Tag: ಪತ್ನಿ

  • ಹಣಕ್ಕಾಗಿ ಪತಿಯ ಹೆಣ ಬಿಟ್ಟು ಪರಾರಿಯಾದ ಪತ್ನಿ!

    ಹಣಕ್ಕಾಗಿ ಪತಿಯ ಹೆಣ ಬಿಟ್ಟು ಪರಾರಿಯಾದ ಪತ್ನಿ!

    ಬಾಗಲಕೋಟೆ: ಹಣದ ಮುಂದೆ ಮಾನವೀಯತೆಯ ಮೌಲ್ಯಗಳು ಹಾಗೂ ಸಂಬಂಧಗಳೂ ಉಳಿಯೋದಿಲ್ಲ ಅನ್ನೋದಕ್ಕೆ ಬಾಗಲಕೋಟೆ ಜಿಲ್ಲೆಯ ಹೊನ್ನಾಕಟ್ಟಿ ಗ್ರಾಮದಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಹಣಕ್ಕಾಗಿ ಪತಿಯ ಶವವನ್ನೇ ರಾತ್ರೋ ರಾತ್ರಿ ಬಿಟ್ಟು ಪತ್ನಿ ಪರಾರಿಯಾಗಿದ್ದಾಳೆ.

    ಇದನ್ನೂ ಓದಿ: ಗಂಡನ ಕಾಮದಾಟ ಬೇಸತ್ತು ಸುಪಾರಿ ಕೊಟ್ಟು ಗಂಡನನ್ನೇ ಕೊಲ್ಲಿಸಿದ್ಳು!

    ರೇಣುಕಾ ಎಂಬ ಮಹಿಳೆ ಹಣಕ್ಕಾಗಿ ಪತಿಯ ಶವವನ್ನು ಬಿಟ್ಟು ಹೋದ ಪತ್ನಿ. ಸೋಮವಾರ ರಾತ್ರಿ ರೇಣುಕಾ ಪತಿ ಶಿವಲಿಂಗಪ್ಪ ಬೇವಿನಮಟ್ಟಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಶಿವಲಿಂಗಪ್ಪ ಅವರು ನಾಲ್ಕು ವರ್ಷದ ಹಿಂದೆ ತಮ್ಮ 13 ಎಕರೆ ಜಮೀನನ್ನು ಸುಮಾರು 80 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿದ್ದರು. ಸೋಮವಾರ ಶಿವಲಿಂಗಪ್ಪ ಮರಣ ಹೊಂದಿದ ನಂತರ ಮನೆಯಲ್ಲಿನ ಹಣ ಲಪಟಾಯಿಸಿ ರೇಣುಕಾ ರಾತ್ರೋ ರಾತ್ರಿ ಮಗನೊಂದಿಗೆ ಗ್ರಾಮದಿಂದ ಕಾಲ್ಕಿತ್ತಿದ್ದಾಳೆ.

    ರೇಣುಕಾಳಿಗೆ ಗ್ರಾಮಸ್ಥರು ಬುದ್ಧಿ ಹೇಳಲು ಹೋದ್ರೆ ಅವರ ಮೇಲೆಯೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಬೆದರಿಕೆ ಹಾಕಿ ಪರಾರಿಯಾಗಿದ್ದಾಳೆ. ಹೀಗಾಗಿ ಗ್ರಾಮದ ಜನತೆಯೇ ದುಡ್ಡು ಸೇರಿಸಿ ಶಿವಲಿಂಗಪ್ಪರ ಅಂತ್ಯಕ್ರಿಯೆ ಮಾಡಿ, ನಂತರ ಪತ್ನಿ ರೇಣುಕಾಳ ಮೇಲೆ ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಶಿವಲಿಂಗಪ್ಪರ ತಾಯಿ

     

  • ಪತಿ ಬೇಕೆಂದು ಮನೆಯ ಮುಂದೆ ಧರಣಿ ಕುಳಿತ ಪತ್ನಿ!

    ಪತಿ ಬೇಕೆಂದು ಮನೆಯ ಮುಂದೆ ಧರಣಿ ಕುಳಿತ ಪತ್ನಿ!

    ದಾವಣಗೆರೆ: ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹೊಸ ಬ್ರಹ್ಮಪುರದಲ್ಲಿ ಮಹಿಳೆಯೊಬ್ರು ಇಂದು ಬೆಳ್ಳಂಬೆಳಗ್ಗೆ ನ್ಯಾಯಕ್ಕಾಗಿ ಪತಿ ಮನೆ ಮುಂದೆ ಧರಣಿ ಕುಳಿತಿದ್ದಾರೆ.

    ಧರಣಿ ಯಾಕೆ?: ಹುಬ್ಬಳ್ಳಿ ಮೂಲದ ಗೀತಾ, ಹರಿಹರದ ಗೋವಿಂದ ಎಂಬವರನ್ನ 8 ವರ್ಷದ ಹಿಂದೆ ವಿವಾಹ ಆಗಿದ್ದರು. ಬಳಿಕ ಮನೆಯವರ ಕಿರುಕುಳ ತಾಳಲಾರದೇ ತವರು ಮನೆಗೆ ಹೋಗಿದ್ರು. ಅಲ್ಲದೆ ಗಂಡನ ಮೇಲೆ ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.

    ಆದ್ರೆ ಇದೀಗ ತಮ್ಮ ಮಗುವಿನ ಭವಿಷ್ಯದ ದೃಷ್ಠಿಯಿಂದ ತನಗೆ ಪತಿ ಬೇಕು ಅಂತಾ ಪಟ್ಟುಹಿಡಿದಿದ್ದಾರೆ. ಹೀಗಾಗಿ ಇಂದು ಬೆಳಗ್ಗೆಯಿಂದ ಗಂಡನ ಮನೆಯ ಮುಂದೆ ಮಗಳ ಜೊತೆ ಧರಣಿ ಕುಳಿತುಕೊಂಡಿದ್ದಾರೆ. ಆದರೆ ಗಂಡನ ಮನೆಯವರು ಮಾತ್ರ ಯಾವುದಕ್ಕೂ ಲೆಕ್ಕ ಹಾಕುತ್ತಿಲ್ಲ. ಗೀತಾ ಪತಿ ಮಾತ್ರ ಬೆಳಗ್ಗೆಯಿಂದ ಪೊಲೀಸ್ ಠಾಣೆಯಲ್ಲಿ ಕುಳಿತಿದ್ದು, ಯಾವುದಕ್ಕೂ ಸ್ಪಷ್ಟನೆ ನೀಡುತ್ತಿಲ್ಲ.

    ಗಂಡನ ಜೊತೆ ಜೀವನ ಮಾಡದೇ ಮನೆ ಬಿಟ್ಟು ಹೋಗುವುದಿಲ್ಲ ಎಂದು ಹಠ ಹಿಡಿದು ಮನೆ ಮುಂದೆಯೇ ಮಗುವಿನ ಜೊತೆ ಕುಳಿತು ಗೀತಾ ಅವರು ಏಕಾಂಗಿಯಾಗಿ ಪ್ರತಿಭಟನೆ ಮಾಡುತ್ತಿದ್ದಾರೆ.

     

  • ಮಗುವಿಗೆ ನನ್ನ ಹೋಲಿಕೆಯೇ ಇಲ್ಲವೆಂದು ಹೆಂಡತಿಯನ್ನ ಕತ್ತು ಹಿಸುಕಿ ಕೊಂದ ಪತಿ

    ಮಗುವಿಗೆ ನನ್ನ ಹೋಲಿಕೆಯೇ ಇಲ್ಲವೆಂದು ಹೆಂಡತಿಯನ್ನ ಕತ್ತು ಹಿಸುಕಿ ಕೊಂದ ಪತಿ

    ಬೆಳಗಾವಿ: ಮಗುವಿಗೆ ತನ್ನಂತೆ ಹೋಲಿಕೆ ಇಲ್ಲ ಅಂತ ಅನುಮಾನಗೊಂಡ ಪತಿಯೊಬ್ಬ ಹೆಂಡತಿಯನ್ನ ಹಾಡಹಗಲೇ ಕತ್ತು ಹಿಸುಕಿ ಹತ್ಯೆ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

    ಬೆಳಗಾವಿಯ ಮಹಾವೀರ ನಗರದಲ್ಲಿ ಬುಧವಾರ ಮಧ್ಯಾಹ್ನ ಕೊಲೆ ನಡೆದಿದೆ. ಮೃತ ಮಹಿಳೆಯನ್ನ 25 ವರ್ಷದ ಶಿಲ್ಪಾ ಎಂದು ಗುರುತಿಸಲಾಗಿದೆ. ಪತ್ನಿಯನ್ನು ಕೊಲೆ ಮಾಡಿದ 28 ವರ್ಷದ ಪತಿ ಪ್ರವೀಣ್ ಬಡಿಗೇರ ತಾನೇ ಸ್ವತಃ ಟಿಳಕವಾಡಿ ಪೊಲೀಸರಿಗೆ ಶರಣಾಗಿದ್ದಾನೆ. ನಂತರ ಸ್ಥಳಕ್ಕೆ ಭೇಟಿ ನೀಡಿದ ಡಿಸಿಪಿ ಜಿ. ರಾಧಿಕಾ ಪರಿಶೀಲನೆ ನಡೆಸಿದ್ದಾರೆ.

     ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪತಿ ಮಲಗಿದ್ದ ಹಾಸಿಗೆಗೆ ಬೆಂಕಿಯಿಟ್ಟು ಕೊಲ್ಲಲೆತ್ನಿಸಿದ್ಳಾ ಪತ್ನಿ?

    ಪತಿ ಮಲಗಿದ್ದ ಹಾಸಿಗೆಗೆ ಬೆಂಕಿಯಿಟ್ಟು ಕೊಲ್ಲಲೆತ್ನಿಸಿದ್ಳಾ ಪತ್ನಿ?

    – ಕೆಎಲ್‍ಇ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಸೈನಿಕ

    ಬೆಳಗಾವಿ: ಹಾಸಿಗೆಯಲ್ಲಿ ಹಾಯಾಗಿ ಮಲಗಿದ್ದ ಪತಿಗೆ ಬೆಂಕಿ ಹಚ್ಚಿ ಪತ್ನಿಯೇ ಕೊಲ್ಲಲೆತ್ನಿಸಿದ ಭೀಕರ ಘಟನೆ ಬೆಳಗಾವಿಯಲ್ಲಿ ನಡೆದಿದೆ.

    ನಗರದ ಲಕ್ಷ್ಮೀ ಟೆಕಡಿಯ ಸೈನಿಕ್ ನಗರದ ನಿವಾಸಿ ಸೈನಿಕ ದೀಪಕ್ ಪವಾರ್ ಅವರನ್ನು ಪತ್ನಿಯೇ ಹತ್ಯೆ ಮಾಡಲು ಯತ್ನಿಸಿದ್ದಾಳೆ. ಘಟನೆಯಲ್ಲಿ ದೀಪಕ್ ಕುಮಾರ್‍ಗೆ ಶೇಕಡಾ 85ರಷ್ಟು ಸುಟ್ಟ ಗಾಯಗಳಾಗಿದ್ದು, ಕೆಎಲ್‍ಇ ಆಸ್ಪತ್ರೆಯಲ್ಲಿ ತುರ್ತು ನಿಘಾ ಘಟಕದಲ್ಲಿ ಸಾವು ಬದುಕಿನ ಮಧ್ಯೆ ಹೋರಾಡ್ತಿದ್ದಾರೆ.

    ಮಿಲಿಟರಿಯಲ್ಲಿರುವ ದೀಪಕ್ 9 ವರ್ಷದ ಹಿಂದೆ ಸವಿತಾ ಎಂಬಾಕೆಯನ್ನು ಮದುವೆಯಾಗಿದ್ದರು. ಆದ್ರೆ ಇತ್ತೀಚಿನ ನಡವಳಿಕೆಗಳ ಕಾರಣ ಪತ್ನಿಯ ಶೀಲ ಶಂಕಿಸಿ ಜಗಳವಾಡುತ್ತಿದ್ದರು. ಕಳೆದ ರಾತ್ರಿ ಸುಮಾರು ಒಂದು ಗಂಟೆಗೆ ಮಲಗಿದ್ದ ಹಾಸಿಗೆಗೆ ಬೆಂಕಿ ಬಿದ್ದಿತ್ತು. ನನ್ನ ಪತ್ನಿಯೇ ಈ ಕೃತ್ಯ ಎಸಗಿದ್ದಾಳೆ ಎಂದು ದೀಪಕ್ ಕ್ಯಾಂಪ್ ಠಾಣೆ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

    ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸ್ತಿದ್ದಾರೆ.

  • ಕಲ್ಲಿನಿಂದ ಜಜ್ಜಿ ಪತ್ನಿ ಕೊಲೆಗೈದ ಪತಿ!

    ಕಲ್ಲಿನಿಂದ ಜಜ್ಜಿ ಪತ್ನಿ ಕೊಲೆಗೈದ ಪತಿ!

    ಬೆಂಗಳೂರು: ವ್ಯಕ್ತಿಯೊಬ್ಬ ತನ್ನ ಪತ್ನಿಯ ಶೀಲ ಶಂಕಿಸಿ ಆಕೆಯನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಬೆಂಗಳೂರಿನ ರಾಜಾನುಕುಂಟೆಯಲ್ಲಿ ನಡೆದಿದೆ.

    25 ವರ್ಷದ ಸುಶೀಲ ಕೊಲೆಯಾದ ದುರ್ದೈವಿ. ರಾಜಾನುಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಶಿವಕೋಟೆಯಲ್ಲಿ ಭಾನುವಾರ ತಡರಾತ್ರಿ ಈ ಘಟನೆ ನಡೆದಿದೆ. ಸುಶೀಲಾ ಗಂಡನಾದ 35 ವರ್ಷದ ಸತೀಶ್, ಹೆಂಡತಿಯ ಮೇಲಿನ ಅನುಮಾನದಿಂದ ಆಕೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ. ಆರೋಪಿ ಸತೀಶ್‍ನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

    ಮೃತ ಸುಶೀಲ ಮನೆ ಕೆಲಸ ಮಾಡುತ್ತಿದ್ದು, ಸತೀಶ್ ಗಾರೆ ಕೆಲಸಕ್ಕೆ ಹೋಗುತ್ತಿದ್ದ. ಈ ದಂಪತಿಗೆ 6 ಮತ್ತು 4 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

    ಘಟನೆ ಕುರಿತು ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪತ್ನಿಯ ಮೇಲೆ ಅನುಮಾನಗೊಂಡ ಪತಿ ಮಧ್ಯರಾತ್ರಿ ಏನ್ ಮಾಡ್ದ ಗೊತ್ತಾ?

    ಕಾಬೂಲ್: ಪ್ರತೀ ಬಾರಿಯೂ ಹೆತ್ತವರ ಮನೆಗೆ ಹೋಗಿ ಬಂದ ಬಳಿಕ ಅನುಮಾನದಿಂದಲೇ ವರ್ತಿಸುತ್ತಿದ್ದ ಪತಿ ಈ ಬಾರಿಯೂ ಅನುಮಾನಗೊಂಡು ಮಧ್ಯರಾತ್ರಿಯೇ ಆಕೆಯ ಎರಡೂ ಕಿವಿಗಳನ್ನು ಕತ್ತರಿಸಿದ ಅಮಾನವೀಯ ಘಟನೆಯೊಂದು ಅಫ್ಘಾನಿಸ್ತಾನದಲ್ಲಿ ನಡೆದಿದೆ.

    ಉತ್ತರ ಪ್ರಾಂತ್ಯದ ಬಾಲ್ಕ್ ನಿವಾಸಿ ಝರೀನಾ ಇದೀಗ ಎರಡೂ ಕಿವಿಗಳನ್ನು ಕಳೆದುಕೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ತನ್ನ ಪತಿಯ ಕೃತ್ಯದ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಝರೀನಾ, `ನನ್ನ ಪತಿ ಅನುಮಾನ ಪಿಶಾಚಿಯಾಗಿದ್ದಾನೆ. ಪ್ರತೀ ಬಾರಿಯೂ ನಾನು ಹೆತ್ತವರ ಮನೆಗೆ ಹೋಗಿ ಬಂದ ಬಳಿಕ ನನ್ನನ್ನು ಅನುಮಾನದಿಂದಲೇ ನೋಡುತ್ತಿದ್ದ. ಈ ಬಾರಿಯೂ ನಾನು ಹೆತ್ತವರ ಮನೆಗೆ ಹೋಗಿ ಬಂದಿದ್ದೆ. ಅಂತೆಯೇ ಬಂದ ಬಳಿಕ ಮಧ್ಯರಾತ್ರಿ ನನ್ನನ್ನು ನಿದ್ದೆಯಿಂದ ಎಬ್ಬಿಸಿ ಕಾರಣವಿಲ್ಲದೇ ಎರಡೂ ಕಿವಿಗಳನ್ನು ಕತ್ತರಿಸಿದ್ದಾನೆ ಅಂತಾ ತನ್ನ ಅಳಲು ತೋಡಿಕೊಂಡಿದ್ದಾರೆ.

    ಝರೀನಾಗೆ 13ನೇ ವಯಸ್ಸನಲ್ಲೇ ಮದುವೆಯಾಗಿತ್ತು. ಸದ್ಯ ಝರೀನಾ ಆರೋಗ್ಯ ಸ್ಥಿತಿ ಸುಧಾರಣೆಯಾಗುತ್ತಿದ್ದು, ಪತಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಿ ಅಂತಾ ಪೊಲಿಸರ ಜೊತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಪ್ರಕರಣ ಸಂಬಂಧ ಆರೋಪಿ ತಲೆಮರೆಸಿಕೊಂಡಿದ್ದಾನೆ ಅಂತಾ ಪೊಲೀಸರು ತಿಳಿಸಿದ್ದಾರೆ.