Tag: ಪಬ್ಲಿಕ್ ಟಿವಿ Big Boss

  • ಬಿಗ್‍ಬಾಸ್ ಮನೆಯಲ್ಲಿ ಶೈನ್ ಆಗುತ್ತಿರುವ ಶಮಂತ್!

    ಬಿಗ್‍ಬಾಸ್ ಮನೆಯಲ್ಲಿ ಶೈನ್ ಆಗುತ್ತಿರುವ ಶಮಂತ್!

    ಬಿಗ್‍ಬಾಸ್ ಕಾರ್ಯಕ್ರಮಕ್ಕೆ ಬಂದ ಎಲ್ಲ ಸದಸ್ಯರು ಒಂದೊಂದು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಈ ಎಲ್ಲರ ಮಧ್ಯೆ ಡಿಫರೆಂಟ್ ಆಗಿ ‘ಬಾ ಗುರು’ ಡೈಲಾಗ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಫೇಮಸ್ ಆಗಿದ್ದ ಶಮಂತ್ ಕೂಡ ಒಬ್ಬರು.

    ಹಲವಾರು ಪ್ರತಿಭೆ ಹೊಂದಿರುವ ‘ಬ್ರೋ ಗೌಡ’ ಶಮಂತ್ ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಟ್ಟಾಗಲಿಂದಲೂ ಆದ್ಯಾಕೋ ಸೈಲೆಂಟ್ ಆಗಿದ್ದರು. ಹೀಗಾಗಿ ಮನೆಯ ಎಲ್ಲ ಸ್ಪರ್ಧಿಗಳು ಶಮಂತ್ ಮಾತನಾಡುವುದಿಲ್ಲ, ಸೈಲೆಂಟ್, ಬೆರೆಯುವುದು ಕಡಿಮೆ ಹೀಗೆ ಹಲವಾರು ರೀಸನ್ ಹೇಳುತ್ತಿದ್ದರು. ಆದ್ರೆ ಇದೀಗ ಮನೆಯ ಎಲ್ಲಾ ಸದಸ್ಯರ ಆರೋಪಗಳಿಗೆ ಸೆಡ್ಡು ಹೊಡೆಯುವಂತೆ ಶಮಂತ್ ಈ ವಾರ ಬಿಗ್‍ಬಾಸ್ ಮನೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

    ಯೆಸ್, ಇಷ್ಟು ದಿನ ಸೈಲೆಂಟ್ ಆಗಿದ್ದ ಶಮಂತ್ ಇದೀಗ ರೊಚ್ಚಿಗೆದ್ದು ನಾನು ಯಾರಿಗೂ ಕಡಿಮೆ ಇಲ್ಲ ಎಂಬುವಂತೆ ಎಂರ್ಟಟೈನ್ ಮೆಂಟ್ ನೀಡಲು ಸ್ಟಾರ್ಟ್ ಮಾಡಿದ್ದಾರೆ. ನಿನ್ನೆ ಶಮಂತ್ ಬೆಡ್ ರೂಮ್ ಏರಿಯಾದಲ್ಲಿ ಮನೆಯ ಕೆಲವು ಮಂದಿ ಹೇಗೆ ನಡೆಯುತ್ತಾರೆ ಎಂಬುವುದನ್ನು ಅಭಿನಯ ಮಾಡಿ ತೋರಿಸಿದ್ದಾರೆ.

    ಮೊದಲಿಗೆ ವೈಷ್ಣವಿ ನಡಿಗೆ ತೋರಿಸಿದ ಶಮಂತ್, ಬಳಿಕ ನಿಧಿ ಕೈ ಕಟ್ಟಿ ನಡೆದುಕೊಂಡು ಹೋಗುವಂತೆ ನಡೆಯುತ್ತಾರೆ. ನಂತರ ಚಕ್ರವರ್ತಿ ಜೇಬಿನಲ್ಲಿ ಕೈ ಹಿಡಿದುಕೊಂಡು ನಡೆದುಕೊಂಡು ಹೋಗುವಂತೆ ಹೋಗುತ್ತಾರೆ. ಇದಾದ ಬಳಿಕ ಅರವಿಂದ್, ಪ್ರಶಾಂತ್ ಸಂಬರ್ಗಿ, ಮಂಜು, ವಿಶ್ವನಾಥ್, ಶುಭ ಪೂಂಜಾ ನಡೆಯುವುದನ್ನು ತೋರಿಸಿದ್ದಾರೆ. ಅಲ್ಲದೇ ಇತ್ತೀಚೆಗೆ ಎಕೋ ವಾಯ್ಸ್‍ನಲ್ಲಿ ಮಾತನಾಡುವ ಮೂಲಕ ಮನೆಯ ಸದಸ್ಯರ ಮನಗೆದ್ದಿದ್ದರು.

    ಒಟ್ಟಾರೆ ಎಲೆಮರಿ ಕಾಯಿಯಂತೆ ಪ್ರತಿಭೆಗಳನ್ನು ತಮ್ಮಳೊಗೆ ಅಡವಿಸಿಕೊಂಡಿದ್ದ ಶಮಂತ್ ಇದೀಗ ಗರಿಗೆದರಿದ ನವಿಲಿನಂತೆ ಮಿಂಚುತ್ತಿದ್ದಾರೆ ಎಂದರೆ ತಪ್ಪಾಗಲಾರದು.

  • ಚಾಕಲೇಟ್ ಮೂಲಕ ‘ಶುಭ’ ಆರಂಭಿಸಿದ ಜಾತ್ರೆ ಟೀಂ!

    ಚಾಕಲೇಟ್ ಮೂಲಕ ‘ಶುಭ’ ಆರಂಭಿಸಿದ ಜಾತ್ರೆ ಟೀಂ!

    ನಿನ್ನೆ ಬಿಗ್‍ಬಾಸ್, ಮನೆಯ ಸದಸ್ಯರನ್ನು ಎರಡು ತಂಡಗಳಾಗಿ ವಿಭಜಿಸಿ ಇಬ್ಬರನ್ನು ನಾಯಕರಾಗಿ ಸುಚಿಸುವಂತೆ ಕ್ಯಾಪ್ಟನ್ ವಿಶ್ವನಾಥ್‍ಗೆ ಸೂಚಿಸಿದರು. ಅದರಂತೆ ವಿಶ್ವನಾಥ್ ದಿವ್ಯಾ ಉರುಡುಗ ಹಾಗೂ ಶುಭರನ್ನು ನಾಯಕರಾಗಿ ಆಯ್ಕೆ ಮಾಡಿದರು.

    ನಂತರ ದಿವ್ಯಾ ಉರುಡುಗ ತನ್ನ ತಂಡಕ್ಕೆ ಅರವಿಂದ್, ರಾಜೀವ್, ದಿವ್ಯಾ ಸುರೇಶ್, ಶಮಂತ್, ಶಂಕರ್‍ರನ್ನು ಆಯ್ಕೆ ಮಾಡಿಕೊಂಡು ತಂಡಕ್ಕೆ ‘ಅನುಬಂಧ’ ಎಂದು ಹೆಸರಿಟ್ಟರೆ, ಶುಭ ಪೂಂಜಾ, ಮಂಜು, ನಿಧಿ, ಪ್ರಶಾಂತ್, ವೈಷ್ಣವಿ, ರಘುರನ್ನು ಸೇರಿಸಿಕೊಂಡು ತಂಡಕ್ಕೆ ‘ಜಾತ್ರೆ’ ಎಂದು ಹೆಸರಿಡುತ್ತಾರೆ.

    ಬಳಿಕ ಎರಡು ತಂಡಕ್ಕೆ ಬಿಗ್‍ಬಾಸ್, ಗುಂಪು ಚಟುವಟಿಕೆಯನ್ನು ನೀಡುತ್ತಾರೆ. ಗಾರ್ಡನ್ ಏರಿಯದಲ್ಲಿ ಬಲೂನ್‍ಗಳನ್ನು ಇರಿಸಲಾಗಿದ್ದು, ಸದಸ್ಯರು ಬಲೂನ್‍ಗಳ ಮೇಲೆ ಕುಳಿತು ಹೊಡೆದು ಹಾಕಬೇಕು. ಆಗ ಬಲೂನ್‍ನಲ್ಲಿದ್ದ ಬೆಳ್ಳಿ ಹಾಗೂ ಚಿನ್ನದ ಚೀಟಿಗಳನ್ನು ಯಾವ ತಂಡ ಹೆಚ್ಚಾಗಿ ಸಂಗ್ರಹಿಸಿರುತ್ತಾರೋ ಅವರು ವಿಜೇತರಾಗಿರುತ್ತಾರೆ ಹಾಗೂ ಗೆದ್ದ ತಂಡಕ್ಕೆ ಬಹುಮಾನವಾಗಿ ಚಾಕಲೇಟ್ ನೀಡುವುದಾಗಿ ತಿಳಿಸಿರುತ್ತಾರೆ.

    ಅದರಂತೆ ಚಾಕಲೇಟ್ ತಿನ್ನುವ ಆಸೆಯಿಂದ ರೊಚ್ಚಿಗೆದ್ದ ಮನೆಮಂದಿ, ಒಂದು ಬಲೂನ್‍ನನ್ನು ಬಿಡದಂತೆ ಕುಳಿತು ಹೊಡೆದು ಹಾಕಿ ಚಿನ್ನದ ಹಾಗೂ ಬೆಳ್ಳಿಯ ಚೀಟಿಗಳನ್ನು ಸಂಗ್ರಹಿಸುತ್ತಾರೆ. ಈ ಟಾಸ್ಕ್‍ನಲ್ಲಿ ಶುಭ ಪೂಂಜಾರ ಜಾತ್ರೆ ಗ್ಯಾಂಗ್ 29 ಬಂಗಾರದ ಚೀಟಿಗಳನ್ನು ಸಂಗ್ರಹಿಸುವ ಮೂಲಕ ವಿಜೇತರಾಗುತ್ತಾರೆ. ಬಳಿಕ ಬಿಗ್‍ಬಾಸ್ ಜಾತ್ರೆ ತಂಡಕ್ಕೆ ಚಾಕಲೇಟ್ ಕಳುಹಿಸಿಕೊಡುತ್ತಾರೆ.

    ನಂತರ ಜಾತ್ರೆ ತಂಡದವರು ಎದುರಾಳಿ ತಂಡದವರಿಗೆ ಅಣುಕಿಸುತ್ತಾ ಚಾಕಲೇಟ್‍ನನ್ನು ಸವಿದು ಆನಂದಿಸುತ್ತಾರೆ. ಒಟ್ಟಾರೆ ಈ ವಾರದ ಟಾಸ್ಕ್ ಆರಂಭವಾಗುತ್ತಿದ್ದಂತೆಯೇ ಜಾತ್ರೆ ತಂಡ ಸಿಹಿ ತಿನ್ನುವ ಮೂಲಕ ನ್ಯೂ ಗೇಮ್ ಸ್ಟಾರ್ಟ್ ಮಾಡಿದ್ದಾರೆ. ಆದರೆ ಮುಂದೆ ಹೇಗೆ ಆಟ ಆಡುತ್ತಾರೆ ಎಂದು ಕಾದು ನೋಡಬೇಕಾಗಿದೆ.

  • ಊಟದ ಪಾಠ ಕಲಿಸಿದ ಚಂಡೇಶ್ವರ ಟಾಸ್ಕ್!

    ಊಟದ ಪಾಠ ಕಲಿಸಿದ ಚಂಡೇಶ್ವರ ಟಾಸ್ಕ್!

    ಬಿಗ್‍ಬಾಸ್ ಮನೆಯಲ್ಲಿ ಕಳೆದ ವಾರ ನೀಡಿದ್ದ ಚಂಡೇಶ್ವರ ಟಾಸ್ಕ್ ಮನೆ ಮಂದಿಗೆ ಊಟದ ಪ್ರಾಮುಖ್ಯತೆ ಕಲಿಸಿದೆ ಎಂದು ರಾಜೀವ್ ಹೇಳಿದ್ದಾರೆ. ಭಾನುವಾರ ನಡೆದ ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ್ ಸಂಚಿಕೆಯಲ್ಲಿ ಚಂಡೇಶ್ವರ ಟಾಸ್ಕ್ ಬಗ್ಗೆ ಸುದೀಪ್ ರಾಜೀವ್ ಅಭಿಪ್ರಾಯ ಕೇಳುತ್ತಾರೆ.

    ಈ ವೇಳೆ ರಾಜೀವ್ ಅಯ್ಯಪ್ಪಾ.. ಚೆಂಡೇಶ್ವರ ಟಾಸ್ಕ್ ಆರಂಭವಾಗುವ ಮುನ್ನ ಮ್ಯೂಸಿಕ್ ಒಂದು ಬರುತ್ತದೆ. ಅದನ್ನು ಕೇಳಿ ಎಲ್ಲೆ ಇದ್ದರೂ ಮನೆಯ ಸದಸ್ಯರೆಲ್ಲ ಓಡಿ ಬರುತ್ತಾರೆ. ಇಂದೊಂದು ಟಾಸ್ಕ್ ಮನೆಯ ಎಲ್ಲ ಸದಸ್ಯರನ್ನು ಪ್ರತಿ ನಿಮಿಷ ಆಕ್ಟೀವ್ ಆಗಿರಿಸುತ್ತಿತ್ತು. ಈ ಟಾಸ್ಕ್ ಮುಗಿದ ಬಳಿಕ ಎಲ್ಲರೂ ಒಂದು ದೊಡ್ಡ ಸಾಷ್ಟಾಂಗ ನಮಸ್ಕಾರವನ್ನೇ ಮಾಡಿದೆವು ಎಂದು ಹೇಳುತ್ತಾರೆ.

    ನಂತರ ಚೆಂಡೇಶ್ವರ ಟಾಸ್ಕ್ ಎಷ್ಟು ಹಾಸ್ಯಮಯವಾಗಿದೆ ಎನ್ನುವುದಕ್ಕಿಂತ, ಈ ಟಾಸ್ಕ್ ಊಟದ ಬಗೆಗಿನ ಪ್ರಾಮುಖ್ಯತೆ ತಿಳಿಸಿದೆ. ಹೊರಗಡೆ ಯಾರಾದರೂ ಏನಗ ತಿಂತೀಯಾ ಅಂತ ಕೇಳಲು ಇರುತ್ತಿದ್ದರು. ಮನೆಯಲ್ಲಿ ಯಾರೋ ಒಬ್ಬರು ದುಡಿಯುತ್ತಿದ್ದರು, ಎಲ್ಲರೂ ತಿನ್ನುತ್ತಿದ್ದೆವು. ಆದ್ರೆ ಇಲ್ಲಿ ನೀನು ಏನ್ ದುಡಿತೀಯಾ, ನಿನ್ನ ಜೊತೆ ಇರುವವರು ಏನು ದುಡಿಯುತ್ತಾರೆ, ಎಷ್ಟು ದುಡಿಯುತ್ತಾರೆ ಎಂಬುದು ಬಹಳ ಮುಖ್ಯವಾಗಿದೆ. ಜೊತೆಗೆ ಸಿಕ್ಕಿದ್ದನ್ನು ಎಲ್ಲರೂ ಹಂಚಿಕೊಂಡು ತಿನ್ನಬೇಕು ಎಂಬ ಪಾಠ ಕಲಿಸುತ್ತದೆ.

    ನನಗೆ ಊಟದ ಬಗ್ಗೆ ಬಹಳ ವ್ಯಾಲ್ಯೂ ತಿಳಿಸಿದೆ. ಹೀಗಾಗಿ ನಾನು ಮನೆಯಿಂದ ಹೊರಗೆ ಹೋದ ನಂತರ ಏನೇ ಕೊಟ್ಟರು ಬಾಯಿ ಮುಚ್ಚಿಕೊಂಡು ತಿನ್ನಬೇಕು ಎಂಬ ವಿಷಯ ಮನಸ್ಸಿಗೆ ಬಂದಿದೆ ಎಂದು ಹೇಳಿದರು.

    ಒಟ್ಟಾರೆ ಹೊರಗಡೆ ತಾವು ಇಷ್ಟಪಡುವ ಆಹಾರವನ್ನು ಮಾತ್ರ ಸೇವಿಸುತ್ತಿದ್ದ ದೊಡ್ಮನೆ ಸದಸ್ಯರು, ಬಿಗ್‍ಬಾಸ್ ಮನೆಯಲ್ಲಿ ಎಲ್ಲ ರೀತಿಯ ಆಹಾರ ಪದಾರ್ಥ ಮುಖ್ಯ ಎಂಬ ವಿಚಾರವನ್ನು ಕಂಡು ಕೊಂಡಿದ್ದಾರೆ ಎಂದರೆ ತಪ್ಪಾಗಲಾರದು.