Tag: ಪದ್ಮಾ ವಾಸಂತಿ

  • ಹಿರಿಯ ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ ನಟ ಶ್ರೀನಾಥ್ ಅಂಡ್ ಟೀಮ್

    ಹಿರಿಯ ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ ನಟ ಶ್ರೀನಾಥ್ ಅಂಡ್ ಟೀಮ್

    ನ್ನಡ ಸಿನಿಮಾ ರಂಗದ ಹಿರಿಯ ನಟಿ ಲೀಲಾವತಿ (Leelavati) ಅವರ ವಯೋಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ ಚಿತ್ರೋದ್ಯಮದ ಹಿರಿಯ ನಟ ಶ್ರೀನಾಥ್ (Srinath), ನಟಿ ಪದ್ಮಾ ವಾಸಂತಿ (Padma Vasanthi), ನಟ ಸುಂದರಾಜ್, ಪ್ರಮೀಳಾ ಜೋಷಾಯಿ ಸೇರಿದಂತೆ ಹಲವರು ಲೀಲಾವತಿ ಅವರ ನಿವಾಸಕ್ಕೆ ಆಗಮಿಸಿ ಆರೋಗ್ಯ ವಿಚಾರಿಸಿದ್ದಾರೆ.

    ಎರಡು ತಿಂಗಳು ಹಿಂದೆಯಷ್ಟೇ ನಟಿಯರಾದ ಶ್ರುತಿ ಸೇರಿದಂತೆ ಹಲವರು ಲೀಲಾವತಿ ಅವರ ನಿವಾಸಕ್ಕೆ ತೆರಳಿ ಆರೋಗ್ಯ ವಿಚಾರಿಸಿದ್ದರು. ಇದೀಗ ಶ್ರೀನಾಥ್ ಮತ್ತು ತಂಡ ಲೀಲಾವತಿ ನಿವಾಸಕ್ಕೆ ಭೇಟಿ ನೀಡಿ ಅವರೊಂದಿಗೆ ಕೆಲ ಸಮಯ ಕಳೆದಿದೆ. ಹಳೆಯ ದಿನಗಳನ್ನು ಅವರೊಂದಿಗೆ ಮೆಲುಕು ಹಾಕಿದೆ. ಇದನ್ನೂ ಓದಿ: ಸೀರೆಯುಟ್ಟು ಮಿಂಚಿದ `ವಜ್ರಕಾಯ’ ನಟಿ ನಭಾ ನಟೇಶ್

    ಸಿನಿಮಾ ರಂಗದಿಂದ ದೂರವಾದ ನಂತರ ಲೀಲಾವತಿ ಅವರು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅವರ ಊರಲ್ಲಿ ಆಸ್ಪತ್ರೆ ಕಟ್ಟಿಸಿದ್ದಾರೆ. ಅಲ್ಲದೇ, ರೈತರಿಗೆ ನಾನಾ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಲೀಲಾವತಿ ಅವರ ಜೊತೆ ಪುತ್ರ ವಿನೋದ್ ರಾಜ್ ಕುಮಾರ್ ಕೂಡ ಸಾಥ್ ನೀಡಿದ್ದಾರೆ.

    ನಾಲ್ಕುನೂರಕ್ಕೆ ಹೆಚ್ಚು ಚಿತ್ರಗಳನ್ನು ಮಾಡಿರುವ ಲೀಲಾವತಿ ಸದ್ಯ ಬೆಂಗಳೂರು ಸಮೀಪದ ಸೋಲದೇವನಹಳ್ಳಿಯಲ್ಲಿ ವಾಸವಾಗಿದ್ದಾರೆ. ಅಲ್ಲಿಯೇ ಅವರ ತೋಟ ಕೂಡ ಇದೆ. ಮೊನ್ನೆಯಷ್ಟೇ ತಮ್ಮ ಚೆನ್ನೈನಲ್ಲಿದ್ದ ಜಮೀನು ಮಾರಿ ಬಂದ ಹಣದಲ್ಲಿ ‘ಡಾ.ಲೀಲಾವತಿ ಪ್ರಾಥಮಿಕ ಆರೋಗ್ಯ ಕೇಂದ್ರ’ವನ್ನು ಸ್ಥಾಪನೆ ಮಾಡಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮ್ಯೂಸಿಕಲ್ ಲವ್ ಸ್ಟೋರಿಗೆ ನಾಯಕಿಯಾದ ಮೇಘಶ್ರೀ

    ಮ್ಯೂಸಿಕಲ್ ಲವ್ ಸ್ಟೋರಿಗೆ ನಾಯಕಿಯಾದ ಮೇಘಶ್ರೀ

    ನ್ನಡ ಚಿತ್ರರಂಗದಲ್ಲಿ ಬಹಳ ದಿನಗಳ ನಂತರ ಮ್ಯೂಸಿಕಲ್ ಲವ್‌ಸ್ಟೋರಿ ಹೊಂದಿರುವ ಚಿತ್ರವೊಂದು ರೆಡಿಯಾಗಿದೆ. ಪ್ರೇಮಲೋಕ, ಎಕ್ಸ್ಕ್ಯೂಸ್‌ಮಿ ಚಿತ್ರಗಳ ನಂತರ ಅದೇ ಜಾನರ್‌ನಲ್ಲಿ ತಯಾರಾಗಿರುವ ಮತ್ತೊಂದು ಚಿತ್ರದ ಹೆಸರು ರಿದಂ. ಚಿತ್ರೋದ್ಯಮದಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ಪಳಗಿರುವ ಮಂಜು ಮಿಲನ್ ಅವರ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರವಿದು. ಈಗಾಗಲೇ ಬಿಡುಗಡೆಯ ಹಂತ ತಲುಪಿರುವ ರಿದಂ, ಸದ್ಯದಲ್ಲೇ ಸೆನ್ಸಾರ್ ಮನೆಗೆ ತೆರಳಲಿದೆ.

    ಚಿತ್ರದಲ್ಲಿ ನಾಯಕನಾಗೂ ನಟಿಸಿರುವ ಮಂಜುಮಿಲನ್ ಈಗಾಗಲೇ ತಮ್ಮ ಬ್ಯಾನರ್ ಮೂಲಕ ೨ ಚಿತ್ರಗಳನ್ನು ಕನ್ನಡಿಗರಿಗೆ ನೀಡಿದ್ದು, ಇದು ಅವರ ಮೂರನೇ ಚಿತ್ರ. ಜೋಗಿ ಪ್ರೇಮ್, ಕಾಶೀನಾಥ್, ವಾಸು ಅವರಂಥ ನಿರ್ದೇಶಕರ ಬಳಿ ಪಳಗಿರುವ ಇವರು,  ಒಬ್ಬ ಸಿಂಗರ್ ಹಾಗೂ ವಯಲಿನ್ ನುಡಿಸೋ ಯುವತಿಯ  ನಡುವೆ ನಡೆಯುವ ಲವ್‌ಸ್ಟೋರಿಯನ್ನು ಈ ಚಿತ್ರದ ಮೂಲಕ ಹೇಳಹೊರಟಿದ್ದಾರೆ. ಚಿತ್ರದ ನಾಯಕಿಯಾಗಿ ಕೃಷ್ಣತುಳಸಿ ಖ್ಯಾತಿಯ ಮೇಘಶ್ರೀ ಅವರು ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ನೂಡಲ್ಸ್ ಬಿಡಿಸು ಅಂದ್ರೆ ಮೂಲಂಗಿ ಬಿಡಿಸ್ತಾಳೆ – ಸೋನು ಪೇಂಟಿಂಗ್‌ಗೆ ರಾಕೇಶ್ ಫುಲ್ ಶಾಕ್..!

    ಈಗಾಗಲೇ ಬೆಂಗಳೂರು, ಮೈಸೂರು, ಮೇಲುಕೋಟೆ ಅಲ್ಲದೆ ಸಾಗರದಾಚೆಯ ಸಿಂಗಪೂರ್‌ನಲ್ಲಿ ಸುಮಾರು ೬೨ ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆಸಿಕೊಂಡು ಬಂದಿದ್ದಾರೆ. ಚಿತ್ರದಲ್ಲಿ ಸಪ್ತಸ್ವರಗಳನ್ನು ಪ್ರತಿನಿಧಿಸುವಂತೆ ಏಳು ಸುಂದರವಾದ. ಹಾಡುಗಳಿದ್ದು, ಎ.ಟಿ. ರವೀಶ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಮಂಜುನಾಥ್ ಹಾಗೂ ಮಲ್ಲಿಕಾರ್ಜುನ್ ಚಿತ್ರಕ್ಕೆ ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ.  ಹಿರಿಯ ಕಲಾವಿದರಾದ ಸುಮನ್, ಪದ್ಮಾವಾಸಂತಿ, ವಿನಯಾಪ್ರಸಾದ್, ಗಿರಿಜಾ ಲೋಕೇಶ್ ಈ ಚಿತ್ರದಲ್ಲಿ ನಟಿಸಿದ್ದಾರೆ.

    ಫ್ಯಾಮಿಲಿ ಸೆಂಟಿಮೆಂಟ್ ಜೊತೆಗೆ ಒಂದು ಎಮೋಷನಲ್ ಲವ್‌ಸ್ಟೋರಿಯನ್ನು ರಿದಂ ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರಿಗೆ ಹೇಳಹೊರಟಿರುವ ನಿರ್ದೇಶಕ ಕಮ್ ನಾಯಕ ಮಂಜು ಮಿಲನ್ ಅವರು ಮುಂದಿನ ತಿಂಗಳು ಚಿತ್ರದ ಟ್ರೈಲರನ್ನು ಸ್ಟಾರ್ ನಟರೊಬ್ಬರ ಕೈಲಿ ಬಿಡುಗಡೆ ಮಾಡಿಸುವ ಯೋಜನೆಯನ್ನೂ ಹಾಕಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]