Tag: ಪಬ್ಲಿಕ್ ಟಿವಿ Allu Arjun

  • ಸ್ಟೈಲಿಶ್ ಸ್ಟಾರ್ ಅಲ್ಲುಗೆ ಜೋಡಿ ಆಗ್ತಾರಾ ಈ ಕನ್ನಡದ ನಟಿಯರು?

    ಸ್ಟೈಲಿಶ್ ಸ್ಟಾರ್ ಅಲ್ಲುಗೆ ಜೋಡಿ ಆಗ್ತಾರಾ ಈ ಕನ್ನಡದ ನಟಿಯರು?

    ಹೈದರಾಬಾದ್: ಟಾಲಿವುಡ್ ನಟ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್‍ರ ಮುಂದಿನ ಸಿನಿಮಾದಲ್ಲಿ ಕನ್ನಡದ ಇಬ್ಬರು ಬಿಗ್ ಸ್ಟಾರ್ ನಟಿಯರು ಜೋಡಿ ಆಗಲಿದ್ದಾರೆ ಎಂಬ ಸುದ್ದಿ ಇದೀಗ ಟಿ-ಟೌನ್‍ನಲ್ಲಿ ಭಾರೀ ಸದ್ದು ಮಾಡುತ್ತಿದೆ.

    ಸದ್ಯ ಪುಷ್ಪ ಸಿನಿಮಾದಲ್ಲಿ ಬ್ಯುಸಿಯಾಗಿರುವ ಅಲ್ಲು ಅರ್ಜುನ್ ಬಳಿಕ ವೇಣು ಶ್ರೀ ರಾಮ್ ಆ್ಯಕ್ಷನ್ ಕಟ್ ಹೇಳುತ್ತಿರುವ ‘ಐಕಾನ್’ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ವಿಶೇಷವೆಂದರೆ ಈ ಸಿನಿಮಾದಲ್ಲಿ ಇಬ್ಬರು ಹೀರೋಯಿನ್ ಇರಲಿದ್ದಾರೆ ಎನ್ನಲಾಗುತ್ತಿದೆ.

    ಅದರಲ್ಲಿಯೂ ಈ ಸಿನಿಮಾದಲ್ಲಿ ಅಲ್ಲುಗೆ ಜೋಡಿಯಾಗಿ ಕನ್ನಡದ ನಟಿ ಪೂಜಾ ಹೆಗ್ಡೆ ಹಾಗೂ ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣರನ್ನು ನಾಯಕಿಯರಾಗಿ ಆಯ್ಕೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಡಿಜೆ ಹಾಗೂ ಅಲಾ ವೈಕುಂಠಪುರಮುಲೋ ಸಿನಿಮಾದಲ್ಲಿ ಅಲ್ಲುಗೆ ಜೋಡಿಯಾಗಿ ಪೂಜಾ ಹೆಗ್ಡೆ ಮಿಂಚಿದ್ದರು. ಈ ಎರಡು ಸಿನಿಮಾಗಳು ಟಾಲಿವುಡ್ ಬಾಕ್ಸ್ ಆಫಿಸ್‍ನಲ್ಲಿ ಜೋರಾಗಿಯೇ ಸದ್ದು ಮಾಡಿತ್ತು.

    ಸದ್ಯ ರಶ್ಮಿಕಾ ಮಂದಣ್ಣ ಪುಷ್ಪ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಅಲ್ಲು ಅರ್ಜುನ್‍ಗೆ ನಾಯಕಿಯಾಗಿ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದು, ಈ ಸಿನಿಮಾ ಕುರಿತಂತೆ ಟಾಲಿವುಡ್‍ನಲ್ಲಿ ಬಹು ನಿರೀಕ್ಷೆ ಹುಟ್ಟಿಸಿದೆ.

    ಈ ಮಧ್ಯೆ ಐಕಾನ್ ಸಿನಿಮಾಕ್ಕಾಗಿ ಪೂಜಾ ಹೆಗ್ಡೆ ಹಾಗೂ ರಶ್ಮಿಕಾ ಮಂದಣ್ಣರಿಗೆ ಚಿತ್ರತಂಡ ಕಾಲ್ ಶೀಟ್ ಕೇಳಿದ್ದು, ಒಂದೇ ಸಿನಿಮಾದಲ್ಲಿ ಈ ಇಬ್ಬರು ನಟಿಯರು ಅಲ್ಲು ಅರ್ಜುನ್ ಜೊತೆಗೆ ಅಭಿನಯಿಸುತ್ತಾರಾ ಅಂತ ಕಾದು ನೋಡಬೇಕಾಗಿದೆ.  ಇದನ್ನೂ ಓದಿ:ಕೆಜಿಎಫ್ ನಟಿ ಮೌನಿ ರಾಯ್ ಹಾಟ್ ಲುಕ್‍ಗೆ ನೆಟ್ಟಿಗರು ಫಿದಾ

  • ಪ್ರೀತಿಯ ಮಳೆ ಸುರಿಸಿದ ನಿಮಗೆ ಒಳ್ಳೆಯದಾಗಲಿ – ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಅಲ್ಲು ಅರ್ಜುನ್

    ಪ್ರೀತಿಯ ಮಳೆ ಸುರಿಸಿದ ನಿಮಗೆ ಒಳ್ಳೆಯದಾಗಲಿ – ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಅಲ್ಲು ಅರ್ಜುನ್

    ಹೈದರಾಬಾದ್: ಟಾಲಿವುಡ್ ನಟ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಚಿತ್ರರಂಗಕ್ಕೆ ಪ್ರವೇಶಿ ಇಂದಿಗೆ 18 ವರ್ಷ ಪೂರ್ಣಗೊಂಡಿದೆ. ಈ ಹಿನ್ನೆಲೆ ಅಲ್ಲು ಅರ್ಜುನ್ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

    2003ರಲ್ಲಿ ಗಂಗೋತ್ರಿ ಸಿನಿಮಾದ ಮೂಲಕ ತೆಲುಗು ಚಿತ್ರರಂಗಕ್ಕೆ ಪ್ರವೇಶಿಸಿದ ಹಲವಾರು ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಅಭಿಮಾನಿಗಳಗೆ ಮನರಂಜನೆ ನೀಡಿದ್ದಾರೆ. ಈ ಕುರಿತಂತೆ ಅಲ್ಲು ಅರ್ಜುನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.

    ಇಷ್ಟು ವರ್ಷ ಅಭಿಮಾನಿಗಳು ನೀಡಿದ ಪ್ರೀತಿ ಹಾಗೂ ಬೆಂಬಲಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ. ಇಂದಿಗೆ ನನ್ನ ಮೊದಲ ಸಿನಿಮಾ ಗಂಗೋತ್ರಿ ಬಿಡುಗಡೆಯಾಗಿ 18 ವರ್ಷ ಕಳೆದಿದೆ. ನನ್ನ ಈ ಸಿನಿ ಜರ್ನಿಯಲ್ಲಿ ಭಾಗಿಯಾಗಿದ್ದ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಹೃದಯವು ಕೃತಜ್ಞತೆಗಳಿಂದ ತುಂಬಿದೆ. ಇಷ್ಟು ವರ್ಷ ನನಗೆ ಪ್ರೀತಿಯ ಮಳೆ ಸುರಿಸಿದ ಎಲ್ಲರಿಗೂ ನಿಜವಾಗಿಯೂ ಒಳ್ಳೆಯದಾಗಲಿ ಎಂದು ಬಯಸುತ್ತೇನೆ. ನಿಮ್ಮೆಲ್ಲರ ಆಶೀರ್ವಾದಗಳಿಗೆ ಧನ್ಯವಾದ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.

    ಗಂಗೋತ್ರಿ ಸಿನಿಮಾದ ಬಳಿಕ, 2004ರಲ್ಲಿ ನಿರ್ದೇಶಕ ಸುಕುಮಾರನ್ ಆ್ಯಕ್ಷನ್ ಕಟ್ ಹೇಳಿದ್ದ ಆರ್ಯ ಸಿನಿಮಾದಲ್ಲಿ ಅಭಿನಯಿಸಿದ್ದರು. 2005ರಲ್ಲಿ ಬನ್ನಿ, 2006ರಲ್ಲಿ ಹ್ಯಾಪಿ, 2007ರಲ್ಲಿ ದೇಸಮದುರು ಸಿನಿಮಾದಲ್ಲಿ ಅಭಿನಯಿಸಿದರು. ಇತ್ತೀಚೆಗೆ ಅಲಾ ವೈಕುಂಠಪುರಂಲೋ ಸಿನಿಮಾದಲ್ಲಿ ನಟಿಸಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದರು. ಇನ್ನೂ ಈ ಸಿನಿಮಾದಲ್ಲಿ ಅಲ್ಲು ಅರ್ಜುನ್‍ಗೆ ಜೋಡಿಯಾಗಿ ಪೂಜಾ ಹೆಗ್ಡೆ ಡ್ಯೂಯೆಟ್ ಹಾಡಿದ್ದರು. ಸಿನಿಮಾಕ್ಕೆ ತ್ರಿವಿಕ್ರಮ್ ಶ್ರೀನಿವಾಸ್ ಆ್ಯಕ್ಷನ್ ಕಟ್ ಹೇಳಿದ್ದರು.

    ಸದ್ಯ ಅಲ್ಲು ಅರ್ಜುನ್ ಪುಷ್ಪ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಈ ಸಿನಿಮಾದಲ್ಲಿ ಸ್ಟೈಲಿಷ್ ಸ್ಟಾರ್‍ಗೆ ಜೊತೆಯಾಗಿ ಕನ್ನಡದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ನಿರ್ದೇಶಕ ಸುಕುಮಾರನ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ದೇವಿ ಶ್ರೀ ಪ್ರಸಾದ್ ಸಂಗೀತಾ ಸಂಯೋಜಿಸಿದ್ದಾರೆ. ಈ ಸಿನಿಮಾ 5 ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದೆ.

  • ಹ್ಯಾಪಿ ಆ್ಯನಿವರ್ಸರಿ ನಮಗೆ ಕ್ಯೂಟಿ ಅಂದ ಅಲ್ಲು ಅರ್ಜುನ್

    ಹ್ಯಾಪಿ ಆ್ಯನಿವರ್ಸರಿ ನಮಗೆ ಕ್ಯೂಟಿ ಅಂದ ಅಲ್ಲು ಅರ್ಜುನ್

    ಹೈದರಾಬಾದ್: ಟಾಲಿವುಡ್ ಸ್ಟೈಲಿಶ್ ಸ್ಟಾರ್ ನಟ ಅಲ್ಲು ಅರ್ಜುನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಹತ್ತು ವರ್ಷ ಕಳೆದಿದೆ. ಇದೇ ಖುಷಿಯಲ್ಲಿ ಅಲ್ಲು ಅರ್ಜುನ್ ಪತ್ನಿ ಸ್ನೇಹ ರೆಡ್ಡಿ ಜೊತೆ ತಾಜ್‍ಮಹಲ್ ಮುಂದೆ ಕ್ಲಿಕ್ಕಿಸಿಕೊಂಡಿದ್ದ ಕೆಲ ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಶೇಷವೆಂದರೆ ಫೋಟೋಗಳ ಜೊತೆ ಅಲ್ಲು ಪತ್ನಿಯನ್ನು ಪ್ರೀತಿಯಿಂದ ಕ್ಯೂಟಿ ಎಂದು ಕರೆದಿರುವ ವಿಚಾರ ಬಹಿರಂಗಗೊಂಡಿದೆ. ಒಂದು ತಾಜ್ ಮಹಲ್ ಮುಂದೆ ಕ್ಲಿಕ್ಕಿಸಿಕೊಂಡಿರುವ ಫೋಟೋವಾದರೆ ಮತ್ತೊಂದು ಮದುವೆ ವೇಳೆ ಸೆರೆಹಿಡಿಯಲಾದ ಫೋಟೋವನ್ನು ಕೋಲಾಜ್ ಮಾಡಿ ಶೇರ್ ಮಾಡುವ ಮೂಲಕ ಸವಿನೆನಪುಗಳ ಮೆಲುಕು ಹಾಕಿದ್ದಾರೆ.

    ಫೋಟೋಗಳ ಶೇರ್ ಮಾಡಿರುವುದರ ಜೊತೆಗೆ, ಹ್ಯಾಪಿ ಆ್ಯನಿವರ್ಸರಿ ನಮಗೆ ಕ್ಯೂಟಿ. ಹತ್ತು ವರ್ಷಗಳು ಎಂತಹ ಅದ್ಭುತ ಪ್ರಯಾಣ. ಇನ್ನೂ ಅನೇಕ ವರ್ಷಗಳು ಹೀಗೆ ಬರಲಿ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ. ಇತ್ತೀಚೆಗಷ್ಟೇ ರಜೆಯನ್ನು ಎಂಜಾಯ್ ಮಾಡಲು ಅಲ್ಲು ಅರ್ಜುನ್ ಮತ್ತು ಕುಟುಂಬ ದುಬೈಗೆ ತೆರಳಿದ್ದರು. ಇದೀಗ ಒಂದೆರಡು ದಿನಗಳ ಹಿಂದೆಯಷ್ಟೇ ಹೈದರಾಬಾದ್‍ಗೆ ಹಿಂದಿರುಗಿದ್ದಾರೆ.

    ಸದ್ಯ ಅಲ್ಲು ಅರ್ಜುನ್ ನಟಿ ರಶ್ಮಿಕಾ ಮಂದಣ್ಣ ಜೊತೆ ಪುಷ್ಪಾ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಈ ಚಿತ್ರಕ್ಕೆ ನಿರ್ದೇಶಕ ಸುಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಆದರೆ ಅಲ್ಲು ಇಷ್ಟು ದಿನ ದುಬೈಗೆ ತೆರಳಿದ್ದ ಕಾರಣ ಸಿನಿಮಾ ತಯಾರಕರು ಕೇವಲ ರಶ್ಮಿಕಾ ಪಾತ್ರದ ಭಾಗಗಳನ್ನು ಚಿತ್ರೀಕರಿಸಿದ್ದರು. ಇನ್ನೂ ಈ ಸಿನಿಮಾದ ಟೀಸರ್‍ನನ್ನು ಅಲ್ಲು ಅರ್ಜುನ್ ಹುಟ್ಟುಹಬ್ಬದ ದಿನ ಬಿಡುಗಡೆಗೊಳಿಸಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಆದರೆ ಈ ಕುರಿತಂತೆ ಸಿನಿಮಾ ತಯಾಕರು ಯಾವುದೇ ರೀತಿ ಅಧಿಕೃತವಾಗಿ ಘೋಷಣೆ ಮಾಡಿಲ್ಲ.

     

    View this post on Instagram

     

    A post shared by Allu Arjun (@alluarjunonline)