Tag: ಪತ್ರಿಕಾ ಗೋಷ್ಠಿ

  • ಎಲ್ಲ ಕಡೆ ಮೆಚ್ಚುಗೆ, ಇಲ್ಲಿ ಸುಳ್ಳನ್ನು ತಿನ್ನಲಾಗುತ್ತಿದೆ – ವಿರಾಟ್ ಕೊಹ್ಲಿ

    ಎಲ್ಲ ಕಡೆ ಮೆಚ್ಚುಗೆ, ಇಲ್ಲಿ ಸುಳ್ಳನ್ನು ತಿನ್ನಲಾಗುತ್ತಿದೆ – ವಿರಾಟ್ ಕೊಹ್ಲಿ

    ನವದೆಹಲಿ: ಟೀಂ ಇಂಡಿಯಾದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಾಯಕ ವಿರಾಟ್ ಕೊಹ್ಲಿ, ಇಂತಹ ಯಾವುದೇ ಸನ್ನಿವೇಶ ಎದುರಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ವಿಂಡೀಸ್ ಪ್ರವಾಸಕ್ಕೆ ತೆರಳುವ ಮುನ್ನ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಶ್ವಕಪ್ ಬಳಿಕ ನಾನು ಹಲವು ಸಮಾರಂಭದಲ್ಲಿ ಭಾಗವಹಿಸಿದ್ದೆ. ಎಲ್ಲ ಕಡೆಯಿಂದಲೂ ತಂಡದ ಪ್ರದರ್ಶನ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತಿತ್ತು. ಆದರೆ ಇಲ್ಲಿಗೆ ಬಂದ ತಕ್ಷಣ ಇಂತಹ ವರದಿಗಳು ಕೇಳಿ ಬಂದಿದ್ದು ಅಚ್ಚರಿಯಾಗಿತ್ತು. ಉತ್ತಮ ಪ್ರದರ್ಶನಗಳ ಹೊರತುಪಡಿಸಿ ತಮ್ಮದೇ ಊಹೆಗಳನ್ನು ಹರಿಬಿಟ್ಟಿದ್ದಾರೆ ಎಂದರು.

    ನನ್ನ ಪ್ರಕಾರ ಇಂತಹ ಸುದ್ದಿಗಳು ನಮ್ಮ ನಡುವಿನ ಆತ್ಮೀಯತೆಯನ್ನ ಭಂಗಗೊಳಿಸುವಂತಹ ಪ್ರಯತ್ನ ಎಂದು ನನಗೆ ಅನ್ನಿಸುತ್ತಿದೆ. ಇಲ್ಲಿ ಸುಳ್ಳನ್ನು ತಿನ್ನಲಾಗುತ್ತಿದೆ. ಈ ರೀತಿಯ ಸುದ್ದಿಗಳನ್ನು ಓದಲು ನಿಜವಾಗಿಯೂ ಕಷ್ಟ ಆಗುತ್ತದೆ. ಇಂತಹ ಸುದ್ದಿ ಹರಿಬಿಡುವುದರಿಂದ ಯಾರಿಗೆ ಲಾಭ ಆಗಲಿದೆ ಎಂಬುವುದು ನನಗಂತು ಗೊತ್ತಿಲ್ಲ. ಆದರೆ ಇಂತಹ ಸುಳ್ಳು ಸುದ್ದಿಗಳು ಪದೇ ಪದೇ ನಮ್ಮ ಸುತ್ತಲೂ ಹರಿದಾಡುತ್ತಿದ್ದಾರೆ ತಂಡದ ನಾಯಕ, ಕೋಚ್, ಆಟಗಾರರಾಗಿ ಪರಿಣಾಮ ಬೀರಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಯಾರು ಇಂತಹ ಸುದ್ದಿಗಳನ್ನು ಮಾಡುತ್ತಾರೋ ಅವರೇ ಬಂದು ನೋಡಿ. ಡ್ರೆಸ್ಸಿಂಗ್ ರೂಮ್‍ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದಾದರೆ ನೀವೇ ಬಂದು ನೋಡಿ. ತಂಡದ ನಾಯಕರ ಹೇಗೆ ಆಟಗಾರರೊಂದಿಗೆ ಮಾತನಾಡುತ್ತಾರೆ. ಹಿರಿಯ ಆಟಗಾರರು ಕಿರಿಯನ್ನ ಹೇಗೆ ನಡೆಸಿಕೊಳ್ಳುತ್ತಾರೆ ಎಂಬುವುದನ್ನು ವಿಡಿಯೋ ಮಾಡಿಕೊಳ್ಳಿ ಎಂದರು. ಅಲ್ಲದೇ ಇಂತಹ ಸುದ್ದಿಗಳು ಆಟಗಾರರಿಗೆ ತೋರುವ ಅಗೌರವವಾಗಿದೆ. ನನ್ನ ಹಾಗೂ ರೋಹಿತ್ ನಡುವೆ ಯಾವುದೇ ಮನಸ್ತಾಪ ಇಲ್ಲ. ನಾನು 11 ವರ್ಷ, ರೋಹಿತ್ 10 ವರ್ಷಗಳಿಂದ ತಂಡದಲ್ಲಿದ್ದಾರೆ. ಅವರು ಉತ್ತಮ ಪ್ರದರ್ಶನ ನೀಡಿದ ಸಂದರ್ಭದಲ್ಲಿ ನಾಯಕನಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದೇನೆ ಎಂದರು.

    ಕೊಹ್ಲಿ ತಂಡದೊಂದಿಗೆ ವೆಸ್ಟ್ ಇಂಡೀಸ್ ಟೂರ್ನಿಗೆ ಪ್ರಯಾಣ ಬೆಳೆಸಲಿದ್ದು, ಕೋಚ್ ರವಿಶಾಸ್ತ್ರಿ ತಂಡದೊಂದಿಗೆ ತೆರಳುತ್ತಿಲ್ಲ ಎಂಬ ಮಾಹಿತಿ ಲಭಿಸಿದೆ. ವೆಸ್ಟ್ ಇಂಡೀಸ್ ತಂಡದ ವಿರುದ್ಧ ಆಗಸ್ಟ್ 3 ರಿಂದ ಟಿ20 ಪಂದ್ಯಗಳು ನಡೆಲಿದೆ.

    ಕೆಲ ಸಮಯದ ಹಿಂದೆ ರೋಹಿತ್ ಶರ್ಮಾ ನಾಯಕ ವಿರಾಟ್ ಕೊಹ್ಲಿ ಅವರನ್ನ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಿಂದ ಅನ್ ಫಾಲೋ ಮಾಡಿದ್ದರು. ಆ ಬಳಿಕ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾರನ್ನು ಕೂಡ ಅನ್ ಫಾಲೋ ಮಾಡಿದ್ದರು. ಇದರ ಬೆನ್ನಲ್ಲೇ ಅನುಷ್ಕಾ ತಮ್ಮ ಇನ್‍ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಹಾಕಿದ್ದ ಸ್ಟೇಟಸ್ ಫೋಟೋ ಭಾರೀ ಚರ್ಚೆಗೆ ಕಾರಣವಾಗಿತ್ತು. ಅಲ್ಲದೇ ಅನುಷ್ಕಾ ಕೂಡ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾರನ್ನು ಅನ್ ಫಾಲೋ ಮಾಡಿದ್ದರು. ಈ ವರದಿಗಳ ನಡುವೆಯೇ ವೆಸ್ಟ್ ಇಂಡೀಸ್ ಟೂರ್ನಿಗೂ ಮೊದಲು ನಡೆಯ ಬೇಕಿದ್ದ ಪತ್ರಿಕಾಗೋಷ್ಠಿಯನ್ನ ರದ್ದು ಪಡಿಸಲಾಗಿದೆ ಎಂದಿದ್ದರು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಬಿಸಿಸಿಐ ವಿದೇಶಿ ಸರಣಿಯ ಪ್ರವಾಸ ಆರಂಭಕ್ಕೂ ಮುನ್ನ ಕೊಹ್ಲಿ ಸುದ್ದಿಗೋಷ್ಠಿ ನಡೆಸುತ್ತಾರೆ ಎಂದು ಭಾನುವಾರ ಮಾಹಿತಿ ನೀಡಿತ್ತು.

  • ರೋಹಿತ್ ಜೊತೆ ಮನಸ್ತಾಪ – ಕೊಹ್ಲಿ ಪತ್ರಿಕಾಗೋಷ್ಠಿ ದಿಢೀರ್ ರದ್ದು?

    ರೋಹಿತ್ ಜೊತೆ ಮನಸ್ತಾಪ – ಕೊಹ್ಲಿ ಪತ್ರಿಕಾಗೋಷ್ಠಿ ದಿಢೀರ್ ರದ್ದು?

    ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಡುವೆ ಮನಸ್ತಾಪ ಜೋರಾಗಿದೆ ಎನ್ನುವ ಸುದ್ದಿಯ ಬೆನ್ನಲ್ಲೇ, ವಿಂಡೀಸ್ ಟೂರ್ನಿಗೆ ಮುನ್ನಾ ನಡೆಯಬೇಕಿದ್ದ ಪ್ರತಿಕಾಗೋಷ್ಠಿಯನ್ನು ದಿಢೀರ್ ರದ್ದು ಪಡಿಸಲಾಗಿದೆ.

    ಕೊಹ್ಲಿ- ರೋಹಿತ್ ನಡುವಿನ ಮನಸ್ತಾಪ ಸುದ್ದಿ ಮಾಧ್ಯಮಗಳ ಸೃಷ್ಟಿ ಎಂದು ಬಿಸಿಸಿಐ ವಕ್ತಾರರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಈ ಮಧ್ಯೆ ವಿಂಡೀಸ್ ಟೂರ್ನಿಯ ಮುನ್ನ ನಡೆಯಬೇಕಿದ್ದ ಪತ್ರಿಕಾಗೋಷ್ಠಿ ರದ್ದಾಗಿದೆ. ನಾವು ಕಾರ್ಯಕ್ರಮವನ್ನು ಏರ್ಪಡಿಸಲು ಸಾಕಷ್ಟು ಪ್ರಯತ್ನ ನಡೆಸಿದೆವು, ಆದರೆ ಅದು ಸಾಧ್ಯವಾಗಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಮಾಧ್ಯಮ ವರದಿ ಮಾಡಿದೆ.

    ಯಾವುದೇ ವಿದೇಶ ಪ್ರವಾಸಕ್ಕೆ ತೆರಳುವ ಮುನ್ನ ಟೀಂ ಇಂಡಿಯಾ ನಾಯಕರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸುತ್ತಿದ್ದರು. ಟೀಂ ಇಂಡಿಯಾ ಸೋಮವಾರ ರಾತ್ರಿ ವೆಸ್ಟ್ ಇಂಡೀಸ್‍ಗೆ ಪ್ರಯಾಣ ಬೆಳೆಸಲಿದ್ದು, ರೋಹಿತ್ ರೊಂದಿಗೆ ಮನಸ್ತಾಪ ಹೊಂದಿರುವ ಪ್ರಶ್ನೆಗಳನ್ನು ಕೇಳಬಹುದು. ಸುದ್ದಿಗೋಷ್ಠಿಯಲ್ಲಿ ಎದುರಾಗಬಹುದಾಗಿದ್ದ ಪ್ರಶ್ನೆಗಳಿಂದ ಹೊಸ ವಿವಾದ ಸೃಷ್ಟಿ ಆಗದಂತೆ ನೋಡಿಕೊಳ್ಳಲು ಕೊಹ್ಲಿ ಮಾಧ್ಯಮಗೋಷ್ಠಿಗೆ ಭಾಗವಹಿಸದ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.

    ಇತ್ತ ಶನಿವಾರ ಮುಂಬೈ ನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ ಪಂದ್ಯವಳಿ ವೇಳೆ ಹಾಜರಿದ್ದ ಕೊಹ್ಲಿ, ಮಾಧ್ಯಮಗಳಿಂದ ದೂರವೇ ಉಳಿದಿದ್ದರು. ವಿಮಾನ ಏರುವ ಮುನ್ನ ಕೊಹ್ಲಿ ಸೋಮವಾರ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ವೆಸ್ಟ್ ಇಂಡೀಸ್ ಪ್ರವಾಸದ ಬಗ್ಗೆ ಯಾವುದೇ ಪ್ರಶ್ನೆ ತೆಗೆದುಕೊಳ್ಳುವುದಿಲ್ಲ ಎಂದು ಉತ್ತರಿಸಿದ್ದಾರೆ.

    ಕೆಲ ಸಮಯದ ಹಿಂದೆ ರೋಹಿತ್ ಶರ್ಮಾ ನಾಯಕ ವಿರಾಟ್ ಕೊಹ್ಲಿ ಅವರನ್ನ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಿಂದ ಅನ್ ಫಾಲೋ ಮಾಡಿದ್ದರು. ಆ ಬಳಿಕ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾರನ್ನು ಕೂಡ ಅನ್ ಫಾಲೋ ಮಾಡಿದ್ದರು. ಇದರ ಬೆನ್ನಲ್ಲೇ ಅನುಷ್ಕಾ ತಮ್ಮ ಇನ್‍ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಹಾಕಿದ್ದ ಸ್ಟೇಟಸ್ ಫೋಟೋ ಭಾರೀ ಚರ್ಚೆಗೆ ಕಾರಣವಾಗಿತ್ತು. ಅಲ್ಲದೇ ಅನುಷ್ಕಾ ಕೂಡ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾರನ್ನು ಅನ್ ಫಾಲೋ ಮಾಡಿದ್ದರು.

  • ಪತ್ರಿಕಾಗೋಷ್ಠಿ ವೇಳೆ ಮಹಿಳೆಯ ಕನ್ನೆಗೆ ಬಾರಿಸಿದ ಪೊಲೀಸ್- ತನಿಖೆಗೆ ಆದೇಶ

    ಪತ್ರಿಕಾಗೋಷ್ಠಿ ವೇಳೆ ಮಹಿಳೆಯ ಕನ್ನೆಗೆ ಬಾರಿಸಿದ ಪೊಲೀಸ್- ತನಿಖೆಗೆ ಆದೇಶ

    ಹೈದರಾಬಾದ್: ಪತ್ರಿಕಾ ಗೋಷ್ಠಿ ವೇಳೆ ಸಹಾಯಕ ಪೊಲೀಸ್ ಆಯುಕ್ತರೊಬ್ಬರು ಮಹಿಳೆಯ ಕೆನ್ನೆಗೆ ಬಾರಿಸಿದ ಘಟನೆ ಹೈದರಾಬಾದ್‍ನಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

    ಬೇಗಂಪೇಟ್ ಸಹಾಯಕ ಪೊಲೀಸ್ ಆಯುಕ್ತರಾದ ಎಸ್ ರಂಗ ರಾವ್ ಪದ್ಮಾ ಎಂಬ ಆರೋಪಿ ಮಹಿಳೆಯ ಕಪಾಳಕ್ಕೆ ಹೊಡೆದಿದ್ದಾರೆ. ಈಕೆ ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾಳೆಂದು ಪತ್ರಿಕಾ ಗೋಷ್ಠಿ ವೇಳೆ ಪೊಲೀಸರು ಹೇಳಿದ್ದರು. ಈ ವೇಳೆ ಮಹಿಳೆ ತಾನು ಯಾವುದೇ ತಪ್ಪು ಮಾಡಿಲ್ಲ. ಪೊಲೀಸರು ಸುಳ್ಳು ದೂರು ದಾಖಲಿಸಿದ್ದಾರೆ ಎಂದು ವಾದಿಸಿದ್ದಳು.

     

    ಕಪಾಳಮೋಕ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ತನಿಖೆ ನಡೆಸಲಾಗ್ತಿದೆ ಎಂದು ಉತ್ತರ ವಲಯ ಉಪ ಪೊಲೀಸ್ ಆಯುಕ್ತರಾದ ಬಿ. ಸುಮತಿ ಹೇಳಿದ್ದಾರೆ. ಎಸಿಪಿ ವಿರುದ್ಧ ತನಿಖೆ ಆರಂಭವಾಗಿದೆ. ಅವರಿಂದ ವಿವರಣೆ ಕೇಳಿದ್ದೇವೆ. ಅದರ ಆಧಾರದ ಮೇಲೆ ಮುಂದಿನ ಕ್ರಮದ ಬಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂದು ಸುಮತಿ ತಿಳಿಸಿದ್ದಾರೆ.

    ಪದ್ಮಾ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾಳೆ. ಆಕೆ ಹಾಗೂ ಇನ್ನೂ ಮೂವರು ಮಹಿಳೆಯರು ಜನರ ಗಮನ ಬೇರೆಡೆ ಸೆಳೆದು ಹಲವು ಅಪರಾಧಗಳನ್ನ ಎಸಗಿದ್ದಾರೆ. ನಾಲ್ವರನ್ನು ಬಂಧಿಸಿ ಕೋರ್ಟ್ ಮುಂದೆ ಹಾಕರುಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಆರೋಪ ಹೊತ್ತಿರುವ ಎಸಿಪಿ ಅವರನ್ನ ಸಂಪರ್ಕಿಸಿದಾಗ, ಮಹಿಳೆ ಪೊಲೀಸರ ಮೇಲೆಯೇ ಆರೋಪಗಳನ್ನ ಮಾಡ್ತಿದ್ದರಿಂದ ಪತ್ರಿಕಾ ಗೋಷ್ಠಿಯಿಂದ ಹೊರಹೋಗುವಂತೆ ನಾನು ಮಹಿಳೆಯನ್ನ ತಳ್ಳಿದೆ ಎಷ್ಟೇ ಎಂದು ಹೇಳಿದ್ದಾರೆ.