Tag: ಪಬ್ಲಿಕ್ ಟಿವಿ Bihar

  • ಪರೀಕ್ಷೆ ಬರೆಯಲು ತೆರಳೋ ವೇಳೆ ಹೆರಿಗೆ ನೋವು- ಮಗುವಿಗೆ ಜನ್ಮ ನೀಡಿ ಎಕ್ಸಾಂ ಬರೆದ ಮಹಿಳೆ

    ಪರೀಕ್ಷೆ ಬರೆಯಲು ತೆರಳೋ ವೇಳೆ ಹೆರಿಗೆ ನೋವು- ಮಗುವಿಗೆ ಜನ್ಮ ನೀಡಿ ಎಕ್ಸಾಂ ಬರೆದ ಮಹಿಳೆ

    ಪಾಟ್ನಾ: ಮಹಿಳೆಯೊಬ್ಬಳು ನವಜಾತ ಶಿಶುವಿಗೆ ಜನ್ಮ ನೀಡಿದ ಬಳಿಕ ಕಾಲೇಜಿಗೆ ತಲುಪಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿರುವ ಅಪರೂಪದ ಘಟನೆ ಬಿಹಾರದ ಮೋತಿಹರ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.

    ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬರೆಯುವುದಕ್ಕಾಗಿ ಜಿಲ್ಲೆಯ ಡಿಟಿಪಿಎಸ್ ಪರೀಕ್ಷಾ ಕೇಂದ್ರಕ್ಕೆ ತಲುಪುವ ವೇಳೆ ಮಾರ್ಗ ಮಧ್ಯೆ ಕಾಜಲ್‍ಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಆಕೆಯ ಕುಟುಂಬ್ಥರು ಆಕೆಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.

    ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಕಾಜಲ್ ಸ್ವಲ್ಪ ಚೇತರಿಸಿಕೊಂಡ ನಂತರ ಪರೀಕ್ಷಾ ಕೇಂದ್ರಕ್ಕೆ ತಲುಪಿ ಪ್ರತ್ಯೇಕ ಕೊಠಡಿಯಲ್ಲಿ ಕುಳಿತು ವಿಜ್ಞಾನ ಪರೀಕ್ಷೆಯನ್ನು ಬರೆದಿದ್ದಾರೆ.

    ಕಾಜಲ್ ಬಾಲಾಕೋಟಿಯ ರಾಮ್‍ರೂಪ್ ಬಾಲ್‍ದೇವ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ಕಳೆದ ವರ್ಷ ಫೆಬ್ರವರಿಯಲ್ಲಿ ಘೋಡಶಾನ್ ಪೊಲೀಸ್ ಠಾಣಾ ವ್ಯಾಪ್ತಿಯ ನಿಮುಯಾ ಗ್ರಾಮದ ನಿವಾಸಿ ಚುಂಚುನ್ ಯಾದವ್ ಎಂಬವರನ್ನು ವಿವಾಹವಾಗಿದ್ದರು. ಮದುವೆಯ ನಂತರ ವಿದ್ಯಾಭ್ಯಾಸ ಮುಂದುವರಿಸಿದ ಕಾಜಲ್, ಇಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಪರೀಕ್ಷೆ ಬರೆದಿದ್ದಾಳೆ ಎಂದು ಆಕೆಯ ಕುಟುಂಬಸ್ಥರು ತಿಳಿಸಿದ್ದಾರೆ.

    ಅಲ್ಲದೆ ಮಗುವನ್ನು ವೆಂಟಿಲೇಟರ್‌ನಲ್ಲಿಇರಿಸಿ ಕಾಜಲ್ ತನ್ನ ಪರೀಕ್ಷೆಗೆ ಹಾಜರಾಗಿದ್ದಳು. ಪರೀಕ್ಷೆ ಬರೆಯಲು ಕೇಂದ್ರ ಇನ್ಸ್‌ಪೆಕ್ಟರ್ ಎಲ್ಲ ರೀತಿಯ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದರು ಎಂದು ಹೇಳಿದರು. ಸದ್ಯ ಮಹಿಳೆಗೆ ಓದಿನ ಬಗೆಗೆ ಇರುವ ಉತ್ಸಾಹವನ್ನು ಕಂಡು ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

  • ಹೋಟೆಲ್‍ನಲ್ಲಿ ದಂಪತಿ ನಿಗೂಢ ಸಾವು

    ಹೋಟೆಲ್‍ನಲ್ಲಿ ದಂಪತಿ ನಿಗೂಢ ಸಾವು

    ಪಾಟ್ನಾ: ಗುಂಡು ತಗುಲಿ ದಂಪತಿ ಮೃತಪಟ್ಟಿರುವ ಘಟನೆ ಬಿಹಾರದಲ್ಲಿ ಸೋಮವಾರ ನಡೆದಿದೆ. ತನಿಖೆ ವೇಳೆ ಮೃತಪಟ್ಟವರು ದಂಪತಿಯಾಗಿದ್ದು, ಪರೀಕ್ಷೆಗಾಗಿ ಮುಜಾಫರ್‍ಪುರ್‍ಗೆ ಬಂದಿದ್ದರು ಎಂದು ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದಾರೆ.

    ದಂಪತಿ ವಿಚಾರಿಸಲೆಂದು ಹೋಟೆಲ್ ಮ್ಯಾನೇಜರ್ ಚೋಟು ಕುಮಾರ್, ಕೋಣೆ ಬಳಿ ಹೋಗಿ ಬಾಗಿಲು ತಟ್ಟಿದ್ದಾರೆ. ಆದರೆ ದಂಪತಿ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಒಡೆದು ಹಾಕಿ ಕೋಣೆ ಒಳಗೆ ಪ್ರವೇಶಿಸಿದಾಗ ತಲೆಗೆ ಬುಲೆಟ್ ತಗುಲಿ ದಂಪತಿ ಹಾಸಿಗೆ ಮೇಲೆ ಶವವಾಗಿ ಬಿದ್ದಿರುವುದು ಪತ್ತೆಯಾಗಿದೆ.

    ಘಟನೆ ಕುರಿತಂತೆ ವಿಚಾರಣೆ ನಡೆಸಲು ಎಫ್‍ಎಸ್‍ಎಲ್ ವಿಶೇಷ ತಂಡವನ್ನು ರಚಿಸಲಾಗಿದ್ದು, ತನಿಖೆ ನಂತರ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಸತ್ಯ ಬಹಿರಂಗಗೊಳ್ಳಲಿದೆ ಎಂದು ಡಿಎಸ್‍ಪಿ ರಾಮ್ನಾರೇಶ್ ಪಾಸ್ವಾನ್ ತಿಳಿಸಿದ್ದಾರೆ.

  • ಮಾಜಿ ಪ್ರಿಯಕರನ ಕತ್ತು ಹಿಸುಕಿ ಕೊಂದ ಮಹಿಳೆ

    ಮಾಜಿ ಪ್ರಿಯಕರನ ಕತ್ತು ಹಿಸುಕಿ ಕೊಂದ ಮಹಿಳೆ

    ಪಾಟ್ನಾ: 34 ವರ್ಷದ ಮಹಿಳೆಯೊಬ್ಬಳು 21 ವರ್ಷದ ತನ್ನ ಮಾಜಿ ಪ್ರಿಯಕರನನ್ನು ಕೊಂದು ಪೊಲೀಸರಿಗೆ ಶರಣಾಗಿರುವ ಘಟನೆ ಬಿಹಾರದ ಸಿವಾನ್ ಜಿಲ್ಲೆಯಲ್ಲಿ ನಡೆದಿದೆ.

    ಆರೋಪಿ ಮಹಿಳೆಯನ್ನು ಖುದೈಜಾ ಬೇಗಂ ಎಂದು ಗುರುತಿಸಲಾಗಿದ್ದು, ಗರಿಬ್ ಗಂಜ್ ಗ್ರಾಮದ ನಿವಾಸಿಯಾಗಿದ್ದಾಳೆ. ಆಕೆಯ ಪತಿ ಅಸ್ಸಾಂನಲ್ಲಿ ವಾಸವಾಗಿದ್ದು, ಈ ದಂಪತಿ ಎರಡು ಗಂಡು ಮಕ್ಕಳಿವೆ. ಇಬ್ಬರು ಮಕ್ಕಳು ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದಾರೆ ಎಂದು ತಿಳಿಸಲಾಗಿದೆ.

    ಬೇಗಂ ಮಾಜಿ ಪ್ರಿಯಕರ ಮೊಹಮ್ಮದ್ ರಂಜಾನ್ ಮದ್ಯಪಾನ ಮಾಡಿ ಆಕೆಯ ಮನೆಗೆ ಬಂದಿದ್ದಾನೆ. ಈ ವೇಳೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದರಿಂದ ಕೋಪಗೊಂಡ ಬೇಗಂ ಮದ್ಯ ರಾತ್ರಿ ಮಲಗಿರುವ ವೇಳೆ ಸ್ಕ್ರಾಫ್‍ನಿಂದ ಆತನ ಕತ್ತು ಹಿಸುಕಿ ಕೊಂದಿದ್ದಾಳೆ.

    ಬಳಿಕ ಮುಂಜಾನೆ ಗೌತಮ್ ಬುದ್ಧ ಪೊಲೀಸ್ ಠಾಣೆಗೆ ಹೋಗಿ ನಡೆದ ವಿಚಾರವನ್ನೆಲ್ಲಾ ಪೊಲೀಸರಿಗೆ ವಿವರಿಸಿದ್ದಾಳೆ. ಹಾಗಾಗಿ ಪೊಲೀಸರು ಆಕೆಯನ್ನು ವಶಕ್ಕೆ ಪಡೆದುಕೊಂಡರು. ಇದೀಗ ಮೃತನ ತಂದೆ ನವಿಜಾನ್(60) ಮಹಿಳೆ ವಿರುದ್ಧ ದೂರು ದಾಖಲಿಸಿದ್ದು, ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಅಲ್ಲದೆ ಮೃತನ ತಂದೆ, ಬೇಗಂ ತನ್ನ ಮಗನನ್ನು ಕೊಲ್ಲಲೆಂದು ಮನೆಗೆ ಕರೆಸಿಕೊಂಡಿದ್ದಾಳೆ. ಜೊತೆಗೆ ಆರು ತಿಂಗಳ ಹಿಂದೆ ತನ್ನ ಮಗನೊಂದಿಗೆ ಓಡಿಹೋಗಿದ್ದಳು. ಆದರೆ ಕುಟುಂಬದ ಒತ್ತಡದಿಂದ 5 ದಿನಗಳ ನಂತರ ಮನೆಗೆ ಮತ್ತೆ ಹಿಂದಿರುಗಿದ್ದಳು. ತನ್ನ ಮಗನೊಂದಿಗಿನ ಸಂಬಂಧವನ್ನು ಕಳೆದುಕೊಳ್ಳುವ ಸಲುವಾಗಿ ಆಕೆ ಆತನನ್ನು ಕೊಲೆ ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ.