Tag: ಪಬ್ಲಿಕ್

  • 6 ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ಪ್ರಜ್ವಲ್ ದೇವರಾಜ್

    6 ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ಪ್ರಜ್ವಲ್ ದೇವರಾಜ್

    ಬೆಂಗಳೂರು: ಕನ್ನಡ ಚಿತ್ರರಂಗದ ಕ್ಯೂಟ್ ಕಪಲ್ ಆಗಿರುವ ಪ್ರಜ್ವಲ್ ದೇವರಾಜ್ ಹಾಗೂ ರಾಗಿಣಿ ಪ್ರಜ್ವಲ್ ಅವರು ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಇದ್ದಾರೆ. ದಾಂಪತ್ಯ ಜೀವನಕ್ಕೆ 6 ವರ್ಷ ತುಂಬಿರುವ ಸಂತೋಷವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ವರ್ಷಗಳು ಹೋಗಬಹುದು, ಆದರೆ ನೆನಪುಗಳು ನಮ್ಮೊಂದಿಗೆ ಬೆಳಗುತ್ತಲೇ ಇರುತ್ತವೆ. ನಿನ್ನೊಂದಿಗೆ ಅತ್ಯುತ್ತಮ ನೆನಪುಗಳನ್ನು ಕಳೆದಿದ್ದೇನೆ ಕನ್ನಾ, ಥ್ಯಾಂಕ್ ಯೂ ಫಾರ್ ಎವ್ರಿಥಿಂಗ್ ಎಂದು ಬರೆದುಕೊಂಡು ಮದುವೆಯ ವೀಡಿಯೋವನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಈ ಜೋಡಿಗೆ ಮೆಚ್ಚುಗೆ ಸೂಚಿಸಿ ಕಾಮೆಂಟ್ ಮಾಡಿ ಶುಭ ಕೋರುತ್ತಿದ್ದಾರೆ. ಇದನ್ನೂ ಓದಿ:  ಸಣ್ಣ ಪ್ರಮಾಣದ ಡ್ರಗ್ಸ್ ಸೇವಿಸಿದವರಿಗೆ ಜೈಲು ಶಿಕ್ಷೆ ಬೇಡ!

     

    View this post on Instagram

     

    A post shared by Prajwal Devaraj (@prajwaldevaraj)

    ಪ್ರಜ್ವಲ್ ದೇವರಾಜ್ ತಮ್ಮ ಬಾಲ್ಯದ ಸ್ನೇಹಿತೆಯನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಹೌದು ತಮ್ಮ ಬಾಲ್ಯ ಸ್ನೇಹಿತೆ ಆದ ರಾಗಿಣಿ ಚಂದ್ರನ್ ಅವರನ್ನು ಪ್ರೀತಿಸಿ ನಂತರ ವಿವಾಹವಾಗಿದ್ದು, ಇದೀಗ ತಮ್ಮ ಆರನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ರಾಗಿಣಿ ಅವರು ಸಹ ಪ್ರೋಫೆಷನಲ್ ಡ್ಯಾನ್ಸರ್ ಆಗಿದ್ದಾರೆ. ಆಗಾಗ ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ, ಡಾನ್ಸ್‍ವೀಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇದನ್ನೂ ಓದಿ: ಇಸ್ಲಾಂ ತೊರೆದು ಹಿಂದೂ ಧರ್ಮಕ್ಕೆ ಇಂಡೋನೇಷ್ಯಾ ಸಂಸ್ಥಾಪಕನ ಪುತ್ರಿ ಮತಾಂತರ

    ಪ್ರಜ್ವಲ್ ದೇವರಾಜ್ ಅವರು ತಮ್ಮ ಅಭಿನಯದ ಮೂಲಕ ಬಹಳಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ವಾರ್ಷಿಕಫತ್ಸವ ಸಂಭ್ರಮದಲ್ಲಿ ಇರುವ ಈ ಜೋಡಿಗೆ ಮದುವೆ ವಾರ್ಷಿಕೋತ್ಸವಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

  • ಮೋಸ ಮಾಡುವವರು ಎಂದಿಗೂ ಉದ್ಧಾರ ಆಗಲ್ಲ: ಸಿದ್ದಾರ್ಥ್

    ಮೋಸ ಮಾಡುವವರು ಎಂದಿಗೂ ಉದ್ಧಾರ ಆಗಲ್ಲ: ಸಿದ್ದಾರ್ಥ್

    ಹೈದರಾಬಾದ್: ನಟಿ ಸಮಂತಾ ಪತಿ ನಾಗಚೈತನ್ಯ ಡಿವೋರ್ಸ್ ನೀಡಿರುವುದು ತಿಳಿಸಿರುವ ವಿಚಾರವಾಗಿದೆ. ಆದರೆ ಸಮಂತಾ ಅವರ ಮಾಜಿ ಪ್ರೀಯಕರ ಟಾಲಿವುಡ್ ನಟ ಸಿದ್ದಾರ್ಥ್ ಸಮಂತಾಗೆ ಟಾಂಗ್ ಕೊಟ್ಟು ಟ್ವೀಟ್ ಮಾಡಿದ್ದಾರೆ.

    ನಾಗಚೈತನ್ಯ ಹಾಗೂ ಸಮಂತಾ ವಿಚ್ಛೇದನ ಸುದ್ದಿ ಹೊರ ಬರುತ್ತಿದ್ದಂತೆ ಟ್ವೀಟ್ ಮಾಡಿರುವ ಸಿದ್ದಾರ್ಥ್ ಮೋಸ ಮಾಡುವವರು ಎಂದಿಗೂ ಏಳೆಗೆಯಾಗುವುದಿಲ್ಲ, ಎನ್ನುವ ಪಾಠವನ್ನು ಬಾಲ್ಯದಲ್ಲಿ ನನ್ನ ಶಿಕ್ಷಕರಿಂದ ಕಲಿತೆ ಎಂದು ನಟ ಸಿದ್ದಾರ್ಥ್ ಟ್ವೀಟ್ ಮಾಡಿದ್ದಾರೆ.ಇದನ್ನೂ ಓದಿ : ನಾನು ನನ್ನನ್ನು ಬದಲಾಯಿಸಿಕೊಳ್ಳಬೇಕು: ಸಮಂತಾ

    ಸಮಂತಾ ಮತ್ತು ಸಿದ್ದಾರ್ಥ್ ಮಾಜಿ ಪ್ರೇಮಿಗಳು ಎನ್ನುವುದು ಬಹುತೇಕ ಜನರಿಗೆ ಗೊತ್ತಿರದ ವಿಚಾರವಾಗಿದೆ. 2003ರಲ್ಲಿ ಮೇಘನಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ನಟ, 2007 ರಲ್ಲಿ ಆಕೆಯಿಂದ ವಿಚ್ಛೇದನ ಪಡೆದರು. ನಂತರ ಸೋಹಾ ಅಲಿಖಾನ್ ಜೊತೆ ಪ್ರೀತಿಯಲ್ಲಿ ಬಿದ್ದರು. ಈಕೆಯೊಂದಿಗೆ ಬ್ರೇಕಪ್ ಮಾಡಿಕೊಂಡ ಬಳಿಕ ಶೃತಿ ಹಾಸನ್ ಅವರೊಂದಿಗೆ ಮೂರುವರೆ ವರ್ಷ ರಿಲೇಷೆನ್‍ಶಿಪ್‍ನಲ್ಲಿದ್ದರು. ಶೃತಿ ಹಾಸನ್ ಜೊತೆಗಿನ ಪ್ರೀತಿ ಮುರಿದು ಬಿದ್ದ ನಂತರ ಈ ನಟನಿಗೆ ಸಿಕ್ಕದ್ದೆ ಸಮಂತಾ. ಇದನ್ನೂ ಓದಿ :  ವಿಚ್ಛೇದನ ಪಡೆಯುತ್ತಿದ್ದಂತೆ ಹೆಸರು ಬದಲಿಸಿಕೊಂಡ ಸಮಂತಾ

    ತೆಲುಗಿನ ಜಬರ್ದಸ್ತ್ ಸಿನಿಮಾ ಸೆಟ್ಟಿನಲ್ಲಿ ಸಮಂತಾ ಹಾಗೂ ಸಿದ್ದಾರ್ಥ್ ಪರಿಚಯವಾಗಿದ್ದರು. ಅಲ್ಲಿಂದ ಶುರುವಾದ ಇವರ ಸ್ನೇಹ ಪ್ರೀತಿಯಾಗಿ ಪ್ರಮೋಟ್ ಆಗಿತ್ತು. ಇವರಿಬ್ಬರೂ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಕೂಡ ಕೇಳಿ ಬಂದಿತ್ತು. ಆದರೆ ಅಷ್ಟರಲ್ಲಾಗಲೇ ಈ ಜೋಡಿ ಬೇರೆ ಬೇರೆಯಾಗಿತ್ತು. ಇದನ್ನೂ ಓದಿ: 200 ಕೋಟಿ ಜೀವನಾಂಶ ರಿಜೆಕ್ಟ್ ಮಾಡಿದ ಸಮಂತಾ

    ಸಿದ್ದಾರ್ಥ್ ಅವರಿಂದ ದೂರವಾದ ಸಮಂತಾ ಅವರು ನಾಗಚೈತನ್ಯ ಅವರ ಜೊತೆ ಪ್ರೀತಿಯಲ್ಲಿ ಬೀಳುತ್ತಾರೆ. 2017 ರಲ್ಲಿ ಮದುವೆಯಾಗುತ್ತಾರೆ. ಆದರೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ 4 ವರ್ಷದಲ್ಲಿ ವಿಚ್ಛೇದನ ಪಡೆದಿದ್ದಾರೆ. ಸಮಂತಾ ಅವರು ತಮ್ಮ ವಿಚ್ಛೇದನ ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಬೆನ್ನಲ್ಲೆ ಟ್ವೀಟ್ ಮಾಡಿರುವ ಸಿದ್ದಾರ್ಥ್ ಟ್ವೀಟ್ ಮಾಡಿ ಮಾಜಿ ಪ್ರೇಯಸಿಗೆ ಟಾಂಗ್ ಕೊಟ್ಟಿದ್ದಾರೆ.

  • ರಾಯರ ಆರಾಧನೆ- ಪಾದಯಾತ್ರೆ ಮೂಲಕ ಹರಿದು ಬಂತು ಭಕ್ತರ ದಂಡು

    ರಾಯರ ಆರಾಧನೆ- ಪಾದಯಾತ್ರೆ ಮೂಲಕ ಹರಿದು ಬಂತು ಭಕ್ತರ ದಂಡು

    – ರಾಯರು ಸಶರೀರವಾಗಿ ವೃಂದಾವನಸ್ಥರಾಗಿ ಇಂದಿಗೆ 350 ವರ್ಷ

    ರಾಯಚೂರು: ರಾಯರ ಆರಾಧನೆಗೆ ಪಾದಯಾತ್ರೆ ಮೂಲಕ ಭಕ್ತರ ದಂಡು ಹರಿದು ಬರುತ್ತಿದೆ. ಮಂತ್ರಾಲಯದಲ್ಲಿ ನಡೆಯುತ್ತಿರುವ ಶ್ರೀಗುರು ರಾಘವೇಂದ್ರ ಸ್ವಾಮಿಗಳ ಏಳುದಿನಗಳ ಆರಾಧನಾ ಮಹೋತ್ಸವದಲ್ಲಿ ಇಂದು ಮುಖ್ಯವಾದ ದಿನ. ರಾಯರು ಸಶರೀರವಾಗಿ ವೃಂದಾವನಸ್ಥರಾಗಿ ಇಂದಿಗೆ 350 ವರ್ಷ ಸಂದಿವೆ.

    ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಹಿನ್ನೆಲೆ ನಾನಾ ಕಡೆಗಳಿಂದ ಭಕ್ತರು ಬರಿಗಾಲಲ್ಲೆ ಪಾದಯಾತ್ರೆ ಮಾಡುತ್ತಿದ್ದಾರೆ. ಬಳ್ಳಾರಿ, ಕೊಪ್ಪಳ, ಯಾದಗಿರಿ, ರಾಯಚೂರು ಜಿಲ್ಲೆಯ ವಿವಿಧೆಡೆಯಿಂದ ಭಕ್ತರು ಮಂತ್ರಾಲಯಕ್ಕೆ ಪಾದಯಾತ್ರೆ ಬರುತ್ತಿದ್ದಾರೆ. ಇದನ್ನೂ ಓದಿ: ಬಹುಕಾಲದ ಗೆಳತಿ ಜೊತೆ ನಟ ಕಾರ್ತಿಕೇಯ ನಿಶ್ಚಿತಾರ್ಥ – ಫೋಟೋ ವೈರಲ್

    ಭಜನಾ ಮಂಡಳಿಗಳು, ಭಕ್ತರ ತಂಡಗಳು ಪ್ರತೀವರ್ಷ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ರಾಯರ ಮಠವನ್ನು ಪಾದಯಾತ್ರೆ ಮೂಲಕ ತಲುಪುತ್ತವೆ. ಕಳೆದ ವರ್ಷ ಕೊರೊನಾ ಲಾಕ್‍ಡೌನ್ ಹಿನ್ನೆಲೆ ಆರಾಧನಾ ಮಹೋತ್ಸವವನ್ನ ಮಠದ ಸಿಬ್ಬಂದಿ ಅಷ್ಟೆ ಸರಳವಾಗಿ ಆಚರಿಸಿದ್ದರು. ಈ ಬಾರಿ ಆಂಧ್ರಪ್ರದೇಶದಲ್ಲಿ ಲಾಕ್‍ಡೌನ್ ಸಡಿಲಿಕೆ ಇರುವುದರಿಂದ ವಿಜೃಂಭಣೆಯಿಂದ ರಾಯರ 350 ನೇ ಆರಾಧನಾ ಮಹೋತ್ಸವ ಆಚರಿಸಲಾಗುತ್ತಿದೆ. ಹೀಗಾಗಿ ವಿವಿಧೆಡೆಯಿಂದ ಭಕ್ತರು ಪಾದಯಾತ್ರೆ ಮೂಲಕ ಬರುತ್ತಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನವನ್ನು ಬಿಟ್ಟು ಹೋಗುವುದಿಲ್ಲ, ದೇಹ ಇಲ್ಲೇ ಮಣ್ಣಾದರೂ ಸೈ: ಹಂಗಾಮಿ ಅಧ್ಯಕ್ಷ ಅಮರುಲ್ಲಾ ಸಲೇಹ್

    ಪ್ರತೀವರ್ಷದಂತೆ ತಿರುಮಲ ತಿರುಪತಿ ದೇವಾಲಯದಿಂದ ಮಂತ್ರಾಲಯ ಮಠಕ್ಕೆ ವೆಂಕಟೇಶ್ವರ ಸ್ವಾಮಿ ಶೇಷವಸ್ತ್ರವನ್ನ ತರಲಾಗಿದೆ. ವಾದ್ಯಗೋಷ್ಠಿಯೊಂದಿಗೆ ತಿರುಮಲ ತಿರುಪತಿ ದೇವಾಲಯದ ಅಧಿಕಾರಿಗಳನ್ನ ಶ್ರೀ ಮಠದ ಶ್ರೀಗಳು ಹಾಗೂ ಆಡಳಿತ ಮಂಡಳಿ ಬರಮಾಡಿಕೊಂಡಿತು. ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ರಾಯರಿಗೆ ಶೇಷವಸ್ತ್ರ ಸಮರ್ಪಣೆ ಮಾಡಿದರು. ಇದನ್ನೂ ಓದಿ: ಯಾರ ಹಂಗಿನಲ್ಲೂ ಇರದ ಸರ್ಕಾರ ಕೊಡಿ: ಎಚ್.ಡಿ ಕುಮಾರಸ್ವಾಮಿ

    350 ನೇ ಆರಾಧನಾ ಮಹೋತ್ಸವ ಹಿನ್ನೆಲೆ ರಾಯರ ವೃಂದಾವನಕ್ಕೆ ಪಂಚಾಮೃತ ಅಭಿಷೇಕ ನಡೆಯಿತು. ಪಂಚಾಮೃತ ಅಭಿಷೇಕ, ಶೇಷವಸ್ತ್ರ ಸಮರ್ಪಣೆ ಬಳಿಕ ಚಿನ್ನದ ರಥೋತ್ಸವ ನಡೆಯಲಿದೆ. ಮಠದ ಪ್ರಾಂಗಣದಲ್ಲಿ ಚಿನ್ನದ ರಥೋತ್ಸವ ನಡೆಯಲಿದ್ದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗಲಿದ್ದಾರೆ.

  • ಅಂದು ಧೋನಿಯೊಂದಿಗಿದ್ದ ಪುಟ್ಟ ಬಾಲಕ ಇಂದು ಸ್ಟಾರ್ ಕ್ರಿಕೆಟರ್!

    ಅಂದು ಧೋನಿಯೊಂದಿಗಿದ್ದ ಪುಟ್ಟ ಬಾಲಕ ಇಂದು ಸ್ಟಾರ್ ಕ್ರಿಕೆಟರ್!

    ಜೈಪುರ: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯೊಂದಿಗೆ ಪುಟ್ಟ ಬಾಲಕನೋರ್ವ ಜೊತೆಗಿರುವ ಫೋಟೋ ಒಂದು ಬಾರಿ ವೈರಲ್ ಆಗುತ್ತಿದೆ. ಅಂದು ಪುಟ್ಟ ಬಾಲಕನಾಗಿದ್ದ ಈ ಹುಡುಗ ಇಂದು ಧೋನಿಯೊಂದಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಅಡುವಷ್ಟುರ ಮಟ್ಟಿಗೆ ಬೆಳೆದಿದ್ದಾನೆ.

    ಹಳೆಯ ಫೋಟೋ ಒಂದರಲ್ಲಿ ಧೋನಿ ಜೊತೆಗೆ ಪುಟ್ಟ ಬಾಲಕನೋರ್ವ ನಿಂತು ಫೋಟೋಗೆ ಪೋಸ್ ನೀಡಿದ್ದ. ಆ ಬಾಲಕ ಇಂದು ಧೋನಿಯೊಂದಿಗೆ ಐಪಿಎಲ್‍ನಲ್ಲಿ ಆಡುತ್ತಿದ್ದಾನೆ. ಹೌದು ರಾಜಸ್ಥಾನ ರಾಯಲ್ಸ್ ತಂಡದ ಸ್ಟಾರ್ ಆಲ್‍ರೌಂಡರ್ 19 ವರ್ಷದ ರಿಯಾನ್ ಪರಾಗ್ ಧೋನಿಯೊಂದಿಗೆ ಫೋಟೋದಲ್ಲಿರುವ ಆ ಪುಟ್ಟ ಬಾಲಕ. ಅಂದು ಸಣ್ಣ ಬಾಲಕನಾಗಿದ್ದ ವೇಳೆ ಧೋನಿಯೊಂದಿಗೆ ನಿಂತು ಛಾಯಚಿತ್ರ ತೆಗೆದುಕೊಂಡಿದ್ದರು. ಆ ಫೋಟೋವನ್ನು ಇದೀಗ ರಾಜಸ್ಥಾನ ರಾಯಲ್ಸ್ ತಂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ತನ್ನ ತಂಡದ ಸ್ಟಾರ್ ಆಟಗಾರರ ಬೆಳವಣಿಗೆಯನ್ನು ಕೊಂಡಾಡಿದೆ. ಇದನ್ನೂ ಓದಿ: ರಿಯಾನ್ ಪರಾಗ್ ವಿಶಿಷ್ಟ ಸಂಭ್ರಮಾಚರಣೆಗೆ ಫ್ಯಾನ್ಸ್ ಫಿದಾ

    ರಾಜಸ್ಥಾನ ತಂಡ ತನ್ನ ಸಾಮಾಜಿಕ ಜಾಲತಾಣದಲ್ಲಿ ಧೋನಿ ಜೊತೆ ಇರುವ ಪರಾಗ್ ಅವರ ಪುಟ್ಟ ಬಾಲಕನ ಫೋಟೋ ಮತ್ತು ಇತ್ತೀಚಿನ ಚಿತ್ರವೊಂದನ್ನು ಸೇರಿಸಿ ಪೋಸ್ಟ್ ಮಾಡಿ, ನೀವು ವಿಕಸನಗೊಳ್ಳುತ್ತೀರಿ, ನೀವು ಕಲಿಯುತ್ತಿರಿ, ನೀವು ಬೆಳೆಯುತ್ತಿರಿ, ಧೋನಿಯೊಂದಿಗೆ ಫ್ಯಾನ್ ಬಾಯ್ ರಿಯನ್ ಪರಾಗ್ ಎಂದು ಎಂದು ಬರೆದುಕೊಂಡಿದೆ.

    ಈ ಹಿಂದೆ ಐಪಿಎಲ್‍ನಲ್ಲಿ ಆಡುವಾಗ ಪರಾಗ್ ಈ ಫೋಟೋವನ್ನು ನೆನಪಿಸಿಕೊಂಡು ನಾನು 6 ವರ್ಷದ ಬಾಲಕನಾಗಿರುವಾಗ ಧೋನಿಯೊಂದಿಗೆ ಫೋಟೋ ತೆಗೆಸಿಕೊಂಡಿದ್ದೆ. ಆದರೆ ಇದೀಗ ನಾನು ಧೋನಿಗೆ ಬೌಲಿಂಗ್ ಮಾಡುತ್ತೇನೆ. ಧೋನಿ ವಿರುದ್ಧ ಫೀಲ್ಡಿಂಗ್ ಮಾಡುತ್ತೇನೆ. ನಾನು ಬ್ಯಾಟಿಂಗ್ ಮಾಡುವಾಗ ವಿಕೆಟ್ ಹಿಂದೆ ಧೋನಿಯನ್ನು ಕಾಣುತ್ತೇನೆ ಎಂದು ಸಹ ಆಟಗಾರನೊಂದಿಗೆ ಸಂಭ್ರಮ ಹಂಚಿಕೊಂಡಿದ್ದರು. ಇದನ್ನೂ ಓದಿ: ಕೊಹ್ಲಿಗೆ ಓರ್ವ ನ್ಯೂಜಿಲೆಂಡ್ ಬೌಲರ್‌ನಿಂದ ಕಂಟಕವಿದೆ ಎಂದ ಬಾಲ್ಯದ ಕೋಚ್

    ರಿಯಾನ್ ಪರಾಗ್ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 2019ರಲ್ಲಿ ಪಾದಾರ್ಪಣೆ ಮಾಡಿದರು ಆ ಬಳಿಕ ತಂಡದಲ್ಲಿ ಉತ್ತಮ ಪ್ರದರ್ಶನ ತೋರಿ ಸ್ಟಾರ್ ಆಲ್‍ರೌಂಡರ್ ಆಗಿ ಗುರುತಿಸಿಕೊಂಡಿದ್ದಾರೆ. 2019ರಿಂದ 2021ರ ವರೆಗೆ ಐಪಿಎಲ್‍ನಲ್ಲಿ ರಾಜಸ್ಥಾನ ತಂಡದ ಪರ ಒಟ್ಟು 26 ಪಂದ್ಯಗಳನ್ನು ಆಡಿ 324 ರನ್ ಮತ್ತು 3 ವಿಕೆಟ್ ಪಡೆದು ಭರವಸೆಯ ಯುವ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.

  • ಮೈಮೇಲೆ ಮನಸ್ಸೋ ಇಚ್ಛೆ ಚಾಕುವಿನಿಂದ ಇರಿದು ಕೊಲೆಗೈದ

    ಮೈಮೇಲೆ ಮನಸ್ಸೋ ಇಚ್ಛೆ ಚಾಕುವಿನಿಂದ ಇರಿದು ಕೊಲೆಗೈದ

    – ಮೃತದೇಹ ರಸ್ತೆ ಬದಿ ಬಿಸಾಕಿ ಪರಾರಿ
    – ಆರೋಪಿ ಬಂಧಿಸಿದ ಪೊಲೀಸರು

    ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕು ಜಂಗಮಕೋಟೆ ಬಳಿ ನಡೆದಿದ್ದ ದಿನಸಿ ಅಂಗಡಿ ಮಾಲೀಕನ ಕೊಲೆ ಪ್ರಕರಣವನ್ನ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಭೇದಿಸಿದ್ದು, ಕೊಲೆಗಾರನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದೇವನಹಳ್ಳಿ ತಾಲೂಕು ಐಬಸಾಪುರ ಗ್ರಾಮದ ನಿವಾಸಿಯಾಗಿದ್ದ ನಿರಂಜನಮೂರ್ತಿ(55) ಶಿಡ್ಲಘಟ್ಟ ತಾಲೂಕು ಜಂಗಮಕೋಟೆ ಕ್ರಾಸ್ ನಲ್ಲಿ ದಿನಸಿ ಅಂಗಡಿ ಇಟ್ಟುಕೊಂಡಿದ್ದರು. ಇವರು ಆಗಸ್ಟ್ 27 ರಂದು ಜಂಗಮಕೋಟೆ-ಹೊಸಕೋಟೆ ಮಾರ್ಗದ ರಸ್ತೆಬದಿ ಶವವಾಗಿ ಪತ್ತೆಯಾಗಿದ್ದಾರೆ. ಮೃತದೇಹದ ಮೇಲೆ ಚಾಕು ಇರಿತದ ಗುರುತುಗಳಿದ್ದು ಸ್ಥಳಕ್ಕೆ ಭೇಟಿ ನೀಡಿದ್ದ ಶಿಡ್ಲಘಟ್ಟ ಸಿಪಿಐ ಸುರೇಶ್ ಕುಮಾರ್ ಹಾಗೂ ಎಸ್‍ಐ ಲಿಯಾಖತ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.

    ಪ್ರಕರಣದಲ್ಲಿ ಮೃತ ನಿರಂಜನಮೂರ್ತಿ ಇತ್ತೀಚೆಗೆ ದಿನಸಿ ಅಂಗಡಿಯ ಜೊತೆ ಜೊತೆಗೆ ಹಳೆಯ ಬೈಕ್ ಹಾಗೂ ಕಾರು ಖರೀದಿಸಿ ಮರು ಮಾರಾಟ ಮಾಡುವ ಸೈಡ್ ಬ್ಯುಸಿನೆಸ್ ಶುರು ಮಾಡಿದ್ದರು. ಹೀಗಾಗಿ ನವೀನ್ ಕುಮಾರ್ ಎಂಬಾತನ ಬಳಿ ಓಮ್ನಿ ಕಾರೊಂದನ್ನ ಖರೀದಿಸಿದ್ದರು. ಈ ಕಾರಿಗೆ 2 ಲಕ್ಷದ 85 ಸಾವಿರ ಕೊಡುವಂತೆ ನವೀನ್ ಹೇಳಿದ್ನಂತೆ. ಆದರೆ ಇಲ್ಲ ಅಷ್ಟೆಲ್ಲಾ ನಾನು ಕೊಡಲ್ಲ ಕೊಡೋದು 2 ಲಕ್ಷ ಮಾತ್ರ ಅಂತ ಹೇಳಿದ್ದರಂತೆ.

    ಈ ವ್ಯವಹಾರ ಸಂಬಂಧ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಏನ್ ಮಾಡ್ತಿಯೋ ಮಾಡ್ಕೊ ಹೋಗು ಅಂತ ನವೀನ್ ಗೆ ಅವಾಚ್ಯ ಶಬ್ದಗಳಿಂದ ನಿರಂಜನಮೂರ್ತಿ ನಿಂದಿಸಿದ್ದರಂತೆ. ಇದೇ ಕಾರಣಕ್ಕೆ ನಿರಂಜನಮೂರ್ತಿ ಮೇಲೆ ಕೋಪಗೊಂಡು ದ್ವೇಷ ಸಾರಿದ ನವೀನ್ ಕುಮಾರ್, ಪ್ಲಾನ್ ಮಾಡಿ ನಿರಂಜನಮೂರ್ತಿ ಅಂಗಡಿ ಬಾಗಿಲು ಹಾಕಿಕೊಂಡು ಸಂಜೆ ಮನೆಗೆ ಹೋಗೋದನ್ನ ಕಾದು ಕುಳಿತಿದ್ದಾನೆ.

    ಅಲ್ಲದೆ ನಿರಂಜಮೂರ್ತಿಯನ್ನ ಅಡ್ಡಗಟ್ಟಿ ಗಲಾಟೆ ಮಾಡಿದ್ದಾನೆ. ಬಳಿಕ ಕಾರಿನಲ್ಲಿ ಕೂರಿಸಿಕೊಂಡು ಮಾತಾಡ್ತಾ ಮಾತಾಡ್ತಾ ಮಾತು ಮಾತಿಗೆ ಬೆಳೆದು ಕುತ್ತಿಗೆಗೆ ಬಲವಾಗಿ ಚಾಕುವಿನಿಂದ ಇರಿದುಬಿಟ್ಟಿದ್ದಾನೆ. ತದನಂತರ ಮೈಯೆಲ್ಲಾ ಮನಸ್ಸೋ ಇಚ್ಛೆ ಚಾಕುವಿನಿಂದ ಇರಿದು ಕೊಲೆ ಮಾಡಿ ಮೃತದೇಹ ಅಲ್ಲೇ ರಸ್ತೆ ಬದಿ ಬಿಸಾಡಿ ಪರರಾಯಾಗಿದ್ದಾನೆ.

    ಈ ಸಂಬಂಧ ಸದ್ಯ ನವೀನ್ ನನ್ನ ಬಂಧಿಸಿರುವ ಪೊಲೀಸರು ಆತನನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ನಳಿನ್ ಕುಮಾರ್ ಕಟೀಲ್ ಫೋಟೋಗೆ ಮಸಿ

    ನಳಿನ್ ಕುಮಾರ್ ಕಟೀಲ್ ಫೋಟೋಗೆ ಮಸಿ

    ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಅಭಿನಂದನೆ ಸಲ್ಲಿಸಿ ಹಾಕಲಾದ ಬ್ಯಾನರ್ ಗೆ ಮಸಿ ಬಳಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ಮಂಗಳೂರಿನ ಕದ್ರಿ ಪಾರ್ಕ್ ಹಾಗೂ ಇತರ ಕಡೆ ಹಾಕಲಾದ ಬ್ಯಾನರ್ ನಲ್ಲಿ ಸಂಸದ ನಳಿನ್ ಚಿತ್ರಕ್ಕೆ ಮಸಿ ಬಳಿದು ಜೈ ನೇತ್ರಾವತಿ ಅಂತ ಬರೆದಿದ್ದಾರೆ.

    ಎತ್ತಿನ ಹೊಳೆ ಯೋಜನೆಗೆ ರಾಜ್ಯ ಸರಕಾರ ಬಜೆಟ್‍ನಲ್ಲಿ 1,500 ಕೋಟಿ ಬಿಡುಗಡೆ ಮಾಡಿದೆ. ಇದು ಕರಾವಳಿಗರ ಕಣ್ಣು ಕೆಂಪಾಗಿಸಿದೆ. ಈ ಹಿಂದೆ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಎತ್ತಿನ ಹೊಳೆ ಯೋಜನೆಗೆ ಪ್ರಾರಂಭದಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಎತ್ತಿನ ಹೊಳೆ ಯೊಜನೆ ವಿರುದ್ಧದ ಹೋರಾಟದಲ್ಲಿ ಕೂಡ ಪಾಲ್ಗೊಂಡು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

    ಆದರೆ ಇದೀಗ ಅವರೇ ರಾಜ್ಯಾಧ್ಯಕ್ಷರಾಗಿರುವ ಬಿಜೆಪಿ ಸರ್ಕಾರದ ಬಜೆಟ್‍ನಲ್ಲಿ ಹಣ ಬಿಡುಗಡೆ ಮಾಡಿದರೂ ನಳಿನ್ ಮೌನವಾಗಿದ್ದು, ಜಿಲ್ಲೆಯ ಪರಿಸರವಾದಿಗಳ ಸಹಿತ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ವಿಚಾರ ಇಟ್ಟುಕೊಂಡು ಮಸಿ ಬಳಿದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಯಾರು ಈ ರೀತಿ ಮಾಡಿದ್ದಾರೆ ಎನ್ನುವುದು ಗೊತ್ತಾಗಿಲ್ಲ. ಮಸಿ ಬಳಿದ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಇದನ್ನೂ ಓದಿ: ಎತ್ತಿನಹೊಳೆ ಯೋಜನೆಗೆ ಮತ್ತೆ 1,500ಕೋಟಿ ಬಿಡುಗಡೆ: ಕಟೀಲ್ ದ್ವಿಪಾತ್ರದಲ್ಲಿ ಅಭಿನಯ

  • ಹಸುವಿಗೆ ಸೀಮಂತ ಮಾಡಿ, ಉಡಿ ತುಂಬಿದ್ರು

    ಹಸುವಿಗೆ ಸೀಮಂತ ಮಾಡಿ, ಉಡಿ ತುಂಬಿದ್ರು

    ಚಿಕ್ಕೋಡಿ/ಬೆಳಗಾವಿ: ಗೋ ಮಾತೆ ಎಂದು ಪೂಜಿಸುವ ಹಸುವಿಗೆ ಸೀಮಂತ ಕಾರ್ಯಕ್ರಮ ನೇರವೇರಿಸಿದ ಅಪರೂಪದ ಘಟನೆ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಮಾಂಗೂರ ಗ್ರಾಮದಲ್ಲಿ ನಡೆದಿದೆ.

    ಮಾಂಗೂರ ಗ್ರಾಮದ ರಾವಸಾಹೇಬ ಜಿನ್ನಪ್ಪಾ ಮಾಣಕಾಪುರೆ ಅವರಿಗೆ ಸೇರಿದ ಹಸು ಗರ್ಭ ಧರಿಸಿತ್ತು. ಮಣಕಾಪೂರೆ ಕುಟುಂಬಸ್ಥರು ತಮ್ಮ ಗರ್ಭವತಿ ಹಸುವಿಗೆ ಸೀಮಂತ ಕಾರ್ಯಕ್ರಮ ನೆರವೇರಿಸಿದ್ದಾರೆ. ಹಸುವಿಗೆ ಉಡಿ ತುಂಬಿ, ಹೂ ಮಾಲೆ ಹಾಕಿ ಹೂಗಳ ದಂಡಿಯನ್ನು ಕಟ್ಟಿ, ಹಸಿರು ಬಳೆ ತೊಡೆಸಿ, ಸೀರೆಯನ್ನು ತೊಡಿಸಿ ಶೃಂಗರಿಸಿದ್ದರು.

    ಜೊತೆಗೆ ಗ್ರಾಮದ ಮುತೈದೆಯರು ಉಡಿ ತುಂಬಿದ್ದಾರೆ. ಹಸುವಿಗೆ ಉಡಿ ತುಂಬುವ ಅಪರೂಪದ ಸೀಮಂತ ಕಾರ್ಯಕ್ರಮಕ್ಕೆ ಗ್ರಾಮಸ್ಥರು ಸಾಕ್ಷಿಯಾಗಿದ್ದರು. ಕಾರ್ಯಕ್ರಮಕ್ಕೆ ಮಣಕಾಪೂರೆ ಕುಟುಂಬಸ್ದರು ಸೇರಿದಂತೆ ಅನೇಕ ಹೆಣ್ಣು ಮಕ್ಕಳು ಹಾಗೂ ಪುರುಷರು ಭಾಗಿಯಾಗಿದ್ದರು. ಇವರೆಲ್ಲರೂ ಹಸುವಿನ ಸೀಮಂತ ಕಾರ್ಯಕ್ಕೆ ಸಾಕ್ಷಿಯಾಗಿದ್ದರು.

  • ಗರ್ಭಿಣಿಯನ್ನ ವಾಪಸ್ ಕಳುಹಿಸಿದ ವೈದ್ಯರು – ಮಾರ್ಗ ಮಧ್ಯೆ ಆಟೋದಲ್ಲೇ ಹೆರಿಗೆ

    ಗರ್ಭಿಣಿಯನ್ನ ವಾಪಸ್ ಕಳುಹಿಸಿದ ವೈದ್ಯರು – ಮಾರ್ಗ ಮಧ್ಯೆ ಆಟೋದಲ್ಲೇ ಹೆರಿಗೆ

    ಯಾದಗಿರಿ: ಚಲಿಸುತ್ತಿರುವ ಆಟೋದಲ್ಲಿಯೇ ಹೆರಿಗೆಯಾಗಿರುವ ಘಟನೆ ಯಾದಗಿರಿ ನಗರದ ಮಧ್ಯ ಭಾಗದಲ್ಲಿ ತಡರಾತ್ರಿ ನಡೆದಿದೆ.

    ದೇವಿ ಎಂಬಾಕೆ ಮಾರ್ಗ ಮಧ್ಯೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ದೇವಿ ಯಾದಗಿರಿ ತಾಲೂಕಿನ ಮುದ್ನಾಳ ತಾಂಡದ ನಿವಾಸಿಯಾಗಿದ್ದು, ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ಬಂದಿದ್ದಾರೆ. ಆದರೆ ದಾಖಲೆಗಳು ಸರಿಯಾಗಿಲ್ಲ ಎಂಬ ಒಂದೇ ಕಾರಣಕ್ಕೆ ಹೆರಿಗೆ ನೋವು ಅನುಭವಿಸುತ್ತಿದ್ದ ದೇವಿಯನ್ನು ತಡರಾತ್ರಿ ವೈದ್ಯರು ವಾಪಸ್ ಕಳುಹಿಸಿದ್ದಾರೆ.

    ವಾಪಸ್ ಹೋಗುವಾಗ ಆಟೋದಲ್ಲೇ ಹೆರಿಯಾಗಿದೆ. ಸದ್ಯಕ್ಕೆ ದೇವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ. ಮುದ್ನಾಳ ಯಾದಗಿರಿಯ ಬಿಜೆಪಿ ಶಾಸಕ ವೆಂಕಟರೆಡ್ಡಿ ಸ್ವಗ್ರಾಮವಾಗಿದ್ದು, ಸ್ವತಃ ಶಾಸಕರ ಗ್ರಾಮದ ಸರ್ಕಾರಿ ಆಸ್ಪತ್ರೆಯ ವೈದ್ಯರು ಈ ರೀತಿ ಅಮಾನವೀಯತೆ ಪ್ರದರ್ಶನ ಮಾಡಿದ್ದು, ದೇವಿ ಅವರ ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

  • ಡಬಲ್ ಡಕ್ಕರ್ ಬಸ್ಸಿನಲ್ಲೇ ಜೋಡಿಯಿಂದ ಸೆಕ್ಸ್

    ಡಬಲ್ ಡಕ್ಕರ್ ಬಸ್ಸಿನಲ್ಲೇ ಜೋಡಿಯಿಂದ ಸೆಕ್ಸ್

    ಲಂಡನ್: ಜೋಡಿಯೊಂದು ಅಸಭ್ಯವಾಗಿ ಡಬಲ್ ಡಕ್ಕರ್ ಬಸ್ಸಿನ ಹಿಂಭಾಗದ ಸೀಟಿನಲ್ಲಿ ಕುಳಿತುಕೊಂಡು ಸೆಕ್ಸ್ ಮಾಡಿದ್ದಾರೆ. ಇದೀಗ ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಈ ವಿಲಕ್ಷಣ ಘಟನೆ ಮ್ಯಾಂಚೆಸ್ಟರ್‌ನ ಪ್ರೆಸ್ಟ್‌ವಿಚ್ ನಲ್ಲಿ ನಡೆದಿದೆ. ಸುಮಾರು 135 ಮಂದಿ ಪ್ರಯಾಣಿಸಬಹುದಾದ ಬಸ್ಸಿನಲ್ಲಿ ಜೋಡಿ ಅಸಭ್ಯವಾಗಿ ಸೆಕ್ಸ್ ಮಾಡುತ್ತಿರುವುದನ್ನು ನೋಡಿ ಸಾರ್ವಜನಿಕರು ಆಶ್ಚರ್ಯ ಪಟ್ಟಿದ್ದಾರೆ.

    ಎಂಜಿನಿಯರ್ ಜಾನ್ ಡೋಲನ್ ವ್ಯಾನ್‍ಗಾಗಿ ಕಾಯುತ್ತಿದ್ದರು. ಆಗ ಬಸ್ಸಿನಲ್ಲಿ ಮಹಿಳೆಯೊಬ್ಬಳು ವ್ಯಕ್ತಿಯೊಬ್ಬನ ತೊಡೆಯ ಮೇಲೆ ಕುಳಿತುಕೊಂಡು ಸೆಕ್ಸ್ ಮಾಡುತ್ತಿರುವುದನ್ನು ನೋಡಿದ್ದಾರೆ. ತಕ್ಷಣ ಆ ವಿಡಿಯೋವನ್ನು ತಮ್ಮ ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ನಂತರ ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

    ಬಸ್ಸಿನಲ್ಲಿ ಈ ರೀತಿ ಮಾಡುವುದು ಬಹಳ ತಪ್ಪು. ನಾನು ನನ್ನ ಪತ್ನಿಯ ವ್ಯಾನ್‍ಗಾಗಿ ಕಾಯುತ್ತಿದ್ದೆ. ಆಗ ಬಸ್ ನೋಡಿದಾಗ ಜೋಡಿ ಸೆಕ್ಸ್ ಮಾಡುತ್ತಿದ್ದರು. ನಿಜಕ್ಕೂ ಇದು ವಿಚಿತ್ರ ಎನಿಸುತ್ತದೆ ಎಂದು ಡೋಲನ್ ಹೇಳಿದ್ದಾರೆ.

    ಅವರಿಬ್ಬರು ದಂಪತಿ ಅನ್ನಿಸುತ್ತದೆ. ಆದರೆ ದಾರಿಯಲ್ಲಿ ಮಕ್ಕಳು, ಮಹಿಳೆಯರು ಎಲ್ಲರೂ ಓಡಾಡುತ್ತಿದ್ದರು. ಜೊತೆಗೆ ಜನರು ಪ್ರಯಾಣಿಸುವ ಬಸ್ಸಿನಲ್ಲಿ ಸೆಕ್ಸ್ ಮಾಡುವುದು ತಪ್ಪು. ಆ ಬಸ್ ಹೋಗುವ ದಾರಿಯಲ್ಲಿ ಮೂರು ಶಾಲೆಗಳಿದ್ದವು. ಬಸ್ ಚಾಲಕನು ಕೂಡ ತನ್ನ ಕನ್ನಡಿಯಲ್ಲಿ ಅಥವಾ ಸಿಸಿಟಿವಿಯಲ್ಲಿ ಅವರಿಬ್ಬರನ್ನು ನೋಡದಿರುವುದು ತಮಾಷೆಯಾಗಿದೆ ಎಂದಿದ್ದಾರೆ.

    ಇದುವರೆಗೂ ವಿಡಿಯೋವನ್ನು 4 ಲಕ್ಷಕ್ಕೂ ಅಧಿಕ ಮಂದಿ ನೋಡಿದ್ದಾರೆ. ನೆಟ್ಟಿಗರು ಜೋಡಿಯ ಅಸಭ್ಯ ವರ್ತನೆಯನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಕರ್ನಾಟಕದ ಮುಖ್ಯಮಂತ್ರಿ ನೀವಾ, ಇಲ್ಲ ಮೋದಿನಾ? – ಸಿಎಂಗೆ ಪ್ರಶ್ನೆ

    ಕರ್ನಾಟಕದ ಮುಖ್ಯಮಂತ್ರಿ ನೀವಾ, ಇಲ್ಲ ಮೋದಿನಾ? – ಸಿಎಂಗೆ ಪ್ರಶ್ನೆ

    – ಸಮಸ್ಯೆ ಹೇಳಿಕೊಳ್ಳಲು ಬಂದಿದ್ದ ಜನರ ವಿರುದ್ಧ ಕೋಪ
    – ಸಾಮಾಜಿಕ ಜಾಲತಾಣದಲ್ಲಿ ಸಿಎಂ ವಿರುದ್ಧ ಕಿಡಿ
    – ಆರೋಗ್ಯದ ದೃಷ್ಟಿಯಿಂದ ರಾಜೀನಾಮೆ ನೀಡಲಿ

    ಬೆಂಗಳೂರು: ಪ್ರತಿ ಬಾರಿಯೂ ಮಾಧ್ಯಮಗಳ ವಿರುದ್ಧ ಕಿಡಿಕಾರುತ್ತಿದ್ದ ಮುಖ್ಯಮಂತ್ರಿಗಳು ಇಂದು ಸಮಸ್ಯೆ ಹೇಳಿಕೊಳ್ಳಲು ಬಂದ ಜನರ ವಿರುದ್ಧ ತನ್ನ ಕೋಪ ಹೊರ ಹಾಕುವ ಮೂಲಕ ಜನಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಹೌದು. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕರೇಗುಡ್ಡ ಗ್ರಾಮಕ್ಕೆ ಗ್ರಾಮ ವಾಸ್ತವ್ಯ ಮಾಡಲು ಬಸ್ಸಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಗರಂ ಆಗಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಬಿಜೆಪಿ ನಾಯಕರು ಸಿಎಂ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಅಲ್ಲದೆ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕದ ಮುಖ್ಯಮಂತ್ರಿ ನೀವಾ ಅಥವಾ ಮೋದಿಯೇ? ರಾಜ್ಯದ ಸಮಸ್ಯೆಯನ್ನು ನಿಮ್ಮ ಬಳಿ ಹೇಳಿಕೊಳ್ಳುವಂತಿಲ್ಲವೇ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

    ನಡೆದಿದ್ದು ಏನು?
    ಗ್ರಾಮ ವಾಸ್ತವ್ಯಕ್ಕೆಂದು ಕರೇಗುಡ್ಡಗೆ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸಿಎಂ ಪ್ರತಿಭಟನಾನಿರತರ ಮೇಲೆ ಗರಂ ಆದ ಪ್ರಸಂಗ ನಡೆಯಿತು. ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಯರಮರಸ್ ಸರ್ಕೀಟ್ ಹೌಸ್ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದ, ವೈಟಿಪಿಎಸ್‍ನ ನೂರಾರು ಜನ ಕಾರ್ಮಿಕರು ಸಿಎಂ ಬಸ್‍ಗೆ ಮುತ್ತಿಗೆ ಹಾಕಿದರು. ಈ ವೇಳೆ ಸಿಟ್ಟಿಗೆದ್ದ ಮುಖ್ಯಮಂತ್ರಿಗಳು, ನರೇಂದ್ರ ಮೋದಿಗೆ ವೋಟ್ ಹಾಕಿ ನಮ್ಮತ್ರ ಸಮಸ್ಯೆ ಬಗೆಹರಿಸಿ ಅಂತೀರಾ? ನಿಮಗೆಲ್ಲಾ ಮರ್ಯಾದೆ ಕೊಡಬೇಕೇ? ಲಾಠಿಚಾರ್ಜ್ ಮಾಡ್ಬೇಕು ನಿಮಗೆ ಎಂದು ಹೇಳಿ ಪ್ರತಿಭಟನಾಕಾರರ ಮೇಲೆ ಕೂಗಾಡಿದರು. ಅಷ್ಟೇ ಅಲ್ಲ ನಾನು ಗ್ರಾಮವಾಸ್ತವ್ಯ ಮಾಡುವುದಿಲ್ಲ ಎಂದು ಹೇಳಿದರು.

    ನಂತರ ಸಿಎಂ ತಮ್ಮ ಸಿಟ್ಟನ್ನು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಮೇಲೆ ಹೊರ ಹಾಕಿದರು. ಗರಂ ಆಗಿದ್ದ ಸಿಎಂ ಅವರನ್ನು ನಾಡಗೌಡ ಅವರು ಸಮಾಧಾನಪಡಿಸಿ, ಯಾವನ್ರೀ ಅವನು ಎಸ್ಪಿ ಎಂದು ಪೊಲೀಸ್ ಅಧಿಕಾರಿಗಳ ಮೇಲೆ ತಮ್ಮ ಕೋಪವನ್ನು ಹೊರಹಾಕಿದರು.

    ಬಿಜೆಪಿ ನಾಯಕರಿಂದ ಟೀಕೆ
    ಸಿಎಂ ಗೌರಯುತವಾಗಿ ನಡೆದುಕೊಳ್ಳಲಿ. ಸಿಎಂ ಅಅವರ ಮಾತನ್ನು ಖಂಡಿಸುತ್ತೇನೆ. ಅವರದ್ದೇ ಆದ ಭಾಷೆಯಲ್ಲಿ ಇದಕ್ಕೆ ಪ್ರತ್ಯುತ್ತರ ಕೊಡಲು ಸಿದ್ಧರಿದ್ದೇವೆ. ಈ ಹಿಂದಿನ ಯಾವುದೇ ಮುಖ್ಯಮಂತ್ರಿಗಳು ಈ ರೀತಿ ಮಾತನಾಡಿಲ್ಲ. ಜನ ಕೊಟ್ಟಿರುವ ತೆರಿಗೆಯಿಂದ ಅಭಿವೃದ್ಧಿ ಮಾಡುವುದು ಹೊರತು ಸಿಎಂ ಅವರ ಮನೆಯಿಂದ ಹಣ ತಂದು ಅಭಿವೃದ್ಧಿ ಮಾಡೋದು ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ರಾಜೀನಾಮೆ ನೀಡಲಿ: ಸಿಎಂ ಹೇಳಿಕೆಗೆ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ವಾಗ್ದಾಳಿ ನಡೆಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಹೋರಾಟಗಾರರು ನಿಮ್ಮ ತಂದೆಯ ಆಸ್ತಿ ಕೇಳಿಲ್ಲ. ರಾಜ್ಯದ ಮುಖ್ಯಮಂತ್ರಿ ಆಗಲು ನಿಮಗೆ ಯೋಗ್ಯತೆ ಇಲ್ಲ. ನೀವು ಜೆಡಿಎಸ್ ಮುಖ್ಯಮಂತ್ರಿ ಆದರೆ ರಾಜ್ಯಪಾಲರು ಅವರಿಗೆ ನೀಡುತ್ತಿರುವ ಸೌಲಭ್ಯಗಳನ್ನು ವಾಪಸ್ ಪಡೆಯಲಿ. ನಿಮ್ಮ ಮಾತು ಅಸಂವಿಧಾನಿಕ ಮಾತು. ಸಿಎಂ ಜನರನ್ನ ಕೆರಳಿಸುವ ಮಾತುಗಳನ್ನಾಡಿದ್ದಾರೆ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

    ಸಿಎಂ ಹತಾಶರಾಗಿ ವರ್ತನೆ ಮಾಡುತ್ತಿದ್ದಾರೆ. ನಿಮ್ಮ ಹತಾಶೆ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ನಿಮ್ಮ ಆರೋಗ್ಯ, ರಾಜ್ಯದ ಆರೋಗ್ಯ ದೃಷ್ಟಿಯಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ. ದೇವೇಗೌಡರು ತಮ್ಮ ಮಗನಿಗೆ ರಾಜೀನಾಮೆ ನೀಡುವ ಸಲಹೆ ನೀಡಲಿ. ಈ ಮೂಲಕ ರಾಜ್ಯದ ಜನರ ಹಿತ ಸಿಎಂ ಕಾಪಾಡಲಿ ಎಂದು ರವಿ ಸಲಹೆ ನೀಡಿದರು.

    ಸಿಎಂ ಇಂದು ಸಣ್ಣತನದ ಮಾತು ಆಡಿದ್ದಾರೆ. ಶಿವನಗೌಡರು ಕ್ಷೇತ್ರದ ಅಭಿವೃದ್ಧಿ ಕುಂಠಿತ ಆಗಿರುವ ಹಿನ್ನೆಲೆಯಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ. ಆದರೆ ಅವರ ಬಗ್ಗೆಯೂ ಏಕವಚನದಲ್ಲಿ ಮಾತಾಡಿದ್ದಾರೆ. ನೀವು ರಾಜ್ಯದ ಮುಖ್ಯಮಂತ್ರಿಯೋ, ಜೆಡಿಎಸ್ ಮುಖ್ಯಮಂತ್ರಿಯೋ. ಸಂವಿಧಾನದ ಹೆಸರಲ್ಲಿ ಪ್ರಮಾಣ ಸ್ವೀಕಾರ ಮಾಡಿದ್ರಾ ಅಥವಾ ಜೆಡಿಎಸ್ ಹೆಸರಲ್ಲಿ ಪ್ರಮಾಣ ಸ್ವೀಕಾರ ಮಾಡಿದ್ರಾ ಎಂದು ಪ್ರಶ್ನಿಸುವ ಮೂಲಕ ಸಿಟಿ ರವಿ ಅವರು ಕಿಡಿಕಾರಿದರು.

    ನಕಲಿ ಜನಪರ ಕಾಳಜಿ: ಈ ಬಗ್ಗೆ ಮಾಜಿ ಉಪಮುಖ್ಯಮಂತ್ರಿ ಆರ್ ಆಶೋಕ್ ಕೂಡ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಆರ್. ಅಶೋಕ್, ಜನರಿಗೆ ಬೈಯುವ ಮೂಲಕ ಮುಖ್ಯಮಂತ್ರಿಗಳ ನಕಲಿ ಜನಪರ ಕಾಳಜಿ ಇಂದು ಬಯಲಾಗಿದೆ ಎಂದು ಬರೆದುಕೊಂಡಿದ್ದಾರೆ. `ಮುಖ್ಯಮಂತ್ರಿಯವರ ಗ್ರಾಮ ವಾಸ್ತವ್ಯದ ನಾಟಕ ಮತ್ತೊಮ್ಮೆ ಬಯಲಾಗಿದೆ. ಸಮಸ್ಯೆ ಬಗೆಹರಿಸಲೆಂದು ಕೋರಿದ ಸಾರ್ವಜನಿಕರನ್ನು ಮೋದಿಜೀ (ಬಿಜೆಪಿ) ಪಕ್ಷಕ್ಕೆ ಮತಹಾಕಿದ್ದಕ್ಕೆ ತರಾಟೆಗೆ ತೆಗೆದುಕೊಂಡು ಲಾಠಿ ಚಾರ್ಜ್ ಮಾಡಿಸುವುದಾಗಿ ಬೆದರಿಸಿ ದೌರ್ಜನ್ಯವೆಸಗಿದ್ದಾರೆ. ಇವರ ನಕಲಿ ಜನಪರ ಕಾಳಜಿ ಇಲ್ಲಿ ಬಯಲಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ.

    ನೀವೇನು ಸರ್ವಾಧಿಕಾರಿಯೇ: ಶಿವಮೊಗ್ಗದಲ್ಲಿ ಪ್ರತಿಯಿಸಿರುವ ಕೆ.ಎಸ್ ಈಶ್ವರಪ್ಪ, ಕರ್ನಾಟಕ ರಾಜ್ಯದ ಕಾಂಗ್ರೆಸ್- ಜೆಡಿಎಸ್ ನಾಯಕರು ತಲೆ ಕೆಟ್ಟವರಂತೆ ಮಾತನಾಡುತ್ತಿದ್ದಾರೆ. ಸಿಎಂ, ಡಿಸಿಎಂ ಹೇಳಿಕೆಗಳ ನೋಡಿದ್ರೆ ಇವರನ್ನು ತಲೆಕೆಟ್ಟವರು ಎಂದೇ ಹೇಳಬೇಕಾಗಿದೆ. ಮುಖ್ಯಮಂತ್ರಿ ಆಗಿರೋದಕ್ಕೆ ಜನ ಸಮಸ್ಯೆ ಹೇಳಿಕೊಳ್ಳಲು ಬರುತ್ತಾರೆ. ರಸ್ತೆ ಮೇಲೆ ಹೋಗೋ ದಾಸಯ್ಯನಿಗೆ ಕೇಳುತ್ತಿಲ್ಲ ಅನ್ನೋದನ್ನ ಸಿಎಂ ಅರಿತುಕೊಳ್ಳಬೇಕು. ಇದು ಸೊಕ್ಕಿನ, ದುರಹಂಕಾರದ ಮಾತಾಗಿದೆ. ಪ್ರಜಾಪ್ರಭುತ್ವ ಹಾಗೂ ಮತದಾರರಿಗೆ ಮಾಡಿದ ಅವಮಾನವಾಗಿದೆ. ಲಾಠಿ ಚಾರ್ಜ್ ಮಾಡುತ್ತೇನೆ ಎಂದಿದ್ದೀರಿ, ನೀವೇನು ಸರ್ವಾಧಿಕಾರಿಯೇ? ಅಘೋಷಿತ ತುರ್ತು ಪರಿಸ್ಥಿತಿ ತರಲು ಹೊರಟಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

    ನಿಮ್ಮ ಸ್ಥಾನಕ್ಕೆ ಗೌರವ ತರುವ ಕೆಲಸ ಮಾಡಿ, ಅಡಿದ ಮಾತಿಗಾಗಿ ಮತದಾರರ ಕ್ಷಮೆ ಕೇಳಿ. ನಿಮ್ಮ ಮಗ ನಿಖಿಲ್ ಸೋತಿದ್ದಕ್ಕೆ ಸಿಟ್ಟು ಬಂದಿದೆಯೋ ಅಥವಾ ಪ್ರಜ್ವಲ್ ಗೆದ್ದಿದ್ದಕ್ಕೆ ಸಿಟ್ಟು ಬಂದಿದೆಯೋ ಎಂದು ಮರು ಪ್ರಶ್ನೆ ಮಾಡಿರುವ ಈಶ್ವರಪ್ಪ ಅವರು, ನಿಮ್ಮ ಈ ಸಿಟ್ಟನ್ನು ಮೋದಿ ಅವರ ಮೇಲೆ ತೀರಿಸಿಕೊಳ್ಳಬೇಡಿ. ಪ್ರಜಾಪ್ರಭುತ್ವಕ್ಕೆ ಗೌರವ ನೀಡಿ, ಇಲ್ಲವಾದಲ್ಲಿ ರಾಜೀನಾಮೆ ನೀಡಿ ಹೋಗಿ ಎಂದು ವಾಗ್ದಾಳಿ ನಡೆಸಿದ್ದಾರೆ.

    ಸಿಎಂಗೆ ‘ಪಬ್ಲಿಕ್’ ಪ್ರಶ್ನೆಗಳೇನು?:
    ಪ್ರಶ್ನೆ 1– ನಿಮಗೆ ವೋಟು ಹಾಕದಿದ್ದರೆ ಸಮಸ್ಯೆ ಹೇಳೋ ಹಾಗೆನೇ ಇಲ್ವಾ?
    ಪ್ರಶ್ನೆ 2– ಕರ್ನಾಟಕದ ಮುಖ್ಯಮಂತ್ರಿ ನೀವಾ, ಇಲ್ಲ ಮೋದಿನಾ?
    ಪ್ರಶ್ನೆ 3– ನೀವು ಕರ್ನಾಟಕದ ಮುಖ್ಯಮಂತ್ರಿನಾ ಅಥವಾ ಜೆಡಿಎಸ್ ಮುಖ್ಯಮಂತ್ರಿನಾ?
    ಪ್ರಶ್ನೆ 4– ಜನರು ನಿಮ್ಮತ್ರ ಬರೋ ಹಾಗೇ ಇಲ್ವಾ?
    ಪ್ರಶ್ನೆ 5– ಕಷ್ಟ ಹೇಳೋದು ಜನರ ಹಕ್ಕು; ಬಗೆಹರಿಸೋದು ನಿಮ್ಮ ಕರ್ತವ್ಯ
    ಪ್ರಶ್ನೆ 6– ಸಮಸ್ಯೆ ಹೇಳಿದ್ರೆ ಲಾಠಿಚಾರ್ಜ್ ಮಾಡಿಸ್ತೀರಾ?
    ಪ್ರಶ್ನೆ 7– ಮೋದಿಗೆ ವೋಟ್ ಹಾಕಿದ್ರೆ ನಿಮ್ಮ ಬಳಿ ಸಮಸ್ಯೆ ಹೇಳೋ ಆಗಿಲ್ವಾ?