Tag: ಪಬ್ಕಿಕ್ ಟಿವಿ

  • ವಾಯ್ಸ್ ಆಫ್ ನೀಡ್ ಫೌಂಡೇಶನ್ ವತಿಯಿಂದ ದಿವ್ಯಾಂಗರಿಗೆ ಕೋವಿಡ್ ಲಸಿಕೆ ಅಭಿಯಾನ

    ವಾಯ್ಸ್ ಆಫ್ ನೀಡ್ ಫೌಂಡೇಶನ್ ವತಿಯಿಂದ ದಿವ್ಯಾಂಗರಿಗೆ ಕೋವಿಡ್ ಲಸಿಕೆ ಅಭಿಯಾನ

    ನೆಲಮಂಗಲ: ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ದಾಸನಪುರದಲ್ಲಿ, ವಾಯ್ಸ್ ಆಫ್ ನೀಡ್ ಫೌಂಡೇಶನ್ ವತಿಯಿಂದ ದಿವ್ಯಾಂಗರಿಗೆ ಕೋವಿಡ್ ಲಸಿಕೆ ಹಾಗೂ ದಿನಸಿ ಪದಾರ್ಥಗಳ ಕಿಟ್ ಗಳನ್ನು ವಿತರಿಸಲಾಯಿತು.

    ಲಸಿಕೆ ಮತ್ತು ದಿನಸಿ ಪದಾರ್ಥಗಳ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಯಲಹಂಕ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಹನುಮಯ್ಯ ಚಾಲನೆ ನೀಡಿದರು. ಇದುವರೆಗೂ ದಾಸನಪುರ ಹೋಬಳಿಯಲ್ಲಿ 700 ರಿಂದ 800 ದಿವ್ಯಾಂಗರಿಗೆ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. ಈ ಸಂಸ್ಥೆಯ ಉದ್ದೇಶ ದಾಸನಪುರ ಹೋಬಳಿಯ ಎಲ್ಲಾ ದಿವ್ಯಾಂಗರಿಗೆ ಸಂಸ್ಥೆಯಿಂದ ಉಚಿತ ಕೋವಿಡ್ ಲಸಿಕೆಯನ್ನು ನೀಡಬೇಕೆಂದಿದೆ ಅದಕ್ಕಾಗಿ ಲಸಿಕಾ ಅಭಿಯಾನ ಆರಂಭಿಸಿ ಜನರ ಸೇವೆಗೆ ಮುಂದಾಗಿದೆ. ಇದನ್ನೂ ಓದಿ: 45 ವರ್ಷ ಮೇಲ್ಪಟ್ಟ 6 ಲಕ್ಷಕ್ಕೂ ಹೆಚ್ಚು ಮಂದಿಗೆ ವ್ಯಾಕ್ಸಿನೇಷನ್ – ಬೆಂಗಳೂರು ವರದಿ ಬಿಡುಗಡೆ

    ದಾಸನಪುರದಲ್ಲಿ ಈಗಾಗಲೇ ದಿವ್ಯಾಂಗರಿಗೆ ಕೋವಿಡ್ ಲಸಿಕೆಯನ್ನು ನೀಡಲಾಗುತ್ತಿದ್ದು, ಒಟ್ಟಿನಲ್ಲಿ ಈ ಸಾರ್ಥಕ ಕಾರ್ಯಕ್ಕೆ ವಾಯ್ಸ್ ಆಫ್ ನೀಡ್ ಫೌಂಡೇಶನ್‍ಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ವೇಳೆ ಅರುಣ್, ಹನುಮಯ್ಯ, ಬಾಲು, ವಸಂತ್, ಕೇಶವ್ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

  • ಚಿಕ್ಕಬಳ್ಳಾಪುರಕ್ಕೆ ಸಿಎಂ ಭೇಟಿ: ರಾಶಿ ರಾಶಿ ಬೀಡಿ, ಸಿಗರೇಟ್, ಮದ್ಯದ ಪ್ಯಾಕೆಟ್ ಜಪ್ತಿ

    ಚಿಕ್ಕಬಳ್ಳಾಪುರಕ್ಕೆ ಸಿಎಂ ಭೇಟಿ: ರಾಶಿ ರಾಶಿ ಬೀಡಿ, ಸಿಗರೇಟ್, ಮದ್ಯದ ಪ್ಯಾಕೆಟ್ ಜಪ್ತಿ

    ಚಿಕ್ಕಬಳ್ಳಾಪುರ:  ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ನಗರದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ನಗರದ ಭಗತ್‍ಸಿಂಗ್ ಕ್ರೀಡಾಂಗಣದಲ್ಲಿ ಬೃಹತ್ ವೇದಿಕೆಯನ್ನ ನಿರ್ಮಾಣ ಮಾಡಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

    ಭದ್ರತೆ ದೃಷ್ಟಿಯಿಂದ ಸಿಎಂ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಸಾರ್ವಜನಿಕರನ್ನ ಕ್ರೀಡಾಂಗಣದ ಪ್ರವೇಶ ದ್ವಾರದಲ್ಲಿ ತೀವ್ರ ತಪಾಸಣೆ ನಡೆಸಲಾಗಿತ್ತು. ತಪಾಸಣೆ ವೇಳೆ ಸಾರ್ವಜನಿಕರ ಬಳಿ ರಾಶಿ ರಾಶಿ ಬೀಡಿ, ಬೆಂಕಿಪಟ್ಟಣ, ಸಿಗರೇಟ್ ಪಾಕೆಟ್, ಮದ್ಯದ ಪಾಕೆಟ್‍ಗಳು ದೊರೆತಿದ್ದು ಎಲ್ಲವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಪ್ರವೇಶ ದ್ವಾರದಲ್ಲೇ ಬೀಡಿ, ಬೆಂಕಿ ಪಟ್ಟಣ, ಗುಟ್ಕಾ, ಮದ್ಯದ ಪಾಕೆಟ್ ಗಳನ್ನು ರಾಶಿ ಮಾಡಿದ್ದು, ಬೀಡಿ ಪಾಕೆಟ್ ಗಳನ್ನ ಪೊಲೀಸರ ಕಣ್ಣು ತಪ್ಪಿಸಿ ಹಲವರು ಕದ್ದು ಒಯ್ದಿದ್ದಾರೆ. ಆದ್ರೆ ಬೀಡಿ ಸಿಗರೇಟನ್ನು ಕಸಿದುಕೊಂಡ ಪೊಲೀಸರ ಕ್ರಮಕ್ಕೆ ಹಲವರು ಆಕ್ಷೇಪ ಕೂಡ ವ್ಯಕ್ತಪಡಿಸಿದ್ದು ಕಂಡು ಬಂತು.