Tag: ಪನ್ನಾ

  • ಅಂಬುಲೆನ್ಸ್‌ನ  ಡೀಸೆಲ್ ಖಾಲಿ – ರಸ್ತೆ ಬದಿಯಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ

    ಅಂಬುಲೆನ್ಸ್‌ನ  ಡೀಸೆಲ್ ಖಾಲಿ – ರಸ್ತೆ ಬದಿಯಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ

    ಭೋಪಾಲ್: ಗರ್ಭಿಣಿಯೊಬ್ಬರನ್ನು (Pregnant) ಅಂಬುಲೆನ್ಸ್‌ನಲ್ಲಿ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಅಂಬುಲೆನ್ಸ್‌ನ (Ambulance) ಡೀಸೆಲ್ ಖಾಲಿಯಾದ್ದರಿಂದ ಮಹಿಳೆ (Woman) ರಸ್ತೆ ಬದಿಯಲ್ಲಿಯೇ ಮಗುವಿಗೆ ಜನ್ಮ ನೀಡಿದ (Delivery) ಘಟನೆ ಮಧ್ಯಪ್ರದೇಶದ (Madhya Pradesh) ಪನ್ನಾ (Panna) ಜಿಲ್ಲೆಯಲ್ಲಿ ನಡೆದಿದೆ.

    ರೇಷ್ಮಾ ಎಂದು ಗುರುತಿಸಲಾದ ಬುಡಕಟ್ಟು ಸಮುದಾಯದ ಮಹಿಳೆ ರಸ್ತೆ ಬದಿಯಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾಳೆ. ಮಹಿಳೆಗೆ ಹೆರಿಗೆ ನಡೆಸಲು ಆರೋಗ್ಯ ಕಾರ್ಯಕರ್ತರು ಸಹಾಯ ಮಾಡಿರುವ ವೀಡಿಯೋ ಕೂಡಾ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಯಮುನಾ ಜಲ ಶುದ್ಧವಾಗಿದೆ ಎಂದು ನಿರೂಪಿಸಲು ಅದೇ ನೀರಿನಲ್ಲಿ ಸ್ನಾನ ಮಾಡಿದ ಜಲಮಂಡಳಿ ನಿರ್ದೇಶಕ

    ವರದಿಗಳ ಪ್ರಕಾರ ರಾತ್ರಿಯ ವೇಳೆ ಮಹಿಳೆಯನ್ನು ಅಂಬುಲೆನ್ಸ್ನಲ್ಲಿ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಅಂಬುಲೆನ್ಸ್ ಸ್ಥಗಿತಗೊಂಡಿದ್ದು, ಬಳಿಕ ಅಂಬುಲೆನ್ಸ್ನ ಡ್ರೈವರ್ ಮಹಿಳೆಯ ಕುಟುಂಬದವರಿಗೆ ಇಂಧನ ಖಾಲಿಯಾಗಿರುವುದಾಗಿ ತಿಳಿಸಿದ್ದಾನೆ. ಇದನ್ನೂ ಓದಿ: 8 ಗಂಡಂದಿರಿಂದ 11 ಮಕ್ಕಳು, ಇನ್ನೂ 19 ಮಕ್ಕಳಿಗಾಗಿ ಪ್ಲ್ಯಾನಿಂಗ್‌ ಮಾಡಿದ್ದಾಳೆ ಈ ಮಹಿಳೆ

    ಕೊನೆಗೆ ಯಾವುದೇ ದಾರಿ ಕಾಣದೇ ತೀವ್ರವಾಗಿ ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಮಹಿಳೆಯನ್ನು ರಸ್ತೆ ಬದಿಯಲ್ಲಿ ಮಲಗಿಸಿ ಹೆರಿಗೆ ಮಾಡಿಸಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿರುವ ವೀಡಿಯೋದಲ್ಲಿ ಅಂಬುಲೆನ್ಸ್ನ ಬಾಗಿಲನ್ನು ತೆರೆದು, ಅದರ ದೀಪದ ಬೆಳಕಿನಲ್ಲಿ ರಸ್ತೆ ಬದಿಯಲ್ಲಿ ಮಹಿಳೆಗೆ ಹೆರಿಗೆ ಮಾಡಿಸಿರುವುದು ಕಂಡುಬಂದಿದೆ. ಮಹಿಳೆಗೆ ಹೆರಿಗೆ ನಡೆಸಲು ಅಂಬುಲೆನ್ಸ್‌ನ ಆರೋಗ್ಯ ಕಾರ್ಯಕರ್ತರು ಹಾಗೂ ಕೆಲ ಸ್ಥಳೀಯ ಮಹಿಳೆಯರು ಸಹಾಯ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]