Tag: ಪಬ್ಲಿಕ್ ಟಿವಿ Auto

  • ಕನಿಷ್ಠ ದರ ಏರಿಕೆಗೆ ಆಟೋ ಚಾಲಕರ ಸಂಘಟನೆಗಳಿಂದ ಸರ್ಕಾರಕ್ಕೆ ಮನವಿ

    ಕನಿಷ್ಠ ದರ ಏರಿಕೆಗೆ ಆಟೋ ಚಾಲಕರ ಸಂಘಟನೆಗಳಿಂದ ಸರ್ಕಾರಕ್ಕೆ ಮನವಿ

    ಬೆಂಗಳೂರು: ಆಟೋ ಕನಿಷ್ಠ ದರವನ್ನು 30 ರೂ.ಗೆ ಏರಿಕೆ ಮಾಡುವಂತೆ ಆಟೋ ಚಾಲಕರ ಸಂಘಟನೆಗಳಿಂದ ಸರ್ಕಾರಕ್ಕೆ ಮನವಿ ಮಾಡಿದೆ.

    ದಿನೇ ದಿನೇ ಆಟೋ ಗ್ಯಾಸ್ ದರ ಏರಿಕೆಯಾಗುತ್ತಿರುವ ಹಿನ್ನೆಲೆ ಆಟೋ ಚಾಲಕರು ಆಕ್ರೋಶಗೊಂಡಿದ್ದಾರೆ. ಕೊರೊನಾದಿಂದ ಜೀವನ ನಡೆಸಲು ಕಷ್ಟಕರವಾಗಿರುವ ಸಮಯದಲ್ಲಿ ಆಟೋ ಗ್ಯಾಸ್ ದರ ಏರಿಕೆಯಾಗುತ್ತಿರುವುದರಿಂದ ಆಟೋ ಚಾಲಕರಿಗೆ ನಷ್ಟವಾಗಿದೆ ಎಂದು ಆಟೋ ಚಾಲಕರ ಸಂಘಟನೆಗಳು ಸರ್ಕಾರದ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಪ್ರತಿ ಲೀಟರ್ ಆಟೋ ಗ್ಯಾಸ್ ದರ 56 ರೂಪಾಯಿಗೆ ಏರಿಕೆಯಾಗಿದೆ. ಒಂದೇ ದಿನದಲ್ಲಿ 5.50 ರೂಪಾಯಿ ಏರಿಕೆಯಾಗಿದೆ. ಆಟೋ ಪ್ರಯಾಣದ ಕನಿಷ್ಠ ದರವನ್ನು ಏರಿಕೆ ಮಾಡುವಂತೆ ಆಟೋ ಚಾಲಕರ ಸಂಘಟನೆ ಸರ್ಕಾರಕ್ಕೆ ಮನವಿ ಮಾಡಿದೆ.

    ಆಟೋ ಕನಿಷ್ಠ ದರ 25 ರೂಪಾಯಿಯಿಂದ 30 ರೂಪಾಯಿಗೆ ಏರಿಕೆ ಮಾಡುವಂತೆ ಆಟೋ ಸಂಘಟನೆಗಳು ಬೇಡಿಕೆ ಮಾಡಿಕೊಂಡಿದೆ. ಕಳೆದ ಒಂಬತ್ತು ವರ್ಷಗಳ ಹಿಂದೆ ಆಟೋ ಕನಿಷ್ಠ ಮೀಟರ್ ದರ ಏರಿಕೆಯಾಗಿತ್ತು. ಪ್ರತಿ ಮೂರು ವರ್ಷಕ್ಕೊಮ್ಮೆ ಆಟೋ ಮಿನಿಮಮ್ ದರ ಏರಿಕೆ ಮಾಡುವ ಅವಕಾಶವಿದ್ದು, ಸಾರಿಗೆ ಇಲಾಖೆ ಏರಿಕೆಗೆ ಅವಕಾಶ ನೀಡಿಲ್ಲವೆಂದು ಆದರ್ಶ ಆಟೋ ಚಾಲಕರ ಸಂಘಟನೆಯ ಅಧ್ಯಕ್ಷ ಮಂಜುನಾಥ್ ಹೇಳಿದ್ದಾರೆ.

    ಎಲ್‍ಪಿಜಿ ದರ ಏರಿಕೆ ಆದಾ ಹಿನ್ನೆಲೆಯಲ್ಲಿ ಆಟೋ ಮಿನಿಮಲ್ ದರವನ್ನು 30 ರೂಪಾಯಿಗೆ ಏರಿಕೆ ಮಾಡಲು ಅವಕಾಶ ನೀಡುವಂತೆ ಜೊತೆಗೆ ಪ್ರತಿ ಕಿಲೋಮೀಟರ್ ಗೆ 16 ರೂಪಾಯಿ ದರ ನಿಗದಿ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.  ಇದನ್ನೂ ಓದಿ:ಆಗಸ್ಟ್ 10 ರಂದು ದೇಶಾದ್ಯಂತ ವಿದ್ಯುತ್ ನೌಕರರ ಮುಷ್ಕರ

  • ವ್ಯಾಕ್ಸಿನ್ ಪಡೆಯದ ಆಟೋ ಚಾಲಕರು ಆಟೋವನ್ನು ರಸ್ತೆಗಿಳಿಸುವಂತಿಲ್ಲ: ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ

    ವ್ಯಾಕ್ಸಿನ್ ಪಡೆಯದ ಆಟೋ ಚಾಲಕರು ಆಟೋವನ್ನು ರಸ್ತೆಗಿಳಿಸುವಂತಿಲ್ಲ: ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ

    ವಿಜಯಪುರ: ವ್ಯಾಕ್ಸಿನ್ ಹಾಕಿಸಿಕೊಳ್ಳದ ಆಟೋ ಚಾಲಕರು ಆಟೋಗಳನ್ನ ರಸ್ತೆಗೆ ಇಳಿಸುವ ಹಾಗಿಲ್ಲ. ಇನ್ನು ಈವರೆಗೂ ವ್ಯಾಕ್ಸಿನ್ ಪಡೆಯದ ಬೀದಿಬದಿ ವ್ಯಾಪಾರಸ್ಥರು ವ್ಯಾಪಾರ ಮಾಡುವ ಹಾಗಿಲ್ಲ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ ಸುನೀಲ್‍ಕುಮಾರ್ ಖಡಕ್ ನಿರ್ಧಾರಕ್ಕೆ ಮುಂದಾಗಿದ್ದಾರೆ.

    ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದು ಎಷ್ಟೇ ಹೇಳಿದರೂ, ಆಟೋ ಚಾಲಕರು, ಬೀದಿ ಬದಿ ವ್ಯಾಪಾರಸ್ಥರು, ಕಟ್ಟಡ ಕಾರ್ಮಿಕರು ಕೇಳುತ್ತಿಲ್ಲ. ನಾವು ಆರೋಗ್ಯವಾಗಿದ್ದೀವಿ ವ್ಯಾಕ್ಸಿನ್ ಯಾಕೆ ಎಂದು ಹೇಳುತ್ತಿದ್ದಾರೆ.

    ಹೀಗಾಗಿ ಗರಂ ಆಗಿರುವ ಡಿಸಿ ಸುನೀಲ್‍ಕುಮಾರ್, ವ್ಯಾಕ್ಸಿನ್ ಹಾಕಿಸಿಕೊಂಡರೇ ಮಾತ್ರ ಆಟೋ ಓಡಿಸಬೇಕು. ರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡಬಹುದು. ಇಲ್ಲದಿದ್ದರೆ ಪಾಲಿಕೆ ವ್ಯಾಕ್ಸಿನ್ ಹಾಕಿಸಿಕೊಳ್ಳದವರಿಗೆ ವ್ಯಾಪಾರಕ್ಕೆ ಅವಕಾಶ ಕೊಡಲೇ ಬಾರದು ಎಂದು ಆದೇಶಿಸಿದ್ದಾರೆ.

    ವಿಜಯಪುರದಲ್ಲಿ 6 ಸಾವಿರದಷ್ಟು ಬೀದಿಬದಿ ವ್ಯಾಪಾರಿಗಳಿದ್ದಾರೆ, ಆದರೆ, ಅರ್ಧದಷ್ಟು ಜನರು ಕೂಡ ವ್ಯಾಕ್ಸಿನ್ ಹಾಕಿಸಿಕೊಂಡಿಲ್ಲ. 75 ಸಾವಿರ ಕಟ್ಟಡ ಕಾರ್ಮಿಕರಿದ್ದು, ಅವರು ಕೂಡ ವ್ಯಾಕ್ಸಿನ್ ಹಾಕಿಸಿಕೊಂಡಿಲ್ಲ ಎಂದು ಡಿಸಿ ಸುನೀಲ್ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಕೋಟೆನಾಡಲ್ಲಿ ಬಂದ್ ಆಗಿದ್ದ ಪ್ರವಾಸಿ ತಾಣಗಳು ಓಪನ್

  • ಮೃತವ್ಯಕ್ತಿ ದೇಹ ಸಾಗಿಸಲು 4,500 ರೂ. ಬೇಡಿಕೆ ಇಟ್ಟ ಆಟೋ ಚಾಲಕ

    ಮೃತವ್ಯಕ್ತಿ ದೇಹ ಸಾಗಿಸಲು 4,500 ರೂ. ಬೇಡಿಕೆ ಇಟ್ಟ ಆಟೋ ಚಾಲಕ

    ಲಕ್ನೋ: ತರಕಾರಿ ಮಾರುವ ವ್ಯಕ್ತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಂತರ ಮನೆಗೆ ಸಾಗಿಸಲು ಆಟೋ ಚಾಲಕನೋರ್ವ 4,500ರೂ ನೀಡುವಂತೆ ಬೇಡಿಕೆ ಇಟ್ಟಿರುವ ಶೋಚನೀಯ ಘಟನೆ ಗೋರಕಪುರದಲ್ಲಿ ನಡೆದಿದೆ.

    ಈ ವಿಚಾರವಾಗಿ ಮೃತ ವ್ಯಕ್ತಿಯ ಸಂಬಂಧಿಕರು ರಾಜು ಎಂಬ ಆಟೋ ಚಾಲಕನ ವಿರುದ್ಧ ಆರೋಪಿಸಿ ಸಿಎಂ ಯೋಗಿ ಆದಿತ್ಯಾನಾಥ್‍ರವರಿಗೆ ದೂರು ನೀಡಿದ್ದಾರೆ.

    ಶನಿವಾರ ಸಂಜೆ ಕಮಲೇಶ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು, ಈ ವಿಷಯ ತಿಳಿಯುತ್ತಿದ್ದಂತೆ ಕಮಲೇಶ್ ಸಹೋದರ ಭೋಲಾ ಬಿಆರ್‍ಡಿ ವೈದ್ಯಕೀಯ ಕಾಲೇಜ್ ಆಸ್ಪತ್ರೆಗೆ ತಲುಪಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕಮಲೇಶ್ ಶನಿವಾರ ಸಂಜೆ 5 ಗಂಟೆಗೆ ಮೃತಪಟ್ಟಿದ್ದಾರೆ.

    ಬಳಿಕ ಶವವನ್ನು ಶವಗಾರದಲ್ಲಿ ಇಡಲಾಯಿತು. ಈ ವೇಳೆ ಸ್ಥಳಕ್ಕೆ ಸಹೋದರ ಭೋಲಾ ಶವಗಾರಕ್ಕೆ ತಲುಪಿದರು. ಕಮಲೇಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಂತರ ಮನೆಗೆ ಸಾಗಿಸಲು ಆಟೋ ಚಾಲಕ 3,500 ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಅಲ್ಲದೇ 1,000 ರೂ. ಪಾಲಿಥಿನ್ ಕಟ್ಟುವಂತೆ ತಿಳಿಸಲಾಗಿದೆ.

    ಸದ್ಯ ಆಟೋ ಚಾಲಕನ ವಿರುದ್ಧ ಮೃತನ ಪತ್ನಿ ಕಿರಣ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ರವರಿಗೆ ಪತ್ರ ಬರೆಯುವ ಮೂಲಕ ದೂರು ನೀಡಿದ್ದು, ಘಟನೆ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

  • ಬಸ್‍ಗೆ ಡಿಕ್ಕಿ ಹೊಡೆದ ಆಟೋ- 14 ಮಂದಿ ಸಾವು

    ಬಸ್‍ಗೆ ಡಿಕ್ಕಿ ಹೊಡೆದ ಆಟೋ- 14 ಮಂದಿ ಸಾವು

    ಭೋಪಾಲ್: ಆಟೋವೊಂದು ಬಸ್‍ಗೆ ಡಿಕ್ಕಿ ಹೊಡೆದ ಪರಿಣಾಮ 14 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಮಂಗಳವಾರ ಬೆಳಗ್ಗೆ ಗ್ವಾಲಿಯರ್‍ನ ಪುರಾನಿ ಚೌವಾನಿ ಪ್ರದೇಶಲ್ಲಿ ನಡೆದಿದೆ.

    ಘಟನೆಯಲ್ಲಿ 12 ಮಂದಿ ಮಹಿಳೆಯರು ಅಂಗನವಾಡಿ ಕಾರ್ಮಿಕರಾಗಿದ್ದು, ಒಬ್ಬ ಆಟೋ ಚಾಲಕನಾಗಿದ್ದಾನೆ. ಒಂಬತ್ತು ಮಂದಿ ಮಹಿಳೆಯರು ಹಾಗೂ ಆಟೋ ಚಾಲಕ ಅಪಘಾತದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ನಾಲ್ವರು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

    ಈ ಬಗ್ಗೆ ಮಾತನಾಡಿದ ಗ್ವಾಲಿಯರ್ ಎಸ್‍ಪಿ ಅಮಿತ್ ಸಿಂಗ್, ಅಪಘಾತ ಬೆಳಗ್ಗೆ ಸುಮಾರು 7 ಗಂಟೆಗೆ ಜರುಗಿದ್ದು, ಮಹಿಳೆಯರು ಅಂಗನವಾಡಿ ಕೇಂದ್ರದಲ್ಲಿ ಅಡುಗೆ ಮಾಡಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ.

    ಈ ಕುರಿತಂತೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.