Tag: ಪದ್ಮಾವತಿ

  • ಸ್ಮೈಲ್ ಗುರು ರಕ್ಷಿತ್ ಚಿತ್ರಕ್ಕೆ ಅರಸು ಖ್ಯಾತಿಯ ಮಹೇಶ್ ಬಾಬು ಡೈರೆಕ್ಷರ್

    ಸ್ಮೈಲ್ ಗುರು ರಕ್ಷಿತ್ ಚಿತ್ರಕ್ಕೆ ಅರಸು ಖ್ಯಾತಿಯ ಮಹೇಶ್ ಬಾಬು ಡೈರೆಕ್ಷರ್

    ನ್ನಡ ಕಿರುತೆರೆ ಲೋಕದಲ್ಲಿ ಜನಪ್ರಿಯ ಧಾರಾವಾಹಿ ಕನ್ನಡತಿ ಮೂಲಕ ಕಿರುತೆರೆ ಪ್ರೇಕ್ಷಕರ ಮನೆ ಮನ ಗೆದ್ದವರು ಆದಿ ಊರೂಫ್ ಸ್ಮೈಲ್ ಗುರು ರಕ್ಷಿತ್ (Smile Guru Rakshit). ತಕಧಿಮಿತ, ಡ್ಯಾನ್ಸ್ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಮಿಂಚಿರುವ ರಕ್ಷಿತ್, ಪದ್ಮಾವತಿ (Padmavati) ಸೀರಿಯಲ್ ಮೂಲಕ ಕಿರುತೆರೆ ಪಯಣ ಆರಂಭಿಸಿ ಈಗ ಬೆಳ್ಳಿತೆರೆಗೂ ಎಂಟ್ರಿ ಕೊಡುತ್ತಿದ್ದಾರೆ.

    ಸ್ಮೈಲ್ ಗುರು ರಕ್ಷಿತ್ ಸ್ಯಾಂಡಲ್ ವುಡ್ ಗೆ ನಾಯಕನಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಇವರ ಚೊಚ್ಚಲ ಕನಸ್ಸಿನ ಅರಸು, ಆಕಾಶನಂತಹ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಕೊಟ್ಟಿರುವ ಮಹೇಶ್ ಬಾಬು ಜೊತೆಯಾಗಿ ನಿಂತಿದ್ದಾರೆ. ಅರ್ಥಾತ್ ರಕ್ಷಿತ್ ನಾಯಕನಾಗಿ ನಟಿಸುತ್ತಿರುವ ಮೊದಲ ಸಿನಿಮಾಗೆ ಮಹೇಶ್ ಬಾಬು (Mahesh Babu) ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದನ್ನೂ ಓದಿ:ಸಂಯುಕ್ತಾ ಬಟ್ಟೆಗೆ ನೆಗೆಟಿವ್ ಕಾಮೆಂಟ್ಸ್, ತಿರುಗೇಟು ನೀಡಿದ ಕಿಶನ್ ಬಿಳಗಲಿ

    ಮಹೇಶ್ ಬಾಬು ಹಾಗೂ ರಕ್ಷಿತ್ ಕಾಂಬಿನೇಷನ್ ನಲ್ಲಿ ಮೂಡಿಬರ್ತಿರುವ ಸಿನಿಮಾ ಕಲ್ಟ್ ಪ್ರೇಮಕಥಾಹಂದರ ಹೊಂದಿದೆ. ಸ್ಕ್ರೀಪ್ಟ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಜನವರಿ ತಿಂಗಳಿಂದ ಶೂಟಿಂಗ್ ಅಖಾಡಕ್ಕೆ ಧುಮುಕಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಲೀಡಿಂಗ್ ಸ್ಟ್ಯಾಂಡಿಂಗ್ ಮೇಕರ್ಸ್ ಎಂಎಂಎಂ ಗ್ರೂಪ್ಸ್ ಈ ಸಿನಿಮಾಗೆ ಬಂಡವಾಳ ಹೂಡುತ್ತಿದೆ.

    ಕಿರುತೆರೆ ಮೂಲಕ ಪ್ರೇಕ್ಷಕರನ್ನು ರಂಜಿಸಿರುವ ಕನ್ನಡತಿ ಆದಿ ಕನ್ನಡ ಚಿತ್ರರಂಗದಲ್ಲಿ ನಾಯಕನಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ನಟನೆ ಜೊತೆಗೆ ಅದ್ಭುತ ಡ್ಯಾನ್ಸರ್ ಆಗಿರುವ ಸ್ಮೈಲ್ ಗುರು ರಕ್ಷಿತ್ ತಮ್ಮದೇ ಸ್ಮೈಲ್ ಗುರು ಡ್ಯಾನ್ಸ್ ಗ್ಯಾರೇಜ್ ಮೂಲಕ ಡ್ಯಾನ್ಸಿಂಗ್ ಟ್ರೈನಿಂಗ್ ನೀಡುತ್ತಿದ್ದಾರೆ. ಒಂದಷ್ಟು ತಯಾರಿಗಳೊಂದಿಗೆ ರಕ್ಷಿತ್ ಸ್ಯಾಂಡಲ್ ವುಡ್ ಗೆ ಅಡಿ ಇಡುತ್ತಿದ್ದು, ಪ್ರೇಮಕಥೆಗಳ ಸೂತ್ರಧಾರ ಮಹೇಶ್ ಬಾಬು ಈ ಬಾರಿ ಯಾವ ರೀತಿ ಕಥೆಯೊಂದಿಗೆ ಪ್ರೇಕ್ಷಕರ ಎದುರು ಹಾಜರಾಗಲಿದ್ದಾರೆ ನೋಡಬೇಕು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಭಿಮಾನಿಗಳಿಗೆ ನಾಳೆ  ಸಿಹಿ ಸುದ್ದಿ ಕೊಡ್ತಾರಂತೆ ‘ಸ್ಯಾಂಡಲ್ ವುಡ್ ಕ್ವೀನ್’ ರಮ್ಯಾ

    ಅಭಿಮಾನಿಗಳಿಗೆ ನಾಳೆ ಸಿಹಿ ಸುದ್ದಿ ಕೊಡ್ತಾರಂತೆ ‘ಸ್ಯಾಂಡಲ್ ವುಡ್ ಕ್ವೀನ್’ ರಮ್ಯಾ

    ದೇಶಕ್ಕೆಲ್ಲ ಒಂದು ಕಡೆ ಗಣೇಶ್ ಹಬ್ಬವಾದರೆ, ಮತ್ತೊಂದು ಕಡೆ ರಮ್ಯಾ ಅಭಿಮಾನಿಗಳಿಗೆ ಡಬಲ್ ಧಮಾಕಾ. ಯಾಕೆಂದರೆ, ಗಣೇಶ್ ಹಬ್ಬದ ದಿನದಂದು ಸ್ಯಾಂಡಲ್ ವುಡ್ ಕ್ವೀನ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಡಲಿದ್ದಾರಂತೆ. ಈ ಕುರಿತು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿರುವ ಅವರು, ‘ನಾಳೆ ಹನ್ನೊಂದು ಗಂಟೆಗೆ ಸಿಹಿ ಸುದ್ದಿ ಕೊಡುವೆ. ಈ ಸುದ್ದಿಯನ್ನು ಕೊಡಲು ನಾನು ಎಕ್ಸೈಟ್ ಆಗಿದ್ದೇನೆ’ ಎಂದು ಅವರು ಬರೆದುಕೊಂಡಿದ್ದಾರೆ.

    RAMYA

    ರಮ್ಯಾ ಸಿನಿಮಾ ರಂಗಕ್ಕೆ ಕಮ್ ಬ್ಯಾಕ್ ಆಗಲು ತುದಿಗಾಲಲ್ಲಿ ನಿಂತಿದ್ದಾರೆ. ಕಳೆದೊಂದು ವರ್ಷದಿಂದ ಅವರು ಸಿನಿಮಾ ರಂಗಕ್ಕೆ ವಾಪಸ್ಸಾಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಈಗದು ನಿಜವಾಗುವ ಕಾಲ ಬಂದಿದೆ. ಬಹುಶಃ ಅದೇ ಸುದ್ದಿಯನ್ನೇ ನಾಳೆ ಅಭಿಮಾನಿಗಳಿಗೆ ಕೊಡಲಿದ್ದಾರೆ ಎನ್ನುವುದು ಹಲವರ ಊಹೆ. ಅದು ನಿಜವೂ ಆಗಿರಬಹುದು. ಯಾಕೆಂದರೆ,  ಅನೇಕ ದಿನಗಳಿಂದ ಅವರು ಸಿನಿಮಾ ಸಂಬಂಧಿ ನಾನಾ ರೀತಿಯ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಇದನ್ನೂ ಓದಿ: ಸೋನುಗೆ ಚೈತ್ರಾ ಚಪ್ಪಲಿ ಗಿಫ್ಟ್ ಕೊಟ್ಟಿದ್ಯಾಕೆ..?

    ಮೂಲಗಳ ಪ್ರಕಾರ ರಾಜ್ ಬಿ ಶೆಟ್ಟಿ ನಿರ್ದೇಶಿಸಿ ನಟಿಸಲಿರುವ ಸಿನಿಮಾವನ್ನು ರಮ್ಯಾ ಅವರು ನಿರ್ಮಾಣ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ, ಇದೇ ಸಿನಿಮಾದಲ್ಲಿ ಅವರು ಪಾತ್ರವನ್ನೂ ಮಾಡಲಿದ್ದಾರಂತೆ. ಬಹುಶಃ ನಾಳೆ ಅದೇ ಸಿಹಿ ಸುದ್ದಿಯನ್ನು ಅವರು ಅಭಿಮಾನಿಗಳಿಗೆ ಕೊಡಬಹುದು ಎನ್ನಲಾಗುತ್ತಿದೆ. ಅದೇನು ಅಂತ ತಿಳಿದುಕೊಳ್ಳಲು ನಾಳೆವರೆಗೂ ಕಾಯಬೇಕು.

    Live Tv
    [brid partner=56869869 player=32851 video=960834 autoplay=true]

  • ಮೋಹಕತಾರೆ ರಮ್ಯಾಗೆ ಈಗ ಮದುವೆಯದ್ದೆ ಚಿಂತೆ: ಪದೇ ಪದೇ ಹುಡುಗನ ನೆನಪಿಸಿಕೊಳ್ತಿದ್ದಾರೆ ಪದ್ಮಾವತಿ

    ಮೋಹಕತಾರೆ ರಮ್ಯಾಗೆ ಈಗ ಮದುವೆಯದ್ದೆ ಚಿಂತೆ: ಪದೇ ಪದೇ ಹುಡುಗನ ನೆನಪಿಸಿಕೊಳ್ತಿದ್ದಾರೆ ಪದ್ಮಾವತಿ

    ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಪದೇ ಪದೇ ಮದುವೆ ಬಗ್ಗೆಯೇ ಆಲೋಚನೆ ಮಾಡುತ್ತಿದ್ದಾರೆ. ಕೆಲವು ದಿನಗಳಿಂದ ಅವರು ಮದುವೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಪೋಸ್ಟ್ ಮಾಡುತ್ತಿದ್ದಾರೆ. ಕಳೆದ ತಿಂಗಳಷ್ಟೇ ತನ್ನ ಹುಡುಗ ಹೇಗಿರಬೇಕು? ಅವನು ಗುಣಗಳು ಎಂತಿರಬೇಕು ಎನ್ನುವ ಅರ್ಥದಲ್ಲಿ ವಿಡಿಯೋವೊಂದನ್ನು ಹಾಕಿದ್ದರು. ಈ ಬಾರಿ ತಮ್ಮ ಮದುವೆ ಯಾಕಾಗಿಲ್ಲ ಎನ್ನುವುದರ ಬಗ್ಗೆ ಹಾಡಿನ ರೂಪದಲ್ಲಿ ಹೇಳಿದ್ದಾರೆ.

    ರಮ್ಯಾ ಜೊತೆ ಸಿನಿಮಾ ರಂಗಕ್ಕೆ ಬಂದ ಬಹುತೇಕ ನಟಿಯರು ಮದುವೆಯಾಗಿ, ಮಕ್ಕಳೊಂದಿಗೆ ಸುಖಿ ಜೀವನ ನಡೆಸುತ್ತಿದ್ದಾರೆ. ಆದರೆ, ರಮ್ಯಾ ಮಾತ್ರ ಈವರೆಗೂ ಮದುವೆ ಆಗಿಲ್ಲ. ಹಾಗಾಗಿ ಯಾವಾಗ ಮದುವೆ ಆಗುತ್ತೀರಿ ಎಂದು ಅಭಿಮಾನಿಗಳು ಹಲವಾರು ಬಾರಿ ಕೇಳಿದ್ದುಂಟು. ಅಂತಹ ಪ್ರಶ್ನೆಗಳು ಎದುರಾದಾಗೊಮ್ಮೆ ಹಾರಿಕೆಯ ಉತ್ತರವನ್ನೇ ಕೊಡುತ್ತಾ ಬಂದಿದ್ದಾರೆ ರಮ್ಯಾ. ಈ ಬಾರಿ ವಿಶೇಷ ರೀತಿಯಲ್ಲಿ ಉತ್ತರವನ್ನು ನೀಡಿದ್ದಾರೆ. ಇದನ್ನೂ ಓದಿ:ತನ್ನನ್ನು ತಾನೇ ಮದುವೆಯಾದ ಕಿರುತೆರೆ ನಟಿ ಕಾನಿಷ್ಕಾ ಸೋನಿ

    RAMYA

    ತಾವಿನ್ನೂ ಮದುವೆ ಯಾಕಾಗಿಲ್ಲ ಎಂದು ಹೇಳುವುದಕ್ಕಾಗಿ ಹಾಡೊಂದನ್ನು ಪೋಸ್ಟ್ ಮಾಡಿದ್ದು, ಆ ಹಾಡಿನ ಸಾಲುಗಳಲ್ಲಿ ‘ನನ್ನ ಸೋಲ್ ಮೇಟ್ ಸತ್ತಿರಬಹುದು, ಬಹುಶಃ ನನಗೆ ಅಂತ ಯಾವುದೇ ಆತ್ಮ ಇಲ್ಲ ಅನಿಸುತ್ತಿದೆ’ ಎನ್ನುವ ಅರ್ಥ ಬರುವಂತಹ ವಿಷಯವಿದೆ. ಅದನ್ನೇ ಸೋಷಿಯಲ್ ಮೀಡಿಯಾದಲ್ಲಿ ರಮ್ಯಾ ಹಂಚಿಕೊಂಡು ಕೆಲವು ಸಾಲುಗಳನ್ನೂ ಅವರೂ ಹಾಡಿದ್ದಾರೆ.

    ಈ ಹಿಂದೆ ತಾವು ಮದುವೆ ಮಾಡುವ ಹುಡುಗನ ಬಗ್ಗೆಯೂ ಗುಣಗಾನ ಮಾಡಿದ್ದ ರಮ್ಯಾ, ಪರಿಶುದ್ಧ ಆತ್ಮವುಳ್ಳ ಹುಡುಗ ಬೇಕು ಎಂದು ಹೇಳಿದ್ದರು. ಅಲ್ಲದೇ, ಭಾವನಾತ್ಮಕ ಪ್ರಬುದ್ಧತೆಯನ್ನು ಆತ ಹೊಂದಿರಬೇಕು ಎಂದು ಬಯಸಿದ್ದರು. ಸದ್ಯ ರಮ್ಯಾ ಸಿನಿಮಾ ರಂಗಕ್ಕೆ ವಾಪಸ್ಸಾಗುವ ಬಗ್ಗೆಯೂ ಸುಳಿವು ನೀಡಿದ್ದು, ಮದುವೆ ಬಗ್ಗೆ ಮಾತ್ರ ಅವರು ಯಾವುದೇ ಸುಳಿವೂ ನೀಡಿಲ್ಲ.

    Live Tv
    [brid partner=56869869 player=32851 video=960834 autoplay=true]

  • ನಾಳೆಗೆ ಎಂಟು ಸಿನಿಮಾ ರಿಲೀಸ್ : ಸ್ಯಾಂಡಲ್ ವುಡ್ ನಲ್ಲಿ ಹೆಚ್ಚಿದ ಸಂಭ್ರಮ

    ನಾಳೆಗೆ ಎಂಟು ಸಿನಿಮಾ ರಿಲೀಸ್ : ಸ್ಯಾಂಡಲ್ ವುಡ್ ನಲ್ಲಿ ಹೆಚ್ಚಿದ ಸಂಭ್ರಮ

    ಕೊರೋನಾ ಹಾವಳಿ ಕಡಿಮೆ ಆಗುತ್ತಿರುವ ಮತ್ತು ದೊಡ್ಡ ದೊಡ್ಡ ಸಿನಿಮಾಗಳು ಈಗಾಗಲೇ ರಿಲೀಸ್ ಆಗಿರುವುದರಿಂದ ತಮ್ಮ ಸಿನಿಮಾಗಳನ್ನು ತೆರೆಗೆ ತರಲು ಸಾಲುಗಟ್ಟಿ ನಿಂತಿದ್ದಾರೆ ನಿರ್ಮಾಪಕರು. ಪರಿಣಾಮ ವಾರಕ್ಕೆ ಕನಿಷ್ಟ ಐದಾರು ಚಿತ್ರಗಳು ರಿಲೀಸ್ ಆಗುತ್ತಿವೆ. ಈ ವಾರ ಆರು ಕನ್ನಡ ಸಿನಿಮಾಗಳು ಮತ್ತು ಎರಡು ಕನ್ನಡಕ್ಕೆ ಡಬ್ ಆದ ಚಿತ್ರಗಳು ತೆರೆಗೆ ಬರುತ್ತಿವೆ. ಈ ಸಿನಿಮಾಗಳಲ್ಲಿ ಕೆಲವು ಭರವಸೆ ಮೂಡಿಸಿದ ಚಿತ್ರಗಳು ಇವೆ ಎನ್ನುವುದು ವಿಶೇಷ.

    ನೀನಾಸಂ ಸತೀಶ್ ನಟನೆಯ ಪೆಟ್ರೋಮ್ಯಾಕ್ಸ್, ಸ್ಮೈಲ್ ಶ್ರೀನು ನಿರ್ದೇಶನದಲ್ಲಿ ಮೂಡಿ ಬಂದ ‘ಓ ಮೈ ಲವ್’, ವಿಕ್ರಮ್ ಆರ್ಯ ನಟನೆಯ ಪದ್ಮಾವತಿ, ಅನೀಶ್ ಮುಖ್ಯಭೂಮಿಯ ಬೆಂಕಿ, ಹೊಸಬರ ಚೇಸ್, ಕರ್ಮಣ್ಯೆವಾಧಿಕಾರಸ್ತೆ ಹಾಗೂ ತೆಲುಗು ಮತ್ತು ತಮಿಳಿನಿಂದ ಕನ್ನಡಕ್ಕೆ ಡಬ್ ಆಗಿರುವ ಗಾರ್ಗಿ ಹಾಗೂ ಹುಡುಗಿ ಸಿನಿಮಾಗಳು ಕೂಡ ಶುಕ್ರವಾರ ಬಿಡುಗಡೆ ಆಗುತ್ತಿದೆ. ತಮ್ಮದೇ ಆದ ಕಾರಣಗಳಿಂದಾಗಿ ಇವುಗಳಲ್ಲಿ ಕೆಲವು ಚಿತ್ರಗಳು ನಿರೀಕ್ಷೆ ಮೂಡಿಸಿವೆ. ಇದನ್ನೂ ಓದಿ: ರಾಕ್ಷಸರ ರೂಪದಲ್ಲಿ ಬರುತ್ತಿದ್ದಾರೆ ಡೈಲಾಂಗ್ ಕಿಂಗ್ ಸಾಯಿಕುಮಾರ್

    ಸ್ಮೈಲ್ ಶ್ರೀನು ನಿರ್ದೇಶನದಲ್ಲಿ ಮೂಡಿ ಬಂದಿರುವ ಓ ಮೈ ಲವ್  ಸಿನಿಮಾದ ಮೂಲಕ ಹಿರಿಯ ನಟ ಶಶಿಕುಮಾರ್ ಪುತ್ರ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡುತ್ತಿದ್ದಾರೆ. ಈಗಾಗಲೇ ಸ್ಮೈಲ್ ಶ್ರೀನು ಸ್ಯಾಂಡಲ್ ವುಡ್ ನಲ್ಲಿ ಭರವಸೆ ಮೂಡಿಸಿದ್ದಾರೆ. ಮಿಥುನ್ ಚಂದ್ರಶೇಖರ್ ನಿರ್ದೇಶನದಲ್ಲಿ ಮೂಡಿ ಬಂದ ಪದ್ಮಾವತಿ ಸಿನಿಮಾ ಕೂಡ ತನ್ನದೇ ಆದ ಕಾರಣಗಳಿಂದಾಗಿ ಈಗಾಗಲೇ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾದಲ್ಲಿ ಉತ್ತರ ಕರ್ನಾಟಕ ಪ್ರತಿಭೆ ವಿಕ್ರಮ್ ಆರ್ಯ ನಟಿಸಿದ್ದು, ಇವರ ಚೊಚ್ಚಲು ಸಿನಿಮಾದ ಮೂಲಕ ಈ ಹಿಂದೆ ಭರವಸೆ ಮೂಡಿಸಿದ್ದರು.

    ಪೆಟ್ರೊಮ್ಯಾಕ್ಸ್ ಸಿನಿಮಾದಲ್ಲಿ ಸತೀಶ್ ಜೊತೆ ಹರಿಪ್ರಿಯಾ, ಕಾರುಣ್ಯ ರಾಮ್ ಸೇರಿದಂತೆ ಹಲವು ಅನುಭವಿ ಕಲಾವಿದರೆ ಇದ್ದಾರೆ. ಅಲ್ಲದೇ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಲಡಕಿ ಸಿನಿಮಾ ಕನ್ನಡದಲ್ಲಿ ಹುಡುಗಿಯಾಗಿದೆ. ಸಾಯಿ ಪಲ್ಲವಿ ಅವರ ನಿರೀಕ್ಷೆ ಸಿನಿಮಾ ಗಾರ್ಗಿ ಕೂಡ ರಿಲೀಸ್ ಆಗುತ್ತಿದೆ. ಎಂಟು ಸಿನಿಮಾಗಳು ಈ ವಾರ ರಿಲೀಸ್ ಆಗುತ್ತಿರುವುದರಿಂದ ಒಂದು ರೀತಿಯಲ್ಲಿ ಸ್ಯಾಂಡಲ್ ವುಡ್ ನಲ್ಲಿ ಸಂಭ್ರಮ ಮನೆ ಮಾಡಿದೆ. ಪ್ರೇಕ್ಷಕ ಯಾವ ಸಿನಿಮಾ ನೋಡುತ್ತಾನೆ ಎನ್ನುವುದೇ ಕುತೂಹಲಕ್ಕೆ ಕಾರಣವೂ ಆಗಿದೆ.

    Live Tv
    [brid partner=56869869 player=32851 video=960834 autoplay=true]

  • ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ – ಸಿಹಿ ಹಂಚಿ ಸಂಭ್ರಮಿಸಿದ ಮಾಜಿ ಮೇಯರ್ ಪದ್ಮಾವತಿ

    ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ – ಸಿಹಿ ಹಂಚಿ ಸಂಭ್ರಮಿಸಿದ ಮಾಜಿ ಮೇಯರ್ ಪದ್ಮಾವತಿ

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ನೇಮಕವಾಗುತ್ತಿದ್ದಂತೆ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಡಿಕೆ ಶಿವಕುಮಾರ್ ಅವರ ಸದಾಶಿವನಗರದ ನಿವಾಸ ಮುಂದೆ ಅಭಿಮಾನಿಗಳು ಸಿಹಿ ಹಂಚಿ ಪಟಾಕಿ ಹೊಡೆದು ಸಂಭ್ರಮಾಚರಣೆ ಮಾಡಿದ್ದಾರೆ. ಆದರೆ ಈಗ ಡಿಕೆ ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದ್ದಕ್ಕೆ ಮಾಜಿ ಮೇಯರ್ ಪದ್ಮಾವತಿಗೆ ಸಂತಸ ತಂದಿದೆ.

    ಡಿಕೆ ಶಿವಕುಮಾರ್ ಅವರಿಗೆ ಅಧ್ಯಕ್ಷ ಸ್ಥಾನ ಘೋಷಣೆ ಆಗುತ್ತಿದ್ದಂತೆ ಪದ್ಮಾವತಿ ಅವರ ನಿವಾಸಕ್ಕೆ ಆಗಮಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಡಿಕೆ ಶಿವಕುಮಾರ್ ನಿವಾಸದ ಮನೆ ಮುಂದೆ, ಅಕ್ಕಪಕ್ಕ ಇದ್ದ ನಿವಾಸದವರಿಗೂ ಸಿಹಿ ಹಂಚಿ ಡಿಕೆ ಪರ ಜೈಕಾರ ಕೂಗಿ ಸಂಭ್ರಮಾಚರಣೆ ಮಾಡಿದ್ದಾರೆ.

    ಇನ್ನೂ ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಮೇಯರ್ ಪದ್ಮಾವತಿ, ಡಿಕೆ ಶಿವಕುಮಾರ್ ಸಾಹೇಬ್ರಿಗೆ ಕೆಪಿಸಿಸಿ ಪಟ್ಟ ಸಿಗುತ್ತೆ ಎಂದು ನಿರೀಕ್ಷೆ ಇತ್ತು. ಇಂದು ಅದು ದಕ್ಕಿದೆ. ಒಳ್ಳೆಯವರಿಗೆ ಯಾವತ್ತು ಒಳ್ಳೆದಾಗುತ್ತೆ. ಏನೇ ಭಿನ್ನಾಭಿಪ್ರಾಯಗಳು ಇದ್ದರು ಅದನ್ನು ಸರಿಪಡಿಸಿಕೊಂಡು ಹೋಗುತ್ತಾರೆ. ಪಕ್ಷ ಸಂಘಟನೆ ಮಾಡುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

  • ‘ಪದ್ಮಾವತಿ’ ಹಾಡುಗಳ ಅನಾವರಣ

    ‘ಪದ್ಮಾವತಿ’ ಹಾಡುಗಳ ಅನಾವರಣ

    ಈ ಹಿಂದೆ ತಲೆ ಬಾಚ್ಕೊಳ್ಳಿ ಪೌಡ್ರು ಹಾಕ್ಕೊಳ್ಳಿ ಎಂಬ ಕಾಮಿಡಿ ಚಿತ್ರವನ್ನು ಮಾಡಿದ್ದ ವಿಕ್ರಮ್ ಆರ್ಯ ಈಗ ಒಂದು ಮಹಿಳಾ ಪ್ರಧಾನ ಕಥೆ ಹೊಂದಿರುವ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಮಿಥುನ್ ಚಂದ್ರಶೇಖರ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದ ಹೆಸರು ‘ಪದ್ಮಾವತಿ’. ಇತ್ತೀಚೆಗೆ ಈ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ನಡೆಯಿತು. ಲಹರಿ ಆಡಿಯೋ ಈ ಚಿತ್ರದ ಹಾಡುಗಳನ್ನು ಹೊರತಂದಿದೆ.

    ಫಿಲ್ಮ್ ಚೇಂಬರ್ ಅಧ್ಯಕ್ಷ ಎಸ್.ಎ. ಚಿನ್ನೇಗೌಡ್ರು, ನಿರ್ದೇಶಕ ಸಾಯಿಪ್ರಕಾಶ್, ಭಾ.ಮಾ. ಹರೀಶ್, ಉಮೇಶ್ ಬಣಕಾರ್, ಲಹರಿ ವೇಲು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

    ಚಿತ್ರದ ನಿರ್ಮಾಪಕ ದಾಮೋದರ್ ರಾವ್ ಪಾರಗೆ ಮಾತನಾಡಿ, ನಾನು ಅನಿರೀಕ್ಷಿತವಾಗಿ ಈ ಚಿತ್ರರಂಗಕ್ಕೆ ಬಂದೆ, ಸ್ನೇಹಿತನಿಗೋಸ್ಕರ ಈ ಚಿತ್ರವನ್ನು ಮಾಡಿದ್ದೇನೆ. ತಾಯಿ ಮಗನ ಸೆಂಟಿಮೆಂಟ್ ಕಥೆ ಈ ಚಿತ್ರದಲ್ಲಿದೆ. ನಾನೂ ಸಹ ಈ ಚಿತ್ರದಲ್ಲಿ ಒಬ್ಬ ಸಾಹಿತಿಯ ಪಾತ್ರ ನಿರ್ವಹಿಸಿದ್ದೇನೆ ಎಂದು ಹೇಳಿದರು.

    ನಾಯಕ ನಟ ವಿಕ್ರಮ್ ಆರ್ಯ ಮಾತನಾಡಿ, ಎರಡೂವರೆ ವರ್ಷಗಳ ನಂತರ ಮತ್ತೆ ಚಿತ್ರರಂಗಕ್ಕೆ ಬರುತ್ತಿದ್ದೇನೆ. ಗೊತ್ತಿಲ್ಲದೆ ಬಂದು ಸಿನೆಮಾ ಮಾಡಿದ್ದೆ. ಈಗ ಚಿಕ್ಕ ಬಜೆಟ್‍ನಲ್ಲಿ ಸಿನೆಮಾ ಮಾಡಿದ್ದೇವೆ. ಕಡಿಮೆ ಬಂಡವಾಳದಲ್ಲಿ ಒಂದು ಸಿನೆಮಾ ಹೇಗೆ ಮಾಡಬಹುದು ಎಂದು ಟ್ರೈ ಮಾಡಿದ್ದೇವೆ. ಮಿಲಿಟರಿ ಕ್ಯಾಪ್ಟನ್ ಆಗಿ ನಾನು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸೆಕೆಂಡ್ ಹಾಫ್‍ನಲ್ಲಿ ತಾಯಿ-ಮಗನ ಸೆಂಟಿಮೆಂಟ್ ಕಥೆ ಬರುತ್ತದೆ ಎಂದು ಹೇಳಿದರು.

    ಚಿತ್ರದ ನಿರ್ದೇಶಕ ಮಿಥುನ್ ಚಂದ್ರಶೇಖರ್ ಮಾತನಾಡಿ, ನಾನು ಸಾಯಿಪ್ರಕಾಶ್ ಅವರ ಚಿತ್ರಗಳಿಗೆ ಕೆಲಸ ಮಾಡುತ್ತಾ ಚಿತ್ರರಂಗಕ್ಕೆ ಬಂದೆ. 13ಕ್ಕೂ ಹೆಚ್ಚು ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದು, ಫಸ್ಟ್ ಟೈಮ್ ಸ್ವತಂತ್ರ ನಿರ್ದೇಶಕನಾಗಿದ್ದೇನೆ. ಸಾಗರ, ಶಿವಮೊಗ್ಗ ಹಾಗೂ ಬೆಂಗಳೂರಿನಲ್ಲಿ 52 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದೇವೆ. ಲತಾ ಅವರು ಬರೆದ ಕಥೆ ಇದು. ಮೊದಲು ಈ ಪ್ರೀತಿಯ ಮರೆತು ಎಂಬ ಟೈಟಲ್ ಮಾಡಿದ್ದೆವು, ನಂತರ ಪದ್ಮಾವತಿ ಆಗಿದೆ. ಲವ್, ಮದರ್ ಸೆಂಟಿಮೆಂಟ್ ಜೊತೆಗೆ ಆಕ್ಷನ್ ಕೂಡ ಈ ಚಿತ್ರದಲ್ಲಿದೆ. 4 ಹಾಡುಗಳು ಹಾಗೂ 3 ಬಿಟ್ ಸಾಂಗ್ ಈ ಚಿತ್ರದಲ್ಲಿದೆ ಎಂದು ಹೇಳಿದರು.

    ನಾಯಕಿ ಸಾಕ್ಷಿ ಮೇಘನಾ ಮಾತನಾಡಿ, ಇದು ನನ್ನ 3ನೇ ಚಿತ್ರ, ನನ್ನ ವಯಸ್ಸಿಗೆ ಮೀರಿದಂತಹ ಪಾತ್ರವನ್ನು ಈ ಚಿತ್ರದಲ್ಲಿ ಮಾಡಿದ್ದೇನೆ. ನನ್ನ ಪಾತ್ರದಲ್ಲಿ 3 ಶೇಡ್ಸ್ ಇವೆ. ಮೊದಲು ಟೀನೇಜ್, ನಂತರ ಮಿಡಲ್ ಏಜ್ ಹಾಗೂ 40ರ ಆಸುಪಾಸಿನ ಮಹಿಳೆಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು.

    ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ ದಿನೇಶ್ ಕುಮಾರ್, ಚಿತ್ರದಲ್ಲಿ 5 ಹಾಡುಗಳಿಗೆ, ಡ್ಯೂಯೆಟ್, ಪ್ಯಾಥೋ ಸಾಂಗ್, ಮದರ್ ಸೆಂಟಿಮೆಂಟ್ ಹೀಗೆ ಎಲ್ಲಾ ತರದ ಹಾಡುಗಳನ್ನು ಮಾಡಿದ್ದೇವೆ. ಗಂಗಮ್ಮ ಕೂಡ ಈ ಚಿತ್ರದಲ್ಲಿ ಒಂದು ಹಾಡನ್ನು ಹಾಡಿದ್ದಾರೆ ಎಂದು ಹೇಳಿದರು.

  • ನಾಮಪತ್ರ ಸಲ್ಲಿಸಿ ಪ್ರಚಾರದ ಬ್ಯುಸಿಯಲ್ಲಿರುವಾಗಲೇ ಕಾಗೋಡು, ಪದ್ಮಾವತಿಗೆ ಬಿಗ್ ಶಾಕ್

    ನಾಮಪತ್ರ ಸಲ್ಲಿಸಿ ಪ್ರಚಾರದ ಬ್ಯುಸಿಯಲ್ಲಿರುವಾಗಲೇ ಕಾಗೋಡು, ಪದ್ಮಾವತಿಗೆ ಬಿಗ್ ಶಾಕ್

    ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಮಂಗಳವಾರವಷ್ಟೇ ಅಭ್ಯರ್ಥಿಗಳೆಲ್ಲಾ ನಾಮಪತ್ರ ಸಲ್ಲಿಸಿ ಪ್ರಚಾರದ ಬ್ಯುಸಿಯಲ್ಲಿದ್ದಾರೆ. ಹೀಗಿರುವಾಗ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬಿಗ್ ಶಾಕ್ ಆಗಿದೆ.

    ಇಂದು ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ವೇಳೆ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಕೆಲ ಅಭ್ಯರ್ಥಿಗಳ ನಾಮಪತ್ರ ರದ್ದಾಗುವ ಸಾಧ್ಯತೆ ಇದೆ. ಸಾಗರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಕಾಗೋಡು ತಿಮ್ಮಪ್ಪ ನಾಮಪತ್ರದಲ್ಲಿ ಪತ್ನಿ ಮತ್ತು ಅವಲಂಬಿತರ ಮಾಹಿತಿ, ಚಿನ್ನಾಭರಣ ವಿವರ, ಶೈಕ್ಷಣಿಕ ವಿವರವನ್ನೂ ಸಮರ್ಪಕವಾಗಿ ನಮೂದಿಸಿಲ್ಲ ಹೀಗಾಗಿ ನಾಮಪತ್ರ ರದ್ದಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

    ಬೆಂಗಳೂರಿನ ರಾಜಾಜಿನಗರದ ಅಭ್ಯರ್ಥಿ ಪದ್ಮಾವತಿಯವರು ಮತ್ತು ಅವರ ಪುತ್ರ ಬ್ಯಾಂಕ್ ಸಾಲ ಪಡೆದು ವಂಚನೆ ಪ್ರಕರಣ ಇರುವುದರಿಂದ ನಾಮಪತ್ರ ಪರಿಶೀಲನೆಗೆ ಚುನಾವಣಾ ಆಯೋಗ ತಡೆ ಹಿಡಿದಿದೆ. ಕೋಲಾರ ಜಿಲ್ಲೆ ಮುಳಬಾಗಿಲು ಶಾಸಕ ಹಾಗೂ ಮುಳಬಾಗಿಲು ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೊತ್ತೂರು ಜಿ.ಮಂಜುನಾಥ್ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ನಾಮಪತ್ರ ಅಸಿಂಧು ಮಾಡಲಾಗಿದೆ.

  • ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟ ದೀಪಿಕಾ ಪಡುಕೋಣೆ!

    ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟ ದೀಪಿಕಾ ಪಡುಕೋಣೆ!

    ನವದೆಹಲಿ: ಬಾಲಿವುಡ್‍ನ ಗುಳಿಕೆನ್ನೆ ಬೆಡಗಿ, ಪದ್ಮಾವತಿ ದೀಪಿಕಾ ಪಡುಕೋಣೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಣ್ಣೀರು ಹಾಕಿದ್ದಾರೆ.

    ಖ್ಯಾತ ಬ್ಯಾಡ್ಮಿಂಟನ್ ಆಟಗಾರರಾಗಿರುವ ದೀಪಿಕಾರ ತಂದೆ ಪ್ರಕಾಶ್ ಪಡುಕೋಣೆ `ಜೀವಮಾನ ಶ್ರೇಷ್ಠ’ ಪ್ರಶಸ್ತಿಯನ್ನು ಪಡೆದುಕೊಂಡರು. ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಶನ್ ನೀಡುವ ಲೈಫ್ ಟೈಮ್ ಅಚೀವ್‍ಮೆಂಟ್ ಅವಾರ್ಡ್ ಈ ಬಾರಿ ಪ್ರಕಾಶ್ ಪಡುಕೋಣೆ ಅವರಿಗೆ ಲಭಿಸಿದೆ. ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿದ್ದ ದೀಪಿಕಾ, ತನ್ನ ತಂದೆಯನ್ನು ಕಂಡು ಒಂದು ಕ್ಷಣ ಭಾವುಕರಾಗಿದ್ದಾರೆ.

    ದೀಪಿಕಾ ತಮ್ಮ ಬ್ಯುಸಿ ಶೆಡ್ಯೂಲ್ ನಲ್ಲಿಯೂ ಕುಟುಂಬಕ್ಕೆ ಸಮಯವನ್ನು ಮೀಸಲಿಡುತ್ತಾರೆ. ದೆಹಲಿಯಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ತಾಯಿ ಉಜ್ಜಲಾ, ಸೋದರಿ ಅನಿಶಾ ಜೊತೆ ದೀಪಿಕಾ ಭಾಗಿಯಾಗಿದ್ರು. ಸಮಾರಂಭದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಪ್ರಕಾಶ್ ಪಡುಕೋಣೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ರು.

    ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಸಹ ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿ ಪಡುಕೋಣೆ ಕುಟುಂಬದ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ಫೋಟೋವನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದು, `ಜೀವಮಾನ ಶ್ರೇಷ್ಠ ಪ್ರಶಸ್ತಿ ಪಡೆದ ಪಡುಕೋಣೆ ಸರ್‍ಗೆ ಹಾಗು ನಿಮ್ಮ ಸುಂದರ ಕುಟುಂಬಕ್ಕೆ ಶುಭಾಶಯಗಳು. ದೀಪಿಕಾ ನನ್ನ ನೆಚ್ಚಿನ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ’ ಅಂತ ಬರೆದುಕೊಂಡಿದ್ದಾರೆ.

    ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ ದೀಪಿಕಾ ಪಡುಕೊಣೆ ಅವರು ಸಿಲ್ಕ್ ಸೀರೆ, ಅದಕ್ಕೆ ಸರಿಹೊಂದುವ ಉದ್ದನೆ ತೋಳಿನ ಬ್ಲೌಸ್ ಧರಿಸಿ ಅಪ್ಪಟ ದೇಸಿ ಲುಕ್‍ನಲ್ಲಿ ಕಂಗೊಳಿಸುತ್ತಿದ್ದರು. ಮುಂಬೈ ವಿಮಾನ ನಿಲ್ದಾಣದಿಂದ ದೆಹಲಿಗೆ ಬರುವ ಸಂದರ್ಭದಲ್ಲಿ ದೀಪಿಕಾ ಮತ್ತು ಸೋದರಿ ಅನಿಶಾ ಇಬ್ಬರು ನೀಲಿ ಬಣ್ಣದ ಜೀನ್ಸ್, ವೈಟ್ ಟೀಶರ್ಟ್ ಮೇಲೊಂದು ಕಪ್ಪು ಬಣ್ಣದ ಜ್ಯಾಕೆಟ್ ಧರಿಸಿ ಮಿಂಚಿದ್ದರು.

    ಹಲವಾರು ವಿವಾದಗಳ ಬಳಿಕ ಇದೀಗ ದೀಪಿಕಾ ನಟಿಸಿದ್ದ `ಪದ್ಮಾವತ್’ ಚಿತ್ರ ಬಿಡಿಗಡೆಯಾಗಿದ್ದು, ಈಗಾಗಲೇ 100 ಕೋಟಿಗೂ ಅಧಿಕ ಹಣವನ್ನು ಗಳಿಸಿ ಮುನ್ನುಗುತ್ತಿದೆ. ಸಿನಿಮಾದಲ್ಲಿ ದೀಪಿಕಾ ರಜಪೂತ ರಾಣಿ ಪದ್ಮಾವತಿ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಸಾಕಷ್ಟು ಅಡೆ ತಡೆಗಳು ಉಂಟಾದರೂ ನೋಡುಗರು ಮತ್ತು ವಿಮರ್ಶಕರಿಂದ ಮೆಚ್ಚುಗೆಯನ್ನು ಪಡೆದುಕೊಂಡಿದೆ.

    https://www.instagram.com/p/Beih6h8FbgF/?taken-by=pvsindhu1

    https://www.instagram.com/p/BeiwLF3DLCd/?taken-by=deepika_padukone05

    https://www.instagram.com/p/BejsaotD7zl/?taken-by=deepika_padukone05

    https://www.instagram.com/p/BeiQYe0B1is/?utm_source=ig_embed

    https://www.instagram.com/p/BehxTRFHYxc/?taken-by=shaleenanathani

  • ಶ್ರೀಲಂಕಾದಲ್ಲಿ ತನ್ನ ಗೆಳೆಯನ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ ದೀಪಿಕಾ

    ಶ್ರೀಲಂಕಾದಲ್ಲಿ ತನ್ನ ಗೆಳೆಯನ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ ದೀಪಿಕಾ

    ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಶುಕ್ರವಾರ 32ನೇ ವಸಂತಕ್ಕೆ ಕಾಲಿಡಲಿದ್ದಾರೆ. ಶ್ರೀಲಂಕಾದಲ್ಲಿ ತಮ್ಮ ಗೆಳೆಯ ರಣ್‍ವೀರ್ ಸಿಂಗ್ ಜೊತೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.

    ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್ ಬಾಲಿವುಡ್ ಹಾಟೆಸ್ಟ್ ಪೇರ್ ಎಂದು ಗುರುತಿಸಿಕೊಂಡಿದೆ. ಶ್ರೀಲಂಕಾದಲ್ಲಿ ರಣವೀರ್ ಸಿಂಗ್ ಜೊತೆ ಹೊಸ ವರ್ಷವನ್ನು ಸ್ವಾಗತಿಸಿರುವ ದೀಪಿಕಾ ಶೀಘ್ರವೇ ಅಲ್ಲಿಯೇ ಅವರ ಜೊತೆ ತಮ್ಮ 32ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.

    ತಾವಿಬ್ಬರು ಪರಸ್ಪರ ಪ್ರೀತಿಸುತ್ತಿದ್ದೇವೆ ಎನ್ನುವ ವಿಚಾರವನ್ನು ಇನ್ನೂ ಈ ಜೋಡಿ ಬಹಿರಂಗವಾಗಿ ಹೇಳಿಕೊಂಡಿಲ್ಲ. ಆದರೆ ಅವರ ನಡೆ-ನುಡಿ ಇಬ್ಬರ ನಡುವೆ ಏನೇನೋ ಇದೆ ಎಂಬುದನ್ನು ಸಾರಿ ಹೇಳುತ್ತಿದೆ. ನಾವಿಬ್ಬರು ಜೊತೆಯಲ್ಲಿದ್ದರೆ ನಮಗೆ ಮತ್ತೇನೂ ಕಾಣುವುದಿಲ್ಲವೆಂದು ಈ ಹಿಂದೆ ದೀಪಿಕಾ ಹೇಳಿದ್ದರು.

    ಶ್ರೀಲಂಕಾದಲ್ಲಿ ಈ ಜೋಡಿ ಸ್ನಾರ್ಕಲಿಂಗ್ ಮಾಡಿ ಒಟ್ಟಿಗೆ ಕಾಲ ಕಳೆಯಲು ನಿರ್ಧರಿಸಿದ್ದಾರೆ. ಅಲ್ಲಿನ ಜನರು ಇವರನ್ನು ಗುರುತಿಸಿದ್ದರು ಈ ಜೋಡಿಗೆ ಯಾವುದೇ ತೊಂದರೆ ನೀಡಿಲ್ಲ. ಜನರು ಶಾಂತಿಯಿಂದ ಇದ್ದಾರೆ ಹಾಗೂ ಬೇರೆಯವರ ಏಕಾಂತವನ್ನು ಹಾಳು ಮಾಡುವುದಿಲ್ಲ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.

    ಸದ್ಯ ದೀಪಿಕಾ ನಟನೆಯ ಪದ್ಮಾವತಿ ಚಿತ್ರ ಸೆನ್ಸಾರ್ ಬೋರ್ಡ್‍ನಲ್ಲಿ ಯು/ಎ ಸರ್ಟಿಫಿಕೆಟ್ ಪಡೆದುಕೊಂಡು ಪದ್ಮಾವತ್ ಹೆಸರಿನಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ದೀಪಿಕಾ ರಾಣಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕರಿದ್ದು, ಶಾಹಿದ್ ಕಪೂರ್ ರಾಣಾ ರತನ್ ಸಿಂಗ್ ಆಗಿ ಕಾಣಿಸಿಕೊಂಡರೆ, ರಣ್‍ವೀರ್ ಸಿಂಗ್ ಅಲ್ಲಾವುದ್ದೀನ್ ಖಿಲ್ಜಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  • ‘ಪದ್ಮಾವತಿ’ಯ 26 ಸೀನ್‍ಗಳಿಗೆ ಕಟ್- ಬದಲಾಯ್ತು ಸಿನಿಮಾ ಟೈಟಲ್

    ‘ಪದ್ಮಾವತಿ’ಯ 26 ಸೀನ್‍ಗಳಿಗೆ ಕಟ್- ಬದಲಾಯ್ತು ಸಿನಿಮಾ ಟೈಟಲ್

    ಮುಂಬೈ: ಸಿನಿಮಾ ಸೆಟ್ಟೇರುತ್ತಲೇ ಸಾಕಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತಿ’ ಹಲವು ಮಾರ್ಪಾಡುಗಳನ್ನ ಮಾಡುವಂತೆ ಸೆನ್ಸಾರ್ ಬೋರ್ಡ್ ಸೂಚಿಸಿದೆ.

    ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್(ಸಿಬಿಎಫ್‍ಸಿ) ನಿಂದ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಗಲಿದೆ. ಸಿನಿಮಾದಲ್ಲಿನ ಬರೋಬ್ಬರಿ 26 ದೃಶ್ಯಗಳಿನ್ನ ತೆಗೆಯುವಂತೆ ಹೇಳಿದ್ದು, ಚಿತ್ರದ ಹೆಸರನ್ನು ‘ಪದ್ಮಾವತ್’ ಎಂದು ಬದಲಿಸಲು ಸೂಚಿಸಲಾಗಿದೆ.

    ಸೆನ್ಸಾರ್ ಮಂಡಳಿಯು ಚಿತ್ರ ನಿರ್ಮಾಣಗಾರರು ಮತ್ತು ಸಮಾಜ ಎರಡನ್ನೂ ಗಮನದಲ್ಲಿರಿಸಿಕೊಂಡು ಚಿತ್ರದ ಬಗ್ಗೆ ಈ ನಿರ್ಧಾರ ತಿಳಿಸಿದೆ. ಚಿತ್ರದ ಬಗೆಗಿನ ಗೊಂದಲ, ಸಂಕೀರ್ಣತೆ ಮತ್ತು ಕಳವಳವನ್ನು ಪರಿಗಣಿಸಿ ಅಂತಿಮ ನಿರ್ಣಯ ಕೈಗೊಳ್ಳಲು ವಿಶೇಷ ತಂಡದ ಅಗತ್ಯವಿದೆ ಎಂದು ಸೆನ್ಸಾರ್ ಬೋರ್ಡ್ ಅಭಿಪ್ರಾಯಿಸಿತ್ತು.

    ಹೀಗಾಗಿ ಸೆನ್ಸಾರ್ ಬೋರ್ಡ್‍ನಿಂದ ರಚಿಸಲಾದ ವಿಶೇಷ ತಂಡದಿಂದ ಚಿತ್ರವನ್ನ ವಿಮರ್ಶಿಸಲಾಗಿದೆ. ಸಿನಿಮಾ ಐತಿಹಾಸಿಕ ಕಥೆಯನ್ನು ಆಧರಿಸಿರುವುದರಿಂದ ತಂಡದಲ್ಲಿ ಇತಿಹಾಸಕಾರರು ಕೂಡ ಇದ್ದರು.

    ಉದಯಪುರ್ ಮೂಲದ ಅರವಿಂದ್ ಸಿಂಗ್, ಜೈಪುರ ವಿಶ್ವವಿದ್ಯಾಲಯದ ಪ್ರೊಫೆಸರ್ ಗಳಾದ ಕೆಕೆ ಸಿಂಗ್ ಮತ್ತು ಡಾ.ಚಂದ್ರಮಣಿ ಸಿಂಗ್ ವಿಶೇಷ ತಂಡದಲ್ಲಿ ಇದ್ದರು. ಸದಸ್ಯರು ಐತಿಹಾಸಿಕ ಘಟನೆಗಳು, ದೇಶದ ಸಾಮಾಜಿಕ-ಸಾಂಸ್ಕೃತಿಕ ಅಂಶಗಳ ಬಗ್ಗೆ ಜ್ಞಾನ ಹೊಂದಿದ ವ್ಯಕ್ತಿಗಳಾಗಿದ್ದು, ಕಥೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ರು ಎಂದು ಸೆನ್ಸಾರ್ ಬೋರ್ಡ್ ತಿಳಿಸಿದೆ.

    ಪದ್ಮಾವತಿ 190 ಕೋಟಿ ರೂ. ಬಜೆಟ್‍ನ ಸಿನಿಮಾವಾಗಿದ್ದು, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಮೂಡಿ ಬಂದಿದೆ. ಆದ್ರೆ ಸಿನಿಮಾದಲ್ಲಿ ಇತಿಹಾಸವನ್ನ ತಿರುಚಲಾಗಿದೆ ಎಂದು ಆರೋಪಿಸಿ ಸಿನಿಮಾ ಬಿಡುಗಡೆಗೆ ರಾಜಸ್ಥಾನದ ಕರ್ಣಿ ಸೇನಾ ಸಾಕಷ್ಟು ವಿರೋಧವನ್ನು ವ್ಯಕ್ತಪಡಿಸಿತ್ತು. ಚಿತ್ರದ ನಿರ್ದೇಶಕರು ಇತಿಹಾಸವನ್ನು ತಿರುಚಿ ರಜಪೂತ ಸಮುದಾಯಕ್ಕೆ ಅಗೌರವ ತೋರಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಕರ್ಣಿ ಸೇನಾಕ್ಕೆ ಹಲವು ರಾಜಕೀಯ ನಾಯಕರು ಕೂಡ ಬೆಂಬಲ ನೀಡಿದ್ದರು.

    ಚಿತ್ರದಲ್ಲಿ ಮುಸ್ಲಿಂ ದೊರೆ ಅಲ್ಲಾವುದ್ದೀನ್ ಖಿಲ್ಜಿ ಮತ್ತು ರಾಣಿ ಪದ್ಮಿನಿ ನಡುವೆ ರೊಮ್ಯಾಂಟಿಕ್ ಸೀನ್ ಗಳಿವೆ ಅಂತಾ ಕರ್ಣಿ ಸೇನಾ ಆರೋಪಿಸಿತ್ತು. ಎಲ್ಲವು ಅಂದುಕೊಂಡಂತೆ ಆಗಿದ್ದರೆ ಚಿತ್ರ ಡಿಸೆಂಬರ್ 01ರಂದು ತೆರೆ ಕಾಣಬೇಕಿತ್ತು. ಆದ್ರೆ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಬಿಡುಗಡೆಯನ್ನ ಮುಂದೂಡಲಾಗಿದೆ.

    ಚಿತ್ರದಲ್ಲಿ ರಾಣಿ ಪದ್ಮಿನಿಯಾಗಿ ಗುಳಿ ಕೆನ್ನೆ ಬೆಡಗಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ. ರಾಣಾ ರಾವಲ್ ರತನ್‍ಸಿಂಗ್ ಪಾತ್ರದಲ್ಲಿ ಶಾಹಿದ್ ಕಪೂರ್ ಮತ್ತು ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ರಣ್‍ವೀರ್ ಸಿಂಗ್ ಬಣ್ಣ ಹಚ್ಚಿದ್ದಾರೆ. ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಇದೂವರೆಗೂ ಅಂತಿಮಗೊಳಿಸಿಲ್ಲ.