Tag: ಪಬ್ಲಿಕ್ ಟಿವಿ Amitabh Bachchan

  • ಜಪ್ತಿಯಾಗಿದ್ದ ಅಮಿತಾಭ್ ಬಚ್ಚನ್ ಕಾರು ರಿಲೀಸ್

    ಜಪ್ತಿಯಾಗಿದ್ದ ಅಮಿತಾಭ್ ಬಚ್ಚನ್ ಕಾರು ರಿಲೀಸ್

    ಬೆಂಗಳೂರು/ನೆಲಮಂಗಲ: ವ್ಯಕ್ತಿಯೊಬ್ಬರು ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಬಳಿ ಖರೀದಿಸಿದ್ದ ಐಷಾರಾಮಿ ಕಾರನ್ನು ವಶಪಡಿಸಿಕೊಂಡಿದ್ದ ಆರ್‌ಟಿಓ ಅಧಿಕಾರಿಗಳು ಇದೀಗ ರಿಲೀಸ್ ಮಾಡಿದ್ದಾರೆ.

    ಬೇರೆ ರಾಜ್ಯದ ಕಾರುಗಳು ತೆರಿಗೆ ವಂಚಿಸಿ ಕರ್ನಾಟಕ ರಾಜ್ಯದಲ್ಲಿ ಸಂಚಾರ ಮಾಡುತ್ತಿದ್ದ ಹಿನ್ನೆಲೆ ಬೆಂಗಳೂರಿನ ಸ್ಪೆಷಲ್ ತಂಡದ ಆರ್‌ಟಿಓ ಅಧಿಕಾರಿಗಳು ನಗರದ ಯುಬಿ ಸಿಟಿ ಹಾಗೂ ಇನ್ನಿತರ ಕಡೆ ದಾಳಿ ನಡೆಸಿ ವಾಹನಗಳನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಬಾಬು ಎಂಬವರು ಅಮಿತಾಭ್ ಬಚ್ಚನ್ ಬಳಿ ಖರೀದಿಸಿದ್ದ ರೋಲ್ಸ್ ರಾಯ್ಸ್ ಕಾರನ್ನು ಅಧಿಕಾರಿಗಳು ಸೀಜ್ ಮಾಡಿದ್ದರು. ಸದ್ಯ ಆರ್‌ಟಿಓ ಅಧಿಕಾರಿಳಿಗೆ ಈ ಕಾರಿನ ದಾಖಲೆಗಳನ್ನು ನೀಡಿ ತೆರಿಗೆ ಕಟ್ಟಿ ರಿಲೀಸ್ ಮಾಡಿದ್ದಾರೆ. ಇದನ್ನೂ ಓದಿ:ಕಲ್ಲಿದ್ದಲು ಗಣಿಗಾರಿಕೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ: ಅಮಿತಾಭ್ ಬಚ್ಚನ್

    ಅಮಿತಾಭ್ ಬಚ್ಚನ್ ಅವರಿಗೆ 1.5 ಕೋಟಿ ರೂಪಾಯಿಯನ್ನು ಆರ್‌ಟಿಜಿಎಸ್‌ ಮಾಡಲಾಗಿದ್ದು, ಮಹಾರಾಷ್ಟ್ರದಲ್ಲಿ ಟ್ಯಾಕ್ಸ್ ಕಟ್ಟಲಾಗಿದೆ. ಬಚ್ಚನ್‍ರಿಂದ ಕಾರು ಖರೀದಿ ಮಾಡಿದ ನಂತರವೂ ದಾಖಲೆಗಳನ್ನು ಬದಲಾಯಿಸದೇ ಕಾರಿನ ಇನ್ಶೂರೆನ್ಸ್ ನನ್ನು ಅಮಿತಾಭ್ ಹೆಸರಲ್ಲಿ ಈಗ ಕಟ್ಟಿದ್ದೇಕೆ ಎಂಬ ಪ್ರಶ್ನೆ ಎದ್ದಿದೆ. ಕಾರು ಯಾವಾಗ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬಂದಿದೆ ಎನ್ನುವುದರ ಬಗ್ಗೆ ಆರ್‌ಟಿಓ ಅಧಿಕಾರಿಗಳ ಬಳಿ ದಾಖಲೆ ಇಲ್ಲ. ಮೊನ್ನೆ ವಶಪಡಿಸಿಕೊಂಡ ಪಾಂಡಿಚೇರಿ ರಿಜಿಸ್ಟ್ರೇಷನ್‍ನ ಕಾರಿಗೆ 35 ಲಕ್ಷ ತೆರಿಗೆ ಕಟ್ಟಿಸಲಾಗಿದೆ. ಇದನ್ನೂ ಓದಿ:ನಟ ಅಮಿತಾಭ್ ಬಚ್ಚನ್ ಕಾರು ವಶಕ್ಕೆ

    ಈ ಬಗ್ಗೆ ಪ್ರತಿಕ್ರಿಯಿಸಿದ ಉದ್ಯಮಿ ಬಾಬು, ನನ್ನದು ಮುಂಬೈನಲ್ಲಿ ಬ್ಯುಸಿನೆಸ್ ಇದೆ ಹಾಗಾಗಿ ಅಲ್ಲೇ ಈ ಕಾರು ಓಡಿಸುತ್ತಿದ್ದೆ. ಈಗ ಬೆಂಗಳೂರಿಗೆ ಬಂದಿದ್ದೇನೆ, ಕೆಲ ದಾಖಲೆಗಳು ನೋಡಿಕೊಂಡಿಲ್ಲ. ಹಾಗಾಗಿ ಈ ರೀತಿಯ ಯಡವಟ್ಟು ಆಗಿದೆ. ಆದಷ್ಟು ಬೇಗ ನಿಯಮದಂತೆ ದಂಡ ಕಟ್ಟಿ ಎಲ್ಲಾ ದಾಖಲೆಗಳನ್ನು ಸರಿಪಡಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ ಆರ್ ಟಿಓ ಅಧಿಕಾರಿಗಳ ಪ್ರಕಾರ ಬೆಂಗಳೂರು ಸೇರಿದಂತೆ ಬೇರೆ ಬೇರೆ ನಗರಗಳಲ್ಲಿ ಸಾಕಷ್ಟು ಜನ ರಾಜಕೀಯ ಮುಖಂಡರು, ಉದ್ಯಮಿಗಳು ಇದೇ ರೀತಿ ಟ್ಯಾಕ್ಸ್ ಕಟ್ಟದೇ, ಇನ್ಷುರೆನ್ಸ್ ಕಟ್ಟದೇ, ಒಂದೇ ಕಾರಿನ ನಂಬರ್‌ನಲ್ಲಿ ಬೇರೆ ಬೇರೆ ಕಾರುಗಳನ್ನು ಓಡಿಸುತ್ತಿರುವುದು ಗೊತ್ತಾಗಿದೆ. ಆದಷ್ಟು ಬೇಗ ಅಂಥವರ ಪಟ್ಟಿ ಮಾಡಿ ಎಲ್ಲರಿಗೂ ದಂಡ ಹಾಕಿ ವಾಹನಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ಹೇಳಿದ್ದಾರೆ.

  • 1.5 ಕೋಟಿ ಆದಾಯ ಗಳಿಸುತ್ತಿದ್ದ ಆರೋಪದಡಿ ಬಿಗ್‍ಬಿ ಬಾಡಿ ಗಾರ್ಡ್ ವರ್ಗಾವಣೆ

    1.5 ಕೋಟಿ ಆದಾಯ ಗಳಿಸುತ್ತಿದ್ದ ಆರೋಪದಡಿ ಬಿಗ್‍ಬಿ ಬಾಡಿ ಗಾರ್ಡ್ ವರ್ಗಾವಣೆ

    ಮುಂಬೈ: ಬಾಲಿವುಡ್ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ತಮ್ಮ ಬಾಡಿಗಾರ್ಡ್ ಜಿತೇಂದ್ರ ಶಿಂಧೆಗೆ ವಾರ್ಷಿಕ 1.5 ಕೋಟಿ ವೇತನ ನೀಡುತ್ತಾರೆ. ಇದು ದೇಶದ ಅನೇಕ ಖಾಸಗಿ ಕಂಪನಿಗಳ ಸಿಇಒಗಳ ಸಂಬಳಕ್ಕಿಂತ ಹೆಚ್ಚಾಗಿದೆ ಎಂಬ ಆರೋಪ ಬಳಿಕ ಇದೀಗ ಜಿತೇಂದ್ರ ಶಿಂಧೆರನ್ನು ವರ್ಗಾಯಿಸಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಮುಂಬೈ ಪೊಲೀಸ್ ಇಲಾಖೆಗೆ ಕಾನ್ಸ್‌ಸ್ಟೇಬಲ್‌ ಆಗಿ ಸೇರಿಕೊಂಡ ಜಿತೇಂದ್ರ ಶಿಂಧೆ ಅವರನ್ನು ಅಮಿತಾಬ್ ಬಚ್ಚನ್ ಅಂಗರಕ್ಷಕರಾಗಿ ನೇಮಿಸಲಾಯಿತು. ಕಳೆದ ಹಲವು ವರ್ಷಗಳಿಂದ ಜೀತೆಂದ್ರ ಶಿಂಧೆ ಬಿಗ್‍ಬಿ ಅಂಗ ರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ ಜೀತೆಂದ್ರ ಶಿಂಧೆಯವರ ವಾರ್ಷಿಕ ಆದಾಯ 1.5 ಕೋಟಿ ಎಂಬ ಸುದ್ದಿ ಹೊರಬಂದಿದ್ದು, ಜೀತೆಂದ್ರ ಶಿಂಧೆ ಅಮಿತಾಬ್ ಬಚ್ಚನ್ ಅಥವಾ ಬೇರೆಯವರಿಂದ ಹಣ ಸಂಪಾದಿಸುತ್ತಿದ್ದಾರೆಯೇ ಎಂದು ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ:ಸೋನು ಸೂದ್ ‘ದೇಶ್ ಕೆ ಮೆಂಟರ್ಸ್’ ಕಾರ್ಯಕ್ರಮದ ಬ್ರ್ಯಾಂಡ್ ಅಂಬಾಸಿಡರ್: ಅರವಿಂದ್ ಕೇಜ್ರಿವಾಲ್

    ಈ ಬಗ್ಗೆ ಶಿಂಧೆ ತಮ್ಮ ಪತ್ನಿ ಭದ್ರತಾ ಏಜೆನ್ಸಿಗಳನ್ನು ನಡೆಸುತ್ತಿದ್ದಾರೆ. ಈ ಭದ್ರತಾ ಏಜೆನ್ಸಿ ಮೂಲಕ ಹಲವಾರು ಸೆಲಬ್ರೆಟಿಗಳಿಗೆ ಮತ್ತು ಹೆಸರಾಂತ ಗಣ್ಯರಿಗೆ ಭದ್ರತೆಯನ್ನು ಒದಗಿಸಲಾಗುತ್ತಿದೆ. ಅಲ್ಲದೇ ತಮ್ಮ ಪತ್ನಿಯ ಹೆಸರಿನಲ್ಲಿ ಭದ್ರತಾ ವ್ಯವಹಾರಗಳನ್ನು ನಡೆಸುತ್ತಿದ್ದೇನೆ. ಜೊತೆಗೆ ಅಮಿತಾಬ್ ಬಚ್ಚನ್ 1.5 ಕೋಟಿ ರೂಪಾಯಿ ವೇತನ ಪಾವತಿಸುತ್ತಿಲ್ಲ ಎಂದು ಪೊಲೀಸರಿಗೆ ಹೇಳಿದ್ದಾರೆ. ಇದನ್ನೂ ಓದಿ:ಮಹಿಳೆಯರ ವಿರುದ್ಧದ ಅಪರಾಧಗಳತ್ತ ಕಣ್ಣು ಮುಚ್ಚಬೇಡಿ, ಮಾತನಾಡಿ: ರಮ್ಯಾ

    ಮುಂಬೈ ಪೊಲೀಸರ ಪ್ರಕಾರ ಒಬ್ಬ ಪೊಲೀಸನ್ನು ಒಂದೇ ಸ್ಥಳದಲ್ಲಿ 5 ವರ್ಷಕ್ಕಿಂತ ಹೆಚ್ಚು ಕಾಲ ನಿಯೋಜಿಸಲಾಗುವುದಿಲ್ಲ. ಜಿತೇಂದ್ರ ಶಿಂಧೆ 2015ರಿಂದ ಅಮಿತಾಬ್ ಬಚ್ಚನ್‍ಗಾಗಿಯೇ ಕೆಲಸ ಮಾಡುತ್ತಿದ್ದಾರೆ. ಬಚ್ಚನ್ ಸೆಕ್ಯೂರಿಟಿಗಾಗಿ ಇಬ್ಬರು ಕಾನ್ಸ್‌ಸ್ಟೇಬಲ್‌ಗಳನ್ನು ಯೋಜಿಸಲಾಗಿದ್ದು, ಅದರಲ್ಲಿ ಜಿತೇಂದ್ರ ಶಿಂಧೆ ಅಮಿತಾಬ್ ಬಚ್ಚನ್‍ರವರ ನೆಚ್ಚಿನ ಬಾಡಿಗಾರ್ಡ್ ಆಗಿದ್ದರು. ಅಮಿತಾಬ್ ಬಚ್ಚನ್ ಹೋದ ಕಡೆಯಲೆಲ್ಲಾ ಜಿತೇಂದ್ರ ಶಿಂಧೆ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಅವರನ್ನು ದಕ್ಷಿಣ ಮುಂಬೈನ ಪೊಲೀಸ್ ಸ್ಟೇಷನ್‍ಗೆ ವರ್ಗಾಯಿಸಲಾಗಿದೆ.

  • ಅಮಿತಾಬ್ ಬಚ್ಚನ್, ಜಯಗೆ 48ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ

    ಅಮಿತಾಬ್ ಬಚ್ಚನ್, ಜಯಗೆ 48ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ

    ಮುಂಬೈ: ಬಾಲಿವುಡ್ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ಜಯ ಬಚ್ಚನ್‍ಗೆ 48ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಈ ವಿಶೇಷ ದಿನದಂದು ವಿವಾಹ ವಾರ್ಷಿಕೋತ್ಸವದ ಶುಭಾಶಯ ಕೋರಿದ ಎಲ್ಲರಿಗೂ ಅಮಿತಾಬ್ ಬಚ್ಚಬ್ ಸೋಶಿಯಲ್ ಮೀಡಿಯಾ ಮೂಲಕ ಧನ್ಯವಾದ ತಿಳಿಸಿದ್ದಾರೆ.

    ಅಮಿತಾಬ್ ಬಚ್ಚನ್‍ರವರು ತಮ್ಮ ವಿವಾಹದ ವೇಳೆ ಕ್ಲಿಕ್ಕಿಸಿದ ಫೋಟೋವೊಂದನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಫೋಟೋದಲ್ಲಿ ಅಮಿತಾಬ್ ಬಚ್ಚನ್ ಶೇರ್ವಾನಿ ಧರಿಸಿದ್ದು, ಜಯ ಮಾಧುರಿ ಕೆಂಪು ಬಣ್ಣದ ಲೆಹೆಂಗ ತೊಟ್ಟು, ಆಭರಣಗಳನ್ನು ಧರಿಸಿ ವಿವಾಹದ ವಿಧಿಗಳನ್ನು ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಮತ್ತೊಂದರಲ್ಲಿ ಅಮಿತಾಬ್ ಬಚ್ಚನ್ ಜಯರವರ ಹಣೆಯ ಮೇಲೆ ಸಿಂಧೂರ ಇಡುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನು ಓದಿ:ಬಾಲಿವುಡ್‍ನಲ್ಲಿ 52 ವರ್ಷ ಪೂರೈಸಿದ ಬಿಗ್ ಬಿ

    ಅಮಿತಾಬ್ ಬಚ್ಚನ್ ಹಾಗೂ ಜಯ ನಡುವೆ ಜಂಜೀರ್ ಸಿನಿಮಾದ ಚಿತ್ರೀಕರಣ ವೇಳೆ ಪ್ರೀತಿ ಹುಟ್ಟಿತ್ತು. ಈ ಸಿನಿಮಾ ಬಾಲಿವುಡ್‍ನಲ್ಲಿ ಹಿಟ್ ಕೂಡ ಆಗಿತ್ತು. ಬಳಿಕ ಈ ಸಿನಿಮಾದ ಸಕ್ಸಸ್ ನಂತರ 1973 ಜೂನ್ 3ರಂದು ಈ ಜೋಡಿ ಸಪ್ತಪದಿ ತುಳಿದಿದ್ದರು.

     

    View this post on Instagram

     

    A post shared by Amitabh Bachchan (@amitabhbachchan)

    ರೀಲ್‍ನಲ್ಲಿ ಮಾತ್ರವಲ್ಲದೇ ರಿಯಲ್ ಲೈಫ್‍ನಲ್ಲಿಯೂ ಎಲ್ಲರಿಗೂ ಮಾದರಿಯಂತೆ ಇರುವ ಈ ಜೋಡಿ ಅಭಿಮಾನ್, ಚುಪ್ ಚುಪ್ ಕೆ, ಶೋಲೆ, ಕಭಿ ಖುಷಿ ಕಭಿ ಗಂ ಸಿನಿಮಾದಲ್ಲಿ ಒಟ್ಟಾಗಿ ಅಭಿನಯಿಸಿದ್ದಾರೆ. ಅಮಿತಾಬ್ ಬಚ್ಚನ್ ದಂಪತಿಗೆ ಅಭಿಷೇಕ್ ಬಚ್ಚನ್ ಹಾಗೂ ಶ್ವೇತಾ ಬಚ್ಚನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಇದನ್ನು ಓದಿ:ಹೆಸರಿಟ್ಟು ಮುದ್ದು ಮಗನನ್ನು ಪರಿಚಯಿಸಿದ ಗಾಯಕಿ ಶ್ರೇಯಾ ಘೋಷಾಲ್

  • ಬಾಲಿವುಡ್‍ನಲ್ಲಿ 52 ವರ್ಷ ಪೂರೈಸಿದ ಬಿಗ್ ಬಿ

    ಬಾಲಿವುಡ್‍ನಲ್ಲಿ 52 ವರ್ಷ ಪೂರೈಸಿದ ಬಿಗ್ ಬಿ

    ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್‍ರವರು ಚಿತ್ರರಂಗದಲ್ಲಿ 52 ವರ್ಷ ಪೂರೈಸಿದ್ದಾರೆ.

    1969ರಲ್ಲಿ ಸಾಥ್ ಹಿಂದೂಸ್ತಾನಿ ಸಿನಿಮಾದ ಮೂಲಕ ಬಾಲಿವುಡ್‍ಗೆ ಪಾದರ್ಪಣೆ ಮಾಡಿದ ಅಮಿತಾಬ್ ಬಚ್ಚನ್ ಚುಪ್ಕೆ ಚುಪ್ಕೆ, ಶೋಲೆ, ಅಮರ್ ಅಕ್ಬರ್ ಆ್ಯಂಟನಿ, ಕಭೀ ಕಭೀ, ಸೂರ್ಯವಂಶಂ ನಂತಹ ಹಿಟ್ ಸಿನಿಮಾ ಸಿನಿಮಾಗಳನ್ನು ಸೇರಿದಂತೆ ಇತ್ತೀಚೆಗೆ ಗುಲಾಬೊ ಸೀತಾಬೊ ಸಿನಿಮಾದವರೆಗೂ ಅಭಿನಯಿಸಿದ್ದಾರೆ. ಸದ್ಯ ಬಾಲಿವುಡ್‍ನಲ್ಲಿ ಐದು ದಶಕ ಪೂರೈಸಿರುವ ಅಮಿತಾಬ್ ಸೋಶಿಯಲ್ ಮೀಡಿಯಾದಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

    ಅಮಿತಾಬ್ ಬಚ್ಚನ್‍ರವರು ತಮ್ಮ ಕೆಲವು ಪ್ರಮುಖ ಸಿನಿಮಾದ ಫೋಟೋಗಳನ್ನು ಕೋಲಾಜ್ ಮಾಡಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಮತ್ತು 52 ವರ್ಷಗಳು. ಒಳ್ಳೆಯದು, ಈ ಚಿತ್ರಗಳ ಸಂಖ್ಯೆಗಾಗಿ ಧನ್ಯವಾದಗಳು. ಇದೆಲ್ಲಾ ಹೇಗೆ ನಡೆಯಿತು ಎಂದು ಇಂದಿಗೂ ಆಶ್ಚರ್ಯವಾಗುತ್ತಿದೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ಏಳು ಸ್ವಾತಂತ್ರ್ಯ ಹೋರಾಟಗಾರರ ಕಥೆಯನ್ನೊಳಗೊಂಡ ಸಾಥ್ ಹಿಂದೂಸ್ತಾನಿ ಸಿನಿಮಾದ ಸಕ್ಸಸ್ ನಂತರ ಅಮಿತಾಬ್ ಬಚ್ಚನ್‍ಗೆ ವೃತ್ತಿ ಜೀವನದಲ್ಲಿ ರಾಜೇಶ್ ಖನ್ನಾ ಅಭಿನಯದ ಆನಂದ್ ಚಿತ್ರ ಬಹುದೊಡ್ಡ ಹಿಟ್ ತಂದುಕೊಟ್ಟಿತ್ತು. ಕೂಲಿ ಹಾಗೂ ಶೋಲೆ ಸಿನಿಮಾಗಳಲ್ಲಿ ಅಮಿತಾಬ್ ಬಚ್ಚನ್ ಅದ್ಭುತ ಅಭಿನಯವನ್ನು ಜನ ಇಂದಿಗೂ ಇಷ್ಟಪಟ್ಟು ನೋಡುತ್ತಾರೆ.

     

    View this post on Instagram

     

    A post shared by Amitabh Bachchan (@amitabhbachchan)

    ಸದ್ಯ ಚಿತ್ರರಂಗದಲ್ಲಿ 52 ವರ್ಷ ಪೂರೈಸಿದ ಹಿನ್ನೆಲೆ ಅಮಿತಾಬ್ ಬಚ್ಚನ್‍ಗೆ ಅಭಿಮಾನಿಗಳು ಸೇರಿದಂತೆ ಬಾಲಿವುಡ್‍ನ ಗಣ್ಯಾತಿಗಣ್ಯರು ಶುಭಾಶಯ ತಿಳಿಸುತ್ತಿದ್ದಾರೆ. ಇದನ್ನು ಓದಿ:ನೀರಿನ ಒಳಗಡೆ ಹಾಟ್ ಅವತಾರ – ಕಿಯಾರಾ ಫೋಟೋ ವೈರಲ್

  • ಬಿಗ್ ಬಿಯಿಂದ ಕೋವಿಡ್ ಕೇಂದ್ರಕ್ಕೆ 2 ಕೋಟಿ ನೆರವು

    ಬಿಗ್ ಬಿಯಿಂದ ಕೋವಿಡ್ ಕೇಂದ್ರಕ್ಕೆ 2 ಕೋಟಿ ನೆರವು

    ನವದೆಹಲಿ: ದೆಹಲಿಯ ರಾಕಾಬ್ ಗಂಜ್ ಗುರುದ್ವಾರದಲ್ಲಿ ಸೋಮವಾರ ಉದ್ಘಾಟಿಸಲಾಗುತ್ತಿರುವ ಕೋವಿಡ್-ಕೇರ್ ಸೌಲಭ್ಯಗಳಿಗಾಗಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ 2 ಕೋಟಿ ನೆರವು ನೀಡಿದ್ದಾರೆ ಎಂದು ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ಅಧ್ಯಕ್ಷ ಮಜೀಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ.

    ಅಮಿತಾಬ್ ಬಚ್ಚನ್ ಅವರು ಶ್ರೀ ಗುರು ತೇಜ್ ಬಹದ್ದೂರ್ ಕೋವಿಡ್ ಕೇರ್ ಸೌಲಭ್ಯಕ್ಕಾಗಿ 2 ಕೋಟಿ ನೀಡಿರುವದಕ್ಕೆ ಧನ್ಯವಾದಗಳು. ಅವರ ಸೇವೆಗೆ ಸೆಲ್ಯೂಟ್ ಎಂದು ಅಕಾಲಿ ದಳ ಪಕ್ಷದ ರಾಷ್ಟ್ರೀಯ ವಕ್ತಾರ ಶ್ರೀ ಸಿರ್ಸಾರವರು ಹೇಳಿದ್ದಾರೆ.

    ಜೊತೆಗೆ ವಿದೇಶದಿಂದ ಆಕ್ಸಿಜನ್ ಸಿಲಿಂಡರ್‍ಗಳನ್ನು ಕೋವಿಡ್ ಕೇರ್ ಸೆಂಟರ್‍ಗೆ ತಲುಪಿಸುವುದಾಗಿ ಅಮಿತಾಬ್ ಬಚ್ಚನ್‍ರವರು ನುಡಿದಿರುವುದಾಗಿ ಶ್ರೀ ಸಿರ್ಸಾರವರು ತಿಳಿಸಿದ್ದಾರೆ.

    ದೆಹಲಿಯಲ್ಲಿ ಆಕ್ಸಿಜನ್‍ಗಾಗಿ ಹೋರಾಡುತ್ತಿರು ವೇಳೆ ಅಮಿತಾಬ್ ಬಚ್ಚನ್‍ರವರು ನನ್ನ ಕರೆದು ಈ ಬಗ್ಗೆ ವಿಚಾರಿಸಿದರು. ಸದ್ಯ ರಕಾಬ್ ಗಂಜ್ ಗುರುದ್ವಾರವನ್ನು ಸೋಮವಾರ ಉದ್ಘಾಟಿಸಲಾಗುತ್ತಿದ್ದು, 300 ಬೆಡ್, ಆಕ್ಸಿಜನ್ ಸಿಲಿಂಡರ್, ವೈದ್ಯರು ಮತ್ತು ಅಂಬ್ಯುಲೆನ್ಸ್ ಸೇವೆಗಳನ್ನು ಉಚಿತವಾಗಿ ಒದಗಿಸುವುದಾಗಿ ಹೇಳಿದ್ದಾರೆ.