Tag: ಪಬ್ಲಿಕ್ ಟಿವಿ baby Goat

  • ಮಾನವನ ಮುಖ ಹೊತ್ತು ಜನಿಸಿದ ಮೇಕೆ ಮರಿ

    ಮಾನವನ ಮುಖ ಹೊತ್ತು ಜನಿಸಿದ ಮೇಕೆ ಮರಿ

    ಗಾಂಧಿನಗರ: ಆಗ ತಾನೇ ಜನಿಸಿದ ಮೇಕೆ ಮರಿಯೊಂದು ಮಾನವನಂತೆ ಮುಖ ಹೊಂದಿರುವ ಫೋಟೋ ಹಾಗೂ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಹೌದು. ಮಾನವನಂತೆ ಮುಖವಿರುವ ಮೇಕೆ ಮರಿಯೊಂದು ಜನಿಸಿರುವ ವಿಚಿತ್ರ ಘಟನೆ ಗುಜರಾತ್‍ನ ಸಾಂಗ್ದ್ ತಾಲೂಕಿನ ಟ್ಯಾಪಿ ನದಿಸಮೀಪದ ಸೆಲ್ಟಿಪಾಡಾ ಗ್ರಾಮದಲ್ಲಿ ನಡೆದಿದೆ. ಮೇಕೆಯಂತೆಯೇ, ಮೇಕೆ ಮರಿ ನಾಲ್ಕು ಕಾಲು ಹಾಗೂ ಕಿವಿಗಳನ್ನು ಹೊಂದಿದೆ. ಆದರೆ ಉಳಿದ ಅರ್ಧ ಭಾಗ ನೋಡಲು ಮನುಷ್ಯನಂತೆ ಕಾಣಿಸುತ್ತದೆ.

    ಈ ಮೇಕೆಯು ರೈತ ಅಜಯ್ಭಾಯ್ ಎಂಬವರ ಮನೆಯಲ್ಲಿ ಜನಿಸಿದ್ದು, ಹಣೆ, ಕಣ್ಣು, ಬಾಯಿ ಮತ್ತು ಗಲ್ಲ ಸೇರಿದಂತೆ ಕೆಲವು ಭಾಗಗಳು ಮನುಷ್ಯರಂತೆ ಇದೆ. ಅಲ್ಲದೆ ಮೇಕೆ ಬಾಲವನ್ನು ಸಹ ಹೊಂದಿಲ್ಲ. ಆದರೆ ಮೇಕೆ ಜನಿಸಿದ ಬಳಿಕ ಕೇವಲ ಹತ್ತು ನಿಮಿಷಗಳ ಕಾಲ ಮಾತ್ರ ಬದುಕಿತ್ತು.

    ವೈರಲ್ ಆಗಿರುವ ವೀಡಿಯೋದಲ್ಲಿ, ಮೇಕೆ ಮರಿಯನ್ನು ಗ್ರಾಮಸ್ಥರು ಸಮಾಧಿ ಮಾಡುವ ಮುನ್ನ ಪೂಜೆ ಮಾಡುವುದನ್ನು ಕಾಣಬಹುದಾಗಿದೆ. ಇದು ಪೂರ್ವಜರ ಜನ್ಮ ಎಂದು ಅವರು ಭಾವಿಸಿದ್ದಾರೆ.