Tag: ಪನ್ನಗಭರಣ

  • ನಟಿ ಮೇಘನಾ ರಾಜ್ ಹುಟ್ಟು ಹಬ್ಬಕ್ಕೆ ತತ್ಸಮ ತದ್ಭವ ಪೋಸ್ಟರ್ ರಿಲೀಸ್

    ನಟಿ ಮೇಘನಾ ರಾಜ್ ಹುಟ್ಟು ಹಬ್ಬಕ್ಕೆ ತತ್ಸಮ ತದ್ಭವ ಪೋಸ್ಟರ್ ರಿಲೀಸ್

    ದುವೆ ನಂತರ ಸಿನಿಮಾ ರಂಗದಿಂದ ದೂರ ಉಳಿದಿದ್ದ ನಟಿ ಮೇಘನಾ ರಾಜ್ (Meghana Raj) ‘ತತ್ಸಮ ತದ್ಬವ’ (Tatsama Tadbhava)  ಸಿನಿಮಾ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡಿದ್ದರು. ಮೊನ್ನೆಯಷ್ಟೇ ಈ ಸಿನಿಮಾದ ಸಂಪೂರ್ಣ ಚಿತ್ರೀಕರಣ ಕೂಡ ಮುಗಿಸಿದ್ದರು. ಇಂದು ಮೇಘನಾ ರಾಜ್ ಹುಟ್ಟುಹಬ್ಬ (Birthday). ಹಾಗಾಗಿ ತತ್ಸಮ ತದ್ಭವ ಚಿತ್ರತಂಡ ಹುಟ್ಟುಹಬ್ಬಕ್ಕಾಗಿ ಅವರ ಪೋಸ್ಟರ್ (Poster)ರಿಲೀಸ್ ಮಾಡಿದೆ.

    ‘ನಿಜವಾದ ಸ್ನೇಹಿತರು ಯಾವಾಗಲೂ ಜೊತೆಗಿರುತ್ತಾರೆ. ಅಂತಹ ಸ್ನೇಹಿತರು ನನಗಿದ್ದಾರೆ. ನನಗಾಗಿ ಈ ಸಿನಿಮಾ ಮಾಡಿದ್ದಾರೆ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮರು ಪ್ರವೇಶ ಮಾಡಿದ್ದೇನೆ. ಪನ್ನಗ ಭರಣ ಹಾಗೂ ಸ್ಪೂರ್ತಿ ಅನಿಲ್ ನಿರ್ಮಾಣ ಮಾಡಿದ್ದಾರೆ. ವಿಶಾಲ್ ಆತ್ರೇಯ ಒಳ್ಳೆಯ ಕಥೆ ಮಾಡಿಕೊಂಡು ನಿರ್ದೇಶನ ಮಾಡಿದ್ದಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಈವರೆಗೂ ನಾನು ಇಂತಹ ಪಾತ್ರ ಮಾಡಿಲ್ಲ. ಮುಂದೆ ಮಾಡುತ್ತೀನೊ, ಇಲ್ಲವೊ? ಗೊತ್ತಿಲ್ಲ ಎಂದು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು  ಮೇಘನಾ ರಾಜ್.

    ನನಗೆ ನಿರ್ದೇಶಕರು ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ಕಥೆಯಲ್ಲಿ  ಒಂದು ಮುಖ್ಯಪಾತ್ರ ಬರುತ್ತದೆ. ಈ ಪಾತ್ರ ಯಾರು ಮಾಡುತ್ತಿದ್ದಾರೆ ಎಂದು ಕೇಳಿದೆ. ಅವರು ನೀವೇ ಮಾಡುತ್ತಿದ್ದೀರ ಎಂದರು. ಸ್ನೇಹಿತರ ಸಿನಿಮಾ‌ದಲ್ಲಿ ಅಭಿನಯಿಸಿದ ಖುಷಿಯಿದೆ  ಎಂದು ಪ್ರಜ್ವಲ್ ದೇವರಾಜ್ (Prajwal Devaraj) ಮಾತನಾಡಿ ಮೇಘನಾ ಚಿತ್ರಕ್ಕೆ ಸಾಥ್ ನೀಡಿದ್ದಾರೆ. ಇದನ್ನೂ ಓದಿ:ಪ್ರೀತಿಯಿಂದ ಪ್ರಭಾಸ್‌ಗೆ ಅನುಷ್ಕಾ ಶೆಟ್ಟಿ ಏನೆಂದು ಕರೀತಾರೆ ಗೊತ್ತಾ?

    ಇದೊಂದು ಇನ್ವೆಸ್ಟಿಕೇಶನ್ ಕ್ರೈಮ್ ಥ್ರಿಲ್ಲರ್. ಕನ್ನಡದಲ್ಲಿ ಇಂತಹ ಕಥೆ ಬಂದಿರುವುದು ಅಪರೂಪ. ನೋಡುಗರಿಗೂ ಇಷ್ಟವಾಗಬಹುದೆಂಬ ನಂಬಿಕೆಯಿದೆ ಎಂದಿರುವ ನಿರ್ದೇಶಕ ವಿಶಾಲ್ ಆತ್ರೇಯ,  ಸಂಪೂರ್ಣ ಚಿತ್ರೀಕರಣ ಮುಗಿಸಿ, ರೀರೆಕಾರ್ಡಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಚುನಾವಣೆ ಮುಗಿದ ನಂತರ ಸಿನಿಮಾ ಬಿಡುಗಡೆ ಮಾಡುವುದಾಗಿ ನಿರ್ಮಾಪಕ ಪನ್ನಗ ಭರಣ (Pannagabharana)ತಿಳಿಸಿದ್ದಾರೆ.

    ನಟಿ ಶ್ರುತಿ ಕೂಡ ಈ ಸಿನಿಮಾದಲ್ಲಿ ಮಹತ್ವದ ಪಾತ್ರ ಮಾಡಿದ್ದು, ‘ಸಮಾಜದಲ್ಲಿ ಯಾವುದೇ ಹೆಣ್ಣಿಗಾದರೂ ಅನುಕಂಪಕ್ಕಿಂತ, ಅವಕಾಶ ಕೊಡುವುದು ಮುಖ್ಯ. ಮೇಘನಾ ರಾಜ್ ವಿಷಯದಲ್ಲಿ, ಅವರ ಸ್ನೇಹಿತರೆಲ್ಲರೂ ಸೇರಿ ಅವರ ರೀ ಎಂಟ್ರಿಗೆ ಒಳ್ಳೆಯ ಅವಕಾಶ ಕಲ್ಪಿಸಿದ್ದಾರೆ. ನಾನು ಈ ಚಿತ್ರದಲ್ಲಿ ಮನಶಾಸ್ತ್ರಜ್ಞೆಯಾಗಿ ಕಾಣಿಸಿಕೊಂಡಿದ್ದೇನೆ’ ಎಂದಿದ್ದಾರೆ.

  • ಮೇಘನಾ ರಾಜ್ ಸಿನಿಮಾದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಪ್ರಜ್ವಲ್ ದೇವರಾಜ್

    ಮೇಘನಾ ರಾಜ್ ಸಿನಿಮಾದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಪ್ರಜ್ವಲ್ ದೇವರಾಜ್

    ತಿ ಚಿರಂಜೀವಿ ಸರ್ಜಾ(Chiranjeevi Sarja) ನಿಧನದ ನೋವಿನಲ್ಲಿದ್ದ ಮೇಘನಾ ರಾಜ್(Meghana Raj) ಮತ್ತೆ ಬಣ್ಣದ ಲೋಕಕ್ಕೆ ಕಂಬ್ಯಾಕ್ ಆಗಿದ್ದಾರೆ. ಜ್ಯೂನಿಯರ್ ಚಿರು ಪೋಷಣೆಯಲ್ಲಿ ಬ್ಯುಸಿಯಿದ್ದ ನಟಿ ಸ್ನೇಹಿತರ ಬೆಂಬಲದ ಮೇರೆಗೆ ಮತ್ತೆ ನಟನೆಯತ್ತ ವಾಲಿದ್ದಾರೆ. ಮೇಘನಾ ರಾಜ್ ನಟಿಸುವ ಹೊಸ ಚಿತ್ರದಲ್ಲಿ ಸ್ಟಾರ್ ನಟರೊಬ್ಬರು ಸಾಥ್ ನೀಡುತ್ತಿದ್ದಾರೆ.

    `ರಾಜಹುಲಿ’ ನಟಿ ಮೇಘನಾ ರಾಜ್ (Meghana Raj) ಕನ್ನಡ ಮಾತ್ರವಲ್ಲದೇ ಬಹುಭಾಷೆಗಳಲ್ಲಿ ಗುರುತಿಸಿಕೊಂಡಿರುವ ನಟಿ ಪತಿ ಚಿರಂಜೀವ ಸರ್ಜಾ ಅಗಲಿಕೆಯ ನಂತರ ಪುತ್ರ ರಾಯನ್ ಪಾಲನೆಯಲ್ಲಿ ಬ್ಯುಸಿಯಿದ್ದ ನಟಿ, ಸ್ನೇಹಿತರ ಒತ್ತಾಯ ಮತ್ತು ಬೆಂಬಲದ ಮೇರೆಗೆ ಮತ್ತೆ ಬಣ್ಣ ಹಚ್ಚಲು ರೆಡಿಯಾಗಿದ್ದಾರೆ. ನಿರ್ದೇಶಕ ಪನ್ನಗಭರಣ ಡೈರೆಕ್ಷನ್‌ನಲ್ಲಿ ಮೇಘನಾ ಕಾಣಿಸಿಕೊಳ್ಳುತ್ತಿದ್ದಾರೆ. ಸ್ನೇಹಿತ ಪನ್ನಗ ಕೂಡ ಮೇಘನಾಗೆ ಹೋಲುವ ಕಥೆಯನ್ನೇ ರೆಡಿ ಮಾಡಿದ್ದಾರೆ. ಇದೀಗ ಈ ಇಬ್ಬರ ಕಾಂಬಿನೇಷನ್‌ನ ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ಕೂಡ ಸಾಥ್ ನೀಡುತ್ತಿದ್ದಾರೆ. ಇದನ್ನೂ ಓದಿ:ಕಾವ್ಯಶ್ರೀ ರೂಪೇಶ್‌ಗೆ ಪ್ರಪೋಸ್ ಮಾಡಿದ್ರೆ ಸಾನ್ಯಗ್ಯಾಕೆ ಸಿಟ್ಟು?

    ನಟ ಪ್ರಜ್ವಲ್ ದೇವರಾಜ್ ಖಡಕ್ ಆಫೀಸರ್ ಆಗಿ ಮೇಘನಾ ಮತ್ತು ಪನ್ನಗ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. ಪವರ್‌ಫುಲ್ ಪಾತ್ರದ ಮೂಲಕ ರಂಜಿಸಲು ಪ್ರಜ್ವಲ್ ಸಜ್ಜಾಗಿದ್ದಾರೆ.

    ಅಂದ್ಹಾಗೆ ಮೇಘನಾ ರಾಜ್ ನಟನೆಯ ಈ ಚಿತ್ರದ ಟೈಟಲ್ ಅನ್ನ ಚಿರು ಹುಟ್ಟುಹಬ್ಬದಂದು ರಿವೀಲ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಚಿರು ಫೋಟೋ ಇರುವ ಜಾಕೆಟ್ ತೊಟ್ಟ ಪನ್ನಗಾಭರಣ – ಅಭಿಮಾನಿಗಳಿಂದ ಮೆಚ್ಚುಗೆ

    ಚಿರು ಫೋಟೋ ಇರುವ ಜಾಕೆಟ್ ತೊಟ್ಟ ಪನ್ನಗಾಭರಣ – ಅಭಿಮಾನಿಗಳಿಂದ ಮೆಚ್ಚುಗೆ

    ಬೆಂಗಳೂರು: ಪನ್ನಗಾಭರಣ ಚಿರು ಸರ್ಜಾ ಫೋಟೋ ಇರುವ ಜಾಕೆಟ್ ಧರಿಸಿ ಸೈಮಾ ಅವಾರ್ಡ್‍ನಲ್ಲಿ ಕಾಣಿಸಿಕೊಂಡಿರುವುದು ಸ್ಯಾಂಡಲ್‍ವುಡ್‍ನಲ್ಲಿ ಸಖತ್ ಸುದ್ದಿಯಾಗಿದೆ.

    ಇಂದು ನನ್ನ ಪ್ರೀತಿಯ ಗೆಳೆಯನ ಫೋಟೋ ಇರುವ ಬಟ್ಟೆಯನ್ನು ಧರಿಸಿದ್ದೇನೆ, ಸ್ನೇಹಿತ ನನ್ನ ಅದೃಷ್ಟ ಎಂದು ಬರೆದುಕೊಂಡ ಪನ್ನಗಭರಣ ಸೈಮಾ ಅವಾರ್ಡ್‍ನಲ್ಲಿ ತೆಗೆದಿರುವ ಕೆಲವು ಫೋಟೋವನ್ನು ಹಂಚಿಕೊಂಡಿದ್ದರು. ಈ ಪೋಸ್ಟ್ ನೋಡಿದ ಅಭಿಮಾನಿಗಳು ಮೆಚ್ಚುಗೆಯನ್ನು ಸೂಚಿಸಿ ನೀವು ನಿಜವಾದ ಸ್ನೇಹಿತರು, ಉತ್ತಮ ಗೆಳೆಯರು, ನಿಮ್ಮ ಅಂತಹ ಸ್ನೇಹಿತರು ಇರಲು ಸಾಧ್ಯವೇ ಇಲ್ಲ ಎಂದು ಕಮೆಂಟ್ ಮಾಡುತ್ತಾ ಇಬ್ಬರ ನಡುವೆ ಇರುವ ಸ್ನೇಹವನ್ನು ಹಾಡಿಹೊಗಳಿದ್ದಾರೆ. ಇದನ್ನೂ ಓದಿ:  ಕುಡಿಯುವ ನೀರಿಗಾಗಿ ಮಸೀದಿಗೆ ಹೋಗಿದ್ದಕ್ಕೆ ಒತ್ತೆಯಾಳು

     

    View this post on Instagram

     

    A post shared by Pannaga Bharana (@pannagabharana)

    ಅಂತಿಮವಾಗಿ ಅದೃಷ್ಟ ಮತ್ತು ಶಕ್ತಿ ನಮ್ಮ ಕಡೆ ಇತ್ತು. ಫ್ರೆಂಚ್ ಬಿರಿಯಾನಿ ಸಿನಿಮಾಗೆ ಅತ್ಯುತ್ತಮ ನಿರ್ದೇಶಕ 2020 ಅವಾರ್ಡ್ ಸಿಕ್ಕಿದೆ. ಕನಸು ನನಸಾಯಿತು. ನನ್ನ ಇಡೀ ಚಿತ್ರತಂಡ, ಸಿಬ್ಬಂದಿಗೆ ಧನ್ಯವಾದಗಳು. ನನ್ನ ತಂಡದ ಬಗ್ಗೆ ತುಂಬಾ ಹೆಮ್ಮೆ ಇದೆ ಎಂದು ಬರೆದುಕೊಂಡು ಅವಾರ್ಡ್ ಬಂದಿರುವ ಸಂತೋಷವನ್ನು ಪನ್ನಗಾಭರಣ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ದಸರಾ ತಾಲೀಮು ವೇಳೆ ಅರಮನೆ ಬಳಿ ಆನೆ ರಂಪಾಟ

     

    View this post on Instagram

     

    A post shared by Pannaga Bharana (@pannagabharana)

    ಚಿರಂಜೀವಿ ಸರ್ಜಾ ಹಾಗೂ ನಿರ್ದೇಶಕ ಪನ್ನಗಾಭರಣ ತುಂಬಾನೇ ಆಪ್ತರಾಗಿದ್ದರು. ಅವರ ನಡುವೆ ಒಳ್ಳೆಯ ಗೆಳೆತನ ಬೆಳೆದಿತ್ತು. ಚಿರು ಅಕಾಲಿಕ ಮರಣ ಹೊಂದಿದರು. ಇದು ಅನೇಕರಿಗೆ ಬೇಸರ ಮೂಡಿಸಿತ್ತು. ಪನ್ನಗಾಭರಣ ಅವರು ತುಂಬಾನೇ ನೊಂದುಕೊಂಡರು. ಈಗ ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ಪನ್ನಗಾಭರಣ ಅವರು ಚಿರು ಸರ್ಜಾ ಫೋಟೋ ಇರುವ ಜಾಕೆಟ್ ಧರಿಸಿ ಕಾಣಿಸಿಕೊಂಡಿದ್ದಾರೆ.

     

    View this post on Instagram

     

    A post shared by Pannaga Bharana (@pannagabharana)

    ದಕ್ಷಿಣ ಭಾರತದ ಸಿನಿಮಾ ಚಿತ್ರರಂಗದಲ್ಲಿನ ಸಿನಿಮಾಗಳಿಗೆ ಸೈಮಾ  ಅವಾರ್ಡ್ಸ್ ನೀಡಲಾಗುತ್ತದೆ. ಇತ್ತೀಚೆಗೆ ಈ ಕಾರ್ಯಕ್ರಮ ನಡೆದಿದೆ. ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್ ಸೇರಿ ಸಾಕಷ್ಟು ಸ್ಯಾಂಡಲ್‍ವುಡ್‍ನ ನಟ, ನಟಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಪನ್ನಗಾಭರಣ ಅವರು ತೊಟ್ಟಿರುವ ಬಟ್ಟೆ ಮೇಲೆ  ಇರುವ ಚಿರು ಫೋಟೋ ಎಲ್ಲರ ಗಮನ ಸೆಳೆದಿದೆ.