Tag: ಪತ್ರ

  • ಕುಂದಾಪುರದಿಂದ ಹೊರಟಿದೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪರಿಗೆ ಪತ್ರ

    ಕುಂದಾಪುರದಿಂದ ಹೊರಟಿದೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪರಿಗೆ ಪತ್ರ

    ಉಡುಪಿ: ಇನ್ನೆರಡು ದಿನಗಳಲ್ಲಿ ಸಿಎಂ ಬೊಮ್ಮಾಯಿ ಸಂಪುಟ ವಿಸ್ತರಣೆ ಮಾಡಲಿದ್ದಾರೆ. ಗುರುವಾರ ಹೊಸ ಸಚಿವರು ಪ್ರಮಾಣವಚನ ಸ್ವೀಕರಿಸುತ್ತಾರೆ ಎಂಬ ಮಾಹಿತಿಯಿದೆ. ಈ ನಡುವೆ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಮಂತ್ರಿಸ್ಥಾನ ಕೊಡಬೇಕು ಎಂಬ ಕೂಗು ಜೋರಾಗಿದೆ. ಹಾಲಾಡಿ ಅಭಿಮಾನಿಗಳು ಯಡಿಯೂರಪ್ಪನವರಿಗೆ ನೇರ ಪತ್ರ ಬರೆದಿದ್ದಾರೆ.

    ನಾಲ್ಕು ಬಾರಿ ಬಿಜೆಪಿಯಲ್ಲಿ ಗೆದ್ದ ಒಂದು ಬಾರಿ ಪಕ್ಷೇತರರಾಗಿ ಗೆದ್ದು ಬಿಜೆಪಿಗೆ ಬೆಂಬಲಿಸಿದ ಉಡುಪಿ ಜಿಲ್ಲೆ ಕುಂದಾಪುರ ಶಾಸಕ, ಕುಂದಾಪುರದ ವಾಜಪೇಯಿ ಎಂಬ ಹೆಗ್ಗಳಿಕೆ ಗಳಿಸಿರುವ ಹಾಲಾಡಿಗೆ ಈ ಬಾರಿ ಮೋಸ ಆಗಬಾರದು ಎಂಬ ಅಭಿಯಾನ ಶುರುವಾಗಿದೆ. ಪತ್ರವೊಂದನ್ನು ಅಭಿಮಾನಿಗಳು ಮಾಜಿ ಸಿಎಂ ಯಡಿಯೂರಪ್ಪ ಅವರಿಗೇ ಬರೆದಿದ್ದಾರೆ.

    ಯಡಿಯೂರಪ್ಪನವರಿಗೆ ತಲುಪಿಸಿ ಬಿಡಿ ಪ್ಲೀಸ್:
    ಇದನ್ನ ಯಡಿಯೂರಪ್ಪನವರಿಗೆ ಮತ್ತು ಪಕ್ಷದ ವರಿಷ್ಠರಿಗೆ ನೀವು ತಲುಪಿಸಬೇಕು. ಆ ಕಾರಣಕ್ಕಾಗಿಯೇ ಬರೆಯುತ್ತಿದ್ದೇನೆ. ಕುಂದಾಪುರ ವಿಧಾನಸಭಾ ಕ್ಷೇತ್ರದ ಒಬ್ಬ ಮತದಾರನಾಗಿ ಬರೆಯುತ್ತಿರುವ ಪತ್ರವಿದು. ಇದನ್ನೂ ಓದಿ: ಕೋವಿಡ್ ಬರೋಕೆ ಯಾರು ಸರ್ಕಾರ ನಡೆಸುತ್ತಾರೋ ಅವರೇ ಕಾರಣ: ಸಿದ್ದರಾಮಯ್ಯ

    ಯಡಿಯೂರಪ್ಪನವರೇ ಕುಂದಾಪುರದಲ್ಲಿ ಹಾಲಾಡಿಯವರ ವಿರುದ್ಧ ಪ್ಲೇ ಕಾರ್ಡ್ ಹಿಡಿದಾಗ ನೀವೇ ಖುರ್ಚಿಯಿಂದ ಎದ್ದು ಬಂದು ಹಾಲಾಡಿ ಶ್ರೀನಿವಾಸ ಶೆಟ್ಟರು ನಮ್ಮ ಶಕ್ತಿ, ಅವರನ್ನ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಅಬ್ಬರಿಸಿದ್ದೀರಿ. ಶೆಟ್ಟರಿಗೆ ಮೊದಲ ಸಲ ಬೆಂಗಳೂರಿಗೆ ಕರೆದು ಕೊನೆಯ ಹಂತದಲ್ಲಿ ಮಂತ್ರಿ ಪದವಿ ತಪ್ಪಿದಾಗ, ಶಾಸಕರ ಭವನದಲ್ಲಿ ಶೆಟ್ಟರ ಅಭಿಮಾನಿಗಳು ಜಮಾಯಿಸಿದಾಗ ಖುದ್ದು ನೀವೇ ಎದ್ದು ಬಂದಿರಿ. ಹಾಲಾಡಿ ಅಭಿಮಾನಿಗಳು ಆಕ್ರೋಶದಲ್ಲಿ ನಿಮಗೂ ಧಿಕ್ಕಾರ ಕೂಗಿದಾಗ ಹಾಲಾಡಿಯೇ ಹೊರಗೆ ಬಂದು ಅಬ್ಬರಿಸಿ ಬಿಟ್ಟಿದ್ದರು. ಅವರೊಂದಿಗೆ ಮಾತುಕತೆ ಮಾಡಿ ಹೊರ ಬಂದ ನೀವು ನಾಳೆಯೊಳಗೆ ಸಿಹಿ ಸುದ್ದಿ ಕೊಡುತ್ತೇವೆ ಎಂದಿದ್ದೀರಿ. ಆ ನಾಳೆ ಇಂದಿಗೂ ಬರಲಿಲ್ಲ, ನೀವು ಮರೆತಿರಿ, ಆದರೆ ನಾವು ಮರೆಯಲಿಲ್ಲ.

    ನೀವು ಕಿಂಗ್ ಮೇಕರ್ ಸಾರ್:
    ಸದಾನಂದ ಗೌಡರನ್ನ ಮುಖ್ಯಮಂತ್ರಿ ಮಾಡಿದ್ದು ನೀವು. ಕೊನೆಗೆ ಅವರು ನಿಮ್ಮ ಮಾತು ಕೇಳದೆ ತಿರುಗಿ ಬಿದ್ದಾಗ ಹಠಕ್ಕೆ ಬಿದ್ದು ಜಗದೀಶ್ ಶೆಟ್ಟರನ್ನ ತಂದು ಕೂರಿಸಿದ್ದೀರಿ. ಮೊನ್ನೆ ಬಸವರಾಜ್ ಬೊಮ್ಮಾಯಿಯೂ ನಿಮ್ಮ ಕೃಪೆಯಿಂದಲೇ ಮುಖ್ಯಮಂತ್ರಿಯಾದದ್ದು. ನಿಮ್ಮ ಸಂಪುಟದಲ್ಲಿ ಇದ್ದವರೆಲ್ಲಾ ಸುಭಗರ ಸ್ವಾಮಿ? ಒಮ್ಮೆಯೂ ಹಾಲಾಡಿಯವರನ್ನ ಮಂತ್ರಿಯಾಗಿಸಬೇಕು ಅಂತ ನಿಮಗೆ ಅನ್ನಿಸಲೇ ಇಲ್ಲವಾ? ಯಾಕೆ? ಹಾಲಾಡಿ ಬೇಕು ಎನ್ನುವುದಿಲ್ಲ, ಕೊಡದಿದ್ದರೆ ನಡೆಯೋತ್ತೆ ಎನ್ನುವ ನಿರ್ಲಕ್ಷ್ಯ ಅಲ್ಲವೇ?

    ಅವತ್ತು ಹಾಲಾಡಿಗೆ ಅವಕಾಶ ತಪ್ಪಿಸಿದ್ದು ಕಲ್ಲಡ್ಕ ಪ್ರಭಾಕರ ಭಟ್ಟರು ಎಂಬ ಸುದ್ದಿ ಹೊರಬಿತ್ತಲ್ಲಾ? ಅದು ನೀವು ಹಾಲಾಡಿಯವರ ರೂಮಿನಿಂದ ಹೊರಗೆ ಬಂದಮೇಲೇ ಬಿದ್ದ ಸುದ್ದಿ?! ಅದರ ಮೂಲ ಯಾವುದು ಎಂಬುದನ್ನ ನಾನು ಬಲ್ಲೆ, ರಾಜಕಾರಣ ನನಗೆ ಬಹಳ ಸೊಗಸಾಗಿ ಅರ್ಥವಾಗುತ್ತದೆ. ಮಂತ್ರಿ ಮಂಡಲ ರಚನೆಯ ಹಿಂದಿನ ದಿವಸ ಹರತಾಳ ಹಾಲಪ್ಪ ಶಾಸಕರ ಭವನದ ಮುಂದೆ ವಾಕಿಂಗ್ ಮಾಡುತ್ತಿದ್ದರು. ಅವರನ್ನೇ ಕೇಳಿ ಬೇಕಿದ್ದರೆ, ಆಗ ಅವರ ಕೈ ತುಂಡಾಗಿತ್ತು. ಬಹಳ ಗಂಭೀರವಾಗಿ ಚರ್ಚಿಸುತ್ತಿದ್ದರು, ನನಗೆ ಅದೆಲ್ಲವೂ ನಂತರ ಅರ್ಥವಾಗಿತ್ತು.

    ನಿಮ್ಮ ವಿರುದ್ಧ ಮತ್ತು ಹಾಲಪ್ಪ ವಿರುದ್ಧ ಸಿಡಿದೆದ್ದಿದ್ದ ಬೇಳೂರು ಗೋಪಾಲ ಕೃಷ್ಣರು ಈಡಿಗ ಕೋಟಾದಡಿ ಮಂತ್ರಿಯಾಗಬೇಕಿತ್ತು. ಹಾಲಪ್ಪ ಗೆಳೆಯನ ಹೆಂಡತಿಯ ಸೆರಗೆಳೆದ ಆರೋಪ ಹೊತ್ತು ಕಳಂಕಿತರಾಗಿದ್ದರು. ಶತಾಯಗತಾಯ ಬೇಳೂರಿಗೆ ಸ್ಥಾನ ಕೊಡಕೂಡದು ಅದಕ್ಕೆ ಪರ್ಯಾಯವಾಗಿ ಬಿಲ್ಲವ ನಾಯಕ ಕೋಟ ಶ್ರೀನಿವಾಸ ಪೂಜಾರಿಗೆ ಕೊಡಬೇಕು ಎಂದು ಬಲವಾಗಿ ನಿಮ್ಮ ಕಿವಿ ಊದಿದ್ದು ಹರತಾಳು ಎಂಬುದನ್ನು ನಾನು ಬಲ್ಲೆ. ನಿಮಗೂ ಅದೇ ಬೇಕಿತ್ತು. ನಿಮ್ಮ ಕಾರಣದಿಂದಾಗಿಯೇ ಹಾಲಾಡಿಯವರಿಗೆ ಮಂತ್ರಿ ಸ್ಥಾನ ತಪ್ಪಿತ್ತು. ದೇವರ ಮುಂದೆ ನಿಂತು ಇದನ್ನು ನಿರಾಕರಿಸಬಲ್ಲಿರಾ?

    ಮುಂದೆ ನೀವೇ ಹಾಲಾಡಿಯವರ ಮನೆಗೆ ಓಡೋಡಿ ಬಂದಿರಿ, ಆಗ ಶೋಭ ಕರಂದ್ಲಾಜೆ ಪರವಾಗಿ ಹಾಲಾಡಿ ಬೆಂಬಲ ಬೇಕಿತ್ತು. ರಾಜ್ಯದ ಪ್ರತೀ ನಾಯಕನೂ ನಿಮ್ಮ ಮನೆಗೇ ಬಂದರೆ ಅವತ್ತು ನೀವೇ ಹಾಲಾಡಿ ಮನೆಗೆ ಹೋಗಿ ವಿನಂತಿಸಿಕೊಂಡು ಬಿಟ್ಟಿರಿ. ಕೊಟ್ಟ ಮಾತು ತಪ್ಪಿಸದ ಹಾಲಾಡಿ ನೀವು ಹೇಳಿದಂತೆ ಕೆಲಸ ಮಾಡಿದರು, ದೊಡ್ಡ ಲೀಡ್ ಕೂಡ ತನ್ನ ಕ್ಷೇತ್ರದಲ್ಲಿ ಕೊಡಿಸಿದರು. ಮೊನ್ನೆ ಏನೇನೋ ಕಸರತ್ತು ಮಾಡಿ ಸರ್ಕಾರ ಮಾಡಿದಾಗ ನೀವು ಹಾಲಾಡಿಯವರನ್ನ ನೆನಪಿಸಿಕೊಳ್ಳುತ್ತೀರಿ ಎಂದು ಭಾವಿಸಿದ್ದೆವು. ನೀವು ಮರೆತಿರಿ, ಎರಡನೆ ಸಲವೂ ಮತ್ತೆ ಅದೇ ನಿಲುವಿಗೆ ಅಂಟಿಕೊಂಡಿರಿ. ಯಡಿಯೂರಪ್ಪನವರೇ ನೀವು ಖಂಡಿತ ತಪ್ಪು ಮಾಡಿದ್ದೀರಿ. ನಿಮಗಿದನ್ನು ವಿವರಿಸಿ ಹೇಳುವವರು ಯಾರು? ನನಗೂ ಗೊತ್ತಿಲ್ಲ.

    ಬಿಜೆಪಿ ವರಿಷ್ಠರೆ ಗಮನಿಸಿ:
    ಅಂದು ಹಾಲಾಡಿ ಪ್ರತಾಪ ಶೆಟ್ಟರನ್ನ ಸೋಲಿಸದೇ ಇದ್ದಿದ್ದರೆ ಅವರು ಗೆದ್ದು ಮಂತ್ರಿಯಾಗಿರುತ್ತಿದ್ದರು. ಆಗ ಇಡೀ ಉಡುಪಿ ಜಿಲ್ಲೆಯಲ್ಲಿ ಇದ್ದಿದ್ದೇ ಏಕೈಕ ಶಾಸಕ. ತಾನೂ ಗೆದ್ದು ಪಕ್ಷವನ್ನೂ ದೊಡ್ಡ ಎತ್ತರಕ್ಕೆ ಕೊಂಡೊಯ್ದ ಹಾಲಾಡಿಯವರು ನಿರ್ಮಲಾ ಸಿತಾರಾಮನ್ ರಾಜ್ಯಸಭೆಗೆ ಸ್ಪರ್ಧಿಸಿದಾಗ ತನ್ನ ಮತವನ್ನ ಮಾರಿಕೊಂಡಿದ್ದರೆ ಹಲವು ಕೋಟಿ ನಿರಾಯಸವಾಗಿ ಪಡೆಯಬಹುದಿತ್ತು. ಆಗ ಅವರು ಪಕ್ಷೇತರ ಶಾಸಕನಾಗಿದ್ದು, ಅಪವಾದವೂ ಬರುತ್ತಿರಲಿಲ್ಲ! ಲೇಹರ್ ಸಿಂಗ್ ನಿಮ್ಮ ಮನೆಗೇ ಬರುತ್ತೇನೆ ಎಂದಾಗ ಬರಗೊಡಲಿಲ್ಲ. ಆಗಲೂ ಬಾಜಪ ಪರವಾಗಿ ಕೆಲಸ ಮಾಡಿ ಎಲ್ಲಿಯೂ ಪಕ್ಷಕ್ಕೆ ಚ್ಯುತಿ ತರಲಿಲ್ಲ ಹಾಲಾಡಿ.

    ನಿಮ್ಮ ಪಕ್ಷದಲ್ಲಿರುವ ಅತ್ಯಂತ ಪ್ರಾಮಾಣಿಕರಲ್ಲೇ ಪ್ರಾಮಾಣಿಕ ರಾಜಕಾರಣಿ ಎಂದರೆ ಹಾಲಾಡಿ. ಇಂತಹ ಸಚ್ಚಾರಿತ್ರ್ಯವಂತನಿಗೆ ಈ ಸಾರಿಯೂ ಗೌರವ ನೀಡದೇ ಇದ್ದರೆ ದೇವರೂ ನಿಮ್ಮನ್ನು ಕ್ಷಮಿಸುವುದಿಲ್ಲ. ಈ ಸಾರಿಯೂ ಹಾಲಾಡಿಗೆ ಅವಮಾನವಾದರೆ ಯಾರೂ ಪ್ರತಿಭಟಿಸುವುದಿಲ್ಲ, ಪಕ್ಷ ಬಿಡುವುದಿಲ್ಲ, ಟಯರ್ ಸುಡುವುದಿಲ್ಲ, ಗಲಾಟೆಯಾಗುವುದಿಲ್ಲ ಆದರೆ ಯಾರೆಲ್ಲ ಇದರ ಹಿಂದಿದ್ದೀರೋ ನಿಮ್ಮೆಲ್ಲರಿಗೂ ಹಾಲಾಡಿ ಅಭಿಮಾನಿಗಳ ಶಾಪ ತಾಕದೇ ಇರುವುದಿಲ್ಲ. ಬಾಕಿ ಉಳಿದ ಒಂದು ವರ್ಷ ಆರು ತಿಂಗಳ ಅವಧಿಯ ಮಂತ್ರಿ ಪದವಿ ಕೊಡದಿದ್ದರೆ ಹಾಲಾಡಿ ಏನು ಅಳುವುದಿಲ್ಲ, ಇಂಥಹ ಮನುಷ್ಯನಿಗೆ ಅವಕಾಶ ನೀಡುವ ಅವಕಾಶವಿದ್ದೂ ಅದನ್ನು ಕಳೆದುಕೊಂಡ ನಿಮ್ಮ ನಿಲುವುಗಳು ಮುಂದೊಂದು ದಿನ ಪಶ್ಚಾತಾಪಕ್ಕೆ ಕಾರಣವಾಗಲಿದೆ.

    ಇತಿಹಾಸದ ಪುಟದಲ್ಲಿ ಇದೊಂದು ಕಪ್ಪು ಚುಕ್ಕೆಯಾಗದಿದ್ದರೆ ಕೇಳಿ. ನಮ್ಮದೇನು ಆಗ್ರಹವಿಲ್ಲ ನಿಮ್ಮ ಆತ್ಮಸಾಕ್ಷಿ ಒಪ್ಪುತ್ತದೆ ಎಂದಾದರೆ ಏನೇನೂ ಅಭ್ಯಂತರವಿಲ್ಲ. ಈ ಸಾರಿ ಹಾಲಾಡಿಗೆ ಅವಕಾಶ ಕೊಟ್ಟರೆ ಕರಾವಳಿ ಮಾತ್ರವಲ್ಲ ರಾಜ್ಯದ ಕೋಟ್ಯಂತರ ಪ್ರಾಮಾಣಿಕ ಮನಸುಗಳು ನಿಮ್ಮನ್ನು ಮೆಚ್ಚಬಹುದು.

    ನಮಸ್ಕಾರ
    ಈ ಪತ್ರ ವಾಟ್ಸಪ್ ಫೇಸ್ಬುಕ್ ಇನ್ಸ್ಟಾಗ್ರಾಂ ಮೂಲಕ ಎಲ್ಲೆಡೆ ಹರಿದಾಡುತ್ತಿದೆ. ಹಾಲಾಡಿ ಅಭಿಮಾನಿಗಳು ಇದರ ಪ್ರಿಂಟ್ ಔಟ್ ತೆಗೆದು ಯಡಿಯೂರಪ್ಪನವರಿಗೆ ಪೋಸ್ಟ್ ಮಾಡುತ್ತಿದ್ದಾರೆ.

  • ಮೇಕೆದಾಟು ಯೋಜನೆ ಆರಂಭಿಸುವುದಾಗಿ ಘೋಷಿಸಿದ ಯಡಿಯೂರಪ್ಪ

    ಮೇಕೆದಾಟು ಯೋಜನೆ ಆರಂಭಿಸುವುದಾಗಿ ಘೋಷಿಸಿದ ಯಡಿಯೂರಪ್ಪ

    ಬೆಂಗಳೂರು: ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಸಿಎಂ ಸ್ಟಾಲಿನ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದ ಬೆನ್ನಲ್ಲೆ ಮೇಕೆದಾಟು ಆರಂಭ ಮಾಡುವುದಾಗಿ ಯಡಿಯೂರಪ್ಪ ಮಾಧ್ಯಮ ಪ್ರಕಟನೆಯ ಮೂಲಕ ಘೋಷಿಸಿದ್ದಾರೆ.

    ಪ್ರಕಟನೆಯಲ್ಲಿ ಏನಿದೆ?
    ಎರಡು ರಾಜ್ಯಗಳ ನಡುವಿನ ಸೌಹಾರ್ದತೆಯ ಸಲುವಾಗಿ ತಮಿಳುನಾಡು ರಾಜ್ಯದ ಮುಖ್ಯಮಂತ್ರಿಯವರಿಗೆ ಪತ್ರವನ್ನು ಬರೆಯಲಾಗಿತ್ತು. ಮೇಕೆದಾಟು ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸುವ ದೃಷ್ಟಿಯಿಂದ ಹಾಗೂ ಈ ಯೋಜನೆಯ ನಿರ್ಮಾಣದಿಂದ ಎರಡು ರಾಜ್ಯಗಳಿಗೆ ಅನುಕೂಲವಾಗುವ ಅಂಶಗಳನ್ನು ತಿಳಿಯಪಡಿಸಲಾಗಿತ್ತು. ಆದರೆ ತಮಿಳುನಾಡು ಸರ್ಕಾರವು ಈ ಅಂಶಗಳನ್ನು ಅರ್ಥಮಾಡಿಕೊಳ್ಳದೆ ಈ ಯೋಜನೆಯಿಂದ ತಮ್ಮ ರಾಜ್ಯಕ್ಕೆ ತೊಂದರೆಯಾಗುತ್ತದೆ ಎಂದು ವ್ಯಾಖ್ಯಾನಿಸಿದೆ. ಇದನ್ನೂ ಓದಿ: ಮೇಕೆದಾಟಿಗೂ ತಮಿಳುನಾಡು ಕ್ಯಾತೆ ಯಾಕೆ? ಯೋಜನೆಯಿಂದ ರಾಜ್ಯಕ್ಕಾಗುವ ಲಾಭ ಏನು?

    ಬೆಂಗಳೂರು ನಗರಕ್ಕೆ ಕುಡಿಯುವ ನೀರನ್ನು 4,75 ಟಿಎಂಸಿ ನೀರನ್ನು ಸರ್ವೋಚ್ಚ ನ್ಯಾಯಾಲಯವು ಆದೇಶಿಸಿದ್ದು, ಸದರಿ Consumptive ಪ್ರಮಾಣವು ಬಳಕೆಯಾಗಿದ್ದು, ಈ ಪ್ರಮಾಣವನ್ನು ಉಪಯೋಗಿಸಿಕೊಳ್ಳಲು 23.75 ಟಿಎಂಸಿ ನೀರಿನ ಪ್ರಮಾಣವನ್ನು ಸಂಗ್ರಹಿಸಿ ಪೂರೈಸಬೇಕಾಗಿರುತ್ತದೆ. ಆದರೆ, ತಮಿಳುನಾಡು ರಾಜ್ಯಕ್ಕೆ ಈ ಯೋಜನೆಯಿಂದ ಯಾವುದೇ ತೊಂದರೆಯಾಗವುದಿಲ್ಲ, ವಾಸ್ತವಿಕವಾಗಿ ನೀರಿನ ಹರಿವಿನಲ್ಲಿ ಅನುಕೂಲವಾಗುತ್ತದೆ. ಇದನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ರಾಜಕೀಯ ಕಾರಣಗಳಿಗೆ ವಿರೋಧಿಸುತ್ತದೆ. ಈ ಕುರಿತು 2018ರಲ್ಲಿ ತಮಿಳುನಾಡು ರಾಜ್ಯವು ದಾವೆಯನ್ನು (ಮಿಸಲೇನಿಯಸ್ ಅಪ್ಲಿಕೇಷನ್) ಸಲ್ಲಿಸಿದೆ. ಆದರೆ, ಯೋಜನೆಯನ್ನು ಅನುಷ್ಠಾನಗೊಳಿಸಲು ಯಾವುದೇ ಅಡೆತಡೆ ಇರುವುದಿಲ್ಲ.

    ಯೋಜನೆಯನ್ನು ರಾಜ್ಯ ಸರ್ಕಾರವು ಅನುಷ್ಠಾನಗೊಳಿಸಲು ಅಗತ್ಯವಿರುವ ತೀರುವಳಿಗಳನ್ನು ಪಡೆಯಲು ಕ್ರಮಕೈಗೊಳ್ಳಲಾಗಿದ್ದು, ಶೀಘ್ರವಾಗಿ ತೀರುವಳಿಗಳನ್ನು ಪಡೆದು ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಕರ್ನಾಟಕ ರಾಜ್ಯವು ಕಾವೇರಿ ನದಿ ಪಾತ್ರದಲ್ಲಿ ನೀರು ಬಳಸಿಕೊಳ್ಳಲು ಆಡಳಿತಾತ್ಮಕ ಹಾಗೂ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳುವುದು ಮತ್ತು ಮೇಕೆದಾಟು ಯೋಜನೆಯನ್ನು ಪ್ರಾರಂಭಿಸಲಾಗುವುದು.

  • ಬಿಎಸ್‍ವೈ ತಮಿಳುನಾಡು ಸಿಎಂಗೆ ಪತ್ರ ಬರೆದಿದ್ದು ತಪ್ಪು: ಸಿದ್ದರಾಮಯ್ಯ

    ಬಿಎಸ್‍ವೈ ತಮಿಳುನಾಡು ಸಿಎಂಗೆ ಪತ್ರ ಬರೆದಿದ್ದು ತಪ್ಪು: ಸಿದ್ದರಾಮಯ್ಯ

    ಬೆಂಗಳೂರು: ಮೇಕೆದಾಟು ವಿಚಾರದಲ್ಲಿ ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರಿಗೆ ಪತ್ರ ಬರೆದಿದ್ದು ತಪ್ಪು ಎಂದು ವಿಪಕ್ಷ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಡ್ಯಾಮ್ ಕಟ್ಟೋಕೆ ಅವರ ಅನುಮತಿ ಯಾಕೆ ಬೇಕು? ನಮ್ಮ ಕೆಲಸ ನಾವು ಮಾಡಬೇಕು. ಕೋರ್ಟ್ ಆದೇಶದಂತೆ ನಾವು ಕೆಲಸ ಮಾಡಬೇಕು. ಇವರು ಪತ್ರ ಬರೆದಿದ್ದಕ್ಕೆ ಸ್ಟಾಲಿನ್ ಪ್ರತಿಕ್ರಿಯಿಸಿದ್ದಾರೆ. ಪತ್ರ ಬರೆದು ಅನುಮತಿ ಕೇಳಿದ್ರೆ ಯಾರೂ ಒಪ್ಪಲ್ಲ. ಡ್ಯಾಮ್ ಕಟ್ಟುವುದರಿಂದ ಅವರ ಪಾಲಿನ ನೀರಿಗೆ ಸಮಸ್ಯೆ ಆಗುವುದಿಲ್ಲ. ನಮ್ಮ ಸರ್ಕಾರ ಇದ್ದಾಗ ನೀರಿನ ವಿಚಾರದಲ್ಲಿ ಪತ್ರ ಬರೆದು ಅನುಮತಿ ಕೇಳಿಲ್ಲ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಹೆಣ್ಣಿನ ಬಗ್ಗೆ ಹೇಗೆ ಮಾತಾಡ್ಬೇಕು ಅಂತ ಮಾಜಿ ಸಿಎಂ ಅರ್ಥ ಮಾಡಿಕೊಳ್ಳಬೇಕು: ಸುಮಲತಾ ಕಿಡಿ

    ಸಿಎಂ ಜೊತೆ ವಿಪಕ್ಷಗಳು ಭ್ರಷ್ಟಾಚಾರದಲ್ಲಿ ಶಾಮೀಲಾಗಿದ್ದಾರೆ ಎಂಬ ಯತ್ನಾಳ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅಂತಹ ಭ್ರಷ್ಟಾಚಾರ ಸರ್ಕಾರದಲ್ಲಿ ಇವರೇಕೆ ಶಾಸಕನಾಗಿ ಮುಂದುವರಿಯಬೇಕು ಬಹಳ ದಿನದಿಂದ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಅಂತಹ ಕಡೆ ಶಾಸಕನಾಗಿ ಮುಂದುವರೆದಿದ್ದು ಯಾಕೆ? ನಮ್ಮ ಬಗ್ಗೆ ಮಾತನಾಡುವುದಕ್ಕೆ ಇವರಿಗೆ ಅಧಿಕಾರ ಇಲ್ಲ ಎಂದರು.

    ಕೆಆರ್‍ಎಸ್ ಬಿರುಕು ಬಿಟ್ಟಿದೆ ಎಂದ ಸಂಸದೆ ಸುಮಲತಾ ಅವರನ್ನು ಅಡ್ಡವಾಗಿ ಮಲಗಿಸಿ ಎಂದು ಎಚ್ಡಿಕೆ ಹೇಳಿಕೆ ವಿಚಾರವಾಗಿ ಇದರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿದರು.

  • ಹೋಟೆಲ್, ರೆಸಾರ್ಟ್, ವಸತಿ ಗೃಹಗಳ ವಿದ್ಯುತ್, ನೀರಿನ ಬಿಲ್ ಮನ್ನಾ ಮಾಡಿ: ಸಿದ್ದರಾಮಯ್ಯ ಪತ್ರ

    ಹೋಟೆಲ್, ರೆಸಾರ್ಟ್, ವಸತಿ ಗೃಹಗಳ ವಿದ್ಯುತ್, ನೀರಿನ ಬಿಲ್ ಮನ್ನಾ ಮಾಡಿ: ಸಿದ್ದರಾಮಯ್ಯ ಪತ್ರ

    ಬೆಂಗಳೂರು: ಹೋಟೆಲ್, ರೆಸಾರ್ಟ್, ವಸತಿಗೃಹಗಳ ಕೊರೋನಾ ಕಾಲದ ವಿದ್ಯುತ್, ನೀರಿನ ಶುಲ್ಕವನ್ನು ಮನ್ನಾ ಮಾಡುವುದು ಸೇರಿದಂತೆ ಈ ಉದ್ಯಮ ನೆಲಕಚ್ಚದಂತೆ ಅಗತ್ಯ ನೆರವನ್ನು ನೀಡಬೇಕೆಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

    ಸಿದ್ದರಾಮಯ್ಯ ಬರೆದ ಪತ್ರದಲ್ಲೇನಿದೆ..?:
    ಕರ್ನಾಟಕ ಸರ್ಕಾರಕ್ಕೆ ಹೋಟೆಲ್ ಕಾರ್ಮಿಕರು, ದೀಪಾಲಂಕಾರದ ಕೆಲಸಗಾರರು, ಫೋಟೋಗ್ರಾಫರ್ ಗಳು ಸೇರಿ ಇನ್ನಿತರೆ ನಾನಾ ಜನ ಸಮುದಾಯಗಳು ಪಡುತ್ತಿರುವ ಕಷ್ಟ ಕಣ್ಣಿಗೆ ಬಿದ್ದಿಲ್ಲ. ಬೆಂಗಳೂರು ಸೇರಿ ರಾಜ್ಯದ ನಾನಾ ಭಾಗಗಳಲ್ಲಿ ಸಾವಿರಾರು ಹೋಟೆಲ್‍ಗಳು ಬಂದ್ ಆಗಿ ಮಾರಾಟಕ್ಕಿವೆ. ಹೋಟೆಲ್, ಕ್ಯಾಂಟೀನ್ ಕಟ್ಟಡಗಳ ಬಾಡಿಗೆ ಕಟ್ಟಲಾಗದೆ ಮಾಲೀಕರು ಪರಿತಪಿಸುತ್ತಿದ್ದಾರೆ. ಬ್ಯಾಂಕ್ ಸಾಲದ ಬಡ್ಡಿ ಬೆಳೆಯುತ್ತಲೇ ಇರುವ ಕಾರಣ ಸಣ್ಣ ಮತ್ತು ಮಧ್ಯಮ ಹೋಟೆಲ್‍ಗಳ ಮಾಲೀಕರು ಮಾತ್ರವಲ್ಲ ದೊಡ್ಡ ಹೋಟೆಲ್‍ಗಳ ಮಾಲೀಕರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮತ್ತೊಂದು ಕಡೆ ಹೋಟೆಲ್ ಕಾರ್ಮಿಕರು ಎರಡು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಇದೆ. ಬೆಂಗಳೂರು ನಗರ ಮತ್ತು ಅಕ್ಕ ಪಕ್ಕದ ನಾಲ್ಕೈದು ಜಿಲ್ಲೆಗಳಲ್ಲೇ 20 ಸಾವಿರಕ್ಕೂ ಅಧಿಕ ಮಂದಿ ಹೋಟೆಲ್ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಇವರು ಕುಟುಂಬ ನಿರ್ವಹಣೆ ಮಾಡಲಾಗದೆ ಸಂಕಷ್ಟದಲ್ಲಿದ್ದಾರೆ. ಈ ಕಾರ್ಮಿಕರ ಮಕ್ಕಳು ಶಿಕ್ಷಣ ತೊರೆಯಬೇಕಾದ ಸ್ಥಿತಿ ಬಂದೊದಗಿದೆ. ಇಡೀ ಸೇವಾ ವಲಯವೇ ಸ್ಥಗಿತಗೊಂಡಿರುವುದರಿಂದ ಪ್ರವಾಸೋದ್ಯಮವನ್ನು ನೆಚ್ಚಿಕೊಂಡಿದ್ದ ವಸತಿ ಗೃಹಗಳ ಮಾಲೀಕರು ಮತ್ತು ಕೆಲಸಗಾರರೂ ದುಡಿಮೆ ಇಲ್ಲದೆ ಕಂಗಾಲಾಗಿದ್ದಾರೆ. ಶುಭ ಕಾರ್ಯಗಳು ನಡೆಯದಿರುವುದರಿಂದ, ಧಾರ್ಮಿಕ ಕಾರ್ಯಗಳು, ಹಬ್ಬಗಳ ಆಚರಣೆಗೂ ಅವಕಾಶ ಇಲ್ಲವಾಗಿದ್ದರಿಂದ ಫೋಟೋಗ್ರಾಫರ್‍ಗಳು, ಡೆಕೊರೇಟರ್‍ಗಳು, ದೀಪದ ಅಲಂಕಾರ ಮಾಡುವ ಕೆಲಸಗಾರರು ಸೇರಿ ಪ್ರತಿಯೊಂದೂ ದುಡಿಯುವ ವರ್ಗದ ಸಹಸ್ರ ಸಹಸ್ರ ಕುಟುಂಬಗಳು ಕಣ್ಣೀರಲ್ಲಿ ಕೈತೊಳೆಯುತ್ತಿವೆ.

    ಇವರೆಲ್ಲರ ಸಂಕಷ್ಟ ಮತ್ತು ನೋವುಗಳು ಸರ್ಕಾರಕ್ಕೆ ಕಾಣಬೇಕಿತ್ತು. ಸರ್ಕಾರ ಕುರುಡಾಗಿರುವುದರಿಂದ ಈ ಶ್ರಮಿಕ ವರ್ಗಗಳೇ ಸ್ವತಃ ಸರ್ಕಾರವನ್ನು ಇನ್ನಿಲ್ಲದಂತೆ ಒತ್ತಾಯಿಸುತ್ತಿದ್ದರೂ ಅವರಿಗೆ ಸೂಕ್ತವಾದ ನೆರವು ಸಿಕ್ಕಿಲ್ಲ. ಕೊರೋನಾ ಮೊದಲ ಅಲೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರ ಘೋಷಿಸಿದ ಪ್ಯಾಕೇಜ್‍ನಲ್ಲಿ ಅರ್ಧದಷ್ಟು ಕೂಡ ತಲುಪಬೇಕಾದವರಿಗೆ ತಲುಪಲಿಲ್ಲ. ಕಾರ್ಮಿಕ ನಿಧಿ ಹೊರತುಪಡಿಸಿ ಕೇವಲ 800-900 ಕೋಟಿಯಷ್ಟು ಹಣ ನೆಪಮಾತ್ರಕ್ಕೆ ಹಂಚಿಕೆಯಾಗಿದೆ. ಇದನ್ನೂ ಓದಿ: ಮುಂದಿನ ಸಿಎಂ ಬಗೆಗಿನ ಚರ್ಚೆ ಕಾಂಗ್ರೆಸ್ಸಿಗೆ ಅಧಿಕಾರದ ದಾಹ ಎಷ್ಟಿದೆ ಎಂಬುದನ್ನು ತೋರಿಸುತ್ತಿದೆ: ಶೆಟ್ಟರ್

    ಎರಡನೇ ಅಲೆ ಸಂದರ್ಭದಲ್ಲೂ ಸರ್ಕಾರ ಘೋಷಿಸಿರುವ 2 ಸಾವಿರ ಕೋಟಿ ರೂ.ಗಳ ಪ್ಯಾಕೇಜು ರಾಜ್ಯದ ಜನರಿಗೆ ಮಾಡಿರುವ ಅವಮಾನ ಎಂದು ಮತ್ತೊಮ್ಮೆ ಹೇಳಬೇಕಾಗಿದೆ. ಈ 2 ಸಾವಿರ ಕೋಟಿಯಲ್ಲಿ ಕಟ್ಟಡ ಕಾರ್ಮಿಕರಿಗೆ ಘೋಷಿಸಿರುವ ಅವರದ್ದೇ ಹಣದ ಪ್ಯಾಕೇಜು ಬಿಟ್ಟರೆ ಉಳಿಯುವುದು ಕೇವಲ 1500 ಕೋಟಿ ರೂ.ಗಳು ಮಾತ್ರ. ಅತಿ ಕಡಿಮೆ ಪ್ಯಾಕೇಜು ಘೋಷಿಸಿದ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ ಮೊದಲಿಗೆ ನಿಂತಿದೆ ಎಂಬ ಆರೋಪದಿಂದ ಹೊರಬರಬೇಕಾದರೆ ರಾಜ್ಯ ಸರ್ಕಾರ ಈಗಲಾದರೂ ಉತ್ತಮ ಪ್ಯಾಕೇಜನ್ನು ಘೋಷಿಸಿ ಅಕ್ಕ ಪಕ್ಕದ ರಾಜ್ಯಗಳ ಮುಂದೆ ಮರ್ಯಾದೆ ಉಳಿಸಿಕೊಳ್ಳಬೇಕಿದೆ. ಆದ್ದರಿಂದ ಎಲ್ಲ ಬಿಪಿಎಲ್ ಕುಟುಂಬಗಳಿಗೆ ತಲಾ 10,000 ರೂ.ಗಳನ್ನು ಘೋಷಿಸಬೇಕೆಂದು ಮತ್ತೊಮ್ಮೆ ಒತ್ತಾಯಿಸುತ್ತಿದ್ದೇನೆ. ಜೊತೆಗೆ ಈ ಕೆಳಕಂಡ ವಲಯಗಳ ಜನರೂ ಸಹ ಉಳಿದವರಂತೆ ತೀವ್ರ ಬಿಕ್ಕಟ್ಟಿನಲ್ಲಿದ್ದಾರೆ.

    ಆದ್ದರಿಂದ ಹೋಟೆಲ್, ವಸತಿ ಗೃಹ, ಫೋಟೋಗ್ರಾಫರ್ ಗಳು, ಅಲಂಕಾರಿಕ ವೃತ್ತಿಯಲ್ಲಿ ತೊಡಗಿರುವವರಿಗೆ ತಕ್ಷಣ ಸೂಕ್ತ ಪ್ಯಾಕೇಜ್ ಘೋಷಣೆ ಮಾಡಬೇಕು. ಹೋಟೆಲ್, ಕ್ಯಾಂಟೀನ್ ಮಾಲೀಕರ ಬ್ಯಾಂಕ್ ಸಾಲ ವಸೂಲಾತಿಯನ್ನು ಮುಂದೂಡಬೇಕು. ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಬೇಕು. ಜೊತೆಗೆ ಎಲ್ಲಾ ಉತ್ಪಾದಕ ಮತ್ತು ಸೇವಾ ವಲಯಗಳ ಜನರು ಮಾಡಿರುವ ಸಾಲದ ಮೇಲಿನ ಬಡ್ಡಿಯನ್ನೂ ಮನ್ನಾ ಮಾಡಬೇಕು ಎಂದು ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.

  • ಶಿಕ್ಷಕರಿಗೆ ವರ್ಕ್ ಫ್ರಮ್ ಹೋಂ ಮುಂದುವರಿಸಿ – ಸರ್ಕಾರಕ್ಕೆ ಶಿಕ್ಷಕರ ಸಂಘ ಪತ್ರ

    ಶಿಕ್ಷಕರಿಗೆ ವರ್ಕ್ ಫ್ರಮ್ ಹೋಂ ಮುಂದುವರಿಸಿ – ಸರ್ಕಾರಕ್ಕೆ ಶಿಕ್ಷಕರ ಸಂಘ ಪತ್ರ

    ಬೆಂಗಳೂರು: ಸೋಮವಾರದಿಂದ ರಾಜ್ಯ ಸರ್ಕಾರ ಕೆಲ ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡುತ್ತಿದೆ. 11 ಜಿಲ್ಲೆಗಳಲ್ಲಿ ಲಾಕ್ ಡೌನ್ ಯಥಾಸ್ಥಿತಿ ಮುಂದುವರಿಸುತ್ತಿದೆ. ಸರ್ಕಾರದ ಈ ನಿರ್ಧಾರದಿಂದ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಗೊಂದಲಕ್ಕೆ ಸಿಲುಕಿದೆ. ಹೀಗಾಗಿ ಜೂನ್ 20 ವರೆಗೂ ಶಿಕ್ಷಕರಿಗೆ ವರ್ಕ್ ಫ್ರಮ್ ಹೋಂ ವ್ಯವಸ್ಥೆ ಮುಂದುವರಿಸಿ ಅಂತ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಶಿಕ್ಷಕರ ಸಂಘ ಪತ್ರ ಬರೆದು ಮನವಿ ಮಾಡಿದೆ.

    ರಾಜ್ಯ ಸರ್ಕಾರ 11 ಜಿಲ್ಲೆಗಳಲ್ಲಿ ಲಾಕ್ ಡೌನ್ ನಿಯಮಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇದಲ್ಲದೆ ರಾಜ್ಯಾದ್ಯಂತ ಬಿಎಂಟಿಸಿ, ಕೆ.ಎಸ್.ಆರ್.ಟಿ.ಸಿ. ಸೇವೆಗಳು ಲಭ್ಯವಾಗುತ್ತಿಲ್ಲ. ಹೀಗಾಗಿ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಶಾಲೆಗೆ ಹೋಗಲು ಸಾಧ್ಯವಾಗುವುದಿಲ್ಲ. ಇದನ್ನೂ ಓದಿ: 25 ದಿನಗಳ ನಂತರ ಸಾರ್ವಜನಿಕ ಸಂಚಾರಕ್ಕೆ ಸಿಎಂ ನಿವಾಸದ ಬಳಿ ರಸ್ತೆ ಓಪನ್

    ಹೀಗಾಗಿ ಲಾಕ್ ಡೌನ್ ಅವಧಿಯು ಮುಗಿಯೋವರೆಗೂ ಪ್ರೌಢಶಾಲಾ ಸಹ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರಿಗೆ ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಿಕೊಟ್ಟು ಆದೇಶ ಹೊರಡಿಸಬೇಕು ಅಂತ ಕರ್ನಾಟಕ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಮನವಿ ಮಾಡಿಕೊಂಡಿದೆ.

  • ತಾಯಿ ನೆನಪುಗಳು ಇರುವ ಮೊಬೈಲ್ ಫೋನ್ ಹಿಂದಿರುಗಿಸಿ-ಪುಟ್ಟ ಬಾಲಕಿಯ ಮನವಿ

    ತಾಯಿ ನೆನಪುಗಳು ಇರುವ ಮೊಬೈಲ್ ಫೋನ್ ಹಿಂದಿರುಗಿಸಿ-ಪುಟ್ಟ ಬಾಲಕಿಯ ಮನವಿ

    ಮಡಿಕೇರಿ: ಕೊರೊನಾ ಸೋಂಕಿನಿಂದ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿರುವ ನನಗೆ, ನನ್ನ ತಾಯಿ ನೆನೆಪುಗಳು ಇರುವ ಮೊಬೈಲ್ ಫೋನ್ ಅನ್ನು ದಯವಿಟ್ಟು ಹಿಂದಿರುಗಿಸಿ ಎಂದು ಪುಟ್ಟ ಬಾಲಕಿಯೊಬ್ಬಳು ಎಲ್ಲರ ಮನಕಲಕುವಂತೆ ಜಿಲ್ಲಾಧಿಕಾರಿ ಮತ್ತು ಶಾಸಕರಿಗೆ ಪತ್ರ ಬರೆದಿದ್ದಾಳೆ.

    ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಗುಮ್ಮನಕೊಲ್ಲಿಯ ನಿವಾಸಿ ನವೀನ್ ಅವರ ಮಗಳು ಹೃತೀಕ್ಷಾ ಹೀಗೆ ಎಲ್ಲರ ಕರುಳು ಹಿಂಡುವಂತೆ ಪತ್ರ ಬರೆದಿರುವ ಪುಟ್ಟ ಬಾಲಕಿಯಾಗಿದ್ದಾಳೆ. ಮೇ 6 ರಂದು ಬಾಲಕಿ ಹೃತೀಕ್ಷಾ ಈಕೆಯ ತಾಯಿ ಪ್ರಭಾ ಮತ್ತು ತಂದೆ ನವೀನ್ ಮೂವರಿಗೂ ಕೊರೊನಾ ಸೋಂಕು ತಗುಲಿತ್ತು. ಹೃತೀಕ್ಷಾ ಮತ್ತು ನವೀನ್ ಇಬ್ಬರನ್ನು ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ತಾಯಿ ಪ್ರಭಾ ಅವರನ್ನು ಮಡಿಕೇರಿ ಕೊರೊನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಆದರೆ ಪ್ರಭಾ ಅವರಿಗೆ ಚಿಕಿತ್ಸೆ ಫಲಿಸದೆ ಮೇ 16ರಂದು ಮೃತಪಟ್ಟಿದ್ದರು. ಈ ವೇಳೆ ಆಸ್ಪತ್ರೆಯ ಸಿಬ್ಬಂದಿ ತನ್ನ ತಾಯಿಯ ಮೃತದೇಹವನ್ನು ಹಿಂದಿರುಗಿಸಿದರು. ಆದರೆ ಅವರೊಂದಿಗೆ ಇದ್ದ ಫೋನ್ ಅನ್ನು ಹಿಂದಿರುಗಿಸಲಿಲ್ಲ. ಆ ಫೋನ್‍ನಲ್ಲಿ ನನ್ನ ತಾಯಿಯ ನೆನಪುಗಳಿವೆ. ತನ್ನ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿರುವ ನನಗೆ ಆ ಫೋನ್ ಅನ್ನು ಹಿಂದಿರುಗಿಸಿ ನನ್ನ ತಾಯಿಯ ನೆನಪುಗಳನ್ನು ಉಳಿಸಿ ಕೊಡಿ ಇಂತಿ ತಾಯಿಯನ್ನು ಕಳೆದುಕೊಂಡ ನತದೃಷ್ಟೆ ಎಂದು ಬಾಲಕಿ ಹೃತೀಕ್ಷಾ ಕೊಡಗು ಜಿಲ್ಲಾಧಿಕಾರಿ, ಶಾಸಕರು ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ಕರುಳು ಹಿಂಡುವಂತೆ ಪತ್ರ ಬರೆದಿದ್ದಾಳೆ.

  • ಬ್ಲ್ಯಾಕ್ ಫಂಗಸ್‍ಗೆ ಉಚಿತ ವೈದ್ಯಕೀಯ ಸೌಲಭ್ಯ ಒದಗಿಸಿ: ಸೋನಿಯಾ ಗಾಂಧಿ

    ಬ್ಲ್ಯಾಕ್ ಫಂಗಸ್‍ಗೆ ಉಚಿತ ವೈದ್ಯಕೀಯ ಸೌಲಭ್ಯ ಒದಗಿಸಿ: ಸೋನಿಯಾ ಗಾಂಧಿ

    ನವದೆಹಲಿ: ಬ್ಲ್ಯಾಕ್ ಫಂಗಸ್ (ಮ್ಯೂಕೋರ್ಮೈಕೋಸಿಸ್)ಗೆ ತುತ್ತಾದವರಿಗೆ ಉಚಿತವಾಗಿ ಅಗತ್ಯ ವೈದ್ಯಕೀಯ ಸೌಲಭ್ಯಗಳೊಂದಿಗೆ ಚಿಕಿತ್ಸೆ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಒತ್ತಾಯಿಸಿ ಪತ್ರವನ್ನು ಬರೆದಿದ್ದಾರೆ.

    ಈ ಕುರಿತು ಪ್ರಧಾನಿಗೆ ಪತ್ರ ಬರೆದಿರುವ ಅವರು, ಆಯುಷ್ಮಾನ್ ಭಾರತ್ ಯೋಜನೆಯಡಿ ಈ ಬ್ಲ್ಯಾಕ್ ಫಂಗಸ್ ನ್ನು ಸೇರಿಸಿಲ್ಲ, ಅದೇ ರೀತಿ ಹಲವು ಅನೇಕ ಆರೋಗ್ಯ ವಿಮಾ ಯೋಜನೆಗಳಲ್ಲಿಯೂ ಸೇರಿಸಿಲ್ಲ, ಹೀಗಾಗಿ ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕು. ಬ್ಲ್ಯಾಕ್ ಫಂಗಸ್‍ನ್ನು ಸಾಂಕ್ರಾಮಿಕ ಎಂದು ಸಾಂಕ್ರಾಮಿಕ ರೋಗ ಕಾಯ್ದೆಯಡಿ ಘೋಷಿಸಬೇಕೆಂದು ರಾಜ್ಯ ಸರ್ಕಾರಗಳನ್ನು ಸಹ ಸೋನಿಯಾ ಗಾಂಧಿ ಒತ್ತಾಯಿಸಿದ್ದಾರೆ.

    ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡು ಚಿಕಿತ್ಸೆಯ ಅಗತ್ಯವಿರುವವರಿಗೆ ಸಾಕಷ್ಟು ವೈದ್ಯಕೀಯ ಸೌಲಭ್ಯಗಳೊಂದಿಗೆ ಉಚಿತವಾಗಿ ಚಿಕಿತ್ಸೆ ನೀಡುವಂತೆ ಕೂಡ ಪತ್ರದಲ್ಲಿ ಸೋನಿಯಾ ಗಾಂಧಿ ಒತ್ತಾಯಿಸಿದ್ದಾರೆ.

    ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಲಿಪೊಸೊಮಲ್ ಆಂಪೊಟೆರಿಸಿನ್-ಬಿ ಅತ್ಯಗತ್ಯವಾಗಿದ್ದು ಮಾರುಕಟ್ಟೆಯಲ್ಲಿ ಅದಕ್ಕೆ ಭಾರೀ ಕೊರತೆಯಿಂದ ಎಂದು ಕಂಡುಬರುತ್ತಿದೆ. ಅಲ್ಲದೆ ಆಯುಷ್ಮಾನ್ ಭಾರತ್ ಯೋಜನೆ ಮತ್ತು ಇತರ ಆರೋಗ್ಯ ವಿಮಾ ಯೋಜನೆಯಡಿ ಇದನ್ನು ಸೇರಿಸಿಲ್ಲ, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೂಡ ಪ್ರಧಾನಿಯವರನ್ನು ಸೋನಿಯಾ ಗಾಂಧಿ ಪತ್ರದ ಮೂಲಕ ಗಮನ ಸೆಳೆದಿದ್ದಾರೆ.

  • ಕಪ್ ಗೆಲ್ಲದೆ ಮನೆಗೆ ಬರಬೇಡ- ಅರವಿಂದ್‍ಗೆ ಮನೆಯವರಿಂದ ಭಾವನಾತ್ಮಕ ಪತ್ರ

    ಕಪ್ ಗೆಲ್ಲದೆ ಮನೆಗೆ ಬರಬೇಡ- ಅರವಿಂದ್‍ಗೆ ಮನೆಯವರಿಂದ ಭಾವನಾತ್ಮಕ ಪತ್ರ

    ನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕೊನೇಯ ಹಂತ ತಲುಪಿದ್ದು, ಇನ್ನೇನು ಲಾಸ್ಟ್ ಎಪಿಸೋಡ್, ಮನೆಗೆ ಹೊರಡಬೇಕು ಎನ್ನುವಾಗಲೇ ಸ್ಪರ್ಧಿಗಳಿಗೆ ಅವರ ಮನೆಯಿಂದ ಪತ್ರಗಳು ಬಂದಿವೆ. ಅದೇ ರೀತಿ ಅರವಿಂದ್ ತಂದೆ ಸಹ ಪ್ರೀತಿಯ ಮಗನಿಗೆ ಪತ್ರ ಬರೆದಿದ್ದು, ಕ್ಯಾಪ್ಟೆನ್ಸಿ ಚೆನ್ನಾಗಿ ನಿಭಾಯಿಸಿದ್ದೀಯಾ ಎಂದು ಹಾಡಿ ಹೊಗಳಿದ್ದಾರೆ.

    ಪ್ರೀತಿಯ ಅರವಿಂದ್ ನಿನ್ನ ತಂದೆ, ತಾಯಿ ಹಾಗೂ ಪ್ರಶಾಂತುನು ಮಾಡುವ ಆಶೀರ್ವಾದಗಳು. ನಾವೆಲ್ಲರೂ ಕ್ಷೇಮವಾಗಿದ್ದೇವೆ, ನಿನ್ನ ಆರೋಗ್ಯವನ್ನೂ ಚೆನ್ನಾಗಿ ನೋಡಿಕೊ. ಬಿಗ್ ಬಾಸ್ ವೇದಿಕೆಯಲ್ಲಿ ನಿನ್ನ ಆಟಗಳನ್ನು ನೋಡಿ ನಮಗೆಲ್ಲ ಬಹಳ ಸಂತೋಷವಾಗುತ್ತಿದೆ. ನಿನಗೆ ನೀಡಿದ ಕ್ಯಾಪ್ಟನ್ಸಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದೀಯಾ ಎಂದು ಹಾಡಿ ಹೊಗಳಿದ್ದಾರೆ.

    ಮನೆಯ ಹತ್ತಿರದವರು, ಕುಟುಂಬಸ್ಥರು, ಗೆಳೆಯರು, ಊರಿನವರು ಹಾಗೂ ಪರ ಊರಿನವರು ಬಿಗ್ ಬಾಸ್ ಮನೆಯಲ್ಲಿ ನಿನ್ನ ಚಟುವಟಿಕೆಗಳನ್ನು ನೋಡಿ ಫೋನ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಬಿಗ್ ಬಾಸ್ ಮನೆಯಿಂದ ನಿನಗೆ ಶುಭವಾಗಲಿ, ದೇವರು ನಿನಗೆ ಒಳ್ಳೆಯದು ಮಾಡಲಿ ನಿನ್ನ ಪ್ರೀತಿಯ ತಂದೆ ಪ್ರಭಾಕರ್ ಪಾಥ್ಯ ಎಂದು ಹೇಳಿ ಕೊನೇಯದಾಗಿ ಕಪ್ ತೆಗೆದುಕೊಳ್ಳದೆ ಮನೆಗೆ ಬರಬೇಡ ಎಂದು ಬ್ರಾಕೆಟ್‍ನಲ್ಲಿ ಬರೆದಿದ್ದಾರೆ.

    ಅರವಿಂದ್ ಬಗ್ಗೆ ತಂದೆ ಹಾಗೂ ಮನೆಯವರು ಪತ್ರದ ಮೂಲಕ ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ ಕಪ್ ಗೆಲ್ಲದೆ ಮನೆಗೆ ಬರಬೇಡ ಎಂದು ಹೇಳುವ ಮೂಲಕ ಆತ್ಮಸ್ಥೈರ್ಯ ತುಂಬಿದ್ದಾರೆ. ಕಪ್ ಗೆಲ್ಲುವ ಕುರಿತು ಹೇಳಿದ್ದಕ್ಕೆ ಅರವಿಂದ್ ನಕ್ಕು, ಹೇ ಇಲ್ಲ…ಇಲ್ಲ… ಅಂದಿದ್ದಾರೆ. ಅಲ್ಲದೆ ಮನೆಯವರೆಲ್ಲ ಪತ್ರ ಚೆನ್ನಾಗಿದೆ ಎಂದು ಹೇಳಿದ್ದಕ್ಕೆ, ನನಗೆ ಮನೆಯಲ್ಲಿ ಬೈಯುವುದು ಒಂದೇ ವಿಚಾರಕ್ಕೆ ಗಲಾಟೆ ಮಾಡಿರುವುದಕ್ಕೆ ಮಾತ್ರ ಬೈಯ್ಯುತ್ತಾರೆ. ಬೇರೆ ಯಾವುದಕ್ಕೂ ತೊಂದರೆ ಇಲ್ಲ. ಗಲಾಟೆ ಮಾತ್ರ ಆಗುವುದೇ ಇಲ್ಲ ಮನೆಯಲ್ಲಿ ಎಂದಿದ್ದಾರೆ.

  • ಮಾಲಾಶ್ರೀಗೆ ಪತ್ರ ಬರೆದು ಸಾಂತ್ವನ ತಿಳಿಸಿದ ನಟಿ ಶ್ರುತಿ

    ಮಾಲಾಶ್ರೀಗೆ ಪತ್ರ ಬರೆದು ಸಾಂತ್ವನ ತಿಳಿಸಿದ ನಟಿ ಶ್ರುತಿ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಕೋಟಿ ನಿರ್ಮಾಪಕ ಎಂದೇ ಖ್ಯಾತಿ ಪಡೆದಿದ್ದ ನಿರ್ಮಾಪಕ ರಾಮು ಸೋಮವಾರ ಕೊರೊನಾದಿಂದ ಸಾವನ್ನಪ್ಪಿದರು. ಪತಿಯನ್ನು ಕಳೆದುಕೊಂಡು ದುಃಖದಲ್ಲಿರುವ ಮಾಲಾಶ್ರೀಗೆ ನಟಿ ಶ್ರುತಿ ಸಾಮಾಜಿಕ ಜಾಲತಾಣದ ಮೂಲಕ ಭಾವುಕ ಪತ್ರ ಬರೆದು ಸಾಂತ್ವಾನ ಹೇಳಿದ್ದಾರೆ.

    ‘ಮೊದಲಿಗೆ ಭಾರವಾದ ಹೃದಯದಿಂದ ರಾಮು ಅವರಿಗೆ ಭಾವ ಪೂರ್ಣ ಶ್ರದ್ಧಾಂಜಲಿ. ನಿಮ್ಮ ಅಭಿಮಾನಿಯಾಗಿ, ನಿಮ್ಮ ಸಹೋದ್ಯೋಗಿಯಾಗಿ, ಒಬ್ಬ ಗೆಳತಿಯಾಗಿ ಇಂಥ ದುಃಖದ ಪರಿಸ್ಥಿತಿಯಲ್ಲಿ ನಿಮ್ಮನ್ನು ನೋಡಲು ಸಾಧ್ಯವಾಗದೇ ಕನಿಷ್ಠ ನಿಮ್ಮ ಕಣ್ಣೀರನ್ನು ಒರೆಸಲು ಸಾಧ್ಯವಾಗದ ಕ್ರೂರ ಪರಿಸ್ಥಿತಿಗೆ ನನ್ನದೊಂದು ದಿಕ್ಕಾರ.’

    ಮಾಲಾ ನಿಮಗಾದ ನಷ್ಟವನ್ನು ಸರಿಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಮುಂಬರುವ ದಿನಗಳನ್ನು ಧೈರ್ಯವಾಗಿ ಎದುರಿಸಬೇಕಾಗಿರುವ ಅನಿವಾರ್ಯತೆ ಇದೆ. ನಿಮಗಾಗಿ, ನಿಮ್ಮ ಕೋಟ್ಯಾನುಕೋಟಿ ಅಭಿಮಾನಿಗಳಿಗಾಗಿ, ಬಹುಮುಖ್ಯವಾಗಿ ನಿಮ್ಮ ಮುದ್ದು ಮಕ್ಕಳ ಭವಿಷ್ಯಕ್ಕಾಗಿ. ನೀವು ಹುಟ್ಟು ಹೋರಾಟಗಾರ್ತಿ. ಅದು ನನ್ನ ಕಣ್ಣಾರೆ ನೋಡಿದ್ದೇನೆ.’

    ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚಿದ್ದು ಕೇವಲ ಅದೃಷ್ಟದಿಂದ ಅಲ್ಲ. ನಿಮ್ಮ ಪರಿಶ್ರಮದಿಂದ. ನಂತರ ಒಬ್ಬ ಉತ್ತಮ ಗೃಹಿಣಿ ಆಗಿದ್ದು, ಕೇವಲ ದೇವರ ವರದಿಂದ ಅಲ್ಲಾ ತ್ಯಾಗ, ಸಹನೆ, ಪ್ರೀತಿಯಿಂದ, ಒಳ್ಳೆ ತಾಯಿ ಆಗಲೂ ಅಷ್ಟೇ ಶ್ರಮ, ಪ್ರಯತ್ನ ಇದ್ದೇ ಇರುತ್ತೆ.’ ಹೀಗೆ ಜೀವನದ ಎಲ್ಲಾ ಏರಿಳಿತದ ಸಂದರ್ಭವನ್ನು ಧೈರ್ಯವಾಗಿ ನಿಭಾಯಿಸಿಕೊಂಡು ಬಂದಿದ್ದೀರಿ. ರಾಮು ಅವರಿಲ್ಲದ ಮುಂದಿನ ದಿನಗಳು ನಿಮಗೆ ಕಷ್ಟಕರವಾಗಿದ್ದರೂ ಅದನ್ನು ನಿಭಾಯಿಸುತ್ತೀರಿ ಹಾಗೂ ನಿಭಾಯಿಸುವ ಶಕ್ತಿ ಆ ದೇವರು ನಿಮಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತಾ, ಆ ಕಷ್ಟದ ಹಾದಿಯಲ್ಲಿ ಎಂದಾದರೂ ಈ ಗೆಳತಿಯ ಸಹಾಯ ಬೇಕಾದಲ್ಲಿ ಒಂದು ಫೋನ್ ಕಾಲ್ ಸಾಕು ಎಂದು ಪತ್ರ ಬರೆದಿದ್ದಾರೆ.

     

    View this post on Instagram

     

    A post shared by Shruthi (@shruthi__krishnaa)

    ಜೊತೆಗೆ ಕಾಮೆಂಟ್ ಸೆಕ್ಷನ್‍ನಲ್ಲಿ ಎಲ್ಲರಲ್ಲಿಯೂ ಒಂದು ಕಳಕಳಿಯ ಮನವಿ ಮುಂದೊಂದು ದಿನ ಈ ಕುಟುಂಬದ ಸದಸ್ಯರು ಬದುಕನ್ನು ಕಟ್ಟಿಕೊಳ್ಳಲು ಅವರು ಮಾಡುವ ಪ್ರಯತ್ನಕ್ಕೆ ನಿಮ್ಮೆಲ್ಲರ ಸಹಕಾರ ಇರಲಿ ಹಾಗೂ ಸೆಲೆಬ್ರೆಟಿಗಳ ಬದುಕಿನ ಬಗ್ಗೆ ಸುಲಭವಾಗಿ ಮತ್ತು ಹಗುರವಾಗಿ ಕಾಮೆಂಟ್ ಮಾಡುವುದರ ಬದಲು ಒಂದು ಒಳ್ಳೆಯ ಕಮಿಟ್ಮೆಂಟ್ ಇರಲಿ ಏಕೆಂದರೆ ಬದುಕನ್ನು ಕಟ್ಟಿಕೊಳ್ಳುವ ಕೆಲಸ ಸುಲಭವಲ್ಲ ಎಂದು ಬರೆದುಕೊಂಡಿದ್ದಾರೆ.

  • ಮಗಳ ಪತ್ರ ಓದಿ ಕಣ್ಣೀರಿಟ್ಟು ಕಿರುಚಾಡಿದ್ರು ಚಕ್ರವರ್ತಿ

    ಮಗಳ ಪತ್ರ ಓದಿ ಕಣ್ಣೀರಿಟ್ಟು ಕಿರುಚಾಡಿದ್ರು ಚಕ್ರವರ್ತಿ

    ಬಿಗ್ ಬಾಸ್ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್ ಎಷ್ಟು ನೇರವಾಗಿ ಮಾತನಾಡುತ್ತಾರೋ ಅಷ್ಟೇ ನಿಷ್ಠೂರವಾದಿ, ಹಾಗೇ ಅಷ್ಟೇ ಬೇಗ ಭಾವುಕರಾಗುತ್ತಾರೆ. ಟಾಸ್ಕ್‍ನಲ್ಲಿ ಗೆದ್ದ ಸ್ಪರ್ಧಿಗಳಿಗೆ ಮನೆಯಿಂದ ಪತ್ರಗಳು ಬರುತ್ತವೆ. ಆದರೆ ಮಗಳಿಂದ ಬಂದಿರುವ ಪತ್ರವನ್ನು ಓದಿದ ಚಕ್ರವರ್ತಿ ಕಣ್ಣೀರು ಹಾಕಿ ಕಿರುಚಾಡಿದ್ದಾರೆ.

    ಬಿಗ್ ಬಾಸ್‍ನಲ್ಲಿ ನೀಡಿದ್ದ ಟಾಸ್ಕ್ ಗೆದ್ದು ಚಕ್ರವರ್ತಿ ಚಂದ್ರಚೂಡ್ ಅವರಿಗೆ ಮಗಳು ಚುಕ್ಕಿ ಬರೆದಿರುವ ಪತ್ರ ಓದುವ ಅವಕಾಶ ಸಿಕ್ಕಿದೆ. ಮಗಳ ಪತ್ರವನ್ನು ಓದಿ ಚಕ್ರವರ್ತಿ ಅವರು ಭಾವುಕರಾಗಿ ಕಿರುಚಾಡಿದ್ದಾರೆ. ಮನೆಯವರೆಲ್ಲರೂ ಚಕ್ರವರ್ತಿಗೆ ಸಮಾಧಾನ ಹೇಳಿದ್ದಾರೆ. ಕೆಲವರು ಅವರ ಮನೆಯಮಂದಿಯನ್ನು ನೆನೆದು ಕಣ್ಣಿರು ಹಾಕಿದ್ದಾರೆ.

    ಹಾಯ್ ಅಪ್ಪಾ, ನಾನು ನಿನ್ನ ಪ್ರತಿನಿತ್ಯ ಟಿವಿಯಲ್ಲಿ ನೋಡುತ್ತಿದ್ದೇನೆ. ನಿನ್ನ ಮಾತಿನ ಕಿಚ್ಚು ಆ ಮನೆಯಲ್ಲಿ ಮೌನದ ಪತಾಕೆಯನ್ನು ಹಾರಿಸಿದೆ. ಪ್ರತಿ ಪಾತ್ರದ ನಾಟಕ ಬೇರೆ. ಆ ಪಾತ್ರದ ಕಥೆಯನ್ನು ಬದಲಾಯಿಸುವ ಶಕ್ತಿ ನಿನಗೆ ಇದೆ. ನಾನು ನೀನು ಕಳೆದಿರುವ ಸಮಯ ತುಂಬ ಕಡಿಮೆ. ನಾನು ನಿನ್ನ ತುಂಬ ಮಿಸ್ ಮಾಡಿಕೊಳ್ತಿದ್ದೀನಿ. ಹೀಗೆ ಅಪ್ಪನ ಜೊತೆಗೆ ಕಳೆದಿರುವ ಕೆಲವು ಕ್ಷಣಗಳನ್ನು ನೆನೆಪಿಸಿಕೊಂಡು ಬರೆದು ನಿನ್ನ ಮುದ್ದಿನ ಮಗಳು ಚುಕ್ಕಿ ಎಂದು ಚಕ್ರವರ್ತಿ ಚಂದ್ರಚೂಡ್ ಮಗಳು ಬರೆದಿದ್ದಾರೆ. ಚಕ್ರವರ್ತಿಗೆ ಮಗಳಿಂದ ಪತ್ರಬಂದಿರುವುದ ಅತ್ಯಂತ ಸಂತೋಷವನ್ನು ತಂದಿದೆ.

    ಚಕ್ರವರ್ತಿ ಅವರು ಆಗಾಗ ನಾನು ಜೀವನದಲ್ಲಿ ಸೋತಿದ್ದೇನೆ ಎಂದು ತಮ್ಮ ವೈಯಕ್ತಿಕ ವಿಚಾರಗಳ ಕುರಿತಾಗಿ ಹೇಳುತ್ತಿರುತ್ತಾರೆ. ಪ್ರತಿಯೊಬ್ಬರ ಜೀವನದಲ್ಲಿ ಸುಖ, ದುಖಃ ನೋವುಗಳಿರುತ್ತವೆ. ಬಿಗ್‍ಬಾಸ್ ಸಮಯಕ್ಕೆ ತಕ್ಕಂತೆ ಒಂದೊಂದಾಗಿ ಹೊರಗೆ ತೆಗೆದು ಮನಸ್ಸಿನ ಭಾರವನ್ನು ಹಗುರ ಮಾಡುತ್ತಿರುವುದಂತೂ ಖಂಡಿತಾ ಹೌದು.