Tag: ಪದ್ಮರಾಜ್

  • ಮಂಗಳೂರು ಮತಗಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತನ ಗೂಂಡಾಗಿರಿ

    ಮಂಗಳೂರು ಮತಗಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತನ ಗೂಂಡಾಗಿರಿ

    ಮಂಗಳೂರು: ರಾಜ್ಯದ 14 ಕ್ಷೇತ್ರಗಳಲ್ಲಿ ಇಂದು ಬೆಳಗ್ಗಿನಿಂದಲೇ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಸುಸೂತ್ರವಾಗಿ ನಡೆಯುತ್ತಿದೆ. ಆದರೆ ಮಂಗಳೂರಿನ ಮತಗಟ್ಟೆಯೊಂದರಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬ ಗೂಂಡಾಗಿರಿ ನಡೆಸಿರುವುದು ಬೆಳಕಿಗೆ ಬಂದಿದೆ.

    ನಗರದ ಕಂಕನಾಡಿ ಕಪಿತಾನಿಯೋ ಶಾಲಾ ಮತಗಟ್ಟೆ ಬಳಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಮತ ಚಲಾಯಿಸಲು ಬಂದಾಗ ಈ ಘಟನೆ ನಡೆದಿದೆ. ಕಾಂಗ್ರೆಸ್ ಅಭ್ಯರ್ಥಿ ಜೊತೆ ಜನ ಸೇರಿರೋದನ್ನು ಬಿಜೆಪಿ ಕಾರ್ಯಕರ್ತ ಪ್ರಶ್ನಿಸಿದ್ದಾನೆ. ಈ ವೇಳೆ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆದಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಯಾವುದೇ ಸಮಸ್ಯೆ ಇಲ್ಲದೇ ಮತದಾನ ಆರಂಭ : ತುಷಾರ್‌ ಗಿರಿನಾಥ್‌

    ಬಿಜೆಪಿ ಕಾರ್ಯಕರ್ತರ ಸಂದೀಪ್ ಎಕ್ಕೂರು ಹಾಗೂ ಕಾರ್ಯಕರ್ತರಿಂದ ಮಾತಿನ ಚಕಮಕಿ ನಡೆದಿದೆ. ಅಲ್ಲದೇ ಪೊಲೀಸ್ ಅಧಿಕಾರಿಯೊಂದಿಗೆ ವಾಗ್ವಾದ ನಡೆದಿದ್ದು, ಅಧಿಕಾರಿಯನ್ನ ತಳ್ಳಾಡಿ ಪುಂಡಾಟ ಮೆರೆದಿದ್ದಾರೆ. ಇತ್ತ ಇದನ್ನು ಚಿತ್ರೀಕರಣ ಮಾಡಿದ ಮಾಧ್ಯಮದವರ ಮೇಲೂ ಅವಾಚ್ಯ ಶಬ್ದಗಳಿಂದ ನಿಂದನೆ ಮಡಿದ್ದಾರೆ. ಇದನ್ನೂ ಓದಿ: ಕಡ್ಡಾಯ ಮತದಾನ ಕಾನೂನು ತರಬೇಕು: ಸಿದ್ದಗಂಗಾ ಶ್ರೀ ಆಗ್ರಹ

     

  • ಮಾಜಿ ಸಚಿವ ಗೋಪಾಲಯ್ಯಗೆ ಕೊಲೆ ಬೆದರಿಕೆ – ಮಾಜಿ ಕಾರ್ಪೊರೇಟರ್ ಪದ್ಮರಾಜ್ ವಿರುದ್ಧ ಎಫ್‌ಐಆರ್

    ಮಾಜಿ ಸಚಿವ ಗೋಪಾಲಯ್ಯಗೆ ಕೊಲೆ ಬೆದರಿಕೆ – ಮಾಜಿ ಕಾರ್ಪೊರೇಟರ್ ಪದ್ಮರಾಜ್ ವಿರುದ್ಧ ಎಫ್‌ಐಆರ್

    – ವಿಧಾನಸೌಧಕ್ಕೆ ಹೋಗುವಾಗ ಕೊಂದೇ ಕೊಲ್ತೀನಿ ಎಂದು ಬೆದರಿಕೆ

    ಬೆಂಗಳೂರು: ವಿಧಾನಸೌಧಕ್ಕೆ ಹೋಗುವಾಗ ಕೊಂದೇ ಕೊಲ್ತೀನಿ, ಇಲ್ಲ ಮನೆಯೊಳಗೆ ಬಂದು ಕೊಲೆ ಮಾಡ್ತೀನಿ ಎಂದು ಮಾಜಿ ಸಚಿವ ಗೋಪಾಲಯ್ಯಗೆ (K. Gopalaiah) ಮಾಜಿ ಕಾರ್ಪೊರೇಟರ್ ಪದ್ಮರಾಜ್ (Padmaraj) ಕೊಲೆ ಬೆದರಿಕೆ (Life Threat) ಹಾಕಿದ್ದಾರೆ.

    ಮಂಗಳವಾರ ರಾತ್ರಿ ಗೋಪಾಲಯ್ಯ ಮನೆ ಬಳಿ ಬಂದು ಪದ್ಮರಾಜ್ ಗಲಾಟೆ ಮಾಡಿದ್ದು, ಹಳೆ ವೈಷಮ್ಯದಿಂದ ಕೊಲೆ ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆ ಕಾಮಾಕ್ಷಿಪಾಳ್ಯ (Kamakshipalya) ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ. ರಾತ್ರಿ ಮಾಜಿ ಸಚಿವ ಗೋಪಾಲಯ್ಯ ಹಾಗೂ ಮಾಜಿ ಕಾರ್ಪೊರೇಟರ್ ಪದ್ಮರಾಜ್ ನಡುವೆ ಗಲಾಟೆ ನಡೆದಿದೆ. ಇದೀಗ ಕಾಮಾಕ್ಷಿಪಾಳ್ಯ ಸ್ಟೇಶನ್‌ನಲ್ಲಿ ಗೋಪಾಲಯ್ಯ ಕುಳಿತಿದ್ದು, ಪದ್ಮರಾಜ್ ಮನೆ ಮುಂದೆ 4 ಹೊಯ್ಸಳ ಪೊಲೀಸರು ಜಮಾವಣೆಗೊಂಡಿದ್ದಾರೆ. ಇದನ್ನೂ ಓದಿ: ಮಗನನ್ನು ಕೊಂದ ಸುಚನಾ ಸೇಠ್‌ಗೆ ಯವುದೇ ಮಾಸಿಕ ಖಿನ್ನತೆ ಇಲ್ಲ

    ಪದ್ಮರಾಜ್ ಮಂಗಳವಾರ ತಡರಾತ್ರಿ ಗೋಪಾಲಯ್ಯಗೆ ಕರೆ ಮಾಡಿ ಹಣ ಬೇಕೆಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಹಣ ಕೊಡದಿದ್ರೆ ಏನು ಮಾಡ್ತೀನಿ ಗೊತ್ತಾ ಎಂದು ಬೆದರಿಕೆಯೊಡ್ಡಿದ್ದು, ಇದರಿಂದ ನೊಂದ ಗೋಪಾಲಯ್ಯ ಇಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದರ ಜೊತೆಗೆ ಸ್ಪೀಕರ್ ಮತ್ತು ಸಿಎಂಗೂ ದೂರು ಕೊಡಲು ಗೋಪಾಲಯ್ಯ ಮುಂದಾಗಿದ್ದಾರೆ. ಇದನ್ನೂ ಓದಿ: ರಾಜಸ್ಥಾನದಿಂದ ಸೋನಿಯಾ ಗಾಂಧಿ ರಾಜ್ಯಸಭೆಗೆ ಸ್ಪರ್ಧೆ

    ಪದ್ಮರಾಜ್‌ಗೆ ಸಾಕಷ್ಟು ಬಾರಿ ಸಹಾಯ ಮಾಡಿದ್ದೇನೆ. ಆದರೆ ಈ ಥರ ಕುಡಿದು ನಿಂದಿಸಿದ್ದು, ಬೆದರಿಕೆ ಹಾಕಿದ್ದು ನೋವಾಗಿದೆ ಎಂದು ಗೋಪಾಲಯ್ಯ ಅಳಲು ತೋಡಿಕೊಂಡಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ಪದ್ಮರಾಜ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ವಿಚಾರಣೆಗೆ ನೋಟಿಸ್ ನೀಡಲು ಪೊಲೀಸರು ಪದ್ಮರಾಜ್ ಮನೆ ಬಾಗಿಲಿಗೆ ತೆರಳಿದ್ದಾರೆ. ಈ ವೇಳೆ ಮನೆಯ ಬಾಗಿಲು ತೆರೆಯದೆ ಪದ್ಮರಾಜ್ ಗಲಾಟೆ ಮಾಡುತ್ತಿದ್ದು, ಪೊಲೀಸರು ಪದ್ಮರಾಜ್ ಬಂಧನಕ್ಕೆ ಹರಸಾಹಸ ಪಡುತ್ತಿದ್ದಾರೆ. ಇದನ್ನೂ ಓದಿ: ಅಯೋಧ್ಯೆಗೆ ಬೆಂಗಳೂರಿನಿಂದ ಹೊರಟಿತು ವಿಶೇಷ ರೈಲು