Tag: ಪನೀರ್ ಬಿರಿಯಾನಿ

  • 30 ನಿಮಿಷದಲ್ಲಿ ಮಾಡಿ ಬಿಸಿ ಬಿಸಿಯಾದ ಪನೀರ್ ಬಿರಿಯಾನಿ

    30 ನಿಮಿಷದಲ್ಲಿ ಮಾಡಿ ಬಿಸಿ ಬಿಸಿಯಾದ ಪನೀರ್ ಬಿರಿಯಾನಿ

    ಬೆಳಗ್ಗಿನ ಉಪಹಾರಕ್ಕೆ ಏನು ಮಾಡುವುದು ಎಂದು ನೀವು ಯೋಚಿಸುತ್ತಿದ್ದಿರಾ? ಚಳಿ ಇರುವುದರಿಂದ ಬಿಸಿಯಾ ಟೀ, ಕಾಫಿ ಜೊತೆಗೆ ಪನೀರ್ ಬಿರಿಯಾನಿ ಮಾಡಿದರೆ ಸಖತ್ ರುಚಿಯಾಗಿರುತ್ತದೆ. ಪನೀರ್ ಬಿರಿಯಾನಿ ಮಾಡುವುದು ಎಷ್ಟು ಸುಲಭ ಅಷ್ಟೇ ರುಚಿಯಾಗಿದೆ.  ಕೇವಲ 30 ನಿಮಿಷ ಸಮಯ ಇದ್ದರೆ ಸಾಕು ಈ ರುಚಿಯಾದ ಅಡುಗೆಯನ್ನು ಮಾಡಬಹುದಾಗಿದೆ.

    ಬೇಕಾಗುವ ಸಾಮಗ್ರಿಗಳು:
    * ಪನೀರ್- ಅರ್ಧ ಕೆಜಿ
    * ಅಕ್ಕಿ- 2 ಕಪ್
    * ತುಪ್ಪ – ಅರ್ಧ ಕಪ್
    * ಜೀರಿಗೆ- 1 ಚಮಚ
    * ಅಡುಗೆ ಎಣ್ಣೆ- 2 ಚಮಚ
    * ಈರುಳ್ಳಿ- 3
    * ಶುಂಠಿ, ಬೆಳ್ಳುಳ್ಳಿ ಪೇಸ್ಟ್- 2 ಚಮಚ
    * ಚಕ್ಕೆ, ಏಲಕ್ಕಿ, ಲವಂಗ- ಸ್ವಲ್ಪ
    * ಪಲಾವ್ ಎಲೆ0- ಸ್ವಲ್ಪ
    * ಹಸಿಮೆಣಸು- 4
    * ಕ್ಯಾರೆಟ್- 1
    * ಕೊತ್ತಂಬರಿ ಸೊಪ್ಪು- ಸ್ವಲ್ಪ
    * ಪುದಿನ ಸೊಪ್ಪು- ಸ್ವಲ್ಪ
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಅಕ್ಕಿಯನ್ನು ತೊಳೆದು ಸ್ವಲ್ಪ ಸಮಯ ನೀರಿನಲ್ಲಿ ನೆನೆಸಿಡಿ.
    * ನಂತರ ಒಂದು ಬಾಣಲೆಗೆ ತುಪ್ಪ, ಎಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ ಪನೀರ್ ತುಂಡು ಮಾಡಿ ಹಾಕಿ ಕೆಂಪಗಾಗುವಂತೆ ಹುರಿಯಿರಿದು ತೆಗೆದಿಟ್ಟುಕೊಳ್ಳಬೇಕು. ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ


    * ಕುಕ್ಕರ್‌ಗೆ ತುಪ್ಪ, ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ, ಈರುಳ್ಳಿ ಹಾಕಿ ಹುರಿದುಕೊಳ್ಳಿ.
    * ಹಸಿಮೆಣಸು, ಕ್ಯಾರೆಟ್, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿ. ಅಗತ್ಯವಿರುವಷ್ಟು ನೀರು, ಉಪ್ಪು ಸೇರಿಸಿ. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ


    * ಈಗ ಬಳಿಕ ಅಕ್ಕಿ ಹುರಿದ ಪನೀರ್, ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿಸೊಪ್ಪು, ಪುದಿನ ಸೊಪ್ಪು ಹಾಕಿ ಮುಚ್ಚಳ ಮುಚ್ಚಿ ಬೇಯಿಸಿದರೆ ರುಚಿಯಾದ ಪನೀರ್ ಬಿರಿಯಾನಿ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ:   ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ