Tag: ಪಬ್ಲಿಕ್ ಟಿವಿ ಬೆಂಗಳೂರು

  • ಒಂದೂವರೆ ತಿಂಗ್ಳ ಹಿಂದೆ ಮದ್ವೆಯಾಗಿದ್ದ ನವವಿವಾಹಿತೆ ನೇಣಿಗೆ ಶರಣು

    ಒಂದೂವರೆ ತಿಂಗ್ಳ ಹಿಂದೆ ಮದ್ವೆಯಾಗಿದ್ದ ನವವಿವಾಹಿತೆ ನೇಣಿಗೆ ಶರಣು

    ಬೆಂಗಳೂರು: ಒಂದೂವರೆ ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣಿಗೆ ಶರಣಾದ ಘಟನೆ ಬೆಂಗಳೂರಿನ ಕೋಣನಕುಂಟೆ ಆದರ್ಶ ನಗರದಲ್ಲಿ ನಡೆದಿದೆ.

    ಪಲ್ಲವಿ (24) ಮೃತ ದುರ್ದೈವಿ. ಪಲ್ಲವಿ ಮೂಲತಃ ಬಂಗಾರಪೇಟೆಯ ನಿವಾಸಿ ಆಗಿದ್ದು, ಒಂದೂವರೆ ತಿಂಗಳ ಹಿಂದೆಯಷ್ಟೇ ನವೀನ್ ಎಂಬವರನ್ನು ಮದುವೆ ಆಗಿದ್ದರು.

    ಮನೆಯಲ್ಲಿ ಯಾರು ಇಲ್ಲದ ವೇಳೆ ಪಲ್ಲವಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸದ್ಯ ಪಲ್ಲವಿಯ ಪೋಷಕರು ಗಂಡನ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸುತ್ತಿದ್ದಾರೆ.

    ಈ ಬಗ್ಗೆ ಮಾತನಾಡಿದ ಪಲ್ಲವಿಯ ತಂದೆ, “ನಾನು ಗಾರೆ ಕೆಲಸ ಮಾಡಿ ಆಕೆಯನ್ನು ಓದಿಸಿ ಈ ಮನೆಗೆ ಮದುವೆ ಮಾಡಿಕೊಟ್ಟೆ. ಆದರೆ ಪತಿಯ ಮನೆಯವರು ಪಲ್ಲವಿಗೆ ಆಗಾಗ ಕಿರುಕುಳ ನೀಡುತ್ತಿದ್ದರು. ನನ್ನ ಮಗಳು ಮೊಬೈಲ್ ಕೂಡ ಬಳಸುತ್ತಿರಲಿಲ್ಲ. ನಾನು ಕೊಡಿಸುತ್ತೇನೆ ಎಂದರು ಆಕೆ ಬೇಡ ಎಂದು ಹೇಳುತ್ತಿದ್ದಳು. ಹಣಕ್ಕಾಗಿ ನನ್ನ ಮಗಳಿಗೆ ಕಿರುಕುಳ ನೀಡಿದ್ದಾರೆ. ನಾನೇ ಒಂದು ಬಾರಿ ಅವರಿಗೆ ಹಣ ನೀಡಿದ್ದೇನೆ” ಎಂದು ಹೇಳಿದ್ದಾರೆ.

    ಪಲ್ಲವಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಎಂದು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ದಾಖಲಾಗಿದೆ.

  • ಕಾಲೇಜು ವಿದ್ಯಾರ್ಥಿಗಳಿಂದ ವಿಶೇಷ ರೀತಿಯಲ್ಲಿ ಫೆಸ್ಟ್ ಆಚರಣೆ

    ಕಾಲೇಜು ವಿದ್ಯಾರ್ಥಿಗಳಿಂದ ವಿಶೇಷ ರೀತಿಯಲ್ಲಿ ಫೆಸ್ಟ್ ಆಚರಣೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪ್ರತಿನಿತ್ಯ ಅನೇಕ ಉತ್ಸವ, ಫೆಸ್ಟ್ ಗಳನ್ನು ಕಾಣುತ್ತೇವೆ. ಆದರೆ ಇಲ್ಲಿಯ ಕಾಲೇಜಿನಲ್ಲಿ ಫೆಸ್ಟ್ ಮಾತ್ರ ಡಿಫರೆಂಟ್ ಆಗಿತ್ತು. ಅಲ್ಲಿ ವಿದ್ಯಾರ್ಥಿಗಳೆಲ್ಲಾ ಹೊಸ ಲೋಕ ಸೃಷ್ಟಿಸಿದರು.

    ನಗರದ ಪೀಣ್ಯದಲ್ಲಿರೋ ಎನ್‍ಟಿಟಿಎಫ್ ಟ್ರೈನಿಂಗ್ ಸೆಂಟರ್ ನಲ್ಲಿ ಗುರುವಾರ ಫೆಸ್ಟ್ ನಡೆದಿದೆ. ಕಾಲೇಜು ಕ್ಯಾಂಪಸ್‍ನಲ್ಲಿ ಗುರುವಾರ ಕಲಾಸಂಗಮ ಎಂಬ ಹೆಸರಿನಲ್ಲಿ ಕಲ್ಚರಲ್ ಫೆಸ್ಟ್ ಆಯೋಜಿಸಲಾಗಿತ್ತು. ಈ ಫೆಸ್ಟ್ ಅನ್ನು ನಿರ್ದೇಶಕ ಯೋಗರಾಜ್ ಭಟ್ ಉದ್ಘಾಟಿಸಿದರು. ಇಲ್ಲಿ ವಿವಿಧ ರಾಜ್ಯಗಳ ಜಾನಪದ ಕಲೆಗಳನ್ನು, ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದರು. 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಜಾನಪದ ಕಲೆಗಳನ್ನು ಅನಾವರಣಗೊಳಿಸಿದರು.

    ನಮ್ಮ ಕೃಷಿಕರ ಸುಗ್ಗಿ ನೃತ್ಯ ಹಳ್ಳಿ ಸೊಬಗನ್ನು ಬಿಂಬಿಸಿತ್ತು. ರಾಜಸ್ಥಾನದ ಸಂಸ್ಕೃತಿಯನ್ನು ಬಿಂಬಿಸುವ ನೃತ್ಯ ಎಲ್ಲರನ್ನೂ ಆಕರ್ಷಿಸಿತ್ತು. ಬೆಂಗಾಲಿ, ತುಳು ನಾಡಿನ ಸಂಸ್ಕೃತಿಯನ್ನು ಸಾರುವುದರ ಜೊತೆಗೆ ಅನೇಕ ನೃತ್ಯಗಳು ಎಲ್ಲರ ಹುಬ್ಬೇರಿಸುವಂತೆ ಮಾಡಿದವು. ಜೊತೆಗೆ ಯೋಧರಿಗೆ ತಮ್ಮ ಪ್ರದರ್ಶನದ ಮೂಲಕ ಹಾಟ್ಸಾಫ್ ಹೇಳಿದರು. ಜುಂಗಲ್ ಬಂದಿ ಎಲ್ಲರ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿತ್ತು. ಚೆಲ್ಲಿದರೂ ಮಲ್ಲಿಗೆಯ ಜಾನಪದ ನೃತ್ಯ ನೆರೆದವರ ಹುಬ್ಬೇರಿಸುವಂತೆ ಮಾಡಿತ್ತು.