ಬೆಂಗಳೂರು: ಆಸಾಮಿಯೊಬ್ಬ ನನಗೆ ಸರ್ವಿಸ್ ಕೊಡ್ತೀರಾ, ದಿನಕ್ಕೆ 50 ಸಾವಿರ ರೂ. ಕೊಡ್ತೀನಿ ಎಂದು ಮಹಿಳೆಯ ಫ್ಲಾಟ್‍ನ ಡೋರ್ ಮುಂದೆ ಪತ್ರ (Letter) ಬರೆದಿಟ್ಟು ಕಾಲಿಂಗ್ ಬೆಲ್ ಹೊಡೆದು ಲೈಂಗಿಕ ಕಿರುಕುಳ (Sexual Assault) ನೀಡಿದ ಘಟನೆ ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ಅಪಾರ್ಟ್‍ಮೆಂಟ್‍ನಲ್ಲಿ (Apartment) ವಾಸವಿರುವ ಮಹಿಳೆಗೆ ಆಸಾಮಿಯೊಬ್ಬ ಫ್ಲಾಟ್‍ನ ಡೋರ್‌ನಲ್ಲಿ ಲೇಟರ್ ಇಟ್ಟು ಕಾಲಿಂಗ್ ಬೆಲ್ ಹೊಡೆದಿದ್ದ. ಮಹಿಳೆ ಹೊರ ಬಂದು ಯಾರೆಂದು ನೋಡಿದಾಗ ಲೆಟರ್ ಸಿಕ್ಕಿದೆ. ಪತ್ರದಲ್ಲಿ ನನಗೆ ಸರ್ವಿಸ್ ಕೊಡ್ತೀರಾ? ಹಾಗಾದ್ರೆ ಬೇಸ್ಮೆಂಟ್‍ಗೆ ಬನ್ನಿ. ಒಂದು ದಿನಕ್ಕೆ 50 ಸಾವಿರ ರೂ. ಕೊಡ್ತೀನಿ ಎಂದು ಅಸಭ್ಯವಾಗಿ ಬರೆದಿಟ್ಟು ಅಪರಿಚಿತ ಪರೋಕ್ಷವಾಗಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಇದನ್ನೂ ಓದಿ: ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತು ಮೂರು ಮಕ್ಕಳಿಗೆ ವಿಷ ಹಾಕಿ ಮಹಿಳೆ ನೇಣಿಗೆ ಶರಣು
ಮಹಿಳೆ ಪತ್ರವನ್ನು ಕೂಡಲೇ ಅಪಾರ್ಟ್‍ಮೆಂಟ್‍ನ ಸಿಬ್ಬಂದಿ ಗಮನಕ್ಕೆ ತಂದು ವಿಚಾರ ತಿಳಿಸಿದ್ದಾರೆ. ಬಳಿಕ ಈ ಬಗ್ಗೆ ಠಾಣೆಗೆ ದೂರು ನೀಡಲು ನಿರ್ಧರಿಸಿದ್ದಾರೆ. ಸದ್ಯ ಪತ್ರದ ಮೂಲಕ ಲೈಂಗಿಕ ಕಿರುಕುಳ ಎಂದು ಮಹಿಳೆ ಕೋಣನಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಕೂಡ ತನಿಖೆ ಆರಂಭಿಸಿದ್ದು, ಅಪಾರ್ಟ್‍ಮೆಂಟ್‍ನಲ್ಲಿರುವವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕಾಲೇಜಿಲ್ಲ: ಬೊಮ್ಮಾಯಿ
Live Tv
[brid partner=56869869 player=32851 video=960834 autoplay=true]
ಶಿವಮೊಗ್ಗ: ತಾನು ವಿವಾಹವಾಗಲು (Marriage) ಹುಡುಗಿ (Girl) ಹುಡುಕಿಕೊಡಿ ಎಂದು ಯುವಕನೊಬ್ಬ (Man) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅವರಿಗೆ ಪತ್ರ (Letter) ಬರೆದಿರುವ ವಿಚಿತ್ರ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ.
ಭದ್ರಾವತಿಯ ಹೊಸಮನೆ ಬಡಾವಣೆ ನಿವಾಸಿ ಪ್ರವೀಣ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರಿಗೆ ಮದುವೆಯಾಗಲು ವಧು (Bride) ಹುಡುಕಿಕೊಡುವಂತೆ ಪತ್ರ ಬರೆದು ಮನವಿ ಮಾಡಿಕೊಂಡಿರುವ ಯುವಕ.
ಪ್ರವೀಣ್ ಈ ಹಿಂದೆ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಆದರೆ ಇದೀಗ ತನ್ನ ಜಮೀನಿನಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದಾನೆ. ಮದುವೆ ಆಗಲು ಸಾಕಷ್ಟು ಹುಡುಗಿಯರ ಅನ್ವೇಷಣೆ ನಡೆಸಿದ್ದ ಈತ ತನಗೆ ಸೂಕ್ತ ವಧು ಸಿಗದ ಹಿನ್ನೆಲೆಯಲ್ಲಿ ಎಸ್‌ಪಿ ಕಚೇರಿಗೆ ಆಗಮಿಸಿ ತಮ್ಮ ವ್ಯಾಪ್ತಿಯಲ್ಲಿ ಸೂಕ್ತ ವಧು ಸಿಕ್ಕಿದರೆ ಮದುವೆ ಮಾಡಿಸುವಂತೆ ಮನವಿ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಬಿಜೆಪಿ 140 ಸ್ಥಾನ ಗೆದ್ದರೆ ಕಾಂಗ್ರೆಸ್ ಧೂಳಿಪಟ – ಯಡಿಯೂರಪ್ಪ
ಮುಂಬೈ: ಲಿವ್‌ಇನ್ ರಿಲೇಶನ್‌ನಲ್ಲಿದ್ದು ತನ್ನ ಬಾಯ್‌ಫ್ರೆಂಡ್ ಕೈಯಲ್ಲೇ ಕೊಲೆಯಾಗಿ, ತುಂಡು ತುಂಡಾಗಿ ಕತ್ತರಿಸಿ ದೆಹಲಿಯಾದ್ಯಂತ (Delhi) ಕಾಡುಗಳಲ್ಲಿ ಹೂತು ಹೋದ ಯುವತಿ ಶ್ರದ್ಧಾ (Shraddha Walkar) 2 ವರ್ಷಗಳ ಹಿಂದೆಯೇ ಈ ರೀತಿ ಆಗಬಹುದು ಎಂದು ಪೊಲೀಸರಿಗೆ (Cops) ತನಗಾದ ಭೀತಿಯನ್ನು ಪತ್ರದ (Letter) ಮೂಲಕ ತಿಳಿಸಿದ್ದರು ಎಂಬುದು ಇದೀಗ ಬೆಳಕಿಗೆ ಬಂದಿದೆ.
ಶ್ರದ್ಧಾ 2 ವರ್ಷಗಳ ಹಿಂದೆ ತಮ್ಮ ಹುಟ್ಟೂರಾದ ವಸಾಯಿಯ ತಿಲುಂಜ್‌ನಲ್ಲಿ ಪೊಲೀಸರಿಗೆ ಈ ಬಗ್ಗೆ ತಿಳಿಸಿದ್ದರು. ಆಕೆ ಅಫ್ತಾಬ್‌ನೊಂದಿಗೆ (Aftab Poonawala) ಒಂದೇ ಫ್ಲಾಟ್‌ನಲ್ಲಿ ವಾಸವಿದ್ದು, ಅಫ್ತಾಬ್ ಆಕೆಗೆ ಥಳಿಸಿದ ಕಾರಣಕ್ಕೆ ಪೊಲೀಸರಿಗೆ ಪತ್ರ ಬರೆದಿದ್ದಾಗಿ ಮಹಾರಾಷ್ಟ್ರದ ತನಿಖಾಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
2022ರ ನವೆಂಬರ್ 23ರಂದು ಶ್ರದ್ಧಾ ಬರೆದಿರುವ ಪತ್ರದಲ್ಲಿ, ಅಫ್ತಾಬ್ ಇಂದು ನನ್ನನ್ನು ಉಸಿರುಗಟ್ಟಿಸಿ ಕೊಲ್ಲಲು ಪ್ರಯತ್ನಿಸಿದ್ದಾನೆ. ಆತ ನನಗೆ ಬ್ಲಾಕ್‌ಮೇಲ್ ಮಾಡುತ್ತಿದ್ದು, ನನ್ನನ್ನು ಕೊಂದು, ತುಂಡು ತುಂಡು ಮಾಡಿ ಎಸೆದು ಹೋಗುತ್ತೇನೆ ಎಂದು ಹೆದರಿಸುತ್ತಿದ್ದಾನೆ. ಕಳೆದ 6 ತಿಂಗಳಿನಿಂದ ಆತ ನನಗೆ ನಿರಂತರವಾಗಿ ಹೊಡೆಯುತ್ತಿದ್ದಾನೆ. ಆದರೆ ನನಗೆ ಈ ಬಗ್ಗೆ ಪೊಲೀಸರ ಬಳಿ ಹೋಗಿ ಹೇಳುವಷ್ಟು ಧೈರ್ಯವಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತನ್ನೆದುರೇ ಸೆಕ್ಸ್ ಮಾಡಲು ಜೋಡಿಯನ್ನು ಒತ್ತಾಯಿಸಿದ ಪೂಜಾರಿ – ಫಾಸ್ಟ್ ಗಂ ಸುರಿದು ಇಬ್ಬರ ಹತ್ಯೆ
ವರದಿಗಳ ಪ್ರಕಾರ ಡೇಟಿಂಗ್ ಅಪ್ಲಿಕೇಶನ್ ಮೂಲಕ ಪರಿಚಯವಾದ ಶ್ರದ್ಧಾ ಹಾಗೂ ಅಫ್ತಾಬ್ 2019ರಲ್ಲಿ ಸಂಬಂಧ ಬೆಳೆಸಿದ್ದರು. ಪತ್ರದಲ್ಲಿ ಆಕೆ 6 ತಿಂಗಳಿನಿಂದ ಹಿಂಸೆಯನ್ನು ಅನುಭವಿಸುತ್ತಿರುವುದಾಗಿ ತಿಳಿಸಿದರೂ ಅವರಿಬ್ಬರ ಸಂಬಂಧ ಮತ್ತೆರಡು ವರ್ಷಗಳ ವರೆಗೂ ಮುರಿದು ಹೋಗಿರಲಿಲ್ಲ. ಈ ವರ್ಷ ಮೇ ತಿಂಗಳಿನಲ್ಲಿ ಅವರಿಬ್ಬರೂ ದೆಹಲಿಗೆ ಸ್ಥಳಾಂತರಗೊಂಡಿದ್ದರು.
ಡೆಹ್ರಾಡೂನ್: ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಪತ್ರದ ಮೂಲಕ ತ್ರಿವಳಿ ತಲಾಖ್ (Triple Talaq) ನೀಡಿರುವ ಘಟನೆ ಉತ್ತರಾಖಂಡದಲ್ಲಿ (Uttarakhand) ನಡೆದಿದೆ. ಈ ಸಂಬಂಧ ಆರೋಪಿ ವಿರುದ್ಧ ಮಹಿಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.
ಕಿರುಕುಳ, ಹಲ್ಲೆ ಮತ್ತು ಬಲವಂತದ ಗರ್ಭಪಾತದ ಗಂಭೀರ ಆರೋಪ ಮಾಡಿ ಮಹಿಳೆ ದೂರು ದಾಖಲಿಸಿದ್ದಾರೆ. ಹಿಮಾಚಲ ಪ್ರದೇಶದ ಸಿರ್ಮೋರ್ ಜಿಲ್ಲೆಯ ಪೌಂಟಾ ಸಾಹಿಬ್‌ನ ನಿವಾಸಿಯಾಗಿರುವ ಆರೋಪಿ ಮೆಹಬೂಬ್ ಅಲಿ ತನ್ನನ್ನು ಮನೆಯಿಂದ ಹೊರಹಾಕಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಇದನ್ನೂ ಓದಿ: ಪೆಟ್ರೋಲ್ ಜೊತೆಗೆ ನೀರು ಬೆರಕೆ – ಪಂಪ್ ವಿರುದ್ಧ ವ್ಯಕ್ತಿಯಿಂದ ದೂರು
2017ರಲ್ಲಿ ನನ್ನ ವಿವಾಹವಾಯಿತು. ಕಡಿಮೆ ವರದಕ್ಷಿಣೆ ತಂದಿದ್ದಕ್ಕಾಗಿ ಅತ್ತೆ ನನ್ನನ್ನು ನಿಂದಿಸುತ್ತಿದ್ದರು. ಮದುವೆಯ ನಂತರ ಪತಿ ನನಗೆ ಥಳಿಸುತ್ತಿದ್ದ. ತಾನು ಮೊದಲ ಬಾರಿಗೆ ಗರ್ಭಿಣಿಯಾದ ನಂತರ, ಪತಿ ನನ್ನ ಮೇಲೆ ಗಂಭೀರ ಹಲ್ಲೆ ನಡೆಸಿದ್ದರಿಂದ ಗರ್ಭಪಾತವಾಯಿತು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ನನ್ನನ್ನು ಮನೆಯಿಂದ ಆಚೆ ಹಾಕುವ ಮೊದಲು ಹಲವು ದಿನಗಳ ಕಾಲ ಆಹಾರ ಮತ್ತು ನೀರು ನೀಡದೇ ಕೋಣೆಯಲ್ಲಿ ಕೂಡಿ ಹಾಕಿದ್ದರು. ನಿರಂತರ ಕಿರುಕುಳದಿಂದ ನಾನು ಖಿನ್ನತೆಗೆ ಒಳಗಾಗಿದ್ದೇನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಅಫ್ತಾಬ್‌ಗೆ ಮಂಪರು ಪರೀಕ್ಷೆ – ಪೊಲೀಸರಿಗೆ ಕೋರ್ಟ್ ಅನುಮತಿ
ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಮೆಹಬೂಬ್ ಅಲಿ, ಶಂಶೇರ್ ಅಲಿ, ಗುಲ್ಷೇರ್ ಅಲಿ, ಮೊಹ್ಸಿನಾ ಮತ್ತು ಪರ್ವೀನ್ ವಿರುದ್ಧ ಸೂಕ್ತ ಕಾನೂನು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಕ್ಲೆಮೆಂಟೌನ್ ಪೊಲೀಸ್ ಠಾಣೆ ಪ್ರಭಾರಿ ಕುಲವಂತ್ ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಶಾಲಾ-ಕಾಲೇಜು (School-College) ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಿಸಲು, ಆರೋಗ್ಯ ವೃದ್ಧಿ, ಒತ್ತಡ ಮುಕ್ತವಾಗಿಸಲು ಶಿಕ್ಷಣ ಇಲಾಖೆ ಧ್ಯಾನದ (Meditation) ಮೊರೆ ಹೋಗಿದೆ. ಇನ್ನು ಮುಂದೆ ಶಾಲಾ-ಕಾಲೇಜುಗಳಲ್ಲಿ 10 ನಿಮಿಷ ವಿದ್ಯಾರ್ಥಿಗಳಿಗೆ ಧ್ಯಾನ ಮಾಡಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಶಾಲಾ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ (B.C. Nagesh), ಧ್ಯಾನ ಮಾಡುವ ಸಂಬಂಧ ಆದೇಶ ಹೊರಡಿಸಲು ಸೂಚನೆ ನೀಡಿದ್ದಾರೆ. ನಿತ್ಯ ಶಾಲಾ-ಕಾಲೇಜುಗಳಲ್ಲಿ 10 ನಿಮಿಷ ವಿದ್ಯಾರ್ಥಿಗಳು ಕಡ್ಡಾಯವಾಗಿ ಧ್ಯಾನ ಮಾಡಬೇಕು. ಇದಕ್ಕಾಗಿ ಸಮಯ ನಿಗದಿ ಮಾಡುವಂತೆ ಸೂಚನೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಣ ಸಂಘದವರು ಶಾಲಾ-ಕಾಲೇಜುಗಳಲ್ಲಿ ಧ್ಯಾನ ಮಾಡಿಸುವಂತೆ ಬಿ.ಸಿ. ನಾಗೇಶ್ ಅವರಿಗೆ ಪತ್ರ ಬರೆದಿದ್ದರು. ಮಕ್ಕಳ ಏಕಾಗ್ರತೆ, ಆರೋಗ್ಯ ವೃದ್ಧಿ, ಒತ್ತಡ ನಿವಾರಣೆ ದೃಷ್ಟಿಯಿಂದ ಸಚಿವರು ಧ್ಯಾನ ಮಾಡಿಸುವ ಮನವಿಗೆ ಸ್ಪಂದನೆ ನೀಡಿದ್ದಾರೆ. ಇದನ್ನೂ ಓದಿ: ಮಾಜಿ ಸಂಸದರಾದ ಮುದ್ದಹನುಮೇಗೌಡ, ನಟ ಶಶಿಕುಮಾರ್ ಬಿಜೆಪಿ ಸೇರ್ಪಡೆ
ಪುನೀತ್ ರಾಜ್ ಕುಮಾರ್ ಅಗಲಿ ಇಂದಿಗೆ ಒಂದು ವರ್ಷ. ಬೆಂಗಳೂರಿನ ಕಂಠೀರವ ಸ್ಟುಡಿಯೋ ಬಳಿ ಇರುವ ಅಪ್ಪು ಸಮಾಧಿಗೆ ಪುನೀತ್ ಕುಟುಂಬಸ್ಥರು ಆಗಮಿಸಿ ಪೂಜೆ ಸಲ್ಲಿಸಿದರು. ಜೊತೆಗೆ ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಸಮಾಧಿಗೂ ಪೂಜೆ ಸಲ್ಲಿಸಲಾಯಿತು. ಪೂಜೆ ಸಲ್ಲಿಸುತ್ತಲೇ ಪುನೀತ್ ಪತ್ನಿ ಅಶ್ವಿನಿ ಕಣ್ಣೀರು ಹಾಕಿದರು. ಪೂಜೆ ಸಲ್ಲಿಸಿದ ನಂತರ ಅಭಿಮಾನಿಗಳಿಗೆ ಅಶ್ವಿನಿ ಭಾವುಕ ಪತ್ರ ಬರೆದಿದ್ದಾರೆ.
ನೆನಪಿನ ಸಾಗರದಲ್ಲಿ. ಅಪ್ಪು ಅವರು ನಮ್ಮ ನೆನಪುಗಳಲ್ಲಿ ಮಾತ್ರವಲ್ಲದೇ, ನಮ್ಮ ಆಲೋಚನೆಗಳು ಹಾಗೂ ನಾವು ಮಾಡುವ ಸತ್ಕಾರ್ಯಗಳಲ್ಲಿಯೂ ನಮ್ಮ ನಡುವೆ ಸದಾ ಜೀವಂತವಾಗಿದ್ದಾರೆ. ಅವರ ಕನಸು ಮತ್ತು ಮೌಲ್ಯಗಳನ್ನು ಜೀವಂತವಾಗಿಡಲು ನೂರಾರು ಕುಟುಂಬ ಸದಸ್ಯರು, ಅವರ ಸಾವಿರಾರು ಸ್ನೇಹಿತರು ಹಾಗೂ ಕೋಟ್ಯಂತರ ಅಭಿಮಾನಿಗಳಿಂದ ನಾನು ಪಡೆದ ಬೆಂಬಲದ ಶಕ್ತಿಯೇ ನನಗೆ ದಾರಿ ಮಾಡಿಕೊಟ್ಟಿದೆ. ಅಪ್ಪು ಅವರ ಮೇಲೆ ನಿಮ್ಮೆಲ್ಲರಿಗೆ ಇರುವ ಪ್ರೀತಿ ಮತ್ತು ಗೌರವದಿಂದ, ಸದಾ ಕಾಲ ಅವರನ್ನು ಜೀವಂತವಾಗಿರಿಸಿದ್ದಕ್ಕಾಗಿ ಎಲ್ಲರಿಗೂ ನನ್ನ ನಮನಗಳು ಎಂದು ಬರೆದಿದ್ದಾರೆ ಅಶ್ವಿನಿ. ಇದನ್ನೂ ಓದಿ:ಸಾನ್ಯ ಕ್ಯಾಪ್ಟೆನ್ಸಿಗೆ ಕಳಪೆ ಎಂದ ರೂಪೇಶ್ ಶೆಟ್ಟಿ
ಪುನೀತ್ ರಾಜ್ ಕುಮಾರ್ ಅವರ ಮೊದಲ ಪುಣ್ಯಸ್ಮರಣೆ ಸಂದರ್ಭದಲ್ಲೇ ಸರಕಾರ ಕೂಡ ಅವರಿಗೆ ನವೆಂಬರ್ 1 ರಂದು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ದಕ್ಷಿಣ ಇಬ್ಬರು ಸ್ಟಾರ್ ನಟರು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಇದರಲ್ಲಿ ಒಬ್ಬ ನಟರು ಈಗಾಗಲೇ ಒಪ್ಪಿಕೊಂಡಿದ್ದು, ಮತ್ತೋರ್ವ ನಟರು ಇನ್ನೂ ಉತ್ತರಿಸಬೇಕಿದೆ ಎಂದಿದ್ದಾರೆ. ಇಬ್ಬರಿಗೂ ಕರ್ನಾಟಕದ ನಂಟಿರುವುದು ಮತ್ತೊಂದು ವಿಶೇಷ.
ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ತೆಲುಗಿನ ಖ್ಯಾತ ನಟ ಜ್ಯೂನಿಯರ್ ಎನ್.ಟಿ.ಆರ್ ಅವರಿಗೆ ಕರ್ನಾಟಕ ಸರಕಾರವು ಆಹ್ವಾನ ನೀಡಿದ್ದು, ಜ್ಯೂನಿಯರ್ ಎನ್.ಟಿ.ಆರ್ ಕಾರ್ಯಕ್ರಮಕ್ಕೆ ಬರಲು ಒಪ್ಪಿಕೊಂಡಿದ್ದು, ರಜನಿಕಾಂತ್ ಅವರ ಒಪ್ಪಿಗೆ ಪತ್ರ ಇನ್ನಷ್ಟೇ ಸಿಗಬೇಕಿದೆ. ಈ ಕಾರ್ಯಕ್ರವನ್ನು ನವೆಂಬರ್ 1 ರಂದು ವಿಧಾನಸೌಧದ ಮುಂಭಾಗದಲ್ಲಿ ಆಯೋಜನೆ ಮಾಡಿದ್ದು, ಡಾ.ರಾಜ್ ಕುಟುಂಬ ಹಾಗೂ ಅಭಿಮಾನಿಗಳು ಸಾಕ್ಷಿಯಾಗಲಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬೆಳಗಾವಿ: ಬೀದಿ ನಾಯಿಗಳಿಗೆ (Stray Dog) ತೊಂದರೆ ಕೊಡುವುದಲ್ಲದೇ ಅವುಗಳಿಗೆ ಉಚಿತವಾಗಿ ಆಹಾರ ಕೊಡುತ್ತಿರುವ ಕುಟುಂಬದವರಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿರುವುದಾಗಿ ಬೆಳಗಾವಿ ಪೊಲೀಸರಿಗೆ ದೂರು ನೀಡಿದರೂ, ಕ್ರಮಕೈಗೊಳ್ಳದ ಹಿನ್ನೆಲೆ ಸಂತ್ರಸ್ತರು ಪ್ರಧಾನಿಗೆ (Prim Minister) ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
ಪ್ರಕರಣ ಹಿನ್ನೆಲೆ: ಅನಿತಾ ದೊಡ್ಡಮನಿ ಕುಟುಂಬಸ್ಥರು ಕಳೆದ ಹಲವಾರು ವರ್ಷಗಳಿಂದ ಬೆಳಗಾವಿ ಅನಿಮಲ್ ವೇಲ್ಫೇರ್ ಅಸೋಸಿಯೇಷನ್ (ಎನ್‌ಜಿಓ) ತೆಗೆದುಕೊಂಡು ಸರ್ಕಾರದ ಅನುಮತಿ ಪಡೆದು ನಗರದಲ್ಲಿರುವ ಬೀದಿ ನಾಯಿಗಳಿಗೆ ಉಚಿತವಾಗಿ ಊಟ ಹಾಕುತ್ತಿದ್ದಾರೆ. ಆದರೆ, ಬೀದಿ ನಾಯಿಗಳಿಗೆ ಊಟ ನೀಡದಂತೆ ಅನಿತಾ ಕುಟುಂಬಸ್ಥರಿಗೆ ವಕೀಲ ವಿನಾಯಕ್ ದಬ್ಬಾಳಿಕೆ ಮಾಡುತ್ತಿದ್ದಾರೆ. ಹೀಗಾಗಿ ಅವರ ವಿರುದ್ಧ ಕಳೆದ ಒಂಭತ್ತು ತಿಂಗಳ ಹಿಂದೆಯೇ ಶಾಹಾಪುರ ಪೊಲೀಸ್ ಠಾಣೆಯಲ್ಲಿ ಅನಿತಾ ಅವರು ದೂರು ದಾಖಲಿಸಿದ್ದಾರೆ.
ಆದರೆ ನಾಯಿಗಳಿಗೆ ತೊಂದರೆ ಹಾಗೂ ನಮಗೆ ಮಾನಸಿಕ ಹಿಂಸೆ ನೀಡುತ್ತಿದ್ದರೂ ಪೊಲೀಸರು ಸೂಕ್ತಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಹೀಗಾಗಿ ನಾವು ಬೀದಿ ನಾಯಿಗಳಿಗೆ ತೊಂದರೆ ಕೊಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ, ರಾಜ್ಯಪಾಲ ಹಾಗೂ ಪ್ರಧಾನಮಂತ್ರಿವರೆಗೂ ದೂರು ಸಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ. ನಾಯಿಗಳಿಗೆ ಹಾಗೂ ನಮಗೆ ಕಿರುಕುಳ ನೀಡುತ್ತಿರುವ ವಿನಾಯಕ್ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಹಿಮಾಚಲ ಪ್ರದೇಶ ಚುನಾವಣೆ – `ಕೈ’ ನಾಯಕರ ಪಟ್ಟಿ ರಿಲೀಸ್
Live Tv
[brid partner=56869869 player=32851 video=960834 autoplay=true]
ಲಂಡನ್: ರಾಣಿ ಎಲಿಜಬೆತ್ 2(Queen Elizabeth II) ಬರೆದ ರಹಸ್ಯ ಪತ್ರವನ್ನು ಆಸ್ಟ್ರೇಲಿಯಾದ(Australia) ಸಿಡ್ನಿಯಲ್ಲಿರುವ ರಾಣಿ ವಿಕ್ಟೋರಿಯಾ ಅರಮನೆಯಲ್ಲಿ ಮರೆಮಾಚಲಾಗಿದ್ದು, ಇದನ್ನು 60 ವರ್ಷಗಳ ಬಳಿಕ ತೆರೆಯಲು ರಾಣಿ ಸೂಚಿಸಿದ್ದರು.
ಎಲಿಜಬೆತ್ ರಾಣಿಯು ಈ ಪತ್ರವನ್ನು 1986ರ ನವೆಂಬರ್‌ನಲ್ಲಿ ಸಿಡ್ನಿಯ(Sydney) ಜನರನ್ನು ಉದ್ದೇಶಿಸಿ ಬರೆದಿದ್ದರು. ಆದರೆ ಈ ಪತ್ರವನ್ನು 2085ರಲ್ಲಿ ಮಾತ್ರ ತೆರೆಯಬಹುದು ಎಂದು ರಾಣಿಯು ಷರತ್ತನ್ನು ವಿಧಿಸಿದ್ದರು. ಇದರಿಂದಾಗಿ ಎಲಿಜಬೆತ್ ರಾಣಿಯ ಮುತ್ತಜ್ಜಿ ವಿಕ್ಟೋರಿಯಾ ರಾಣಿಯ ವಜ್ರ ಮಹೋತ್ಸವವನ್ನು ಆಚರಿಸಲು 1898ರಲ್ಲಿ ನಿರ್ಮಿಸಲಾಗಿದ್ದ ಕಟ್ಟಡದಲ್ಲಿ ಮರೆ ಮಾಚಿ ಇಡಲಾಗಿದೆ.
ಆಸ್ಟ್ರೇಲಿಯಾದ ಸ್ಥಳೀಯ ನ್ಯೂಸ್ ಸಂಸ್ಥೆಯ ವರದಿ ಪ್ರಕಾರ, ಅಚ್ಚರಿಯ ವಿಷಯವೆಂದರೆ ಆ ಪತ್ರದಲ್ಲಿ ಏನಿದೆ ಎನ್ನುವುದರ ಬಗ್ಗೆ ಈವರೆಗೂ ರಾಣಿಯ ವೈಯಕ್ತಿಕ ಸಿಬ್ಬಂದಿ ತಿಳಿದಿಲ್ಲ. ಅಷ್ಟೇ ಅಲ್ಲದೇ ಈ ಪತ್ರವು ಯಾರ ಕೈಗೂ ಸಿಗಬಾರದೆಂದು ನಿರ್ಬಂಧಿತ ಪ್ರದೇಶದಲ್ಲಿರುವ ಗಾಜಿನ ಪೆಟ್ಟಿಗೆಯಲ್ಲಿ ಭದ್ರವಾಗಿ ಇಡಲಾಗಿದೆ.
ಎಲಿಜಬೆತ್ ರಾಣಿಯು ಈ ಪತ್ರವನ್ನು ತೆರೆಯುವ ದಿನಾಂಕದ ಬಗ್ಗೆ ಸಿಡ್ನಿಯ ಮೇಯರ್‌ಗೆ ಮತ್ತೊಂದು ಪತ್ರವನ್ನು ಬರೆದಿದ್ದಾರೆ. ಅದರಲ್ಲಿ 2085ರಲ್ಲಿ ನೀವೇ ಒಂದು ಸೂಕ್ತ ದಿನವನ್ನು ಆಯ್ಕೆ ಮಾಡಿ ಈ ಲಕೋಟೆಯನ್ನು ತೆರೆದು ಸಿಡ್ನಿ ನಾಗರಿಕರಿಗೆ ನನ್ನ ಸಂದೇಶವನ್ನು ತಿಳಿಸಿ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಈ ಪತ್ರದ ಮೇಲೆ ಎಲಿಜಬೆತ್ ಆರ್ ಎಂದು ಸಹಿ ಹಾಕಿದ್ದಾರೆ. ಇದನ್ನೂ ಓದಿ: ಬ್ರಿಟನ್ ರಾಣಿ ಎಲಿಜಬೆತ್-2 ಇನ್ನಿಲ್ಲ
ರಾಣಿ ಎಲಿಜಬೆತ್ ಆಸ್ಟ್ರೇಲಿಯಾಕ್ಕೆ 16 ಬಾರಿ ಭೇಟಿ ನೀಡಿದ್ದರು. ರಾಣಿಯ ಮರಣದ ಹಿನ್ನೆಲೆಯಲ್ಲಿ, ಸಿಡ್ನಿಯ ಒಪೇರಾ ಹೌಸ್‍ನಲ್ಲಿ ದೀಪ ಬೆಳಗಿಸಿ ಗೌರವ ಸಲ್ಲಿಸಿದ್ದಾರೆ. ಇದನ್ನೂ ಓದಿ: 3ನೇ ಚಾರ್ಲ್ಸ್ ಬ್ರಿಟನ್ ರಾಜನಾಗಿ ಅಧಿಕೃತ ಘೋಷಣೆ
Live Tv
[brid partner=56869869 player=32851 video=960834 autoplay=true]
ಶಿವಮೊಗ್ಗ: ನಗರದಲ್ಲಿ ನಡೆದ ಕೋಮು ಸಂಘರ್ಷವನ್ನು ತನ್ನ ವೈಯಕ್ತಿಕ ತೆವಲಿಗೆ ಬಳಸಿಕೊಳ್ಳಲು ಹೋಗಿ ಇಲ್ಲೊಬ್ಬ ಸಿಕ್ಕಿಹಾಕಿಕೊಂಡಿದ್ದಾನೆ. ಶಿವಮೊಗ್ಗದಲ್ಲಿ ಮತ್ತೆ ಮೂವರನ್ನು ಕೊಲೆ ಮಾಡಬೇಕು. ಶಿವಮೊಗ್ಗದಲ್ಲಿ ಗಣಪತಿ ಹಬ್ಬ ಮಾಡಲು ಬಿಡಬಾರದು. ಮತ್ತೆ ನೆತ್ತರು ಹರಿಯಬೇಕು ಎಂದು ಹೇಳಿ ಮತ್ತೆ ಕೋಮು ದಳ್ಳುರಿ ನಡೆಯುವ ಕಪೋಲಕಲ್ಪಿತ ಕಥೆ ಕಟ್ಟಿ ಪತ್ರ ಬರೆದಿದ್ದ ಕಿಡಿಗೇಡಿಯ ಪತ್ರದ ಹಿಂದಿನ ಕಹಾನಿ ಇದೀಗ ಬಯಲಾಗಿದೆ.
ಹೇಳಿ ಕೇಳಿ ಶಿವಮೊಗ್ಗ ಸೂಕ್ಷ್ಮ ಜಿಲ್ಲೆ. ಕಳೆದ ಹಲವಾರು ವರ್ಷಗಳಿಂದಲೂ ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ ಕೋಮು ದಳ್ಳುರಿ, ಆಗಿದ್ದಾಗೆ ಹೊತ್ತಿಕೊಳ್ಳುತ್ತಲೇ ಇರುತ್ತದೆ. ಕೋಮು ಸಂಘರ್ಷ ಉಂಟಾದಾಗಲೆಲ್ಲಾ ಶಿವಮೊಗ್ಗದಲ್ಲಿ ಅಶಾಂತಿ ಸೃಷ್ಟಿಯಾಗಿ, ಜನಜೀವನ ಅಸ್ತವ್ಯಸ್ತಗೊಳ್ಳುವುದು ಸಹಜ. ಅಂದಹಾಗೆ, ಇತ್ತೀಚಿಗಷ್ಟೇ, ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಮತ್ತು ಆ. 15 ರಂದು ವೀರ ಸಾವರ್ಕರ್ ಅವರ ಭಾವಚಿತ್ರ ಅಳವಡಿಕೆ ವೇಳೆಯೂ ಕೋಮು ಸಂಘರ್ಷ ಉಂಟಾಗಿ, ಇದರ ಕರಿ ನೆರಳು ಇದೀಗ ಗಣಪತಿ ಹಬ್ಬದ ಮೇಲೂ ಬಿದ್ದಿದೆ. ಇದೇ ಅವಕಾಶವನ್ನು ಕೆಲವು ಕಿಡಿಗೇಡಿಗಳು ಬಳಸಿಕೊಳ್ಳುತ್ತಿದ್ದು, ಶಿವಮೊಗ್ಗದಲ್ಲಿ ಮತ್ತೆ ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ಅನಾಮಧೇಯ ಪತ್ರವೊಂದನ್ನು ಬರೆದು, ಶಿವಮೊಗ್ಗದ ಗಾಂಧಿ ಬಜಾರ್‌ನ ಗಂಗಾ ಪರಮೇಶ್ವರಿ ದೇವಾಲಯದೊಳಗಿನ ನವಗ್ರಹಗಳ ಪಕ್ಕದಲ್ಲಿ ಎಸೆದು ಹೋಗಿದ್ದಾರೆ. ಈ ಪತ್ರ ಸಿಕ್ಕವರು ಕೂಡಲೇ ಪೊಲೀಸರಿಗೆ ತಿಳಿಸಿ ಎಂದು ಕೂಡ ಪತ್ರದ ಕವರ್ ಮೇಲೆ ಬರೆದಿದ್ದರಂತೆ. ಈ ಪತ್ರ ಸಿಕ್ಕಿದ ಕೂಡಲೇ, ದೇವಾಲಯದ ಪಕ್ಕದ ನಿವಾಸಿಯೊಬ್ಬರು ಕೂಡಲೇ ಅನಾಮಧೇಯ ಬೆದರಿಕೆ ಪತ್ರವನ್ನು ಪೊಲೀಸರಿಗೆ ಮುಟ್ಟಿಸಿದ್ದಾರೆ. ಶಿವಮೊಗ್ಗದಲ್ಲಿ ಗಣಪತಿ ಹಬ್ಬ ಮಾಡಲು ಬಿಡಬಾರದು. ಮಂಗಳೂರಿನಿಂದ ಜನರನ್ನು ಕರೆಸಿ ಗಲಾಟೆ ಮಾಡಿಸಬೇಕು. ಮೂವರ ಕೊಲೆಯಾಗಬೇಕು. ಮೊನ್ನೆ ಪ್ರೇಮ್ ಸಿಂಗ್ ಮೇಲೆ ನಡೆದ ಹಲ್ಲೆ ಅರ್ಧಂಬರ್ಧ ಆಗಿದೆ. ಎಂದು ಬೆದರಿಕೆಯುಳ್ಳ ಪತ್ರವನ್ನು ಬರೆದಿದ್ದರು. ಇದನ್ನು ಪ್ರಶಾಂತ್ ಎಂಬುವವರು ಕೋಟೆ ಠಾಣೆ ಪೊಲೀಸರಿಗೆ ನೀಡಿ, ಕೇಸು ಕೂಡ ದಾಖಲಾಗಿತ್ತು. ಇದನ್ನೂ ಓದಿ: ಗೊಡ್ಡು ಬೆದರಿಕೆಗಳಿಗೆ, ಹೇಡಿಗಳಿಗೆ ಹೆದರಲ್ಲ: ಬೆದರಿಕೆ ಪತ್ರಕ್ಕೆ ಈಶ್ವರಪ್ಪ ರಿಯಾಕ್ಟ್
ಬಳಿಕ ಈ ಅನಾಮಧೇಯ ಪತ್ರದ ಜಾಡು ಹಿಡಿದು ಹೊರಟ ಪೊಲೀಸರಿಗೆ ಆಘಾತಕಾರಿ ಸುದ್ದಿಯೊಂದು ಹೊರಬೀಳಬಹುದೆಂಬ ಗುಮಾನಿ ಇತ್ತು. ಆದರೆ, ಹಾಗಾಗಲಿಲ್ಲ. ಪತ್ರದ ಜಾಡು ಹಿಡಿದು ಪತ್ರದಲ್ಲಿ ಉಲ್ಲೇಖವಾಗಿರುವ ವ್ಯಕ್ತಿಯಾಗಿದ್ದ ಮೊಹಮ್ಮದ್ ಫೈಜಲ್‍ನ ವಿಚಾರಣೆ ನಡೆಸಿದ ಬಳಿಕ, ನಾನೆಲ್ಲೂ ಶಿವಮೊಗ್ಗದಲ್ಲಿ ಗಲಾಟೆ ಮಾಡಿಸಬೇಕೆಂದು ಮಾತನಾಡಿಯೇ ಇಲ್ಲ. ಇದು ಬೇರೆ ಯಾರದೋ ಕೈವಾಡ ಇರಬಹುದೆಂದು ಪೊಲೀಸರಿಗೆ ತಿಳಿಸಿದ್ದಾನೆ. ಅಷ್ಟೇ ಅಲ್ಲ. ಇತ್ತೀಚಿಗಷ್ಟೇ ಅಯೂಬ್ ಖಾನ್ ಎಂಬುವವನು ನನ್ನ ವಿರುದ್ಧ ಜಿದ್ದು ಸಾಧಿಸುತ್ತೆನೆಂದು ಹೇಳಿದ್ದ ಎಂದು ಕೂಡ ಪೊಲೀಸರ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ. ಅದಷ್ಟೇ ಸಾಕಿತ್ತು, ಅಯೂಬ್ ಖಾನ್‍ನ್ನು ಹುಡುಕಿ ತಂದ ಪೊಲೀಸರಿಗೆ ಆಶ್ಚರ್ಯದ ಜೊತೆಗೆ ಟ್ವಿಸ್ಟ್ ಕೂಡ ಕಾದಿತ್ತು. ಇಡೀ ಸ್ಟೋರಿಯೇ ಬದಲಾಗಿ ಹೋಗಿತ್ತು. ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ ಅಯೂಬ್ ಖಾನ್, ಇಡೀ ಸ್ಟೋರಿಗೆ ಟ್ವಿಸ್ಟ್ ನೀಡಿ, ನನಗೆ ಫೈಜಲ್ ಪತ್ನಿ ಮೇಲೆ ವ್ಯಾಮೋಹ ಇತ್ತು. ಹೀಗಾಗಿ, ಫೈಜಲ್ ಜೈಲಿಗೆ ಹೋದರೆ, ಫೈಜಲ್ ಪತ್ನಿ ಜೊತೆ ನಾನು ಇರಬಹುದೆಂದು ನಿರ್ಧರಿಸಿ, ಈ ರೀತಿ ಫೈಜಲ್ ವಿರುದ್ಧವಾಗಿ ಅನಾಮಧೇಯ ಪತ್ರ ಬರೆದಿದ್ದೆ ಎಂದು ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತಕ್ಕೆ 9 ಮಂದಿ ಬಲಿ
ಶಿವಮೊಗ್ಗದಲ್ಲಿ ಕಳೆದ ವಾರವಷ್ಟೇ, ಕೋಮು ಸಂಘರ್ಷದಿಂದ, ಜನರು ಪರಿತಪಿಸುವಂತಾಗಿದ್ದರೆ, ಇತ್ತ ತಮ್ಮ ಖಾಸಗಿ ತೆವಲಿಗಾಗಿ, ಮತ್ತೆ ಶಿವಮೊಗ್ಗದಲ್ಲಿ ಕೋಮು ಸಂಘರ್ಷವನ್ನುಂಟು ಮಾಡುವ ಬೆದರಿಕೆ ಪತ್ರ ಬರೆದ ಅಯೂಬ್ ಖಾನ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಅನಾಮಧೇಯ ಪತ್ರದಿಂದಾಗಿ ಮತ್ತೆ ಆತಂಕಕ್ಕೆ ಕಾರಣವಾಗಿದ್ದ ಶಿವಮೊಗ್ಗ ಜನರು ಇದು ಫೇಕ್ ಪತ್ರ ಎಂದುಕೊಂಡು ನಿಟ್ಟುಸಿರು ಬಿಟ್ಟಿದ್ದಾರೆ.
Live Tv
[brid partner=56869869 player=32851 video=960834 autoplay=true]
ಲಕ್ನೋ: ಬೆಲೆ ಏರಿಕೆಯಿಂದ ಕಷ್ಟ ಅನುಭವಿಸದೇ ಇರುವವರು ಯಾರಿದ್ದಾರೆ? ಪ್ರಯೊಬ್ಬರೂ ಸರ್ಕಾರದ ನಡೆಯನ್ನು ದೂಷಿಸಿದ್ದಾರೆ. ಆದರೆ ಅದೇ ಸಂಕಷ್ಟ 6 ವರ್ಷದ ಬಾಲಕಿಗೂ ಎದುರಾಗಿ ಕೊನೆಗೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ತನ್ನ ಅಳಲು ತೋಡಿಕೊಂಡಿದ್ದಾಳೆ.
ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಛಿಬ್ರಮೌ ಪಟ್ಟಣದ ಬಾಲಕಿ ಕೃತಿ ದುಬೇ ಮೋದಿಗೆ ಪತ್ರ ಬರೆದಿದ್ದಾಳೆ. 1ನೇ ತರಗತಿಯ ಪುಟ್ಟ ಬಾಲಕಿ ಬರೆದಿರುವ ಪತ್ರ ಇದೀಗ ಸಾಮಾಜಿಕ ಮಾಧ್ಯಮಗಳಲ್ಲೂ ಹರಿದಾಡಿದೆ.
ಬಾಲಕಿ ಬರೆದ ಪತ್ರದಲ್ಲಿ, ಮೋದಿಜೀ ನೀವು ತುಂಬಾ ಬೆಲೆ ಏರಿಕೆ ಮಾಡಿದ್ದೀರಿ. ಪೆನ್ಸಿಲ್, ರಬ್ಬರ್ ಬೆಲೆ ದುಬಾರಿಯಾಗಿದೆ, ಮ್ಯಾಗಿ ಬೆಲೆಯೂ ಏರಿಕೆ ಆಗಿದೆ. ಶಾಲೆಯಲ್ಲಿ ಇತರ ಮಕ್ಕಳು ನನ್ನ ಪೆನ್ಸಿಲ್‌ಗಳನ್ನು ಕದಿಯುತ್ತಾರೆ. ನಾನು ಅಮ್ಮನ ಬಳಿ ಹೊಸ ಪೆನ್ಸಿಲ್ ಕೇಳಿದರೆ, ನನಗೆ ಹೊಡೆಯುತ್ತಾರೆ ಎಂದು ತನ್ನ ಕಷ್ಟವನ್ನು ಹೇಳಿಕೊಂಡಿದ್ದಾಳೆ. ಇದನ್ನೂ ಓದಿ: ದ.ಕನ್ನಡದಲ್ಲಿ ಪೊಲೀಸ್ ಬಂದೋಬಸ್ತ್ ಕಡಿಮೆ ಇದ್ದು, ಹೆಚ್ಚಿಸಬೇಕು: ಡಿಜಿಪಿ ಪ್ರವೀಣ್ ಸೂದ್
ಈ ಬಗ್ಗೆ ತಿಳಿಸಿರುವ ಕೃತಿ ತಂದೆ ವಿಶಾಲ್ ದುಬೆ, ಇದು ನನ್ನ ಮಗಳ ಮನ್ ಕಿ ಬಾತ್(ಮನದ ಮಾತು). ಇತ್ತೀಚೆಗೆ ಆಕೆ ಶಾಲೆಯಲ್ಲಿ ಪೆನ್ಸಿಲ್ ಕಳೆದುಕೊಂಡಿದ್ದಾಗ ಆಕೆಯ ತಾಯಿ ಸಿಟ್ಟಾಗಿ, ಗದರಿಸಿದ್ದಳು ಎಂದು ತಿಳಿಸಿದ್ದಾರೆ.
ಈ ಪುಟ್ಟ ಬಾಲಕಿಯ ಪತ್ರ ವೈರಲ್ ಆಗುತ್ತಿದ್ದಂತೆ ಛಿಬ್ರಮೌ ಎಸ್‌ಡಿಎಂ ಅಶೋಕ್ ಕುಮಾರ್ ಅವರ ಗಮನಕ್ಕೂ ಬಂದು, ನಾನು ಆ ಮಗುವಿಗೆ ಯಾವುದೇ ರೀತಿಯಲ್ಲೂ ಸಹಾಯ ಮಾಡಲು ಸಿದ್ಧನಿದ್ದೇನೆ. ಆಕೆಯ ಪತ್ರ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಲುಪಿಸಲು ನನ್ನ ಕೈಲಾದಷ್ಟು ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ನಟಿ ಮೇಘನರಾಜ್ ಗೆ ಪ್ರತಿಷ್ಠಿತ ಸ್ಯಾನ್ ಫ್ರಾನ್ಸಿಸ್ಕೋದ “FOG HERO” ಅವಾರ್ಡ್
Live Tv
[brid partner=56869869 player=32851 video=960834 autoplay=true]