Tag: ಪತ್ನಿ

  • ಮೂವರು ಮಕ್ಕಳ ಮುಂದೆಯೇ ಹಂಡ್ತಿಯನ್ನ ಚಾಕುವಿನಿಂದ ಇರಿದು ಕೊಂದ

    ಮೂವರು ಮಕ್ಕಳ ಮುಂದೆಯೇ ಹಂಡ್ತಿಯನ್ನ ಚಾಕುವಿನಿಂದ ಇರಿದು ಕೊಂದ

    ಮುಂಬೈ: ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಮೂವರು ಮಕ್ಕಳ ಮುಂದೆಯೇ ಚಾಕುವಿನಿಂದ ಇರಿದು ಕೊಂದಿರುವ ಮನಕಲಕುವ ಘಟನೆ ಮುಂಬೈನಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

    ಸರೋಜ್ ಯಾದವ್ ಕೊಲೆಯಾದ ಮಹಿಳೆ. ಸರೋಜ್ ಯಾದವ್ ಬೇರೊಬ್ಬ ಅಕ್ರಮ ಸಂಬಂಧ ಹೊಂದಿದ್ದರಿಂದ ಕುಪಿತಗೊಂಡ ಪತಿ ಅಜಯ್ ದೇವ್ (35) ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಬೆಳಗ್ಗೆ ಮಕ್ಕಳು ತಮ್ಮ ಅಜ್ಜನ ಮುಂದೆ ತಾಯಿಯ ಕೊಲೆ ವಿಷಯ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ತುಲಿನ್ಜ್ ಪೊಲೀಸರು ಆರೋಪಿ ಅಜಯ್ ಯಾದವ್‍ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮೂಲತಃ ನಾಲಸೋಪರಾ ನಿವಾಸಿಯಾಗಿರುವ ನಗರದಲ್ಲಿ ಆಟೋ ಡ್ರೈವರ್ ನಾಗಿ ಕೆಲಸ ಮಾಡಿಕೊಂಡಿದ್ದನು.

    ರಾತ್ರಿ ಮಕ್ಕಳು ನೋಡಿದ್ದೇನು?:
    ಅಜಯ್ ಮತ್ತು ಸರೋಜ್ ದಂಪತಿಗೆ ಒಟ್ಟು ಮೂರು ಮಕ್ಕಳು. ಶುಕ್ರವಾರ ಮಧ್ಯರಾತ್ರಿ ತಾಯಿಯ ಕಿರುಚಾಟ ಕೇಳಿಸಿಕೊಂಡ 8 ವರ್ಷದ ಮತ್ತು 7 ವರ್ಷದ ಮಕ್ಕಳಿಬ್ಬರು ಎಚ್ಚರಗೊಂಡಿದ್ದಾರೆ. ಮಕ್ಕಳು ನೇರವಾಗಿ ಮನೆಯ ಕೋಣೆಯೊಂದರಲ್ಲಿ ತಾಯಿ ಮೇಲೆ ತಂದೆ ಚಾಕುವಿನಿಂದ ಹಲ್ಲೆ ಮಾಡುತ್ತಿರುವ ದೃಶ್ಯವನ್ನು ನೋಡಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಒಂದೂವರೆ ವರ್ಷದ ಮಗು ಸಹ ಈ ಭೀಕರ ಘಟನೆಗೆ ಸಾಕ್ಷಿಯಾಗಿದೆ. ತಂದೆ ನಮ್ಮ ತಾಯಿಯ ಕುತ್ತಿಗೆಯನ್ನು ಚಾಕುವಿನಿಂದ ಸೀಳುತ್ತಿದ್ದ ಎಂದು ಮಗು ಪೊಲೀಸರಿಗೆ ತಿಳಿಸಿದೆ.

    ಪತ್ನಿಯನ್ನು ಕೊಲೆ ಮಾಡಿದ ಬಳಿಕ ಅಜಯ್, ಮುಂಬೈ-ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿ ಬಳಿಯಿರುವ ಚಿಂಚಾವತಿಯಲ್ಲಿರುವ ತನ್ನ ತಂದೆಯ ಮನೆಗೆ ಮಕ್ಕಳೊಂದಿಗೆ ತೆರಳಿದ್ದಾನೆ. ಈ ವೇಳೆ ಮಕ್ಕಳು ಅಜ್ಜ ರಾಮ್‍ ಯಾದವ್ ಬಳಿ ತಾಯಿಯ ಕೊಲೆಯ ವಿಷಯವನ್ನು ತಿಳಿಸಿದ್ದಾರೆ. ಮಕ್ಕಳು ಈ ಘಟನೆಯಿಂದ ಮಾನಸಿಕವಾಗಿ ಆಘಾತಕ್ಕೆ ಒಳಗಾಗಿದ್ದಾರೆ. ಮಕ್ಕಳನ್ನು ಸಂಭಾಳಿಸುವುದು ಕಷ್ಟವಾಗುತ್ತಿದೆ ಎಂದು ರಾಮ್ ಯಾದವ್ ಹೇಳಿದ್ದಾರೆ. ಮೊಮ್ಮಕಳಿಂದ ವಿಷಯ ತಿಳಿದ ಅಜ್ಜ ರಾಮ್‍ಯಾದವ್ ಮನೆಗೆ ತೆರಳಿದಾಗ ಸೊಸೆ ಸರೋಜ್ ದೇಹ ರಕ್ತದ ಮಡುವಿನಲ್ಲಿಯ ಬೆಡ್ ಶೀಟ್‍ನಲ್ಲಿ ಸುತ್ತಿದ ಸ್ಥಿತಿಯಲ್ಲಿ ನೋಡಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ಹೇಳಲಾಗಿದೆ.

    ಅಕ್ರಮ ಸಂಬಂಧ: ತನ್ನ ಪತ್ನಿ ಬೇರೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಈ ಹಿನ್ನೆಲೆಯಲ್ಲಿ ನಮ್ಮಿಬ್ಬರ ನಡುವೆ ಪ್ರತಿದಿನ ಗಲಾಟೆ ನಡೆಯುತ್ತಿತ್ತು. ನಮ್ಮಿಬ್ಬರ ಜಗಳ ವಿಕೋಪಕ್ಕೆ ತಿರುಗಿದಾಗ ಆಕೆಯನ್ನು ಮನಸೋ ಇಚ್ಚೆ ಥಳಿಸಿದ್ದೇನೆ ಎಂದು ಅಜಯ್ ಪೊಲೀಸ್ ವಿಚಾರಣೆ ತಿಳಿಸಿದ್ದಾನೆ ಎಂದು ತುಲನ್ಜ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಸಂಜತ್ ಬಾರ್ವೆ ಹೇಳಿದ್ದಾರೆ.

  • ಮಗಳ ಜೊತೆ ಜಗಳವಾಡಿದ್ದಕ್ಕೆ ಮನೆಗೆ ಬಂದಿದ್ದ ಅಳಿಯನಿಗೇ ಬೆಂಕಿಯಿಟ್ಟ ಅತ್ತೆ!

    ಮಗಳ ಜೊತೆ ಜಗಳವಾಡಿದ್ದಕ್ಕೆ ಮನೆಗೆ ಬಂದಿದ್ದ ಅಳಿಯನಿಗೇ ಬೆಂಕಿಯಿಟ್ಟ ಅತ್ತೆ!

    ಮೈಸೂರು: ಮಗಳ ಜೊತೆ ಜಗಳವಾಡಿದ್ದಕ್ಕೆ ರೊಚ್ಚಿಗೆದ್ದ ಅತ್ತೆ ತನ್ನ ಮನೆಗೆ ಬಂದಿದ್ದ ಅಳಿಯನನ್ನು ಸಜೀವವಾಗಿ ದಹಿಸಿದ ಅಮಾನವೀಯ ಘಟನೆಯೊಂದು ಮೈಸೂರಿನಲ್ಲಿ ನಡೆದಿದೆ.

    ನಾಗರಾಜ ಶೆಟ್ಟಿ(43) ಹತ್ಯೆಯಾದ ಅಳಿಯ. ಈ ಘಟನೆ ಮೈಸೂರು ಜಿಲ್ಲೆಯ ನಂಜನಗೂಡಿನ ಮಾಕನಪುರದಲ್ಲಿ ನಡೆದಿರುವ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ.

    ಮೂಲತಃ ಗುಂಡ್ಲುಪೇಟೆಯ ಕೂತನೂರು ಗ್ರಾಮದ ನಿವಾಸಿಯಾಗಿರೋ ನಾಗರಾಜ್ ಶೆಟ್ಟಿ, 5 ವರ್ಷಗಳ ಹಿಂದೆ ಮಾಕಾಪುರ ಮಣಿ ಎಂಬುವರನ್ನು ಮದುವೆಯಾಗಿದ್ದರು. ಇತ್ತೀಚೆಗಷ್ಟೇ ನಾಗರಾಜ್ ಜೊತೆ ಪತ್ನಿ ಜಗಳವಾಡಿ ತಾಯಿ ಮನೆಗೆ ಬಂದಿದ್ದರು. ಹೀಗಾಗಿ ಪತ್ನಿಯನ್ನು ತನ್ನೊಂದಿಗೆ ವಾಪಾಸ್ ಕಳುಹಿಸಿಕೊಡುವಂತೆ ನಾಗರಾಜ್ ಮನೆಗೆ ಬಂದು ಅತ್ತೆ ಜೊತೆ ಜಗಳವಾಡಿದ್ದರು. ಅತ್ತೆ, ಅಳಿಯನ ಗಲಾಟೆ ತಾರಕಕ್ಕೇರಿದ್ದರಿಂದ ಅಳಿಯನನ್ನು ಪತ್ನಿ ಮಣಿ ಕುಟುಂಬ ಜೋಳದ ಹುಲ್ಲಿನ ಮೆದೆಗೆ ದೂಡಿ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ.

    ಅತ್ತೆ ಮನೆಗೆ ಹೋದ ನಾಗರಾಜ್ ಶೆಟ್ಟಿ ವಾಪಸ್ ಬರದೇ ಇದ್ದುದರಿಂದ ಅನುಮಾನಗೊಂಡು ಸೋದರರು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಣಿ ಕುಟುಂಬಸ್ಥರ ಮೇಲೆ ಆರೋಪ ಮಾಡಿ ದೂರು ದಾಖಲಿಸಿದ್ದರಿಂದ ಪೊಲೀಸರು ತನಿಖೆ ನಡೆಸಿದಾಗ ಜೋಳದ ಮೆದೆಯಲ್ಲಿ ವ್ಯಕ್ತಿ ಸುಟ್ಟಿರುವ ಕುರುಹುಗಳು ಪತ್ತೆಯಾಗಿವೆ.

    ಪೊಲೀಸರು ಅತ್ತೆ ಕಾಳಮ್ಮ, ಮಾವ ಮಹಾದೇವ ಶೆಟ್ಟಿ, ಪತ್ನಿ ಮಣಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  • ಕೋಲಾರ ಶಾಸಕ ವರ್ತೂರ್ ಪ್ರಕಾಶ್ ಗೆ ಪತ್ನಿ ವಿಯೋಗ

    ಕೋಲಾರ ಶಾಸಕ ವರ್ತೂರ್ ಪ್ರಕಾಶ್ ಗೆ ಪತ್ನಿ ವಿಯೋಗ

    ಕೋಲಾರ: ಶಾಸಕ ವರ್ತೂರ್ ಪ್ರಕಾಶ್ ಅವರ ಪತ್ನಿ ಇಂದು ಬೆಳಗ್ಗೆ ಮೃತರಾಗಿದ್ದಾರೆ.

    ಕಳೆದೊಂದು ವಾರದಿಂದ ಡೆಂಗ್ಯೂ ಜ್ವರ ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ 40 ವರ್ಷದ ಶ್ಯಾಮಲಾ ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯಲ್ಲಿ ಶ್ಯಾಮಾಲಾ ಅವರಿಗೆ ಕಳೆದ ಎರಡು ದಿನಗಳಿಂದ ಡಯಾಲಿಸಿಸ್ ಮಾಡಲಾಗುತಿತ್ತು. ಆದ್ರೆ ಇದೀಗ ಮಲ್ಟಿ ಆರ್ಗನ್ಸ್ ಫೇಲ್ಯೂರ್‍ನಿಂದ ಮೃತಪಟ್ಟಿದ್ದಾರೆ ಹೊರತು ಡೆಂಗ್ಯೂನಿಂದ ಅಲ್ಲ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

    ಅವರ ಹುಟ್ಟೂರು ವರ್ತೂರಿನಲ್ಲಿ 3 ಗಂಟೆಗೆ ಅಂತ್ಯಸಂಸ್ಕಾರ ನಡೆಯಲಿದ್ದು, ಇದೀಗ ಹುಟ್ಟೂರಿನಲ್ಲಿ ಸಿದ್ಧತೆ ನಡೆಯುತ್ತಿದೆ. ಆಂಬುಲೆನ್ಸ್ ಮುಖಾಂತರ ಎಂಎಸ್ ರಾಮಯ್ಯ ಆಸ್ಪತ್ರೆಯಿಂದ ವರ್ತೂರಿಗೆ ಶ್ಯಾಮಲಾ ಮೃತದೇಹ ರವಾನೆಯಾಗಲಿದೆ.

    ಶ್ಯಾಮಲಾ ಅವರು ಪತಿ ವರ್ತೂರ್ ಪ್ರಕಾಶ್ ಹಾಗೂ ತೇಜಸ್, ರಕ್ಷಿತ್ ಸೇರಿದಂತೆ ಮೂವರು ಗಂಡು ಮಕ್ಕಳನ್ನು ಅಗಲಿದ್ದಾರೆ.

  • ಹೆಂಡತಿ ದಪ್ಪಗಿದ್ದಾಳೆಂದು ನಾನು ಟಾರ್ಚರ್ ಮಾಡಿಲ್ಲ- ಸ್ಟೋರಿಯಲ್ಲೊಂದು ಭಯಾನಕ ಟ್ವಿಸ್ಟ್!

    ಹೆಂಡತಿ ದಪ್ಪಗಿದ್ದಾಳೆಂದು ನಾನು ಟಾರ್ಚರ್ ಮಾಡಿಲ್ಲ- ಸ್ಟೋರಿಯಲ್ಲೊಂದು ಭಯಾನಕ ಟ್ವಿಸ್ಟ್!

    ಬೆಂಗಳೂರು: ನಾನು ದಪ್ಪ ಇದ್ದೀನಿ ಅನ್ನೋ ಕಾರಣಕ್ಕೆ ಗಂಡ ಡೈವೋರ್ಸ್ ಕೇಳಿದ್ದಾರೆ. ಗಂಡನ ಮನೆಯವ್ರು ಕಿರುಕುಳ ಕೊಡ್ತಿದ್ದಾರೆ ಅಂತ ಆರೋಪಿಸಿ ಮಹಿಳೆಯೊಬ್ಬಳು ಸ್ಟೇಷನ್ ಮುಂದೆ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದಳು. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಆದ್ರೆ ಈ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ.

    ನನ್ನ ಹೆಂಡತಿ ವಿನುತಾ ನನ್ನ ತಂದೆ ತಾಯಿಯಿಂದ ಆಸ್ತಿ ಬರೆಸಿಕೊಳ್ಳುವ ಸಲುವಾಗಿ ಕೊಡಬಾರದ ಕಾಟ ಕೊಡ್ತಿದ್ದಾಳೆ. ಅಲ್ಲದೇ ಅತ್ಯಾಚಾರ ಆರೋಪದಲ್ಲಿ ಸುದ್ದಿಯಾಗಿದ್ದ ಹೆಸರಘಟ್ಟ ಗೋವಿಂದ್ ಅನ್ನೋ ವ್ಯಕ್ತಿ ಜೊತೆ ಅಕ್ರಮ ಸಂಬಂಧ ಇದೆ. ಅವನ ನಿರ್ದೇಶನದಂತೆ ಆಕೆ ನಮ್ಮ ಮೇಲೆಲ್ಲ ಸುಳ್ಳು ಸುಳ್ಳು ಕೇಸ್ ದಾಖಲಿಸ್ತಿದ್ದಾಳೆ ಎಂದು ವಿನುತಾ ಪತಿ ನರೇಂದ್ರ ಬಾಬು ಆರೋಪಿಸಿದ್ದಾರೆ.

    ವಿನುತಾ ತನ್ನ ಪತಿಯ ಮನೆಮುಂದೆ ಬಂದು ಕಲ್ಲಿನಿಂದ ಮನೆಯ ಬಾಗಿಲನ್ನ ಒಡೆದುಹಾಕೋಕೆ ಪ್ರಯತ್ನಿಸಿರೋದು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಅಲ್ಲದೆ ಬಾಡಿಗೆ ವಿಚಾರದಲ್ಲಿ ಬಾಡಿಗೆದಾರರ ಮೇಲೆ ಹಲ್ಲೆ ಮಾಡಿರುವ ದೃಶ್ಯ ಕೂಡ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಅಕ್ಕಪಕ್ಕದ ಮನೆಯವರೆಲ್ಲಾ ವಿನುತಾಳನ್ನ ಛೀ.. ಥೂ.. ಅಂತ ಉಗೀತಿದ್ದಾರೆ. ವಿನುತಾಳಿಗೆ ಬುದ್ಧಿ ಹೇಳೋಕೆ ಹೋದ ವೃದ್ಧನ ಮೇಲೆಯೇ ರೇಪ್ ಕೇಸ್ ಹಾಕಿದ್ದಾಳೆ.

    ವಿನುತಾ ಹಾಗೂ ನರೇಂದ್ರ ಬಾಬು 7 ವರ್ಷಗಳ ಹಿಂದೆ ಮದುವೆಯಾಗಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ವಾಸವಿದ್ದಾರೆ. ಮದುವೆಯಾಗಿ ಒಂದು ವರ್ಷ ಅಷ್ಟೇ ಚೆನ್ನಾಗಿದ್ವಿ. ಆಮೇಲೆ ಸಂಸಾರದಲ್ಲಿ ಬರೀ ಗಲಾಟೆ ಅಂತ ವಿನುತಾ ಪತಿ ನರೇಂದ್ರ ಬಾಬು ಬೇಸರ ವ್ಯಕ್ತಪಡಿಸಿದ್ರು.

     

     

  • ಫೇಸ್ ಬುಕ್‍ನಲ್ಲಿ ಯುವತಿಯೊಂದಿಗೆ ಗಂಡನ ಚಾಟಿಂಗ್- ಪ್ರಶ್ನೆ ಮಾಡಿದ್ದ ಪತ್ನಿ ಮನೆಯಿಂದ ಔಟ್

    ಫೇಸ್ ಬುಕ್‍ನಲ್ಲಿ ಯುವತಿಯೊಂದಿಗೆ ಗಂಡನ ಚಾಟಿಂಗ್- ಪ್ರಶ್ನೆ ಮಾಡಿದ್ದ ಪತ್ನಿ ಮನೆಯಿಂದ ಔಟ್

    ಬೆಂಗಳೂರು: ಯುವತಿಯರ ಜೊತೆ ಫೇಸ್ ಬುಕ್ ಚಾಟಿಂಗ್ ಮಾಡುತ್ತಿದ್ದ ಪತಿಯನ್ನು ಪ್ರಶ್ನಿಸದಕ್ಕೆ ಪತ್ನಿಯನ್ನೇ ಪತಿಯೋರ್ವ ಮನೆಯಿಂದ ಹೊರಹಾಕಿರುವ ಘಟನೆ ಬೆಂಗಳೂರಿನ ಶಿವಾಜಿ ನಗರದಲ್ಲಿ ನಡೆದಿದೆ.

    ಭಾಸ್ಕರ್ ವಿಕ್ಟರಿ ಎಂಬಾತನೇ ತನ್ನ ಪತ್ನಿ ಇಶಾನಿ (ಹೆಸರು ಬದಲಾಯಿಸಿದೆ)ಯನ್ನ ಮನೆಯಿಂದ ಹೊರ ಹಾಕಿದ ಪತಿ. ಭಾಸ್ಕರ್ ತನ್ನ ಗೆಳತಿಯರ ನಡುವೆ ಫೇಸ್ ಬುಕ್ ಚಾಟಿಂಗ್ ಮಾಡ್ತಾಯಿದ್ದರು. ಇದ್ರಿಂದ ಕುಪಿತಗೊಂಡ ಇಶಾನಿ ಗಂಡನನ್ನು ಪ್ರಶ್ನೆ ಮಾಡಿದ್ದಾರೆ. ಇದ್ರಿಂದ ಕುಪಿತಗೊಂಡ ಭಾಸ್ಕರ್ ರಾತ್ರಿಯೇ ಇಶಾನಿ ಅವರನ್ನು ಮನೆಯಿಂದ ಹೊರ ಹಾಕಿದ್ದಾನೆ.

    ಭಾಸ್ಕರ್ ಮತ್ತು ಇಶಾನಿ ಪ್ರೀತಿಸಿ ಮದುವೆಯಾಗಿ ಶಿವಾಜಿ ನಗರದಲ್ಲಿ ವಾಸವಾಗಿದ್ದರು. ಮನೆಯಿಂದ ಹೊರ ಬಂದ ಇಶಾನಿ ಪತಿಯ ವಿರುದ್ಧ ಶಿವಾಜಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

     

  • ನನ್ನ ಗಂಡ ಮಿಸ್ಸಿಂಗ್, ಪ್ಲೀಸ್ ಹುಡುಕಿಕೊಡಿ ಎಂದು ಗರ್ಭಿಣಿಯಿಂದ ದೂರು ದಾಖಲು

    ನನ್ನ ಗಂಡ ಮಿಸ್ಸಿಂಗ್, ಪ್ಲೀಸ್ ಹುಡುಕಿಕೊಡಿ ಎಂದು ಗರ್ಭಿಣಿಯಿಂದ ದೂರು ದಾಖಲು

    ಮಂಡ್ಯ: ತನ್ನ ಪತಿಯನ್ನು ಹುಡುಕಿಕೊಡಿ ಎಂದು ಮಹಿಳೆಯೊಬ್ಬರು ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಸಾಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಕೆ.ಆರ್.ಸಾಗರ ನಿವಾಸಿ ಸವಿತಾ ಎಂಬವರೇ ಗಂಡ ರಾಘವೇಂದ್ರರ ಹುಡುಕಾಟದಲ್ಲಿದ್ದಾರೆ. ನಗರದಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ರಾಘವೇಂದ್ರ ಜುಲೈ 6ರಿಂದ ನಾಪತ್ತೆಯಾಗಿದ್ದಾನೆ. ಕೆಲಸವಿದೆ ಎಂದು ಮನೆಯಲ್ಲಿ ಗರ್ಭಿಣಿಯನ್ನು ಬಿಟ್ಟು ಹೋದ ರಾಘವೇಂದ್ರ ಇದೂವರೆಗೂ ಹಿಂದುರುಗಿ ಬಂದಿಲ್ಲ.

    ಇದನ್ನೂ ಓದಿ: ನಿಮ್ಮನ್ನ ಬಿಟ್ಟು ಹೋಗ್ತಿದ್ದೀನಿ, Sorry ಪ್ಲೀಸ್ ಅಳ್ಬೇಡಿ: ಗಂಡನಿಗೆ ಪತ್ರ ಬರೆದು ಮಗುವಿನೊಂದಿಗೆ ಬೇರೊಬ್ಬನ ಜೊತೆ ಪರಾರಿ!

    ಮನೆಯಿಂದ ಹೋದ ಬಳಿಕ ರಾಘವೇಂದ್ರರ ಮೊಬೈಲ್ ಸಂಪರ್ಕಕ್ಕೂ ಸಿಕ್ಕಿಲ್ಲ. ಎಂಟು ವರ್ಷಗಳ ಹಿಂದೆ ರಾಘವೇಂದ್ರ ಮತ್ತು ಸವಿತಾ ಪ್ರೀತಿಸಿ ಮದುವೆಯಾಗಿದ್ರು. ನಂತ್ರ ಕೆ.ಆರ್.ಸಾಗರದಲ್ಲಿ ವಾಸವಾಗಿದ್ದಾರೆ. ಇತ್ತ ರಾಘವೇಂದ್ರ ಹೋಗುವಾಗ ತನಗೆ ಸಂಬಂಧಪಟ್ಟ ದಾಖಲೆಗಳನ್ನು ಸಹ ತೆಗೆದುಕೊಂಡು ಹೋಗಿದ್ದಾನೆ. ಇದ್ರಿಂದಾಗಿ ಆತಂಕಗೊಂಡಿರುವ ಪತ್ನಿ ಸವಿತಾ ಕೆ.ಆರ್.ಸಾಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಗಂಡನನ್ನು ಹುಡುಕಿಕೊಡಿ ಅಂತಾ ಮನವಿ ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: ಪ್ಲೀಸ್ ಅಳ್ಬೇಡಿ ಎಂದು ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದ ಪತ್ನಿ ಕೊನೆಗೂ ಪ್ರತ್ಯಕ್ಷ!

     

     

     

  • ಮಕ್ಕಳಾಗದ್ದಕ್ಕೆ ಪತ್ನಿಗೆ ವಿಷ ಕೊಟ್ಟು ಹತ್ಯೆಗೈದ ಪೊಲೀಸ್!

    ಮಕ್ಕಳಾಗದ್ದಕ್ಕೆ ಪತ್ನಿಗೆ ವಿಷ ಕೊಟ್ಟು ಹತ್ಯೆಗೈದ ಪೊಲೀಸ್!

    ಯಾದಗಿರಿ: ಮಕ್ಕಳಾಗದ್ದಕ್ಕೆ ಪತ್ನಿಗೆ ಪೇದೆ ಪತಿ ವಿಷ ಕೊಟ್ಟು ಸಾಯಿಸಿದ ಅಮಾನವೀಯ ಘಟನೆ ಯಾದಗಿರಿಯ ಗ್ರಾಮೀಣ ಠಾಣೆಯ ಪೊಲೀಸ್ ವಸತಿ ಗೃಹದಲ್ಲಿ ನಡೆದಿದೆ.

    ಈ ಘಟನೆ ಭಾನುವಾರ ನಡೆದಿದ್ದು, ಸೋಮವಾರ ಪತ್ನಿ ಹಣಮಂತಿ ಚಿಕಿತ್ಸೆ ಫಲಕಾರಿಯಾಗದೆ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

    ನಡೆದಿದ್ದೇನು?: ಯಾದಗಿರಿಯ ಕಿಲ್ಲನಕೇರಾ ಗ್ರಾಮದ ನಿವಾಸಿ ಹಾಗೂ ಯಾದಗಿರಿ ನಗರ ಠಾಣೆ ಪೊಲೀಸ್ ಪೇದೆಯಾದ ಮಹೇಂದ್ರ ಹಾಗೂ ರಾಯಚೂರನ ದೇವದುರ್ಗ ತಾಲೂಕಿನ ಕೊಪ್ಪರ ಗ್ರಾಮದ ನಿವಾಸಿ ಹಣಮಂತಿಗೆ 8 ವರ್ಷದ ಹಿಂದೆ ಮದುವೆಯಾಗಿತ್ತು. ಆದ್ರೆ ಈವರೆಗೂ ಮಕ್ಕಳಾಗಿರಲಿಲ್ಲ. ಹೀಗಾಗಿ ಪೇದೆ ಮಹೇಂದ್ರ ಪತ್ನಿ ಹಣಮಂತಿ ಜೊತೆ ಜಗಳವಾಡುತ್ತಿದ್ದನು. ಅಲ್ಲದೇ ಬೇರೆ ಮದುವೆಯಾಗುವುದಾಗಿ ಪ್ರಸ್ತಾಪ ಮಾಡಿದ್ದನು. ಈ ವಿಚಾರಕ್ಕೆ ಸಂಬಂಧಿಸಿದಂತೆ ಇವರಿಬ್ಬರ ಮಧ್ಯೆ ಜಗಳವಾಗುತ್ತಿತ್ತು. ಇದರಿಂದ ಸಿಟ್ಟುಗೊಂಡ ಪತಿ ಮಹೇಂದ್ರ ಪತ್ನಿಗೆ ವಿಷ ಕೊಟ್ಟಿದ್ದಾನೆ. ವಿಷ ಸೇವಿಸಿದ ಪರಿಣಾಮ ಹಣಮಂತಿ ನಗರದ ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಆಸ್ಪತ್ರೆಯಲ್ಲೇ ಮೃತಪಟ್ಟದ್ದಾರೆ.

    ಪತ್ನಿ ಸಾವಿನ ಬಳಿಕ ಮಹೇಂದ್ರ ಪರಾರಿಯಾಗಿದ್ದಾನೆ. ಇದೀಗ ಹಣಮಂತಿ ಪೋಷಕರು ನಗರ ಠಾಣೆಯಲ್ಲಿ ಕೊಲೆಯ ಬಗ್ಗೆ ದೂರು ನೀಡಿದ್ದು, ಘಟನೆ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • 4.30ಕ್ಕೆ ಎದ್ದು ಯೋಗ-ಪೂಜೆ ಮಾಡ್ಬೇಕು, ಸ್ನಾನ ಮಾಡ್ದೆ ತಿಂಡಿ ತಿನ್ನಂಗಿಲ್ಲ: ಸಂಪ್ರದಾಯಸ್ಥ ಟೆಕ್ಕಿ ಪತಿ ವಿರುದ್ಧ ಪತ್ನಿ ದೂರು

    4.30ಕ್ಕೆ ಎದ್ದು ಯೋಗ-ಪೂಜೆ ಮಾಡ್ಬೇಕು, ಸ್ನಾನ ಮಾಡ್ದೆ ತಿಂಡಿ ತಿನ್ನಂಗಿಲ್ಲ: ಸಂಪ್ರದಾಯಸ್ಥ ಟೆಕ್ಕಿ ಪತಿ ವಿರುದ್ಧ ಪತ್ನಿ ದೂರು

    ಬೆಂಗಳೂರು: ಗಂಡನ ಚಿತ್ರ ವಿಚಿತ್ರ ಹಿಂಸೆ ತಾಳಲಾರದೆ ಪತ್ನಿಯೊಬ್ಬರು ಕೋರ್ಟ್ ಮೆಟ್ಟಿಲೇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಹಾಗಂತ ಈ ಪತಿರಾಯ ಪ್ರತಿದಿನ ಕುಡಿದು ಬಂದು ಹೆಂಡ್ತಿಯನ್ನ ಹೊಡೆಯುತ್ತಾರೆ ಅಥವಾ ವರದಕ್ಷಿಣೆಗಾಗಿ ಕಿರುಕುಳ ನೀಡ್ತಿದ್ದಾರೆ ಅಂದ್ಕೋಬೇಡಿ. ಅವರು ಅದ್ಯಾವುದನ್ನೂ ಮಾಡಿಲ್ಲ. ಆದ್ರೆ ಪತಿಯ ಅತಿಯಾದ ಸಂಪ್ರದಾಯ ಪಾಲನೆಯಿಂದ ಹೆಂಡತಿ ಬೇಸತ್ತಿದ್ದಾರೆ.

    ಪತಿಯ ಷರತ್ತು ಏನೆಂದರೆ ಹೆಂಡತಿ ಬೆಳಿಗ್ಗೆ 4.30ಕ್ಕೆ ಏಳಬೇಕು. ಸೂರ್ಯ ನಮಸ್ಕಾರ ಮಡ್ಬೇಕು. ಸ್ನಾನ, ಪೂಜೆ ಮಾಡಿದ ನಂತರವೇ ತಿಂಡಿ ತಿನ್ನಬೇಕು. ಇದರಿಂದ ಬೇಸತ್ತ ಪತ್ನಿ ಈಗ ಪತಿಯ ವಿರುದ್ಧ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ.

    ನಾನೊಬ್ಬ ಉದ್ಯೋಗಸ್ಥ ಮಹಿಳೆ. ಬೆಳಗ್ಗಿನಿಂದ ಸಂಜೆವರೆಗೆ ಆಫೀಸ್‍ನಲ್ಲಿ ದುಡಿಯುತ್ತೇನೆ. ಮತ್ತೆ ಮನೆ ಕೆಲಸ ಮುಗಿಸಿ ರಾತ್ರಿ ಲೇಟಾಗಿ ಮಲಗುತ್ತೇನೆ. ಹೀಗಿದ್ರೂ ಬೆಳಗ್ಗೆ ಬೇಗ ಏಳುವಂತೆ ನನ್ನ ಗಂಡ ಒತ್ತಾಯ ಮಾಡ್ತಾರೆ. ಇದ್ರಿಂದ ನನಗೆ ಸರಿಯಾಗಿ ನಿದ್ದೆ ಮಾಡೋಕೆ ಆಗ್ತಿಲ್ಲ. ಇಷ್ಟೇ ಅಲ್ಲ ಬೆಳಿಗ್ಗೆ ಎದ್ದ ನಂತರ ಸೂರ್ಯ ನಮಸ್ಕಾರ ಮಾಡ್ಬೇಕು. ಮಡಿಯುಟ್ಟು ಅಡುಗೆ ಮಾಡ್ಬೇಕು ಅಂತಾರೆ. ಇದರಿಂದ ನಾನು ದೈಹಿಕ ಹಾಗೂ ಮಾನಸಿಕವಾಗಿ ಬಳಲಿದ್ದೇನೆ. ನನ್ನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಪತ್ನಿ ಆರೋಪಿಸಿದ್ದಾರೆ.

    ಪತಿ ಪತ್ನಿ ಇಬ್ಬರೂ ಬೆಂಗಳೂರಿನಲ್ಲಿ ಸಾಫ್ಟ್‍ವೇರ್ ಎಂಜಿನಿಯರ್‍ಗಳಾಗಿದ್ದು 2014ರಲ್ಲಿ ಮದುವೆಯಾಗಿದ್ದಾರೆ. ಹುಡುಗ ಸಂಪ್ರದಾಯಸ್ಥ ಕುಟುಂಬದವನೆಂದು ಮನೆಯವರು ಒಪ್ಪಿ ಮದುವೆ ಮಾಡಿಸಿದ್ದರು. ಆದ್ರೆ ಮದುವೆಯಾದ ಕೆಲವೇ ದಿನಗಳಲ್ಲಿ ಗಂಡ ಹಂಡತಿ ಮಧ್ಯೆ ಭಿನ್ನಾಭಿಪ್ರಾಯ ಶುರುವಾಗಿತ್ತು. ಹೆಂಡತಿ ಬೆಳಿಗ್ಗೆ ಬೇಗನೆ ಏಳುವುದಿಲ್ಲ, ಸೂರ್ಯ ನಮಸ್ಕಾರ, ಯೋಗ ಮಾಡಲ್ಲ. ಸಂಪ್ರದಾಯ ಪಾಲಿಸಲ್ಲ ಅನ್ನೋದು ಗಂಡನ ಅಸಮಾಧಾನಕ್ಕೆ ಕಾರಣವಾಗಿತ್ತು. ಇದರಿಂದ ಆಗಾಗ ಇಬ್ಬರ ನಡುವೆ ಜಗಳವಾಗ್ತಿತ್ತು. ಕುಟುಂಬದ ಹಿರಿಯರು ಹಲವು ಬಾರಿ ಮಧ್ಯಪ್ರದವೇಶಿಸಿ ಸಮಾಧಾನಪಡಿಸಿದ್ದರು. ಆದ್ರೆ ಪತಿಯ ಸಂಪ್ರದಾಯ ಪಾಲನೆ ಕಿರಿಕ್ ಜಾಸ್ತಿಯಾದ ಹಿನ್ನೆಲೆಯಲ್ಲಿ ಪತ್ನಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಸದ್ಯ ಈ ಬಗ್ಗೆ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ ಪತಿಗೆ ನೋಟಿಸ್ ನೀಡಿದೆ.

  • ತವರಿನಿಂದ ಪತ್ನಿ ಮರಳಿ ಬಂದಿಲ್ಲವೆಂದು ಆತ್ಮಹತ್ಯೆಗೆ ಶರಣಾದ ಪತಿ

    ತವರಿನಿಂದ ಪತ್ನಿ ಮರಳಿ ಬಂದಿಲ್ಲವೆಂದು ಆತ್ಮಹತ್ಯೆಗೆ ಶರಣಾದ ಪತಿ

    ಜೈಪುರ: ತವರಿಗೆ ಹೋದ ಪತ್ನಿ ಎಷ್ಟು ಬಾರಿ ಕರೆದರೂ ಮರಳಿ ಮೆನಗೆ ಬಂದಿಲ್ಲವೆಂದು ನೊಂದು ಪತಿರಾಯ ಆತ್ಮಹತ್ಯೆಗೆ ಶರಣಾದ ಘಟನೆ ರಾಜಸ್ಥಾನದ ಝಾಲಾನ ಡೋಂಗ್ರಿ ಎಂಬಲ್ಲಿ ನಡೆದಿದೆ.

    ಕನ್ಹಯ್ಯ ಲಾಲ್ (30) ಆತ್ಮಹತ್ಯೆಗೆ ಶರಣಾದ ಪತಿ. ಕನ್ಹಯ್ಯ ಗಾಂಧಿನಗರದಲ್ಲಿ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದನು. ಕನ್ಹಯ್ಯ ಪತ್ನಿ ತವರು ಮನೆಯಲ್ಲಿದ್ದು, ತನ್ನ ಮನೆಗೆ ಬರುವಂತೆ ಕನ್ಹಯ್ಯ ಹಲವು ಬಾರಿ ಮನವಿ ಸಹ ಮಾಡಿಕೊಂಡಿದ್ದನು. ಆದ್ರೆ ಪತ್ನಿ ಮಾತ್ರ ಬಂದಿರಲಿಲ್ಲ. ಇದಕ್ಕಾಗಿ ಒಂದು ಬಾರಿ ನೋಟಿಸ್ ಕೂಡ ಕಳಿಸಿದ್ದು ಪತ್ನಿ ಮಾತ್ರ ಹಿಂದಿರುಗಿರಲಿಲ್ಲ. ಇದರಿಂದ ಖಿನ್ನತೆಗೆ ಒಳಗಾದ ಕನ್ಹಯ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಗುರುವಾರ ನಗರದ ಝಾಲನಾ ಡೋಂಗ್ರಿಯಲ್ಲಿ ಕನ್ಹಯ್ಯಾ ಶವ ಪತ್ತೆಯಾಗಿದೆ. ವಿಷಯ ತಿಳಿದ ಗಾಂಧಿನಗರ ಪೊಲೀಸರು ಸ್ಥಳಾಕ್ಕಾಗಮಿಸಿ ಪರಿಶೀಲನೆ ನಡೆಸಿದಾಗ ಡೆತ್ ನೋಟ್ ಪತ್ತೆಯಾಗಿದೆ. ಡೆತ್‍ನೋಟ್‍ನಲ್ಲಿ ಪತ್ನಿ ತವರು ಮನೆಯಿಂದ ಹಿಂದುರುಗದ ಬಗ್ಗೆ ಕನ್ಹಯ್ಯ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

     

  • ಹೆಂಡ್ತಿ ಮೇಲೆ ಆ್ಯಸಿಡ್ ಎರಚಿ ಪತಿ ಪರಾರಿ!

    ಹೆಂಡ್ತಿ ಮೇಲೆ ಆ್ಯಸಿಡ್ ಎರಚಿ ಪತಿ ಪರಾರಿ!

    ಬೆಂಗಳೂರು: ತನ್ನ ಹೆಂಡತಿ ಸುಂದರವಾಗಿದ್ದಾಳೆ, ಆಕೆ ಬೇರೆ ಯಾರೊಂದಿಗೋ ಮಾತಾಡ್ತಿದ್ದಾಳೆ ಅಂತಾ ಅನುಮಾನಗೊಂಡ ವ್ಯಕ್ತಿ ಹೆಂಡತಿಗೆ ಆ್ಯಸಿಡ್ ಎರಚಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಇಲ್ಲಿನ ಕೆಂಪೇಗೌಡ ನಗರದ ಸನ್ಯಾಸಿಪಾಳ್ಯದ ಚೆನ್ನೇಗೌಡ ಕೃತ್ಯವೆಸಗಿರುವ ಪಾಪಿ ಪತಿ. ಆ್ಯಸಿಡ್ ದಾಳಿಯಿಂದಾಗಿ ಪತ್ನಿ ಮಂಜುಳಾ ಕೈ, ಕಾಲು, ಮುಖ ಹಾಗೂ ಹೊಟ್ಟೆ ಭಾಗ ಸುಟ್ಟು ಹೋಗಿದ್ದು, ಸದ್ಯ ವಿಕ್ಟೋರಿಯಾ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಗಂಡನ ಕಾಟ ತಾಳಲಾರದೇ ನಾಲ್ಕು ದಿನಗಳ ಹಿಂದೆ ಮಂಜುಳಾ ಕೆಲಸ ಬಿಟ್ಟಿದ್ದರು. ಈ ನಡುವೆ ಶುಕ್ರವಾರ ಮನೆಯಲ್ಲಿ ಇಬ್ಬರ ನಡುವೆ ಜಗಳ ತಾರಕಕ್ಕೇರಿದೆ. ಈ ವೇಳೆ ಪತಿ ಚೆನ್ನೇಗೌಡ ಆ್ಯಸಿಡ್ ದಾಳಿ ನಡೆಸಿದ್ದಾನೆ.

    ಕೃತವೆಸಗಿದ ಬಳಿಕ ಪತಿ ಪರಾರಿಯಾಗಿದ್ದಾನೆ. ಈ ಸಂಬಂಧ ಕೆಂಪೇಗೌಡನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.