Tag: ಪಬ್ಲಿಕ್ ಟಿವಿ Basavaraj Rayareddy

  • ಆಚಾರ್ ಕುಟುಂಬದವರಿಗೆ ನೋವುಂಟುಮಾಡುವ ಉದ್ದೇಶವಿರಲಿಲ್ಲ:  ಬಸವರಾಜ್ ರಾಯರೆಡ್ಡಿ ವಿಷಾದ

    ಆಚಾರ್ ಕುಟುಂಬದವರಿಗೆ ನೋವುಂಟುಮಾಡುವ ಉದ್ದೇಶವಿರಲಿಲ್ಲ: ಬಸವರಾಜ್ ರಾಯರೆಡ್ಡಿ ವಿಷಾದ

    -ಆಚಾರ್ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ ರಾಯರೆಡ್ಡಿ ವಿರುದ್ಧ ತೀವ್ರ ಆಕ್ರೋಶ

    ಕೊಪ್ಪಳ: ಸಚಿವ ಹಾಲಪ್ಪ ಆಚಾರ್ ರವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಹೇಳಿಕೆಗೆ ಎಲ್ಲೆಡೆ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾದ ಹಿನ್ನೆಲೆ, ಕುಟುಂಬದವರಿಗೆ ನಾನು ಯಾವುದೇ ರೀತಿಯ ಮನಸ್ಸಿಗೆ ನೋವು ಉಂಟುಮಾಡುವ ಉದ್ದೇಶವಿರಲಿಲ್ಲ ಎಂದು ಪತ್ರ ಬರೆದು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.

    ಬಸವರಾಜ್ ರಾಯರೆಡ್ಡಿಯವರು, ಹಾಲಪ್ಪ ಆಚಾರ್ ಅವರಿಗೆ ಬರೆದಿರುವ ಪತ್ರದಲ್ಲಿ ವಿಷಾದವನ್ನು ವ್ಯಕ್ತಪಡಿಸಿದ್ದು, ನಾನು ಏನು ಕ್ಷೇತ್ರಕ್ಕೆ ಅಭಿವೃದ್ಧಿಯನ್ನು ಮಾಡಿಲ್ಲವೆನ್ನುವಂತಹ ಪ್ರಶ್ನೆ ಬಂತು. ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ನೀವು ಹಳ್ಳಿಯಲ್ಲಿ ಏನಂತಿರಲ್ಲಾ ಎಂದು ಕೇಳಿದಾಗ, ಸಭೆಯಲ್ಲಿ ಒಬ್ಬ ವ್ಯಕ್ತಿ ಆರು ಹಡೆದವರ ಮುಂದೆ ಮೂರು ಹಡೆದಾಕಿ ಏನು ಹೇಳತಾಳ ಎಂದು ಹೇಳಿದ ನಾನು ಹಡೆಯದೇ ಇರುವವರು ಇರುತ್ತಾರೆ ಎಂದೆ, ಆದರೆ ಈ ಮಾತು ನಿಮ್ಮನ್ನು ಉದ್ದೇಶಿಸಿ ಮಾತನಾಡಿದ್ದಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮತ್ತೊಂದು ಸುತ್ತಿನ ಹೋರಾಟಕ್ಕೆ ಸಜ್ಜಾದ ಪಂಚಮಸಾಲಿ ಸಮುದಾಯ


    ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದಲ್ಲಿ ಬಸವರಾಜ ರಾಯರೆಡ್ಡಿಯವರು,  ಹಾಲಪ್ಪ ಆಚಾರ್ ವೈಯಕ್ತಿಕ ಬದುಕಿನ ಬಗ್ಗೆ ಬಹಿರಂಗವಾಗಿ ಮಾತನಾಡಿದ ‘ಆರು ಹಡೆದಾಕೆ ಮುಂದೆ ಮೂರು ಹಡೆದಾಕೆ ಏನು ಮಾಡುತ್ತಾಳೆ’ ಎಂದು ಮಾತಿನ ಭರದಲ್ಲಿ ಹಾಲಪ್ಪ ಆಚಾರ್ ವೈಯಕ್ತಿಕ ಜೀವನವನ್ನು ಟೀಕಿಸಿದ್ದರು. ಇದು ಪರೋಕ್ಷವಾಗಿ ಹಾಲಪ್ಪ ಆಚಾರ್​ಗೆ ಮಕ್ಕಳು ಇಲ್ಲ ಎಂದು ವ್ಯಂಗ್ಯವಾಗಿ ಮಾತನಾಡಿದ್ದರು. ಈ ಮಾತಿಗೆ ಹಾಲಪ್ಪ ಆಚಾರ್ ಬೆಂಬಲಿಗರು, ಕ್ಷೇತ್ರದ ಜನರಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.