Tag: ಪದ್ಮಾವತ್

  • ಪದ್ಮಾವತ್‍ಗೆ ವಿರೋಧ – ಜನವರಿ 25 ರಂದು ಭಾರತ ಬಂದ್‍ಗೆ ಕರೆ ನೀಡಿದ ಕರ್ಣಿಸೇನಾ

    ಪದ್ಮಾವತ್‍ಗೆ ವಿರೋಧ – ಜನವರಿ 25 ರಂದು ಭಾರತ ಬಂದ್‍ಗೆ ಕರೆ ನೀಡಿದ ಕರ್ಣಿಸೇನಾ

    ಮುಂಬೈ: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಬಹು ವಿವಾದಿತ ‘ಪದ್ಮಾವತ್’ ಚಿತ್ರ ಜನವರಿ 25 ರಂದು ಬಿಡುಗಡೆಗೆ ಸಿದ್ಧವಾಗಿದೆ. ಸಿನಿಮಾ ಬಿಡುಗಡೆಗೆ ರಜಪೂತ ಕರ್ಣಿಸೇನಾ ವಿರೋಧ ವ್ಯಕ್ತಪಡಿಸಿ ಪದ್ಮಾವತ್ ಬಿಡುಗಡೆ ದಿನದಂದು ಭಾರತ್ ಬಂದ್ ಗೆ ಕರೆ ನೀಡಿದೆ.

    ಪ್ರಸ್ತುತ ಸಿನಿಮಾ ಬಿಡುಗಡೆಗೆ ನಿರ್ಧರಿಸಿದ್ದ ಜನವರಿ 25 ರಂದು ದೇಶವ್ಯಾಪ್ತಿ ಬಂದ್ ಗೆ ಕರೆ ನೀಡಲು ಕರ್ಣಿ ಸೇನಾ ನಿರ್ಧರಿಸದೆ. ಬಂದ್ ಯಶಸ್ವಿ ಮಾಡುವುದಾಗಿ ಕರ್ಣಿಸೇನಾ ಮುಖ್ಯಸ್ಥ ಲೋಕೇಂದ್ರ ಸಿಂಗ್ ಕಲ್ವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ರಾಜಪೂತ ರಾಣಿ ಪದ್ಮಾವತಿ ಹಾಗೂ ಅಲ್ಲಾವುದ್ದೀನ್ ಖಿಲ್ಜಿ ನಡುವಿನ ಪ್ರೇಮ ಪ್ರಸಂಗವಿದ್ದು, ಇತಿಹಾಸವನ್ನು ತಿರುಚಲಾಗಿದೆ ಎಂದು ಆರೋಪಿಸಿ ಚಿತ್ರದ ಬಿಡುಗಡೆಗೆ ವಿರೋಧ ವ್ಯಕ್ತಪಡಿಸುತ್ತಿವೆ.

    ಚಿತ್ರದ ನಿಷೇಧ ಕುರಿತು ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ನೀಡಿದ್ದು, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ ರಾಜ್ಯ ಸರ್ಕಾರಗಳ ನಿಷೇಧಕ್ಕೆ ತಡೆ ನೀಡಿತ್ತು. ಅಲ್ಲದೇ ಚಿತ್ರದ ಬಿಡುಗಡೆ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರಗಳ ಕರ್ತವ್ಯ ಎಂದು ತಿಳಿಸಿತ್ತು. ಕೋರ್ಟ್ ಆದೇಶ ನಂತರವೂ ಕರ್ಣಿಸೇನಾ ಮಾತ್ರ ಚಿತ್ರ ಬಿಡುಗಡೆಯಾದರೆ ಹಿಂಸಾತ್ಮಕ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

    ಚಿತ್ರವನ್ನು ಪ್ರದರ್ಶಿಸುವ ಚಿತ್ರ ಮಂದಿರ ಮಾಲೀಕರಿಗೂ ಸಿನಿಮಾವನ್ನು ಬಿಡುಗಡೆ ಮಾಡದಂತೆ ಕರ್ಣಿಸೇನಾ ಎಚ್ಚರಿಕೆ ನೀಡಿದೆ. ಇದರಿಂದ ಚಿತ್ರಮಂದಿರ ಮಾಲೀಕರು ಸಿನಿಮಾ ಬಿಡುಗಡೆ ಮಾಡಲು ಹೆದರಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಎಎನ್‍ಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿರುವ ಗುಜರಾತ್ ಚಿತ್ರಮಂದಿರ ಮಾಲೀಕ ಸಂಘದ ಅಧ್ಯಕ್ಷ ರಾಕೇಶ್ ಪಟೇಲ್, ಸಿನಿಮಾ ಬಿಡುಗಡೆ ಮಾಡದಿರಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. ಅಲ್ಲದೇ ಯಾವುದೇ ಮಾಲ್ಟಿಪ್ಲೆಕ್ಸ್ ಮಾಲೀಕರು ಚಿತ್ರದ ಪ್ರದರ್ಶನದ ವೇಳೆ ಉಂಟಾಗಬಹುದಾದ ನಷ್ಟವನ್ನು ಬರಿಸಲು ಸಿದ್ಧರಿಲ್ಲ ಎಂದು ತಿಳಿಸಿದ್ದಾರೆ.

    ಚಿತ್ರ ನಿರ್ದೇಶಕರು ಸಿನಿಮಾವನ್ನು ವಿರೋಧಿಸುತ್ತಿರುವ ಸಂಘಟನೆಗಳ ಆರೋಪಗಳನ್ನು ತಿರಸ್ಕರಿಸಿದ್ದು, ಚಿತ್ರದಲ್ಲಿ ಅಂತಹ ಯಾವುದೇ ದೃಶ್ಯಗಳು ಇಲ್ಲ ಎಂದು ಹಲವು ಬಾರಿ ಸ್ಪಷ್ಟನೆ ನೀಡಿದ್ದಾರೆ. ಚಿತ್ರದಲ್ಲಿ ನಟಿಸಿರುವ ಹಲವು ನಟರಿಗೆ ಜೀವ ಬೆದರಿಕೆಗಳ ಬಂದಿರುವ ಪರಿಣಾಮ ಚಿತ್ರದ ಪ್ರಚಾರ ಕಾರ್ಯದಿಂದ ಎಲ್ಲಾ ನಟರು ದೂರವಿದ್ದಾರೆ.

    ಚಿತ್ರೀಕರಣ ಆರಂಭವಾದ ಸಮಯದಿಂದಲೂ ಸಾಕಷ್ಟು ವಿವಾದಗಳಿಗೆ `ಪದ್ಮಾವತ್’ ಚಿತ್ರ ಕಾರಣವಾಗಿತ್ತು. ಹಲವು ಬಾರಿ ಕತ್ತರಿ ಪ್ರಯೋಗಿಸಿ ಬಳಿಕ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ. ನಿದೇರ್ಶಕ ಸಂಜಯ್ ಲೀಲಾ ಭನ್ಸಾಲಿ ಚಿತ್ರವನ್ನು ಜನವರಿ 25 ರಂದು ಬಿಡುಗಡೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

  • ಬದಲಾಯ್ತು ಘೂಮರ್ ಸಾಂಗ್-ಮರೆಯಾಯ್ತು ದೀಪಿಕಾ ಸೊಂಟ

    ಬದಲಾಯ್ತು ಘೂಮರ್ ಸಾಂಗ್-ಮರೆಯಾಯ್ತು ದೀಪಿಕಾ ಸೊಂಟ

    ಮುಂಬೈ: ದೇಶಾದ್ಯಂತ ಸುದ್ದಿಯಾಗಿದ್ದ ಬಾಲಿವುಡ್‍ನ `ಪದ್ಮಾವತ್’ ಸಿನಿಮಾ ಜನವರಿ 25ರಂದು ಬಿಡುಗಡೆಗೊಳ್ಳಲು ಸಿದ್ಧವಾಗಿದೆ. ಪದ್ಮಾವತ್ ರಿಲೀಸ್‍ಗೆ ಭಾರೀ ವಿರೋಧ ವ್ಯಕ್ತವಾಗುತ್ತಲೇ ಸೆನ್ಸಾರ್ ಮಂಡಳಿಯ ಸಲಹೆ ಮೇರೆಗೆ ಚಿತ್ರದಲ್ಲಿ ಟೈಟಲ್ ಸೇರಿದಂತೆ ಹಲವು ಬದಲಾವಣೆಗಳನ್ನು ತರಲಾಗಿದೆ.

    ಚಿತ್ರದ ಪ್ರಮುಖ ಹಾಡು ಘೂಮರ್ ಈಗಾಗಲೇ ಭಾರೀ ಸದ್ದು ಮಾಡುತ್ತಿದೆ. ಚಿತ್ರತಂಡ ಮತ್ತೊಂದು ಬದಲಾವಣೆಗೊಂಡ ಘೂಮರ್ ಸಾಂಗ್ ಯುಟ್ಯೂಬ್‍ನಲ್ಲಿ ಅಪ್ಲೋಡ್ ಮಾಡಿಕೊಂಡಿದೆ. ರಾಣಿ ಪದ್ಮಿನಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ದೀಪಿಕಾ ಘೂಮರ್ ಡ್ಯಾನ್ಸ್ ಮಾಡುತ್ತಾರೆ. ಈ ಮೊದಲು ಬಿಡುಗೊಡೆಗೊಂಡಿದ್ದ ಹಾಡಿನಲ್ಲಿ ಕೆಲವು ಸೆಕೆಂಡ್ ದೀಪಿಕಾರ ಸೊಂಟ ಕಾಣಿಸುತ್ತಿತ್ತು. ಕರ್ಣಿ ಸೇನಾದಿಂದ ಆಕ್ರೋಶವಾಗುತ್ತಲೇ ಕಾಣುತ್ತಿದ್ದ ಸೊಂಟವನ್ನು ತೆಳುವಾದ ಬಟ್ಟೆಯಿಂದ ಮರೆ ಮಾಡಲಾಗಿದೆ.

    ಚಿತ್ರದ ಬಿಡುಗಡೆ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವುದು ಕಷ್ಟಸಾಧ್ಯ ಎಂಬ ಕಾರಣ ನೀಡಿ, ಪದ್ಮಾವತ್ ಚಿತ್ರದ ಪ್ರದರ್ಶನಕ್ಕೆ ರಾಜಸ್ಥಾನ, ಹರಿಯಾಣ, ಗುಜರಾತ್, ಮಧ್ಯಪ್ರದೇಶ ಸರ್ಕಾರಗಳು ಚಿತ್ರ ಬಿಡುಗಡೆಗೆ ನಿಷೇಧ ಹೇರಿ ಆದೇಶ ಹೊರಡಿಸಿತ್ತು. ಸೆನ್ಸಾರ್ ಮಂಡಳಿ ಅನುಮತಿ ನೀಡಿದ್ದರೂ ಸಿನಿಮಾವನ್ನು ತಡೆಯುವ ಹಕ್ಕು ಯಾವ ರಾಜ್ಯಕ್ಕೂ ಇಲ್ಲ. ತಮ್ಮ ಸಿನಿಮಾ ಎಲ್ಲಾ ರಾಜ್ಯಗಳಲ್ಲೂ ಬಿಡುಗಡೆಯಾಗುವಂತೆ ಅವಕಾಶ ನೀಡಬೇಕೆಂದು ನಿರ್ಮಾಪಕರು ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಈ ಚಿತ್ರದಲ್ಲಿ ನಟಿಸಿರುವ ದೀಪಿಕಾ ಪಡುಕೋಣೆ, ಶಾಹಿದ್ ಕಪೂರ್, ರಣವೀರ್ ಸಿಂಗ್ ಜೀವ ಬೆದರಿಕೆ ಇರುವ ಕಾರಣ ಯಾರು ಚಿತ್ರದ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿಲ್ಲ.

    ಚಿತ್ರದ ಬಿಡುಗಡೆಗೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿತ್ತು. ಹೀಗಾಗಿ ಸೆನ್ಸಾರ್ ಬೋರ್ಡ್ ನಿಂದ ರಚಿಸಲಾದ ವಿಶೇಷ ತಂಡದಿಂದ ಚಿತ್ರವನ್ನ ವಿಮರ್ಶಿಸಲಾಗಿದೆ. ಸಿನಿಮಾ ಐತಿಹಾಸಿಕ ಕಥೆಯನ್ನು ಆಧರಿಸಿರುವುದರಿಂದ ತಂಡದಲ್ಲಿ ಇತಿಹಾಸಕಾರರು ಕೂಡ ಇದ್ದರು. ಉದಯಪುರ್ ಮೂಲದ ಅರವಿಂದ್ ಸಿಂಗ್, ಜೈಪುರ ವಿಶ್ವವಿದ್ಯಾಲಯದ ಪ್ರೊಫೆಸರ್ ಗಳಾದ ಕೆಕೆ ಸಿಂಗ್ ಮತ್ತು ಡಾ.ಚಂದ್ರಮಣಿ ಸಿಂಗ್ ವಿಶೇಷ ತಂಡದಲ್ಲಿ ಇದ್ದರು. ಸದಸ್ಯರು ಐತಿಹಾಸಿಕ ಘಟನೆಗಳು, ದೇಶದ ಸಾಮಾಜಿಕ-ಸಾಂಸ್ಕೃತಿಕ ಅಂಶಗಳ ಬಗ್ಗೆ ಜ್ಞಾನ ಹೊಂದಿದ ವ್ಯಕ್ತಿಗಳಾಗಿದ್ದು, ಕಥೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ರು ಎಂದು ಸೆನ್ಸಾರ್ ಬೋರ್ಡ್ ತಿಳಿಸಿದೆ. ಚಿತ್ರದ ಸುತ್ತ ವಿವಾದ ಹುಟ್ಟಿಕೊಂಡ ನಂತರ ಸೆನ್ಸಾರ್ ಬೋರ್ಡ್ ಪ್ರತಿಯೊಂದು ಅಂಶವನ್ನು ಪರಿಗಣಿಸಿ ಯು/ಎ ಪ್ರಮಾಣ ಪತ್ರ ನೀಡಿದೆ.

    ಜನವರಿ 25ರಂದು ಪದ್ಮಾವತ್ ರಿಲೀಸ್ ಮಾಡಲು ನಿರ್ಧರಿಸಿದ್ದರಿಂದ ಅಕ್ಷಯ್‍ಕುಮಾರ್ ನಟನೆಯ `ಪ್ಯಾಡ್‍ಮ್ಯಾನ್’ನೊಂದಿಗೆ ಎದುರಾಗಿತ್ತು. ಗುರುವಾರ ಸಂಜಯ್ ಲೀಲಾ ಬನ್ಸಾಲಿಯ ಮನವಿ ಮೇರೆಗೆ ಅಕ್ಷಯ್ ಕುಮಾರ್ ತಮ್ಮ ಸಿನಿಮಾದ ದಿನಾಂಕವನ್ನು ಫೆಬ್ರವರಿ 09ಕ್ಕೆ ಮುಂದೂಡಿದ್ದಾರೆ.

    ಇತ್ತೀಚೆಗೆ ಬಿಡುಗೊಡೆಗೊಂಡ ಘೂಮರ್ ಹಾಡಿನ ವಿಡಿಯೋ: 

    ಮೊದಲಿಗೆ ಬಿಡುಗೊಡೆಯಾಗಿದ್ದ ಘೂಮರ್ ಹಾಡಿನ ವಿಡಿಯೋ: 

    https://www.youtube.com/watch?time_continue=227&v=dl6NMEUQRPk

  • ಪದ್ಮಾವತ್ ಚಿತ್ರವನ್ನು ನೋಡಿ ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ: ಮುಸ್ಲಿಮರಿಗೆ ಓವೈಸಿ ಕರೆ

    ಪದ್ಮಾವತ್ ಚಿತ್ರವನ್ನು ನೋಡಿ ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ: ಮುಸ್ಲಿಮರಿಗೆ ಓವೈಸಿ ಕರೆ

    ಹೈದರಾಬಾದ್: ಬಾಲಿವುಡ್ ನ ವಿವಾದಿತ ಚಿತ್ರ ಪದ್ಮಾವತ್ ಸಿನಿಮಾವನ್ನು ಮುಸ್ಲಿಮ್ ಯುವಜನತೆ ನೋಡಿ ಹಣ ಹಾಗೂ ಸಮಯವನ್ನು ವ್ಯರ್ಥ ಮಾಡಿಕೊಳ್ಳಬೇಡಿ ಎಂದು ಎಂಐಎಂ (ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೇಹದ್-ಉಲ್ ಮುಸ್ಲಿಮೀನ್) ಪಕ್ಷದ ಸಂಸ್ಥಾಪಕ ಅಸಾದುದ್ದೀನ್ ಓವೈಸಿ ಕರೆ ನೀಡಿದ್ದಾರೆ.

    ಅಖಿಲ ಭಾರತ ಅಭಿಯಾನದ ಭಾಗವಾಗಿ ಬುಧವಾರ ವಾರಂಗಲ್ ನಗರದಲ್ಲಿ ಏರ್ಪಡಿಸಿದ್ದ ‘ಸೆವ್ ಷರಿಯಾ’ (ಷರಿಯಾ ಉಳಿಸಿ) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪದ್ಮಾವತ್ ಸಿನಿಮಾ ಒಂದು ಪೌರಾಣಿಕ ಸಿನಿಮಾವಾಗಿದ್ದು, ರಜಪೂತ ರಾಣಿ ಪದ್ಮಾವತಿ ಹಾಗೂ ಚಕ್ರವರ್ತಿ ಅಲ್ಲಾವುದ್ದೀನ್ ಖಿಲ್ಜಿ ನಡುವಿನ ಕಾಲ್ಪನಿಕ ಕತೆಯನ್ನು ಆಧಾರಿಸಿದ್ದು. ಇದನ್ನು ಮುಸ್ಲಿಂ ಕವಿ ಮಲಿಕ್ ಮೊಹಮ್ಮದ ಜಯಸಿ 1540 ರಲ್ಲಿ ಪ್ರಾಸಂಗಿಕವಾಗಿ ಬರೆದಿದ್ದಾರೆ. ಇದು ಯಾವುದೇ ಐತಿಹಾಸಿಕ ಆಧಾರವನ್ನು ಹೊಂದಿಲ್ಲ. ಈ ಚಿತ್ರವನ್ನು ಯಾರು ನೋಡಬೇಡಿ ಎಂದು ಹೇಳಿದರು.

    ಪದ್ಮಾವತ್ ಚಿತ್ರವೊಂದು ‘ಮನ್ಹೂಸ್’ (ಶಾಪ-ಸವಾರಿ) ಮತ್ತು ‘ಘಲೀಜ್’ (ಕೆಟ್ಟ) ಚಿತ್ರ ಎಂದ ಅವರು, ಕೇವಲ ಎರಡು ಗಂಟೆಯ ಚಿತ್ರ ವೀಕ್ಷಿಸಲು ದೇವರು ನಿಮ್ಮನ್ನು ಸೃಷ್ಟಿಸಿಲ್ಲ. ಉತ್ತಮ ಜೀವನ ನಡೆಸಲು ಹಾಗೂ ಒಳ್ಳೆಯ ಕೆಲಸಗಳನ್ನು ಮಾಡಲು ಸೃಷ್ಟಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.

    ಇದೇ ವೇಳೆ  ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ಅವರು. ಪದ್ಮಾವತ್ ಚಿತ್ರವನ್ನು ವಿಮರ್ಶೆ ಮಾಡಲು 12 ಸದಸ್ಯರ ಸಮಿತಿ ಸ್ಥಾಪಿಸಿದ್ದು, ಹಲವು ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚಿಸಿದ್ದಾರೆ. ಆದರೆ ಮುಸ್ಲಿಂ ಷರಿಯಾ ಕಾನೂನಿನಲ್ಲಿ (ತ್ರಿವಳಿ ತಲಾಕ್) ತಿದ್ದುಪಡಿ ತರಲು ಯಾವ ಮುಸ್ಲಿಂ ಮುಖಂಡರ ಸಲಹೆಯನ್ನು ಪಡೆದಿಲ್ಲ ಎಂದು ಆರೋಪಿಸಿದರು.

    ಪದ್ಮಾವತ್ ಚಿತ್ರದ ರಾಣಿಯ ಬೆಂಬಲಕ್ಕೆ ನಿಂತಿರುವ ರಜಪೂತರ ಹೋರಾಟಗಾರರ ಒಗ್ಗಟ್ಟನ್ನು ನೋಡಿ ಮುಸ್ಲಿಂ ಸಮುದಾಯ ಕಲಿಯಬೇಕಿದೆ. ಚಿತ್ರ ಬಿಡುಗಡೆ ವಿರೋಧಿಸಿ ಹೋರಾಟ ನಡೆಸಿದ್ದಾರೆ. ಆದರೆ ಮುಸ್ಲಿಂ ಕಾನೂನು ತಿದ್ದುಪಡಿ ವೇಳೆ ಮುಸ್ಲಿಮರು ವಿರೋಧ ವ್ಯಕ್ತಪಡಿಸಲಿಲ್ಲ. ಮುಸ್ಲಿಂ ಸಮುದಾಯ ವಿಭಜನೆಯಾಗುತ್ತಿದೆ ಎಂದು ಹೇಳಿದರು.

     

     

  • ದೇಶದೆಲ್ಲೆಡೆ ಬಿಡುಗಡೆಯಾಗಲಿದೆ ಪದ್ಮಾವತ್ – 4 ರಾಜ್ಯಗಳ ಆದೇಶಕ್ಕೆ ಸುಪ್ರೀಂ ತಡೆ

    ದೇಶದೆಲ್ಲೆಡೆ ಬಿಡುಗಡೆಯಾಗಲಿದೆ ಪದ್ಮಾವತ್ – 4 ರಾಜ್ಯಗಳ ಆದೇಶಕ್ಕೆ ಸುಪ್ರೀಂ ತಡೆ

    ನವದೆಹಲಿ: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಚಿತ್ರ ಬಿಡುಗಡೆಗಿದ್ದ ಅಡ್ಡಿ ದೂರವಾಗಿದ್ದು, ಇದೇ 25 ರಂದು ದೇಶದೆಲ್ಲೆಡೆ ಬಿಡುಗಡೆಯಾಗಬೇಕು ಎಂದು ಸುಪ್ರೀಂ ಹೇಳಿದೆ.

    ನಾಲ್ಕು ರಾಜ್ಯಗಳಲ್ಲಿ `ಪದ್ಮಾವತ್’ ಚಿತ್ರ ಪ್ರದರ್ಶನಕ್ಕೆ ನಿಷೇಧ ಹೇರಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಇಂದು ನಡೆಯಿತು. ಈ ವೇಳೆ ರಾಜ್ಯಗಳ ಆದೇಶಕ್ಕೆ ತಡೆ ನೀಡಿದ ಪೀಠ ಕಾನೂನು ಸುವ್ಯಸ್ಥೆ ಕಾಪಾಡುವುದು ಆಯಾ ರಾಜ್ಯಗಳ ಕೆಲಸ ಎಂದು ಹೇಳಿತು.

    ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರಿದ್ದ ಪೀಠವು ಬಿಡುಗಡೆ ನಿಷೇಧಿಸಿ ಹೊರಡಿಸಿದ್ದ ನಾಲ್ಕು ರಾಜ್ಯಗಳ ಆದೇಶಕ್ಕೆ ತಡೆ ನೀಡಿದೆ.

    ಇದೇ ವೇಳೆ ಚಿತ್ರದ ಕುರಿತು ಬಂದಿರುವ ಆಕ್ಷೇಪಣೆಗಳನ್ನು ಪರಿಗಣಿಸಿದರೆ ಭಾರತದ 60 ರಷ್ಟು ಸಾಹಿತ್ಯವನ್ನು ಓದುವ ಹಾಗೇ ಇಲ್ಲ ಎಂದು ಮುಖ್ಯ ನ್ಯಾ. ಮಿಶ್ರಾ ಅಭಿಪ್ರಾಯಪಟ್ಟರು. ಈ ವೇಳೆ ಚಿತ್ರ ನಿರ್ಮಾಣ ಮಾಡಿದ ಸಂಸ್ಥೆಯಾದ ವಿಯಾಕಾಮ್ 18 ಪರವಾಗಿ ವಾದಿಸಿದ ಹಿರಿಯ ವಕೀಲ ಹರೀಶ್ ಸಾಳ್ವೆ, ಚಿತ್ರ ಬಿಡುಗಡೆ ರಾಜ್ಯಗಳು ನಿಷೇಧ ಹೇರಿದ ಜೊತೆಗೆ ಅಭಿನಯಿಸಿದ ಕಲಾವಿದರಿಗೂ ಜೀವ ಬೆದರಿಕೆ ಬಂದಿದೆ. ಹೀಗಾಗಿ ಅವರಿಗೂ ಭದ್ರತೆ ನೀಡಬೇಕೆಂದು ಮನವಿ ಮಾಡಿದರು.

    ಅಂತಿಮವಾಗಿ ಪೀಠ ನಾಲ್ಕು ರಾಜ್ಯಗಳ ನಿಷೇಧ ವಿಧಿಸಿ ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಿ ಮುಂದಿನ ವಿಚಾರಣೆಯನ್ನು ಮಾರ್ಚ್ 26ಕ್ಕೆ ಮುಂದೂಡಿತು.

    ಚಿತ್ರೀಕರಣ ಆರಂಭವಾದ ಸಮಯದಿಂದಲೂ ಸಾಕಷ್ಟು ವಿವಾದಗಳಿಗೆ ‘ಪದ್ಮಾವತ್’ ಚಿತ್ರ ಕಾರಣವಾಗಿತ್ತು. ಹಲವು ಬಾರಿ ಕತ್ತರಿ ಪ್ರಯೋಗಿಸಿ ಬಳಿಕ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿತ್ತು. ನಿದೇರ್ಶಕ ಸಂಜಯ್ ಲೀಲಾ ಭನ್ಸಾಲಿ ಚಿತ್ರವನ್ನು ಜನವರಿ 25 ರಂದು ಬಿಡುಗಡೆ ಮಾಡುತ್ತಿರುವುದಾಗಿ ತಿಳಿಸಿದ್ದರು.

    ಆದರೆ ಚಿತ್ರದ ಬಿಡುಗಡೆ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವುದು ಕಷ್ಟಸಾಧ್ಯ ಎಂಬ ಕಾರಣ ನೀಡಿ, ಪದ್ಮಾವತ್ ಚಿತ್ರದ ಪ್ರದರ್ಶನಕ್ಕೆ ರಾಜಸ್ಥಾನ, ಹರಿಯಾಣ, ಗುಜರಾತ್, ಮಧ್ಯಪ್ರದೇಶ ಸರ್ಕಾರಗಳು ಚಿತ್ರ ಬಿಡುಗಡೆಗೆ ನಿಷೇಧ ಹೇರಿ ಆದೇಶ ಹೊರಡಿಸಿತ್ತು.

    ಸೆನ್ಸಾರ್ ಮಂಡಳಿ ಅನುಮತಿ ನೀಡಿದ್ದರೂ ಸಿನಿಮಾವನ್ನು ತಡೆಯುವ ಹಕ್ಕು ಯಾವ ರಾಜ್ಯಕ್ಕೂ ಇಲ್ಲ. ತಮ್ಮ ಸಿನಿಮಾ ಎಲ್ಲಾ ರಾಜ್ಯಗಳಲ್ಲೂ ಬಿಡುಗಡೆಯಾಗುವಂತೆ ಅವಕಾಶ ನೀಡಬೇಕೆಂದು ನಿರ್ಮಾಪಕರು ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಈ ಚಿತ್ರದಲ್ಲಿ ನಟಿಸಿರುವ ದೀಪಿಕಾ ಪಡುಕೋಣೆ, ಶಾಹಿದ್ ಕಪೂರ್, ರಣವೀರ್ ಸಿಂಗ್ ಜೀವ ಬೆದರಿಕೆ ಇರುವ ಕಾರಣ ಯಾರು ಚಿತ್ರದ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿಲ್ಲ.

  • 1.22 ಲಕ್ಷ ರೂ. ಬೆಲೆಯ ಬ್ಯಾಗ್ ಧರಿಸ್ತಾರೆ ದೀಪಿಕಾ ಪಡುಕೋಣೆ!

    1.22 ಲಕ್ಷ ರೂ. ಬೆಲೆಯ ಬ್ಯಾಗ್ ಧರಿಸ್ತಾರೆ ದೀಪಿಕಾ ಪಡುಕೋಣೆ!

    ಮುಂಬೈ: ಬಾಲಿವುಡ್ ಗುಳಿಕೆನ್ನೆ ಬೆಡಗಿ ದೀಪಿಕಾ ಪಡುಕೋಣೆ ಯಾವಗಲೂ ಸ್ಟೈಲಿಶ್ ಲುಕ್‍ನಲ್ಲಿ ಕಾಣಿಸಿಕೊಳ್ಳುತ್ತಾರೆ. ದೀಪಿಕಾ ತಮಗೆ ಒಪ್ಪುವಂತಹ ಉಡುಪುಗಳನ್ನು ಧರಿಸುವ ಮೂಲಕ ನೋಡುಗರ ಕಣ್ಣು ಕುಕ್ಕವ ಹಾಗೆ ಕಾಣುತ್ತಾರೆ. ಸದ್ಯ ಜಾಹಿರಾತುಗಳ ಶೂಟಿಂಗ್‍ನಲ್ಲಿ ಬ್ಯೂಸಿಯಾಗಿರುವ ದೀಪಿಕಾ ಪ್ಯಾರೀಸ್ ನಲ್ಲಿದ್ದಾರೆ.

    ಪ್ಯಾರೀಸ್‍ಗೆ ಹೋಗುವ ಮುನ್ನ ಏರ್‍ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದ ಸಿಂಪಲ್ ಡ್ರೆಸ್‍ನಲ್ಲಿ ಮಿಂಚುತ್ತಿದ್ರು. ಆದ್ರೆ ಈ ಬಾರಿ ದೀಪಿಕಾ ಧರಿಸಿದ್ದ ಬೆಲ್ಟ್ ಕಮ್ ಬ್ಯಾಗ್ ಎಲ್ಲರನ್ನು ಆಕರ್ಷಿಸಿತ್ತು. ತೆಳು ನೀಲಿ ಬಣ್ಣದ ಲಾಂಗ್ ಶರ್ಟ್ ಮತ್ತು ಕಪ್ಪು ಬಣ್ಣದ ಲೆದರ್ ಲೆಗ್ಗಿಂಗ್ಸ್ ಜೊತೆ ಕಪ್ಪು ಬಣ್ಣದ ಅಡ್ಜಸ್ಟೇಬಲ್ ಬೆಲ್ಟ್ ಕಮ್ ಬ್ಯಾಗ್ ನ್ನು ಕಾಣುತ್ತಿತ್ತು.

    ದೀಪಿಕಾ ಧರಿಸಿದ್ದ ಬ್ಯಾಗ್ ಬೆಲೆ 1,20,714 ರೂ. (ಡಾಲರ್ 1,890) ಎಂದು ಪತ್ರಿಕೆಯೊಂದು ಪ್ರಕಟಿಸಿದೆ. ಈ ಬ್ಯಾಗ್‍ನಲ್ಲಿ ದೀಪಿಕಾ ತಮ್ಮ ಪಾಸ್‍ಪೋರ್ಟ್ ಮತ್ತು ಅಗತ್ಯ ವಸ್ತುಗಳನ್ನು ಮಾತ್ರ ಇರಿಸುತ್ತಾರೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ಜಾಹಿರಾತಿನಲ್ಲಿ ದೀಪಿಕಾ ಪೊಲೀಸ್ ಡ್ರೆಸ್ ಧರಿಸಿ ಜಾಹಿರಾತಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಬ್ಯಾಗ್ ಮೇಲೆ ಬಂಗಾರ ಬಣ್ಣದ ಒಟ್ಟು 8 ಚಿಟ್ಟೆಗಳು, 4 ಸಿಂಹದ ಮುಖಗಳು ಮತ್ತು 3 ಜಿರಳೆಗಳ ಚಿತ್ರಗಳಿವೆ. ಬ್ಲ್ಯಾಕ್ ಬ್ಯಾಗ್ ಮೇಲೆ ಗೋಲ್ಡನ್ ಚಿತ್ರಗಳನ್ನು ಹೊಂದಿದ್ದು, ಆಕರ್ಷಕವಾಗಿ ಕಾಣುತ್ತಿದೆ. ಇದನ್ನೂ ಓದಿ: ಯಾವ ನಟಿಯರಿಗೂ ಕಡಿಮೆಯಿಲ್ಲ ಶಾರುಖ್ ಪುತ್ರಿ-ಇಷ್ಟು ಬೆಲೆಯ ಶೂ ಧರಿಸ್ತಾರೆ!

    ಇದೇ ತಿಂಗಳು 25ರಂದು ದೀಪಿಕಾ ನಟನೆಯ ಬಹು ನಿರೀಕ್ಷಿತ ‘ಪದ್ಮಾವತ್’ ಚಿತ್ರ ಬಿಡುಗಡೆಯಾಗಲಿದೆ. ಪದ್ಮಾವತ್ ಸಿನಿಮಾ ರಿಲೀಸ್ ಬಳಿಕ ದೀಪಿಕಾ ತಮ್ಮ ಮುಂದಿನ ಚಿತ್ರದ ಶೂಟಿಂಗ್‍ನಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಪದ್ಮಾವತ್ ನಲ್ಲಿ ರಣ್‍ವೀರ್ ಸಿಂಗ್, ಶಾಹಿದ್ ಕಪೂರ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

  • ಪದ್ಮಾವತ್ ಚಿತ್ರದ ಹಾಡಿಗೆ ನೃತ್ಯ ಮಾಡಿದ್ದಕ್ಕೆ ಶಾಲೆಯ ಚೇರ್, ಸ್ಪೀಕರ್ ಧ್ವಂಸ

    ಪದ್ಮಾವತ್ ಚಿತ್ರದ ಹಾಡಿಗೆ ನೃತ್ಯ ಮಾಡಿದ್ದಕ್ಕೆ ಶಾಲೆಯ ಚೇರ್, ಸ್ಪೀಕರ್ ಧ್ವಂಸ

    ಭೋಪಾಲ್: ಶಾಲೆಯ ವಾರ್ಷಿಕೋತ್ಸವದಲ್ಲಿ ಪದ್ಮಾವತ್ ಚಿತ್ರದ ಗೂಮರ್ ಹಾಡಿಗೆ ನೃತ್ಯ ಮಾಡಿದ್ದಕ್ಕೆ ಶ್ರೀ ರಜ್‍ಪೂತ್ ಕರ್ಣಿ ಸೇನಾ ಕಾರ್ಯಕರ್ತರು ಶಾಲಾ ಆಸ್ತಿಯನ್ನು ಧ್ವಂಸ ಮಾಡಿದ ಘಟನೆ ಮಧ್ಯ ಪ್ರದೇಶದ ರತ್ಲಂನಲ್ಲಿ ನಡೆದಿದೆ.

    ಸೆಂಟ್ ಪೌಲ್ ಕಾನ್ವೆಂಟ್ ನಲ್ಲಿ ಈ ಘಟನೆ ನಡೆದಿದ್ದು, 1 ರಿಂದ 5ನೇ ತರಗತಿಯ ಮಕ್ಕಳು ಶಾಲಾ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿದ್ದರು. ಕಾರ್ಯಕ್ರಮ ನಡೆಯುವಾಗ ಕರ್ಣಿ ಸೇನಾ ಕಾರ್ಯಕರ್ತರು ಪ್ಲಾಸ್ಟಿಕ್ ಚೇರ್ ಮುರಿದಿದ್ದಾರೆ ಅಷ್ಟೇ ಅಲ್ಲದೇ ಸ್ಪೀಕರ್ ಒಡೆದು ಹಾಕಿದ್ದಾರೆ. ಈ ಘಟನೆಯಲ್ಲಿ ಓರ್ವ ವಿದ್ಯಾರ್ಥಿಗೆ ಗಾಯವಾಗಿದೆ.

    ಶಾಲೆಯ ಆಡಳಿತ ಮಂಡಳಿ ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ ಹಾಗೂ ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

    ಸದ್ಯ ಪದ್ಮಾವತಿ ಚಿತ್ರ ಪದ್ಮಾವತ್ ಆಗಿ ಬದಲಾಗಿದ್ದು, ಯು/ಎ ಸರ್ಟಿಫಿಕೆಟ್ ದೊರೆತಿದೆ. ಈ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ರಾಣಿ ಪದ್ಮಾವತ್ ಆಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಚಿತ್ರದಲ್ಲಿ ಇಬ್ಬರೂ ನಾಯಕರಿದ್ದು, ಶಾಹಿದ್ ಕಪೂರ್ ರಾಣಾ ರತನ್ ಸಿಂಗ್ ಆಗಿ ಕಾಣಿಸಿಕೊಂಡಿದ್ದಾರೆ. ಮತ್ತೊಬ್ಬ ನಟ ರಣ್‍ವೀರ್ ಸಿಂಗ್ ಅಲ್ಲಾವುದ್ದೀನ್ ಖಿಲ್ಜಿ ಆಗಿ ಬಣ್ಣ ಹಚ್ಚಿದ್ದಾರೆ. ಪದ್ಮಾವತ್ ಚಿತ್ರ ಇದೇ ತಿಂಗಳು 25 ರಂದು ಬಿಡುಗಡೆಯಾಗಲಿದೆ.

    https://www.youtube.com/watch?v=1kqJYqGraLg

     

  • ಸೆನ್ಸಾರ್ ಮಂಡಳಿಯಿಂದ ಅನುಮತಿ ಸಿಕ್ರೂ, ರಾಜಸ್ಥಾನದಲ್ಲಿ ‘ಪದ್ಮಾವತ್’ಗೆ ಬಿಡುಗಡೆಯ ಭಾಗ್ಯ ಇಲ್ಲ

    ಸೆನ್ಸಾರ್ ಮಂಡಳಿಯಿಂದ ಅನುಮತಿ ಸಿಕ್ರೂ, ರಾಜಸ್ಥಾನದಲ್ಲಿ ‘ಪದ್ಮಾವತ್’ಗೆ ಬಿಡುಗಡೆಯ ಭಾಗ್ಯ ಇಲ್ಲ

    ಮುಂಬೈ: ಸಿನಿಮಾ ಸೆಟ್ಟೇರುತ್ತಲೇ ಹಲವು ವಿವಾದಗಳನ್ನು ಹುಟ್ಟುಹಾಕಿದ್ದ ಪದ್ಮಾವತ್ ಚಿತ್ರಕ್ಕೆ ಕೊನೆಗೂ ಬಿಡುಗಡೆಯ ಭಾಗ್ಯ ಲಭಿಸಿದೆ. ಆದರೆ ರಾಜಸ್ಥಾನದಲ್ಲಿ ಮಾತ್ರ ‘ಪದ್ಮಾವತ್’ ಚಿತ್ರಕ್ಕೆ ನಿಷೇಧ ವಿಧಿಸಲಾಗಿದೆ. ರಾಜಸ್ಥಾನದ ವಸುಂಧರಾ ರಾಜೇ ಸರ್ಕಾರ ಸಿನಿಮಾ ಬಿಡುಗಡೆಗೆ ನಿಷೇಧ ಹೇರಿದ್ದಾರೆ.

    ರಾಣಿ ಪದ್ಮಿನಿ ರಾಜಸ್ಥಾನದ ಗೌರವ ಮತ್ತು ಪ್ರಾಮಾಣಿಕತೆಯ ಸಂಕೇತವಾಗಿದ್ದು, ನಮಗೆ ಇತಿಹಾಸದಲ್ಲಿ ಪದ್ಮಾವತಿ ಕೇವಲ ಒಬ್ಬ ರಾಣಿಯಾಗಿ ಕಾಣಿಸಿಕೊಳ್ಳದೇ ರಾಜ್ಯದ ಹೆಮ್ಮೆಯ ಸಂಕೇತವಾಗಿದ್ದಾರೆ. ಈ ಕಾರಣದಿಂದ ಯಾವುದೇ ರೀತಿಯಲ್ಲಿ ರಾಣಿ ಪದ್ಮಿನಿ ಘನತೆಗೆ ಧಕ್ಕೆ ತರಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಕಚೇರಿ ಸ್ಪಷ್ಟಪಡಿಸಿದೆ.

    ಮುಖ್ಯಮಂತ್ರಿಗಳು ಈ ಹಿಂದಿನಿಂದಲೂ ಚಿತ್ರ ಪ್ರದರ್ಶನ ನಿಷೇಧ ವಿಧಿಸಿದ್ದಾರೆ. ಹೀಗಾಗಿ ರಾಜಸ್ಥಾನದಲ್ಲಿ ‘ಪದ್ಮಾವತ್’ ಸಿನಿಮಾ ಪ್ರದರ್ಶಿಸುವ ಹಾಗಿಲ್ಲ. ನಮಗೆ ಈಗಾಗಲೇ ಸಿನಿಮಾಗೆ ಸಂಬಂಧಿಸಿದಂತೆ ಆದೇಶ ತಲುಪಿದ್ದು, ಆದೇಶದನ್ವಯ ನಾವು ಕೆಲಸ ಮಾಡುತ್ತೇವೆ ಎಂದು ರಾಜಸ್ಥಾನದ ಗೃಹ ಸಚಿವ ಗುಲಾಬ್ ಚಾಂದ್ ಕಟರಿಯಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಪದ್ಮಾವತ್ 2017 ಡಿಸೆಂಬರ್ 01ರಂದು ತೆರೆ ಕಾಣಬೇಕಿತ್ತು. ಆದ್ರೆ ದೇಶಾದ್ಯಂತ ಚಿತ್ರದ ವಿರೋಧವಾಗಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ದಿನಾಂಕವನ್ನು ಮುಂದೂಡಲಾಗಿತ್ತು. ಡಿಸೆಂಬರ್ 28ರಂದು ಸೆನ್ಸಾರ್ ಬೋರ್ಡ್ ಚಿತ್ರಕ್ಕೆ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳುವಂತೆ ಸೂಚಿಸಿ ಯು/ಎ ಸರ್ಟಿಫಿಕೇಟ್ ನೀಡಿತ್ತು. ಸಿನಿಮಾದ ನಿರ್ದೇಶಕ ಮತ್ತು ನಿರ್ಮಾಪಕರು ಟೈಟಲ್ ಸೇರಿದಂತೆ ಕೆಲವು ಬದಲಾವಣೆಗಳಿಗೆ ಒಪ್ಪಿಗೆ ಸೂಚಿಸಿದ ಬಳಿಕವೇ ಬಿಡುಗಡೆಗೆ ಅನುಮತಿ ನೀಡಲಾಗಿದೆ ಎಂದು ಸೆನ್ಸಾರ್ ಬೋರ್ಡ್ ಮುಖ್ಯಸ್ಥ ಪ್ರಸೂನ್ ಜೋಶಿ ಹೇಳಿದ್ದಾರೆ.

    ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ನಿಂದ ಅನುಮತಿ ದೊರಕಿದ ಕೂಡಲೇ ಚಿತ್ರತಂಡ ಇದೇ ತಿಂಗಳು 25ರಂದು ಸಿನಿಮಾವನ್ನು ತೆರೆಗೆ ತರಲು ತೀರ್ಮಾನಿಸಿದೆ. ಫಿಲ್ಮ್ ನಲ್ಲಿ ರಾಣಿ ಪದ್ಮಿನಿಯಾಗಿ ದೀಪಿಕಾ ಪಡುಕೋಣೆ, ರಾವಲ್ ರತನ್ ಸಿಂಗ್ ಪಾತ್ರದಲ್ಲಿ ಶಾಹಿದ್ ಕಪೂರ್ ಮತ್ತು ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ರಣ್‍ವೀರ್ ಸಿಂಗ್ ನಟಿಸಿದ್ದಾರೆ.

  • ದೇಶಾದ್ಯಂತ ಸಂಚಲನ ಮೂಡಿಸಿದ್ದ ‘ಪದ್ಮಾವತ್’ ರಿಲೀಸ್‍ಗೆ ಡೇಟ್ ಫಿಕ್ಸ್!

    ದೇಶಾದ್ಯಂತ ಸಂಚಲನ ಮೂಡಿಸಿದ್ದ ‘ಪದ್ಮಾವತ್’ ರಿಲೀಸ್‍ಗೆ ಡೇಟ್ ಫಿಕ್ಸ್!

    ಮುಂಬೈ: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಬಹು ನಿರೀಕ್ಷಿತ ಮತ್ತು ದೇಶಾದ್ಯಂತ ಸಂಚಲನ ಮೂಡಿಸಿದ್ದ ‘ಪದ್ಮಾವತ್’ ಸಿನಿಮಾಗೆ ಕೊನೆಗೂ ತೆರೆಕಾಣಲು ಮುಹೂರ್ತ ಫಿಕ್ಸ್ ಆಗಿದೆ. ಸೆನ್ಸಾರ್ ಬೋರ್ಡ್ ನಿಂದ ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿದ್ದು, ಜನವರಿ 25ರಂದು ದೇಶಾದ್ಯಂತ ತೆರೆಗೆ ಅಪ್ಪಳಿಸಲಿದೆ.

    ಚಿತ್ರಕ್ಕೆ ಈ ಮೊದಲು ‘ಪದ್ಮಾವತಿ’ ಅಂತಾ ಹೆಸರಿಡಲಾಗಿತ್ತು. ಸೆನ್ಸಾರ್ ಬೋರ್ಡ್ ಸೂಚನೆಯ ಮೇರೆಗೆ ಚಿತ್ರದ ಹೆಸರನ್ನು ‘ಪದ್ಮಾವತ್’ ಅಂತಾ ಬದಲಾಯಿಸಲಾಗಿದೆ. ಆದ್ರೆ ‘ಪದ್ಮಾವತ್’ ಅಕ್ಷಯ್ ಕುಮಾರ್ ನಟನೆಯ ‘ಪ್ಯಾಡ್‍ಮ್ಯಾನ್’ ಚಿತ್ರಕ್ಕೆ ಪೈಪೋಟಿಯನ್ನು ನೀಡಲಿದೆ.

    ಶುಕ್ರವಾರ ‘ಪದ್ಮಾವತ್’ಗೆ ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣ ಪತ್ರ ಲಭಿಸಿದ್ದು, ಚಿತ್ರ ಬರೋಬ್ಬರಿ 2 ಗಂಟೆ 43 ನಿಮಿಷ (163 ನಿಮಿಷ) ಸಮಯವನ್ನು ಹೊಂದಿದೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ, ರಣ್‍ವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ಲೀಡ್ ರೋಲ್‍ನಲ್ಲಿ ನಟಿಸಿದ್ದಾರೆ. ಅಂದುಕೊಂಡಂತೆ ಆಗಿದ್ದರೆ ಚಿತ್ರ 2017 ಡಿಸೆಂಬರ್ 01ರಂದು ತೆರೆ ಕಾಣಬೇಕಿತ್ತು. ಆದ್ರೆ ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ಆರೋಪಿಸಿ ಬಿಡುಗಡೆಗೆ ರಾಜಸ್ಥಾನದ ಕರ್ಣಿ ಸೇನಾ ತೀವ್ರ ವಿರೋಧವನ್ನು ವ್ಯಕ್ತಪಡಿಸಿತ್ತು.

    ಚಿತ್ರದ ಬಿಡುಗಡೆಗೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿತ್ತು. ಹೀಗಾಗಿ ಸೆನ್ಸಾರ್ ಬೋರ್ಡ್‍ನಿಂದ ರಚಿಸಲಾದ ವಿಶೇಷ ತಂಡದಿಂದ ಚಿತ್ರವನ್ನ ವಿಮರ್ಶಿಸಲಾಗಿದೆ. ಸಿನಿಮಾ ಐತಿಹಾಸಿಕ ಕಥೆಯನ್ನು ಆಧರಿಸಿರುವುದರಿಂದ ತಂಡದಲ್ಲಿ ಇತಿಹಾಸಕಾರರು ಕೂಡ ಇದ್ದರು. ಉದಯಪುರ್ ಮೂಲದ ಅರವಿಂದ್ ಸಿಂಗ್, ಜೈಪುರ ವಿಶ್ವವಿದ್ಯಾಲಯದ ಪ್ರೊಫೆಸರ್ ಗಳಾದ ಕೆಕೆ ಸಿಂಗ್ ಮತ್ತು ಡಾ.ಚಂದ್ರಮಣಿ ಸಿಂಗ್ ವಿಶೇಷ ತಂಡದಲ್ಲಿ ಇದ್ದರು. ಸದಸ್ಯರು ಐತಿಹಾಸಿಕ ಘಟನೆಗಳು, ದೇಶದ ಸಾಮಾಜಿಕ-ಸಾಂಸ್ಕೃತಿಕ ಅಂಶಗಳ ಬಗ್ಗೆ ಜ್ಞಾನ ಹೊಂದಿದ ವ್ಯಕ್ತಿಗಳಾಗಿದ್ದು, ಕಥೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ರು ಎಂದು ಸೆನ್ಸಾರ್ ಬೋರ್ಡ್ ತಿಳಿಸಿದೆ. ಚಿತ್ರದ ಸುತ್ತ ವಿವಾದ ಹುಟ್ಟಿಕೊಂಡ ನಂತರ ಸೆನ್ಸಾರ್ ಬೋರ್ಡ್ ಪ್ರತಿಯೊಂದು ಅಂಶವನ್ನು ಪರಿಗಣಿಸಿ ಯು/ಎ ಪ್ರಮಾಣ ಪತ್ರ ನೀಡಿದೆ.

    ಯಾವ ಸಿನಿಮಾಗಳೊಂದಿಗೆ ಕ್ಲ್ಯಾಶ್ ಆಗಬಾರದೆಂದು ಬನ್ಸಾಲಿ ಡಿಸೆಂಬರ್ 01 ಚಿತ್ರದ ರಿಲೀಸ್ ದಿನಾಂಕವನ್ನು ಅಂತಿಮಗೊಳಿಸಿದ್ದರು. ಕಾರಣಾಂತರಗಳಿಂದ ಸಿನಿಮಾ ಅಕ್ಷಯ್ ಕುಮಾರ್ ನಟನೆಯ ವಿಭಿನ್ನ ಕಥಾ ಹಂದರವುಳ್ಳ ‘ಪ್ಯಾಡ್‍ಮ್ಯಾನ್’ ಜೊತೆಗೆ ರಿಲೀಸ್ ಆಗಬೇಕಿದೆ. ಈ ಹಿಂದೆ ಬನ್ಸಾಲಿ ನಿರ್ದೇಶನದ ‘ಬಾಜೀರಾವ್ ಮಸ್ತಾನಿ’ ಸಿನಿಮಾ ಸಹ ಶಾರೂಖ್ ಖಾನ್ ನಟಿಸಿದ್ದ ‘ದಿಲ್‍ವಾಲೆ’ ಚಿತ್ರಕ್ಕೆ ಭಾರೀ ಪೈಪೋಟಿಯನ್ನು ನೀಡಿತ್ತು. ಅಂದು ಪ್ರೇಕ್ಷಕರು ಐತಿಹಾಸಿಕ ಕಥೆಯನ್ನು ಹೊಂದಿದ್ದ ‘ಬಾಜೀರಾವ್ ಮಸ್ತಾನಿ’ಯನ್ನು ಮೆಚ್ಚಿಕೊಂಡಿದ್ದರು. ಇಂದು ಸಹ ಬನ್ಸಾಲಿ ಅದೇ ಭರವಸೆಯಲ್ಲಿ ಚಿತ್ರದ ಬಿಡುಗಡೆಯ ದಿನಾಂಕವನ್ನು ನಿಗದಿಪಡಿಸಿದೆ. ಇತ್ತ ಅಕ್ಷಯ್ ಕುಮಾರ್ ಅಭಿನಯದ ‘ಪ್ಯಾಡ್‍ಮ್ಯಾನ್’ ತನ್ನ ಟ್ರೇಲರ್ ಮತ್ತು ಹಾಡುಗಳಿಂದ ಹವಾ ಕ್ರಿಯೇಟ್ ಮಾಡಿದೆ. ಪ್ರತಿಬಾರಿಯೂ ಹೊಸ ಪ್ರಯತ್ನದಲ್ಲಿ ತೊಡಗಿಸಿಕೊಳ್ಳುವ ಅಕ್ಷಯ್ ಪ್ರೇಕ್ಷಕ ಕೈ ಹಿಡಿಯುತ್ತಾನಾ ಎಂಬುದನ್ನು ಕಾದು ನೋಡಬೇಕಿದೆ.

  • ‘ಪದ್ಮಾವತಿ’ಯ 26 ಸೀನ್‍ಗಳಿಗೆ ಕಟ್- ಬದಲಾಯ್ತು ಸಿನಿಮಾ ಟೈಟಲ್

    ‘ಪದ್ಮಾವತಿ’ಯ 26 ಸೀನ್‍ಗಳಿಗೆ ಕಟ್- ಬದಲಾಯ್ತು ಸಿನಿಮಾ ಟೈಟಲ್

    ಮುಂಬೈ: ಸಿನಿಮಾ ಸೆಟ್ಟೇರುತ್ತಲೇ ಸಾಕಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತಿ’ ಹಲವು ಮಾರ್ಪಾಡುಗಳನ್ನ ಮಾಡುವಂತೆ ಸೆನ್ಸಾರ್ ಬೋರ್ಡ್ ಸೂಚಿಸಿದೆ.

    ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್(ಸಿಬಿಎಫ್‍ಸಿ) ನಿಂದ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಗಲಿದೆ. ಸಿನಿಮಾದಲ್ಲಿನ ಬರೋಬ್ಬರಿ 26 ದೃಶ್ಯಗಳಿನ್ನ ತೆಗೆಯುವಂತೆ ಹೇಳಿದ್ದು, ಚಿತ್ರದ ಹೆಸರನ್ನು ‘ಪದ್ಮಾವತ್’ ಎಂದು ಬದಲಿಸಲು ಸೂಚಿಸಲಾಗಿದೆ.

    ಸೆನ್ಸಾರ್ ಮಂಡಳಿಯು ಚಿತ್ರ ನಿರ್ಮಾಣಗಾರರು ಮತ್ತು ಸಮಾಜ ಎರಡನ್ನೂ ಗಮನದಲ್ಲಿರಿಸಿಕೊಂಡು ಚಿತ್ರದ ಬಗ್ಗೆ ಈ ನಿರ್ಧಾರ ತಿಳಿಸಿದೆ. ಚಿತ್ರದ ಬಗೆಗಿನ ಗೊಂದಲ, ಸಂಕೀರ್ಣತೆ ಮತ್ತು ಕಳವಳವನ್ನು ಪರಿಗಣಿಸಿ ಅಂತಿಮ ನಿರ್ಣಯ ಕೈಗೊಳ್ಳಲು ವಿಶೇಷ ತಂಡದ ಅಗತ್ಯವಿದೆ ಎಂದು ಸೆನ್ಸಾರ್ ಬೋರ್ಡ್ ಅಭಿಪ್ರಾಯಿಸಿತ್ತು.

    ಹೀಗಾಗಿ ಸೆನ್ಸಾರ್ ಬೋರ್ಡ್‍ನಿಂದ ರಚಿಸಲಾದ ವಿಶೇಷ ತಂಡದಿಂದ ಚಿತ್ರವನ್ನ ವಿಮರ್ಶಿಸಲಾಗಿದೆ. ಸಿನಿಮಾ ಐತಿಹಾಸಿಕ ಕಥೆಯನ್ನು ಆಧರಿಸಿರುವುದರಿಂದ ತಂಡದಲ್ಲಿ ಇತಿಹಾಸಕಾರರು ಕೂಡ ಇದ್ದರು.

    ಉದಯಪುರ್ ಮೂಲದ ಅರವಿಂದ್ ಸಿಂಗ್, ಜೈಪುರ ವಿಶ್ವವಿದ್ಯಾಲಯದ ಪ್ರೊಫೆಸರ್ ಗಳಾದ ಕೆಕೆ ಸಿಂಗ್ ಮತ್ತು ಡಾ.ಚಂದ್ರಮಣಿ ಸಿಂಗ್ ವಿಶೇಷ ತಂಡದಲ್ಲಿ ಇದ್ದರು. ಸದಸ್ಯರು ಐತಿಹಾಸಿಕ ಘಟನೆಗಳು, ದೇಶದ ಸಾಮಾಜಿಕ-ಸಾಂಸ್ಕೃತಿಕ ಅಂಶಗಳ ಬಗ್ಗೆ ಜ್ಞಾನ ಹೊಂದಿದ ವ್ಯಕ್ತಿಗಳಾಗಿದ್ದು, ಕಥೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ರು ಎಂದು ಸೆನ್ಸಾರ್ ಬೋರ್ಡ್ ತಿಳಿಸಿದೆ.

    ಪದ್ಮಾವತಿ 190 ಕೋಟಿ ರೂ. ಬಜೆಟ್‍ನ ಸಿನಿಮಾವಾಗಿದ್ದು, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಮೂಡಿ ಬಂದಿದೆ. ಆದ್ರೆ ಸಿನಿಮಾದಲ್ಲಿ ಇತಿಹಾಸವನ್ನ ತಿರುಚಲಾಗಿದೆ ಎಂದು ಆರೋಪಿಸಿ ಸಿನಿಮಾ ಬಿಡುಗಡೆಗೆ ರಾಜಸ್ಥಾನದ ಕರ್ಣಿ ಸೇನಾ ಸಾಕಷ್ಟು ವಿರೋಧವನ್ನು ವ್ಯಕ್ತಪಡಿಸಿತ್ತು. ಚಿತ್ರದ ನಿರ್ದೇಶಕರು ಇತಿಹಾಸವನ್ನು ತಿರುಚಿ ರಜಪೂತ ಸಮುದಾಯಕ್ಕೆ ಅಗೌರವ ತೋರಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಕರ್ಣಿ ಸೇನಾಕ್ಕೆ ಹಲವು ರಾಜಕೀಯ ನಾಯಕರು ಕೂಡ ಬೆಂಬಲ ನೀಡಿದ್ದರು.

    ಚಿತ್ರದಲ್ಲಿ ಮುಸ್ಲಿಂ ದೊರೆ ಅಲ್ಲಾವುದ್ದೀನ್ ಖಿಲ್ಜಿ ಮತ್ತು ರಾಣಿ ಪದ್ಮಿನಿ ನಡುವೆ ರೊಮ್ಯಾಂಟಿಕ್ ಸೀನ್ ಗಳಿವೆ ಅಂತಾ ಕರ್ಣಿ ಸೇನಾ ಆರೋಪಿಸಿತ್ತು. ಎಲ್ಲವು ಅಂದುಕೊಂಡಂತೆ ಆಗಿದ್ದರೆ ಚಿತ್ರ ಡಿಸೆಂಬರ್ 01ರಂದು ತೆರೆ ಕಾಣಬೇಕಿತ್ತು. ಆದ್ರೆ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಬಿಡುಗಡೆಯನ್ನ ಮುಂದೂಡಲಾಗಿದೆ.

    ಚಿತ್ರದಲ್ಲಿ ರಾಣಿ ಪದ್ಮಿನಿಯಾಗಿ ಗುಳಿ ಕೆನ್ನೆ ಬೆಡಗಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ. ರಾಣಾ ರಾವಲ್ ರತನ್‍ಸಿಂಗ್ ಪಾತ್ರದಲ್ಲಿ ಶಾಹಿದ್ ಕಪೂರ್ ಮತ್ತು ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ರಣ್‍ವೀರ್ ಸಿಂಗ್ ಬಣ್ಣ ಹಚ್ಚಿದ್ದಾರೆ. ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಇದೂವರೆಗೂ ಅಂತಿಮಗೊಳಿಸಿಲ್ಲ.