Tag: ಪಬ್ಲಿಕ್ ಟಿವಿ ಸರ್ಕಾರ

  • ಡ್ರಗ್ಸ್ ಪ್ರಕರಣ ಸಂಬಂಧ ಯಾರ ಒತ್ತಡಕ್ಕೂ ಪೊಲೀಸರು ಹಿಂಜರಿಯುವುದಿಲ್ಲ: ಅರಗ ಜ್ಞಾನೇಂದ್ರ

    ಡ್ರಗ್ಸ್ ಪ್ರಕರಣ ಸಂಬಂಧ ಯಾರ ಒತ್ತಡಕ್ಕೂ ಪೊಲೀಸರು ಹಿಂಜರಿಯುವುದಿಲ್ಲ: ಅರಗ ಜ್ಞಾನೇಂದ್ರ

    ಬೆಳಗಾವಿ: ಸ್ಯಾಂಡಲ್‍ವುಡ್ ಡ್ರಗ್ಸ್ ಕೇಸ್‍ನಲ್ಲಿ ಯಾವುದೇ ರೀತಿಯ ಒತ್ತಡಗಳು ಕೇವಲ ಊಹಾಪೋಹ. ಯಾರ ಒತ್ತಡಕ್ಕೂ ನಮ್ಮ ಪೊಲೀಸರು ಹಿಂಜರಿಯುವುದಿಲ್ಲ. ಯಾರು ಡ್ರಗ್ಸ್ ಕೇಸ್‍ನಲ್ಲಿ ಭಾಗವಹಿಸಿದ್ದರೋ ಅವರು ಶಿಕ್ಷೆ ಅನುಭವಿಸುತ್ತಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.

    ನಟಿ, ನಿರೂಪಕಿ ಅನುಶ್ರೀ ಅವರ ಮೇಲೆ ರಾಜಕೀಯ ಬೆಂಬಲ ಇರುವ ಹಿನ್ನೆಲೆ ಡ್ರಗ್ಸ್ ಕೇಸ್‍ನಲ್ಲಿ ಸಾಫ್ಟ್ ಕಾರ್ನರ್ ತೋರಲಾಗುತ್ತಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಂತಹದರಲ್ಲಿ ಯಾರು ಕೂಡ ಒತ್ತಡ ಮಾಡುವುದಿಲ್ಲ. ಡ್ರಗ್ಸ್ ಕೇಸ್‍ನಲ್ಲಿ ಬಹಳ ಕಠಿಣವಾದ ನಿರ್ಧಾರವನ್ನು ನಮ್ಮ ಸರ್ಕಾರ ತೆಗೆದುಕೊಂಡಿದೆ. ಮುಂದೆಯು ತೆಗೆದುಕೊಳ್ಳುತ್ತದೆ ಎಂದರು. ಇದನ್ನೂ ಓದಿ: ಡ್ರಗ್ಸ್ ಪ್ರಕರಣದ ಬಗ್ಗೆ ಅಂದು ಕಣ್ಣೀರಿಟ್ಟು ಅನುಶ್ರೀ ಹೇಳಿದ್ದೇನು?

    ಯಾವುದೇ ಕಾರಣಕ್ಕೂ ಯಾರನ್ನು ಬಿಡುವ ಪ್ರಶ್ನೆಯೇ ಇಲ್ಲ. ನಿಜವಾದ ಅಪರಾಧಿಗಳಾದರೆ ಅವರು ಶಿಕ್ಷೆಗೆ ಒಳಗಾಗುತ್ತಾರೆ. ಎಷ್ಟೇ ಪ್ರಭಾವಿಗಳಾದರೂ ಖಂಡಿತವಾಗಲೂ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಇನ್ನು ಚಾರ್ಜ್ ಶೀಟ್‍ನಲ್ಲಿ ಅನುಶ್ರೀ ಹೆಸರು ಕೇಳಿಬಂದಿರುವ ವಿಚಾರಕ್ಕೆ ಬಿಡುವ ಪ್ರಶ್ನೆಯೇ ಇಲ್ಲ, ಮಾಹಿತಿ ತೆಗೆದುಕೊಂಡು ಮುಂದಿನ ಕ್ರಮದ ಬಗ್ಗೆ ತಿಳಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: Exclusive: ಅನುಶ್ರೀ ವಿರುದ್ಧ ನಾನು ಹೇಳಿಕೆ ನೀಡಿದ್ದೇನೆ ಎಂಬುದು ಸುಳ್ಳು: ಕಿಶೋರ್ ಅಮನ್ ಶೆಟ್ಟಿ

  • ಶೀಘ್ರವೇ ಗುಣಮುಖರಾಗುವಂತೆ ಡಿಕೆಶಿಗೆ ಬಿಎಸ್‍ವೈ ಹಾರೈಕೆ

    ಶೀಘ್ರವೇ ಗುಣಮುಖರಾಗುವಂತೆ ಡಿಕೆಶಿಗೆ ಬಿಎಸ್‍ವೈ ಹಾರೈಕೆ

    ಬೆಂಗಳೂರು: ಕೊರೊನಾ ಪಾಸಿಟಿವ್ ದೃಢಪಟ್ಟು ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

    ಇಂದು ಬೆಳಗ್ಗೆ ದೂರವಾಣಿ ಮೂಲಕ ಡಿಕೆಶಿ ಆರೋಗ್ಯ ವಿಚಾರಿಸಿದ ಸಿಎಂ, ಶೀಘ್ರವೇ ಗುಣಮುಖರಾಗುವಂತೆ ತಿಳಿಸಿದ್ದಾರೆ. ಅಲ್ಲದೆ ಆದಷ್ಟು ಬೇಗ ಚೇತರಿಸಿಕೊಂಡು ಮರಳುವಂತೆ ಸಿಎಂ ಡಿಕೆಶಿಗೆ ಹಾರೈಸಿದ್ದಾರೆ.

    ನಿನ್ನೆ ಟ್ವೀಟ್ ಮಾಡಿದ್ದ ಡಿಕೆಶಿ, ಕಳೆದ ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದು, ಕೊರೊನಾ ಟೆಸ್ಟ್ ಮಾಡಿದ ವೇಳೆ ವರದಿ ಪಾಸಿಟಿವ್ ಎಂದು ಬಂದಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಆರೋಗ್ಯವಾಗಿದ್ದೇನೆ. ನಿಮ್ಮೆಲ್ಲರ ಆಶೀವಾದದಿಂದ ಶೀಘ್ರವೇ ಗುಣಮುಖವಾಗಿ ಬರುತ್ತೇನೆ. ಅಲ್ಲದೆ ಕೆಲ ದಿನಗಳಿಂದ ನನ್ನೊಂದಿಗೆ ಸಂಪರ್ಕದಲ್ಲಿದ್ದ ಎಲ್ಲರೂ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಮನವಿ ಕೂಡ ಮಾಡಿಕೊಂಡಿದ್ದಾರೆ.