Tag: ಪಬ್ಲಿಕ್ ಟಿವಿ Biggboss

  • ದುಬಾರಿ ಕಾರು ಖರೀದಿಸಿದ ಮಾಡರ್ನ್ ರೈತ ಶಶಿ

    ದುಬಾರಿ ಕಾರು ಖರೀದಿಸಿದ ಮಾಡರ್ನ್ ರೈತ ಶಶಿ

    ಬೆಂಗಳೂರು: ಬಿಗ್‍ಬಾಸ್ ಸೀಸನ್ 6ರ ವಿನ್ನರ್ ಶಶಿ ದುಬಾರಿ ಕಾರೊಂದನ್ನು ಖರೀದಿಸಿದ್ದಾರೆ. ಸದ್ಯ ಶಶಿ ಪರ್ಚೆಸ್ ಮಾಡಿರುವ ಕಾರಿನ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

    ಹೌದು ಬಿಗ್‍ಬಾಸ್ ಸೀಸನ್ 6ರಲ್ಲಿ ಜನಸಾಮಾನ್ಯರಲ್ಲಿ ಒಬ್ಬರಾಗಿ ಶಶಿ ಎಂಟ್ರಿ ಕೊಟ್ಟಿದ್ದರು. ಬಳಿಕ ದೊಡ್ಮನೆ ಮೂಲಕ ಮಾಡರ್ನ್ ರೈತ ಅಂತಾನೆ ಫೇಮಸ್ ಆದ್ರು. ಬಿಗ್‍ಬಾಸ್ ರಿಯಾಲಿಟಿ ಶೋ ನಂತರ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿದ್ದ ಶಶಿ ಇದೀಗ ಮಿನಿ ಕೂಪರ್ ಕೆಂಪು ಬಣ್ಣದ ಕಾರನ್ನು ಖರೀದಿಸುವ ಮೂಲಕ ಮತ್ತೆ ಸದ್ದು ಮಡುತ್ತಿದ್ದಾರೆ.

    ಈ ಕುರಿತಂತೆ ಶಶಿ ‘ನನ್ನ ಕನಸಿನ ಕಾರುಗಳಲ್ಲಿ ಒಂದಿರುವ ಮಿನಿ ಕೂಪರ್ ನನ್ನ ಪಾರ್ಕಿಂಗ್ ಸೇರಿದೆ. ನನ್ನ ಮೊದಲ ಕಾರು ಓಮ್ನಿ. ಆದರೀಗ ಕೇವಲ ಮಿನಿ’ ಎಂದು ಕ್ಯಾಪ್ಷನ್ ಹಾಕಿಕೊಳ್ಳುವ ಮೂಲಕ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

    ಕಾರಿನ ಮುಂದೆ ನಿಂತು ಫೋಸ್ ಕೊಟ್ಟಿರುವ ಶಶಿ ಸಖತ್ ಹ್ಯಾಂಡ್‍ಸಮ್ ಆಗಿ ಕಾಣಿಸುತ್ತಿದ್ದಾರೆ. ಜೊತೆಗೆ ಶಶಿ ಫೋಟೋಗೆ ಅನೇಕರು ಕಮೆಂಟ್ ಮಾಡುವ ಮೂಲಕ ಶುಭಕೋರಿದ್ದಾರೆ.

     

    View this post on Instagram

     

    A post shared by S H A S H I ???? (@shashi.official)

    ಈ ಮುನ್ನ ಮಾಡರ್ನ್ ರೈತ ಶಶಿ ಸ್ಯಾಂಡಲ್‍ವುಡ್‍ಗೆ ಕೂಡ ಪಾದಾರ್ಪಣೆ ಮಾಡಿದ್ದು, ಮೆಹಬೂಬಾ ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಶಶಿಗೆ ನಾಯಕ ಆಗಿ ಪಾವನಾ ಗೌಡ ಮಿಂಚಿದ್ದಾರೆ. ನಿರ್ದೇಶ ಅನೂಪ್ ಆಂಟೋನಿ ಆ್ಯಕ್ಷನ್ ಕಟ್ ಹೇಳಿದ್ದು, ನಿರ್ಮಾಪಕ ಶ್ರೀನಿವಾಸ್ ಬಂಡವಾಳ ಹೂಡಿದ್ದಾರೆ.

  • ಏಯ್ ಪೆರ್ಗುಡೆ, ಪೂರಿ ಬೇಡ, ಬೇರೆ ಕೇಳು

    ಏಯ್ ಪೆರ್ಗುಡೆ, ಪೂರಿ ಬೇಡ, ಬೇರೆ ಕೇಳು

    ದಾ ಮನೆ ಪೂರ್ತಿ ವಸ್ತುಗಳಿಂದ ತುಂಬಿ ತುಳುಕಾಡುತ್ತಿದ್ದ ಬಿಗ್‍ಬಾಸ್ ಮನೆ, ನಿನ್ನೆ ಖಾಲಿ ಖಾಲಿಯಾಗಿತ್ತು. ಮನೆಮಂದಿ ನೀರಿಲ್ಲದೆ ಬ್ರಶ್, ಸೋಪು, ಶ್ಯಾಂಪೂ, ಧರಿಸಲು ಬಟ್ಟೆ, ತಿನ್ನಲು ತಿಂಡಿ ಕೂಡ ಇಲ್ಲದೇ ಪರದಾಡಿದ್ದಾರೆ. ಆದರೆ ಇವೆಲ್ಲದರ ಮಧ್ಯೆ ಶುಭಾ ಪೂಂಜಾ ಬಿಗ್‍ಬಾಸ್ ಮುಂದೆ ಪೂರಿ ಸಾಗೂ ಕಳುಹಿಸಿಕೊಡುವಂತೆ ಬೇಡಿಕೆ ಇಟ್ಟಿದ್ದಾರೆ.

    ಹೌದು, ನಿನ್ನೆ ಮನೆಯಲ್ಲಿದ್ದ ವಸ್ತುಗಳೆಲ್ಲವನ್ನು ಬಿಗ್‍ಬಾಸ್ ವಶಪಡಿಸಿಕೊಂಡಿದ್ದಾರೆ. ಇದರಿಂದ ಈ ವಿಚಾರವಾಗಿ ಮನೆ ಮಂದಿ ಎಲ್ಲ ಆತಂಕಗೊಂಡು ಗಾರ್ಡನ್ ಏರಿಯಾದಲ್ಲಿ ಚರ್ಚೆ ನಡೆಸುತ್ತಿದ್ದರೆ, ಶುಭಾ ಪೂಂಜಾ ಮಾತ್ರ ನನಗೆ ಹೊಟ್ಟೆ ಹಸಿಯುತ್ತಿದೆ ಬಿಗ್‍ಬಾಸ್.. ಪೂರಿ ಸಾಗೂ ಕಳುಹಿಸಿ ಕೊಡಿ ಎಂದು ಕೇಳುತ್ತಾರೆ. ಅಲ್ಲದೇ ನನ್ನ ಬಳಿ ಒಂದೇ ನೈಟ್ ಡ್ರೆಸ್ ಇದೆ ಇನ್ನೆರಡು ನೈಟ್ ಡ್ರೆಸ್ ಕಳಹಿಸಿಕೊಡಿ ಎಂದಿದ್ದಾರೆ.

    ಬ್ರಶ್ ಆಯ್ತು, ಪೂರಿ ಸಾಗೂ ಆಯ್ತು, ಈಗ ನೈಟ್ ಡ್ರೆಸ್ ಅಂತೆ ಎಂದು ದಿವ್ಯಾ ಉರುಡುಗ ರೇಗಿಸುತ್ತಾರೆ. ಈ ವೇಳೆ ರಾಜೀವ್ ಪೆರ್ಗುಡೆ.. ಪೂರಿ ಸಾಗೂ ಬೇಡ ಬೇರೆ ಏನಾದರೂ ಕೇಳು, ದಾವಣಗೆರೆ ಬೆಣ್ಣೆ ದೋಸೆ ಕೇಳು ಅಂತಾರೆ. ಅದಕ್ಕೆ ಶುಭಾ ಬೆಣ್ಣೆ ದೋಸೆ ಒಕೆ ಒಕೆ ಅಷ್ಟೇ ಎನ್ನುತ್ತಾರೆ. ಹೋಗ್ಲಿ ಪಡ್ಡು ಕೇಳು ಅಂದಾಗ, ಪಡ್ಡು ನನಗೆ ಅಷ್ಟು ಇಷ್ಟವಾಗುವುದಿಲ್ಲ. ಈ ಎಲ್ಲದಕ್ಕಿಂತ ಇಡ್ಲಿ, ವಡೆ ನೇ ಒಕೆ ಎಂದು ಶುಭಾ ಹೇಳುತ್ತಾರೆ.

    ಒಟ್ಟಾರೆ ಮನೆಮಂದಿಯೆಲ್ಲಾ ಮನೆಯಲ್ಲಿದ್ದ ವಸ್ತುಗಳೆಲ್ಲ ಕಾಣೆಯಾಗಿರುವುದಕ್ಕೆ ಆತಂಕಗೊಂಡಿದ್ದರೆ ಶುಭಾಗೆ ಮಾತ್ರ ಪೂರಿ ಸಾಗೂ ಚಿಂತೆಯಾಗಿದೆ.

  • ನೀರು, ಊಟ, ನಿದ್ದೆ ಇಲ್ಲದೆ ಪರದಾಡಿದ ಸ್ಪರ್ಧಿಗಳು!

    ನೀರು, ಊಟ, ನಿದ್ದೆ ಇಲ್ಲದೆ ಪರದಾಡಿದ ಸ್ಪರ್ಧಿಗಳು!

    ಪ್ರತಿನಿತ್ಯದಂತೆ ನಿನ್ನೆ ಕೂಡ ಬೆಳಗ್ಗೆ ಬಿಗ್‍ಬಾಸ್ ಮನೆಯಲ್ಲಿ ಸಾಂಗ್ ಪ್ಲೇ ಆಗುತ್ತಿದ್ದಂತೆ ಮನೆಮಂದಿ ಏಳುತ್ತಾರೆ, ಎದ್ದ ಕೂಡಲೇ ರೂಮಿನಿಂದ ಹೊರಬಂದ ಮನೆ ಮನೆಮಂದಿಗೆ ಬಿಗ್‍ಬಾಸ್ ದೊಡ್ಡ ಶಾಕ್ ಅನ್ನೇ ನೀಡಿದ್ದಾರೆ.

    ಹೌದು, ನಿನ್ನೆ ಬಿಗ್‍ಬಾಸ್ ಕಾಣದಂತೆ ಮಾಯಾವಾದನೂ ಸಾಂಗ್ ಹಾಕಿ ಮನೆಮಂದಿಯನ್ನು ಎಚ್ಚರಗೊಳಿಸಿದರು. ಎದ್ದ ಕೂಡಲೇ ಲಿವಿಂಗ್ ಏರಿಯಾಗೆ ಬಂದ ಎಲ್ಲಾ ಸ್ಫರ್ದಿಗಳಿಗೆ ಮನೆಯಲ್ಲಿದ್ದ ವಸ್ತುಗಳೆಲ್ಲಾ ನಾಪತ್ತೆಯಾಗಿರುವುದನ್ನು ಕಂಡು ಅಚ್ಚರಿಗೊಳ್ಳುತ್ತಾರೆ.

    ನಂತರ ಕಿಚನ್ ರೂಮ್‍ಗೆ ಹೋಗಿ ನೋಡಿದಾಗ ಅಲ್ಲಿದ್ದ ಅಡುಗೆ ಸಾಮಗ್ರಿಗಳು, ಅಡುಗೆ ಪದಾರ್ಥಗಳು ಎಲ್ಲವೂ ಮಾಯವಾಗಿತ್ತು. ಬಳಿಕ ಅಲ್ಲಿಂದ ಗಾರ್ಡನ್ ಏರಿಯಾಗೆ ಹೋಗಿ ನೋಡಿದಾಗ ಜಿಮ್ ಐಟಮ್ಸ್ ಕೂಡ ಇರಲಿಲ್ಲ. ಇದಾದ ನಂತರ ಬಾತ್‍ರೂಮ್ ಏರಿಯಾಗೆ ಹೋಗಿ ನೋಡಿದಾಗ ಬ್ರಶ್ ಸೋಪ್ ಎಲ್ಲವು ನಾಪತ್ತೆಯಾಗಿತ್ತು. ಅಷ್ಟೇ ಅಲ್ಲದೇ ಮನೆಯಲ್ಲಿ ನೀರು ಕೂಡ ನಿಲ್ಲಿಸಿದರು.

    ಈ ವೇಳೆ ಶುಭಾ ಪೂಂಜಾ ಬಿಗ್‍ಬಾಸ್ ಬ್ರಶ್ ಆದರೂ ಕೊಡಿ ಬಿಗ್‍ಬಾಸ್ ಎಂದು ಕೇಳಿಕೊಳ್ಳುತ್ತಾರೆ. ಈ ವೇಳೆ ದಿವ್ಯಾ ಉರುಡುಗ, ಮಂಜು ಸ್ಟಾರ್ಟ್ ಆಯ್ತು ಇವಳದ್ದು ಅಂತಾರೆ. ಇದಕ್ಕೆ ಶುಭಾ ನಾನು ನನ್ನ ಪಾಡಿಗೆ ನಾನು ಕೇಳುತ್ತಿದ್ದೇನೆ. ನಿಮಗೆಲ್ಲಾ ಬೇಕಾದರೆ ಶುಭಾ ಕೇಳು ಎಂದು ಹೇಳುತ್ತೀರಾ, ಆಗ ಮಾತ್ರ ನಾನು ನಿಮಗೆ ಬೇಕು ಎನ್ನುತ್ತಾರೆ. ಆಗ ದಿವ್ಯಾ ಉರುಡುಗ ಸರಿ ಈಗ ಎಲ್ಲರಿಗೂ ಕೇಳು ಎಂದಾಗ, ಶುಭಾ, ಬಿಗ್‍ಬಾಸ್ ಎಲ್ಲಾರಿಗೂ ಬೇಡ, ನನ್ನ ಬ್ರಶ್ ಮಾತ್ರ ಕಳುಹಿಸಿಕೊಡಿ ಎಂದು ಹೇಳುತ್ತಾರೆ.

    ಒಟ್ಟಾರೆ ಮನೆಯೆಲ್ಲಾ ಖಾಲಿ ಖಾಲಿಯಾಗಿರುವುದನ್ನು ನೋಡಿ ಮನೆ ಮಂದಿ ಸದ್ಯ ನೀರು, ಊಟ, ನಿದ್ದೆ ಇಲ್ಲದೆ  ಆತಂಕ್ಕೊಳಗಾಗಿದ್ದಾರೆ.

  • ಮಿರರ್ ಮುಂದೆ ನಿಂತು ಹೈಟ್ ಚೆಕ್ ಮಾಡ್ಕೊಂಡ ಅರವಿಂದ್, ದಿವ್ಯಾ ಉರುಡುಗ!

    ಮಿರರ್ ಮುಂದೆ ನಿಂತು ಹೈಟ್ ಚೆಕ್ ಮಾಡ್ಕೊಂಡ ಅರವಿಂದ್, ದಿವ್ಯಾ ಉರುಡುಗ!

    ಬಿಗ್‍ಬಾಸ್ ಮನೆಯ ಕ್ಯೂಟೆಸ್ಟ್ ಪೇರ್ ಅಂದರೆ ಅರವಿಂದ್ ಹಾಗೂ ದಿವ್ಯಾ ಉರುಡುಗ ಎಂದೇ ಹೇಳಬಹುದು. ಬಿಗ್‍ಬಾಸ್ ನೀಡಿದ್ದ ಜೋಡಿ ಟಾಸ್ಕ್ ವೇಳೆ ಇಬ್ಬರು ಒಬ್ಬರಿಗೊಬ್ಬರು ಬಹಳ ಹಚ್ಚಿಕೊಂಡಿದ್ದು, ಇದೀಗ ಎಲ್ಲಿ ನೋಡಿದರೂ ಜೊತೆ ಜೊತೆಯಾಗಿ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

    ಇವರಿಬ್ಬರ ನಡುವಿನ ಹೊಂದಾಣಿಕೆ, ಹಾವಭಾವ ಎಲ್ಲವನ್ನು ಗಮನಿಸಿದ ಮನೆ ಮಂದಿ ಇಬ್ಬರು ಒಂದಾದರೆ ಜೋಡಿ ಚೆನ್ನಾಗಿರುತ್ತದೆ ಎಂದು ಕಾಮೆಂಟ್ ಕೂಡ ಮಾಡಿದ್ದಾರೆ. ಸದ್ಯ ನಿನ್ನೆ ಅರವಿಂದ್ ಹಾಗೂ ದಿವ್ಯಾ ಉರುಡುಗ ಬಾತ್‍ರೂಮ್ ಏರಿಯಾದ ಮಿರರ್ ಮುಂದೆ ನಿಂತು ಹೈಟ್ ಚೆಕ್ ಮಾಡಿಕೊಂಡಿದ್ದಾರೆ.

    ದಿವ್ಯಾ ಉರುಡುಗ ಅರವಿಂದ್ ಮುಂದೆ ನಿಂತು ನಾನು ನಿಮ್ಮ ಬಾಯಿಯಷ್ಟು ಎತ್ತರ ಬರುತ್ತೇನೆ ಎಂದಾಗ, ಅರವಿಂದ್ ಇಲ್ಲ ನೀನು ಇನ್ನೂ ಕುಳ್ಳಗೆ ಇದ್ದೀಯಾ, ನನ್ನ ಕಿವಿ ಕೆಳಗೆ ಬರುತ್ತೀಯಾ ಎಂದು ಹೇಳುತ್ತಾರೆ. ಆಗ ದಿವ್ಯಾ ಉರುಡುಗ ಇಲ್ಲ ನಾನು ನಿಮ್ಮ ಮೂಗಿನ ತನಕ ಬರುತ್ತೇನೆ ಎನ್ನುತ್ತಾ ಹೈಟ್ ನೋಡುತ್ತಾರೆ.

    ಬಳಿಕ ನಾನು ನಿಮ್ಮ ಮುಂದೆ ನಿಂತಾಗ ನೀವು ತಲೆ ಎತ್ತಿತ್ತೀರಾ ಎಂದು ಹೇಳುತ್ತಾ ಮತ್ತೆ ನಿಲ್ಲುತ್ತಾರೆ. ಇಲ್ಲ ಈಗಲೂ ನೀನು ನನ್ನ ಅಪ್ಪರ್ ಲಿಪ್‍ಗಿಂತ ಕೆಳಗೆ ಬರುತ್ತೀಯಾ ಎಂದು ಅರವಿಂದ್ ದಿವ್ಯಾ ಜೊತೆ ವಾದ ಮಾಡುವಾಗ, ಸ್ಲಿಪರ್ ನೋಡಿ ಅಯ್ಯೋ ಕಾಲಿನಲ್ಲಿ ಹಿಲ್ಸ್ ಸ್ಲಿಪ್ಪರ್ ಹಾಕಿಕೊಂಡಿದ್ದೀಯಾ ಅದು ತೆಗೆ ಎಂದು ಹೇಳುತ್ತಾರೆ. ಇದಕ್ಕೆ ದಿವ್ಯಾ ನೀವು ಶೂ ಹಾಕಿಕೊಂಡಿದ್ದೀರಾ ನೀವು ತೆಗೆಯಿರಿ ಎಂದು ಇಬ್ಬರು ಸ್ಲಿಪ್ಪರ್ ಬಿಚ್ಚಿ ಹೈಟ್ ಚೆಕ್ ಮಾಡುತ್ತಾರೆ.

    ಕೊನೆಗೆ ಸ್ಲಿಪ್ಪರ್ ಬಿಚ್ಚಿದಾಗ ದಿವ್ಯ ಉರುಡುಗ ಅರವಿಂದ್ ಅವರ ಬಾಯಿಯಿಂದ ಕೆಳಗೆ ಬರುತ್ತಾರೆ. ಆಗ ಅರವಿಂದ್ ಈಗ ನೀನು ನನ್ನ ಲೋವರ್ ಲಿಪ್‍ಗೆ ಬರುತ್ತೀಯಾ ಎಂದು ವಾದಿಸಿದರೆ, ದಿವ್ಯಾ ಇಲ್ಲ ನಾನು ಅದಕ್ಕಿಂತಲೂ ಮೇಲೆ ಬರುತ್ತೇನೆ ಎಂದು ವಾದಿಸುತ್ತಾರೆ. ಒಟ್ಟಾರೆ ಇವರಿಬ್ಬರ ಮುದ್ದಾದ ಕಿತ್ತಾಟ ಮುಗಿಯುವುದು ಇಲ್ಲ ಎಂಬಂತೆ ಮುಂದುವರಿಸುತ್ತಾರೆ.

  • ದಿವ್ಯಾ ಸುರೇಶ್‍ಗೆ ಅಭಿಮಾನಿಯಿಂದ ಪ್ರಶ್ನೆ

    ದಿವ್ಯಾ ಸುರೇಶ್‍ಗೆ ಅಭಿಮಾನಿಯಿಂದ ಪ್ರಶ್ನೆ

    ಬಿಗ್‍ಬಾಸ್, ಈ ಸೀಸನ್‍ನಲ್ಲಿ ಮೊದಲ ಬಾರಿಗೆ ವೀಕ್ಷಕರಿಗೆ ಸ್ಪರ್ಧಿಗಳ ಜೊತೆಗೆ ಮಾತನಾಡಲು ಅವಕಾಶ ನೀಡಲಾಗಿತ್ತು.

    ಅದರಂತೆ ಜನಾರ್ದನ್ ಎಂಬವರು ಕರೆ ಮಾಡಿ, ನಾನು ಪ್ರತಿ ದಿನ ಬಿಗ್‍ಬಾಸ್ ಫಾಲೋ ಮಾಡುತ್ತಿದ್ದೇನೆ. ನನ್ನ ಪ್ರಶ್ನೆ ದಿವ್ಯಾ ಸುರೇಶ್‍ರವರಿಗೆ ಅಂತಾ ಹೇಳಿ, ನೀವು ಬಹಳ ಚೆನ್ನಾಗಿ ಆಟ ಆಡುತ್ತಿದ್ದೀರಾ. ನೀವು ಯಾರನ್ನೋ ಫಾಲೋ ಮಾಡಿ ಆಟ ಆಡುತ್ತಿದ್ದೀರಾ ಎಂಬ ಆರೋಪಗಳು ಕೇಳಿಬರುತ್ತಿದ್ದರೂ ತಲೆ ಕೆಡಿಸಿಕೊಳ್ಳದೇ ಈಗ ನೀವು ಇಂಡಿಪೆಂಡೆಂಟ್ ಆಗಿ ಆಟ ಆಡುತ್ತಿದ್ದೀರಾ.

    ಆದರೆ ಮೊನ್ನೆ ನಡೆದ ಲವ್ ಲೆಟರ್ ಟಾಸ್ಕ್ ವೇಳೆ, ಬೇರೆಯವರು ಬರೆದ ಲೆಟರ್‍ನನ್ನು ನೀವು ಹುಡುಕುವುದಕ್ಕೆ ನಿಧಿ ಅವರಿಗೆ ಸಹಾಯ ಮಾಡಿದ್ರಿ. ಕೊನೆಗೆ ನಿಮ್ಮ ಹತ್ತಿರ ಅತೀ ಹೆಚ್ಚು ಲೆಟರ್ಸ್ ಉಳಿಯಿತು. ಇದಕ್ಕೆ ಕಾರಣ ನಿಧಿಯವರು ಹೆಲ್ಪ್ ಮಾಡಿದ್ದು ಎಂದು ನಿಮಗೆ ಅನಿಸುವುದಿಲ್ವಾ ಅಂತಾ ಕೇಳುತ್ತಾರೆ.

    ಆಗ ದಿವ್ಯಾ ಸುರೇಶ್, ನಾನು ಕೆಲವೊಂದಷ್ಟು ಪತ್ರವನ್ನು ಮಂಜು ಸಹಾಯದಿಂದ ಮೇಲಕ್ಕೆ ಎತ್ತಿಟ್ಟೆ. ಆದರೆ ನಾನು ಸೇವ್ ಮಾಡಿದ್ದು ಕೇವಲ 5-6 ಲೆಟರ್ ಮಾತ್ರ. ನಾನು ಆಟ ಆಡುವ ವೇಳೆ ನಿಧಿಯವರು ಬಂದು ಈ ರೀತಿ ಆಫರ್ ಮಾಡಿದರು. ಇದನ್ನು ನಾನು ಮಂಜು ಜೊತೆ ಚರ್ಚಿಸಿ ನಂತರ ನಿರ್ಧರಿಸಿದೆ ಎಂದು ಉತ್ತರಿಸುತ್ತಾರೆ.

    ಹಾಗದರೆ ಕ್ಯಾಪ್ಟನ್ಸಿ ಟಾಸ್ಕ್ ಬಂದಾಗ ನಿಮಗೆ ಎಲ್ಲರ ಮೇಲೂ ಕೋಪ ಬಂದಿದ್ದು ಯಾಕೆ ಎಂಬ ಪ್ರಶ್ನೆಗೆ, ಇಲ್ಲ ನನಗೆ ಕೋಪ ಏನು ಬಂದಿಲ್ಲ. ಬಹುಶಃ ನನಗೆ ಇವರು ಅತ್ಯುತ್ತಮ ಆಟಗಾರ್ತಿ ಕೊಟ್ಟರು. ಆದರೆ ಅತ್ಯುತ್ತಮ ನೀಡಿದ್ದು ತಪ್ಪು ಎಂದು ಕೆಲವರು ಹೇಳಿದಾಗ ಬೇಜಾರಾಯಿತೇ ಹೊರತು ಒಬ್ಬರಲ್ಲದೇ ಇನ್ನೂ ಎಲ್ಲರೂ ಬಂದಿದ್ದರು ನನಗೆ ಬೇಸರವಾಗುತ್ತಿರಲಿಲ್ಲ ಎಂದು ದಿವ್ಯಾ ಸುರೇಶ್ ಸ್ಪಷ್ಟಪಡಿಸಿದರು.

    ಒಟ್ಟಾರೆ ಬಾಯ್ಸ್ ಹಾಸ್ಟೆಲ್ ವರ್ಸಸ್ ಗಲ್ಸ್ ಹಾಸ್ಟೆಲ್ ಟಾಸ್ಕ್‍ನಲ್ಲಿ ನಡೆದ ಯಾರೂ ಊಹಿಸಲಾಗದ ಮೋಸವನ್ನು ಕೇಳಿ ಮನೆಮಂದಿಯಲ್ಲಿ ಶಾಕ್ ಆಗುತ್ತಾರೆ.

  • ಶುಭಾ ಸ್ಕಿಪಿಂಗ್ ಆಡಿದ್ದೇಗೆ ಗೊತ್ತಾ?

    ಶುಭಾ ಸ್ಕಿಪಿಂಗ್ ಆಡಿದ್ದೇಗೆ ಗೊತ್ತಾ?

    ವಾರ ಹಲವು ಟಾಸ್ಕ್‌ಗಳಲ್ಲಿ  ಬಿಗ್‍ಬಾಸ್ ಮನೆಯ ಸದಸ್ಯರಿಗೆ ಸ್ಕಿಪಿಂಗ್ ಟಾಸ್ಕ್ ಕೂಡ ನೀಡಿದ್ದರು. ಎಲ್ಲರೂ ಗಾರ್ಡನ್ ಏರಿಯದಲ್ಲಿ ಸ್ಕಿಪಿಂಗ್ ಟಾಸ್ಕ್ ಆಡಿದರೆ ಶುಭಾ ಮಾತ್ರ ಡಿಫರೆಂಟ್ ಆಗಿ ಸ್ಟೋರ್ ರೂಮ್‍ನಲ್ಲಿ ಸ್ಕಿಪಿಂಗ್ ಆಡಿದ್ದಾರೆ.

    ನಿನ್ನೆ ಎಲ್ಲರೂ ಒಟ್ಟಾಗಿ ಕುಳಿತು ಡೈನಿಂಗ್ ಹಾಲ್‍ನಲ್ಲಿ ಊಟ ಮಾಡುವಾಗ ಶುಭಾ ನಾನು ಜಾಸ್ತಿ ತಿನ್ನುವುದಿಲ್ಲ. ಸ್ಕಿಪಿಂಗ್ ಮಾಡುತ್ತಾ ಜಂಪ್ ಮಾಡಬೇಕು ಅಂತಾ ಮಂಜುಗೆ ಹೇಳುತ್ತಾರೆ. ಆಗ ಮಂಜು ಕ್ಯಾಮೆರಾ ಮುಂದೆ ಹೋಗಿ ಬಿಗ್‍ಬಾಸ್, ಶುಭಾ ಪೂಂಜಾರವರು ಸ್ಕಿಪಿಂಗ್ ಟಾಸ್ಕ್ ಆಡುತ್ತಾರಂತೆ ಹಾಗಾಗಿ ಒಂದು ಅರ್ಧ ಗಂಟೆ ರೆಸ್ಟ್ ಬೇಕು. ಮಾತನಾಡದೇ ಎನರ್ಜಿಯನ್ನು ಸ್ಟೋರ್ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಎನರ್ಜಿ ಸ್ಟೋರ್ ಆಗಬೇಕೆಂದರೆ ನೀವು ಸ್ಟೋರ್ ರೂಮಿಗೆ ಹಾಕಿಕೊಳ್ಳಿ. ಇಷ್ಟು ಹೇಳಿ ನನ್ನ ಎರಡು ಮಾತು ಮುಗಿಸುತ್ತಿದ್ದೇನೆ ಎನ್ನುತ್ತಾರೆ.

    ಈ ವೇಳೆ ಶುಭ ಸೋಲೋ ಟಾಸ್ಕ್ ನೀಡುವಂತೆ ಕೇಳಿ ಎಂದು ಹೇಳಿದಾಗ, ಮಂಜು ಜೋರಾಗಿ ಮಾತನಾಡಬೇಡ ಎನರ್ಜಿ ಹೋಗುತ್ತದೆ ಎಂದು ಹೇಳುತ್ತಿದ್ದಂತೆ ಬಿಗ್‍ಬಾಸ್ ಬೆಲ್ ಹೊಡೆಯುತ್ತಾ ಸ್ಟೋರ್ ರೂಮ್ ಬಾಗಿಲು ಓಪನ್ ಮಾಡುತ್ತಾರೆ.

    ನಂತರ ಸ್ಟೋರ್ ರೂಮಿಗೆ ಹೋಗಿ ಶುಭ ಬಿಗ್‍ಬಾಸ್ ಇದು ನನ್ನ ಲೆಟರ್ ಗಾಗಿ ಸೋಲೋ ಟಾಸ್ಕ್. ರೋಲ್ ಕ್ಯಾಮೆರಾ ಎಂದು ಸ್ಕಿಪಿಂಗ್ ಆಡುತ್ತಾರೆ. ಈ ವೇಳೆ ರಾಜೀವ್ ಹಾಗೂ ಮಂಜು ಶುಭ ದುಪ್ಪಟ್ಟಾ ಹಿಡಿದು ಸ್ಕಿಪಿಂಗ್ ಆಡಲು ಸಹಾಯ ಮಾಡುತ್ತಾರೆ.

    ಸ್ಕಿಪಿಂಗ್ ಆಡುವಾಗ ಮೊದಲೇ ಶುಭಾ ಎಡವುತ್ತಾರೆ. ಆಗ ರಾಜೀವ್ ಮೂರು ಜನ ಆಡಿಸಿದರು ಶುಭಾ ಒಂದೇ ರೌಂಡ್ ಆಡುತ್ತಾರೆ ಎಂದು ರೇಗಿಸುತ್ತಾರೆ.

  • ಅರವಿಂದ್ ಕಾಲಿಗೆ ಕ್ರೀಮ್ ಹಚ್ಚಿದ ದಿವ್ಯಾ ಉರುಡುಗ!

    ಅರವಿಂದ್ ಕಾಲಿಗೆ ಕ್ರೀಮ್ ಹಚ್ಚಿದ ದಿವ್ಯಾ ಉರುಡುಗ!

    ಬಿಗ್‍ಬಾಸ್ ಮನೆಯಲ್ಲಿ ಈ ವಾರದ ಕ್ಯಾಪ್ಟನ್ಸಿ ಟಾಸ್ಕ್‌ಗೆ  ದಿವ್ಯಾ ಸುರೇಶ್, ಅರವಿಂದ್ ಹಾಗೂ ನಿಧಿ ಸುಬ್ಬಯ್ಯ ಆಯ್ಕೆಯಾಗಿದ್ದರು. ಅದರಂತೆ ಬಿಗ್‍ಬಾಸ್ ನಿನ್ನೆ ಹಗ್ಗದ ಸಹಾಯದಿಂದ ಬಕೆಟ್‍ನನ್ನು ಹಿಡಿದುಕೊಳ್ಳಬೇಕು. ಈ ಟಾಸ್ಕ್‌ನಲ್ಲಿ ಯಾರು ಹೆಚ್ಚು ಸಮಯ ಬಕೆಟ್‍ನನ್ನು ಹಿಡಿದುಕೊಂಡಿರುತ್ತಾರೋ ಅವರು ಈ ವಾರದ ಕ್ಯಾಪ್ಟನ್ ಆಗುತ್ತಾರೆ ಎಂದು ಸೂಚಿಸಿರುತ್ತಾರೆ.

    ಅದರ ಅನುಸಾರ ಟಾಸ್ಕ್ ವೇಳೆ ಮೊದಲು ನಿಧಿ ಸುಬ್ಬಯ್ಯ ಬಕೆಟ್‍ನನ್ನು ಬಿಟ್ಟು ಔಟ್ ಆಗುತ್ತಾರೆ. ನಂತರ ಅರವಿಂದ್ ಹಾಗೂ ದಿವ್ಯಾ ಸುರೇಶ್ ಟಾಸ್ಕ್ ಮುಂದುವರಿಸುತ್ತಾರೆ. ಈ ವೇಳೆ ಸೊಳ್ಳೆಗಳಿಂದ ದಿವ್ಯಾ ಸುರೇಶ್ ಹಾಗೂ ಅರವಿಂದ್‍ಗೆ ಕಿರಿಕಿರಿ ಆಗುತ್ತಿರುತ್ತದೆ. ಅದನ್ನು ಕಂಡು ದಿವ್ಯಾ ಉರುಡುಗ ಕ್ರೀಮ್ ತಂದು ದಿವ್ಯಾ ಸುರೇಶ್‍ಗೆ ಹಚ್ಚಲಾ ಎಂದು ಕೇಳುತ್ತಾರೆ. ಆಗ ದಿವ್ಯಾ ಸುರೇಶ್ ಬೇಡ ಎನ್ನುತ್ತಾರೆ. ಬಳಿಕ ಅರವಿಂದ್ ರವರಿಗೆ ಹಚ್ಚಲಾ ಎಂದಾಗ ಅರವಿಂದ್ ಹೌದು ಎಂದಾಗ ದಿವ್ಯಾ ಉರುಡುಗ ಅರವಿಂದ್ ಕಾಲಿಗೆ ಕ್ರೀಮ್‍ನನ್ನು ಹಚ್ಚುತ್ತಾರೆ.

    ಇದನ್ನು ಕಂಡು ದಿವ್ಯಾ ಸುರೇಶ್ ನೈಸ್ ಕಮೆಂಟ್ ಹಾಕುತ್ತಾ ಜೋರಾಗಿ ನಗುತ್ತಾರೆ. ಆಗ ಮನೆ ಮಂದಿ ಕೂಡ ದಿವ್ಯಾ ಅರವಿಂದ್ ನೋಡಿ ನಗುತ್ತಾರೆ. ಈ ವೇಳೆ ದಿವ್ಯಾ ಸುರೇಶ್ ಆದಾದ ನಂತರ ನನನಗೆ ಲಿಪ್‍ಸ್ಟಿಕ್ ಹಾಕುತ್ತಿಯಾ ಎಂದು ಕೇಳುತ್ತಾರೆ. ಖಂಡಿತ ಹಚ್ಚುತ್ತೇನೆ ಎಂದು ಟಾಸ್ಕ್ ಮಧ್ಯೆ ಲಿಪ್ ಸ್ಟಿಕ್ ಹಚ್ಚುತ್ತಾರೆ. ಆಗ ಮನೆ ಮಂದಿಯೆಲ್ಲಾ ಓ… ಎಂದು ಜೋರಾಗಿ ಕಿರುಚುತ್ತಾ ನಗುತ್ತಾರೆ.

  • ಮನೆಯವರ ಪತ್ರ ಓದಿ ಕಣ್ಣೀರಿಟ್ಟ ದಿವ್ಯಾ ಸುರೇಶ್!

    ಮನೆಯವರ ಪತ್ರ ಓದಿ ಕಣ್ಣೀರಿಟ್ಟ ದಿವ್ಯಾ ಸುರೇಶ್!

    ಹಾಸ್ಟೆಲ್‍ನಲ್ಲಿದ್ದಾಗ ಎಲ್ಲರೂ ಮನೆಯವರ ಸಂಪರ್ಕಕ್ಕೆ ಚಡಪಡಿಸುತ್ತಾರೆ. ಅಂದಹಾಗೇ ಇದೀಗ ಬಿಗ್ ಬಾಸ್ ಮನೆಯಲ್ಲಿ ಕೂಡ ಹಾಸ್ಟೆಲ್ ಸದಸ್ಯರ ಮನೆಯವರು ಪತ್ರಗಳನ್ನು ಕಳುಹಿಸಿದ್ದಾರೆ. ಆದರೆ ಸದಸ್ಯರು ತಮಗೆ ಬಂದಿರುವ ಪತ್ರಗಳನ್ನು ಓದಲು ಬಿಗ್‍ಬಾಸ್ ನೀಡುವ ಟಾಸ್ಕ್‌ನಲ್ಲಿ ಗೆಲ್ಲಬೇಕು. ಆಗ ಮಾತ್ರ ಗೆಲ್ಲುವ ಸದಸ್ಯರಿಗೆ ಮಾತ್ರ ಪತ್ರ ಓದುವ ಅವಕಾಶ ಸಿಗುತ್ತದೆ ಎಂದು ಸೂಚಿಸಿದ್ದರು.

    ಅದರಂತೆ ಬಿಗ್‍ಬಾಸ್ ನಿನ್ನೆ ಗೋಲಿ ಚಮಚ ಟಾಸ್ಕ್ ನೀಡಿದ್ದರು. ಇದರಲ್ಲಿ ಶಮಂತ್ ಹಾಗೂ ದಿವ್ಯಾ ಸುರೇಶ್ ಭಾಗವಹಿಸಿದ್ದರು. ಕೊನೆಯಲ್ಲಿ ಈ ಟಾಸ್ಕ್‍ನಲ್ಲಿ ದಿವ್ಯಾ ಸುರೇಶ್ ಗೆದ್ದು ಪತ್ರವನ್ನು ಪಡೆಯುತ್ತಾರೆ. ನಂತರ ಗಾರ್ಡನ್ ಏರಿಯಾದಲ್ಲಿ ಏಕಾಂಗಿಯಾಗಿ ಕುಳಿತು ಪತ್ರ ಓದಿದ ದಿವ್ಯಾ ಸುರೇಶ್, ಮನೆಯವರನ್ನು ನೆನೆದು ಬಿಕ್ಕಿ-ಬಿಕ್ಕಿ ಅತ್ತಿದ್ದಾರೆ. ಬಳಿಕ ಬೆಡ್ ರೂ ಏರಿಯಾಗೆ ಹೋಗಿ ಪತ್ರವನ್ನು ಮತ್ತೊಮ್ಮೆ ಓದಿ ಅಳುತ್ತಾ ಕೊನೆಯಲ್ಲಿ ಲೆಟರ್ ಕಳುಹಿಸಿ ಕೊಟ್ಟಿದ್ದಕ್ಕೆ ಬಿಗ್‍ಬಾಸ್‍ಗೆ ಧನ್ಯವಾದ ತಿಳಿಸಿದರು.

    ಇದಾದ ನಂತರ ಕಿಚನ್ ಏರಿಯಾ ಬಳಿ ದಿವ್ಯಾ ಸುರೇಶ್ ಹೋದಾಗ ಮನೆಯವರು ಏನಂತಾ ಹೇಳಿದ್ದಾರೆ ಎಂದು ರಘು, ದಿವ್ಯಾ ಉರುಡುಗ, ಶುಭ ಕೇಳಿದಾಗ, ನಮ್ಮ ಮನೆಯವರು ತುಂಬಾ ಖುಷಿಪಟ್ಟಿದ್ದಾರೆ. ನಿನ್ನನ್ನು ಫಿನಾಲೆಯಲ್ಲಿ ನೋಡಲು ಬರುತ್ತೇವೆ ಎಂದಿದ್ದಾರೆ. ಅಲ್ಲದೆ ನಮ್ಮ ಅಮ್ಮ ಡೂಡೂ ಬಗ್ಗೆ ನೀನು ಯೋಚಿಸಬೇಡ. ನೀನು ಎಷ್ಟು ಸ್ಟ್ರಾಂಗ್ ಅಂತ ನಿನಗೆ ಗೊತ್ತು ಯಾಕೆ ಅಳುತ್ತೀಯಾ, ಅಳಬೇಡ. ಗ್ರೂಪ್ ಟಾಸ್ಕ್ ಇದ್ದಾಗ ನೀನು ಯಾವ ಟೀಂನಲ್ಲಿ ಇರುತ್ತೀಯಾ ಆ ಟೀಂನಲ್ಲಿ ತುಂಬಾ ಹೋಪ್ಸ್ ಇರುತ್ತದೆ. ಅದನ್ನು ನೀನು ಹಾಗೆಯೇ ನಿಭಾಯಿಸಿಕೊಂಡು ಹೋಗು. ಚೆನ್ನಾಗಿ ಆಡುತ್ತೀಯಾ ಚೆನ್ನಾಗಿ ಆಡಿಕೊಂಡು ಹೋಗು ಎಂದಿದ್ದಾರೆ.

    ಮನೆಯಲ್ಲಿ ಚಿಕನ್ ಮಾಡಿದಾಗ ಮಿಥುನ್ ದಿವ್ಯಾ ಮಾಡಿದಂತೆ ನೀನು ಮಾಡುವುದೇ ಇಲ್ಲ ಎಂದು ಬೈಯ್ಯುತ್ತಿರುತ್ತಾನೆ. ಚಿಕನ್ ಮಾಡಿದಾಗಲೆಲ್ಲಾ ನಿನ್ನನ್ನು ಜ್ಞಾಪಿಸಿಕೊಳ್ಳುತ್ತಿರುತ್ತೇವೆ. ನೀನು ಮಲ್ಲಿಗೆ ಹೂ ಮುಡಿದುಕೊಂಡಿದ್ದಾಗ ಎಲ್ಲರೂ ತುಂಬಾ ಜಾಸ್ತಿ ನಕ್ಕಿದ್ದೇವೆ. ವೀಕೆಂಡ್‍ನಲ್ಲಿ ನೀನು ಕಲ್ರ್ಸ್ ಮಾಡುತ್ತೀಯಾಲ್ಲ ಯಾವಾಗಲೂ ಕಲ್ರ್ಸ್ ಮಾಡು ತುಂಬಾ ಮುದ್ದಾಗಿ ಕಾಣಿಸುತ್ತೀಯಾ. ಜೊತೆಗೆ ಸಾರಿಯಲ್ಲಿ ನೀನು ತುಂಬಾನೇ ಚೆನ್ನಾಗಿ ಕಾಣಿಸುತ್ತೀಯಾ ಹಾಗಾಗಿ ಸಾರಿ ಹಾಕು ಎಂದು ಬರೆದಿದ್ದಾರೆ ಎನ್ನುತ್ತಾ ಸಂತಸ ವ್ಯಕ್ತಪಡಿಸಿದರು.

  • ರಾಜೀವ್-ವಿಶ್ವ ಕುಸ್ತಿಗೆ ಕಾಮೆಂಟ್ರಿ ಕೊಟ್ಟ ಮಂಜು!

    ರಾಜೀವ್-ವಿಶ್ವ ಕುಸ್ತಿಗೆ ಕಾಮೆಂಟ್ರಿ ಕೊಟ್ಟ ಮಂಜು!

    ದೊಡ್ಮನೆಯ ಸದಸ್ಯರು ನಿನ್ನೆ ಯುಗಾದಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಕನ್ನಡಿಗರು ಹೊಸ ವರುಷವೆಂದೇ ಭಾವಿಸುವ ಯುಗಾದಿ ಹಬ್ಬ ಬಹಳ ಶ್ರೇಷ್ಠವಾದದ್ದು. ಸಾಮಾನ್ಯವಾಗಿ ಯುಗಾದಿಯಂದು ಎಣ್ಣೆ ಸ್ನಾನ ಮಾಡುವ ವಾಡಿಕೆ ಹಿಂದಿನಕಾಲದಿಂದಲೂ ಇದೆ. ಸದ್ಯ ನಿನ್ನೆ ಮನೆಯ ಪರುಷ ಸದಸ್ಯರು ಮೈಗೆ ಎಣ್ಣೆ ಹಚ್ಚಿಕೊಂಡು ಬಿಸಿಲು ಕಾಯಿಸಿದ್ದಾರೆ.

    ಈ ವೇಳೆ ಮಜಾ ಎನಾಪ್ಪಾ ಅಂದರೆ ಸಿಕ್ಸ್ ಪ್ಯಾಕ್ ಹೊಂದಿರುವ ರಾಜೀವ್ ಸಿಂಗರ್ ವಿಶ್ವ ಜೊತೆ ಕುಸ್ತಿ ಆಡಿದ್ದಾರೆ. ಈ ವೇಳೆ ಇದನ್ನು ಕಂಡು ಮಂಜು ಒಳ್ಳೆಯ ಕಾಂಪಿಟೇಟರ್ ನನ್ನು ಸೆಲೆಕ್ಟ್ ಮಡಿಕೊಂಡಿದ್ದೀಯಾ ಶಿಷ್ಯ, ರಿಟೈಡ್ ಆದ ಮೇಲೆ ಇನ್ನೂ ಮಕ್ಕಳು ಮರಿಗೆ ಹೇಳಿಕೊಡಬೇಕು. ನೀನು ಯಾಕಂದ್ರೆ ದೊಡ್ಡವರು ಯಾರು ಬರುತ್ತಾರೆ.

    ಸಣ್ಣ ಸಣ್ಣ ಮಕ್ಕಳು ಪುಟಾಣಿ ಬೇಬಿ ಸಿಟ್ಟಿಂಗ್ ಮಕ್ಕಳಿಗೆ ನಾನು ಕರೆದೆ, ಆ ಮಕ್ಕಳು ಈ ದೇಹ ನೋಡಿದ ತಕ್ಷಣ ವಾವ್ ಅಂತ ಹೇಳುತ್ತಾರೆ. ನೀನು ಅವರ ಜೊತೆಯಲ್ಲಿಯೇ ಖುಷಿಯಾಗಿ ಆಡಿಕೊಂಡು, ಖುಷಿಪಡಿಸಿಕೊಂಡು ಇರಬೇಕು ಅಷ್ಟೇ ಎಂದು ಕಾಮೆಂಟ್ರಿ ಕೊಡುತ್ತಾರೆ.

    ಕಿಡ್ಸ್ ಕೇರ್ ಓಪನ್ ಮಾಡಿ ಮಕ್ಕಳಿಗೆ ಕುಸ್ತಿ ಕಲಿಸು ಅಷ್ಟೇ. ನಿನ್ನ ಸರಿ ಸಮಾನವಾಗಿ ಆಡಲು ಯಾರ ಕೈನಲ್ಲಿಯೂ ಸಾಧ್ಯವಾಗುವುದಿಲ್ಲ. ಕೈ ನಡುಗುತ್ತದೆ, ತೊಡೆ ಅಲ್ಲಾಡುತ್ತದೆ. ಮುಗೀತು ಕಥೆ ಕ್ರಿಕೆಟ್ ಕೋಚ್, ಗರಡಿ ಕೋಚ್, ಮಸಾಜ್ ಸೆಂಟರ್ ಕಾಲು ನೋವು ಕೈ ನೋವು, ಕೀಲು ನೋವು, ಮಂಡಿ ನೋವು ಅಷ್ಟೇ ಎಂದು ಅಣುಕಿಸುತ್ತಾರೆ.

    ಮಂಜು ಕಾಂಮೆಂಟ್ರಿ ಕೇಳಿ ಮನೆ ಮಂದಿ ಫುಲ್ ನಗುತ್ತಾ ಸಖತ್ ಎಂಜಾಯ್ ಮಾಡಿದ್ದಾರೆ.

  • ದಿವ್ಯಾಗೆ ಅರವಿಂದ್ ಬರೆದ  ಲೆಟರ್‌ಗಳಲ್ಲೇನಿದೆ ಗೊತ್ತಾ?

    ದಿವ್ಯಾಗೆ ಅರವಿಂದ್ ಬರೆದ ಲೆಟರ್‌ಗಳಲ್ಲೇನಿದೆ ಗೊತ್ತಾ?

    ಬಿಗ್‍ಬಾಸ್ ಬಾಯ್ಸ್ ಹಾಸ್ಟೆಲ್‍ನ ಹುಡುಗರು, ಗರ್ಲ್ ಹಾಸ್ಟೆಲ್ ಹುಡುಗಿಯರಿಗೆ ಪತ್ರಗಳನ್ನು ಬರೆದು ನೀಡಬೇಕು ಹಾಗೂ ಹುಡುಗಿಯರು ಅದನ್ನು ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಟಾಸ್ಕ್ ನೀಡಿದ್ದರು. ಅದರಂತೆ ಬಿಗ್‍ಬಾಸ್ ಮನೆಯ ಎಲ್ಲ ಬಾಯ್ಸ್ ಕದ್ದುಮುಚ್ಚಿ ಹುಡುಗಿಯರಿಗೆಲ್ಲಾ ಲೆಟರ್ ಪಾಸ್ ಮಾಡುತ್ತಿದ್ದಾರೆ. ಆದರೆ ಈ ಎಲ್ಲದರ ಮಧ್ಯೆ ವಿಶೇಷವೆನಪ್ಪಾ ಅಂದರೆ ಅರವಿಂದ್ ದಿವ್ಯಾ ಉರುಡುಗಗೆ ಮಾತ್ರ ತಮ್ಮ ಎಲ್ಲ ಲೆಟರ್‌ಗಳನ್ನು ಬರೆದಿದ್ದಾರೆ.

    ನಿನ್ನೆ ಅರವಿಂದ್ ಲೆಟರ್ ಬರೆದು, ರಂಗೋಲಿ ಹಾಕುತ್ತಿದ್ದ ದಿವ್ಯಾ ಉರುಡುಗಗೆ ನೀಡುತ್ತಾರೆ. ಬಳಿಕ ಅದನ್ನು ಕ್ಯಾಮೆರಾ ಮುಂದೆ ದಿವ್ಯಾ, ಪ್ರೀತಿಯ ಕೆ, ಮೊದಲನೇ ದಿನ ನನ್ನ ನಿನ್ನ ಚಿಕ್ಕ ಇಂಟ್ರೋಡಕ್ಷನ್‍ನಲ್ಲಿ ನೀನು ಏನೋ ಹೇಳಲು ಬಂದು, ಹೇಳದೇ ಹೋದ ರೀತಿ, ಈಗ ನಾವು ಇರುವ ಕ್ಲೋಸ್‍ನೆಸ್ ಗೆ ತುಂಬಾನೇ ವ್ಯತ್ಯಾಸ ಇದೆ. ಈ ಮನೆಯಲ್ಲಿ ನನ್ನ ಮೊದಲನೆಯ ಸಪೋರ್ಟರ್, ಶುಭ ಹಾರೈಸುವ ಒಳ್ಳೆಯ ಗೆಳತಿ ನೀನು ಪ್ರೀತಿ ಇರಲಿ ಅರವಿಂದ್ ಕೆಪಿ ಎಂದು ಮೊದಲನೇ ಲೆಟರ್ ಓದುತ್ತಾರೆ.

    ಬಳಿಕ ಮತ್ತೊಂದು ಲೆಟರ್‌ನಲ್ಲಿ ಪ್ರೀತಿಯ ಕೆ, ಈ ಬಿಗ್‍ಬಾಸ್ ಮನೆಯ ಪಯಣ ನಿನ್ನ ಗೆಳೆತನದಿಂದ ಇನ್ನಷ್ಟು ಮಜಾ ಹಾಗೂ ಸಂತೋಷಕರವಾಗಿದೆ. ನಿನ್ನ ಪ್ರೆಸೆನ್ಸ್ ಇರುವುದರಿಂದ  ಟಾಸ್ಕ್‌ಗಳಲ್ಲಿ, ದೈನಂದಿನ ಚಟುವಟಿಕೆಗಳಲ್ಲಿ ಲವಲವಿಕೆಯಿಂದ ಸಾಗುತ್ತಿದೆ. ನಿನ್ನ ಎಲ್ಲ ವಿಚಾರಗಳು ನನಗೆ ಇಷ್ಟ, ನೀನು ನಗುವಾಗ ತುಂಬಾನೇ ಇಷ್ಟ. ಪ್ರೀತಿ ಇರಲಿ ಅರವಿಂದ್ ಕೆ.ಪಿ. ಎಂದು ಬರೆದಿದ್ದಾರೆ. ಇದನ್ನು ಓದಿದ ದಿವ್ಯಾ ಸೋ ಕ್ಯೂಟ್ ಎಂದು ಪ್ರತಿಕ್ರಿಯಿಸುತ್ತಾರೆ.

    ಇದಾದ ನಂತರ ಗಾರ್ಡನ್ ಏರಿಯಾ ಕ್ಯಾಮೆರಾ ಬಳಿ ದಿವ್ಯಾ ಅರವಿಂದ್ ಬರೆದ ಇನ್ನೊಂದು ಲೆಟರ್ ಓದುತ್ತಾರೆ. ಪ್ರೀತಿಯ ಕೆ ನನ್ನ ಲೋವೆಸ್ಟ್ ಪಾಯಿಂಟ್‍ನಲ್ಲಿ ನನ್ನೊಂದಿಗೆ ನಿಂತು ನಡೆಸುವ ಸಪೋರ್ಟ್ ತುಂಬಾನೇ ಶ್ರೇಷ್ಠವಾದದ್ದು, ಬೇರೆ ಯಾವ ಸಂದರ್ಭದಲ್ಲಿಯೂ ಅಷ್ಟು ಬೇಜಾರು ಮಾಡಿಕೊಂಡಿಲ್ಲ. ನನ್ನ ಫ್ರೆಂಡ್ಸ್ ನನ್ನ ನಿರ್ಣಯವನ್ನು ತಪ್ಪು ಎಂದು ಭಾವಿಸಿದ್ದರು. ಆಗ ನನಗೆ ನೀನು, ನಿನಗೆ ನಾನು ಸಮಾಧಾನ ಹೇಳಿಕೊಂಡು ಕಳೆದಿರುವ ದಿನಗಳನ್ನು ಮರೆಯಲು ಸಾಧ್ಯವಿಲ್ಲ. ಪ್ರೀತಿ ಇರಲಿ ಅರವಿಂದ್ ಕೆ.ಪಿ ಎಂದು ಓದುತ್ತಾರೆ. ಈ ವೇಳೆ ದಿವ್ಯಾ ಪತ್ರ ಓದುವಾಗ ಮನೆಯ ಇತರ ಸದಸ್ಯರು ಸಹಾಯ ಮಾಡುವ ಮೂಲಕ ಸಾಥ್ ನೀಡಿದ್ದಾರೆ.

    ಮಧ್ಯರಾತ್ರಿ ಲಿವಿಂಗ್ ಏರಿಯಾದಲ್ಲಿ ಕ್ಯಾಮೆರಾ ಮುಂದೆ ಅರವಿಂದ್ ಲೆಟರ್ ಬರೆದುಕೊಡುತ್ತಾರೆ. ಈ ವೇಳೆ ದಿವ್ಯಾ, ಪ್ರೀತಿಯ ಕೆ ನೀನು ನಗುತ್ತೀಯಾ ಹೃದಯದಿಂದ ನನಗೆ ಕೇಳುತ್ತದೆ. ಬಹಳ ದೂರದಿಂದ ನಿನ್ನ ಕಣ್ಣುಗಳು ಹೇಳುತ್ತಿದೆ ಮಾತೊಂದ.. ಬೇಗ ಓದು ಗಾರ್ಡನ್ ಏರಿಯಾಗೆ ವಾರ್ಡನ್ ಬರುವ ಮುನ್ನ. ಪ್ರೀತಿ ಇರಲಿ ಅರವಿಂದ್ ಕೆ ಪಿ ಎಂದು ಹಾಸ್ಯವಾಗಿರುವ ಲೆಟರ್ ಓದಿ ಜೋರಾಗಿ ನಗುತ್ತಾರೆ.

    ಒಟ್ಟಾರೆ ಅರವಿಂದ್ ದಿವ್ಯಾಗೆ ಬರೆದಿರುವ ಇಂಟ್ರೆಸ್ಟಿಂಗ್ ಲೆಟರ್‌ನಲ್ಲಿ ಅವರಿಬ್ಬರ ಇರುವ ಪ್ರೀತಿ ಭಾವನೆಗಳು ಎದ್ದು ಕಾಣಿಸುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು.