Tag: ಪದ್ಮನಾಭನಗರ

  • ಕೈ ಅಭ್ಯರ್ಥಿಯ ಬಿ ಫಾರಂಗೆ ತಡೆ –  ಪದ್ಮನಾಭನಗರದಲ್ಲಿ ಅಶೋಕ್‌ ವಿರುದ್ಧ ಡಿಕೆ ಸುರೇಶ್‌ ಕಣಕ್ಕೆ?

    ಕೈ ಅಭ್ಯರ್ಥಿಯ ಬಿ ಫಾರಂಗೆ ತಡೆ – ಪದ್ಮನಾಭನಗರದಲ್ಲಿ ಅಶೋಕ್‌ ವಿರುದ್ಧ ಡಿಕೆ ಸುರೇಶ್‌ ಕಣಕ್ಕೆ?

    ಬೆಂಗಳೂರು: ನಾಮಪತ್ರ ಸಲ್ಲಿಕೆಗೆ ಎರಡೇ ದಿನ ಬಾಕಿ ಉಳಿದಿದೆ. ಹೀಗಾಗಿ ಚುನಾವಣಾ ಕಣ ರಂಗೇರುತ್ತಿದ್ದು ಪದ್ಮನಾಭನಗರದ (Padmanabhanagar) ಕಾಂಗ್ರೆಸ್‌ (Congress) ಅಭ್ಯರ್ಥಿ ಯಾರು ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ.

    ಕಾಂಗ್ರೆಸ್‌ ಈಗಾಗಲೇ ರಘುನಾಥ್ ನಾಯ್ಡು (Raghunath Naidu) ಅವರಿಗೆ ಫಾರಂ ಬಿ (Form B) ನೀಡಿದೆ. ಆದರೆ ಈಗ ಬಿ ಫಾರಂಗೆ ತಡೆ ಹಿಡಿಯಲಾಗಿದ್ದು ಹಾಲಿ ಶಾಸಕ ಅಶೋಕ್‌ಗೆ (Ashok) ಠಕ್ಕರ್‌ ನೀಡಲು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿಕೆ ಸುರೇಶ್‌ (DK Suresh) ಸ್ಪರ್ಧೆ ಮಾಡುತ್ತಾರಾ ಎನ್ನುವುದು ಸದ್ಯದ ಕುತೂಹಲ.

    ಕನಕಪುರದಲ್ಲಿ ಬಿಜೆಪಿ (BJP) ಅಚ್ಚರಿ ಎಂಬಂತೆ ಡಿಕೆ ಶಿವಕುಮಾರ್‌ (DK Shivakumar) ವಿರುದ್ಧ ಅಶೋಕ್‌ ಅವರನ್ನು ನಿಲ್ಲಿಸಿದೆ. ರಾಮನಗರದಲ್ಲಿ ಸಂಘಟನೆ ದೃಷ್ಟಿಯಿಂದ ಬಲಿಷ್ಠ ಅಭ್ಯರ್ಥಿ ಹಾಕಿದರೆ ಮುಂದೆ ಬಿಜೆಪಿಗೆ ಲಾಭ ಎಂಬ ದೃಷ್ಟಿಯಿಂದ ಅಶೋಕ್‌ ಅವರನ್ನು ಕಣಕ್ಕೆ ಇಳಿಸಿದೆ. ಇದನ್ನೂ ಓದಿ: ಕಾಂಗ್ರೆಸ್‌ 4ನೇ ಪಟ್ಟಿ ರಿಲೀಸ್‌ – ಸಿ.ಟಿ. ರವಿ ವಿರುದ್ಧ ಮಾಜಿ ಆಪ್ತನಿಗೆ ಟಿಕೆಟ್‌

    ಅಶೋಕ್‌ ಅವರನ್ನು ಕನಕಪುರದಲ್ಲಿ ಕಣಕ್ಕೆ ಇಳಿಸಿದ ಬೆನ್ನಲ್ಲೇ ಪದ್ಮನಾಭನಗರದಲ್ಲಿ ಅಶೋಕ್‌ಗೆ ಠಕ್ಕರ್‌ ನೀಡಲು ಡಿಕೆ ಸುರೇಶ್‌ ಅವರನ್ನು ಇಳಿಸಲಾಗುತ್ತದೆ ಎಂಬ ವದಂತಿ ಕೇಳಿ ಬಂದಿತ್ತು. ಈ ಮಾತಿಗೆ ಆರಂಭದಲ್ಲಿ ಡಿಕೆ ಸುರೇಶ್‌, ನಾನು ರಾಜ್ಯ ರಾಜಕೀಯಕ್ಕೆ ಬರುವುದಿಲ್ಲ. ಲೋಕಸಭಾ ಸದಸ್ಯನಾಗಿ ಇರುತ್ತೇನೆ ಎಂದು ಹೇಳಿದ್ದರು. ಆದರೆ ರಘುನಾಥ್ ನಾಯ್ಡು ಅವರಿಗೆ ನೀಡಿದ್ದ ಬಿ ಫಾರಂ ತಡೆ ಹಿಡಿದ ಪರಿಣಾಮ ಕಾಂಗ್ರೆಸ್‌ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆ ಎದುರಾಗಿದೆ.

     

    ಪದ್ಮನಾಭನಗರದ ಅಭ್ಯರ್ಥಿ ರಘುನಾಥ್ ನಾಯ್ಡು ಡಿ.ಕೆ.ಸುರೇಶ್ ಬಂದು ಸ್ಪರ್ಧೆ ಮಾಡಿದರೆ ನಾನು ಸ್ಥಾನ ಬಿಟ್ಟುಕೊಡಲು ರೆಡಿ ಎಂದಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಸಂಸದ ಡಿ.ಕೆ.ಸುರೇಶ್ ಪದ್ಮನಾಭನಗರದಿಂದ ಸ್ಪರ್ಧೆ ಮಾಡ್ತಾರಾ ಎಂಬ ಅನುಮಾನ ಮೂಡಿಸುವಂತಿದೆ. ಪದ್ಮನಾಭನಗರ ಸ್ಪರ್ಧೆಗೆ ಸಂಬಂಧಿಸಿದಂತೆ  ಎದ್ದಿರುವ ಎಲ್ಲಾ ಅಂತೆ ಕಂತೆ ಸುದ್ದಿಗಳಿಗೆ ಇಂದೇ  ತೆರೆ ಬೀಳಲಿದೆ.

  • ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಪೂರ್ವ ನಿಯೋಜಿತ: ಆರ್.ಅಶೋಕ್ ಟೀಕೆ

    ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಪೂರ್ವ ನಿಯೋಜಿತ: ಆರ್.ಅಶೋಕ್ ಟೀಕೆ

    ಬೆಂಗಳೂರು: ಜಗದೀಶ್ ಶೆಟ್ಟರ್ (Jagadish Shettar) ಕಾಂಗ್ರೆಸ್ (Congress) ಸೇರ್ಪಡೆ ಪೂರ್ವ ನಿಯೋಜಿತವಾಗಿದೆ. ಅವರ ಮಕ್ಕಳಿಗೆ ಮತ್ತು ಶ್ರೀಮತಿಗೆ ಟಿಕೆಟ್ ಕೊಡುತ್ತೇವೆ ಎಂದು ಹೇಳಿದರೂ ಒಪ್ಪದೇ ಹೋಗಿರುವುದು ನೋಡಿದರೆ ಮೊದಲೇ ಪ್ಲಾನ್ (Plan) ಮಾಡಿಕೊಂಡು ಹೋಗಿದ್ದಾರೆ ಎಂದು ಅನಿಸುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ್‌ (R.Ashok) ಟೀಕಿಸಿದರು.

    ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಪಕ್ಷದಲ್ಲಿ ಎಲ್ಲವನ್ನೂ ಅನುಭವಿಸಿ ಹೋಗಿದ್ದು ನನಗೆ ಆಶ್ಚರ್ಯ ಉಂಟುಮಾಡಿದೆ. ಮುಖ್ಯಮಂತ್ರಿ ಆಗಬೇಕು ಎನ್ನುವ ಕೊರಗು ಅವರಿಗೆ ಇದ್ದಿದ್ದರೆ ಕಾಂಗ್ರೆಸ್‌ಗೆ ಹೋಗಿದ್ದಾರೆ ಎನ್ನಬಹುದು. ಆದರೆ ಅವರಿಗೆ ಈ ರೀತಿಯಾದ ಕೊರಗು ಇರಲಿಲ್ಲ. ಅವರ ಕುಟುಂಬಕ್ಕೆ ಟಿಕೆಟ್ ಕೊಡುತ್ತೇವೆ ಎಂದರೂ ಹೋಗಿದ್ದಾರೆ. ಅವರ ಏರಿಯಾದಲ್ಲಿ ಏನೋ ಕೆಲಸ ಪೆಂಡಿಂಗ್ ಇದೆ ಎಂದಾಗಿದ್ದರೆ ಅವರ ಮಗ ಅಥವಾ ಶ್ರೀಮತಿ ಕೈಯಲ್ಲಿಯೇ ಮಾಡಿಸಬಹುದಿತ್ತು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಶೆಟ್ಟರ್‌ನಿಂದ ಉತ್ತರ ಕರ್ನಾಟಕದಲ್ಲೂ ಕಾಂಗ್ರೆಸ್‌ಗೆ ಹೆಚ್ಚಿನ ಶಕ್ತಿ ಸಿಗುವ ವಿಶ್ವಾಸವಿದೆ: ಖರ್ಗೆ  

    ಶೆಟ್ಟರ್ ಕಾಂಗ್ರೆಸ್‌ಗೆ ಹೋಗಿ ದುಡುಕಿನ ನಿರ್ಧಾರ ಮಾಡಿದ್ದಾರೆ. ಇದು ಒಳ್ಳೆಯದಲ್ಲ. ಅವರ ಕಷ್ಟ ಕಾಲದಲ್ಲಿ ಬಿಜೆಪಿ (BJP) ಅವರ ಜೊತೆಗಿತ್ತು. ವಿರೋಧ ಪಕ್ಷದ ನಾಯಕರನ್ನಾಗಿ ಮಾಡಬೇಕಾದರೆ ಬಿಬಿ ಶಿವಪ್ಪನವರ (B.B.Shivappa) ಹೆಸರಿತ್ತು. ಇವರಿಗೆ ಬೆಂಬಲ ಇಲ್ಲದಿರುವ ಸಮಯದಲ್ಲಿ ಯಡಿಯೂರಪ್ಪ (B.S.Yediyurappa) ಹಾಗೂ ಅನಂತ್‌ಕುಮಾರ್ ಇವರ ಹೆಸರನ್ನು ಸೂಚಿಸಿ ಅವರಿಗೆ ಅವಕಾಶ ಮಾಡಿಕೊಟ್ಟರು. ಇದಾದ ಬಳಿಕ ಎಲ್ಲಾ ರೀತಿಯಾದ ಅಧಿಕಾರವನ್ನು ಅನುಭವಿಸಿದ್ದಾರೆ. ಇಷ್ಟೆಲ್ಲಾ ಅಧಿಕಾರವನ್ನು ಕೊಟ್ಟಿದ್ದರೂ ಕಾಂಗ್ರೆಸ್ ಪಕ್ಷಕ್ಕೆ ಹೋಗಿರುವುದು ಬಹಳ ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಕಾಂಗ್ರೆಸ್ ತತ್ವ ಸಿದ್ಧಾಂತ ಒಪ್ಪಿಕೊಂಡು ‘ಕೈ’ ಸೇರ್ಪಡೆ : ಶೆಟ್ಟರ್ 

    ಯಡಿಯೂರಪ್ಪನವರು ನಮ್ಮ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕರು. ಅವರ ಮಟ್ಟಕ್ಕೆ ಇವರು ಯಾರೂ ಅವರ ಹತ್ತಿರ ಸುಳಿಯಲು ಆಗುವುದಿಲ್ಲ. ಆ ರೀತಿಯಾದ ವರ್ಚಸ್ಸು ಇವರಿಗಿಲ್ಲ. ಯಡಿಯೂರಪ್ಪನವರು ಏನು ಹೇಳುತ್ತಾರೋ ಅದನ್ನು ಮಾಡುತ್ತಾರೆ. ಬಿಜೆಪಿ ಲಿಂಗಾಯತ ನಾಯಕರನ್ನು ಮೂಲೆಗುಂಪು ಮಾಡುತ್ತಿದ್ದಾರೆ ಎನ್ನುವುದು ಸುಳ್ಳು. ಯಾಕೆಂದರೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಕೂಡಾ ಲಿಂಗಾಯತರು. ಯಡಿಯೂರಪ್ಪನವರು ರಾಷ್ಟ್ರೀಯ ಸಂಸದೀಯ ಮಂಡಳಿಯಲ್ಲಿದ್ದಾರೆ. ಅದು ಉನ್ನತ ಹುದ್ದೆಯಾಗಿದೆ. ಈಗಾಗಲೇ ಯಡಿಯೂರಪ್ಪನವರು ಕ್ಷೇತ್ರಗಳಲ್ಲಿ ಓಡಾಡಿ ಬಿಜೆಪಿ ಗೆಲ್ಲಿಸುತ್ತೇವೆ ಎಂದು ಹೇಳಿದ್ದಾರೆ. ಅದರಂತೆ ನಾವು ನಡೆಯುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿ ತೊರೆದು ಜಗದೀಶ್‌ ಶೆಟ್ಟರ್‌ ಕಾಂಗ್ರೆಸ್‌ ಸೇರ್ಪಡೆ 

    ಸೋಮವಾರ ಪದ್ಮನಾಭನಗರ (Padmanabhanagar) ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಲಿದ್ದೇನೆ. ನಾಮಪತ್ರ (Nomination Papers) ಸಲ್ಲಿಕೆಗೂ ಮುನ್ನ ಬನಶಂಕರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತೇನೆ. ಬಳಿಕ ಮಧ್ಯಾಹ್ನ ಒಂದು ಗಂಟೆಗೆ ಮೆರವಣಿಗೆ ಹೊರಟು ನಾಮಪತ್ರ ಸಲ್ಲಿಕೆ ಮಾಡಲಿದ್ದು, ಮಂಗಳವಾರ ಕನಕಪುರದಲ್ಲಿ (Kanakapura) ನಾಮಪತ್ರ ಸಲ್ಲಿಸುತ್ತೇನೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಸ್ವಾಭಿಮಾನಕ್ಕೆ ಧಕ್ಕೆಯಾದವರೆಲ್ಲ ಕಾಂಗ್ರೆಸ್‌ಗೆ ಬರ್ತಿದ್ದಾರೆ: ಡಿಕೆಶಿ

  • ಪದ್ಮನಾಭನಗರದಿಂದ ಅಶೋಕ್‌ ವಿರುದ್ಧ ಡಿಕೆ ಸುರೇಶ್‌ ಕಣಕ್ಕೆ?

    ಪದ್ಮನಾಭನಗರದಿಂದ ಅಶೋಕ್‌ ವಿರುದ್ಧ ಡಿಕೆ ಸುರೇಶ್‌ ಕಣಕ್ಕೆ?

    ಬೆಂಗಳೂರು: ಕಂದಾಯ ಸಚಿವ ಅಶೋಕ್‌ಗೆ (R Ashok) ಠಕ್ಕರ್‌ ನೀಡಲು ಪದ್ಮನಾಭನಗರದಿಂದ ಡಿಕೆ ಶಿವಕುಮಾರ್‌ (DK Shivakumar) ಸಹೋದರ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿಕೆ ಸುರೇಶ್‌ (DK Suresh) ಸ್ಪರ್ಧೆ ಮಾಡುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

    ಕನಕಪುರದಲ್ಲಿ ಡಿಕೆ ಶಿವಕುಮಾರ್‌ ಅವರನ್ನು ಕಟ್ಟಿ ಹಾಕಲು ಬಿಜೆಪಿ ಹೈಕಮಾಂಡ್‌ ಅಶೋಕ್‌ ಅವರಿಗೆ ಟಿಕೆಟ್‌ ನೀಡಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಕಾಂಗ್ರೆಸ್‌ ನಾಯಕರು ಅಶೋಕ್‌ ವಿರುದ್ಧ ಡಿಕೆ ಸುರೇಶ್‌ ಅವರನ್ನು ಕಣಕ್ಕೆ ಇಳಿಸಿದರೆ ಉತ್ತಮ ಎಂಬ ಸಲಹೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಲಕ್ಷ್ಮಣ ಸವದಿ ಗುಡ್‍ಬೈ – ಶೀಘ್ರವೇ ಕಾಂಗ್ರೆಸ್ ಸೇರ್ಪಡೆ?

    ಈಗಾಗಲೇ ಪದ್ಮನಾಭನಗರದಿಂದ (Padmanabhanagar) ರಘುನಾಥ್ ನಾಯ್ಡು ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಒಂದು ಬಾರಿ ಟಿಕೆಟ್‌ ನೀಡಿದ ಬಳಿಕ ಬದಲಾವಣೆ ಮಾಡಿದರೆ ತಪ್ಪು ಸಂದೇಶ ಹೋಗುವ ಸಾಧ್ಯತೆ ಇರುವುದರಿಂದ ಕಾಂಗ್ರೆಸ್‌ ತನ್ನ ನಿರ್ಧಾರವನ್ನು ಬದಲಾವಣೆ ಮಾಡುತ್ತಾ ಎಂಬ ಪ್ರಶ್ನೆ ಎದ್ದಿದೆ.

    ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆ ಸುರೇಶ್‌, ಸದ್ಯಕ್ಕೆ ಏನು ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ. ಈ ಹಿಂದೆ ನಿಖಿಲ್‌ ಕುಮಾರಸ್ವಾಮಿ ವಿರುದ್ಧ ರಾಮನಗರದಿಂದ ಡಿಕೆ ಸುರೇಶ್‌ ಸ್ಪರ್ಧೆ ಮಾಡಬೇಕು ಎಂಬ ಬೇಡಿಕೆ ಕಾಂಗ್ರೆಸ್‌ನಿಂದ ಬಂದಿತ್ತು. ಈ ಬೇಡಿಕೆಗೆ ಪ್ರತಿಕ್ರಿಯಿಸಿದ ಸುರೇಶ್‌, ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ, ಆಸಕ್ತಿಯೂ ಇಲ್ಲ. ಸಂಸದನಾಗಿಯೇ ಮುಂದುವರೆಯುತ್ತೇನೆ ಎಂದು ತಿಳಿಸಿದ್ದರು.

    ಈಗ ಸಹೋದರನ ವಿರುದ್ಧವೇ ಅಶೋಕ್‌ ಕಣಕ್ಕೆ ಇಳಿಯುತ್ತಿರುವ ಕಾರಣ ಕಾಂಗ್ರೆಸ್‌ ಮುಂದಿನ ನಡೆ ಏನು ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

  • ಕಾಂಗ್ರೆಸ್ ಬರುವುದೇ ಗ್ಯಾರಂಟಿಯಿಲ್ಲ, ಇನ್ನು ಗ್ಯಾರಂಟಿ ಕಾರ್ಡ್‌ನಿಂದ ಏನು ಉಪಯೋಗ?-ಆರ್.ಅಶೋಕ್

    ಕಾಂಗ್ರೆಸ್ ಬರುವುದೇ ಗ್ಯಾರಂಟಿಯಿಲ್ಲ, ಇನ್ನು ಗ್ಯಾರಂಟಿ ಕಾರ್ಡ್‌ನಿಂದ ಏನು ಉಪಯೋಗ?-ಆರ್.ಅಶೋಕ್

    ಬೆಂಗಳೂರು: ಕಾಂಗ್ರೆಸ್‌ (Congress) ಪಕ್ಷ ಆಡಳಿತಕ್ಕೆ ಬರುವುದೇ ಗ್ಯಾರಂಟಿಯಿಲ್ಲ. ಇನ್ನು ಗ್ಯಾರಂಟಿ ಕಾರ್ಡ್‌ನಿಂದ ಏನು ಉಪಯೋಗ ಎಂದು ಸಚಿವ ಆರ್.ಅಶೋಕ್ (R.Ashok) ಕಾಂಗ್ರೆಸ್ ಪಕ್ಷದ ವಿರುದ್ಧ ವ್ಯಂಗ್ಯವಾಡಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೊಮ್ಮಾಯಿ (Basavaraj Bommai) ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತದೆ. ನಮ್ಮ ಸರ್ಕಾರವೇ ಬರುವುದು. ತಿಪ್ಪರಲಾಗ ಹಾಕಿದರೂ ಕಾಂಗ್ರೆಸ್ ಬರುವುದಿಲ್ಲ. ನಮ್ಮದು ನ್ಯಾಷನಲ್ ಪಾರ್ಟಿ. ಜಾತಿ ಪಾರ್ಟಿ ಅಲ್ಲ. ಭಾರತೀಯತೆ ಮತ್ತು ಹಿಂದುತ್ವ ಮಾತ್ರವೇ ನಮ್ಮ ನಿಲುವು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: HDK `ಪಂಚರತ್ನ’ಯಾತ್ರೆ ಪಂಚರ್ ಆಗಿದೆ, ಕಾಂಗ್ರೆಸ್ಸಿಗೆ ಹೀನಾಯ ಸ್ಥಿತಿ ಬಂದಿದೆ – ಕಟೀಲ್ ಲೇವಡಿ 

    ಮುನಿರತ್ನ (Munirathna) ಅವರ ಉರಿಗೌಡ ನಂಜೇಗೌಡ ಚಿತ್ರದ ಕುರಿತು ಪ್ರತಿಕ್ರಿಯಿಸಿದ ಅವರು, ಈ ಚಿತ್ರದ ಬಗ್ಗೆ ಸ್ವಾಮೀಜಿಗಳು ಮಾತನಾಡಿದ್ದಾರೆ. ಆದರೆ ಮುನಿರತ್ನ ಅವರ ಜೊತೆ ಸ್ವಾಮೀಜಿಗಳು ಏನು ಮಾತನಾಡಿದ್ದಾರೆ ಎಂದು ಗೊತ್ತಿಲ್ಲ. ಅದು ಕಾಲ್ಪನಿಕ ಅಲ್ಲ. ಈ ಕುರಿತು ಪುಸ್ತಕ ಇದೆ. ನಮ್ಮ ಸ್ಟ್ಯಾಂಡ್ ಕ್ಲಿಯರ್ ಇದೆ. ಆದರೆ ಸ್ವಾಮೀಜಿಗಳು ಸಿನಿಮಾದ ಬಗ್ಗೆ ಮಾತ್ರ ಮಾತನಾಡಿದ್ದಾರೆ. ಉರಿಗೌಡ-ನಂಜೇಗೌಡ ಚಿತ್ರ ಮಾಡಬೇಕಾ ಬೇಡವಾ ಎನ್ನುವುದರ ಬಗ್ಗೆ ನನ್ನ ಮತ್ತು ಡಾ.ಅಶ್ವಥ್ ನಾರಾಯಣ್ (C.N.Ashwath Narayan) ಅಭಿಪ್ರಾಯ ಒಂದೇ. ಮುನಿರತ್ನ ಒಬ್ಬ ಸಿನಿಮಾ ನಿರ್ಮಪಕನಾಗಿ ಮಾತನಾಡಿದ್ದಾರೆ. ನಾವು ಮುನಿರತ್ನ ಅವರನ್ನು ಕರೆದು ಮಾತನಾಡುತ್ತೇವೆ ಎಂದರು. ಇದನ್ನೂ ಓದಿ: ಭಾರತದಲ್ಲಿರುವ ಶೇ.90 ರಷ್ಟು ಮುಸ್ಲಿಮರು ಮತಾಂತರ ಆದವ್ರು – ಬಿಹಾರ ಸಚಿವ 

    ಪದ್ಮನಾಭನಗರದಲ್ಲಿ (Padmanabhanagara) ನಟಿ ರಮ್ಯಾ (Ramya) ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಯಾರು ಎಲ್ಲಿ ಬೇಕಾದರೂ ಚುನಾವಣೆಗೆ (Election) ನಿಂತುಕೊಳ್ಳಬಹುದು. ಅದು ಸಂವಿಧಾನದ ಹಕ್ಕು. ರಮ್ಯಾ ಅವರನ್ನು ಸ್ಪರ್ಧೆ ಮಾಡಿಸುವುದು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟದ್ದು. ನಮ್ಮ ಪಕ್ಷದಲ್ಲಿ ಇನ್ನೂ ಅಭ್ಯರ್ಥಿಯನ್ನು ಘೋಷಣೆ ಮಾಡಲಿಲ್ಲ ಎಂದು ಹೇಳಿದರು. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ದಾಖಲೆ ಬರೆದ ಸುಳ್ಯದ ಎಸ್ ಅಂಗಾರ

  • ಸಮನ್ವಯತೆಯಿಂದ ಕೆಲಸ ಮಾಡಿ ಸಮಸ್ಯೆ ಪರಿಹಾರ ಮಾಡಿ: ಅಶೋಕ್

    ಸಮನ್ವಯತೆಯಿಂದ ಕೆಲಸ ಮಾಡಿ ಸಮಸ್ಯೆ ಪರಿಹಾರ ಮಾಡಿ: ಅಶೋಕ್

    ಬೆಂಗಳೂರು: ಸಮನ್ವಯತೆಯಿಂದ ಕೆಲಸ ಮಾಡಿ ಸಮಸ್ಯೆ ಪರಿಹಾರ ಮಾಡಿ ಎಂದ ಕಂದಾಯ ಸಚಿವ ಆರ್.ಅಶೋಕ್ ಸೂಚನೆ ನೀಡಿದರು.

    ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಶಾಸಕರ ಕಚೇರಿ ಆವರಣದಲ್ಲಿ ವಿವಿಧ ಇಲಾಖೆಗಳ ಸಭೆ ನಡೆಸಿದ ಅಶೋಕ್ ಅವರು ಕ್ಷೇತ್ರದ ಕುಂದುಕೊರತೆಗಳನ್ನು ಸರಿಪಡಿಸುವಂತೆ ಸೂಚನೆ ನೀಡಿದರು. ಗಣೇಶ ಮಂದಿರ, ಪದ್ಮನಾಭನಗರ, ಕುಮಾರಸ್ವಾಮಿ ಬಡಾವಣೆ, ಚಿಕ್ಕಲ್ಲಸಂದ್ರ ಮುಂತಾದ ಕಡೆಗಳಲ್ಲಿ ಆಗುತ್ತಿರುವ ಕಸ ವಿಲೇವಾರಿ ಸಮಸ್ಯೆಗೆ ಚರ್ಚೆ ನಡೆಸಿದ ಅವರು, ಹತ್ತು ದಿನಗಳ ಒಳಗಾಗಿ ಎಲ್ಲ ಸಮಸ್ಯೆ ಬಗೆಹರಿಯಬೇಕು. ಅಲ್ಲಲ್ಲಿ ಬಿದ್ದಿರುವ ಮರಗಳು, ಕಟ್ಟಡದ ತ್ಯಾಜ್ಯಗಳನ್ನು ಬೇಗ ವಿಲೇವಾರಿ ಮಾಡಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಕೆಜಿಎಫ್ ಶೂಟಿಂಗ್ ನಡೆದ ಬಂಜರು ಭೂಮಿಗೆ ಮತ್ತೆ ಜೀವ ನೀಡುತ್ತಿದೆ ಹೊಂಬಾಳೆ ಫಿಲಂಸ್

    ನಾನು ಮತ್ತೊಮ್ಮೆ ಪರಿಶೀಲನಾ ಸಭೆ ನಡೆಸುತ್ತೇನೆ. ಅನಗತ್ಯವಾಗಿ ಮಂಜೂರಾಗಿರುವ ಆಟೋ ಟಿಪ್ಪರ್ ಗಳನ್ನು ತಕ್ಷಣದಿಂದಲೇ ರದ್ದುಪಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಕೋವಿಡ್ ನಿಂದ ಮೃತಪಟ್ಟವರಲ್ಲಿ 653 ಜನರು ಪರಿಹಾರ ಅರ್ಹರು. ಅದರಲ್ಲಿ 103 ಜನರ ಅರ್ಜಿ ಈಗಾಗಲೇ ಸ್ವೀಕೃತಿಯಾಗಿದೆ. ಉಳಿದವುಗಳನ್ನು ಶೀಘ್ರವಾಗಿ ಅಂತಿಮ ರೂಪ ನೀಡುತ್ತೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ವಿವಿಧ ಇಲಾಖೆಗಳ ಸಮನ್ವಯತೆ ಕೊರತೆಯಿಂದ ಪಾಟ್ ಹೋಲ್ ಸಮಸ್ಯೆ ಆಗಿದೆ. ಕ್ಷೇತ್ರದಾದ್ಯಂತ ಇರುವ ಪಾಟ್ ಹೋಲ್ ಗಳನ್ನು ಶೀಘ್ರವಾಗಿ ಮುಚ್ಚಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

    ಬೆಸ್ಕಾಂ ಅವರು ಪೋಲ್ ಗಳನ್ನು ವ್ಯವಸ್ಥಿತವಾಗಿ ಮುಚ್ಚಿಸದೇ ಇರುವದರಿಂದ ಸಾಕಷ್ಟು ಸವಾರರು ಬಿದ್ದು, ಅನಾಹುತಗಳಾಗಿದೆ. ಇಲಾಖೆಗಳ ಸಮನ್ವಯತೆ ಕೊರತೆಯಿಂದ ರಸ್ತೆಗಳು ಹಾಳಾಗುತ್ತಿದೆ. ಸಾರ್ವಜನಿಕ ಹಣವೂ ಪೋಲಾಗುತ್ತದೆ. ಇದಕ್ಕೆ ಹೊಸ ವ್ಯವಸ್ಥೆ ತರಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. .

    ಸಂಬಂಧಿಸಿದ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಏಳು ದಿನಗಳ ಒಳಗಾಗಿ ಈ ಸಮಸ್ಯೆ ಪರಿಹಾರವಾಗದಿದ್ದರೆ ಎಲ್ಲರನ್ನೂ ಕಪ್ಪುಪಟ್ಟಿಗೆ ಸೇರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶ ಮಾಡಿದರು. ಬನಶಂಕರಿ ಬಸ್ ನಿಲ್ದಾಣದ ಒಳಚರಂಡಿ ಪೈಪ್ ಗಳನ್ನು ಜನವಸತಿ ಪ್ರದೇಶದ ಕಡೆ ಜೋಡಿಸಿರುವ ವಿಷಯ ತಿಳಿದು ಕೆಂಡಾಮಂಡಲರಾದ ಸಚಿವ ಅಶೋಕ್ ಶೀಘ್ರವಾಗಿ ಸಂಬಂಧ ಪಟ್ಟವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸೂಚನೆ ನೀಡಿದರು. ಇದನ್ನೂ ಓದಿ: ಕಷ್ಟಕರವಾದ ರಸ್ತೆಗಳು ಸುಂದರ ತಾಣಗಳಿಗೆ ದಾರಿ ಮಾಡಿಕೊಡುತ್ತೆ: ದೀಪಿಕಾ ದಾಸ್

    ಕ್ಷೇತ್ರದಾದ್ಯಂತ ಇರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಾನೇ ಖುದ್ದು ಪರಿಶೀಲನೆ ನಡೆಸುತ್ತೇನೆ. ಯಾವುದೇ ಸಮಸ್ಯೆಗಳಿದ್ದರೆ ತಕ್ಷಣವೇ ಪರಿಹಾರ ಮಾಡುತ್ತೇನೆ ಎಂದು ಹೇಳಿದರು.

    ಸಭೆಯಲ್ಲಿ ಕಂದಾಯ, ಬಿ ಡಬ್ಲು ಎಸ್ ಎಸ್ ಬಿ, ಬೆಸ್ಕಾಂ, ಆರೋಗ್ಯ, ಮಹಾನಗರಪಾಲಿಕೆ ಮುಂತಾದ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರು ಉಪಸ್ಥಿತರಿದ್ದರು. ಸಭೆಯ ನಂತರ ಅಶೋಕ್ ವಿಶೇಷಚೇತನರ ಬದುಕಿಗೆ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ತ್ರಿಚಕ್ರ ವಾಹನ ನೀಡಿದರು.