಗಳ ಕುರಿತಂತೆ ನಡೆಸಿದ ಅತ್ಯಂತ ಮಾರಕ ರಹಸ್ಯ ಕಾರ್ಯಾಚರಣೆ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದರು.

     

    View this post on Instagram

     

    A post shared by Sidharth Malhotra (@sidmalhotra)

    ಮಿಷನ್ ಮಜ್ನು 1870ರ ನೈಜ ಘಟನೆಗಳಿಂದ ಪ್ರೇರಿತವಾಗಿರುವ ಒಂದು ಪತ್ತೆದಾರಿ ಥ್ರಿಲ್ಲರ್ ಚಿತ್ರವಾಗಿದ್ದು, ಈ ಸಿನಿಮಾವು ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧವನ್ನು ಶಾಶ್ವತವಾಗಿ ಬದಲಿಸಿದ ಕಥೆಯನ್ನು ಒಳಗೊಂಡಿದೆ ಎಂದು ಸಿನಿಮಾತಂಡ ತಿಳಿಸಿದೆ.