Tag: ಪತ್ರಾಪ್ ಸಿಂಹ

  • ಮೇರಾ ಪಾಸ್ ಮೋದಿ ಹೇ, ಯಾರೇ ಬಂದ್ರು ಕೂಡ ನಾನು ಎದುರಿಸುತ್ತೇನೆ: ಪ್ರತಾಪ್ ಸಿಂಹ

    ಮೇರಾ ಪಾಸ್ ಮೋದಿ ಹೇ, ಯಾರೇ ಬಂದ್ರು ಕೂಡ ನಾನು ಎದುರಿಸುತ್ತೇನೆ: ಪ್ರತಾಪ್ ಸಿಂಹ

    ಮೈಸೂರು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಯಾರೇ ಎದುರಾಳಿ ಬರಲಿ. ಯಾರೇ ಬಂದರೂ ಕೂಡ ನಾನು ಅವರನ್ನು ಎದುರಿಸುತ್ತೇನೆ. ಅಲ್ಲದೇ ದೇವೇಗೌಡರನ್ನು ಎದುರಿಸಲು ನಾನು ಸಿದ್ಧವಾಗಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ಪರೋಕ್ಷವಾಗಿ ಸವಾಲ್ ಹಾಕಿದ್ದಾರೆ.

    ಮೈಸೂರಿನಲ್ಲಿ ನಡೆಯುತ್ತಿರುವ ಬಿಜೆಪಿ ಶಕ್ತಿ ಕೇಂದ್ರ ಪ್ರಮುಖರ ಸಮಾವೇಶದಲ್ಲಿ ಪ್ರತಾಪ್ ಸಿಂಹ ಪರೋಕ್ಷವಾಗಿ ದೇವೇಗೌಡರಿಗೆ ಸವಾಲು ಹಾಕಿದ್ದಾರೆ. ಈ ವೇಳೆ ಮಾತನಾಡಿದ ಅವರು, ನನಗೆ ನಮ್ಮ ಜನ ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಕಳೆದ ಬಾರಿ ನಾನು ಗೆದ್ದಾಗ ಈ ಭಾಗದಲ್ಲಿ ಬಿಜೆಪಿಯ ಅಸ್ತಿತ್ವ ಇರಲಿಲ್ಲ. ಒಂದು ಗ್ರಾಮ ಪಂಚಾಯ್ತಿಯನ್ನು ಸಹ ನಾವು ಗೆದ್ದಿರಲಿಲ್ಲ. ಆದರೆ ಈ ಬಾರಿ ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದಲ್ಲಿ ನಾಲ್ವರು ಎಂಎಲ್‍ಎಗಳು ಇದ್ದಾರೆ ಎಂದರು.

    ಬಳಿಕ ಅಮಿತಾಬ್ ಬಚ್ಚನ್ ಸಿನಿಮಾ ಒಂದರಲ್ಲಿ “ಮೇರಾ ಪಾಸ್ ಮಾ ಹೇ” ಎಂದು ಹೇಳಿದ್ದಾರೆ. ಅದೇ ರೀತಿ ನಾವು ಮೇರಾ ಪಾಸ್ ಮೋದಿ ಎಂದು ಹೇಳೋಣ. ಈ ಬಾರಿ ಜನ ಮೋದಿ ಹಾಗೂ ನಮ್ಮ ಪರವಾಗಿ ಇರೋದ್ರಿಂದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಸ್ ತಡೆದು ಪ್ರತಿಭಟನೆ: ಪ್ರತಾಪ್ ಸಿಂಹ ವಶಕ್ಕೆ

    ಬಸ್ ತಡೆದು ಪ್ರತಿಭಟನೆ: ಪ್ರತಾಪ್ ಸಿಂಹ ವಶಕ್ಕೆ

    ಮೈಸೂರು: ಸಾಲಮನ್ನಕ್ಕೆ ಆಗ್ರಹಿಸಿ ಬಿಜೆಪಿಯಿಂದ ಕರ್ನಾಟಕ ಬಂದ್ ಕರೆ ನೀಡಿದ ಹಿನ್ನೆಲೆಯಲ್ಲಿ ಬಸ್‍ಗಳನ್ನು ತಡೆಯಲು ಮುಂದಾಗಿದ್ದ ಸಂಸದ ಪ್ರತಾಪ್ ಸಿಂಹರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಕರ್ನಾಟಕ ಬಂದ್ ಹಿನ್ನೆಲೆ ಮೈಸೂರು ಬನ್ನಿಮಂಟಪ ಡಿಪೋ ಬಳಿ ಪ್ರತಿಭಟನೆ ನಡೆಸಲಾಗುತಿತ್ತು. ಆಗ ಸಂಸದ ಪ್ರತಾಪ್ ಸಿಂಹ ಬಸ್ ಗಳನ್ನು ತಡೆದು ಪ್ರತಿಭಟನೆ ನಡೆಸಿದ್ದರು. ತಕ್ಷಣ ಪೊಲೀಸರು ಬಂದು ಪ್ರತಾಪ್ ಸಿಂಹ ಹಾಗೂ ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆದಿದ್ದಾರೆ.

    ಮುಖ್ಯಮಂತ್ರಿ ಹುದ್ದೆಯಲ್ಲಿ ಇದ್ದುಕೊಂಡು ಜನರ ಮುಲಾಜಿನಲ್ಲಿ ಇಲ್ಲ ಎಂದರೆ ಏನರ್ಥ? ಜನರ ಮುಲಾಜಿನಲ್ಲಿ ಇಲ್ಲದಿದ್ದರೆ ಅಧಿಕಾರ ಬಿಟ್ಟು ಕೆಳಗಿಳಿಯಲಿ. ಕುಮಾರಸ್ವಾಮಿಯವರು ಪ್ರಣಾಳಿಕೆಯಲ್ಲಿ ಸಾಲಮನ್ನ ಭರವಸೆ ನೀಡಿದ್ದರು. ಅವರು ಭರವಸೆಯಂತೆ ಸಾಲಮನ್ನ ಮಾಡಲಿ. ಯಡಿಯೂರಪ್ಪ ಒಂದು ಲಕ್ಷದವರೆಗೆ ಸಾಲಮನ್ನ ಮಾಡಲು ಮುಂದಾಗಿದ್ದರು. ಅದೇ ರೀತಿ ನೀವು ಸಾಲಮನ್ನಾ ಮಾಡುವುದಾಗಿ ನೀಡಿದ್ದ ಹೇಳಿಕೆಯನ್ನು ಉಳಿಸಿಕೊಳ್ಳಿ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.

    ಸಾಲಮನ್ನಕ್ಕೆ ಆಗ್ರಹಿಸಿ ಬಿಜೆಪಿಯಿಂದ ಕರ್ನಾಟಕ ಬಂದ್ ಕರೆಗೆ ಮೈಸೂರಿನಲ್ಲಿ ಕನ್ನಡ ಪರ ಸಂಘಟನೆ ಹಾಗೂ ರೈತಪರ ಸಂಘಟನೆಗಳು ಬೆಂಬಲ ಸೂಚಿಸಲಿಲ್ಲ. ಇನ್ನೂ ಕರ್ನಾಟಕ ಬಂದ್ ಗೆ ಹೋಟೆಲ್ ಮಾಲೀಕರ ಸಂಘದಿಂದ ಬೆಂಬಲ ಇಲ್ಲ. ಅಲ್ಲದೇ ಮೈಸೂರು ಲಾರಿ ಮಾಲೀಕರ ಸಂಘದಿಂದಲೂ ನೈತಿಕ ಬೆಂಬಲ ಮಾತ್ರ ನೀಡುತ್ತಿದ್ದು, ಮೈಸೂರು ಥಿಯೇಟರ್ ಮಾಲೀಕರಿಂದ ಬಂದ್‍ಗೆ ಬೆಂಬಲ ಸೂಚಿಸಿದ್ದು, ಥಿಯೇಟರ್ ಮಾಲೀಕರು ಬೆಳಗಿನ ಪ್ರದರ್ಶನ ಮಾತ್ರ ರದ್ದು ಮಾಡುತ್ತಿದ್ದಾರೆ. ಶಾಲಾ ಕಾಲೇಜುಗಳಿಗೆ ಯಾವುದೇ ರಜೆ ಇಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್ ರಿಂದ ಮಾಹಿತಿ ನೀಡಿದ್ದಾರೆ.

    ಸಾಂಸ್ಕೃತಿಕ ನಗರಿಯಲ್ಲಿ ಕರ್ನಾಟಕ ಬಂದ್‍ಗೆ ನೀರಸ ಪ್ರತಿಕ್ರಿಯೆ ಇದ್ದು, ಜನಜೀವನ ಎಂದಿನಂತೆ ಸಾಗತ್ತಿದೆ. ಸಾರಿಗೆ ಬಸ್‍ಗಳು ರಸ್ತೆಗಿಳಿದು ಸೇವೆ ಆರಂಭಿಸಿದ್ದು, ನಗರ ಬಸ್ ನಿಲ್ದಾಣದಲ್ಲಿ ಎಂದಿನಂತೆ ಬಸ್ ಸಂಚರಿಸುತ್ತಿದೆ. ಆಟೋ ಹಾಗೂ ಇತರೆ ಸಾರಿಗೆ ಕೂಡ ಇಂದು ಲಭ್ಯವಿದೆ. ಹಾಲು, ದಿನಪತ್ರಿಕೆಗಳು ಎಂದಿನಂತೆ ಲಭ್ಯವಿದ್ದು, ರಸ್ತೆಯಲ್ಲಿ ವಾಹನಗಳು ದಿನ ನಿತ್ಯದಂತೆ ಸಂಚರಿಸುತ್ತಿದೆ. ಸದ್ಯದವರೆಗೆ ಮೈಸೂರಿಗೆ ಬಂದ್ ಬಿಸಿ ತಟ್ಟಿಲ್ಲ.

    ಕೆಎಸ್ ಆರ್ ಟಿ ಸಿ ಬಸ್ ತಡೆದ ಹಿನ್ನೆಲೆಯಲ್ಲಿ ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ ಅವರನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಮೈಸೂರಿನ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದ ಬಳಿ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸುತ್ತಿದ್ದಾರೆ.