Tag: ಪಬ್ಲಿಕ್ ಟಿವಿ Ambulance

  • ಅಂಬುಲೆನ್ಸ್ ಚಾಲಕನ ಅಜಾಗರೂಕತೆಗೆ ವ್ಯಕ್ತಿ ಬಲಿ – ಸಂಬಂಧಿಕರಿಂದ ಆರೋಪ

    ಅಂಬುಲೆನ್ಸ್ ಚಾಲಕನ ಅಜಾಗರೂಕತೆಗೆ ವ್ಯಕ್ತಿ ಬಲಿ – ಸಂಬಂಧಿಕರಿಂದ ಆರೋಪ

    ಧಾರವಾಡ: ಅಂಬುಲೆನ್ಸ್ ಚಾಲಕನ ಅಜಾಗರೂಕತೆಯಿಂದ ರೋಗಿಯೊಬ್ಬರು ಸಾವನ್ನಪ್ಪಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

    ಧಾರವಾಡ ತಾಲೂಕಿನ ಕೋಟೂರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಖುತಬುದ್ದಿನ್ ನನ್ನೆಸಾಬನವರ (50) ಮೃತಪಟ್ಟ ವ್ಯಕ್ತಿ. ಕಳೆದ ರಾತ್ರಿ ಖುತಬುದ್ದಿನರಿಗೆ ಎದೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಅವರನ್ನು ಕೋಟೂರು ಗ್ರಾಮದಿಂದ ಧಾರವಾಡ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

    ಮೃತ ವ್ಯಕ್ತಿಯ ಕುಟುಂಬದವರು ವೀಡಿಯೋವೊಂದನ್ನು ಮಾಡಿ, ಅಂಬುಲೆನ್ಸ್ ಚಾಲಕ ಆಕ್ಸಿಜನ್ ನೀಡದೇ ಅಜಾಗರೂಕತೆ ತೋರಿಸಿದ್ದಾನೆ. ಅಲ್ಲದೇ ಅಂಬುಲನ್ಸ್‍ನಲ್ಲಿ ಚಾಲಕನೊಬ್ಬನೇ ರೋಗಿಗೆ ಆಕ್ಸಿಜನ್ ಹಾಕಿದ್ದ, ಅಂಬುಲನ್ಸ್‍ನಲ್ಲಿ ನರ್ಸ್ ಕೂಡಾ ಇರಲಿಲ್ಲ ಎಂದು ಆರೋಪಿಸಿದ್ದಾರೆ. ಜಿಲ್ಲಾ ಆಸ್ಪತ್ರೆಗೆ ಬರುತಿದ್ದಂತೆಯೇ ಅಂಬುಲನ್ಸ್ ಚಾಲಕ ವಾಹನ ನಿಲ್ಲಿಸಿ ಪರಾರಿಯಾದ್ದಾನೆ ಎಂದು ತಿಳಿಸಿದ್ದಾರೆ.

    ಆಸ್ಪತ್ರೆಗೆ ದಾಖಲಿಸಲು ರೋಗಿಯನ್ನು ಗ್ರಾಮದಿಂದ ಅರ್ಧ ದಾರಿಗೆ ಟಮ್ ಟಮ್ ವಾಹನದಲ್ಲಿ ಮನೆಯವರೇ ಕರೆದೊಯ್ದಿದ್ದರು. ನಂತರ ಅರ್ಧ ದಾರಿಗೆ ಬಂದ ಮೇಲೆ ಅಂಬುಲನ್ಸ್ ಬಂದಿತ್ತು. ಇದನ್ನೂ ಓದಿ: ಡ್ರೋನ್ ಮೂಲಕ ಔಷಧಿಗಳ ರವಾನೆಯ ಪರೀಕ್ಷಾರ್ಥ ಹಾರಾಟ

  • ಅಂಬುಲೆನ್ಸ್ ಸಿಗದೇ ಗೂಡ್ಸ್ ವಾಹನದಲ್ಲಿ ಮಹಿಳೆಯನ್ನು ಹೊತ್ತೊಯ್ದ ಕುಟುಂಬಸ್ಥರು

    ಅಂಬುಲೆನ್ಸ್ ಸಿಗದೇ ಗೂಡ್ಸ್ ವಾಹನದಲ್ಲಿ ಮಹಿಳೆಯನ್ನು ಹೊತ್ತೊಯ್ದ ಕುಟುಂಬಸ್ಥರು

    ಬೆಂಗಳೂರು: ಅಂಬ್ಯುಲೆನ್ಸ್ ಸಿಗದೇ ಗೂಡ್ಸ್ ವಾಹನದಲ್ಲಿ ಆಕ್ಸಿಜನ್ ಹಾಕಿ ಮಹಿಳೆಯನ್ನು ಮಲಗಿಸಿಕೊಂಡು ಆಸ್ಪತ್ರೆಗೆ ಕರೆದೊಯ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

     

    ಸದ್ಯ ಬೆಂಗಳೂರಿನ ರಾಮಚಂದ್ರಪುರದ ಮಹಿಳೆಯೊಬ್ಬರಿಗೆ ಐಸಿಯುನಲ್ಲಿ ಸರಿಯಾಗಿ ಬೆಡ್ ಸಿಗಲಿಲ್ಲ ಹಾಗೂ ಸರಿಯಾದ ಸಮಯಕ್ಕೆ ಅಂಬುಲೆನ್ಸ್ ಕೂಡ ಸಿಗಲಿಲ್ಲ. ಹೀಗಾಗಿ ಕುಟುಂಬಸ್ಥರು ಸಿಕ್ಕ ಗೂಡ್ಸ್ ವಾಹನದಲ್ಲಿ ಮಹಿಳೆಯನ್ನು ಮಲಗಿಸಿಕೊಂಡು ಏರ್ ಪೋರ್ಟ್ ರಸ್ತೆಯಲ್ಲಿರುವ ದೇವನಹಳ್ಳಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

    ಸದ್ಯ ಮಹಿಳೆಗೆ ಅಂಬುಲೆನ್ಸ್ ಸಿಗದೇ ಗೂಡ್ಸ್ ಗಾಡಿಯಲ್ಲಿ ಕುಟುಂಬಸ್ಥರು ಕರೆದೊಯ್ಯುತ್ತಿರುವ ಮನಕಲಕುವ ದೃಶ್ಯ ಕ್ಯಾಮೆರದಲ್ಲಿ ಸೆರೆಯಾಗಿದ್ದು, ನೋಡಿದವರ ಕರುಳು ಹಿಂಡುವಂತಿದೆ.

  • ರಂಜಾನ್ ಮರೆತು ಬಡವರ ಸೇವೆಗೆ ಮುಂದಾದ ಅಂಬುಲೆನ್ಸ್ ಚಾಲಕ

    ರಂಜಾನ್ ಮರೆತು ಬಡವರ ಸೇವೆಗೆ ಮುಂದಾದ ಅಂಬುಲೆನ್ಸ್ ಚಾಲಕ

    ಲಕ್ನೋ: ರಂಜಾನ್ ತಿಂಗಳಿನಲ್ಲಿ ಉಪವಾಸವಿರುವುದು ಬಹಳ ಅಪರೂಪ. ಆದರೆ ಪ್ರಯಾಗರಾಜದಲ್ಲಿರುವ ಅಂಬುಲೆನ್ಸ್ ಚಾಲಕರೊಬ್ಬರು ಉಪವಾಸ ಇರುವುದಕ್ಕಿಂತಲೂ ಕೋವಿಡ್ ಸಮಯದಲ್ಲಿ ಕೆಲಸ ಮಾಡುವುದು ಮುಖ್ಯವೆಂದು ಭಾವಿಸಿ, ಅಂಬುಲೆನ್ಸ್ ಓಡಿಸುವ ಮೂಲಕ ಬಡವರಿಗೆ ಉಚಿತವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ಅನಾಥರ ಕೊನೆಯ ವಿಧಿಗಳನ್ನು ನಿರ್ವಹಿಸಲು ಸಹಾಯ ಮಾಡುತ್ತಿದ್ದಾರೆ. ಜೊತೆಗೆ ಕೋವಿಡ್-19 ರೋಗಿಗಳ ಮೃತದೇಹವನ್ನು ಉಚಿತವಾಗಿ ಸಾಗಿಸಲು ಚಾಲಕ ವಾಹನಗಳನ್ನು ಓದಗಿಸುತ್ತಿದ್ದಾರೆ.

    ಪ್ರಯಾಗರಾಜ್ ಬಳಿಯ ಅತ್ತರ್ಸುಯಾ ಪ್ರದೇಶದ ನಿವಾಸಿ ಫೈಜಲ್ ಕಳೆದ 10 ವರ್ಷಗಳಿಂದ ಬಡವರ ಮೃತ ದೇಹಗಳನ್ನು ಉಚಿತವಾಗಿ ಸಾಗಿಸಲು ವಾಹನಗಳನ್ನು ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಅದರಲ್ಲೂ ಕೋವಿಡ್-19 ಸಂಕಷ್ಟದ ಸಮಯದಲ್ಲಿ ಹೆಚ್ಚಿನ ಸಮಯವನ್ನು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮೂಲಕ ಕಳೆಯುತ್ತಿದ್ದಾರೆ.

    ಈ ವಿಚಾರವಾಗಿ ಮಾತನಾಡಿದ ಅವರು, ಇದು ಕಷ್ಟದ ಸಮಯ. ನನಗೆ ಕರೆ ಬಂದ ಕೂಡಲೇ ನಾನು ಹೊರಹೋಗುತ್ತೇನೆ. ಇಂತಹ ಸಮಯದಲ್ಲಿ ನಾನು ಉಪವಾಸವಿರಲು ಸಾಧ್ಯವಿಲ್ಲ. ಇದನ್ನು ಅಲ್ಲಾಹನು ಅರ್ಥಮಾಡಿಕೊಳ್ಳುತ್ತಾನೆ ಎಂದು ನನಗೆ ತಿಳಿದಿದೆ. ನನ್ನನ್ನು ಲೌಕಿಕ ವಿಷಯಗಳಲ್ಲಿ ತೊಡಗಿಸಿಕೊಂಡರೆ ನನ್ನ ಕೆಲಸಕ್ಕೆ ಅಡಚಣೆಯಾಗಬಹುದು, ಹಾಗಾಗಿ ನಾನು ಮದುವೆಯಾಗಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

    ಫೈಜಲ್ ಯಾರನ್ನು ಹಣ ಕೇಳುವುದಿಲ್ಲ. ಆದರೆ ಯಾರಾದರೂ ಅವರಾಗಿ ಅವರೇ ಹಣ ನೀಡಿದರೆ ಮಾತ್ರ ಸ್ವೀಕರಿಸುತ್ತಾರೆ. ಮೊದಲಿಗೆ ಮೃತ ದೇಹಗಳನ್ನು ಬಂಡಿಯ ಮೂಲಕ ಸಾಗಿಸುತ್ತಿದ್ದರು. ಆದರೆ ನಂತರ ಸಾಲ ಪಡೆದು ಅಂಬುಲೆನ್ಸ್ ಖರೀದಿಸಿರುವುದಾಗಿ ಹೇಳಿಕೊಂಡಿದ್ದಾರೆ.