Tag: ಪತ್ನಿ

  • ಪತ್ನಿಯನ್ನ ಉಸಿರುಗಟ್ಟಿಸಿ ಕೊಲೆಗೈದ ಟೆಕ್ಕಿ ಪತಿ!

    ಪತ್ನಿಯನ್ನ ಉಸಿರುಗಟ್ಟಿಸಿ ಕೊಲೆಗೈದ ಟೆಕ್ಕಿ ಪತಿ!

    ಬೆಂಗಳೂರು: ಪತಿಯೊಬ್ಬ ತನ್ನ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ನಗರದ ಮಹದೇವಪುರದಲ್ಲಿ ನಡೆದಿದೆ.

    ಸನಾ ಅಕಿಲ್ ಕೊಲೆಯಾದ ಪತ್ನಿ. ಸನಾ ಅವರು 2015ರಲ್ಲಿ ಎಂಜಿನೀಯರ್ ಅಗಿರುವ ಸಾದಾಬ್ ಶಫೀ ಎಂಬಾತನೊಂದಿಗೆ ಸಂಪ್ರದಾಯಬದ್ದವಾಗಿ ವಿವಾಹವಾಗಿದ್ದರು. ಇವರಿಬ್ಬರ ಪ್ರೀತಿಯ ಸಂಕೇತವಾಗಿ 8 ತಿಂಗಳ ಮಗು ಸಹವಿದೆ. ಇದೇ ತಿಂಗಳು 21 ರಂದು ಸಾದಾಪ್ ಪತ್ನಿಯನ್ನು ಕೊಲೆ ಮಾಡಿ ನಾಪತ್ತೆಯಾಗಿದ್ದಾನೆ.

    ಸಾದಾಪ್ ಪತ್ನಿಗೆ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ ಎಂದು ತಿಳಿದು ಬಂದಿದೆ. ಈ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರುವ ಸಾದಾಪ್‍ನ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

    ಇದನ್ನೂ ಓದಿ: ನ್ಯೂಜೆರ್ಸಿಯಲ್ಲಿ ಆಂಧ್ರದ ಮಹಿಳಾ ಟೆಕ್ಕಿ, ಮಗ ಹತ್ಯೆ!

  • ಅಕ್ರಮ ಸಂಬಂಧಕ್ಕೆ ಬೇಸತ್ತು ಗಂಡನ ಕೊಲೆಗೆ 5 ಲಕ್ಷ ರೂ.ಗೆ ಸುಪಾರಿ ಕೊಟ್ಟ ಪತ್ನಿ

    ಅಕ್ರಮ ಸಂಬಂಧಕ್ಕೆ ಬೇಸತ್ತು ಗಂಡನ ಕೊಲೆಗೆ 5 ಲಕ್ಷ ರೂ.ಗೆ ಸುಪಾರಿ ಕೊಟ್ಟ ಪತ್ನಿ

    ಕೋಲಾರ: ಪತ್ನಿಯೊಬ್ಬಳು ತನ್ನ ಪತಿಯ ಕೊಲೆಗೆ 5 ಲಕ್ಷ ರೂ. ಸುಪಾರಿ ನೀಡಿದ್ದ ಪ್ರಕರಣವನ್ನು ಬೇಧಿಸುವಲ್ಲಿ ಕೋಲಾರ ಪೊಲೀಸರು ಯಶ್ವಸಿಯಾಗಿದ್ದಾರೆ.

    ಭಾಗ್ಯಮ್ಮ ಎಂಬ ಮಹಿಳೆ 2016ರ ಜನವರಿ 13ರಂದು ತನ್ನ ಪತಿ ನಾರಾಯಣ ಅವರನ್ನು ಕೊಲೆ ಮಾಡುವುದಕ್ಕಾಗಿ 5 ಲಕ್ಷ ರೂ. ಸುಪಾರಿ ನೀಡಿದ್ದಳು. ಕೊಲೆಯ ನಂತರ ಪತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಎಲ್ಲರನ್ನೂ ನಂಬಿಸಿದ್ದಳು.

    ಕೊಲೆಯಾದ ನಾರಾಯಣ ಮೂಲತಃ ಆಂಧ್ರಪ್ರದೇಶ ರಾಜ್ಯದ ನಿವಾಸಿ. 15 ವರ್ಷಗಳ ಹಿಂದೆ ನಾರಾಯಣಸ್ವಾಮಿ ಮುಳುಬಾಗಿಲು ಪಟ್ಟಣಕ್ಕೆ ಸಪ್ಲೈಯರ್ ಕೆಲಸಕ್ಕಾಗಿ ಆಗಮಿಸಿದ್ದರು. ನಂತರ ತಾವೇ ಒಂದು `ಬಾಯಿಕೊಂಡ ಗಂಗಮ್ಮ’ ಎಂಬ ಕಬಾಬ್ ಸೆಂಟರ್ ತೆರೆದು ಯಶ್ವಸಿಯಾಗಿ, ಸಾಕಷ್ಟು ಆಸ್ತಿ ಸಂಪಾದನೆ ಮಾಡಿಕೊಂಡಿದ್ದರು. ಆದರೆ ನಾರಾಯಣಸ್ವಾಮಿ ತನ್ನ ಪತ್ನಿ ಭಾಗ್ಯಮ್ಮಳ ಅಕ್ಕ ಮತ್ತು ಆಕೆಯ ಮಗಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನು ಎನ್ನಲಾಗಿದೆ.

    ಗಂಡನ ಅಕ್ರಮ ಸಂಬಂಧದ ಬೇಸತ್ತ ಭಾಗ್ಯಮ್ಮ ತನಗೆ ಪರಿಚಯವಿದ್ದ ಬಾಲಾಜಿ ಸಿಂಗ್ ಎಂಬವರ ಮೂಲಕ ಜಮೀರ್ ಪಾಷಾ ಹಾಗು ವಾಸಿಂ ಪಾಷಾರನ್ನು ಸಂಪರ್ಕಿಸಿದ್ದಳು. ಇವರಿಬ್ಬರಿಗೂ ತನ್ನ ಪತಿಯನ್ನು ಕೊಲ್ಲಲು ಬರೋಬ್ಬರಿ 5 ಲಕ್ಷ ರೂ.ಗೆ ಸುಫಾರಿ ನೀಡಿದ್ದಳು.

    ಬೆಳಕಿಗೆ ಬಂದಿದ್ದು ಹೇಗೆ?: ಆರೋಪಿಗಳಾದ ಜಮೀರ್ ಪಾಷಾ ಮತ್ತು ವಾಸಿಂ ಪಾಷಾ ದರೋಡೆ ಪ್ರಕರಣದಲ್ಲಿ ಬಂಧಿಯಾಗಿದ್ದರು. ಪೊಲೀಸರ ವಿಚಾರಣೆ ವೇಳೆ ನಾರಾಯಣಸ್ವಾಮಿಯ ಕೊಲೆಯನ್ನು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಾಗ್ಯಮ್ಮಳನ್ನು ಪೊಲೀಸರು ವಿಚಾರಿಸಿದಾಗ ಆಕೆಯು ಸಹ ತಪ್ಪೊಪ್ಪಿಕೊಂಡಿದ್ದಾಳೆ.

    ಇದನ್ನೂ ಓದಿ: ಶೀಲ ಶಂಕಿಸಿದ ಗಂಡನನ್ನೇ ಕೊಂದಳು ಪತ್ನಿ!

    ಗಂಡನನ್ನು ಕೊಲ್ಲಲು ಜಮೀರ್ ಪಾಷಾ ಹಾಗು ವಸೀಂ ಪಾಷಾ ಎಂಬವರಿಗೆ ಭಾಗ್ಯಮ್ಮ ಸುಪಾರಿ ನೀಡಿದ್ದಳು ಎಂಬುದು ಈಗ ಬಯಲಾಗಿದ್ದು, ನ್ಯಾಯಾಲಯದ ಆದೇಶದಂತೆ ಇಂದು ಉಪ ವಿಭಾಗಾಧಿಕಾರಿ ಮಂಜುನಾಥ ನೇತೃತ್ವದಲ್ಲಿ ಮುಳಬಾಗಿಲು ತಾಲೂಕು ಹೊಸಹಳ್ಳಿ ರಸ್ತೆಯಲ್ಲಿರುವ ಫಾರ್ಮ್ ಹೌಸ್ ಆವರಣದಲ್ಲಿ ಮರು ಶವಪರೀಕ್ಷೆ ನಡೆಸಲಾಯಿತು.

    ಇದನ್ನೂ ಓದಿ: ಗಂಡನ ಕಾಮದಾಟ ಬೇಸತ್ತು ಸುಪಾರಿ ಕೊಟ್ಟು ಗಂಡನನ್ನೇ ಕೊಲ್ಲಿಸಿದ್ಳು!

     

  • ಮದ್ವೆಯಾಗಿ ವರ್ಷವಾದ್ರೂ ಮಂಚಕ್ಕೆ ಬಾರದ ಪತಿಯ ವಿರುದ್ಧ ದೂರು ದಾಖಲು

    ಮದ್ವೆಯಾಗಿ ವರ್ಷವಾದ್ರೂ ಮಂಚಕ್ಕೆ ಬಾರದ ಪತಿಯ ವಿರುದ್ಧ ದೂರು ದಾಖಲು

    ಬೆಂಗಳೂರು: ಮದುವೆಯಾಗಿ ವರ್ಷವಾದರೂ ಶಾರೀರಿಕ ಸಂಪರ್ಕಕ್ಕೆ ನಿರಾಕರಿಸುತ್ತಿದ್ದ ಪತಿಯ ವಿರುದ್ಧ ಪತ್ನಿ ವಿಜಯನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ತಮಿಳುನಾಡಿನ ವೇಲೂರು ಮೂಲದ ಬಾಲಾಜಿ ಎಂಬಾತನೊಂದಿಗೆ ಪೈಪ್‍ಲೈನ್ ನಿವಾಸಿಯಾಗಿರುವ ಮಹಿಳೆಯ ಜೊತೆ ಕಳೆದ ವರ್ಷ ಮದುವೆ ನಡೆದಿತ್ತು. ಪೋಷಕರು ಸುಮಾರು 15 ಲಕ್ಷ ರೂ. ಖರ್ಚು ಮಾಡಿ ಚಿನ್ನಾಭರಣ ಮತ್ತು ಬೆಳ್ಳಿಯನ್ನು ನೀಡಿ ಅದ್ಧೂರಿಯಾಗಿ ಮಗಳ ಮದುವೆಯನ್ನು ನೇರವೇರಿಸಿದ್ದರು.

    ಇದನ್ನೂ ಓದಿ: ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಆಸೆಪಟ್ಟ ಬೆಂಗಳೂರಿನ ಟೆಕ್ಕಿ ಪತಿ ವಿರುದ್ಧ ದೂರು 

    ಮದುವೆಯಾದ ನಂತರ ಫಸ್ಟ್ ನೈಟ್ ನೋ ಅಂದಿದ್ದ ಬಾಲಾಜಿ ಮತ್ಯಾವ ರಾತ್ರಿಗೂ ಒಪ್ಪಿರಲಿಲ್ಲ. ಪ್ರತಿದಿನ ಏನಾದ್ರೂ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದ. ಇದರಿಂದಾಗಿ ಸಂಶಯಗೊಂಡ ಮಹಿಳೆ ಪತಿರಾಯನ ಪುರುಷತ್ವದ ಬಗ್ಗೆ ಪರೀಕ್ಷೆ ಮಾಡಿಸಿದಾಗ, ತನ್ನ ಪತಿಗೆ ಪುರುಷತ್ವ ಇಲ್ಲ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

    ಇದನ್ನೂ ಓದಿ: ಹೆಂಡತಿಗೆ ವಯಾಗ್ರ ಮಾತ್ರೆ ತಿನ್ನಿಸಿ ಪೀಡಿಸ್ತಿದ್ನಂತೆ ಕಾಮುಕ ಪತಿ

    ಪುರುಷತ್ವ ಇಲ್ಲದ ವ್ಯಕ್ತಿಯೊಂದಿಗೆ ತನ್ನನ್ನು ಮೋಸದಿಂದ ಮದುವೆ ಮಾಡಿಸಲಾಗಿದೆ ಎಂದು ಸಂತ್ರಸ್ತೆ ಈಗ ಪತಿ ಹಾಗು ಆತನ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದಾರೆ. ಮದುವೆಯಲ್ಲಿ ತಮ್ಮ ಪೋಷಕರು ಖರ್ಚು ಮಾಡಿದ್ದ 15 ಲಕ್ಷ ರೂ. ಹಿಂದುರುಗಿಸಬೇಕೆಂಬ ಅಂಶವನ್ನು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ.

    ಇದನ್ನೂ ಓದಿ: ಗಂಡನ ಕಾಮದಾಟ ಬೇಸತ್ತು ಸುಪಾರಿ ಕೊಟ್ಟು ಗಂಡನನ್ನೇ ಕೊಲ್ಲಿಸಿದ್ಳು! 

    ಇದನ್ನೂ ಓದಿ: ನನ್ನ ಗಂಡನಿಗೆ ಪುರುಷತ್ವ ಇಲ್ಲ ಎಂದು ಪೊಲೀಸರಿಗೆ ಪತ್ನಿ ದೂರು 

    https://www.youtube.com/watch?v=74cON2kOniE

  • ಶೀಲ ಶಂಕಿಸಿದ ಗಂಡನನ್ನೇ ಕೊಂದಳು ಪತ್ನಿ!

    ಶೀಲ ಶಂಕಿಸಿದ ಗಂಡನನ್ನೇ ಕೊಂದಳು ಪತ್ನಿ!

    -ಮಗನನ್ನ ಹತ್ಯೆ ಮಾಡಿದ್ರೂ ಸೊಸೆ ಮೇಲೆ ಅತ್ತೆ ಪ್ರೀತಿ

    ಬೆಂಗಳೂರು: ಗಂಡನ ಕಿರುಕುಳ ತಾಳಲಾರದೇ ಹೆಂಡತಿಯೇ ಗಂಡನ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಯಶವಂತಪುರದ ಸುಬೇದಾರ್‍ಪಾಳ್ಯದಲ್ಲಿ ನಡೆದಿದೆ.

    36 ವರ್ಷದ ಸತೀಶ್ ಮೃತ ದುರ್ದೈವಿ. ಮೂಲತಃ ತುಮಕೂರಿನವನಾದ ಸತೀಶ್ ಬೆಂಗಳೂರಲ್ಲಿ ಸೆಕ್ಯುರಿಟಿ ಸೂಪರ್‍ವೈಸರ್ ಆಗಿ ಕೆಲಸ ಮಾಡ್ತಿದ್ದ. ಕಲ್ಪನಾ ಅನ್ನೋರ ಜೊತೆ ಮದುವೆಯಾಗಿ ಎರಡು ಮಕ್ಕಳೂ ಕೂಡ ಇವೆ. ಆದ್ರೆ ಪ್ರತಿ ದಿನ ಕುಡಿದು ಬರ್ತಿದ್ದ ಸತೀಶ್ ಹೆಂಡತಿಯ ಶೀಲದ ಮೇಲೆ ಅನುಮಾನ ಪಡುತ್ತಿದ್ದ.

    ಇದರಿಂದ ಬೇಸತ್ತ ಕಲ್ಪನಾ ಬುಧವಾರ ಪತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಆದರೆ ಸತೀಶ್ ಕುಟುಂಬದವರು ಮಾತ್ರ ಕಲ್ಪನಾ ಮೇಲೆ ಯಾವುದೇ ಆರೋಪ ಮಾಡ್ತಿಲ್ಲ. ಪ್ರಕರಣ ದಾಖಲಿಸಿಕೊಂಡಿರೋ ಯಶವಂತಪುರ ಪೊಲೀಸ್ರು ಕಲ್ಪಾನರನ್ನ ವಶಕ್ಕೆ ಪಡೆದು ತನಿಖೆ ನಡೆಸ್ತಿದ್ದಾರೆ.

  • ಪತ್ನಿಗಾಗಿ ಪೊಲೀಸ್ ಠಾಣೆ ಎದುರು ಕ್ರಿಮಿನಾಶಕ ಕುಡಿದ ಪತಿ!

    ಪತ್ನಿಗಾಗಿ ಪೊಲೀಸ್ ಠಾಣೆ ಎದುರು ಕ್ರಿಮಿನಾಶಕ ಕುಡಿದ ಪತಿ!

    ರಾಯಚೂರು: ನನ್ನ ಪತ್ನಿಯನ್ನ ನನ್ನ ಮನೆಗೆ ಕಳುಹಿಸಿ ಕೊಡಿ ಅಂತ ಪತಿಯೊಬ್ಬ ಪೊಲೀಸ್ ಠಾಣೆ ಎದುರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಯಚೂರಿನ ಮಾನ್ವಿಯಲ್ಲಿ ನಡೆದಿದೆ.

    ಮಾನ್ವಿಯ ಗವಿಗಟ್ಟ ಗ್ರಾಮದ ಬಸವರಾಜ ಪೊಲೀಸ್ ಠಾಣೆ ಎದುರೇ ಕ್ರಿಮಿನಾಶಕ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಹಿರೇಕೊಟ್ನೆಕಲ್ ಗ್ರಾಮದ ಯುವತಿಯನ್ನ ಮದುವೆಯಾಗಿದ್ದ ಬಸವರಾಜ್ ಪತ್ನಿಗೆ ಕೌಟುಂಬಿಕ ಕಲಹ ಹಿನ್ನೆಲೆ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಗರ್ಭಿಣಿ ಪತ್ನಿ ತವರು ಮನೆ ಸೇರಿಕೊಂಡಿದ್ದಳು.

    ಬಸವರಾಜ್ ಪತ್ನಿಯ ತವರು ಮನೆಗೆ ತೆರಳಿ ಮರಳಿ ಬರುವಂತೆ ಒತ್ತಾಯ ಮಾಡಿದ್ದ ಆದ್ರೆ ಪ್ರಯೋಜನವಾಗಿರಲಿಲ್ಲ, ಜೊತೆಗೆ ಪತ್ನಿ ಕಡೆಯವರ ಜೊತೆ ಹೊಡೆದಾಟ ಮಾಡಿಕೊಂಡಿದ್ದ. ಪತ್ನಿಯನ್ನ ಅವರ ಪೋಷಕರು ಕಳುಹಿಸಲು ಒಪ್ಪದಿದ್ದಾಗ ಬಸವರಾಜ್ ಮಾನ್ವಿ ಪೊಲೀಸ್ ಠಾಣೆಗೆ ಬಂದು ದೂರು ನೀಡಲು ಮುಂದಾಗಿದ್ದ, ಆದ್ರೆ ಪೊಲೀಸರು ಬಸವರಾಜ್‍ಗೆ ಬುದ್ಧಿ ಹೇಳಿ ನಾಳೆ ಬಾ ಅಂತ ಕಳುಹಿಸಿದ್ದರು. ಇದರಿಂದ ಬೇಸತ್ತು ಮೊದಲೇ ಜೊತೆಗೆ ತಂದಿದ್ದ ಕ್ರಿಮಿನಾಶಕವನ್ನ ಎಲ್ಲರ ಎದುರೇ ಕುಡಿದಿದ್ದಾನೆ. ಕೂಡಲೇ ಬಸವರಾಜ್‍ನನ್ನ ಆಸ್ಪತ್ರೆಗೆ ಸೇರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

  • ಅತ್ತೆಯ ಎದುರೇ ಪತ್ನಿಗೆ ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆಗೈದ ಪತಿರಾಯ!

    ಅತ್ತೆಯ ಎದುರೇ ಪತ್ನಿಗೆ ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆಗೈದ ಪತಿರಾಯ!

    ಬೆಂಗಳೂರು: ಅತ್ತೆಯ ಎದುರೇ ಪತ್ನಿಗೆ ನಾಲ್ಕೈದು ಬಾರಿ ಚೂರಿಯಿಂದ ಇರಿದು ಬರ್ಬರವಾಗಿ ಪತಿರಾಯನೊಬ್ಬ ಕೊಲೆಗೈದ ಹೃದಯವಿದ್ರಾವಕ ಘಟನೆಯೊಂದು ಇಂದು ಮಧ್ಯಾಹ್ನ ನಡೆದಿದೆ.

    ಬೆಂಗಳೂರಿನ ಬೇಂದ್ರೆ ನಗರದಲ್ಲಿ ಈ ಘಟನೆ ನಡೆದಿದ್ದು, 30 ವರ್ಷ ಹೇಮ ಕೊಲೆಯಾದ ದುರ್ದೈವಿ ಮಹಿಳೆ.

    40 ವರ್ಷದ ನಾಗರಾಜ ಕೊಲೆಗೈದ ಪತಿರಾಯನಾಗಿದ್ದು, ಈತ ಮೂಲತಃ ತಮಿಳುನಾಡು ಮೂಲದವನು ಎನ್ನಲಾಗುತ್ತಿದೆ. ಎರಡು ತಿಂಗಳ ಹಿಂದೆಯಷ್ಟೇ ಕುಟುಂಬ ಬೇಂದ್ರೆಗೆ ಬಂದು ನೆಲೆಸಿತ್ತು. ಪತ್ನಿಯ ಶೀಲಶಂಕಿಸಿ ಈ ಹತ್ಯೆ ನಡೆದಿದೆ ಅಂತಾ ಹೇಳಲಾಗುತ್ತಿದ್ದು, ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕೊಲೆಯ ಬಳಿಕ ನಾಗರಾಜ್ ಮನೆಯ ಬಾಗಿಲು ಹಾಕಿ ಪರಾರಿಯಾಗಿದ್ದಾನೆ. ಆದ್ರೆ ಪೊಲೀಸರು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿ ಪತ್ನಿಗೆ ಚಾಕುವಿನಿಂದ ಇರಿದಿದ್ದಾನೆ ಅಂತಾ ಶಂಕೆ ವ್ಯಕ್ತಪಡಿಸಿದ್ದಾರೆ.

    ಅತ್ತೆಯ ಎದುರೇ ನಾಗರಾಜ ಪತ್ನಿ ಹೇಮಾರಿಗೆ ನಾಲ್ಕೈದು ಬಾರಿ ಚೂರಿಯಿಂದ ಇರಿದಿದ್ದರಿಂದ ಘಟನೆಯನ್ನು ಕಣ್ಣಾರೆ ನೋಡಿದ ಹೇಮಾ ತಾಯಿ ಇನ್ನೂ ಶಾಕ್ ನಿಂದ ಹೊರಬಂದಿಲ್ಲ.

    ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

    https://www.youtube.com/watch?v=3Z21G8t8WEg

  • ಪರಪುರಷರನ್ನ ನೋಡಬಾರದೆಂದು ಪತಿಯಿಂದ ಹಲ್ಲೆ – ಕಣ್ಣನ್ನೇ ಕಳೆದುಕೊಂಡ ಪತ್ನಿ

    ಪರಪುರಷರನ್ನ ನೋಡಬಾರದೆಂದು ಪತಿಯಿಂದ ಹಲ್ಲೆ – ಕಣ್ಣನ್ನೇ ಕಳೆದುಕೊಂಡ ಪತ್ನಿ

    ಬೆಂಗಳೂರು: ಪರ ಪುರುಷರನ್ನ ನೋಡಬಾರದೆಂದು ಪತಿಯೊಬ್ಬ ತನ್ನ ಹೆಂಡತಿಯ ಮೇಲೆ ಹಲ್ಲೆ ನಡೆಸಿದ್ದು ಆಕೆ ಈಗ ತನ್ನ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಕೊತ್ತನೂರಿನ ನಾಗೇನಹಳ್ಳಿಯ ನಿವಾಸಿಯಾದ ಒಡಿಶಾ ಮೂಲದ ಮುನ್ನಾ ತನ್ನ ಹೆಂಡತಿ ರಾಧಾ ಮೇಲೆ ಅನುಮಾನಗೊಂಡು ಆಕೆಯ ಮೇಲೆ ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಹಲ್ಲೆ ವೇಳೆ ಪತ್ನಿ ಕಣ್ಣಿಗೆ ಪೆಟ್ಟು ಬಿದ್ದಿದ್ದು, ಈಗ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ. ರಾಧಾ ಅವರನ್ನ ಸದ್ಯಕ್ಕೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.

    ಮುನ್ನಾ-ರಾಧಾ ದಂಪತಿ 15 ದಿನಗಳ ಹಿಂದಷ್ಟೆ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಶೋಭಾ ಡೆವಲಪರ್ಸ್ ಕಂಪೆನಿಯಲ್ಲಿ ನೌಕರರಾಗಿ ಕೆಲಸ ಮಾಡುತ್ತಿದ್ದರು. ಘಟನೆ ಬಗ್ಗೆ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಇದನ್ನೂ ಓದಿ: ಪರಪುರುಷರು ನೋಡದೇ ಇರಲು ಸುಂದರಿ ಪತ್ನಿಯ ತಲೆಯನ್ನೇ ಬೋಳಿಸಿದ ಪತಿರಾಯ!

  • ಪರಪುರುಷರು ನೋಡದೇ ಇರಲು ಸುಂದರಿ ಪತ್ನಿಯ ತಲೆಯನ್ನೇ ಬೋಳಿಸಿದ ಪತಿರಾಯ!

    ಪರಪುರುಷರು ನೋಡದೇ ಇರಲು ಸುಂದರಿ ಪತ್ನಿಯ ತಲೆಯನ್ನೇ ಬೋಳಿಸಿದ ಪತಿರಾಯ!

    ಬೆಂಗಳೂರು: ಪರಪುರುಷರು ಪತ್ನಿಯನ್ನು ನೋಡಬಾರದು ಎನ್ನುವ ಕಾರಣಕ್ಕೆ ಪತ್ನಿಯ ಕೇಶಮುಂಡನ ಮಾಡಿ ಮುಖಕ್ಕೆ ಗುದ್ದಿರುವ ಘಟನೆ ಬೆಂಗಳೂರಿನ ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಏಳು ವರ್ಷಗಳ ಹಿಂದೆ ಮದುವೆಯಾಗಿದ್ದ ಮಹಿಳೆಗೆ ನಾಲ್ಕು ವರ್ಷದ ಮಗನಿದ್ದಾನೆ. ಆದ್ರೆ ಪತಿರಾಯನಿಗೆ ಹೆಂಡತಿ ಸೌಂದರ್ಯದ ಚಿಂತೆ. ಸೌಂದರ್ಯವತಿಯಾದ ನನ್ನ ಹೆಂಡತಿಯನ್ನು ಬೇರೆಯವರು ನೋಡ್ತಾರೆ ಎನ್ನುವ ಕೊರಗು ಕಾಡುತಿತ್ತು. ಹೀಗಾಗಿ ಪತ್ನಿಯೊಂದಿಗೆ ಪತಿರಾಯ ಈ ವಿಚಾರದ ಬಗ್ಗೆ ಆಗಾಗ ಜಗಳ ಮಾಡುತ್ತಿದ್ದ.

    ಮದುವೆಗೂ ಮುಂಚಿನಿಂದ ಮಹಿಳೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕೆಲಸ ಬಿಡು ನಿನ್ನನ್ನ ಎಲ್ಲರೂ ನೋಡ್ತಾರೆ ಅಂತಾ ಪತ್ನಿಗೆ ಹಿಂಸೆ ಕೊಡುತ್ತಿದ್ದ. ಜಗಳ ಜಾಸ್ತಿಯಾಗಿ ಏಪ್ರಿಲ್ 17 ರಂದು ಹೆಂಡತಿಯ ಮುಖ ವಿರೂಪಗೊಳಿಸಿ ತಲೆ ಬೋಳಿಸಿದ್ದಾನೆ. ನೊಂದ ಮಹಿಳೆ ಈ ಬಗ್ಗೆ ವನಿತಾ ಸಹಾಯವಾಣಿ ಮೊರೆ ಹೋಗಿದ್ದಾರೆ.

    ನನಗೆ ಯಾವುದೇ ಕೌನ್ಸಿಲಿಂಗ್ ಬೇಡ. ನನ್ನ ಗಂಡನಿಂದ ಮುಕ್ತಿ ಕೊಡಿ ಅಂತಾ ನೊಂದ ಮಹಿಳೆ ಕೇಳಿದ್ದಾರೆ. ಮಹಿಳೆಯ ಸ್ಥಿತಿಯನ್ನು ನೋಡಿದ ಮಹಿಳಾ ಸಹಾಯವಾಣಿ ಸಿಬ್ಬಂದಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದ್ರೆ ಈ ಬಗ್ಗೆ ಮಹಿಳೆ ಕಡೆಯಿಂದ ದೂರು ದಾಖಲಾಗಿಲ್ಲ. ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಕೆಜಿ ಹಳ್ಳಿ ಪೊಲೀಸರು ಹೇಳಿದ್ದಾರೆ.

    ವನಿತಾ ಸಹಾಯವಾಣಿ ಮುಖ್ಯಸ್ಥೆ ರಾಣಿ ಶೆಟ್ಟಿ ಪ್ರತಿಕ್ರಿಯಿಸಿ, ಕೆಲ ದಿನಗಳ ಹಿಂದೆ ನೊಂದ ಮಹಿಳೆ ನಮ್ಮ ಬಳಿ ಬಂದಿದ್ದಳು. ವಾರಗಳ ಕಾಲ ಮನೆಯಲ್ಲಿ ಕೂಡಿ ಹಾಕಿ ಪತಿ ಹಿಂಸೆ ನೀಡಿದ್ದಾನೆ ಎಂದು ಹೇಳಿಕೆ ನೀಡಿದ್ದಳು. ಈ ವೇಳೆ ನನಗೆ ವಿಚ್ಚೇದನ ಕೊಡಿಸಿ ಎಂದು ಮನವಿ ಮಾಡಿಕೊಂಡಿದ್ದಳು. ನಾವು ಕೌನ್ಸಿಲಿಂಗ್ ಮಾಡುತ್ತೇವೆ ಎಂದು ಹೇಳಿದ್ದಕ್ಕೆ, ಆಕೆ, ನನಗೆ ಆತನ ಜೊತೆ ಬದುಕಲು ಇಷ್ಟವಿಲ್ಲ. ನೀವು ಆತನಿಗೆ ಕೌನ್ಸಿಲಿಂಗ್ ಮಾಡಿದ್ರೆ ಅವನು ನನ್ನ ಹೊಡೆಯುತ್ತಾನೆ, ಇಲ್ಲದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾಳೆ ಅವರು ತಿಳಿಸಿದ್ದಾರೆ.

  • ಪತ್ನಿಯ ಮೇಲೆ ಗುಂಡು ಹಾರಿಸಿದ ಮಾಜಿ ಸೈನಿಕ

    ಪತ್ನಿಯ ಮೇಲೆ ಗುಂಡು ಹಾರಿಸಿದ ಮಾಜಿ ಸೈನಿಕ

    ವಿಜಯಪುರ: ಮಾಜಿ ಸೈನಿಕನೊಬ್ಬ ತನ್ನ ಪತ್ನಿಯ ಮೇಲೆ ಗುಂಡು ಹಾರಿಸಿರುವ ಘಟನೆ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ.

    ಖಾಜಾ ಎಂಬವನೇ ಪತ್ನಿಯ ಮೇಲೆ ಗುಂಡು ಹಾರಿಸಿದ ಮಾಜಿ ಸೈನಿಕ. ಖಾಜಾ ಮತ್ತು ಪತ್ನಿ ಮಹಾದೇವಿ ನಡುವೆ ಕಳೆದ 12 ವರ್ಷಗಳಿಂದ ಆಸ್ತಿಗಾಗಿ ಜಗಳ ನಡೆಯುತ್ತಿತ್ತು. ಮಹಾದೇವಿ ನನಗೆ ಜೀವಾನಂಶ ನೀಡಬೇಕೆಂದು ಪತಿ ವಿರುದ್ಧ ಕೌಟುಂಬಿಕ ನ್ಯಾಯಾಲಯದಲ್ಲಿ ವಾದ ಹೂಡಿದ್ದರು. ಈ ಸಂಬಂಧ ಪತಿ-ಪತ್ನಿ ನಡುವೆ ಪ್ರತಿದಿನ ಜಗಳ ನಡೆಯುತ್ತಿತ್ತು.

    ಇಂದು ಇದೇ ವಿಷಯವಾಗಿ ಜಗಳ ನಡೆದಿದೆ. ಜಗಳದಲ್ಲಿ ಕೋಪಗೊಂಡ ಖಾಜಾ ರಿವಾಲ್ವಾರನಿಂದ ಫೈರ್ ಮಾಡಿದ್ದಾರೆ. ಗುಂಡು ನೇರವಾಗಿ ಮಹಾದೇವಿ ಅವರ ಕಾಲಿಗೆ ಗುಂಡು ತಗುಲಿದೆ. ಗಾಯಗೊಂಡ ಮಹಾದೇವಿ ಅವರನ್ನು ಮಹಾರಾಷ್ಟ್ರದ ಸೋಲಾಪುರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಸಂಬಂಧ ಇಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖಾಜಾ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

     

  • ಪತ್ನಿ ಕುಟುಂಬಸ್ಥರಿಂದ ವರದಕ್ಷಿಣೆಯ ಹಣಕ್ಕಾಗಿ ಬೇಡಿಕೆ: ಪತಿರಾಯ ಆತ್ಮಹತ್ಯೆ

    ಪತ್ನಿ ಕುಟುಂಬಸ್ಥರಿಂದ ವರದಕ್ಷಿಣೆಯ ಹಣಕ್ಕಾಗಿ ಬೇಡಿಕೆ: ಪತಿರಾಯ ಆತ್ಮಹತ್ಯೆ

    ಬೀದರ್: ಪತ್ನಿಯ ಸಂಬಂಧಿಕರು ವರದಕ್ಷಿಣೆಯಾಗಿ ನೀಡಿದ ಹಣವನ್ನು ಮರಳಿ ನೀಡುವಂತೆ ಜೀವ ಬೆದರಿಕೆ ಹಾಕಿದ್ದಕ್ಕೆ ಭಯಗೊಂಡ ಪತಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಔರಾದ್ ತಾಲೂಕಿನ ಬೆಡಕುಂದಾ ಗ್ರಾಮದಲ್ಲಿ ನಡೆದಿದೆ.

    30 ವರ್ಷ ವಯಸ್ಸಿನ ಅರವಿಂದ್ ಶಂಕರ್ ಆತ್ಮಹತ್ಯೆಗೆ ಶರಣಾದ ಪತಿರಾಯ. ಒಂದು ವರ್ಷದ ಹಿಂದೆ ಭಾಲ್ಕಿ ತಾಲೂಕಿನ ಜಯಶ್ರೀ ಎಂಬವರನ್ನು ಮದುವೆಯಾಗಿದ್ದರು. ಸಂಸಾರದ ಗಲಾಟೆಯಿಂದಾಗಿ ಜಯಶ್ರೀ ಅವರು ತವರು ಮನೆ ಸೇರಿದ್ದರು.

    ತವರು ಮನೆಗೆ ಸೇರಿದ ಬಳಿಕ ಜಯಶ್ರೀ ಮತ್ತು ಅವರ ಕುಟುಂಬಸ್ಥರು ಮದುವೆ ವೇಳೆ ನೀಡಿದ್ದ ವರದಕ್ಷಿಣೆ 5 ಲಕ್ಷ ರೂ.ಗಳನ್ನು ಮರಳಿ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ಒಂದು ವೇಳೆ ಈ ಹಣವನ್ನು ನೀಡದೇ ಇದ್ದರೆ ಕೊಲ್ಲುವ ಬೆದರಿಕೆಯನ್ನೂ ಹಾಕಿದ್ದರು ಎನ್ನಲಾಗಿದೆ. ಹೀಗಾಗಿ ಅರವಿಂದ್ 4.5 ಲಕ್ಷ ರೂ. ಹಣವನ್ನು ಹಿಂದುರುಗಿಸಿದ್ದರು. ಆದರೆ ಪತ್ನಿ ಮತ್ತು ಕುಟುಂಬಸ್ಥರ ಕಿರುಕುಳಕ್ಕೆ ಅರವಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದ ಹೇಳಲಾಗುತ್ತಿದೆ.

    ಸ್ಥಳಕ್ಕೆ ಠಾಣಾಕುಶನೂರು ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.