Tag: ಪಬ್ಲಿಕ್ ಟಿವಿ ಉಡುಪಿ

  • ಉಡುಪಿಯಲ್ಲಿ ದುಷ್ಕರ್ಮಿಗಳಿಂದ ಬಸ್ ನಿರ್ವಾಹಕನ ಕಗ್ಗೊಲೆ

    ಉಡುಪಿಯಲ್ಲಿ ದುಷ್ಕರ್ಮಿಗಳಿಂದ ಬಸ್ ನಿರ್ವಾಹಕನ ಕಗ್ಗೊಲೆ

    ಉಡುಪಿ: ಬಸ್ ನಿರ್ವಾಹಕನನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಘಟನೆ ಉಡುಪಿ ತಾಲೂಕಿನ ಪೆರ್ಡೂರು ಸಮೀಪ ಬೈರಂಪಳ್ಳಿಯಲ್ಲಿ ಈ ದುರ್ಘಟನೆ ನಡೆದಿದೆ.

    ಪ್ರಶಾಂತ್ ಪೂಜಾರಿ (35) ಕೊಲೆಯಾದ ಬಸ್ ನಿರ್ವಾಹಕ. ಪ್ರಶಾಂತ್ ಪೂಜಾರಿ ದುಷ್ಕರ್ಮಿಗಳ ದಾಳಿಗೆ ತೀವ್ರ ಗಾಯಗೊಂಡು ಮೃತಪಟ್ಟಿದ್ದಾರೆ. ಗುರುವಾರ ರಾತ್ರಿ 12 ಗಂಟೆಗೆ ಸಂತೋಷ್ ಪೂಜಾರಿ ಅವರ ಮನೆಗೆ ಇಬ್ಬರು ದುಷ್ಕರ್ಮಿಗಳು ಬಂದಿದ್ದರು. ವ್ಯವಹಾರ ವಿಚಾರದಲ್ಲಿ ಮೂವರ ನಡುವೆ ರಾತ್ರಿ 12 ಗಂಟೆಯವರೆಗೆ ಮಾತುಕತೆ ನಡೆದಿತ್ತು.

    ಈ ವೇಳೆ ಮಾತಿಗೆ ಮಾತು ಬೆಳೆದು ಜಟಾಪಟಿ ನಡೆದಿದೆ. ಇಬ್ಬರು ಅಪರಿಚಿತರು ಪ್ರಶಾಂತ್ ಪೂಜಾರಿ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಸಿಟಿ ಬಸ್ ಪರ್ಮಿಟ್ ಪಡೆದಿದ್ದ ಸಂತೋಷ್ ಅದೇ ಬಸ್ಸಲ್ಲಿ ಕಂಡಕ್ಟರ್ ಆಗಿ ಕೂಡ ಕೆಲಸ ಮಾಡುತ್ತಿದ್ದರು. ಹಿರಿಯಡ್ಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಮೃತದೇಹವನ್ನು ಮಣಿಪಾಲ ಕೆಎಂಸಿಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಮೃತ ಸಂತೋಷ್ ಪೂಜಾರಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲೂ ಕೂಡ ಶಾಮೀಲಾಗಿದ್ದ ಎಂಬ ಬಗ್ಗೆ ಪೊಲೀಸರಿಗೆ ಮಾಹಿತಿ ಇದೆ. ಬಸ್ಸಿನ ವ್ಯವಹಾರ ವಿಚಾರದಲ್ಲಿ ಇಬ್ಬರ ಜೊತೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಈ ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಸದ್ದಿಲ್ಲದೇ ಉಡುಪಿಗೆ ಬಂದು ಹೋದ್ರು ಪ್ರಧಾನಿ ಮೋದಿ!

    ಸದ್ದಿಲ್ಲದೇ ಉಡುಪಿಗೆ ಬಂದು ಹೋದ್ರು ಪ್ರಧಾನಿ ಮೋದಿ!

    ಉಡುಪಿ: ಇಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಮುಗಿದು ಎರಡು ದಿನ ಕಳೆದಿದೆ. ಆದರೆ ಇದೀಗ ಅಷ್ಟಮಿ ಉತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಬಂದು ಹೋಗಿದ್ದರು ಅನ್ನೋ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವಿಡಿಯೋದಲ್ಲಿ ರಥಬೀದಿಯಲ್ಲಿ ಮೋದಿ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಯಾವುದೇ ಸೆಕ್ಯೂರಿಟಿ ಇಲ್ಲದೆ, ಸುದ್ದಿಯೇ ಇಲ್ಲದೆ ಮೋದಿ ಬಂದು ಹೋದ್ರಾ ಅಂತ ಟೆನ್ಶನ್ ಮಾಡಿಕೊಳ್ಳಬೇಡಿ. ಉಡುಪಿಗೆ ಬಂದಿರೋದು ಪ್ರಧಾನಿ ಮೋದಿಯಲ್ಲ. ಬದಲಾಗಿ ಥೇಟ್ ಮೋದಿಯನ್ನೇ ಹೋಲುವ ಒಬ್ಬ ವ್ಯಕ್ತಿ ತಮ್ಮ ಪಾಡಿಗೆ ತಾವು ನಡೆದುಕೊಂಡು ಹೋಗುತ್ತಿರುವುದನ್ನು ಕಾರ್ಯಕ್ರಮಕ್ಕೆ ಬಂದವರು ಸೆರೆ ಹಿಡಿದಿದ್ದಾರೆ.

    ಹಿರಿಯಡ್ಕದ ಸದಾನಂದ ನಾಯಕ್ ಪ್ರಧಾನಿ ಮೋದಿ ಅವರನ್ನು ಹೋಲುತ್ತಾರೆ. ಮುಖ, ಗಡ್ಡ ಮತ್ತು ವಾಕಿಂಗ್ ಸ್ಟೈಲ್ ಎಲ್ಲವೂ ಥೇಟ್ ಮೋದಿ ಅವರಂತೆಯೇ. ನೀವು ಮೋದಿಯಂತೆಯೇ ಕಾಣುತ್ತಿರಾ ಜುಬ್ಬ ಹಾಕ್ಕೊಳ್ಳಿ ಅಂತ ಎಲ್ಲರೂ ಸಜೇಶನ್ ಮಾಡಿದ್ದರು. ಹೀಗಾಗಿ ಸದಾನಂದ ಕಾಮತ್ ಅದೇ ಸ್ಟೈಲಲ್ಲಿ ಉಡುಪಿ ಕೃಷ್ಣಜನ್ಮಾಷ್ಟಮಿಗೆ ಹೋಗಿದ್ದರು. ಇದೀಗ ಆ ವೀಡಿಯೋ ಫೇಸ್ ಬುಕ್ ಮತ್ತು ವಾಟ್ಸಾಪ್‍ನಲ್ಲಿ ಹರಿದಾಡುತ್ತಿದೆ.

    ಹಿರಿಯಡ್ಕದ ಸದಾನಂದ ನಾಯಕ್ ಅಡುಗೆ ಕೆಲಸಕ್ಕೆ ಹೋಗುತ್ತಾರೆ. ಅಡುಗೆ ಕಾರ್ಯಕ್ರಮಗಳಿಗೆ ಹೋದಲ್ಲಿ ಜನ ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಮುಗಿ ಬೀಳುತ್ತಾರೆ. ಇಂದು ಪ್ರಧಾನಿ ಮೋದಿ ಬರ್ತ್‍ಡೇ ಆಗಿರೋದ್ರಿಂದ ಈ ವೀಡಿಯೋ ಎಲ್ಲರ ಮೊಬೈಲ್‍ನಲ್ಲಿ ಹರಿದಾಡುತ್ತಿದೆ.

    https://www.youtube.com/watch?v=Fs____nayD0&feature=youtu.be