Tag: ಪಬ್ಲಿಕ್ ಟಿವಿ Aadhaar card

  • ಅಕ್ರಮವಾಗಿ ಆಧಾರ್ ಕಾರ್ಡ್ ತಯಾರಿಸಿದ್ದ ಮೂವರ ಬಂಧನ

    ಅಕ್ರಮವಾಗಿ ಆಧಾರ್ ಕಾರ್ಡ್ ತಯಾರಿಸಿದ್ದ ಮೂವರ ಬಂಧನ

    ಡಿಸ್ಪೂರ್: ಅಕ್ರಮವಾಗಿ ಆಧಾರ್ ಕಾರ್ಡ್ ತಯಾರಿಸುತ್ತಿದ್ದ ಕೇಂದ್ರದ ಮೇಲೆ ಪೊಲೀಸರು ದಾಳಿ ನಡೆಸಿರುವ ಘಟನೆ ಅಸ್ಸಾಂನ ದಿಬ್ರುಗಢದಲ್ಲಿ ನಡೆದಿದೆ.

    ಆರೋಪಿಗಳನ್ನು ಡಿಪೆನ್ ಡೋಲಿ(29), ಬಿಟುಪನ್ ಡಿಯೋರಿ(27) ಮತ್ತು ಐಬಿ ಡಿಯೋರಿ(30) ಎಂದು ಗುರುತಿಸಲಾಗಿದೆ. ಈ ಮೂವರು ದಿಬ್ರುಗಢದಿಂದ 120ಕಿ.ಮೀ ದೂರದಲ್ಲಿರುವ ಲಖಿಂಪುರದವರು. ಆರೋಪಿಗಳು ಒಂದು ಆಧಾರ್ ಕಾರ್ಡ್ ತಯಾರಿಸಲು ತಲಾ 300 ರೂ. ಪಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ ಅವರ ಬಳಿ ಇದ್ದ ಕಂಪ್ಯೂಟರ್, ಲ್ಯಾಪ್‍ಟಾಪ್, ಆಧಾರ್ ಕಾರ್ಡ್ 5, ಸಾವಿರ ಹಣ ಸೇರಿದಂತೆ ಟಾಟಾ ನೆಕ್ಸೋನ್ ಕಾರನ್ನು ವಶಪಡಿಸಿಕೊಂಡಿದ್ದಾರೆ.

    ರಾಜ್ಯದಲ್ಲಿ ಹಲವಾರು ಕೇಂದ್ರಗಳಲ್ಲಿ ಇದೇ ರೀತಿ ಅಕ್ರಮ ಆಧಾರ್ ಕಾರ್ಡ್‍ಗಳನ್ನು ತಯಾರಿಸಲಾಗುತ್ತಿದ್ದು, ಇದರಿಂದ ಆರೋಪಿಗಳು ಸಾಕಷ್ಟು ಹಣ ಸಂಪಾದಿಸುತ್ತಿದ್ದಾರೆ. ಸದ್ಯ ನಾವು ಪ್ರಕರಣ ಕುರಿತಂತೆ ತನಿಖೆ ನಡೆಸುತ್ತಿದ್ದೇವೆ ಮತ್ತು ಶೀಘ್ರವೇ ದಿಬ್ರುಗಢದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ರಮ ಆಧಾರ್ ಕಾರ್ಡಿನ ಎಲ್ಲಾ ಕೇಂದ್ರಗಳನ್ನು ಭೇದಿಸುತ್ತೇವೆ ಎಂದು ದಿಬ್ರುಗಢದ ಪೊಲೀಸ್ ಅಧಿಕಾರಿ ರಾಜೀವ್ ಸೈಕಿಯಾ ಹೇಳಿದ್ದಾರೆ.