Tag: ಪಬ್ಲಿಕ್ ಟಿವಿ. ಕೋವಿಡ್ 19

  • ಒಂದೇ ದಿನ 12 ಜನರಿಗೆ ಕೊರೊನಾ- ರಾಜ್ಯದಲ್ಲಿ 163ಕ್ಕೇರಿದ ಸೋಂಕಿತರ ಸಂಖ್ಯೆ

    ಒಂದೇ ದಿನ 12 ಜನರಿಗೆ ಕೊರೊನಾ- ರಾಜ್ಯದಲ್ಲಿ 163ಕ್ಕೇರಿದ ಸೋಂಕಿತರ ಸಂಖ್ಯೆ

    -ಮೈಸೂರಿನಲ್ಲಿ ಮತ್ತೆ ಏಳು ಜನರಿಗೆ ಸೋಂಕು

    ಬೆಂಗಳೂರು: ರಾಜ್ಯದಲ್ಲಿ ಇಂದು ಒಂದೇ ದಿನ 12 ಜನರಲ್ಲಿ ಕೊರೊನಾ ಸೋಂಕು ತಗಲಿರೋದು ದೃಢಪಟ್ಟಿದೆ. ಕೊರೊನಾ ಸೋಂಕಿತರ ಸಂಖ್ಯೆ 163ಕ್ಕೆ ಏರಿಕೆಯಾಗಿದೆ.

    ಹೊಸ 12 ಸೋಂಕಿತರಲ್ಲಿ ಮೈಸೂರಿನ ಏಳು ಜನ, ಬೆಂಗಳೂರು ಮತ್ತು ಬಾಗಲಕೋಟೆಯಲ್ಲಿ ತಲಾ ಇಬ್ಬರು ಹಾಗೂ ಬೆಂಗಳೂರಿನಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ. ಮೈಸೂರಿನ ಏಳು ಜನ ಸೋಂಕಿತರಲ್ಲಿ ಮೂವರು ದೆಹಲಿ ಜಮಾತ್ ನಿಂದ ಬಂದವರಾಗಿದ್ದರೆ, ಓರ್ವ ರೋಗಿ ನಂಬರ್ 52ರ ಸಂಪರ್ಕದಲ್ಲಿದ್ದರು. ಓರ್ವ ರೋಗಿ ನಂಬರ್ 104ರ ಸೋದರನಾಗಿದ್ದಾರೆ. ಮತ್ತೊಬ್ರು ದುಬೈನಿಂದ ಹಿಂದಿರುಗಿದ ವ್ಯಕ್ತಿಯಾಗಿದ್ದಾರೆ.

    ಇನ್ನು ಬಾಗಲಕೋಟೆಯಲ್ಲಿ ಮೃತಪಟ್ಟ ವೃದ್ಧನ ಪತ್ನಿ ಮತ್ತು ಸೋದರನಿಗೆ ಕೊರೊನಾ ವೈರಸ್ ತಗುಲಿದ್ದು, ಇಬ್ಬರನ್ನು ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಕೊರೊನಾ ವೈರಸ್ ನಾಲ್ವರನ್ನು ಬಲಿ ಪಡೆದುಕೊಂಡಿದೆ.