Tag: ಪಬ್ಲಿಕ್ ಟಿವಿ ತಮುಕೂರು

  • ತೆರೆಮೆರೆಯಲ್ಲಿ ‘ಕೈ’ ಕುಲುಕಿದ್ರಾ ಬಿಜೆಪಿ ಮಾಜಿ ಸಚಿವ ಸೊಗಡು ಶಿವಣ್ಣ?

    ತೆರೆಮೆರೆಯಲ್ಲಿ ‘ಕೈ’ ಕುಲುಕಿದ್ರಾ ಬಿಜೆಪಿ ಮಾಜಿ ಸಚಿವ ಸೊಗಡು ಶಿವಣ್ಣ?

    ತುಮಕೂರು: ಬಿಜೆಪಿ ಟಿಕೆಟ್ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡ ಮಾಜಿ ಸಚಿವ ಸೊಗಡು ಶಿವಣ್ಣ ನಿಜಕ್ಕೂ ತೆರೆಮರೆಯಲ್ಲಿ ಕಾಂಗ್ರೆಸ್‍ಗೆ ಸಪೋರ್ಟ್ ಮಾಡ್ತಾ ಇದ್ದಾರಾ ಎಂಬ ಪ್ರಶ್ನೆಯೊಂದು ಜಿಲ್ಲೆಯ ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.

    ಪಕ್ಕಾ ಹಿಂದೂವಾದಿ ಆಗಿರುವ ಸೊಗಡು ಶಿವಣ್ಣ ತುಮಕೂರು ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಫಿಕ್ ಅಹಮದ್‍ಗೆ ಬೆಂಬಲ ನೀಡಿದ್ದಾರೆ ಅಂತಾ ಹೇಳಲಾಗ್ತಿದೆ. ಕ್ಯಾತಸಂದ್ರದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದ ಶಾಸಕ ರಫಿಕ್ ಅಹಮದ್ ತಮ್ಮ ಭಾಷಣದ ವೇಳೆ ಸ್ಫೋಟಕ ರಹಸ್ಯವನ್ನ ಬಿಚ್ಚಿಟ್ಟಿದ್ದಾರೆ.

    ಭಾಷಣದ ವೇಳೆ ಬಿಜೆಪಿ ಪಕ್ಷದ ಮುಖಂಡರು ನಮಗೆ ಬೆಂಬಲ ನೀಡುತ್ತಿದ್ದಾರೆ. ಕೆಲವರು ಬಹಿರಂಗವಾಗಿ ಸಪೋರ್ಟ್ ನೀಡಿದ್ರೆ, ಇನ್ನೂ ಕೆಲವರು ತೆರೆಮರೆಯಲ್ಲಿ ಸಹಕಾರ ನೀಡುತ್ತಿದ್ದಾರೆ. ಬಿಜೆಪಿ ನಾಯಕರ ಬೆಂಬಲದಿಂದ ನಾನು ಮತ್ತೊಮ್ಮೆ ಹೆಚ್ಚಿನ ಅಂತರದಿಂದ ಗೆಲುವು ಸಾಧಿಸುತ್ತೇನೆ. ಅದರಲ್ಲೂ ಮಾಜಿ ಸಚಿವ ಸೊಗಡು ಶಿವಣ್ಣರ ಆಶೀರ್ವಾದ ನನ್ನ ಮೇಲಿದೆ. ಅವರ ಮನೆಗೆ ಹೋಗಿ ನಾನು ಮತಯಾಚನೆ ಮಾಡಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪ ನನ್ನ ಮನೆಗೆ ಬರುವುದೇ ಬೇಡ-ಕೊನೆಗೂ ಮೌನ ಮುರಿದ ಸೊಗಡು ಶಿವಣ್ಣ

    ಕಾಂಗ್ರೆಸ್ ಅಭ್ಯರ್ಥಿ ರಫಿಕ್ ಅಹಮದ್ ಹೇಳಿಕೆ ತುಮಕೂರು ಬಿಜೆಪಿ ಪಾಳಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸೊಗಡು ಶಿವಣ್ಣ ಈ ಬಾರಿ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ರು. ಆದ್ರೆ ಹೈಕಮಾಂಡ್ ಜ್ಯೋತಿ ಗಣೇಶ್ ಅವರಿಗೆ ಟಿಕೆಟ್ ಘೋಷಣೆ ಮಾಡಿದ್ದರಿಂದ ಸೊಗಡು ಶಿವಣ್ಣ ಸಹಜವಾಗಿಯೇ ಅಸಮಾಧಾನಗೊಂಡಿದ್ದರು.