Tag: ಪದ್ಮ ಪ್ರಶಸ್ತಿ

  • ಪದ್ಮ ಪ್ರಶಸ್ತಿ; ಕನ್ನಡದ ಹಿರಿಯ ನಟ ಅನಂತ್‌ ನಾಗ್‌, ರಿಕಿ ಕೇಜ್‌ ಸೇರಿ 68 ಸಾಧಕರಿಗೆ ಪದ್ಮ ಪುರಸ್ಕಾರ ಪ್ರದಾನ

    ಪದ್ಮ ಪ್ರಶಸ್ತಿ; ಕನ್ನಡದ ಹಿರಿಯ ನಟ ಅನಂತ್‌ ನಾಗ್‌, ರಿಕಿ ಕೇಜ್‌ ಸೇರಿ 68 ಸಾಧಕರಿಗೆ ಪದ್ಮ ಪುರಸ್ಕಾರ ಪ್ರದಾನ

    – ಪ್ರಶಸ್ತಿ ಪಡೆದ ಕನ್ನಡದ ಸಾಧಕರಿವರು..

    ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕನ್ನಡದ ಹಿರಿಯ ನಟ ಅನಂತ್‌ ನಾಗ್‌‌ (Anant Nag), ರಿಕಿ ಕೇಜ್‌ (Ricky Kej), ಪ್ರಶಾಂತ್‌ ಪ್ರಕಾಶ್‌, ವೆಂಕಪ್ಪ ಅಂಬಾಜಿ ಸುಗಟೇಕರ್‌ ಸೇರಿದಂತೆ ದೇಶಾದ್ಯಂತ 68 ಸಾಧಕರಿಗೆ ಪದ್ಮ ಪುರಸ್ಕಾರ ಪ್ರದಾನ ಮಾಡಿದರು.

    ಕನ್ನಡದ ಹಿರಿಯ ನಟ ಅನಂತ ನಾಗ್‌, ಖ್ಯಾತ ಸಂಗೀತ ನಿರ್ದೇಶಕ ರಿಕಿ ಕೇಜ್‌, ಉದ್ಯಮಿ ಪ್ರಶಾಂತ್‌ ಪ್ರಕಾಶ್‌, ವೆಂಕಪ್ಪ ಅಂಬಾಜಿ ಸುಗಟೇಕರ್‌ ಪ್ರಶಸ್ತಿ ಸ್ವೀಕರಿಸಿದರು. ಇದನ್ನೂ ಓದಿ: ಹಿರಿಯ ನಟ ಅನಂತ್ ನಾಗ್‌ಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ

    ಅನಂತ್ ನಾಗ್
    ಕನ್ನಡ ಚಲನಚಿತ್ರ ರಂಗದ ಹಿರಿಯ ನಟರಾಗಿ ಅನಂತ್‌ ನಾಗ್‌ ಖ್ಯಾತಿ ಗಳಿಸಿದ್ದಾರೆ. ಕಳೆದ 5 ದಶಕಗಳಲ್ಲಿ ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗೆ ಮತ್ತು ತಮ್ಮ ಬಹುಮುಖ ಪ್ರತಿಭೆಗೆ ಹೆಸರುವಾಸಿಯಾಗಿದ್ದಾರೆ. ಸಿನಿಮಾ ರಂಗದಲ್ಲಿ ಸಾಧನೆಗೆ ಅವರಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿತು.

    ರಿಕಿ ಕೇಜ್‌
    ಡಾ. ರಿಕಿ ಗ್ಯಾನ್‌ ಕೇಜ್ ಜಾಗತಿಕ ಸಂಗೀತ ಕ್ಷೇತ್ರದಲ್ಲಿ ಪ್ರಮುಖ ವ್ಯಕ್ತಿ. ಅವರು ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತರು ಮತ್ತು ನಾಲ್ಕು ಬಾರಿ ಗ್ರ್ಯಾಮಿ ನಾಮನಿರ್ದೇಶಿತರು.

    ಪ್ರಶಾಂತ್‌ ಪ್ರಕಾಶ್‌
    90ರ ದಶಕದ ಮಧ್ಯಭಾಗದಿಂದ ಭಾರತದ ಉದ್ಯಮಶೀಲತೆ ಮತ್ತು ಲೋಕೋಪಕಾರಿ ಭೂದೃಶ್ಯವನ್ನು ವ್ಯಾಖ್ಯಾನಿಸುವಲ್ಲಿ ಪ್ರಶಾಂತ್ ಪ್ರಕಾಶ್ ಪ್ರಮುಖ ಪಾತ್ರ ವಹಿಸಿದ್ದಾರೆ. ವಿಶೇಷವಾಗಿ ನವೋದ್ಯಮ ಕ್ಷೇತ್ರದಲ್ಲಿನ ಕಾರ್ಯತಂತ್ರದ ಮಧ್ಯಪ್ರವೇಶಗಳಿಗೆ ಹೆಸರುವಾಸಿಯಾಗಿದ್ದಾರೆ. ಇಂದು ಶತಕೋಟಿ ಮೌಲ್ಯದ ಸ್ವದೇಶಿ, ಉನ್ನತ-ಬೆಳವಣಿಗೆಯ ಉದ್ಯಮಗಳನ್ನು ಬೆಂಬಲಿಸುತ್ತಿದ್ದಾರೆ.

    ಡಾ. ವೆಂಕಪ್ಪ ಅಂಬಾಜಿ ಸುಗಟೇಕರ್
    ಡಾ.ವೆಂಕಪ್ಪ ಅಂಬಾಜಿ ಸುಗಟೇಕರ್ ಅವರು ಕರ್ನಾಟಕದ ವಿಶಿಷ್ಟ ಗೋಂಧಳಿ ಜಾನಪದ ಕಲಾವಿದರು. ಅವರು ಏಳು ದಶಕಗಳಿಗೂ ಹೆಚ್ಚು ಕಾಲದ ವೃತ್ತಿಜೀವನದಲ್ಲಿ ಗೊಂಧಳಿ ಜಾನಪದ ಸಂಗೀತ ಸಂಪ್ರದಾಯವನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ನೀಡಿದ ಅಪಾರ ಕೊಡುಗೆಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಅಸಾಧಾರಣ ಸ್ಮರಣ ಶಕ್ತಿಯನ್ನು ಹೊಂದಿದ್ದಾರೆ. ದಾಸರ ಪದ, ಸಂತ ಶಿಶುನಾಳ ಶರೀಫರ ಪದ, ವಚನ ಸಾಹಿತ್ಯ, ದೇವಿ ಪದ ಸೇರಿದಂತೆ ಸಾವಿರಾರು ಜಾನಪದ ಹಾಡುಗಳನ್ನು ಕರಗತ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಉರ್ದುಗೆ 100 ಕೋಟಿ – ಕನ್ನಡಕ್ಕೆ ಬರೀ 32 ಕೋಟಿನಾ..? – ಬಿಜೆಪಿ ಪೋಸ್ಟರ್ ತಂತ್ರಕ್ಕೆ ಸಿಎಂ ಕೆಂಡ

  • ಸ್ಪಿನ್‌ ಮಾಂತ್ರಿಕ ಅಶ್ವಿನ್‌, ಒಲಿಂಪಿಕ್ಸ್‌ ಪದಕ ವಿಜೇತ ಶ್ರೀಜೇಶ್‌ಗೆ ಪದ್ಮ ಪ್ರಶಸ್ತಿ ಗೌರವ

    ಸ್ಪಿನ್‌ ಮಾಂತ್ರಿಕ ಅಶ್ವಿನ್‌, ಒಲಿಂಪಿಕ್ಸ್‌ ಪದಕ ವಿಜೇತ ಶ್ರೀಜೇಶ್‌ಗೆ ಪದ್ಮ ಪ್ರಶಸ್ತಿ ಗೌರವ

    ನವದೆಹಲಿ: ರಾಷ್ಟ್ರಪತಿ ಭವನದಲ್ಲಿಂದು ನಡೆದ‌ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಟೀಂ ಇಂಡಿಯಾದ ಸ್ಪಿನ್‌ ಮಾಂತ್ರಿಕ ರವಿಚಂದ್ರನ್‌ ಅಶ್ವಿನ್‌ (R Ashwin) ಹಾಗೂ ಒಲಿಂಪಿಕ್ಸ್‌ ಪದಕ ವಿಜೇತರೂ ಆಗಿರುವ ಮಾಜಿ ಹಾಕಿ ಆಟಗಾರ ಪಿ.ಆರ್‌ ಶ್ರೀಜೇಶ್‌ಗೆ (PR Sreejesh) 2025ನೇ ಸಾಲಿನ ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು, ರವಿಚಂದ್ರನ್ ಅಶ್ವಿನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಹಾಗೂ ಪಿ.ಆರ್ ಶ್ರೀಜೇಶ್ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಿದರು. ಈ ವೇಳೆ ಮೇಜರ್ ಧ್ಯಾನ್ ಚಂದ್ ನಂತರ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದ 2ನೇ ಭಾರತೀಯ ಹಾಕಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದನ್ನೂ ಓದಿ: ಬಿಸಿಸಿಐ ವಾರ್ಷಿಕ ಗುತ್ತಿಗೆ ಪ್ರಕಟ – ಯಾರಿಗೆ ಎಷ್ಟು ಕೋಟಿ? ಇಲ್ಲಿದೆ ಕಂಪ್ಲೀಟ್‌ ಲಿಸ್ಟ್‌

    ಭಾರತದ ಕ್ರಿಕೆಟ್‌ ದಂತಕಥೆಗಳಲ್ಲಿ ಒಬ್ಬರಾದ ಅಶ್ವಿನ್‌, ಭಾರತ ಕ್ರಿಕೆಟ್‌ ತಂಡ 2011ರಲ್ಲಿ ಏಕದಿನ ವಿಶ್ವಕಪ್‌ ಹಾಗೂ 2013ರಲ್ಲಿ ಚಾಂಪಿಯನ್ಸ್‌ ಟ್ರೋಫಿ ಗೆದ್ದಾಗ ಟೀಂ ಇಂಡಿಯಾದ ಭಾಗವಾಗಿದ್ದರು. ಆಲ್‌ರೌಂಡರ್‌ ಪ್ರದರ್ಶನ ನೀಡುತ್ತಿದ್ದ ಅಶ್ವಿನ್‌ ತಮ್ಮ ಸ್ಪಿನ್‌ ಬೌಲಿಂಗ್‌ನಿಂದಲೇ ಮೋಡಿ ಮಾಡಿದ್ದರು. ಇದನ್ನೂ ಓದಿ: SRH Vs MI – ಇಶಾನ್ ಕಿಶನ್ ವಿವಾದಿತ `ಔಟ್’ – ಮ್ಯಾಚ್ ಫಿಕ್ಸಿಂಗ್ ಚರ್ಚೆ!

    ಭಾರತ ಕ್ರಿಕೆಟ್‌ ತಂಡಕ್ಕಾಗಿ ಆಡಿದ 106 ಪಂದ್ಯಗಳಲ್ಲಿ 537 ವಿಕೆಟ್‌ ಪಡೆಯುವ ಮೂಲಕ ಭಾರತದ 2ನೇ ಅತಿ ಹೆಚ್ಚು ವಿಕೆಟ್‌ ಪಡೆದ ದಾಖಲೆ ಬರೆದಿದ್ದಾರೆ. ಅಲ್ಲದೇ ಅಶ್ವಿನ್ 3,503 ಬಾರಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 6 ಶತಕ ಸಿಡಿಸಿದ್ದಾರೆ. ಏಕದಿನ ಪದ್ಯದಲ್ಲಿ 156 ವಿಕೆಟ್‌ ಹಾಗೂ ಟಿ20 ಕ್ರಿಕೆಟ್‌ನಲ್ಲಿ 72 ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ: ʼಇದು ನನ್ನ ಮೈದಾನʼ – ಟಾಂಗ್‌ ಕೊಟ್ಟ ಕೊಹ್ಲಿಗೆ ಕೈ ಸನ್ನೆ ಮಾಡಿ ತೋರಿಸಿದ ರಾಹುಲ್‌

    ಇನ್ನೂ ಭಾರತೀಯ ಹಾಕಿ ತಂಡದ ಮಾಜಿ ಆಟಗಾರ ಶ್ರೀಜೇಶ್, ಟೋಕಿಯೊ ಮತ್ತು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಸತತ ಎರಡು ಕಂಚಿನ ಪದಕ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಟೋಕಿಯೊ ಕ್ರೀಡಾಕೂಟದ ಕಂಚಿನ ಪದಕ ಸ್ಪರ್ಧೆಯಲ್ಲಿ ಭಾರತ ತಂಡವು ಜರ್ಮನಿಯನ್ನ ಸೋಲಿಸಿತ್ತು. 2024ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಸ್ಪೇನ್‌ ವಿರುದ್ಧ ಗೆದ್ದಿತ್ತು.

  • ರಾಜ್ಯದ 9 ಸಾಧಕರಿಗೆ ಪದ್ಮ ಪ್ರಶಸ್ತಿ

    ರಾಜ್ಯದ 9 ಸಾಧಕರಿಗೆ ಪದ್ಮ ಪ್ರಶಸ್ತಿ

    ನವದೆಹಲಿ: ದೇಶದ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಗಳಾದ ಪದ್ಮವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಶನಿವಾರ ಪ್ರಕಟಿಸಿದೆ. ರಾಜ್ಯದ 9 ಸಾಧಕರಿಗೆ ಪದ್ಮ ಪ್ರಶಸ್ತಿ ಲಭಿಸಿದೆ.

    ಪದ್ಮವಿಭೂಷಣ
    ಪಿಟೀಲು ವಾದಕ ಲಕ್ಷ್ಮೀನಾರಾಯಣ ಸುಬ್ರಮಣ್ಯಂ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ಸಿಕ್ಕಿದೆ.

    ಪದ್ಮಭೂಷಣ
    ಸ್ಯಾಂಡಲ್‌ವುಡ್‌ ಹಿರಿಯ ನಟ ಅನಂತನಾಗ್‌, ಶಿಕ್ಷಣ ತಜ್ಞ ಹಾಗೂ ಅಂಕಣಕಾರ ಎ.ಸೂರ್ಯಪ್ರಕಾಶ್‌ ಅವರು ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    ಪದ್ಮಶ್ರೀ
    ಗ್ರಾಮಿ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್‌, ವೈದ್ಯಕೀಯ ಕ್ಷೇತ್ರದ ವಿಜಯಲಕ್ಷ್ಮಿ ದೇಶಮಾನೆ, ಕಲಾ ಕ್ಷೇತ್ರದಲ್ಲಿ ವೆಂಕಪ್ಪ ಅಂಬಾಜಿ, ಹಾಸನ ರಘು, ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ, ಕೈಗಾರಿಕಾ ಕ್ಷೇತ್ರದಲ್ಲಿ ಪ್ರಶಾಂತ್‌ ಪ್ರಕಾಶ್‌ ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ.

  • ದೇಶಾದ್ಯಂತ 75ನೇ ಗಣರಾಜ್ಯೋತ್ಸವ ಸಂಭ್ರಮ – ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ಮೋದಿ ಅಭಿನಂದನೆ

    ದೇಶಾದ್ಯಂತ 75ನೇ ಗಣರಾಜ್ಯೋತ್ಸವ ಸಂಭ್ರಮ – ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ಮೋದಿ ಅಭಿನಂದನೆ

    ನವದೆಹಲಿ: ದೇಶಾದ್ಯಂತ 75ನೇ ಗಣರಾಜ್ಯೋತ್ಸವದ (75th Republic Day) ಸಂಭ್ರಮ ಮನೆ ಮಾಡಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಧ್ವಜಾರೋಹಣ (Flag hoisting) ನೆರವೇರಿದ್ದು, ಪರೇಡ್‌ಗಳಲ್ಲಿ ವಿಶೇಷ ಪ್ರದರ್ಶನಗಳು ಕಂಡುಬಂದಿವೆ.

    ಈ ಸಂದರ್ಭದಲ್ಲಿ 2024ನೇ ಸಾಲಿನ ಪದ್ಮ ಪ್ರಶಸ್ತಿಗಳಿಗೆ (Padma Awards 2024) ಆಯ್ಕೆಯಾಗಿರುವ 132 ಸಾಧಕರಿಗೂ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ಗಣರಾಜ್ಯೋತ್ಸವದ ಶುಭಾಶಯಗಳನ್ನೂ ತಿಳಿಸಿದ್ದಾರೆ. ಕರ್ನಾಟಕದ 9 ಮಂದಿ ಸೇರಿ ಒಟ್ಟು 132 ಮಂದಿಗೆ ಪ್ರಶಸ್ತಿ ಲಭಿಸಿದ್ದು, ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಭಿನಂದನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: 75th Republic Day: ದೆಹಲಿಯಲ್ಲಿ ನಡೆಯುವ ಪಥಸಂಚಲನಕ್ಕೆ ಬೆಳಗಾವಿ ಮೂಲದ ಯೋಧ ಆಯ್ಕೆ

    ಈ ವ್ಯಕ್ತಿಗಳು ಅದ್ಭುತ ಉದಾಹರಣೆಗಳನ್ನ ಸೃಷ್ಟಿಸಿದ್ದಾರೆ. ಮಾತ್ರವಲ್ಲದೇ ತಮ್ಮ ಸೇವೆಯಿಂದ ರಾಷ್ಟ್ರದ ಘನತೆಯನ್ನ ಹೆಚ್ಚಿದ್ದಾರೆ. ವಿವಿಧ ಕ್ಷೇತ್ರಗಳಿಗೆ ವಿಶಿಷ್ಟ ಕೊಡುಗೆಗಳನ್ನು ನೀಡುವ ಮೂಲಕ ಸಮಾಜದಲ್ಲಿ ಬದಲಾವಣೆ ತರುತ್ತಿರುವ ಸಾಧಕರಿಗೆ ನಾನು ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಡ್ರೋಣ್ ಔಟ್: ಬಚಾವ್ ಮಾಡಿದ ಸುದೀಪ್

    ‘ಪದ್ಮ’ ಪ್ರಶಸ್ತಿ ಭಾಜನರಾದ 9 ಕನ್ನಡಿಗರು
    ಪದ್ಮಭೂಷಣ ಪ್ರಶಸ್ತಿಗೆ ಕನ್ನಡಿಗರಾದ ಸೀತಾರಾಮ್‌ ಜಿಂದಾಲ್‌ (ವ್ಯಾಪಾರ ಮತ್ತು ಕೈಗಾರಿಕೆ) ಭಾಜನರಾಗಿದ್ದಾರೆ. ಪದ್ಮಶ್ರೀ ಪ್ರಶಸ್ತಿಗೆ ರೋಹನ್‌ ಮಾಚಂಡ ಬೋಪಣ್ಣ (ಕ್ರೀಡೆ), ಪ್ರೇಮಾ ಧನರಾಜ್‌ (ವೈದ್ಯಕೀಯ), ಅನುಪಮಾ ಹೊಸಕೆರೆ (ಕಲೆ), ಶ್ರೀಧರ್‌ ಮಕಮ್‌ ಕೃಷ್ಣಮೂರ್ತಿ (ಸಾಹಿತ್ಯ ಮತ್ತು ಶಿಕ್ಷಣ), ಕೆ.ಎಸ್‌.ರಾಜಣ್ಣ (ಸಾಮಾಜಿಕ ಕಾರ್ಯ), ಚಂದ್ರಶೇಖರ್‌ ಚನ್ನಪಟ್ಟಣ ರಾಜಣ್ಣಾಚಾರ್‌ (ವೈದ್ಯಕೀಯ), ಸೋಮಣ್ಣ (ಸಾಮಾಜಿಕ ಕಾರ್ಯ), ಶಶಿ ಸೋನಿ (ವ್ಯಾಪಾರ ಮತ್ತು ಕೈಗಾರಿಕೆ).

    ಪದ್ಮ ವಿಭೂಷಣ ಪುರಸ್ಕೃತರು

    ಪದ್ಮಭೂಷಣ ಪುರಸ್ಕೃತರು

    ಪದ್ಮಶ್ರೀ ಪುರಸ್ಕೃತರು

  • ‘ಮೆಗಾಸ್ಟಾರ್’ಗೆ ಪದ್ಮವಿಭೂಷಣ: ಅಭಿನಂದಿಸಿದ ಸಂಸದೆ ಸುಮಲತಾ

    ‘ಮೆಗಾಸ್ಟಾರ್’ಗೆ ಪದ್ಮವಿಭೂಷಣ: ಅಭಿನಂದಿಸಿದ ಸಂಸದೆ ಸುಮಲತಾ

    ಭಾರತದ ಅತ್ಯುನ್ನತ ನಾಗರೀಕ ಗೌರವ ಪದ್ಮ ಪ್ರಶಸ್ತಿಗಳು ನಿನ್ನೆ ಪ್ರಕಟಗೊಂಡಿವೆ. ತೆಲುಗಿನ ಮೆಗಾಸ್ಟಾರ್ ಚಿರಂಜೀವಿ (Chiranjeevi) ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಪ್ರಕಟವಾಗಿದ್ದು ನಟಿ, ಸಂಸದೆ ಸುಮಲತಾ ಅಂಬರೀಶ್ (Sumalatha Ambarish) ಅವರು ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಚಿರಂಜೀವಿ ಅವರನ್ನು ಅಭಿನಂದಿಸಿದ್ದಾರೆ.

    ಈ ಗೌರವಕ್ಕೆ ನೀವು ಅರ್ಹವಾದ ವ್ಯಕ್ತಿ. ಪ್ರಶಸ್ತಿ ಪ್ರಕಟಗೊಂಡಿದ್ದು ಕೇಳಿ ಅತ್ಯಂತ ಹೆಮ್ಮೆ ಅನಿಸಿತು. ನಿಮ್ಮೊಂದಿಗೆ ಸುಂದರವಾದ ಚಿತ್ರಗಳಲ್ಲಿ ಅಭಿನಯಿಸಿದ್ದಕ್ಕೆ ಮತ್ತು ಸಾಕಷ್ಟು ಕ್ಷಣಗಳನ್ನು ಒಟ್ಟಿಗೆ ಕಳೆದಿದ್ದಕ್ಕೆ ಹೆಮ್ಮೆ ಅನಿಸುತ್ತದೆ. ಅದೊಂದು ಅದ್ಭುತವಾದ ಜರ್ನಿ. ನಿಮ್ಮ ಮುಂದಿನ ಜೀವನಕ್ಕೆ ಈ ಪ್ರಶಸ್ತಿ ಒಂದು ಗರಿ ಎಂದು ಅವರು ಬರೆದುಕೊಂಡಿದ್ದಾರೆ.

    ಗಣರಾಜ್ಯೋತ್ಸವದ ಮುನ್ನಾ ದಿನ 2024ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು (Padma Awards 2024) ಪ್ರಕಟಿಸಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಈ ಪ್ರಶಸ್ತಿ ದೊರೆತಿದೆ. ಸಾಧಕರಿಗೆ ಪದ್ಮ ವಿಭೂಷಣ, ಪದ್ಮ ಭೂಷಣ ಪ್ರಶಸ್ತಿ ನೀಡಲಾಗಿದೆ. ಅದರಂತೆ ಹಲವು ವರ್ಷಗಳಿಂದ ಕಲಾ ಸೇವೆ ಮಾಡಿರುವ ಅನೇಕ ಗಣ್ಯರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.

    ಕಲೆ ಕ್ಷೇತ್ರದಲ್ಲಿ ಪದ್ಮವಿಭೂಷಣ ಪ್ರಶಸ್ತಿ ಭಾಜನರಾದವರು

    1.ವೈಜಯಂತಿಮಾಲಾ ಬಾಲಿ (ತಮಿಳುನಾಡು)

    2.ಮೆಗಾಸ್ಟಾರ್ ಚಿರಂಜೀವಿ (ಆಂಧ್ರಪ್ರದೇಶ)

    3.ಪದ್ಮ ಸುಬ್ರಹ್ಮಣ್ಯಂ (ತಮಿಳುನಾಡು)

    ಕಲೆ ಕ್ಷೇತ್ರದಲ್ಲಿ ಪದ್ಮ ಭೂಷಣ ಪ್ರಶಸ್ತಿ ಭಾಜನರಾದವರು

    ಮಿಥುನ್ ಚಕ್ರವರ್ತಿ

    ದತ್ತಾತ್ರೇಯ ಅಂಬಾದಾಸ್ ಮೇಲು

    ಉಷಾ ಉತ್ತುಪ್

    ತಮಿಳಿನ ನಟ ವಿಜಯಕಾಂತ್

  • ಯುಪಿಎಯಿಂದ ನಿರೀಕ್ಷಿಸಿದ್ದೆ, ಬಿಜೆಪಿ ಮುಸ್ಲಿಮರಿಗೆ ಪದ್ಮ ಪ್ರಶಸ್ತಿ ನೀಡಲ್ಲ ಎಂದು ಭಾವಿಸಿದ್ದೆ: ಮೋದಿಗೆ ರಶೀದ್ ಅಹ್ಮದ್ ಖಾದ್ರಿ ಧನ್ಯವಾದ

    ಯುಪಿಎಯಿಂದ ನಿರೀಕ್ಷಿಸಿದ್ದೆ, ಬಿಜೆಪಿ ಮುಸ್ಲಿಮರಿಗೆ ಪದ್ಮ ಪ್ರಶಸ್ತಿ ನೀಡಲ್ಲ ಎಂದು ಭಾವಿಸಿದ್ದೆ: ಮೋದಿಗೆ ರಶೀದ್ ಅಹ್ಮದ್ ಖಾದ್ರಿ ಧನ್ಯವಾದ

    ನವದೆಹಲಿ: ಬಿಜೆಪಿ ಸರ್ಕಾರ (BJP Government) ಮುಸ್ಲಿಮರಿಗೆ ಪ್ರಶಸ್ತಿ ನೀಡುವುದಿಲ್ಲ ಎಂದು ಭಾವಿಸಿದ್ದೆ. ಆದರೆ ನನ್ನ ಊಹೆಯನ್ನು ನೀವು ಸುಳ್ಳು ಮಾಡಿದ್ದೀರಿ ಎಂದು ಪದ್ಮಶ್ರೀ ಪ್ರಶಸ್ತಿ ಪಡೆದ ಕರ್ನಾಟಕದ (Karnataka) ಖ್ಯಾತ ಬಿದರಿ ಕಲಾವಿದ ಶಾ ರಶೀದ್ ಅಹ್ಮದ್ ಖಾದ್ರಿ (Shah Rasheed Ahmed Quadri) ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಬಳಿ ಹೇಳಿದ್ದಾರೆ.

    ಇಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳು ಸಾಧಕರಿಗೆ ಪ್ರದ್ಮ ಪ್ರಶಸ್ತಿ (Padma Awards) ನೀಡಿ ಪುರಸ್ಕರಿಸಿದರು. ಈ ಕಾರ್ಯಕ್ರಮದ ನಂತರ ಪ್ರಧಾನಿ ಮೋದಿ ಎಲ್ಲಾ ಸಾಧಕರನ್ನು ಅಭಿನಂದಿಸಿ ಹಸ್ತಲಾಘವ ಮಾಡುತ್ತಿದ್ದರು.

    ಈ ವೇಳೆ ಮೋದಿ ರಶೀದ್ ಅಹ್ಮದ್ ಖಾದ್ರಿ ಅವರಿಗೆ ಕೈ ಕುಲುಕಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮೋದಿ ಅವರನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಯುಪಿಎ ಸರ್ಕಾರದ (UPA Government) ಅವಧಿಯಲ್ಲಿ ಪದ್ಮ ಪ್ರಶಸ್ತಿಯನ್ನು ನಿರೀಕ್ಷಿಸಿದ್ದೆ. ಆದರೆ ನನಗೆ ಅದು ಸಿಗಲಿಲ್ಲ. ನಿಮ್ಮ ಬಿಜೆಪಿ ಸರ್ಕಾರ ಬಂದಾಗ ನನಗೆ ಯಾವುದೇ ಪ್ರಶಸ್ತಿ ಸಿಗುವುದಿಲ್ಲ ಎಂದು ಭಾವಿಸಿದ್ದೆ. ಆದರೆ ನೀವು ನನ್ನ ಊಹೆ ತಪ್ಪು ಎಂದು ಸಾಬೀತುಪಡಿಸಿದ್ದೀರಿ. ನಿಮಗೆ ನಾನು ಪ್ರಾಮಾಣಿಕ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಸುಧಾಮೂರ್ತಿ, ಎಸ್.ಎಲ್ ಭೈರಪ್ಪಗೆ ಪದ್ಮ ಭೂಷಣ ಪ್ರಶಸ್ತಿ ಪ್ರದಾನ

    ಅಹ್ಮದ್ ಖಾದ್ರಿ ಅವರಿಗೆ 1984 ರಲ್ಲಿ ರಾಜ್ಯ ಪ್ರಶಸ್ತಿ, 1988 ರಲ್ಲಿ ರಾಷ್ಟ್ರೀಯ ಪ್ರಶಸ್ತಿ, 1996 ರಲ್ಲಿ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮತ್ತು 2004 ರಲ್ಲಿ ದಿ ಗ್ರೇಟ್ ಇಂಡಿಯನ್ ಅಚೀವರ್ಸ್ ಪ್ರಶಸ್ತಿ ಸಿಕ್ಕಿದೆ.

    ಈ ಹಿಂದೆ ಮಾಧ್ಯಮದ ಜೊತೆ ಮಾತನಾಡಿದ್ದ ಅವರು, ಈ ಹಿಂದೆ ಹಲವು ಬಾರಿ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದೆ. ಆದರೆ, ಇದಕ್ಕೆ ಯಾವುದೇ ಸ್ಪಂದನೆಗಳು ಸಿಗದೇ ಇದ್ದಾಗ ಅರ್ಜಿ ಸಲ್ಲಿಸುವುದನ್ನೇ ನಿಲ್ಲಿಸಿ ಬಿಟ್ಟಿದ್ದೆ. ಇದೀಗ 5 ದಶಕಗಳ ನಮ್ಮ ಶ್ರಮವನ್ನು ಗುರುತಿಸಿ ಕೇಂದ್ರ ಸರ್ಕಾರ ನಮ್ಮ ಕಲೆಯನ್ನು ಗೌರವಿಸಿದೆ. ಇದು ನನಗೊಬ್ಬನಿಗೆ ಸಿಕ್ಕಿದ ಗೌರವ ಅಲ್ಲ. ಬೀದರ್ ಜಿಲ್ಲೆಯ ಎಲ್ಲಾ ಕಲಾವಿದರಿಗೆ ಸಂದ ಗೌರವವಾಗಿದೆ ಎಂದು ತಿಳಿಸಿದ್ದರು.

    ಇಂದು ಕರ್ನಾಟಕದ ಹಿರಿಯ ಸಾಹಿತಿ ಎಸ್‌ಎಲ್‌ ಭೈರಪ್ಪ ಮತ್ತು ಸಮಾಜ ಸೇವಕಿ ಸುಧಾಮೂರ್ತಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಯಿತು.

  • ನನ್ನ ರಾಜಕೀಯ ನಿವೃತ್ತಿ ಜೊತೆಗೆ ನನ್ನ ಆಸೆ ಆಕಾಂಕ್ಷೆಗಳು ನಿವೃತ್ತವಾಗಿವೆ: ಎಸ್.ಎಂ.ಕೃಷ್ಣ

    ನನ್ನ ರಾಜಕೀಯ ನಿವೃತ್ತಿ ಜೊತೆಗೆ ನನ್ನ ಆಸೆ ಆಕಾಂಕ್ಷೆಗಳು ನಿವೃತ್ತವಾಗಿವೆ: ಎಸ್.ಎಂ.ಕೃಷ್ಣ

    ಬೆಂಗಳೂರು: ನಾನು ರಾಜಕೀಯ ನಿವೃತ್ತಿ ಜೀವನ ಆರಂಭ ಮಾಡುತ್ತಿರುವ ಘಟ್ಟದಲ್ಲಿ ನನಗೆ ಪದ್ಮ ವಿಭೂಷಣ ಪ್ರಶಸ್ತಿ (Padma Vibhushan Award) ಬಂದಿರುವುದು ಬಯಸದೇ ಬಂದ ಭಾಗ್ಯ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ (SM Krishna) ಸಂತಸ ವ್ಯಕ್ತಪಡಿಸಿದರು.

    ಪದ್ಮ ವಿಭೂಷಣ ಪ್ರಶಸ್ತಿಗೆ ಆಯ್ಕೆಯಾಗಿರುವ ಎಸ್.ಎಂ.ಕೃಷ್ಣ ಅವರು ಪಬ್ಲಿಕ್ ಟಿವಿ (Public TV) ಜೊತೆ ಮಾತನಾಡಿ ಸಂತಸ ಹಂಚಿಕೊಂಡಿದ್ದಾರೆ. ಪದ್ಮ ವಿಭೂಷಣ ಘೋಷಣೆಯಾಗಿರುವುದಕ್ಕೆ ಬಹಳ ಸಂತೋಷ ಆಗುತ್ತಿದೆ. ನಾನು ರಾಜಕೀಯ ನಿವೃತ್ತಿ ಜೀವನ ಆರಂಭ ಮಾಡುತ್ತಿರುವ ಘಟ್ಟದಲ್ಲಿ ನನಗೆ ಈ ಪ್ರಶಸ್ತಿ ಬಂದಿರುವುದು ಬಯಸದೇ ಬಂದ ಭಾಗ್ಯವಾಗಿದೆ. ಈ ಪ್ರಶಸ್ತಿಯನ್ನು ಕಳೆದ 6 ದಶಕದಲ್ಲಿ ನನಗೆ ಬೆಂಬಲಿಸಿದ 7 ಕೋಟಿ ಕನ್ನಡಿಗರಿಗೆ ನಮ್ರತೆಯಿಂದ ಅರ್ಪಿಸುತ್ತೇನೆ ಎಂದು ಹೇಳಿದರು.

    ಪ್ರಧಾನಿಯವರಿಗೆ ಹಾಗೂ ಗೃಹ ಸಚಿವರಿಗೆ ಋಣಿಯಾಗಿದ್ದೇನೆ ಮತ್ತೆ ನನ್ನ ಅನಂತ ನಮಸ್ಕಾರಗಳನ್ನು ಸಲ್ಲಿಸುತ್ತೇನೆ. ಇದು ನನಗೆ ಬಹಳ ಸಂತೋಷವಾಗಿದೆ. ನನ್ನ ರಾಜಕೀಯ ನಿವೃತ್ತಿಯೊಂದಿಗೆ ನನ್ನ ಆಸೆ ಆಕಾಂಕ್ಷೆಗಳು ನಿವೃತ್ತವಾಗಿವೆ. ಪ್ರಶಸ್ತಿಯ ಆಯ್ಕೆಯ ಮಾನದಂಡ ಆಯಾ ಕಾಲಘಟ್ಟದಲ್ಲಿ ಕಾಲಘಟ್ಟಕ್ಕೆ ತಕ್ಕಂತೆ ಬದಲಾಗಿದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಅಲ್ಲಿ ಟಾರ್ಗೆಟ್ ಡಿಕೆಶಿ, ಇಲ್ಲಿ ಟಾರ್ಗೆಟ್ ಸಿದ್ದರಾಮಯ್ಯ- ಏನಿದು ಬಿಜೆಪಿ ತಂತ್ರ?

    ಇತ್ತೀಚೆಗಷ್ಟೆ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದೇನೆ. ಅದರ ಸಮೀಪದಲ್ಲೇ ಈ ಪ್ರಶಸ್ತಿ ಬಂದಿದೆ. ನನಗೆ ಬಹಳ ಸಂತೋಷ ಉಂಟುಮಾಡಿದೆ. 6 ದಶಕಗಳಿಂದ ರಾಜಕೀಯವಾಗಿ ಸಾಕಿ, ಸಲಹಿ, ಆಶೀರ್ವಾದ ಮಾಡಿದ ಕನ್ನಡದ 7 ಕೋಟಿ ಜನರಿಗೆ ನಮ್ರತೆಯಿಂದ ಸಮರ್ಪಣೆ ಮಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: 74th Republic Day: ದೆಹಲಿಯ ಕರ್ತವ್ಯ ಪಥ್‌ನಲ್ಲಿ‌ ಹಲವು ಪ್ರಥಮಗಳಿಗೆ ಸಾಕ್ಷಿಯಾದ ಪರೇಡ್‌

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮುಲಾಯಂಸಿಂಗ್ ಯಾದವ್, ಕೀರವಾಣಿ, ವಾಣಿ ಜಯರಾಂ ಸೇರಿ 106 ಮಂದಿಗೆ ಪದ್ಮ ಪ್ರಶಸ್ತಿ – ಯಾರಿಗೆ ಯಾವ ಪ್ರಶಸ್ತಿ?

    ಮುಲಾಯಂಸಿಂಗ್ ಯಾದವ್, ಕೀರವಾಣಿ, ವಾಣಿ ಜಯರಾಂ ಸೇರಿ 106 ಮಂದಿಗೆ ಪದ್ಮ ಪ್ರಶಸ್ತಿ – ಯಾರಿಗೆ ಯಾವ ಪ್ರಶಸ್ತಿ?

    ನವದೆಹಲಿ: ಒಆರ್‌ಎಸ್‍ನ ಸಂಶೋಧಕ ದಿಲೀಪ್ ಮಹಲನಾಬಿಸ್, ಜಾಕಿರ್ ಹುಸೇನ್, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್, ಎಂಎಂ ಕೀರವಾಣಿ ಸೇರಿ ಒಟ್ಟು 106 ಮಂದಿಗೆ ಪದ್ಮ ಪ್ರಶಸ್ತಿ ಲಭಿಸಿದೆ.

    2023ನೇ ಸಾಲಿನಲ್ಲಿ ಒಟ್ಟು 106 ಮಂದಿಗೆ ಪದ್ಮ ಪ್ರಶಸ್ತಿ ಲಭಿಸಿದೆ. 6 ಪದ್ಮ ವಿಭೂಷಣ, 9 ಪದ್ಮಭೂಷಣ ಮತ್ತು 91 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.

    ಒಆರ್‌ಎಸ್‍ನ ಸಂಶೋಧಕ ದಿಲೀಪ್ ಮಹಲನಾಬಿಸ್ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ. ಇನ್ನುಳಿದಂತೆ, ಕುಮಾರ್ ಮಂಗಲಂ ಬಿರ್ಲಾ ಮತ್ತು ಸುಧಾ ಮೂರ್ತಿ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗಿದೆ. ಆರ್‌ಆರ್‌ಆರ್‌ನ ನಾಟು ನಾಟು ಹಾಡಿನ ಸಂಯೋಜಕ ಎಂಎಂ ಕೀರವಾಣಿ ಅವರಿಗೆ ಕಲಾ ಕ್ಷೇತ್ರದಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿದೆ.

    ಪದ್ಮವಿಭೂಷಣ, ಪದ್ಮಭೂಷಣ, ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಹೆಸರುಗಳು ಇಂತಿವೆ:
    ಪದ್ಮವಿಭೂಷಣ ಪ್ರಶಸ್ತಿ:
    ಮುಲಾಯಂ ಸಿಂಗ್ ಯಾದವ್ (ಮರಣೋತ್ತರ) ಬಾಲಕೃಷ್ಣ ದೋಷಿ (ಮರಣೋತ್ತರ), ಜಾಕಿರ್ ಹುಸೇನ್, ಎಸ್ ಎಂ ಕೃಷ್ಣ ದಿಲೀಪ್ ಮಹಲನಾಬಿಸ್ (ಮರಣೋತ್ತರ) ಶ್ರೀನಿವಾಸ್ ವರದನ್

    ಪದ್ಮಭೂಷಣ: ಎಸ್ ಎಲ್ ಭೈರಪ್ಪ, ಕುಮಾರ್ ಮಂಗಲಂ ಬಿರ್ಲಾ, ದೀಪಕ್ ಧಾರ್, ವಾಣಿ ಜೈರಾಮ್, ಸ್ವಾಮಿ ಚಿನ್ನ ಜೀಯರ್, ಸುಮನ್ ಕಲ್ಯಾಣಪುರ, ಕಪಿಲ್ ಕಪೂರ್, ಸುಧಾ ಮೂರ್ತಿ, ಕಮಲೇಶ್ ಡಿ ಪಟೇಲ್

    ಪದ್ಮಶ್ರೀ ಪ್ರಶಸ್ತಿ: ಸುಕಮ ಆಚಾರ್ಯ, ಜೋಧಯ್ಯಬಾಯಿ ಬೈಗಾ, ಪ್ರೇಮ್ಜಿತ್ ಬರಿಯಾ, ಉಷಾ ಬಾರ್ಲೆ, ಮುನೀಶ್ವರ ಚಂದಾವರ, ಹೇಮಂತ್ ಚೌಹಾಣ್ ಭಾನುಭಾಯಿ ಚಿತಾರಾ, ಹೆಮೊಪ್ರೊವಾ ಚುಟಿಯಾ, ನರೇಂದ್ರ ಚಂದ್ರ ದೆಬ್ಬರ್ಮ (ಮರಣೋತ್ತರ), ಸುಭದ್ರಾ ದೇವಿ, ಖಾದರ್ ವಲ್ಲಿ ದೂದೇಕುಲ, ಹೇಂ ಚಂದ್ರ ಗೋಸ್ವಾಮಿ, ಪ್ರಿತಿಕಾನಾ ಗೋಸ್ವಾಮಿ,ರಾಧಾ ಚರಣ್ ಗುಪ್ತಾ, ಮೊಡಡುಗು ವಿಜಯ್ ಗುಪ್ತಾ, ಅಹ್ಮದ್ ಹುಸೇನ್ ಮತ್ತು ಮೊಹಮ್ಮದ್ ಹುಸೇನ್ (ಜೋಡಿ), ದಿಲ್ಶಾದ್ ಹುಸೇನ್, ಭಿಕು ರಾಮ್‍ಜಿ ಇದತೇ, ಸಿ ಐ ಇಸಾಕ್, ರತ್ತನ್ ಸಿಂಗ್ ಜಗ್ಗಿ, ಬಿಕ್ರಮ್ ಬಹದ್ದೂರ್ ಜಮಾತಿಯಾ, ರಾಮ್ಕುಯಿವಾಂಗ್ಬೆ ಜೆನೆ, ರಾಕೇಶ್ ರಾಧೇಶ್ಯಾಮ್ ಜುಂಜುನ್ವಾಲಾ (ಮರಣೋತ್ತರ), ರತನ್ ಚಂದ್ರ ಕರ್ ಮಹಿಪತ್ ಕವಿ, ಎಂ ಎಂ ಕೀರವಾಣಿ,

    ಅರೀಜ್ ಖಂಬಟ್ಟಾ (ಮರಣೋತ್ತರ), ಪರಶುರಾಮ ಕೊಮಾಜಿ ಖುನೆ, ಗಣೇಶ ನಾಗಪ್ಪ ಕೃಷ್ಣರಾಜನಗರ ಮಾಗುನಿ ಚರಣ್ ಕುಂರ್, ಆನಂದ್ ಕುಮಾರ್,ಅರವಿಂದ್ ಕುಮಾರ್,ದೋಮರ್ ಸಿಂಗ್ ಕುನ್ವರ್, ರೈಸಿಂಗ್ಬೋರ್ ಕುರ್ಕಲಾಂಗ್ ಹೀರಾಬಾಯಿ ಲೋಬಿ, ಮೂಲಚಂದ್ ಲೋಧಾ, ರಾಣಿ ಮಾಚಯ್ಯ, ಅಜಯ್ ಕುಮಾರ್ ಮಾಂಡವಿ,ಪ್ರಭಾಕರ ಭಾನುದಾಸ್ ಮಂದೆ ಗಜಾನನ ಜಗನ್ನಾಥ ಮಾನೆ, ಅಂತರ್ಯಾಮಿ ಮಿಶ್ರಾ, ನಾಡೋಜ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ, ಪ್ರೋ. (ಡಾ.) ಮಹೇಂದ್ರ ಪಾಲ್ ಉಮಾ ಶಂಕರ್ ಪಾಂಡೆ, ರಮೇಶ್ ಪರ್ಮಾರ್ ಮತ್ತು ಶಾಂತಿ ಪರ್ಮಾರ್, ನಳಿನಿ ಪಾರ್ಥಸಾರಥಿ, ಹನುಮಂತ ರಾವ್ ಪಸುಪುಲೇಟಿ ರಮೇಶ ಪತಂಗೆ, ಕೃಷ್ಣ ಪಟೇಲ್.

    ಕೆ ಕಲ್ಯಾಣಸುಂದರಂ ಪಿಳ್ಳೆ, ವಿ ಪಿ ಅಪ್ಪುಕುಟ್ಟನ್ ಪೊದುವಾಳ್, ಕಪಿಲ್ ದೇವ್ ಪ್ರಸಾದ್, ಎಸ್ ಆರ್ ಡಿ ಪ್ರಸಾದ್, ಶಾ ರಶೀದ್ ಅಹ್ಮದ್ ಕ್ವಾದ್ರಿ, ಸಿ ವಿ ರಾಜು, ಬಕ್ಷಿ ರಾಮ್, ಚೆರುವಾಯಲ್ ಕೆ ರಾಮನ್, ಸುಜಾತಾ ರಾಮದೊರೈ, ಅಬ್ಬಾರೆಡ್ಡಿ ನಾಗೇಶ್ವರ ರಾವ್,ಪರೇಶಭಾಯಿ ರಾತ್ವಾ, ಬಿ ರಾಮಕೃಷ್ಣ ರೆಡ್ಡಿ, ಮಂಗಳಾ ಕಾಂತಿ ರಾಯ್, ಕೆ ಸಿ ರನ್ನರಸಂಗಿ ವಡಿವೇಲ್ ಗೋಪಾಲ್ ಮತ್ತು ಮಾಸಿ ಸದಯ್ಯನ್,ಮನೋರಂಜನ್ ಸಾಹು, ಪತಾಯತ್ ಸಾಹು, ಋತ್ವಿಕ್ ಸನ್ಯಾಲ್, ಕೋಟ ಸಚ್ಚಿದಾನಂದ ಶಾಸ್ತ್ರಿ, ಸಂಕುರಾತ್ರಿ ಚಂದ್ರಶೇಖರ್,ಕೆ ಶಾನತೋಯಿಬಾ ಶರ್ಮಾ,ನೆಕ್ರಮ್ ಶರ್ಮಾ,ಗುರ್ಚರಣ್ ಸಿಂಗ್, ಲಕ್ಷ್ಮಣ್ ಸಿಂಗ್, ಮೋಹನ್ ಸಿಂಗ್, ತೌನೋಜಮ್ ಚಾವೋಬಾ ಸಿಂಗ್, ಪ್ರಕಾಶ್ ಚಂದ್ರ ಸೂದ್, ನೈಹುನಾವೋ ಸೋರಿ, ಡಾ. ಜನುಮ್ ಸಿಂಗ್ ಸೋಯ್, ಕುಶೋಕ್ ಥಿಕ್ಸೇ ನವಾಂಗ್ ಚಂಬಾ ಸ್ಟಾಂಜಿನ್, ಎಸ್ ಸುಬ್ಬರಾಮನ್, ಮೋವಾ ಸುಬಾಂಗ್, ಪಾಲಂ ಕಲ್ಯಾಣ ಸುಂದರಂ, ರವೀನಾ ರವಿ ಟಂಡನ್, ವಿಶ್ವನಾಥ್ ಪ್ರಸಾದ್ ತಿವಾರಿ, ಧನಿರಾಮ್ ಟೊಟೊ, ತುಲಾ ರಾಮ್ ಉಪ್ರೇತಿ, ಗೋಪಾಲಸಾಮಿ ವೇಲುಚಾಮಿ, ಈಶ್ವರ ಚಂದರ್ ವರ್ಮಾ, ಕೂಮಿ ನಾರಿಮನ್ ವಾಡಿಯಾ, ಕರ್ಮ ವಾಂಗ್ಚು (ಮರಣೋತ್ತರ), ಗುಲಾಮ್ ಮುಹಮ್ಮದ್ ಝಾಝ್. ಇದನ್ನೂ ಓದಿ: ಎಸ್.ಎಂ. ಕೃಷ್ಣ, ಎಸ್‍ಎಲ್ ಭೈರಪ್ಪ, ಸುಧಾಮೂರ್ತಿ ಸೇರಿ ರಾಜ್ಯದ 8 ಮಂದಿಗೆ ಪದ್ಮ ಪ್ರಶಸ್ತಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಎಸ್.ಎಂ. ಕೃಷ್ಣ, ಎಸ್‍ಎಲ್ ಭೈರಪ್ಪ, ಸುಧಾಮೂರ್ತಿ ಸೇರಿ ರಾಜ್ಯದ 8 ಮಂದಿಗೆ ಪದ್ಮ ಪ್ರಶಸ್ತಿ

    ಎಸ್.ಎಂ. ಕೃಷ್ಣ, ಎಸ್‍ಎಲ್ ಭೈರಪ್ಪ, ಸುಧಾಮೂರ್ತಿ ಸೇರಿ ರಾಜ್ಯದ 8 ಮಂದಿಗೆ ಪದ್ಮ ಪ್ರಶಸ್ತಿ

    ಬೆಂಗಳೂರು: ಎಸ್.ಎಂ. ಕೃಷ್ಣ ಅವರಿಗೆ ಪದ್ಮವಿಭೂಷಣ, ಎಸ್‍ಎಲ್ ಭೈರಪ್ಪ (SL Bhyrappa), ಸುಧಾಮೂರ್ತಿ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ಲಭಿಸಿದೆ.

    2023ನೇ ಸಾಲಿನ ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಕೇಂದ್ರ ಸರ್ಕಾರ ಬುಧವಾರ ಪ್ರಕಟಿಸಿದೆ. ಈ ಬಾರಿ ರಾಜ್ಯದ 8 ಮಂದಿಗೆ ಪದ್ಮ ಪ್ರಶಸ್ತಿ ಲಭಿಸಿದೆ. ಒಬ್ಬರಿಗೆ ಪದ್ಮವಿಭೂಷಣ, ಇಬ್ಬರಿಗೆ ಪದ್ಮಭೂಷಣ, 5 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ. ಇದನ್ನೂ ಓದಿ: ರಾಷ್ಟ್ರಪತಿ ಏನು ಬೇಡ ನಾನು ನಮ್ಮ ಊರಾಗ ಆರಾಮ ರಾಣಿ ಹಂಗೆ ಇದ್ದೀನಿ: ಸುಧಾಮೂರ್ತಿ

    ಖಾದರ್ ವಲ್ಲಿ ದೂದೇಕುಲ (ವಿಜ್ಞಾನ ಮತ್ತು ಇಂಜಿನಿಯರಿಂಗ್), ರಾಣಿ ಮಾಚಯ್ಯ (ಕಲೆ), ನಾಡೋಜ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ (ಕಲೆ), ಐ ಶಾ ರಶೀದ್ ಅಹಮದ್ ಕ್ವಾದ್ರಿ (ಕಲೆ), ಸುಬ್ಬರಾಮನ್ (ಪುರಾತತ್ವ ಶಾಸ್ತ್ರ) ಅವರಿಗೆ ಪದ್ಮ ಪ್ರಶಸ್ತಿ ಲಭಿಸಿದೆ. ಇದನ್ನೂ ಓದಿ: ರಾಜ್ಯದ 20 ಪೊಲೀಸರಿಗೆ ರಾಷ್ಟ್ರಪತಿ ಪದಕ – ಯಾರಿಗೆ ಯಾವ ಪದಕ ಸಿಕ್ಕಿದೆ?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸೆ.15ವರೆಗೆ ಪದ್ಮ ಪ್ರಶಸ್ತಿ ನಾಮನಿರ್ದೇಶನ ಮಾಡಿ

    ಸೆ.15ವರೆಗೆ ಪದ್ಮ ಪ್ರಶಸ್ತಿ ನಾಮನಿರ್ದೇಶನ ಮಾಡಿ

    ನವದೆಹಲಿ: 2023ನೇ ಸಾಲಿನ ಪದ್ಮ ಪ್ರಶಸ್ತಿಗಾಗಿ ಆನ್‍ಲೈನ್ ನಾಮನಿರ್ದೇಶನ ಮತ್ತು ಶಿಫಾರಸು ಮಾಡಲು ಸೆಪ್ಟೆಂಬರ್ 15 ಕೊನೆಯ ದಿನಾಂಕ ಎಂದು ಗೃಹ ಸಚಿವಾಲಯ ಪ್ರಕಟಿಸಿದೆ.

    2023ರ ಪದ್ಮ ಪ್ರಶಸ್ತಿಗಳಿಗಾಗಿ ನಾಮನಿರ್ದೇಶನ ಮಾಡಲು ಆನ್‍ಲೈನ್‍ನಲ್ಲಿ ಮೇ 1ರಿಂದ ಮುಕ್ತವಾಗಿ ತೆರೆಯಲಾಗಿತ್ತು. ಈಗ ಗೃಹ ಸಚಿವಾಲಯವು, 2023 ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಕಟಿಸಲಾಗುವ ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನ ಮಾಡಲು ಸೆಪ್ಟೆಂಬರ್ 15 ಕೊನೆಯ ದಿನ ಎಂದು ತಿಳಿಸಿದೆ. ಇದನ್ನೂ ಓದಿ: ಮೊದಲ ಪ್ರಯತ್ನದಲ್ಲಿ UPSC ಪರೀಕ್ಷೆಯಲ್ಲಿ ಉತ್ತೀರ್ಣ 

    ಈ ವೇಳೆ ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳು/ ಶಿಫಾರಸುಗಳನ್ನು ರಾಷ್ಟ್ರೀಯ ಪ್ರಶಸ್ತಿಗಳ ಪೋರ್ಟಲ್‍ನ ಅಧಿಕೃತ ವೆಬ್‍ಸೈಟ್-https://awards.gov.in ನಲ್ಲಿ ಮಾತ್ರ ಆನ್‍ಲೈನ್‍ನಲ್ಲಿ ಸ್ವೀಕರಿಸಲಾಗುವುದು ಎಂದು ಅಧಿಕೃತವಾಗಿ ತಿಳಿಸಿದೆ.

    ಪದ್ಮ ಪ್ರಶಸ್ತಿ ಎಂದರೆ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ. ಇದು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. 1954ರಲ್ಲಿ ಸ್ಥಾಪನೆಯಾದ ಪದ್ಮ ಪ್ರಶಸ್ತಿಗಳನ್ನು ಪ್ರತಿವರ್ಷ ಗಣರಾಜ್ಯೋತ್ಸವ ದಿನದಂದು ಪ್ರಕಟಿಸಲಾಗುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ, ಗೌರವಿಸುವ ಹಾಗೂ ಅವರನ್ನು ಸಮಾಜಕ್ಕೆ ಪರಿಚಯಿಸುವ ಮಹನ್ ಉದ್ದೇಶದಿಂದ ಈ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗುತ್ತೆ ಬರಲಾಗಿದೆ.

    ಕಲೆ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಾಮಾಜಿಕ ಕಾರ್ಯ, ವಿಜ್ಞಾನ ಮತ್ತು ಎಂಜಿನಿಯರಿಂಗ್, ಸಾರ್ವಜನಿಕ ವ್ಯವಹಾರ, ನಾಗರಿಕ ಸೇವೆಗಳು, ವ್ಯಾಪಾರ, ಉದ್ಯಮ ಮತ್ತು ಕೈಗಾರಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ವಿಶಿಷ್ಟ ಮತ್ತು ಅನನ್ಯ ಸಾಧನೆ ಮತ್ತು ಸೇವೆ ನೀಡಿರುವ ಗಣ್ಯರನ್ನು ಈ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗುತ್ತದೆ. ಇದನ್ನೂ ಓದಿ: ಉಕ್ರೇನ್‍ಗೆ 9 ಬಿಲಿಯನ್ ಯುರೋ ಕಳುಹಿಸಲು ಒಪ್ಪಿಕೊಂಡ ಇಯು