Tag: ಪಥಸಂಚಲನ

  • ಕೋಲಾರದ ಮಾಲೂರಿನಲ್ಲಿ ಯಶಸ್ವಿ RSS ಶತಾಬ್ದಿ ಪಥಸಂಚಲನ – ಮಹಿಳೆಯರಿಂದ ಗಣ ವೇಷಧಾರಿಗಳ ಮೇಲೆ ಪುಷ್ಪಾರ್ಚನೆ

    ಕೋಲಾರದ ಮಾಲೂರಿನಲ್ಲಿ ಯಶಸ್ವಿ RSS ಶತಾಬ್ದಿ ಪಥಸಂಚಲನ – ಮಹಿಳೆಯರಿಂದ ಗಣ ವೇಷಧಾರಿಗಳ ಮೇಲೆ ಪುಷ್ಪಾರ್ಚನೆ

    ಕೋಲಾರ: ರಾಜ್ಯದಲ್ಲಿ ಹಲವು ಗೊಂದಲ, ಪರ-ವಿರೋಧದ ನಡುವೆಯೂ ಕೋಲಾರ (Kolar) ಜಿಲ್ಲೆ ಮಾಲೂರು (Malur) ಪಟ್ಟಣದಲ್ಲಿ ಆರ್‌ಎಸ್‌ಎಸ್ ಪಥಸಂಚಲನ (RSS Parade) ಅದ್ಧೂರಿಯಾಗಿ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಜಿಲ್ಲಾಡಳಿತದ ಅನುಮತಿ ಪಡೆದು ಸರ್ಕಾರಿ ಜೂನಿಯರ್ ಕಾಲೇಜು ಮೈದಾನದ ಕ್ರೀಡಾಂಗಣದಲ್ಲೇ ಜಮಾವಣೆಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಪಥಸಂಚಲನ ನಡೆಸಲಾಯಿತು.

    ಹಲವು ಗೊಂದಲ ವಾದ-ವಿವಾದಗಳ ನಡುವೆಯೂ ಇಂದು ಕೋಲಾರ ಜಿಲ್ಲೆ ಮಾಲೂರು ಪಟ್ಟಣದಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಅನುಮತಿ ಪಡೆದು ಆರ್‌ಎಸ್‌ಎಸ್ ಪಥಸಂಚಲನ ಎಂದಿಗಿಂತಲೂ ಅದ್ಧೂರಿಯಾಗಿ ನಡೆಯಿತು. ಸುಮಾರು ಮೂರು ಸಾವಿರಕ್ಕೂ ಅಧಿಕ ಆರ್‌ಎಸ್‌ಎಸ್ ಗಣವೇಷಧಾರಿಗಳು ಜಮಾವಣೆಗೊಂಡು ನಗರದಲ್ಲಿ ನಾಲ್ಕು ಕಿ.ಮೀ ಪಥಸಂಚಲನಕ್ಕೆ ಅನುಮತಿ ಪಡೆದು ಪೊಲೀಸರು ನೀಡಿದ ರೂಟ್ ಪ್ರಕಾರವಾಗಿಯೇ ಪಥಸಂಚಲನ ನಡೆಸಲಾಯಿತು.

    ಮೊದಲಿಗೆ ಮಾಲೂರು ಹೊಂಡಾ ಸ್ಟೇಡಿಯಂನಲ್ಲಿ ಜಮಾವಣೆಗೊಂಡು ನಂತರ ಆರ್‌ಎಸ್‌ಎಸ್ ಗೀತೆ ಹಾಡಿ ಅಲ್ಲಿಂದ ಮಾಲೂರಿನ ಬಿಇಓ ಕಚೇರಿ ವೃತ್ತ, ಕುವೆಂಪು ವೃತ್ತ, ಧರ್ಮರಾಯ ಸ್ವಾಮಿ ದೇವಾಲಯ, ಅಗ್ರಹಾರ ಬೀದಿ, ಕುಂಬಾರಪೇಟೆ ವೃತ್ತ, ದೊಡ್ಡಪೇಟೆ, ಮಹಾರಾಜ ಸರ್ಕಲ್, ಬಾಬುರಾವ್ ರಸ್ತೆ, ಕೆಂಪೇಗೌಡ ಸರ್ಕಲ್, ಮಾರಿಕಾಂಭಾ ಸರ್ಕಲ್, ಬ್ರಹ್ಮಕುಮಾರಿ ರಸ್ತೆ, ಅರಳೇರಿ ರಸ್ತೆಯ ಮೂಲಕ ಮತ್ತೆ ಹೋಂಡಾ ಸ್ಟೇಡಿಯಂವರೆಗೆ ನಾಲ್ಕು ಕಿ.ಮೀ ಪಥಸಂಚಲನ ನಡೆಯಿತು. ಪಥಸಂಚಲನದ ದಾರಿಯುದ್ದಕ್ಕೂ ಸಾವಿರಾರು ಜನರು ರಸ್ತೆ ಬದಿಯಲ್ಲಿ ನಿಂತು ಪಥಸಂಚಲನವನ್ನು ಕಣ್ತುಂಬಿಕೊಂಡರು. ಜನರು ತಮ್ಮ ಮೊಬೈಲ್‌ಗಳಲ್ಲಿ ಫೋಟೋ ವಿಡಿಯೋ ಮಾಡಿಕೊಂಡರು. ಇನ್ನು ಪಥಸಂಚಲನ ಸಾಗಿದ ದಾರಿಯುದ್ದಕ್ಕೂ ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಪಥ ಸಂಚಲನದ ಗಣವೇಷಧಾರಿಗಳ ಮೇಲೆ ಹೂವಿನ ಸುರಿಮಳೆಗೈದರು. ಇನ್ನು ನಗರದ ಮಸೀದಿ ಬೀದಿಯಲ್ಲೂ ಕೂಡಾ ಜನರು ಗಣವೇಷಧಾರಿಗಳು ಸಾಗುವ ರಸ್ತೆಯಲ್ಲಿ ಹೂ ಹಾಕಿ ಸ್ವಾಗತಿಸಿದರು. ಪಥಸಂಚಲನದ ನಂತರ ಮಾತನಾಡಿದ ಮಾಜಿ ಸಂಸದ ಮುನಿಸ್ವಾಮಿ ಯಾರು ಎಷ್ಟೇ ವಿರೋಧ ಮಾಡಿದಷ್ಟು ಜನ ಬೆಂಬಲ ಜಾಸ್ತಿಯಾಗುತ್ತದೆ, ಯಾರೋ ಕೆಲವು ಕುನ್ನಿಗಳು ಆರ್‌ಎಸ್‌ಎಸ್ ಬಗ್ಗೆ ಮಾತನಾಡುತ್ತಾರೆ, ಜನರ ಬೆಂಬಲ ಆರ್‌ಎಸ್‌ಎಸ್ ಪರ ಇದೆ ಅನ್ನೋದಕ್ಕೆ ಮಾಲೂರಿನ ಪಥಸಂಚಲನವೇ ಸಾಕ್ಷಿ ಎಂದರು.

    ಇನ್ನು ಆರ್‌ಎಸ್‌ಎಸ್ ಮೊದಲಿನಿಂದಲೂ ರಾಜ್ಯದಲ್ಲಿ ಹಲವು ಗೊಂದಲಗಳಿದ್ದರೂ ಕೂಡಾ ಜಿಲ್ಲಾಡಳಿತದ ಅನುಮತಿ ಪಡೆದು, ಪೊಲೀಸ್ ಇಲಾಖೆಯ ಅನುಮತಿ ಪಡೆದು ಯಶಸ್ವಿಯಾಗಿ ನಿರೀಕ್ಷೆಗೂ ಮೀರಿದ ಗಣವೇಷಧಾರಿಗಳನ್ನು ಸೇರಿಸಿಕೊಂಡು ಪಥಸಂಚಲ ನಡೆಸಲಾಗಿದೆ. ಆರ್‌ಎಸ್‌ಎಸ್ ಅಸ್ಥಿತ್ವಕ್ಕೆ ಬಂದು ನೂರು ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಶತಾಬ್ದಿ ಪಥಸಂಚಲನ ನಡೆಸುವ ಮೂಲಕ ದೇಶದಾಂದ್ಯಂತ ಒಂದು ಸಂಚಲನ ಮೂಡಿಸುವ ಪ್ರಯತ್ನಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಪರೋಕ್ಷವಾಗಿ ಮೂಗುದಾರ ಹಾಕುವ ಪ್ರಯತ್ನ ಮಾಡಿತಾದರೂ, ಇಂದು ಮಾಲೂರಿನಲ್ಲಿ ಪೊಲೀಸ್ ಸರ್ಪಗಾವಲಿನಲ್ಲಿ ಯಶಸ್ವಿಯಾಗಿ ನಡೆಯಿತು. ಇನ್ನು ಪಥಸಂಚಲದಲ್ಲಿ ವಿಶೇಷ ಆಕರ್ಷಣೆ ಎನ್ನುವಂತೆ ಪುಟಾಣಿ ಮಕ್ಕಳು ಕೂಡಾ ಗಣವೇಷ ಧರಿಸಿ ಕೋಲು ಹಿಡಿದು ಪಥಸಂಚಲದಲ್ಲಿ ಸಾಗಿ ಗಮನ ಸೆಳೆದರು. ಇನ್ನು ಪಥಸಂಚಲನದಲ್ಲಿ ಮಾಜಿ ಸಚಿವ ಕೃಷ್ಣಯ್ಯಶೆಟ್ಟಿ, ಮಾಜಿ ಶಾಸಕ ಮಂಜುನಾಥಗೌಡ, ಮಾಜಿ ಸಂಸದ ಮುನಿಸ್ವಾಮಿ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

  • ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಭಾಗಿ – ಅಡುಗೆ ಸಿಬ್ಬಂದಿಗೆ ಗೇಟ್‌ಪಾಸ್‌

    ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಭಾಗಿ – ಅಡುಗೆ ಸಿಬ್ಬಂದಿಗೆ ಗೇಟ್‌ಪಾಸ್‌

    ಬೀದರ್‌: ಆರ್‌ಎಸ್‌ಎಸ್ (RSS) ಪಥಸಂಚಲನದಲ್ಲಿ ಭಾಗಿಯಾದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಅಡುಗೆ ಸಿಬ್ಬಂದಿಗೆ ಸರ್ಕಾರ ಗೇಟ್‌ಪಾಸ್ ನೀಡಿದ ಘಟನೆ ಬಸವ ಕಲ್ಯಾಣದಲ್ಲಿ ನಡೆದಿದೆ.

    ಬಸವ ಕಲ್ಯಾಣದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಅಡುಗೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಮೋದ್ ತಂದೆ ಅಶೋಕ ಕುಮಾರ್‌ ಅವರನ್ನು ಕೆಲಸದಿಂದ ತಾಲೂಕು ಆಡಳಿತ ಬಿಡುಗಡೆಗೊಳಿಸಿದೆ. ಇದನ್ನೂ ಓದಿ:  ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಭಾಗಿಯಾಗಿ ಅಮಾನತುಗೊಂಡಿರುವ ಪಿಡಿಒಗೆ ಮತ್ತೊಂದು ಸಂಕಷ್ಟ

     

    ಬಸವಕಲ್ಯಾಣದಲ್ಲಿ ನಡೆದ ಆರ್‌ಎಸ್‌ಎಸ್ ಪಥ ಸಂಚಲನದಲ್ಲಿ ಸಿಬ್ಬಂದಿ ಪ್ರಮೋದ್ ಭಾಗಿಯಾಗಿದ್ದು ಸರ್ಕಾರದಿಂದ ವೇತನ ಪಡೆದು ಯಾವುದೇ ಸಂಘ ಸಂಸ್ಥೆಯಲ್ಲಿ ಭಾಗಿಯಾಗಬಾರದೆಂದು ಆದೇಶ ಪ್ರತಿಯಲ್ಲಿ ಉಲ್ಲೇಖಿಸಿದೆ.

    ಬಸವಕಲ್ಯಾಣದಲ್ಲಿ ನಡೆದ ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಸುಮಾರು 20ಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ನಡೆದ ಪಥಸಂಚಲನದಲ್ಲಿಹಲವು ಸರ್ಕಾರಿ ಸಿಬ್ಬಂದಿ, ಅಧಿಕಾರಿಗಳು ಭಾಗಿಯಾಗಿದ್ದಾರೆ.

  • ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಭಾಗಿಯಾಗಿ ಅಮಾನತುಗೊಂಡಿರುವ ಪಿಡಿಒಗೆ ಮತ್ತೊಂದು ಸಂಕಷ್ಟ

    ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಭಾಗಿಯಾಗಿ ಅಮಾನತುಗೊಂಡಿರುವ ಪಿಡಿಒಗೆ ಮತ್ತೊಂದು ಸಂಕಷ್ಟ

    ರಾಯಚೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪಥಸಂಚಲನದಲ್ಲಿ ಗಣವೇಷಧಾರಿಯಾಗಿ ಭಾಗವಹಿಸಿ ಅಮಾನತುಗೊಂಡಿರುವ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ(PDO) ಪ್ರವೀಣ್‌ ಕುಮಾರ್‌ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

    ಲಿಂಗಸುಗೂರು ತಾಲ್ಲೂಕಿನ ರೋಡಲಬಂಡಾ ಗ್ರಾಮದಲ್ಲಿ ಪಿಡಿಒ ಆಗಿ ಕೆಲಸ ಮಾಡುತ್ತಿರುವ ಪ್ರವೀಣ್‌ ಮೇಲೆ ಕರ್ತವ್ಯ ಲೋಪ, ಹಣ ದುರ್ಬಳಕೆಯ ಆರೋಪ ಕೇಳಿಬಂದಿದೆ.

    ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್ ಆಪ್ತ ಸಹಾಯಕನಾದ ನಂತರ ಪ್ರವೀಣ್‌ ಅವರನ್ನು 2023ರ ಜೂನ್ 15 ರಂದು ಪಿಡಿಓ ಕರ್ತವ್ಯದಿಂದ ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದ್ದರು.

    ಈ ಆದೇಶದ ಅನ್ವಯ ಜೂನ್ 30 ರಂದು ಗ್ರಾಪಂಗಳ ಕಾರ್ಯಭಾರ ಹಸ್ತಾಂತರವಾಗಿತ್ತು. ಈ ಮಧ್ಯೆ ಜೂನ್ 25 ರಿಂದ 30 ರ ವರೆಗೆ ಎರಡು ಪಂಚಾಯತಿಯಿಂದ 14. 38 ಲಕ್ಷ ರೂ. ಅನುದಾನ ಖರ್ಚು ಮಾಡಿದ್ದಾರೆ. ಗಣದಿನ್ನಿ ಪಂಚಾಯತಿಯಲ್ಲಿ 5.18 ಲಕ್ಷ ರೂ., ಹಿರೇಹಣಗಿ ಪಂಚಾಯತ್‌ನಲ್ಲಿ 9.20 ಲಕ್ಷ ರೂ. ಖರ್ಚು ಮಾಡಿದ್ದಾರೆ.  ಇದನ್ನೂ ಓದಿ:  RSS ಪಥಸಂಚಲನದಲ್ಲಿ ಭಾಗವಹಿಸಿದ್ದಕ್ಕೆ PDO ಅಮಾನತು – ಸರ್ಕಾರದ ಕ್ರಮ ಖಂಡಿಸಿ ಆದೇಶ ಹಿಂಪಡೆಯುವಂತೆ ಬಿಜೆಪಿ ಶಾಸಕ ಒತ್ತಾಯ

     
    15 ನೇ ಹಣಕಾಸು ಯೋಜನೆಯ ಅನುದಾನದ ಅಡಿ ಬೀದಿ ದೀಪ, ಸ್ಯಾನಿಟರಿ ಸಾಮಗ್ರಿ, ಪಂಪ್ ಸೇರಿ ಹಲವು ಸಾಮಗ್ರಿಗಳ ಖರೀದಿ ಮಾಡಿದ್ದಾರೆ. ಬೇರೆ ಕಡೆ ನಿಯೋಜನೆಯಾಗಿದ್ದರೂ ಪಿಡಿಓ ಸ್ಥಾನದಲ್ಲಿ ಉಳಿದು ಅನುದಾನದ ಹಣವನ್ನು ದುರ್ಬಳಕೆ ಮಾಡಿದ್ದಾರೆ ಎಂಬ ಆರೋಪ ಪ್ರವೀಣ್‌ ಮೇಲೆ ಬಂದಿದೆ. ಈ ಸಂಬಂಧ ಸಿರವಾರ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಯಿಂದ ಜಿಲ್ಲಾ ಪಂಚಾಯತ್‌ ಸಿಇಓಗೆ ವರದಿ ಸಲ್ಲಿಕೆಯಾಗಿದ್ದು ಪರಿಶೀಲನೆ ಹಂತದಲ್ಲಿದೆ.

    ಅಕ್ಟೋಬರ್12 ರಂದು ಲಿಂಗಸುಗೂರು ಪಟ್ಟಣದಲ್ಲಿ ಆರ್‌ಎಸ್‌ಎಸ್‌ ಶತಮಾನೋತ್ಸವದ ಹಿನ್ನೆಲೆಯಲ್ಲಿ ಪಂಥಸಂಚಲನ ಕಾರ್ಯಕ್ರಮ ನಡೆದಿತ್ತು. ಈ ಪಥಸಂಚಲನದಲ್ಲಿ ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಗಣವೇಷ ಧರಿಸಿ ಪ್ರವೀಣ್ ಭಾಗವಹಿಸಿದ್ದರು.

    ಕರ್ನಾಟಕ ಸಿವಿಲ್ ಸೇವಾ ನಿಯಮಗಳ ಉಲ್ಲಂಘನೆ ಹಾಗೂ ಸರ್ಕಾರಿ ನೌಕರನ ತರವಲ್ಲದ ರೀತಿ ನಡೆದುಕೊಂಡಿದ್ದಾರೆ ಎಂದು ಹೇಳಿ ಪ್ರವೀಣ್ ಕುಮಾರ್ ಅವರನ್ನು ಪಂಚಾಯತ್ ರಾಜ್ ಇಲಾಖೆ ಆಯುಕ್ತೆ ಡಾ.ಅರುಂಧತಿ ಅವರು ಇಲಾಖಾ ತನಿಖೆ ಕಾಯ್ದಿರಿಸಿ ಅಮಾನತು ಮಾಡಿದ್ದಾರೆ.

  • ಸೇಡಂ ಆರ್‌ಎಸ್ಎಸ್ ಪಥಸಂಚಲನದಲ್ಲಿ ಸರ್ಕಾರಿ ವೈದ್ಯ ಭಾಗಿ

    ಸೇಡಂ ಆರ್‌ಎಸ್ಎಸ್ ಪಥಸಂಚಲನದಲ್ಲಿ ಸರ್ಕಾರಿ ವೈದ್ಯ ಭಾಗಿ

    ಕಲಬುರಗಿ: ಸೇಡಂನಲ್ಲಿ (Sedam) ಭಾನುವಾರ ನಡೆದ ಆರ್‌ಎಸ್ಎಸ್ (RSS Route March) ಪಥಸಂಚಲನ ಕಾರ್ಯಕ್ರಮದಲ್ಲಿ ಸರ್ಕಾರಿ ವೈದ್ಯರೊಬ್ಬರು ಭಾಗಿಯಾಗಿದ್ದಾರೆ.

    ಸೇಡಂ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ ನಾಗರಾಜ್ ಮನ್ನೆ ಗಣವೇಶಧಾರಿಯಾಗಿ ಪಥ ಸಂಚಲನದಲ್ಲಿ ಭಾಗಿಯಾಗಿದ್ದಾರೆ. ಪಥಸಂಚಲನದಲ್ಲಿ ಭಾಗಿಯಾದ ವೈದ್ಯರ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದನ್ನೂ ಓದಿ:  ಆರ್‌ಎಸ್‌ಎಸ್‌ ವಿರುದ್ಧದ ಸಂಘರ್ಷದಲ್ಲಿ ಪ್ರಿಯಾಂಕ್‌ ಒಂಟಿ – ಕಾಂಗ್ರೆಸ್‌ನಲ್ಲೇ ಅಪಸ್ವರ!

    ಅಕ್ಟೋಬರ್12 ರಂದು ರಾಯಚೂರಿನ ಲಿಂಗಸುಗೂರು ಪಟ್ಟಣದಲ್ಲಿ ನಡೆದ ಪಥಸಂಚಲನ ಕಾರ್ಯಕ್ರಮದಲ್ಲಿರೋಡಲಬಂಡಾ ಗ್ರಾಮದ ಪಿಡಿಒ ಪ್ರವೀಣ್ ಕುಮಾರ್ ಭಾಗವಹಿಸಿದ್ದಕ್ಕೆ ಚಾಯತ್ ರಾಜ್ ಇಲಾಖೆ ಆಯುಕ್ತೆ ಡಾ.ಅರುಂಧತಿ ಅವರು ಇಲಾಖಾ ತನಿಖೆ ಕಾಯ್ದಿರಿಸಿ ಅಮಾನತು ಮಾಡಿದ್ದರು. ಇದನ್ನೂ ಓದಿ:  RSS ಪಥಸಂಚಲನದಲ್ಲಿ ಭಾಗಿ- ರಾಯಚೂರಿನ PDO ಅಮಾನತು

    ಕರ್ನಾಟಕ ಸಿವಿಲ್ ಸೇವಾ ನಿಯಮಗಳ ಉಲ್ಲಂಘನೆ ಹಾಗೂ ಸರ್ಕಾರಿ ನೌಕರನ ತರವಲ್ಲದ ರೀತಿ ನಡೆದುಕೊಂಡಿದ್ದರಿಂದ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿತ್ತು.

  • 75th Republic Day: ದೆಹಲಿಯಲ್ಲಿ ನಡೆಯುವ ಪಥಸಂಚಲನಕ್ಕೆ ಬೆಳಗಾವಿ ಮೂಲದ ಯೋಧ ಆಯ್ಕೆ

    75th Republic Day: ದೆಹಲಿಯಲ್ಲಿ ನಡೆಯುವ ಪಥಸಂಚಲನಕ್ಕೆ ಬೆಳಗಾವಿ ಮೂಲದ ಯೋಧ ಆಯ್ಕೆ

    ಬೆಳಗಾವಿ: ದೇಶಾದ್ಯಂತ ಇಂದು 75ನೇ ಗಣರಾಜ್ಯೋತ್ಸವವನ್ನು (75th Republic Day) ಆಚರಿಸಲಾಗುತ್ತಿದೆ. ಅದರಂತೆ ದೆಹಲಿಯಲ್ಲಿ ನಡೆಯಲಿರುವ ಪಥಸಂಚಲನಕ್ಕೆ ಬೆಳಗಾವಿ ಮೂಲದ ಯೋಧರೊಬ್ಬರು ಆಯ್ಕೆಯಾಗಿದ್ದಾರೆ.

    ಹೌದು. ಬೆಳಗಾವಿ (Belagavi) ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಿಕಟ್ಟಿ ಗ್ರಾಮದ ಯೋಧ ಅದೃಶ್ಯ ಮಾವಿನಕಟ್ಟಿ ಆಯ್ಕೆಯಾಗಿದ್ದಾರೆ. ಇವರು ಮದ್ರಾಸ್ ರೆಜಿಮೆಂಟ್ ಕ್ರೊಪ ವೆಲ್ಲಿಂಗ್ಟನ್ ನಲ್ಲಿ ತರಬೇತಿ ಪಡೆದಿದ್ದಾರೆ.

    ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಎನ್ ಸಿಸಿ (NCC) ತರಬೇತಿ ಕೂಡ ಪಡೆದಿದ್ದಾರೆ. ಇದೀಗ ದೆಹಲಿಯಲ್ಲಿ ನಡೆಯುವ ಪೆರೇಡ್‌ನಲ್ಲಿ ಅದೃಶ್ಯ ಭಾಗಿಯಾಗಿರುವುದು ಕುಟುಂಬಸ್ಥರು ಸೇರಿದಂತೆ ಎಲ್ಲರಿಗೂ ಸಂತಸ ತಂದಿದೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಜಾಗದಲ್ಲೇ ಹಿಂದೂ ದೇವಾಲಯವಿತ್ತು – ಪುರಾತತ್ವ ಇಲಾಖೆ ವರದಿ ಬಹಿರಂಗ

  • 74th Republic Day: ದೆಹಲಿಯ ಕರ್ತವ್ಯ ಪಥ್‌ನಲ್ಲಿ‌ ಹಲವು ಪ್ರಥಮಗಳಿಗೆ ಸಾಕ್ಷಿಯಾದ ಪರೇಡ್‌

    74th Republic Day: ದೆಹಲಿಯ ಕರ್ತವ್ಯ ಪಥ್‌ನಲ್ಲಿ‌ ಹಲವು ಪ್ರಥಮಗಳಿಗೆ ಸಾಕ್ಷಿಯಾದ ಪರೇಡ್‌

    – ಗಮನ ಸೆಳೆದ ಸಿಆರ್‌ಪಿಎಫ್‌ ಮಹಿಳಾ ತುಕಡಿ, ಅಗ್ನಿವೀರರು
    – ಈಜಿಪ್ಟ್‌ ಸೇನಾ ತುಕಡಿ ಭಾಗಿ
    – ಆಕಾಶದಲ್ಲಿ ಚಮತ್ಕಾರ ಮಾಡಿ ಯುದ್ಧ ವಿಮಾನ, ಹೆಲಿಕಾಪ್ಟರ್‌ಗಳು

    ನವದೆಹಲಿ: ದೇಶಾದ್ಯಂತ 74ನೇ ಗಣರಾಜ್ಯೋತ್ಸವ (74th Republic Day) ಆಚರಣೆ ಮಾಡಲಾಗುತ್ತಿದೆ. ದೆಹಲಿಯ (New Delhi) ಬ್ರಿಟಿಷರ ಕಾಲದ ರಾಜಪಥ್‌ ಹೆಸರು ಕರ್ತವ್ಯ ಪಥ್ (Kartavya Path) ಎಂದು ಬದಲಾದ ನಂತರ ಈ ಬಾರಿ ಗಣರಾಜ್ಯೋತ್ಸವ ಹೊಸತನ ಹಾಗೂ ಹಲವು ಪ್ರಥಮಗಳಿಗೆ ಸಾಕ್ಷಿಯಾಯಿತು. ದೆಹಲಿಯ ಕರ್ತವ್ಯ ಪಥದಲ್ಲಿ ಹಲವು ವಿಶೇಷತೆಗಳೊಂದಿಗೆ ಅದ್ದೂರಿ ಪರೇಡ್ ನಡೆಯಿತು. ಕಣ್ಮಮನ ಸೆಳೆಯುವ ಟ್ಯಾಬ್ಲೊಗಳು, ಅತ್ಯಾಕರ್ಷಕ ಪಥ ಸಂಚಲನ ಎಲ್ಲರ ಗಮನ ಸೆಳೆಯಿತು.

     

    ರಾಷ್ಟ್ರಪತಿ ದ್ರೌಪದಿ ಮುರ್ಮು, ಈಜಿಪ್ಟ್‌ನಿಂದ ಬಂದಿದ್ದ ಅತಿಥಿ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಪ್ರಧಾನಿ, ನರೇಂದ್ರ ಮೋದಿ ಸಮ್ಮುಖದಲ್ಲಿ ರಾಷ್ಟ್ರ ಧ್ವಜ ಹಾರಿಸುವ ಮೂಲಕ ಪರೇಡ್‌ಗೆ ಚಾಲನೆ ನೀಡಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಪರೇಡ್‌ ವೀಕ್ಷಿಸಿದರು.

    ಹಲವು ಪ್ರಥಮಗಳ ವಿಶೇಷತೆ
    ಪರೇಡ್ ಹಲವು ಹೊಸತನಕ ಸಾಕ್ಷಿಯಾಗಿತ್ತು‌. ಅಗ್ನಿವೀರರು ಪಥ್ ಸಂಕಲನದಲ್ಲಿ ಭಾಗಿಯಾಗದರೆ, ಇದೇ ಮೊದಲ ಬಾರಿಗೆ ಈಜಿಪ್ಟ್ ಸೇನಾ ತುಕಡಿ ಕೂಡಾ ಭಾಗಿಯಾಗಿತ್ತು. ಗುಲಾಮಿ ಮಾನಸಿಕತೆಯಿಂದ ಹೊರ ಬರುವ ಭಾಗವಾಗಿ 25 ಪೌಂಡರ್ ಗನ್‌ಗಳ ಬದಲು ಭಾರತದಲ್ಲಿ ನಿರ್ಮಿತವಾದ 105 ಎಂಎಂ ಇಂಡಿಯನ್ ಫಿಲ್ಡ್ ಗನ್‌ಗಳಿಂದ 21 ಗನ್ ಸೆಲ್ಯೂಟ್ ನೀಡಲಾಯಿತು. ಒಟ್ನಲ್ಲಿ ಈ ಬಾರಿಯ ಪರೇಡ್ ಭಾರತದ ನಾರಿ ಶಕ್ತಿ ಮತ್ತು ಆತ್ಮ ನಿರ್ಭರ್ ಭಾರತ್ ಶಕ್ತಿ ಸಂದೇಶ ಸಾರಿದರೆ, ವಿವಿಧತೆಯಲ್ಲಿ ಏಕತೆಗೊಂಡಿರುವ ಭಾರತದ ಸಂಸ್ಕೃತಿಯನ್ನು ಅನಾವರಣಗೊಳಿಸಿತು.

    ಪರೇಡ್ ಗೆ ಚಾಲನೆ ನೀಡುತ್ತಿದ್ದಂತೆ ಪರೇಡ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ನೇತೃತ್ವದಲ್ಲಿ ಭವ್ಯ ಪರೇಡ್ ಆರಂಭವಾಯಿತು. 75 ಶಸ್ತ್ರಸಜ್ಜಿತ ರೆಜಿಮೆಂಟ್‌ನ ಮುಖ್ಯ ಯುದ್ಧ ಟ್ಯಾಂಕ್ ಅರ್ಜುನ್‌ನ ತುಕಡಿಯು ಪರೇಡ್ ಹಾದಿಯಲ್ಲಿ ಸಾಗಿ ಬಂತು. ಇದಾದ ಬಳಿಕ 61 ಅಶ್ವಸೈನ್ಯದ ಸಮವಸ್ತ್ರದಲ್ಲಿ ಮೊದಲ ತಂಡವನ್ನು ಕ್ಯಾಪ್ಟನ್ ರೈಜಾದಾ ಶೌರ್ಯ ಬಾಲಿ ಮುನ್ನಡೆಸಿದರು.

    ಬಳಿಕ 17 ಯಾಂತ್ರೀಕೃತ ಪದಾತಿ ದಳದ NAG ಕ್ಷಿಪಣಿ ವ್ಯವಸ್ಥೆಯನ್ನು ಮುನ್ನಡೆಸಿದ ಲೆಫ್ಟಿನೆಂಟ್ ಸಿದ್ಧಾರ್ಥ ತ್ಯಾಗಿ ಅವರಿಂದ ರಾಷ್ಟ್ರಪತಿ ಮುರ್ಮು ಗೌರವ ವಂದನೆ ಸ್ವೀಕರಿಸಿದರು. ಇದಾದ ಬಳಿಕ ಹಂತ ಹಂತವಾಗಿ ಬೇರೆ ಬೇರೆ ಸೇನಾ ತುಕಡಿಗಳು ಪಥ ಸಂಚಲನ ಮಾಡಿದವು. ಲಡಾಖ್ ಸ್ಕೌಟ್ಸ್ ರೆಜಿಮೆಂಟ್‌ನ ಕ್ಯಾಪ್ಟನ್ ನವೀನ್ ಧತ್ತೇರ್ವಾಲ್ ನೇತೃತ್ವದಲ್ಲಿ ಕ್ವಿಕ್ ರಿಯಾಕ್ಷನ್ ಫೈಟಿಂಗ್ ವೆಹಿಕಲ್‌ನ ತುಕಡಿ, ಲೆಫ್ಟಿನೆಂಟ್ ಪ್ರಜ್ವಲ್ ಕಲಾ ನೇತೃತ್ವದ 861 ಮಿಸೈಲ್ ರೆಜಿಮೆಂಟ್‌ನ ಬ್ರಹ್ಮೋಸ್‌ನ ತುಕಡಿ, 27 ಏರ್ ಡಿಫೆನ್ಸ್ ಮಿಸೈಲ್ ರೆಜಿಮೆಂಟ್‌ನ ಆಕಾಶ್ ವೆಪನ್ ಸಿಸ್ಟಮ್, ಕ್ಯಾಪ್ಟನ್ ಸುನಿಲ್ ದಶರಥೆ ನೇತೃತ್ವದ ‘ಅಮೃತಸರ ಏರ್‌ಫೀಲ್ಡ್’ ಮತ್ತು 512 ಲೈಟ್ ಎಡಿ ಮಿಸೈಲ್ ರೆಜಿಮೆಂಟ್, ಭಾರತೀಯ ನೌಕಾಪಡೆಯ 80 ಸಂಗೀತಗಾರರನ್ನು ಒಳಗೊಂಡಿರುವ ಭಾರತೀಯ ನೌಕಾಪಡೆಯ ಬ್ರಾಸ್ ಬ್ಯಾಂಡ್ ಕರ್ತವ್ಯ ಪಥ್ ನಲ್ಲಿ ಪರೇಡ್‌ ನಡೆಸಿದವು.

    ಕಣ್ಮಮನ ಸೆಳೆದ ಟ್ಯಾಬ್ಲೊಗಳು
    ಈ ಬಾರಿಯ ಪರೇಡ್‌ನಲ್ಲಿ 17 ರಾಜ್ಯದ ಹಾಗೂ ಕೇಂದ್ರ ಸರ್ಕಾರದ ವಿವಿಧ ಇಲಾಖೆ ಮತ್ತು ಸಚಿವಾಲಯದ ಆರು ಟ್ಯಾಬ್ಲೊಗಳು ಸೇರಿ ಒಟ್ಟು 23 ಟ್ಯಾಬ್ಲೊಗಳು ಭಾಗಿಯಾಗಿದ್ದವು. ಜಾರ್ಖಂಡ್‌ನ ಟ್ಯಾಬ್ಲೊ ದಿಯೋಘರ್‌ನಲ್ಲಿರುವ ಪ್ರಸಿದ್ಧ ಬೈದ್ಯನಾಥ ದೇವಾಲಯ, ಗುಜರಾತ್ ʼಸ್ವಚ್ಛ-ಹಸಿರು ಶಕ್ತಿ ಸಮರ್ಥ’ ಎಂಬ ಸಂದೇಶ ಮೇಲೆ ನವೀಕರಿಸಬಹುದಾದ ಇಂಧನದ ಬಗ್ಗೆ, ಕೇರಳವು ‘ನಾರಿ ಶಕ್ತಿ’ ಮತ್ತು ಮಹಿಳಾ ಸಬಲೀಕರಣದ ಜಾನಪದ ಸಂಪ್ರದಾಯಗಳ ಟ್ಯಾಬ್ಲೊವನ್ನು ಪ್ರದರ್ಶಿಸಿದವು.

    ಪಶ್ಚಿಮ ಬಂಗಾಳದ ದುರ್ಗಾ ಪೂಜಾ, ಮಹಾರಾಷ್ಟ್ರದ ಶಕ್ತಿ ಪೀಠಗಳ ಮತ್ತು ತಮಿಳುನಾಡಿನ ಟ್ಯಾಬ್ಲೋ ಜನ ಮೆಚ್ಚುಗೆ ಪಾತ್ರವಾದರೆ, ಅಯೋಧ್ಯೆಯಲ್ಲಿ ಆಚರಿಸಲಾದ ಮೂರು ದಿನಗಳ ದೀಪೋತ್ಸವವನ್ನು ಉತ್ತರ ಪ್ರದೇಶ ಸರ್ಕಾರ ಈ ಬಾರಿ ಪ್ರದರ್ಶಿಸಿತು‌.

    ಕರ್ತವ್ಯ ಪಥ್‌ನಲ್ಲಿ ಕರ್ನಾಟಕದ ನಾರಿಶಕ್ತಿ
    ಟ್ಯಾಬ್ಲೊಗಳ ಸರಣಿಯಲ್ಲಿ ಕರ್ನಾಟಕವೂ ಈ ಬಾರಿ ತನ್ನ ಟ್ಯಾಬ್ಲೊವನ್ನು ಪ್ರದರ್ಶಿಸಿತು. ಈ ಬಾರಿ ಕರ್ನಾಟಕ ನಾರಿ ಶಕ್ತಿ ಪರಿಕಲ್ಪನೆಯಲ್ಲಿ ಟ್ಯಾಬ್ಲೊ ಪ್ರದರ್ಶಿಸಿದ್ದು, ಟ್ಯಾಬ್ಲೊದಲ್ಲಿ 2,000 ಅಧಿಕ ಹೆರಿಗೆ ಮಾಡಿಸಿದ್ದ ಸೂಲಗಿತ್ತಿ ನರಸಮ್ಮ, 30,000ಕ್ಕೂ ಅಧಿಕ ಸಸಿಗಳನ್ನು ನೆಟ್ಟ ಹಾಲಕ್ಕಿ ತುಳಸಿ ಗೌಡ ಮತ್ತು 8,000 ಮರಗಳನ್ನು ಪೋಷಿಸಿದ ಸಾಲುಮರದ ತಿಮ್ಮಕ್ಕ ಅವರ ಸಾಧನೆಯನ್ನು ಒಳಗೊಂಡಿತ್ತು. ರಾಜ್ಯದ ಟ್ಯಾಬ್ಲೊ ಜೊತೆಗೆ ಉತ್ತರ ಕನ್ನಡದ ಹಾಲಕ್ಕಿ ಸುಗ್ಗಿ ಕುಣಿತ ಕಲಾವಿದರು ಹೆಜ್ಜೆ ಹಾಕಿದರು.

    ಟ್ಯಾಬ್ಲೊಗಳ ಪ್ರದರ್ಶನದ ಬಳಿಕ ಆಕಾಶದಲ್ಲಿ ಯುದ್ದ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ಭಾರತದ ಶಕ್ತಿಯನ್ನು ವಿಶ್ವಕ್ಕೆ ತೋರಿದವು. ರಫೇಲ್ ಕಸರತ್ತು ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ಮೇಡ್ ಇನ್ ಇಂಡಿಯಾದ ಲಘು ಯುದ್ದ ವಿಮಾನ ಮತ್ತು ಹೆಲಿಕಾಪ್ಟರ್‌ಗಳು ಪ್ರದರ್ಶನ ನೀಡಿದವು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಟ್ಟೀಹಳ್ಳಿ ಪಟ್ಟಣದಲ್ಲಿ ಅದ್ದೂರಿಯಾಗಿ ನಡೆಯಿತು RSS ಪಥಸಂಚಲನ

    ರಟ್ಟೀಹಳ್ಳಿ ಪಟ್ಟಣದಲ್ಲಿ ಅದ್ದೂರಿಯಾಗಿ ನಡೆಯಿತು RSS ಪಥಸಂಚಲನ

    ಹಾವೇರಿ: ಆರ್‌ಎಸ್‌ಎಸ್‌(RSS) ಗಣವೇಷಧಾರಿಗಳು ಇಂದು ಹಾವೇರಿ ಜಿಲ್ಲೆ ರಟ್ಟೀಹಳ್ಳಿ(Rattihalli) ಪಟ್ಟಣದಲ್ಲಿ ಆಕರ್ಷಕ ಪಥಸಂಚಲನ ನಡೆಸಿದರು. ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಿಂದ ಆರಂಭವಾದ ಪಥಸಂಚಲನವು, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು.

    ಎರಡು ದಿನಗಳ ಹಿಂದೆ ಆರ್‌ಎಸ್‌ಎಸ್‌ನ ಐವರು ಕಾರ್ಯಕರ್ತರ ಮೇಲೆ ಅನ್ಯಕೋಮಿನ ಜನರ ಗುಂಪು ಹಲ್ಲೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಪಥಸಂಚಲನದ ಮಾರ್ಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿತ್ತು. ಇದನ್ನೂ ಓದಿ: RSS ಕಾರ್ಯಕರ್ತರ ಮೇಲೆ ಅನ್ಯಕೋಮಿನ ಯುವಕರಿಂದ ಹಲ್ಲೆ: 10 ಮಂದಿ ಅರೆಸ್ಟ್‌

    ಹಾವೇರಿ, ಧಾರವಾಡ, ಚಿತ್ರದುರ್ಗ, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಗಣವೇಷಧಾರಿಗಳು ಪಥಸಂಚಲನದಲ್ಲಿ ಭಾಗಿಯಾಗಿದ್ದರು. ಪಥಸಂಚಲನ ನಡೆಸುತ್ತಿದ್ದ ಆರ್‌ಎಸ್‌ಎಸ್‌ ಕಾರ್ಯಕರ್ತರ ಮೇಲೆ ಕೃಷಿ ಸಚಿವ ಬಿ.ಸಿ.ಪಾಟೀಲ್‌ ಹಾಗೂ ಹಿಂದೂ ಬಾಂಧವರು ಪುಷ್ಪ ಮಳೆ ಸುರಿಸಿದರು. ಇದನ್ನೂ ಓದಿ: ಫಸ್ಟ್‌ ಟೈಂ ಬೆಂಗಳೂರಿನಲ್ಲಿ ಲ್ಯಾಂಡ್‌ ಆಯ್ತು ವಿಶ್ವದ ದೊಡ್ಡ ವಿಮಾನ

    ಹಲ್ಲೆ‌ ನಡೆದ ಕಾರಣ ವಿವಿಧ ಜಿಲ್ಲೆಗಳ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪಟ್ಟಣಕ್ಕೆ ಆಗಮಿಸಿದ್ದರು. ಕಾರ್ಯಕರ್ತರ ಮೇಲೆ ಮಾಡಿದ ಅನ್ಯಕೋಮಿನ ಎಲ್ಲಾ ಆರೋಪಿಗಳನ್ನು ಬಂಧನ ಮಾಡುವಂತೆ ಆಗ್ರಹಿಸಿದರು.

    Live Tv
    [brid partner=56869869 player=32851 video=960834 autoplay=true]

  • RSS ಕಾರ್ಯಕರ್ತರ ಮೇಲೆ ಅನ್ಯಕೋಮಿನ ಯುವಕರಿಂದ ಹಲ್ಲೆ: 10 ಮಂದಿ ಅರೆಸ್ಟ್‌

    RSS ಕಾರ್ಯಕರ್ತರ ಮೇಲೆ ಅನ್ಯಕೋಮಿನ ಯುವಕರಿಂದ ಹಲ್ಲೆ: 10 ಮಂದಿ ಅರೆಸ್ಟ್‌

    ಹಾವೇರಿ: ಆರ್‌ಎಸ್‌ಎಸ್‌(RSS) ಕಾರ್ಯಕರ್ತರ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ಮಾಡಿದ ಘಟನೆ ಹಾವೇರಿ(Haveri) ಜಿಲ್ಲೆ ರಟ್ಟೀಹಳ್ಳಿ ಪಟ್ಟಣದಲ್ಲಿ ನಡೆದಿದೆ.

    ಓರ್ವ ಕಾರ್ಯಕರ್ತನ ತಲೆಗೆ ಏಟು ಬಿದ್ದಿದ್ದು, ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪಟ್ಟಣದಲ್ಲಿ ಪಥಸಂಚಲನ ನಡೆಸುವ ಸಲುವಾಗಿ ಮಾರ್ಗ ವೀಕ್ಷಣೆಗೆ ತೆರಳಿದ್ದ ವೇಳೆ ಮಂಗಳವಾರ ರಾತ್ರಿ ಹಲ್ಲೆ ಮಾಡಿದ್ದಾರೆ.

    ಕಾರ್ಯಕರ್ತನ ಕಾರಿನ‌ ಹಿಂಭಾಗದ ಗ್ಲಾಸ್‌ ಜಖಂಗೊಂಡಿದೆ. ಗಾಯಾಳುವಿಗೆ ರಟ್ಟೀಹಳ್ಳಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಅನ್ಯಕೋಮಿನ ಹತ್ತು ಜನರನ್ನು ಬಂಧಿಸಿದ್ದೇವೆ ಎಂದು ಎಸ್‌ಪಿ ಹನುಮಂತರಾಯ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಪತಿ 2ನೇ ಮದುವೆಯಾಗುವಂತಿಲ್ಲ – ಕುರಾನ್ ಉಲ್ಲೇಖಿಸಿ ಹೈಕೋರ್ಟ್ ತೀರ್ಪು

    ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಸದ್ಯ ಪಟ್ಟಣದಲ್ಲಿ ಪರಿಸ್ಥಿತಿ ಶಾಂತವಾಗಿದೆ. ರಟ್ಟೀಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

    Live Tv
    [brid partner=56869869 player=32851 video=960834 autoplay=true]

  • ಟೋಕಿಯೋ ಒಲಿಂಪಿಕ್ಸ್-21ನೇ ಕ್ರಮಾಂಕದಲ್ಲಿ ಧ್ವಜ ಹಿಡಿದು ಆಗಮಿಸಿದ ಭಾರತ ತಂಡ

    ಟೋಕಿಯೋ ಒಲಿಂಪಿಕ್ಸ್-21ನೇ ಕ್ರಮಾಂಕದಲ್ಲಿ ಧ್ವಜ ಹಿಡಿದು ಆಗಮಿಸಿದ ಭಾರತ ತಂಡ

    ಟೋಕಿಯೋ: 2021ರ ಕ್ರೀಡಾ ಜಾತ್ರೆ ಟೋಕಿಯೋ ಒಲಿಂಪಿಕ್ಸ್ ಸರಳವಾಗಿ ಇಂದು ಉದ್ಘಾಟನೆಗೊಂಡಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತದ 20 ಮಂದಿ ಅಥ್ಲೀಟ್ಸ್ ಗಳು ಭಾಗವಹಿಸಿದರು. 21ನೇ ಕ್ರಮಾಂಕದಲ್ಲಿ ಭಾರತ ತಂಡ ತ್ರಿವರ್ಣ ಧ್ವಜ ಹಿಡಿದು ಪಥಸಂಚಲನದಲ್ಲಿ ಭಾಗವಹಿಸಿತು.

    ಜಪಾನ್‍ನ ಟೋಕಿಯೋದಲ್ಲಿ 2020ರಲ್ಲಿ ನಡೆಯ ಬೇಕಾಗಿದ್ದ ಒಲಿಂಪಿಕ್ಸ್ ಕ್ರೀಡಾಕೂಟ ಕೊರೊನಾದಿಂದಾಗಿ ಒಂದು ವರ್ಷದ ಬಳಿಕ ಇಂದು ಅಧಿಕೃತವಾಗಿ ಉದ್ಘಾಟನೆಗೊಂಡು ಆರಂಭಗೊಂಡಿದೆ. ಉದ್ಘಾಟನ ಸಮಾರಂಭದ ಪಥಸಂಚಲನದಲ್ಲಿ ಭಾರತ 20 ಮಂದಿ ಕ್ರೀಡಾ ಪಟುಗಳು ಭಾಗವಹಿಸಿದ್ದರು. ಹಾಕಿ ತಂಡದ ನಾಯಕ ಮನ್‍ಪ್ರೀತ್ ಸಿಂಗ್ ಮತ್ತು ಬಾಕ್ಸರ್ ಮೇರಿ ಕೋಮ್ ಭಾರತ ತ್ರಿವರ್ಣ ಧ್ವಜ ಹಿಡಿದು ಜಪಾನ್‍ನ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಹೆಜ್ಜೆ ಇಟ್ಟರು. ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್ ಪದಕಕ್ಕೆ ಮುತ್ತಿಕ್ಕಲು ಸಜ್ಜಾದ ಭಾರತೀಯ ಕ್ರೀಡಾಪಟುಗಳು

    ಜಪಾನಿನ ವರ್ಣಮಾಲೆಯ ಅಕ್ಷರದ ಕ್ರಮದಂತೆ ರಾಷ್ಟ್ರಗಳ ಪಥಸಂಚಲನ ನಡೆಯಿತು. ಈ ಪ್ರಕಾರ ಭಾರತಕ್ಕೆ ವರ್ಣಮಾಲೆಯ 21 ಅಕ್ಷರವಾಗಿ ಗಮನ ಸೆಳೆಯಿತು. ಈ ಬಾರಿ ಕೊರೊನಾದಿಂದಾಗಿ ಸರಳವಾಗಿ ಆರಂಭಕಂಡ ಒಲಿಂಪಿಕ್ಸ್ ನಲ್ಲಿ ಕೆಲ ಸಣ್ಣ ಪುಟ್ಟ ಕಾರ್ಯಕ್ರಮಗಳು ನಡೆಯಿತು. ಒಲಿಂಪಿಕ್ಸ್ ರಿಂಗ್‍ನಲ್ಲಿ ನೃತ್ಯ, ಲೈಟಿಂಗ್ ಕಲರವ ಸೆರಿದಂತೆ ಕೆಲ ಅಚ್ಚುಕಟ್ಟಾದ ಕಾರ್ಯಕ್ರಮಗಳು ನೋಡುಗರ ಗಮನಸೆಳೆಯಿತು.

  • ಪೊಲೀಸ್ ಪಥಸಂಚಲನ – ಆರತಿ ಬೆಳಗಿ ಶುಭಕೋರಿದ ಜನ

    ಪೊಲೀಸ್ ಪಥಸಂಚಲನ – ಆರತಿ ಬೆಳಗಿ ಶುಭಕೋರಿದ ಜನ

    ರಾಯಚೂರು: ಕೊರೊನಾ ಸೋಂಕು ತಡೆಗಾಗಿ ಜಾಗೃತಿ ಮೂಡಿಸಲು ನಗರದಲ್ಲಿ ಜಿಲ್ಲಾ ಪೊಲೀಸರು ಪಥ ಸಂಚಲನ ನಡೆಸಿದರು. ನಗರದ ಪಟೇಲ್ ವೃತ್ತದಿಂದ ವಿವಿಧ ರಸ್ತೆಗಳಲ್ಲಿ ಜಾಗೃತಿ ಪಥ ಸಂಚಲನ ನಡೆಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ ವೇದಮೂರ್ತಿ ಪಥಸಂಚಲನಕ್ಕೆ ಚಾಲನೆ ನೀಡಿದರು.

    ಈ ವೇಳೆ ಕೊರೊನಾ ತಡೆಗಾಗಿ ಮುತುವರ್ಜಿ ವಹಿಸುತ್ತಿರುವ ಪೊಲೀಸರಿಗೆ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಆರತಿ ಬೆಳಗಿ ಹೂವಿನ ಹಾರ ಹಾಕುವ ಮೂಲಕ ಇಲಾಖೆಗೆ ಶುಭ ಕೋರಿದರು. ರಸ್ತೆಯಲ್ಲಿ ಸಾರ್ವಜನಿಕರು ಚಪ್ಪಾಳೆ ತಟ್ಟುವ ಮೂಲಕ ಪೊಲೀಸರಿಗೆ ಶುಭ ಹಾರೈಸಿದರು. ಜಿಲ್ಲೆಯಲ್ಲಿ ಹೆಚ್ಚು ಭದ್ರತೆ ಒದಗಿಸಿ ಕೊರೊನಾ ವಿರುದ್ಧ ಹೋರಾಡುತ್ತಿರುವುಕ್ಕೆ ಧನ್ಯವಾದ ತಿಳಿಸಿದರು.

    ರಾಯಚೂರು ಜಿಲ್ಲೆ ಗ್ರೀನ್ ಝೋನ್‍ನಲ್ಲಿದ್ದರೂ ಬಿಗಿ ಬಂದೋಬಸ್ತ್ ಮೂಲಕ ಕಠಿಣ ಲಾಕ್‍ಡೌನ್ ಮಾಡಲಾಗಿದೆ. ನಗರ, ಪಟ್ಟಣಗಳ ಬಡಾವಣೆಗಳಲ್ಲಿ ಎಲ್ಲಾ ಸೌಲಭ್ಯಗಳನ್ನ ಒದಗಿಸಿ ಸೀಲ್‍ಡೌನ್ ಮಾಡಲಾಗಿದೆ. ಅಲ್ಲದೇ ಅಕ್ಕಪಕ್ಕದ ಜಿಲ್ಲೆಗಳ ಜನ ಕೂಡ ಜಿಲ್ಲೆಗೆ ಬರದಂತೆ ಎಚ್ಚರವಹಿಸಲಾಗಿದೆ.