Tag: ಪಬ್ಲಿಕ್ ಟಿವಿ Accused

  • ಜೈಲಿನಲ್ಲಿಯೇ ಆರೋಪಿಗಳ ಎಣ್ಣೆ ಪಾರ್ಟಿ- ವೀಡಿಯೋ ವೈರಲ್

    ಜೈಲಿನಲ್ಲಿಯೇ ಆರೋಪಿಗಳ ಎಣ್ಣೆ ಪಾರ್ಟಿ- ವೀಡಿಯೋ ವೈರಲ್

    ನವದೆಹಲಿ: ದೆಹಲಿಯ ಜೈಲಿನಲ್ಲಿಯೇ ಆರೋಪಿಗಳು ಮೋಜು-ಮಸ್ತಿ ಮಾಡುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಈ ವೀಡಿಯೋವನ್ನು ನೀರಜ್ ಬಾವಾನ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ದೆಹಲಿ ದರೋಡೆಕೋರ ನೀರಜ್ ಬವಾನಾ ಸಹೋದರರಾದ ರಾಹುಲ್ ಕಲಾ ಮತ್ತು ನವೀನ್ ಬಾಲಿಯನ್ನು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದರು. ಆಗಸ್ಟ್ 5 ರಂದು ಇವರನ್ನು ಬಂಧಿಸುವುದಕ್ಕಿಂತಲೂ ಮೊದಲು ಮಂಡೋಲಿ ಜೈಲಿನಲ್ಲಿದ್ದರು. ಆದರೆ ವಿಶೇಷ ಸೆಲ್‍ನಿಂದ ಅವರನ್ನು ಆಗಸ್ಟ್ 10ರವರೆಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ:ಕಾರು ಸಮೇತ ಭದ್ರಾ ನಾಲೆಗೆ ಬಿದ್ದು ನಾಲ್ವರು ಆತ್ಮಹತ್ಯೆಗೆ ಯತ್ನ

    ಸದ್ಯ ಈ ವೀಡಿಯೋ ವಿಶೇಷ ಸೆಲ್‍ನದ್ದೋ ಅಥವಾ ಮಂಡೋಲಿ ಜೈಲಿನದ್ದೋ ಎಂಬುವುದರ ಬಗ್ಗೆ ಮಾಹಿತಿಯಿಲ್ಲ. ಈ ಕುರಿತಂತೆ ಪೊಲೀಸ್ ಮಹಾನಿರ್ದೇಶಕ ಸಂದೀಪ್ ಗೋಯಲ್‍ರನ್ನು ಪ್ರಶ್ನಿಸಿದಾಗ ಈ ಬಗ್ಗೆ ನಾವು ಪರಿಶೀಲಿಸಬೇಕಾಗಿದೆ ಎಂದು ಹೇಳಿದ್ದಾರೆ. ವೀಡಿಯೋದ ಅಸಲಿ ಸತ್ಯದ ಬಗ್ಗೆ ಸದ್ಯ ಪೊಲೀಸರಿಂದ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ.

    24 ಸೆಕೆಂಡ್ ಇರುವ ಈ ವೀಡಿಯೋದಲ್ಲಿ ಆರೋಪಿಗಳು ಮದ್ಯ, ತಿಂಡಿ ಮತ್ತು ಧೂಮಪಾನ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಎಲ್ಲರೂ ಹಾಸಿಗೆ ಮೇಲೆ ಕುಳಿತುಕೊಂಡಿದ್ದರೆ, ಒಬ್ಬರು ಈ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.  ಈ ವೀಡಿಯೋ ವಿಚಾರವಾಗಿ ದೆಹಲಿ ಪೊಲೀಸ್ ವಕ್ತಾರ ಚಿನ್ಮೊಯ್ ಬಿಸ್ವಾಲ್, ವೀಡಿಯೋ ಬಗ್ಗೆ ಯಾವುದೇ ದೃಢಿಕರಿಸಲಾಗಿಲ್ಲ ಮತ್ತು ಲಾಕ್ ಅಪ್‍ನಲ್ಲಿ ಮದ್ಯವನ್ನು ನೀಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:1ರಿಂದ 8ನೇ ತರಗತಿ ಶಾಲೆಗಳ ಆರಂಭ – ಆ. 30 ರಂದು ಸಿಎಂ ನೇತೃತ್ವದಲ್ಲಿ ಸಭೆ

  • ಅಪ್ರಾಪ್ತೆಯ ಅಶ್ಲೀಲ ಫೋಟೋ ಶೇರ್ ಮಾಡಿದ್ದ ಆರೋಪಿ ಬಂಧನ

    ಅಪ್ರಾಪ್ತೆಯ ಅಶ್ಲೀಲ ಫೋಟೋ ಶೇರ್ ಮಾಡಿದ್ದ ಆರೋಪಿ ಬಂಧನ

    ನವದೆಹಲಿ: ಸೋಶಿಯಲ್ ಮೀಡಿಯಾದಲ್ಲಿ ಅಪ್ರಾಪ್ತ ಬಾಲಕಿಯ ಅಶ್ಲೀಲ ಫೋಟೋವನ್ನು ಶೇರ್ ಮಾಡಿದ್ದ 25 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಬಾಲಕಿ ತನ್ನ ಸ್ನೇಹಿತನೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ನಡೆಸಿದ ಸಂಭಾಷಣೆಯನ್ನು ಹಾಗೂ ಆಕೆಯ ಅಶ್ಲೀಲ ಫೋಟೋವನ್ನು ಆರೋಪಿ ಭರತ್ ಖಾತರ್ ಎಂಬಾತ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾನೆ.

    ಆರೋಪಿ ಭರತ್ ಖಾತರ್ ಈವೆಂಟ್ ಮ್ಯಾನೆಜ್ಮೆಂಟ್ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಆರೋಪಿ ನಡೆಸುತ್ತಿದ್ದ ಚಟುವಟಿಕೆ ಬಗ್ಗೆ ಮಾಹಿತಿ ದೊರೆತ ಮೇರೆಗೆ ಪೊಲೀಸರು ಆತನನ್ನು ಫರಿದಾಬಾದ್ ಮನೆಯಲ್ಲಿ ಬಂಧಿಸಿದ್ದಾರೆ ಹಾಗೂ ಆರೋಪಿ ಬಳಿ ಇದ್ದ ಮೊಬೈಲ್‍ನನ್ನು ವಶ ಪಡಿಸಿಕೊಂಡಿದ್ದಾರೆ.

    ವಿಚಾರಣೆ ವೇಳೆ ಆರೋಪಿ ಈ ಹಿಂದೆ ದೂರು ನೀಡಿರುವ ಬಾಲಕಿಯೊಂದಿಗೆ ಸ್ನೇಹ ಹೊಂದಿರುವುದಾಗಿ ತಿಳಿಸಿದ್ದಾನೆ. ನಂತರ ಆಕೆಯ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ, ನಕಲಿ ಖಾತೆಯನ್ನು ರಚಿಸಿ ಬಾಲಕಿಯ ಜೊತೆ ನಡೆಸಿದ ನಿಂದನೀಯ ಸಂಭಾಷಣೆ ಹಾಗೂ ನಗ್ನ ಫೋಟೋವನ್ನು ಶೇರ್ ಮಾಡುವ ಮೂಲಕ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಅಫೀಮು ಸೇವನೆ, ಮಾರಾಟ ಮಾಡ್ತಿದ್ದ ಇಬ್ಬರ ಬಂಧನ

    ಅಫೀಮು ಸೇವನೆ, ಮಾರಾಟ ಮಾಡ್ತಿದ್ದ ಇಬ್ಬರ ಬಂಧನ

    ಚಿಕ್ಕಬಳ್ಳಾಪುರ: ಮಾದಕ ವಸ್ತು ಅಫೀಮು ಸೇವನೆ ಹಾಗೂ ಮಾರಾಟ ಮಾಡುತ್ತಿದ್ದ ಇಬ್ಬರು ಖದೀಮರನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.

    ಮೂಲತಃ ರಾಜಸ್ಥಾನದವರಾದ ರಾಣಾ ಸಿಂಗ್ ಹಾಗೂ ಜೋಧು ಸಿಂಗ್ ಬಂಧಿತರು. ಇವರು ನಗರದ ಪ್ರಶಾಂತ ನಗರದಲ್ಲಿ ವಾಸವಾಗಿದ್ದಾರೆ. ಅಂದಹಾಗೆ 2003 ರಿಂದಲೇ ಚಿಕ್ಕಬಳ್ಳಾಪುರ ನಗರದಲ್ಲಿ ನೆಲೆಸಿದ್ದ ರಾಣಾಸಿಂಗ್ ಬಟ್ಟೆ ಅಂಗಡಿ, ಯೂಸ್ ಅಂಡ್ ಥ್ರೋ ಪ್ಲಾಸ್ಟಿಕ್ ಪೇಪರ್, ತಟ್ಟೆ, ಪರಿಕರಗಳ ಅಂಗಡಿ ಇಟ್ಟುಕೊಂಡಿದ್ದನು.

    ಇವರಿಬ್ಬರು ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ರೂಮ್ ಬಾಡಿಗೆ ಪಡೆದಿದ್ದು, ರೂಮ್‍ನಲ್ಲಿ ಪ್ರತಿದಿನ ಬೆಳಗ್ಗೆ ಸಂಜೆ ಅಫೀಮು ಸೇವನೆ ಮಾಡುತ್ತಿದ್ದರು ಹಾಗೂ ತಮ್ಮದೇ ಸಮುದಾಯದ ಹಲವರಿಗೆ ಮಾರಾಟ ಮಾಡುತ್ತಿದ್ದರು.

    ಈ ಕುರಿತಂತೆ ಖಚಿತ ಮಾಹಿತಿ ಮೇರೆಗೆ ಚಿಕ್ಕಬಳ್ಳಾಪುರ ಡಿವೈಎಸ್‍ಪಿ ರವಿಶಂಕರ್ ನೇತೃತ್ವದ ತಂಡ ಬಟ್ಟೆ ಅಂಗಡಿ ಹಾಗೂ ರೂಮ್ ಮೇಲೆ ದಾಳಿ ನಡೆಸಿ ಸರಿಸುಮಾರು 3 ಲಕ್ಷ ಮೌಲ್ಯದ 388 ಗ್ರಾಂ ಅಫೀಮು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರಿಯಲ್ ಲೈಫ್ ಮುನ್ನಬಾಯ್ MBBS – ಮತ್ತೊಬ್ಬರ ಕೈನಲ್ಲಿ ಮೆಡಿಕಲ್ ಎಕ್ಸಾಂ ಬರೆಸಿದ ಭೂಪ

    ರಿಯಲ್ ಲೈಫ್ ಮುನ್ನಬಾಯ್ MBBS – ಮತ್ತೊಬ್ಬರ ಕೈನಲ್ಲಿ ಮೆಡಿಕಲ್ ಎಕ್ಸಾಂ ಬರೆಸಿದ ಭೂಪ

    ಜೈಪುರ: ಬಾಲಿವುಡ್‍ನ ಫೇಮಸ್ ಚಲನಚಿತ್ರ ಮುನ್ನಬಾಯ್ ಎಂಬಿಬಿಎಸ್ ಸಿನಿಮಾದ ರೀತಿಯ ಘಟನೆಯೊಂದು ನಿಜ ಜೀವನದಲ್ಲಿ ನಡೆದಿದೆ. ತಜಕಿಸ್ತಾನದಿಂದ ಎಂಬಿಬಿಎಸ್ ಪದವಿ ಪಡೆದ ವ್ಯಕ್ತಿಯೋರ್ವ ಪರೀಕ್ಷೆ ಬರೆಯಲು ಮತ್ತೊಬ್ಬ ವ್ಯಕ್ತಿಯನ್ನು ತನ್ನ ಜಾಗದಲ್ಲಿ ಕೂರಿಸಿದ ಆರೋಪದಡಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು ಮನೋಹರ್ ಸಿಂಗ್ ಎಂದು ಗುರುತಿಸಲಾಗಿದ್ದು, ಈತ ರಾಜಸ್ಥಾನ ಪಾಲಿ ಜಿಲ್ಲೆಯ ನಿವಾಸಿಯಾಗಿದ್ದಾನೆ. ಆರೋಪಿ ಮನೋಹರ್ ಸಿಂಗ್ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾದ ರಾಷ್ಟ್ರೀಯ ಪರೀಕ್ಷಾ ಮಂಡಳಿ(ಎನ್‍ಬಿಇ) ನಡೆಸಿದ ವಿದೇಶಿ ವೈದ್ಯಕೀಯ ಪದವೀಧರರ ಪರೀಕ್ಷೆ ಬರೆಯಲು ತನ್ನ ಹೆಸರನ್ನು ನೋಂದಾಯಿಸಿಕೊಂಡಿದ್ದನು.

    ಇತರ ದೇಶಗಳ ಪ್ರಾಥಮಿಕ ವೈದ್ಯಕೀಯ ಕೋರ್ಸ್‍ಗಳನ್ನು ಪೂರ್ಣಗೊಳಿಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಭಾರತೀಯರಿಗಾಗಿ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ. ಕೊನೆಯ ಎಫ್‍ಎಂಜಿಇ ಸ್ಕ್ರೀನಿಂಗ್ ಪರೀಕ್ಷೆಯನ್ನು 2020ರ ಡಿಸೆಂಬರ್ 4 ರಂದು ನಡೆಸಲಾಗಿತ್ತು ಮತ್ತು ಮನೋಹರ್ ಸಿಂಗ್‍ಗೆ ಮಥುರಾ ರಸ್ತೆಯಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ನೀಡಲಾಗಿತ್ತು. ಪರೀಕ್ಷೆ ವೇಳೆ ಅರ್ಜಿ ನಮೂನೆಯಲ್ಲಿ ಸಲ್ಲಿಸಲಾಗಿದ್ದ ಫೋಟೋ ಮತ್ತು ಪರೀಕ್ಷಾ ದಿನದಂದು ತೆಗೆದ ಎರಡು ಫೋಟೋಗಳ ನಡುವೆ ಹೊಂದಾಣಿಕೆಯಿಲ್ಲದಿರುವುದರಿಂದ ಮನೋಹರ್ ಸಿಂಗ್‍ನನ್ನು ಫೇಸ್ ಐಡಿ ಪರಿಶೀಲನೆ ನಡೆಸಲು ಫೆಬ್ರವರಿ 13ರಂದು ಕರೆಯಲಾಗಿತ್ತು. ಆದರೆ ಆತ ಪರಿಶೀಲನೆಗೆ ಬಂದಿರಲಿಲ್ಲ.

    ಬುಧವಾರ ಫೇಸ್ ಐಡಿ ಪರಿಶೀಲನೆಗೆಂದು ಮನೋಹರ್ ಸಿಂಗ್ ಎನ್‍ಇಬಿಗೆ ಭೇಟಿ ನೀಡಿದ್ದನು. ಈ ವೇಳೆ ಪರೀಕ್ಷೆಯ ದಿನದಂದು ತೆಗೆದ ಫೋಟೋದೊಂದಿಗೆ ಫೇಸ್ ಐಡಿ ಕುರಿತಂತೆ ಪರಿಶೀಲನೆ ನಡೆಸಿದಾಗ ಹೊಂದಾಣಿಕೆ ಕಂಡು ಬಂದಿಲ್ಲ. ಹೀಗಾಗಿ ಆರೋಪಿಯನ್ನು ಪ್ರಶ್ನಿಸಿದಾಗ ತಪ್ಪಾಗಿ ಉತ್ತರ ನೀಡಿದ್ದಾನೆ. ಇದರಿಂದ ಅನುಮಾನಗೊಂಡು ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಈ ವೇಳೆ ಆತನ ಬಳಿ ಇದ್ದ ಪರೀಕ್ಷಾ ಪ್ರವೇಶ ಪತ್ರ, ಎಂಬಿಬಿಎಸ್ ಪದವಿ ಅರ್ಜಿ ನಮೂನೆಗಳನ್ನು ವಶಪಡಿಸಿಕೊಂಡಿರುವುದಾಗಿ ಎಂದು ಉಪ ಪೊಲೀಸ್ ಆಯುಕ್ತ(ಆಗ್ನೇಯ) ಆರ್ ಪಿ ಮೀನಾ ತಿಳಿಸಿದ್ದಾರೆ.

    ಬಳಿಕ ವಿಚಾರಣೆ ವೇಳೆ, ಆರೋಪಿ ತಜಕಿಸ್ತಾನದಿಂದ ಎಂಬಿಬಿಎಸ್ ಪದವಿ ಪಡೆದಿದ್ದು, ಆರು ವರ್ಷಗಳಿಂದ ಎಫ್‍ಎಂಜಿಇ ಪರೀಕ್ಷೆ ಪಾಸ್ ಮಾಡಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾನೆ. ಅಲ್ಲದೆ ಪರೀಕ್ಷೆ ಬರೆಯಲು ವೈದ್ಯರೊಬ್ಬರನ್ನು ಭೇಟಿ ಮಾಡಿದ್ದು ಮನೋಹರ್ ಸಿಂಗ್ ಬಳಿ ವೈದ್ಯ 4 ಲಕ್ಷ ರೂ. ಪಡೆದಿರುವುದಾಗಿ ಹೇಳಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.