Tag: ಪದವೀಧರ

  • ಬಿಜೆಪಿ ಟಿಕೆಟ್ ನಿರಾಕರಿಸಿದ ಎಂಬಿಎ ಪದವೀಧರ

    ಬಿಜೆಪಿ ಟಿಕೆಟ್ ನಿರಾಕರಿಸಿದ ಎಂಬಿಎ ಪದವೀಧರ

    ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಬಂದಿರುವ ಟಿಕೆಟ್‍ನ್ನು ಯುವಕ ನಿರಾಕರಿಸಿದ್ದಾನೆ.

    ಮಣಿಕುಟ್ಟನ್‍ಪಣಿಯಣ್ (31) ಎಂಬಿಎ ಪದವೀಧರನಿಗೆ ಬಿಜೆಪಿ ಕಡೆಯಿಂದ ಟಿಕೆಟ್ ಕೊಟ್ಟಿದ್ದು, ಇದನ್ನು ಯುವಕ ನಿರಾಕರಿಸಿದ್ದಾನೆ. ಯುವಕ ನಾನು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳುವ ಮೂಲಕವಾಗಿ ಹೈಕಮಾಂಡ್‍ಗೆ ಶಾಕ್ ನೀಡಿದ್ದಾನೆ.

    ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ್ದ ಸಮುದಾಯಕ್ಕೆ ಮೀಸಲಾಗಿದ್ದ ಮನಂತವಾಡಿ ಕ್ಷೇತ್ರದಿಂದ ಮಣಿಕುಟ್ಟನ್‍ಗೆ ಟಿಕೆಟ್ ಘೋಷಣೆ ಮಾಡಲಾಗಿತ್ತು. ಮಣಿಕುಟ್ಟನ್ ಕೇರಳದ ಪಣಿಯಾ ಬುಡಕಟ್ಟು ಸಮುದಾಯದಲ್ಲಿ ಎಂಬಿಎ ಪದವಿಗಳಿಸಿದ ಮೊದಲ ವ್ಯಕ್ತಿ ಎಂದು ಬಿಜೆಪಿ ಹೇಳಿತ್ತು. ಆದರೆ ಅಭ್ಯರ್ಥಿ ಪಟ್ಟಿಯಲ್ಲಿರುವ ಮಣಿಕುಟ್ಟನ್ ಟಿಕೆಟ್ ನಿರಾಕರಿಸಿದ್ದಾನೆ.

    ಕೇಂದ್ರದ ನಾಯಕರು ನನ್ನನ್ನು ಬಿಜೆಪಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ಆದರೆ ನಾನು ಒಂದು ಉದ್ಯೋಗ ಪಡೆದು, ನನ್ನ ಕುಟುಂಬದೊಂದಿಗೆ ಇರಲು ಬಯಸುತ್ತೇನೆ. ಬಿಜೆಪಿ ನನಗೆ ನೀಡಿರುವ ಅವಕಾಶವನ್ನು ನಾನು ಸಂತೋಷದಿಂದ ನಿರಾಕರಿಸುತ್ತೇನೆ ಎಂದು ಮಣಿಕುಟ್ಟನ್ ಹೇಳಿದ್ದಾನೆ.

    ನಾನು ಸಾಮಾನ್ಯ ಪ್ರಜೆಯಾಗಿದ್ದು, ನನಗೆ ಟಿಕೆಟ್ ಘೋಷಣೆ ಮಾಡಿರುವುದು ಅಚ್ಚರಿಯಾಗಿದೆ. ನನಗೆ ಬಿಜೆಪಿ ಅಭ್ಯರ್ಥಿಯಾಗುವುದು ಇಷ್ಟವಿಲ್ಲ. ಆದರೆ ನಮ್ಮ ಸಮುದಾಯದಿಂದ ಅಭ್ಯರ್ಥಿಯನ್ನು ಆಯ್ಕೆ ಮಾಡಿರುವುದು ತುಂಬಾ ಸಂತೋಷವಾಗಿದೆ. ಈಗಾಗಲೇ ನಾಯಕರಿಗೆ ಫೋನ್ ಮೂಲಕ ಈ ಕುರಿತಾಗಿ ಹೇಳಿದ್ದೇನೆ ಎಂದು ಯುವಕ ಸ್ಪಷ್ಟಪಡಿಸಿದ್ದಾರೆ.

  • ವಿಶ್ವದ ಅತ್ಯಂತ ಕಿರಿಯ ಪದವೀಧರ ಆಗಲಿದ್ದ ಬಾಲಕ ವಿಶ್ವವಿದ್ಯಾಲಯ ಬಿಟ್ಟ

    ವಿಶ್ವದ ಅತ್ಯಂತ ಕಿರಿಯ ಪದವೀಧರ ಆಗಲಿದ್ದ ಬಾಲಕ ವಿಶ್ವವಿದ್ಯಾಲಯ ಬಿಟ್ಟ

    ಬ್ರಸೆಲ್ಸ್: ಬೆಲ್ಜಿಯಂನ ಒಂಬತ್ತು ವರ್ಷದ ಬಾಲಕ ಈ ತಿಂಗಳ ಅಂತ್ಯದ ವೇಳೆಗೆ ವಿಶ್ವದ ಕಿರಿಯ ಪದವೀಧರ ಆಗಲಿದ್ದ. ಆದರೆ ಈಗ ವಿಶ್ವವಿದ್ಯಾಲಯವನ್ನು ತೊರೆದು ಹೊರ ಬಂದಿದ್ದಾನೆ.

    ಬೆಲ್ಜಿಯಂನ ಒಂಬತ್ತು ವರ್ಷದ ಲಾರೆಂಟ್ ಸೈಮನ್ಸ್ ಒಂದು ವರ್ಷದಲ್ಲಿ ಪ್ರೌಢಶಾಲೆ ಶಿಕ್ಷಣ ಮುಗಿಸಿದ್ದ. ಬಳಿಕ 2018ರಲ್ಲಿ ನೆದರ್ಲೆಂಡ್‍ನ ಐಂಡ್‍ಹೋವನ್ ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಓದಲು ಸೇರಿ ವಿಶ್ವದ ಗಮನ ಸೆಳೆದಿದ್ದ.

    ಅಮೆರಿಕದ ಮೈಕೆಲ್ ಕೀರ್ನಿ ಪ್ರಸ್ತುತ ವಿಶ್ವದ ಅತ್ಯಂತ ಕಿರಿಯ ಪದವೀಧರರಾಗಿದ್ದು, ಅವರು 1994ರಲ್ಲಿ ತಮ್ಮ 10 ವರ್ಷ 4 ತಿಂಗಳ ವಯಸ್ಸಿನಲ್ಲಿ ಪದವಿಯನ್ನು ಪಡೆದಿದ್ದರು. ಈ ದಾಖಲೆಯನ್ನು ಲಾರೆಂಟ್ ಹಿಂದಿಕ್ಕಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ವಿಶ್ವವಿದ್ಯಾಲಯ ಪದವಿ ನೀಡಲು ವಿಳಂಬ ನೀತಿ ಅನುಸರಿಸುತ್ತಿರುವುದು ಲಾರೆಂಟ್ ಪೋಷಕರ ಅಸಮಾಧಾನಕ್ಕೆ ಕಾರಣವಾಗಿದೆ.

    ಲಾರೆಂಟ್ ಸೈಮನ್ಸ್ ಇಂಜಿನಿಯರಿಂಗ್ ವಿಶ್ವವಿದ್ಯಾಲಯ ಸೇರಿಕೊಂಡ 10 ತಿಂಗಳಲ್ಲೇ ಪರೀಕ್ಷೆ ಬರೆದು, ಡಿಸೆಂಬರ್ ಅಂತ್ಯದಲ್ಲಿ ಪದವಿ ಪಡೆಯಲು ನಿರ್ಧರಿಸಿದ್ದ. ಆದರೆ ಲಾರೆಂಟ್ ಅವರ ಎಲ್ಲಾ ಪರೀಕ್ಷೆಗಳು ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳುವುದಿಲ್ಲ. ಹೀಗಾಗಿ ಅವರು ಮುಂದಿನ ವರ್ಷ ಜುಲೈನಲ್ಲಿ ಪದವಿ ಪಡೆಯಬಹುದು ಎಂದು ವಿಶ್ವವಿದ್ಯಾಲಯ ಹೇಳಿದೆ. ವಿಶ್ವವಿದ್ಯಾನಿಲಯವು ಪದವಿ ನೀಡುವ ದಿನಾಂಕವನ್ನು ಬದಲಾಯಿಸಿದ್ದು ಲಾರೆಂಟ್ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನು ವಿರೋಧಿಸಿ ಅವರು ಮಗನನ್ನು ವಿಶ್ವವಿದ್ಯಾನಿಲಯ ಬಿಡಿಸಲು ನಿರ್ಧರಿಸಿದರು. ಜೊತೆಗೆ ವಿಶ್ವವಿದ್ಯಾಲಯದ ವಿರುದ್ಧ ಪ್ರತಿಭಟನೆ ನಡೆದಿದ್ದಾರೆ.

    ಈ ವಿಚಾರವಾಗಿ ಲಾರೆಂಟ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಇ-ಮೇಲ್‍ನ ಸ್ಕ್ರೀನ್ಶಾಟ್ ಹಂಚಿಕೊಂಡು, ನನ್ನ ಅಧ್ಯಯನ ಉತ್ತಮವಾಗಿ ನಡೆಯುತ್ತಿದ್ದು, ಡಿಸೆಂಬನರ್ ನಲ್ಲಿ ಪರೀಕ್ಷೆ ಕೊನೆಗೊಳ್ಳಬೇಕಿತ್ತು. ಆದರೆ ಪದವಿ ಪ್ರಮಾಣ ಪತ್ರ ನೀಡಲು ವಿಶ್ವವಿದ್ಯಾಲಯ ಸತಾಯಿಸುತ್ತಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

    ಈ ಕುರಿತು ಮಾತನಾಡಿರುವ ಲಾರೆಂಟ್ ಅವರ ತಂದೆ ಅಲೆಗ್ಸಾಂಡರ್, ಕಳೆದ ತಿಂಗಳವರೆಗೆ ಎಲ್ಲವೂ ಚೆನ್ನಾಗಿ ನಡೆದಿತ್ತು. ಆದರೆ ಇದ್ದಕ್ಕಿದ್ದಂತೆ ವಿಶ್ವವಿದ್ಯಾಲಯವು ಪದವಿ ಪ್ರಮಾಣ ಪತ್ರ ನೀಡಲು ಆರು ತಿಂಗಳ ವಿಳಂಬ ನೀತಿ ಅನುಸರಿಸಿತ್ತಿದೆ. ವಿಶ್ವವಿದ್ಯಾಲಯದ ಈ ನಡೆ ಸರಿಯಲ್ಲ. ಎಲೆಕ್ಟ್ರಿಕಲ್ ಇಂಜಿನಿಯರಿಂಗ್‍ನಲ್ಲಿ ಪದವಿ ಪಡೆದ ಬಳಿಕ ಮಗನಿಗೆ ಪಿಎಚ್‍ಡಿ ಮಾಡಿಸುವ ಯೋಜನೆ ಇತ್ತು. ಲಾರೆಂಟ್‍ಗೆ ವಿಶ್ವವಿದ್ಯಾಲಯಗಳಿಂದ ಆಫರ್ ಬಂದಿದೆ. ಈ ಬಗ್ಗೆ ನಾವು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

  • ಕುಮಾರಸ್ವಾಮಿಗಾಗಿ ಎದುರು ನೋಡುತ್ತಾ ಕಾಯುತ್ತಿದ್ದಾರೆ ಚಿಕ್ಕಮಗ್ಳೂರಿನ ಪದವೀಧರ!

    ಕುಮಾರಸ್ವಾಮಿಗಾಗಿ ಎದುರು ನೋಡುತ್ತಾ ಕಾಯುತ್ತಿದ್ದಾರೆ ಚಿಕ್ಕಮಗ್ಳೂರಿನ ಪದವೀಧರ!

    ಚಿಕ್ಕಮಗಳೂರು: ಕಳೆದ ನಾಲ್ಕೈದು ವರ್ಷದಿಂದ ಬಿಪಿ ಹಾಗೂ ಶುಗರ್‍ನಿಂದ ಬಳಲುತ್ತಿರೋ 24 ವರ್ಷದ ಪದವೀಧರ ಯುವಕನೊಬ್ಬ ನಾನು ಮೃತಪಡುವ ಮುನ್ನ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನ ನೋಡಬೇಕೆಂದು ಹಂಬಲಿಸುತ್ತಿದ್ದಾರೆ.

    ಜಿಲ್ಲೆಯ ಕಡೂರು ತಾಲೂಕಿನ ಯಗಟಿ ಹೋಬಳಿಯ ಹಿರೇಗರ್ಜೆ ಗ್ರಾಮದ ಜಗದೀಶ್ ಕಳೆದ ನಾಲ್ಕೈದು ವರ್ಷಗಳಿಂದ ಬಿಪಿ ಹಾಗೂ ಶುಗರ್‍ನಿಂದ ಬಳಲುತ್ತಿದ್ದಾರೆ. 80 ಕೆ.ಜಿ. ಇದ್ದ ಈ ಯುವಕ ಇಂದು ಇರೋದು 15-16 ಕೆ.ಜಿ. ಮಲಗಿದ್ದಲ್ಲೇ ಎಲ್ಲಾ. ಸದಾ ಇವರ ಸೇವೆಗೆ ಮನೆಯಲ್ಲಿ ಒಬ್ಬರು ಇರಲೇಬೇಕು.

    ಕೂಲಿ ಮಾಡುವ ಹೆತ್ತವರು ನಾಲ್ಕೈದು ಲಕ್ಷ ಖರ್ಚು ಮಾಡಿದ್ದರೂ ಮಗನನನ್ನ ಹುಷಾರು ಮಾಡಲು ಸರಿಯಾಗದೆ ಕೈಚೆಲ್ಲಿ ಕೂತಿದ್ದಾರೆ. ದಿನದಿಂದ ದಿನಕ್ಕೆ ಆರೋಗ್ಯದ ಸ್ಥಿತಿ ಹದಗೆಡ್ತಿರೋ ಜಗದೀಶ್‍ಗೆ ಸಾಯುವ ಮುನ್ನ ಕುಮಾರಸ್ವಾಮಿಯನ್ನ ನೋಡುವ ಹಂಬಲ ವ್ಯಕ್ತಪಡಿಸಿದ್ದಾರೆ.

    ನಾನು ಸಾಯುವ ಮುನ್ನ ಶಾಸಕ ವೈ.ಎಸ್.ವಿ ದತ್ತ ಹಾಗೂ ಕುಮಾರಸ್ವಾಮಿಯನ್ನ ನೋಡಬೇಕೆಂಬ ಆಸೆ ಹೊಂದಿದ್ದೇನೆ. ಆದ್ರೆ, ಶಾಸಕ ದತ್ತ ಅವರು ಬಂದು ನೋಡಿಕೊಂಡು ಹೋಗಿದ್ದಾರೆ. ಇದೀಗ ಕೊನೆ ಬಾರಿ ಕುಮಾರಸ್ವಾಮಿಯನ್ನು ನೋಡಬೇಕೆಂದು ಹಂಬಲಿಸುತ್ತಿದ್ದಾರೆ.