Tag: ಪಪ್ಪಿ

  • ಗೋವಾಗೆ ಭೇಟಿ ನೀಡಿದ್ದ ರಾಹುಲ್‌ ಗಾಂಧಿ ಪಪ್ಪಿಯೊಂದಿಗೆ ದೆಹಲಿಗೆ ವಾಪಸ್‌

    ಗೋವಾಗೆ ಭೇಟಿ ನೀಡಿದ್ದ ರಾಹುಲ್‌ ಗಾಂಧಿ ಪಪ್ಪಿಯೊಂದಿಗೆ ದೆಹಲಿಗೆ ವಾಪಸ್‌

    ಪಣಜಿ: ಗೋವಾಕ್ಕೆ (Goa) ಖಾಸಗಿ ಭೇಟಿ ನೀಡಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi), ಜಾಕ್‌ ರಸೆಲ್‌ ಟೆರಿಯರ್‌ ನಾಯಿ ಮರಿಯೊಂದಿಗೆ ದೆಹಲಿಗೆ (New Delhi) ವಾಪಸ್‌ ಆಗಿದ್ದಾರೆ.

    ಶಿವಾನಿ ಪಿತ್ರೆ ಅವರು ತನ್ನ ಪತಿ ಸ್ಟಾನ್ಲಿ ಬ್ರಗಾಂಕಾ ಅವರೊಂದಿಗೆ ಉತ್ತರ ಗೋವಾದ ಮಾಪುಸಾ ಪಟ್ಟಣದಲ್ಲಿ ವಿವಿಧ ತಳಿಯ ಶ್ವಾನಗಳ ಮಾರಾಟ ಅಂಗಡಿ ನಡೆಸುತ್ತಿದ್ದಾರೆ. ‘ಗೋವಾಗೆ ಭೇಟಿ ನೀಡಿದ್ದ ರಾಹುಲ್‌ ಗಾಂಧಿ ಅವರು ಒಂದು ನಾಯಿ ಮರಿಯನ್ನು ತೆಗೆದುಕೊಂಡು ಹೋಗಿದ್ದಾರೆ. ಮತ್ತೊಂದನ್ನು ಕೆಲ ದಿನಗಳ ನಂತರ ಅವರಿಗೆ ಕಳುಹಿಸಲಾಗುವುದು’ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಣಿಪುರ ಸಂಘರ್ಷ – ಪೊಲೀಸ್ ಅಧಿಕಾರಿಯನ್ನು ಕೊಂದು ಶಸ್ತ್ರಾಸ್ತ್ರಗಳನ್ನು ದೋಚಿದ ಕಿಡಿಗೇಡಿಗಳು

    ರಾಹುಲ್‌ ಗಾಂಧಿ ಅವರು ಗುರುವಾರ ರಾತ್ರಿ ಗೋವಾಗೆ ಭೇಟಿ ಕೊಟ್ಟಿದ್ದರು. ಪಪ್ಪಿಯೊಂದಿಗೆ ಶುಕ್ರವಾರ ಬೆಳಗ್ಗೆ ದೆಹಲಿಗೆ ವಾಪಸ್‌ ಆಗಿದ್ದಾರೆ. ಗುರುವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಉತ್ತರ ಗೋವಾದ ಮೋಪಾದಲ್ಲಿರುವ ಮನೋಹರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಮಾರ್ಗದಲ್ಲಿ ಕಾಂಗ್ರೆಸ್ ನಾಯಕ ಮಾಪುಸಾದಲ್ಲಿ ಶ್ವಾನಗಳಿಗೆ ಶೆಲ್ಟರ್‌ಗೆ ಭೇಟಿ ನೀಡಿದ್ದರು.

    ಗೋವಾ ಶಾಸಕರು ಮತ್ತು ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಮಿತ್ ಪಾಟ್ಕರ್ ಸೇರಿದಂತೆ ಕಾಂಗ್ರೆಸ್ ನಾಯಕರನ್ನು ಬುಧವಾರ ರಾತ್ರಿ ಹೋಟೆಲ್‌ನಲ್ಲಿ ಗಾಂಧಿ ಭೇಟಿ ಮಾಡಿದ್ದರು. ಇದನ್ನೂ ಓದಿ: ಕೇದಾರನಾಥ ಮಾರ್ಗದಲ್ಲಿ ಭಾರಿ ಭೂಕುಸಿತ – ಹಲವರ ಸಮಾಧಿ ಶಂಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೈಕಿನಲ್ಲಿ ಹೋಗ್ತಿದ್ದಾಗಲೇ ಸಂಯುಕ್ತಾ ಹೆಗ್ಡೆ ಲಿಪ್ ಲಾಕ್

    ಬೈಕಿನಲ್ಲಿ ಹೋಗ್ತಿದ್ದಾಗಲೇ ಸಂಯುಕ್ತಾ ಹೆಗ್ಡೆ ಲಿಪ್ ಲಾಕ್

    ಬೆಂಗಳೂರು: ಕಿರಿಕ್ ಬೆಡಗಿ ಸಂಯುಕ್ತಾ ಹೆಗ್ಡೆ ಅವರು ಲಿಪ್‍ಲಾಕ್ ಮಾಡಿದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಸಂಯುಕ್ತಾ ತಮಿಳಿನಲ್ಲಿ ನಟಿಸಿರುವ ‘ಪಪ್ಪಿ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಟ್ರೈಲರ್ ನಲ್ಲಿ ಸಂಯುಕ್ತಾ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಲಿಪ್‍ಲಾಕ್ ದೃಶ್ಯಗಳಲ್ಲಿ ಅಭಿನಯಿಸಿದ್ದು, ಜೊತೆಗೆ ಕೆಲವು ಹಾಟ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪಪ್ಪಿ ಚಿತ್ರದಲ್ಲಿ ಸಂಯುಕ್ತಾ, ಹೀರೋ ವರುಣ್ ಜೊತೆ ಬೈಕಿನಲ್ಲಿ ಹೋಗುವಾಗ ಲಿಪ್‍ಲಾಕ್ ಮಾಡುವ ದೃಶ್ಯಗಳು ವೈರಲ್ ಆಗಿವೆ.

    ಮೊರಟ್ಟು ಸಿಂಗಲ್ `ಪಪ್ಪಿ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಂಯುಕ್ತಾ ಇದೀಗ ತಮಿಳಿನಲ್ಲಿ ಲಿಪ್‍ಲಾಕ್ ಮಾಡಿದ್ದಕ್ಕೆ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಏಕೆಂದರೆ ಈ ಹಿಂದೆ ಕನ್ನಡದ `ಮೈ ನೇಮ್ ಈಸ್ ರಾಜ್’ ಸಿನಿಮಾದಲ್ಲಿ ಸಂಯುಕ್ತಾ ಅಭಿನಯಿಸಬೇಕಿತ್ತು. ಆದರೆ ಚಿತ್ರದಲ್ಲಿ ಲಿಪ್‍ಲಾಕ್ ದೃಶ್ಯಗಳು ಇವೆ ಎಂದು ಚಿತ್ರವನ್ನು ರಿಜೆಕ್ಟ್ ಮಾಡಿದ್ದರು ಎಂದು ಚಿತ್ರತಂಡ ತಿಳಿಸಿತ್ತು.

    ಸಂಯುಕ್ತಾ ಈ ಹಿಂದೆ ತಮಿಳಿನ ‘ಕೋಮಲಿ’ ಚಿತ್ರದಲ್ಲಿ ನಟಿಸಿದ್ದರು. ಇತ್ತೀಚೆಗಷ್ಟೆ ಈ ಸಿನಿಮಾ ಬಿಡುಗಡೆಯಾಗಿದ್ದು, ಸಂಯುಕ್ತಾ ಶಾಲಾ ವಿದ್ಯಾರ್ಥಿನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಸಂಯುಕ್ತಾ ಸಾಮಾಜಿಕ ಜಾಲತಾಣದಲ್ಲೂ ಹಾಟ್ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಆದರೆ ಈಗ ಬೈಕ್ ಮೇಲೆ ಲಿಪ್‍ಲಾಕ್ ಮಾಡುವ ಮೂಲಕ ಇದೀಗ ಸುದ್ದಿಯಲ್ಲಿದ್ದಾರೆ.

  • ಕಿರಿಕ್ ಹುಡುಗಿ ಸಂಯುಕ್ತಾ ಈಗ ತಮಿಳಲ್ಲಿ ಬ್ಯುಸಿ!

    ಕಿರಿಕ್ ಹುಡುಗಿ ಸಂಯುಕ್ತಾ ಈಗ ತಮಿಳಲ್ಲಿ ಬ್ಯುಸಿ!

    ಬೆಂಗಳೂರು: ಕಿರಿಕ್ ಪಾರ್ಟಿ ಚಿತ್ರದ ಮೂಲಕವೇ ನಾಯಕಿಯಾಗಿ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟಿದ್ದವರು ಸಂಯುಕ್ತಾ ಹೆಗ್ಡೆ. ಆ ನಂತರ ಕಾಲೇಜು ಕುಮಾರ ಚಿತ್ರದಲ್ಲಿಯೂ ನಟಿಸಿದ್ದ ಸಂಯುಕ್ತಾ ಬಿಗ್‍ಬಾಸ್ ಶೋ ಸ್ಪರ್ಧಿಯಾದ ನಂತರದ ವಿದ್ಯಮಾನದ ಬಳಿಕ ದೂರ ಉಳಿದಿದ್ದರು. ಆ ನಂತರದಲ್ಲಿ ಅವರು ಕನ್ನಡದ ಯಾವ ಚಿತ್ರಗಳಲ್ಲಿಯೂ ನಟಿಸಿರಲಿಲ್ಲ. ಆದರೀಗ ಸಂಯುಕ್ತಾ ತಮಿಳು ಚಿತ್ರರಂಗದಲ್ಲಿ ಸದ್ದು ಮಾಡಲು ಮುಂದಾಗಿದ್ದಾರೆ!

    ಬಹು ಹಿಂದಿನಿಂದಲೇ ಸಂಯುಕ್ತಾಗೆ ತಮಿಳು ಚಿತ್ರರಂಗದಿಂದ ಆಫರುಗಳು ಬರಲಾರಂಭಿಸಿದ್ದವಂತೆ. ಆದರೆ ಸಂಯುಕ್ತಾ ಅಳೆದೂ ತೂಗಿ ಇದೀಗ ಒಂದು ತಮಿಳು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ನಟ್ಟುದೇವ್ ಜೊತೆ ಸಂಯುಕ್ತಾ ಜೋಡಿಯಾಗಿ ನಟಿಸಲಿರೋ ಈ ಚಿತ್ರ ‘ಪಪ್ಪಿ’.

    ಒಂದು ಪ್ರೇಮ ಕಥನ, ಪ್ರಾಣಿ ಪ್ರೀತಿ ಹಾಗೂ ಡಾಗ್ ಬ್ರೀಡಿಂಗ್ ಸುತ್ತ ಹೆಣೆದಿರೋ ಮಾನವೀಯ ಅಂಶಗಳ ಥ್ರಿಲ್ಲಿಂಗ್ ಕಥೆಯನ್ನು ಈ ಚಿತ್ರ ಹೊಂದಿದೆಯಂತೆ. ಇವತ್ತಿನ ಸಂದರ್ಭದಲ್ಲಿ ಮನುಷ್ಯ ಸಂಬಂಧಗಳೇ ಸವಕಲಾಗುತ್ತಿವೆ. ಈ ಜನರೇಷನ್ನಿನ ಕಣ್ಣಿನಲ್ಲಿ ಸಂಬಂಧಗಳು ಬೇರೆಯದ್ದೇ ಛಾಯೆಯಲ್ಲಿ ಕಾಣಿಸಲಾರಂಭಿಸಿವೆ. ಈ ಸೂಕ್ಷ್ಮ ಸಂಗತಿಯ ನೆಲೆಗಟ್ಟಿನಲ್ಲಿ ಈ ಚಿತ್ರದ ಕಥೆ ಹೆಣೆಯಲ್ಪಟ್ಟಿದೆಯಂತೆ.

    ಈ ಚಿತ್ರದ ಬಗ್ಗೆ ಸಂಯುಕ್ತಾ ಖುಷಿಯ ಮೂಡಿನಲ್ಲಿದ್ದಾರೆ. ತಮಿಳಿನಿಂದ ಸಾಲು ಸಾಲು ಅವಕಾಶಗಳು ಬರುತ್ತಿವೆ. ಆದರೆ ಈ ಚಿತ್ರದಲ್ಲಿ ಕಥೆ ಅದ್ಭುತವಾಗಿರೋ ಕಾರಣದಿಂದ ನಟಿಸಲು ಒಪ್ಪಿರೋದಾಗಿ ಹೇಳಿಕೊಂಡಿರುವ ಸಂಯುಕ್ತಾ ತಮಿಳಿನಲ್ಲಿ ನೆಲೆಗೊಳ್ಳುವ ಆಸೆ ಹೊಂದಿರುವಂತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv