Tag: ಪದ್ಮಶ್ರೀ ಪುರಸ್ಕೃತ

  • ಪದ್ಮಶ್ರೀ ಪುರಸ್ಕೃತ 90 ವಯಸ್ಸಿನ ಕಲಾವಿದನನ್ನು ಸರ್ಕಾರಿ ಮನೆಯಿಂದ ಹೊರಹಾಕಿದ ಕೇಂದ್ರ

    ಪದ್ಮಶ್ರೀ ಪುರಸ್ಕೃತ 90 ವಯಸ್ಸಿನ ಕಲಾವಿದನನ್ನು ಸರ್ಕಾರಿ ಮನೆಯಿಂದ ಹೊರಹಾಕಿದ ಕೇಂದ್ರ

    ನವದೆಹಲಿ: ಕೆಲ ವರ್ಷಗಳಿಂದ ಸರ್ಕಾರಿ ನಿವಾಸಗಳಲ್ಲಿ ವಾಸವಾಗಿದ್ದ 90 ವರ್ಷ ವಯಸ್ಸಿನ ಪದ್ಮಶ್ರೀ ಪುರಸ್ಕೃತ ಒಡಿಸ್ಸಿ ನೃತ್ಯಗಾರ ಗುರು ಮಾಯಾಧರ್ ರಾವತ್ ಅವರನ್ನು ಕೇಂದ್ರ ಸರ್ಕಾರ ಮನೆಯಿಂದ ಹೊರಹಾಕಲಾಗಿದೆ.

    ಇವರಂತೆಯೇ ಸರ್ಕಾರಿ ವಸತಿಗಳಲ್ಲಿ ವಾಸವಾಗಿದ್ದ ಎಂಟು ಮಂದಿ ಪ್ರಖ್ಯಾತ ಕಲಾವಿದರಿಗೆ ಮನೆ ಖಾಲಿ ಮಾಡುವಂತೆ ಕೇಂದ್ರ ಸರ್ಕಾರ ನೋಟಿಸ್‌ ನೀಡಲಾಗಿದೆ. ಫೆಬ್ರವರಿಯೊಳಗೆ ಆದೇಶ ಪಾಲನೆಯಾಗದಿದ್ದಲ್ಲಿ ಕಲಾವಿದರ ವಿಚಾರವಾಗಿ ಮುಕ್ತ ಕ್ರಮಕೈಗೊಳ್ಳಲು ಕೇಂದ್ರಕ್ಕೆ ಅಧಿಕಾರವಿದೆ ಎಂದು ದೆಹಲಿ ಹೈಕೋರ್ಟ್‌ ಸ್ಪಷ್ಟಪಡಿಸಿತ್ತು. ಇದನ್ನೂ ಓದಿ: 10,900 ಅಕ್ರಮ ಧ್ವನಿವರ್ಧಕಗಳ ತೆರವು

    ಕಲಾವಿದರಿಗೆ ಕೆಲ ವರ್ಷಗಳ ಹಿಂದೆ ಸರ್ಕಾರಿ ವಸತಿಗಳನ್ನು ಮಂಜೂರು ಮಾಡಲಾಗಿತ್ತು. ಆದರೆ ಮಂಜೂರಾತಿಯನ್ನು 2014ರಲ್ಲಿ ರದ್ದುಗೊಳಿಸಲಾಯಿತು. ಪರಿಣಾಮವಾಗಿ ಎಲ್ಲರೂ ವಸತಿಗಳನ್ನು ಖಾಲಿ ಮಾಡಬೇಕು ಎಂದು ನೋಟಿಸ್‌ ನೀಡಲಾಯಿತು. 90 ವರ್ಷ ವಯಸ್ಸಿನ ಒಡಿಸ್ಸಿ ನೃತ್ಯಗಾರ ರಾವುತ್‌ ಅವರನ್ನು ವಸತಿಯಿಂದ ಹೊರಹಾಕಿದ ನಂತರ ಉಳಿದ ಕಲಾವಿದರಿಗೂ ನೋಟಿಸ್‌ ನೀಡಲಾಗಿದೆ. ಮೇ 2ರೊಳಗೆ ನಿವಾಸ ಖಾಲಿ ಮಾಡುವಂತೆ ಅವರಿಗೆ ಗಡುವು ನೀಡಲಾಗಿದೆ.

    ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಹಲವು ಬಾರಿ ನೋಟಿಸ್‌ ಕೊಟ್ಟರೂ 28 ಕಲಾವಿದರ ಪೈಕಿ ಸುಮಾರು ಎಂಟು ಮಂದಿ ಇನ್ನೂ ತಮ್ಮ ಸರ್ಕಾರಿ ವಸತಿಗಳನ್ನು ಖಾಲಿ ಮಾಡಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಲಾಲ್‌ ಮಾಂಸ, ಮಸೀದಿಗಳಲ್ಲಿ ಧ್ವನಿವರ್ಧಕ ಏಕೆ ನಿಷೇಧಿಸಬೇಕು: ಒಮರ್‌ ಅಬ್ದುಲ್ಲಾ ಪ್ರಶ್ನೆ

    ಈ ಎಂಟು ಕಲಾವಿದರು ತಮ್ಮ ವಸತಿಗಳನ್ನು ಖಾಲಿ ಮಾಡುವ ಪ್ರಕ್ರಿಯೆಯಲ್ಲಿದ್ದಾರೆ. ಮೇ 2 ರೊಳಗೆ ನಿವಾಸ ಖಾಲಿ ಮಾಡುವುದಾಗಿ ಲಿಖಿತವಾಗಿ ಭರವಸೆ ನೀಡಿದ್ದು, ಅಲ್ಲಿಯವರೆಗೆ ಕಾಲಾವಕಾಶ ನೀಡಿದ್ದೇವೆ ಎಂದು ಅಧಿಕಾರಿ ಹೇಳಿದ್ದಾರೆ.

    ತಿಂಗಳಿಗೆ 20,000 ರೂ.ಗಿಂತ ಕಡಿಮೆ ಗಳಿಸುವ 40 ಕಲಾವಿದರಿಗೆ ಸಂಸ್ಕೃತಿ ಸಚಿವಾಲಯದ ಶಿಫಾರಸಿನ ಮೇರೆಗೆ ಜನರಲ್‌ ಪೂಲ್‌ ವಸತಿ ಸೌಕರ್ಯ ವಿಶೇಷ ಕೋಟಾದಡಿ ವಸತಿ ಮಂಜೂರು ಮಾಡಲಾಗಿತ್ತು. ಇದನ್ನೂ ಓದಿ: ಕೊರೊನಾ ಇನ್ನೂ ಮುಗಿದಿಲ್ಲ, ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಿ: ಉದ್ಧವ್ ಠಾಕ್ರೆ

    ವಸತಿ ಖಾಲಿ ಮಾಡಲು ಕೇಂದ್ರವು 2020 ರ ಡಿಸೆಂಬರ್ 31ಕ್ಕೆ ಗಡುವನ್ನು ನೀಡಿತ್ತು. ಆದರೆ ಅರ್ಜಿಗಳನ್ನು ಸಲ್ಲಿಸಿದ ನಂತರ ಹೈಕೋರ್ಟ್, ಕೇಂದ್ರದ ನೋಟಿಸ್‌ಗೆ ತಡೆ ನೀಡಿತ್ತು.

  • ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ  ಇಬ್ರಾಹಿಂ ಸುತಾರ ನಿಧನ

    ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ  ಇಬ್ರಾಹಿಂ ಸುತಾರ ನಿಧನ

    ಬಾಗಲಕೋಟೆ: ಪದ್ಮಶ್ರೀ ಪುರಸ್ಕೃತ ಆಧುನಿಕ ಸೂಫಿಸಂತ ಇಬ್ರಾಹಿಂ ಸುತಾರ(Ibrahim sutar) ಅವರು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.

    ಇಬ್ರಾಹಿಂ ಸುತಾರ(76) ಬೆಳಗ್ಗೆ 6.30ಕ್ಕೆ ಹೃದಯಾಘಾತದಿಂದ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪಟ್ಟಣದಲ್ಲಿ ಸಾವನ್ನಪ್ಪಿದ್ದಾರೆ. ಇಬ್ರಾಹಿಂ ಸುತಾರ ಎದೆ ನೋವಿನ ಸಮಸ್ಯೆಗೆ ಚಿಕಿತ್ಸೆ ಪಡೆದಿದ್ದರು. ಇಂದು ಬೆಳಿಗ್ಗೆ ಮತ್ತೆ ಲಘು ಹೃದಯಾಘಾತವಾಗಿದೆ. ತಕ್ಷಣಇಬ್ರಾಹಿಂ ಸುತಾರ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಇಬ್ರಾಹಿಂ ಸುತಾರ್ ಕೊನೆಯುಸಿರೆಳೆದಿದ್ದಾರೆ. ಸುತಾರ್ ಅವರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಇದನ್ನೂ ಓದಿ:  ಫೇಸ್‍ಬುಕ್ ಒಡೆಯನಿಗಿಂತ ಈಗ ಅದಾನಿ, ಅಂಬಾನಿ ಶ್ರೀಮಂತರು

    ಕನ್ನಡದ ಕಬೀರ ಎಂದೇ ಹೆಸರಾಗಿದ್ದ ಇಬ್ರಾಹಿಂ ಸುತಾರ್ ಅವರು ಭಾವೈಕ್ಯ ಸಂದೇಶ ಸಾರುವ ಸಂತರಾಗಿದ್ದರು. ಕುರಾನ್, ಬೈಬಲ್, ಭಗವದ್ಗೀತೆ, ಶರಣರ ತತ್ವಗಳ ಅಧ್ಯಯನ ಮಾಡಿದವರಗಾಗಿದ್ದರು. ಪ್ರವಚನ, ಗೀತೆಗಳ ಮೂಲಕ ಜನರಲ್ಲಿ ಸಮಾನತೆ ಧರ್ಮ ಸಹಿಷ್ಣುತೆ ಪಾಠ ಮಾಡುತ್ತಿದ್ದರು. ಇದನ್ನೂ ಓದಿ: ಅಂಗನವಾಡಿ ಕೇಂದ್ರಗಳ ಸಮಸ್ಯೆಗಳ ಬಗ್ಗೆ ಲೋಕಸಭೆಯಲ್ಲಿ ದನಿ ಎತ್ತಿದ ಸುಮಲತಾ

    ಇಬ್ರಾಹಿಂ ಎನ್​. ಸುತಾರ್​ ಮೇ 10, 1940ರಲ್ಲಿ ಜನಿಸಿದರು. ಇವರ ತಂದೆ ಮಹಾಲಿಂಗಪುರದ ನಬಿಸಾಹೇಬ್​, ತಾಯಿ ಅಮೀನಾಬಿ. ಆರ್ಥಿಕವಾಗಿ ಸದೃಢರಾಗಿಲ್ಲದಿದ್ದರಿಂದ ಮೂರನೇ ತರಗತಿವರೆಗೆ ಮಾತ್ರ ಶಿಕ್ಷಣ ಪಡೆದರು. ನಂತರ ನೇಕಾರ ವೃತ್ತಿ ಮೈಗೂಡಿಸಿಕೊಂಡರು. ಅದರ ಜೊತೆಗೆ ಮಸೀದಿಯಲ್ಲಿ ನಮಾಜು, ಕುರಾನ್​ ಅಧ್ಯಯನಮಾಡಿದ್ರಲ್ಲದೇ, ನಂತರದ ದಿನಗಳಲ್ಲಿ ಭಗವದ್ಗೀತೆ ಅಧ್ಯಯನ ಮಾಡಿದರು.

    ಪ್ರವಚನಗಳನ್ನು ಮಾಡುತ್ತಾ ಲೋಕಕ್ಕೆ ಭಾವೈಕ್ಯತೆಯ ಪಾಠವನ್ನು ಸಾರಿದರು. ಕನ್ನಡದ ಕಬೀರ ಎಂದೇ ಇವರು ಖ್ಯಾತ ರಾಗಿದ್ದರು. ಇವರಿಗೆ 1995ರಲ್ಲಿ ಕರ್ನಾಟಕ ಸರ್ಕಾರ ರಾಜೋತ್ಸವ ಪ್ರಶಸ್ತಿಯನ್ನು ನೀಡಿದೆ. ಭಾರತ ಸರ್ಕಾರ 2018ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಸರ್ವಧರ್ಮ ಸಮನ್ವಯದ ಪ್ರವಚನಕಾರರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಂ ಸುತಾರ್ ನಿಧನರಾದ ಸುದ್ದಿ ತಿಳಿದು ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ರಾಜಕೀಯ ನಾಯಕರು ಸುತಾರ್ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

  • ಪದ್ಮಶ್ರೀ ಪುರಸ್ಕೃತ ಎಚ್‍ಪಿಎಸ್ ಅಹ್ಲುವಾಲಿಯಾ ನಿಧನ

    ಪದ್ಮಶ್ರೀ ಪುರಸ್ಕೃತ ಎಚ್‍ಪಿಎಸ್ ಅಹ್ಲುವಾಲಿಯಾ ನಿಧನ

    ನವದೆಹಲಿ: ಪದ್ಮಶ್ರೀ ಪುರಸ್ಕೃತ ಮತ್ತು ಭಾರತೀಯ ಬೆನ್ನುಮೂಳೆ ಗಾಯಗಳ ಕೇಂದ್ರದ ಮೇಜರ್ ಎಚ್‍ಪಿಎಸ್ ಅಹ್ಲುವಾಲಿಯಾ(85) ಶುಕ್ರವಾರ ಸಂಜೆ ನಿಧನರಾಗಿದ್ದಾರೆ.

    ಎಚ್‍ಪಿಎಸ್ ಅಹ್ಲುವಾಲಿಯಾ ಅವರು ನಿವೃತ್ತ ಸೇನಾ ಅಧಿಕಾರಿಯಾಗಿದ್ದು, ತರಬೇತಿ ಪಡೆದ ಪರ್ವತಾರೋಹಿ, ಲೇಖಕ ಮತ್ತು ಸಾಮಾಜಿಕ ಕಾರ್ಯಕರ್ತರಾಗಿದ್ದರು. ಅಹ್ಲುವಾಲಿಯಾ ಅವರು ಸಾಹಸ, ಕ್ರೀಡೆ, ಪರಿಸರ, ಅಂಗವೈಕಲ್ಯ ಮತ್ತು ಸಾಮಾಜಿಕ ಕಾರ್ಯ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಶಾಪಿಂಗ್ ಮಾಲ್‍ನಲ್ಲಿ ಬೆಂಕಿ

    HPS Ahluwalia

    ವೃತ್ತಿಪರ ಪರ್ವತಾರೋಹಿಯಾಗಿರುವ ಇವರು ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ಭಾರತೀಯರಲ್ಲಿ ಒಬ್ಬರಾಗಿದ್ದಾರೆ. ಅವರು ತಮ್ಮ ಆತ್ಮಕಥೆ ಹೈಯರ್ ದ್ಯಾನ್ ಎವರೆಸ್ಟ್ ಸೇರಿದಂತೆ 13 ಪುಸ್ತಕಗಳನ್ನು ಬರೆದಿದ್ದಾರೆ. ಮೇಜರ್ ಅಹ್ಲುವಾಲಿಯಾ ಅವರು ಭಾರತೀಯ ಪರ್ವತಾರೋಹಣ ಪ್ರತಿಷ್ಠಾನ ಮತ್ತು ದೆಹಲಿ ಪರ್ವತಾರೋಹಣ ಸಂಘದ ಮಾಜಿ ಅಧ್ಯಕ್ಷರೂ ಸಹ ಆಗಿದ್ದಾರೆ.

    ಅಹ್ಲುವಾಲಿಯಾ ಅವರಿಗೆ ದೇಶದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಾದ ಪದ್ಮಭೂಷಣ, ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅವರು ತೇನ್ಸಿಂಗ್ ನಾರ್ಗೆ ರಾಷ್ಟ್ರೀಯ ಸಾಹಸ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ. ಇದೀಗ ಪತ್ನಿ ಭೋಲಿ ಅಹ್ಲುವಾಲಿಯಾ ಮತ್ತು ಪುತ್ರಿ ಸುಗಂಧ್ ಅಹ್ಲುವಾಲಿಯಾ ಅವರನ್ನು ಅಗಲಿದ್ದಾರೆ. ಇದನ್ನೂ ಓದಿ: 8 ಪ್ರಯಾಣಿಕರ ವಾಹನದಲ್ಲಿ 6 ಏರ್‌ಬ್ಯಾಗ್‌ ಕಡ್ಡಾಯ

  • ಪದ್ಮಶ್ರೀ ಪುರಸ್ಕೃತ ಹಿರಿಯ ಜೀವಗಳ ಆಶೀರ್ವಾದ ಪಡೆದ ಆಶಾ ಭಟ್

    ಪದ್ಮಶ್ರೀ ಪುರಸ್ಕೃತ ಹಿರಿಯ ಜೀವಗಳ ಆಶೀರ್ವಾದ ಪಡೆದ ಆಶಾ ಭಟ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಆಶಾ ಭಟ್ ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ ಮತ್ತು ತುಳಸಿ ಗೌಡ ಅವರನ್ನು ಭೇಟಿಯಾಗಿದ್ದಾರೆ. ಈ ಸುಂದರ ಕ್ಷಣಗಳ ಕುರಿತಾಗಿ ಆಶಾ ಭಟ್ ಅವರು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

    ಪರಿಸರ ದಂತಕತೆಗಳ ನಡುವೆ ನಾವಿರುವುದು ನಮ್ಮ ಪುಣ್ಯವಾಗಿದ್ದು, ನಾನು ಹಿರಿಯರ ಆಶೀರ್ವಾದ ಪಡೆದಿದ್ದೇನೆ. ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ ಮತ್ತು ತುಳಸಿ ಗೌಡ ಅವರ ಜೊತೆಗೆ ಕೆಲವು ಕ್ಷಣ ಕಳೆದಿದ್ದೇನೆ. ತಿಮ್ಮಕ್ಕ ಅವರು ಮರಗಳ ತಾಯಿ, ತನ್ನ ಹಸಿರು ಪ್ರಪಂಚದ ದೃಷ್ಟಿಯಲ್ಲಿ ಬದುಕಿದ ಹಸಿರು ಕ್ರಾಂತಿಯ ಸೂಪರ್ ಹೀರೋ ಆಗಿದ್ದಾರೆ. ತುಳಸಿ ಗೌಡ, ಯಾವುದೇ ಜಾತಿಯ ತಾಯಿ ಮರವನ್ನು ಗುರುತಿಸುವ ಸಾಮರ್ಥ್ಯಕ್ಕಾಗಿ ಎನ್‍ಸೈಕ್ಲೋಪೀಡಿಯಾ ಆಫ್ ಫಾರೆಸ್ಟ್ ಎಂದೂ ಕರೆಯುತ್ತಾರೆ. ಅವರ ಜ್ಞಾನದ ಬೆಳಕಿನಲ್ಲಿ ಇರುವುದು ಒಂದು ಆಶೀರ್ವಾದವಾಗಿದೆ ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: KGF ಚಿತ್ರ ತಂಡದಿಂದ ಯಶ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಶ್

     

    View this post on Instagram

     

    A post shared by Asha Bhat (@asha.bhat)

    ಒಬ್ಬ ಮಹಿಳೆಯಾಗಿ ನಾನು ಅವರಿಂದ ಸ್ಫೂರ್ತಿ ಪಡೆದಿದ್ದೇನೆ. ಅನನ್ಯವಾಗಿ ನೀವು, ನಮ್ಮ ಪರಂಪರರೆಯ ಕಿರೀಟವಾಗಿ ಅಳವಡಿಸಿಕೊಳ್ಳುವುದು ಮತ್ತು ಸಾಗುವುದು ಒಳ್ಳೆಯದು ಎಂದು ಬರೆದುಕೊಂಡು ಹಿರಿಯ ಜೀವಗಳಿಂಮ ಆಶಿರ್ವಾದ ಪಡೆದಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:  ಅಪ್ಪನ Birthdayಗೆ ಸ್ಪೆಷಲ್ ಗಿಫ್ಟ್ ಕೊಟ್ಟ ಐರಾ, ಯಥರ್ವ್

    ನಟಿ ಹಂಚಿಕೊಂಡಿರುವ ಚಿತ್ರಗಳು ಹಾಗೂ ಅವರ ಮಾತುಗಳಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಆಶಾ ಭಟ್ ರಾಬರ್ಟ್ ಚಿತ್ರದಲ್ಲಿನ ಅಭಿನಯದಿಂದ ಎಲ್ಲರ ಮನಗೆದ್ದಿದ್ದಾರೆ. ಹಳ್ಳಿಯ ಸೊಗಡಿನಲ್ಲಿ ಬೆಳೆದಿರುವ ಈ ನಟಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮೂರಿನ ಸೊಗಡಿನ ಕುರಿತಾಗಿ ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಿರುತ್ತಾರೆ.