Tag: ಪತ್ನಿ

  • ಬೆಳ್ಳಂಬೆಳಗ್ಗೆ ನಡುರಸ್ತೆಯಲ್ಲಿ ಪತಿಯಿಂದ ಪತ್ನಿಗೆ ಚಾಕು ಇರಿತ

    ಬೆಳ್ಳಂಬೆಳಗ್ಗೆ ನಡುರಸ್ತೆಯಲ್ಲಿ ಪತಿಯಿಂದ ಪತ್ನಿಗೆ ಚಾಕು ಇರಿತ

    ಚಿಕ್ಕಬಳ್ಳಾಪುರ: ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಪತಿಯೊರ್ವ ಬೆಳ್ಳಂಬೆಳಗ್ಗೆ ನಡು ರಸ್ತೆಯಲ್ಲಿ ತನ್ನ ಪತ್ನಿಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.

    ನಗರದ ಆದರ್ಶ ಚಿತ್ರಮಂದಿರದ ಬಳಿ ಘಟನೆ ನಡೆದಿದ್ದು, ಅಂಬೇಡ್ಕರ್ ಕಾಲೋನಿ ನಿವಾಸಿ ನಾಗರತ್ನಮ್ಮಗೆ ಗಂಡ ಗುಡ್ಡಿ ಲಕ್ಷಣ (ರೌಡಿಶೀಟರ್) ಚಾಕುವಿನಿಂದ ಇರಿದಿದ್ದಾನೆ. ನಾಗರತ್ನಮ್ಮ ಅವರ ಕುತ್ತಿಗೆ ಹಾಗೂ ಹೊಟ್ಟೆ ಮೇಲೆ ನಾಲ್ಕೈದು ಬಾರಿ ಇರಿದು ಗಂಡ ಲಕ್ಷಣ ಕೊಲೆ ಮಾಡಲು ಯತ್ನಿಸಿದ್ದಾನೆ.

    ನಾಗರತ್ನಮ್ಮ ಗುಡ್ಡಿ ಲಕ್ಷಣನ ಎರಡನೇ ಹೆಂಡತಿಯಾಗಿದ್ದು, ಪೆಟ್ಟಿಗೆ ಚಿಲ್ಲರೆ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ಸದ್ಯ ಗಾಯಾಳು ನಾಗರತ್ನಮ್ಮ ಅವರಿಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ಆಸ್ಪತ್ರೆಗೆ ರವಾನಿಸಲಾಗಿದೆ.

    ಚಿಂತಾಮಣಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

     

  • 2 ಮದ್ವೆಯಾಗಿದ್ದ ಡಾಕ್ಟರ್ ಪತಿಗೆ ಪೊಲೀಸರ ಮುಂದೆಯೇ ಅಟ್ಟಾಡಿಸಿ ಹೊಡೆದ ಪತ್ನಿ

    2 ಮದ್ವೆಯಾಗಿದ್ದ ಡಾಕ್ಟರ್ ಪತಿಗೆ ಪೊಲೀಸರ ಮುಂದೆಯೇ ಅಟ್ಟಾಡಿಸಿ ಹೊಡೆದ ಪತ್ನಿ

    ಧಾರವಾಡ: ಮೊದಲ ಪತ್ನಿ ಸತ್ತಿದ್ದಾಳೆ ಎಂದು ಸುಳ್ಳು ಹೇಳಿ ಎರಡನೇ ಮದುವೆಯಾಗಿದ್ದ ಧಾರವಾಡದ ವೈದ್ಯನಿಗೆ ಎರಡನೇ ಪತ್ನಿ ಪೊಲೀಸರ ಮುಂದೆಯೇ ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ.

    ನಗರದ ಬಸವನಗರ ಬಡಾವಣೆಯ ನಿವಾಸಿಯಾಗಿರುವ ಸಂತೋಷ್ ವಲಾಂಡಿಕರ್ ಎಂಬ ವೈದ್ಯ ಮೇ ತಿಂಗಳಿನಲ್ಲಿ ವಿಜಯಪುರದಲ್ಲಿ ಸುಶೀಲಾ (ಹೆಸರು ಬದಲಿಸಲಾಗಿದೆ) ಎಂಬವರನ್ನು ಮದುವೆಯಾಗಿದ್ದರು. ಮದುವೆಯಾದ ಬಳಿಕ ಸುಶೀಲಾರನ್ನ ಧಾರವಾಡಕ್ಕೆ ಕರೆದುಕೊಂಡು ಬಂದು ತಮ್ಮ ಮನೆಯಲ್ಲಿ ಇರಿಸಿದ್ದರು.

    ಎರಡು ತಿಂಗಳ ಕಾಲ ಮನೆಯಲ್ಲಿಯೇ ಇರಿಸಿದ್ದ ಸಂತೋಷ್ ನಾಗರಪಂಚಮಿ ಹಬ್ಬಕ್ಕೆಂದು ಸುಶೀಲಾ ಅವರ ತವರೂರಾದ ವಿಜಯಪುರಕ್ಕೆ ಕರೆದುಕೊಂಡು ಹೋಗಿ ಬಿಟ್ಟು ಬಂದಿದ್ದರು. ನಂತರ ಮೂರು ತಿಂಗಳು ಕಳೆದರೂ ಸುಶೀಲಾ ಅವರನ್ನು ಕರೆದುಕೊಂಡು ಹೋಗಲು ಸಂತೋಷ್ ಬರಲಿಲ್ಲ. ಹೀಗೆ ದಿನನಿತ್ಯ ಕರೆ ಮಾಡುತ್ತಿದ್ದ ಸುಶೀಲಾ ದೂರವಾಣಿ ಕರೆಯನ್ನು ಸಂತೋಷ್ ಅವರ ಮೊದಲ ಹೆಂಡತಿ ರಿಸೀವ್ ಮಾಡಿದಾಗ ಸುಶೀಲಾ ಅವರಿಗೆ ಮೊದಲ ಮದುವೆಯಾದ ವಿಚಾರ ಗೊತ್ತಾಗಿದೆ.

    ಮೊದಲ ಮದುವೆ ಆಗಿರುವ ಆಘಾತಕಾರಿ ವಿಷಯ ತಿಳಿದು ಸುಶೀಲಾ ಧಾರವಾಡಕ್ಕೆ ಅವರ ಸಂಬಂಧಿಕರೊಂದಿಗೆ ಬಂದು ವಿಚಾರಿಸಿದಾಗ ಸುಶೀಲಾ ಅವರನ್ನು ಕಂಡು ಡಾ. ಸಂತೋಷ್ ಓಡಿ ಹೋಗಿದ್ದರು. ಈ ಸಂಬಂಧ ಎರಡನೇ ಪತ್ನಿ ನ್ಯಾಯ ಕೇಳಲು ಬಂದಾಗ ಸಂತೋಷ ಅವರ ವಿರುದ್ಧವೇ ಧಾರವಾಡ ಉಪನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.

    ಈ ಸಂಬಂಧ ಪೊಲೀಸರು ಎರಡು ಕಡೆಯವರನ್ನು ವಿಚಾರಣೆ ನಡೆಸಲು ಕರೆಸಿದ್ದಾರೆ. ಈ ವೇಳೆ ಠಾಣೆಗೆ ಬಂದಾಗ ಪತಿ-ಪತ್ನಿ ನಡುವೆ ಮಾತಿಗೆ ಮಾತು ಬೆಳೆದು ಒಬ್ಬರ ಮೇಲೊಬ್ಬರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಪೊಲೀಸ್ ಠಾಣೆಗೆ ಬರುವಾಗ ಸಂತೋಷ್ ಗನ್ ತೆಗೆದುಕೊಂಡು ಬಂದಿದ್ದು, ನನ್ನ ಜೀವಕ್ಕೆ ಅಪಾಯವಿದೆ ಎಂದು ಸುಶೀಲಾ ಹೇಳಿದ್ದಾರೆ.

    https://www.youtube.com/watch?v=vxm5FZTH6kM

    https://www.youtube.com/watch?v=IcpRd1Ex-to

     

  • ಪತಿ ಮಾಡಿದ ರಾಕ್ಷಸ ಕೃತ್ಯದಿಂದ ಪತ್ನಿಗೆ ನಿತ್ಯ ನರಕಯಾತನೆ- ಕೊಪ್ಪಳದಲ್ಲೊಂದು ಮನಕಲಕುವ ಘಟನೆ

    ಪತಿ ಮಾಡಿದ ರಾಕ್ಷಸ ಕೃತ್ಯದಿಂದ ಪತ್ನಿಗೆ ನಿತ್ಯ ನರಕಯಾತನೆ- ಕೊಪ್ಪಳದಲ್ಲೊಂದು ಮನಕಲಕುವ ಘಟನೆ

    ಕೊಪ್ಪಳ: ಇಲ್ಲೊಬ್ಬ ಪತಿರಾಯ ಪತ್ನಿ ಪಾಲಿಗೆ ರಾಕ್ಷಸನಾಗಿದ್ದಾನೆ. ರಾಕ್ಷಸ ಪತಿ ಮಾಡಿದ ಕೃತ್ಯಕ್ಕೆ ಮಹಿಳೆಯೊಬ್ಬರು ಇದೀಗ ನಿತ್ಯ ನರಕಯಾತನೆ ಅನುಭವಿಸುತ್ತಿರೋ ಘಟನೆ ಕೊಪ್ಪಳದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಕೊಪ್ಪಳ ತಾಲೂಕಿನ ಬೂದಗುಂಪಾ ಗ್ರಾಮದ ನಿವಾಸಿಯಾಗಿರೋ ಸುಜಾತಾಗೆ ತಾನು ಕಟ್ಟಿಕೊಂಡ ಪತಿಯೇ ಮೈ ಮೇಲೆ ಸೀಮೆ ಎಣ್ಣೆ ಸುರಿದು ಹತ್ಯೆಗೆ ಯತ್ನಿಸಿದ್ದಾನೆ. ಪರಿಣಾಮ ದೇಹದ 80 ರಷ್ಟು ಭಾಗ ಸುಟ್ಟು ಸುಜಾತಾ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

    5 ವರ್ಷಗಳ ಹಿಂದೆ ಗಂಗಾವತಿ ತಾಲೂಕಿನ ಬಸವಪಟ್ಟಣ ಗ್ರಾಮದ ಉದಯ ಕುಮಾರ ಕನಕಗಿರಿ ಎಂಬಾತನೊಂದಿಗೆ ಸುಜಾತಾಗೆ ಮದುವೆ ಆಗಿತ್ತು. ತಂದೆ-ತಾಯಿಯಿಲ್ಲದ ಹುಡ್ಗನಿಗೆ ಮದುವೆ ಮಾಡಿಕೊಟ್ರೆ ಚೆನ್ನಾಗಿ ಇರುತ್ತಾಳೆ ಅಂದುಕೊಂಡಿದ್ರು ಹೆತ್ತವರು. ಆದ್ರೆ ಆಗಿದ್ದೆ ಬೇರೆ. ಉದಯ ಕುಮಾರ ವರದಕ್ಷಿಣೆ ತರುವಂತೆ ಪೀಡಿಸಲಾರಂಭಿಸಿದ್ದಾನೆ. ವರದಕ್ಷಿಣೆ ತರುವಂತೆ ಗಲಾಟೆ ತೆಗೆದು ರಾತ್ರಿ ಮಲಗಿದ್ದಾಗ ಹೆಂಡ್ತಿ ಮೈ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಚೀರಾಟ ಕೂಗಾಟ ಕೇಳಿದ ಸ್ಥಳೀಯರು ಕೂಡಲೇ ಸುಜಾತಾರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದ್ದಾರೆ.

    ಈ ಘಟನೆ ನಡೆದು ಬರೋಬ್ಬರಿ ಒಂದು ವರ್ಷವಾಗಿದೆ. ಪೊಲೀಸ್ ಠಾಣೆಯಲ್ಲಿ ದೂರು ನೀಡಬೇಕಿದ್ದ ಸಂದರ್ಭದಲ್ಲಿ ಪತಿ ಉದಯ ಕುಮಾರ ಕೈ-ಕಾಲಿಗೆ ಬಿದ್ದು, ಆಸ್ಪತ್ರೆ ಖರ್ಚು ನಾನೇ ನೋಡಿಕೊಳ್ಳುತ್ತೇನೆ. ಮುಂದೆ ಚೆನ್ನಾಗಿ ನೋಡಿಕೊಳ್ಳುತ್ತೇನೆ ಅಂತ ಹೇಳಿ ಹಿರಿಯರ ಸಮ್ಮುಖದಲ್ಲಿ ರಾಜಿ ಸಂಧಾನ ಮಾಡಿಸಿಕೊಂಡು ಕಾಲ್ಕಿತ್ತಿದ್ದಾನೆ. ಇದೀಗ ಒಂದು ವರ್ಷ ಕಳೆದ್ರೂ ಅಸಾಮಿ ಪತಿ ಇಂದಿಗೂ ಪತ್ತೆಯಾಗಿಲ್ಲ.

    ಇದೀಗ ಸುಜಾತಾ ಅವರ ದೇಹದ ಅರ್ಧ ಭಾಗ ಸುಟ್ಟು ಇಡೀ ಜೀವನ ನರಳುವಂತಾಗಿದೆ. ಸುಜಾತಾ ಪೋಷಕರು ಕಡುಬಡವರಾಗಿದ್ದು, ಏನು ಮಾಡಬೇಕೆಂದು ತೋಚದೇ ನಮ್ಮ ಮಗಳಿಗೆ ನ್ಯಾಯ ಕೊಡಿಸಬೇಕೆಂದು ಅಂಗಲಾಚುತ್ತಿದ್ದಾರೆ.

  • ಮತ್ತೊಬ್ಬಳ ಜೊತೆ ಪತಿಯನ್ನು ನೋಡಿ ರೊಚ್ಚಿಗೆದ್ದ ಪತ್ನಿ ಮಾಡಿದ್ದೇನು ಗೊತ್ತಾ?

    ಮತ್ತೊಬ್ಬಳ ಜೊತೆ ಪತಿಯನ್ನು ನೋಡಿ ರೊಚ್ಚಿಗೆದ್ದ ಪತ್ನಿ ಮಾಡಿದ್ದೇನು ಗೊತ್ತಾ?

    ವಾಷಿಂಗ್ಟನ್: ತನ್ನ ಪತಿ ಬೇರೊಬ್ಬಳ ಜೊತೆ ಇದ್ದುದ್ದನ್ನು ನೋಡಿ ರೊಚ್ಚಿಗೆದ್ದ ಪತ್ನಿ, ಗಂಡನ ಕಾರಿಗೆ ತನ್ನ ಕಾರನ್ನು ಡಿಕ್ಕಿ ಹೊಡೆದು ಕೋಪವನ್ನು ತೀರಿಸಿಕೊಂಡ ಘಟನೆ ಅಮೆರಿಕದ ಚಿಲಿಯಾನ್ ಪ್ರದೇಶದ ಅರಿಕಾ ನಗರದಲ್ಲಿ ನಡೆದಿದೆ.

    ಪತಿ ಶಾಪ್‍ನಿಂದ ಬೇರೊಬ್ಬ ಹುಡುಗಿಯನ್ನು ಪಿಕ್ ಮಾಡುತ್ತಿರುವುದನ್ನು ಹೆಂಡತಿ ನೋಡಿದ್ದಾಳೆ. ಇದನ್ನು ನೋಡಿ ಸಿಟ್ಟಾದ ಪತ್ನಿ ಶಾಪ್ ಮುಂದೆ ಪಾರ್ಕ್ ಮಾಡಿದ್ದ ಪತಿಯ ಕಪ್ಪು ಬಣ್ಣದ ಕಾರಿನ ಮುಂಭಾಗಕ್ಕೆ ತನ್ನ ಕೆಂಪು ಬಣ್ಣದ ಬಿಎಂಡ್ಲ್ಯೂ ಕಾರಿನಿಂದ ಮನಸೋ ಇಚ್ಛೆ ಡಿಕ್ಕಿ ಹೊಡೆಯಲು ಪ್ರಾರಂಭಿಸಿದ್ದಾಳೆ.

    ರಸ್ತೆಯಲ್ಲಿ ಓಡಾಡುತ್ತಿದ್ದ ಜನರು ಅದನ್ನು ವಿಡಿಯೋ ಮಾಡಿದ್ದಾರೆ. ಪತ್ನಿಯ ಸ್ವಲ್ಪ ದೂರ ಹೋಗುವುದು ಮತ್ತೆ ಬಂದು ಪತಿಯ ಕಾರಿಗೆ ಡಿಕ್ಕಿ ಹೊಡೆಯುವುದು. ಅಲ್ಲೇ ಇದ್ದ ಪತಿ ಇದನ್ನು ನೋಡಿ ತಡೆಯಲು ಪ್ರಯತ್ನಿಸಿದ್ದಾನೆ. ಆದರೆ ಗಂಡನ ಮಾತನ್ನು ಲೆಕ್ಕಿಸದೇ ಮತ್ತೆ ಮತ್ತೆ ಬಂದು ಕಾರಿಗೆ ಡಿಕ್ಕಿ ಹೊಡೆದಿದ್ದಾಳೆ.

    ಪತಿ ಸೆನೋರಿಟಾ ಎಂದು ಕೂಗುತ್ತಾ, ಅವಳ ಕಾರಿನ ಬಾಗಿಲ ಬಳಿ ಹೋಗಿ ನಿಲ್ಲಿಸಲು ಪ್ರಯತ್ನಿಸಿದ್ದಾನೆ. ಆದರೆ ಯಾವುದಕ್ಕೂ ಜಗ್ಗದೆ ಪತ್ನಿ ಇಷ್ಟ ಬಂದಂತೆ ಡಿಕ್ಕಿ ಹೊಡೆದಿದ್ದಾಳೆ. ಈ ಸಂದರ್ಭದಲ್ಲಿ ಪತಿಯ ಕಾರು ಅಲ್ಲದೇ ಅವಳ ಕಾರು ಕೂಡ ಡ್ಯಾಮೇಜ್ ಆಗಿದೆ.

    ಪತಿ ತಡೆಯಲು ಪ್ರಯತ್ನಿಸಿ ಕೊನೆಗೆ ಸುಮ್ಮನೆ ನಿಂತು ನೋಡುತ್ತಿದ್ದರೆ, ಅಲ್ಲೆ ಇದ್ದ ವ್ಯಕ್ತಿಯೊಬ್ಬ ಈ ಇಬ್ಬರ ಗಲಾಟೆಯನ್ನು ನೋಡಿ ನಿಲ್ಲಿಸಲು ಪ್ರಯತ್ನಿಸಿದರು.

  • ಪತ್ನಿಯ ಗುಪ್ತಾಂಗವನ್ನು ಐರನ್ ಬಾಕ್ಸ್ ನಿಂದ ಸುಟ್ಟ ಕ್ರೂರ ಪತಿ!

    ಪತ್ನಿಯ ಗುಪ್ತಾಂಗವನ್ನು ಐರನ್ ಬಾಕ್ಸ್ ನಿಂದ ಸುಟ್ಟ ಕ್ರೂರ ಪತಿ!

    ಬೆಂಗಳೂರು: ತನ್ನ ಪತ್ನಿಯ ಗುಪ್ತಾಂಗಕ್ಕೆ ಐರನ್ ಬಾಕ್ಸ್ ನಿಂದ ಸುಟ್ಟ ಕ್ರೂರ ಪತಿಯೊಬ್ಬನನ್ನು ನಗರದ ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

    ದಿಲೀಪ್ ಕುಮಾರ್ ಬಂಧಿತ ಪತಿ. ತವರು ಮನೆಯಿಂದ ಒಡವೆಗಳನ್ನು ತಂದಿಲ್ಲ ಎಂದು ಕೋಪಗೊಂಡ ದಿಲೀಪ್ ಸುಡುತ್ತಿರುವ ಐರನ್ ಬಾಕ್ಸ್ ನಿಂದ ಪತ್ನಿಯ ಗುಪ್ತಾಂಗವನ್ನು ಸುಟ್ಟಿದ್ದಾನೆ. ಐರನ್ ಬಾಕ್ಸ್ ವೈಯರ್ ನಿಂದ ಪತ್ನಿಯ ಕೈ, ಕಾಲುಗಳನ್ನು ಕಟ್ಟಿ ಬಾಸುಂಡೆ ಬರುವ ಹಾಗೆ ಹೊಡೆದಿದ್ದಾನೆ.

    ಸೆಪ್ಟಂಬರ್ 23ರ ಮಧ್ಯರಾತ್ರಿ ದಿಲೀಪ್ ಕುಡಿದು ಮನಗೆ ಬಂದಿದ್ದಾನೆ. ಕುಡಿದು ಬಂದಿದನ್ನು ಪತ್ನಿ ಪ್ರಶ್ನೆ ಮಾಡಿದ್ದಾರೆ. ತವರು ಮನೆಯಿಂದ ಒಡವೆ ತರದ ನೀನು ನನ್ನನ್ನು ಪ್ರಶ್ನಿಸುತ್ತೀಯಾ ಎಂದು ಬೈದು ಪತ್ನಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಪತಿಯಿಂದ ಹಲ್ಲೆಗೊಳಗಾದ ಪತ್ನಿಯನ್ನು ನಗರದ ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

    ಈ ಸಂಬಂಧ ಐಪಿಸಿ ಸೆಕ್ಷನ್ 326ರ ಅಡಿಯಲ್ಲಿ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿ ದಿಲೀಪ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    https://www.youtube.com/watch?v=y8R_QxL_5BQ

  • ವರದಕ್ಷಿಣೆಗಾಗಿ ಪತ್ನಿ, ಮಗುವನ್ನು ಮನೆಯಿಂದ ಹೊರ ಹಾಕಿದ ಪತಿರಾಯ

    ವರದಕ್ಷಿಣೆಗಾಗಿ ಪತ್ನಿ, ಮಗುವನ್ನು ಮನೆಯಿಂದ ಹೊರ ಹಾಕಿದ ಪತಿರಾಯ

    ಕಾರವಾರ: ಪತಿಯೊಬ್ಬ ವರದಕ್ಷಿಣೆಗಾಗಿ ತನ್ನ ಪತ್ನಿ ಮತ್ತು ಮಗುವನ್ನು ಮನೆಯಿಂದ ಹೊರ ಹಾಕಿರುವ ಘಟನೆ ಕಾರವಾರ ತಾಲೂಕಿನ ದಾಂಡೇಲಿಯಲ್ಲಿ ನಡೆದಿದೆ.

    ಮೂಳಕ ಮಂಥನ್ ಎಂಬಾತನೇ ಪತ್ನಿ ಮತ್ತು ಮಗುವನ್ನು ಮನೆಯಿಂದ ಹೊರಹಾಕಿದ ಪತಿ. ಕಾರವಾರ ತಾಲೂಕಿನ ದೇವಳಮಕ್ಕಿ ಗ್ರಾಮದ ಸವಿತಾ ರನ್ನು ಪೇಪರ್ ಮಿಲ್‍ನಲ್ಲಿ ಎಂಜಿಯರ್ ಅಂತಾ ಹೇಳಿ ಮದುವೆಯಾಗಿದ್ದಾನೆ. ಮದುವೆಯಾದ ನಂತರ ಮಂಥನ್ ಪೇಪರ್ ಮಿಲ್ ನಲ್ಲಿ ಸೂಪರ್‍ವೈಸರ್ ಆಗಿ ಕೆಲಸ ಮಾಡಿಕೊಂಡಿರವುದು ಗೊತ್ತಾಗಿದೆ.

    ಪತಿಯ ಮುಖವಾಡ ಗೊತ್ತಾದರೂ ಸವಿತಾ ಗಂಡನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸಂಸಾರ ನಡೆಸುತ್ತಿದ್ದರು. ಆದರೆ ಪಾಪಿ ಪತಿ ಮಂಥನ್, ವರದಕ್ಷಿಣೆಗಾಗಿ ಪತ್ನಿಗೆ ಇನ್ನಿಲ್ಲದ ಕಿರುಕುಳ ನೀಡಿ ಮಗು ಸಮೇತ ಪತ್ನಿಯನ್ನು ಮನೆಯಿಂದ್ಲೇ ಹೊರಹಾಕಿದ್ದಾನೆ.

    ಸದ್ಯ ಸವಿತಾ ದಾಂಡೇಲಿ ನಗರ ಠಾಣೆಯಲ್ಲಿ ಪತಿ ಮಂಥನ್ ಹಾಗೂ ಅತ್ತೆಯ ಮೇಲೆ ವರದಕ್ಷಿಣಿ ಕಿರುಕುಳದ ದೂರು ದಾಖಲಿಸಿದ್ದಾರೆ. ಇತ್ತ ದೂರು ದಾಖಲಾಗುತ್ತಿದ್ದಂತೆ ಮಂಥನ್ ಊರಿನಿಂದ ನಾಪತ್ತೆಯಾಗಿದ್ದಾನೆ.

  • ತನ್ನ ಕೊಲೆಗೆ ಸ್ಕೆಚ್ ಹಾಕಿದ್ದ ಪತ್ನಿಗೆ ಅರೆಸ್ಟ್ ಭಾಗ್ಯ ಕರುಣಿಸಿದ ಪತಿ!

    ತನ್ನ ಕೊಲೆಗೆ ಸ್ಕೆಚ್ ಹಾಕಿದ್ದ ಪತ್ನಿಗೆ ಅರೆಸ್ಟ್ ಭಾಗ್ಯ ಕರುಣಿಸಿದ ಪತಿ!

    ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಪತ್ನಿ ಮತ್ತು ಆಕೆಯ ಪ್ರಿಯಕರ ಈಗ ಪೊಲೀಸರ ಅತಿಥಿಯಾಗಿದ್ದಾರೆ.

    ಪತ್ನಿ ಶೈಲಜಾ ಹಾಗೂ ಪ್ರಿಯಕರ ಆನಂದ್ ಬಂಧಿತ ಆರೋಪಿಗಳು. ಪತಿ ಪ್ರಸನ್ನ ಕುಮಾರ್ ಅವರ ದೂರಿನ ಹಿನ್ನೆಲೆಯಲ್ಲಿ ಜ್ಞಾನಭಾರತಿ ಪೊಲೀಸರು ಈಗ ಇಬ್ಬರನ್ನೂ ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಆರೋಪಿ ಶೈಲಜಾ ಪ್ರಸನ್ನಕುಮಾರ್ ಎಂಬುವರನ್ನು ಮದುವೆಯಾಗಿದ್ದರೂ ಕಳೆದ 5 ವರ್ಷಗಳಿಂದ ಆನಂದ್ ಎಂಬಾತನ ಜೊತೆ ಅನೈತಿಕ ಸಂಬಂಧವನ್ನು ಹೊಂದಿದ್ದಳು. ಈ ಅನೈತಿಕ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದ ಪತಿ ಪ್ರಸನ್ನ ಕುಮಾರ್ ಪ್ರಶ್ನೆ ಮಾಡಿದ್ದರು.

    ಪತಿ ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾನೆ ಎಂದು ತಿಳಿದ ಶೈಲಜಾ, ಪ್ರಸನ್ನ ಕುಮಾರ್ ಮುಗಿಸಲು ಪ್ರಿಯಕರನ ಜೊತೆ ಸೇರಿ ಊಟದಲ್ಲಿ ನಿದ್ದೆ ಮಾತ್ರೆ ಹಾಕಿ ಕೊಲ್ಲುವ ಸಂಚು ರೂಪಿಸಿದ್ದಳು. ಆದರೆ ಅವರ ಪ್ಲಾನ್ ಯಶಸ್ವಿ ಆಗದ ಕಾರಣ ಬೇರೆ ರೀತಿಯಲ್ಲಿ ಕೊಲೆ ಮಾಡಲು ಸ್ಕೆಚ್ ಹಾಕಿದ್ದಳು.

    ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡುವ ಸಂಚು ಪತ್ನಿಯ ಫೋನ್ ನಲ್ಲಿ ರೆಕಾರ್ಡ್ ಆಗಿತ್ತು. ಈ ಆಡಿಯೋವನ್ನು ಪತ್ನಿಗೆ ತಿಳಿಯದಂತೆ ಪತಿ ಪಡೆದುಕೊಂಡು ಪೋಲಿಸರಿಗೆ ದೂರು ನೀಡಿದ್ದಾರೆ. ಜ್ಞಾನಭಾರತಿಯ ಪೊಲೀಸರು ಪತಿ ನೀಡಿದ ಮೊಬೈಲ್ ಆಡಿಯೋ ರೆಕಾರ್ಡ್ ಆಧಾರದ ಮೇಲೆ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.

  • ಡೈವೋರ್ಸ್ ಕೇಳಿದ್ದಕ್ಕೆ ಹೆಂಡ್ತಿ ಮೇಲೆ ಮಚ್ಚಿನಿಂದ ಹಲ್ಲೆಗೈದ ಪತಿ

    ಡೈವೋರ್ಸ್ ಕೇಳಿದ್ದಕ್ಕೆ ಹೆಂಡ್ತಿ ಮೇಲೆ ಮಚ್ಚಿನಿಂದ ಹಲ್ಲೆಗೈದ ಪತಿ

    ಚಿಕ್ಕಬಳ್ಳಾಪುರ: ವಿಚ್ಛೇದನ ಕೇಳಿದ ಪತ್ನಿ ಜೊತೆ ಜಗಳ ತೆಗೆದ ಗಂಡ ಆಕೆ ಮೇಲೆ ಮಚ್ಚಿನಿಂದ ಮನಸ್ಸೋ ಇಚ್ಛೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಶಾಂತಿನಗರದಲ್ಲಿ ಸೋಮವಾರ ರಾತ್ರಿ ನಡೆದಿದೆ.

    ಶಾಂತಾನಾಯಕ್ ಎಂಬಾತನೇ ತನ್ನ ಪತ್ನಿಯ ಮೇಲೆ ಹಲ್ಲೆಗೈದ ಪತಿ. ಶಾಂತಾನಾಯಕ್ 6 ವರ್ಷಗಳ ಹಿಂದೆ ರೋಜಿಬಾಯ್ ಎಂಬವರನ್ನು ಮದುವೆಯಾಗಿದ್ದ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ರೋಜಿಬಾಯ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.

    ಪತ್ನಿ ವಿಚ್ಛೇದನ ಅರ್ಜಿ ಸಲ್ಲಿಸಿದ ವಿಷಯ ತಿಳಿದ ಶಾಂತಾನಾಯಕ್ ಕೊಲೆಗೆ ಯತ್ನಿಸಿದ್ದಾನೆ. ಮಹಿಳೆಯ ಚೀರಾಟ ಕೇಳಿದ ಅಕ್ಕಪಕ್ಕದ ಜನ ಶಾಂತಕುಮಾರ್‍ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ರೋಜಿಬಾಯ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪತ್ನಿಗೆ ಬ್ಲೂಫಿಲ್ಮ್ ತೋರಿಸಿ, ಮದ್ಯ ಕುಡಿಸಿ ಸೆಕ್ಸ್ ಗೆ ಬರುವಂತೆ ಟೆಕ್ಕಿ ಗಂಡನ ಕಿರಿಕ್

    ಪತ್ನಿಗೆ ಬ್ಲೂಫಿಲ್ಮ್ ತೋರಿಸಿ, ಮದ್ಯ ಕುಡಿಸಿ ಸೆಕ್ಸ್ ಗೆ ಬರುವಂತೆ ಟೆಕ್ಕಿ ಗಂಡನ ಕಿರಿಕ್

    ಬೆಂಗಳೂರು: ತನ್ನ ಪತ್ನಿಗೆ ಬ್ಲೂಫಿಲ್ಮ್ ತೋರಿಸಿ, ಮದ್ಯ ಸೇವಿಸಿ ಸೆಕ್ಸ್ ಗೆ ಕರಿಯುತ್ತಿದ್ದ ಕಾಮುಕ ಗಂಡನ ವಿರುದ್ಧ ಪತ್ನಿಯೊಬ್ಬರು ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ನಗರದ ಪ್ರತಿಷ್ಠತ ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿರುವ ಕೃಷ್ಣಕುಮಾರ್ ತನ್ನ ಪತ್ನಿಗೆ ಬ್ಲೂಫಿಲ್ಮಂ ತೋರಿಸುತ್ತಿದ್ದ ಕಾಮುಕ ಗಂಡ. ಕೃಷ್ಣ ಕುಮಾರ್ ಒಂದು ವರ್ಷದ ಹಿಂದೆ ಸುಜಾತ (ಹೆಸರು ಬದಲಾಯಿಸಿದೆ) ಎಂಬವರನ್ನು ಮದುವೆಯಾಗಿದ್ದನು. ಮದುವೆಯಾದ ಒಂದೇ ವರ್ಷದಲ್ಲಿ ಅತ್ತೆ ವರದಕ್ಷಿಣೆ ತರುವಂತೆ ಕಿರುಕುಳ ನೀಡಲು ಆರಂಭಿಸಿದ್ದಾಳೆ.

    ಮದುವೆಯಾದ ಹೊಸತರಲ್ಲಿ ಕೃಷ್ಣ ಕುಮಾರ್ ಮತ್ತು ಸುಜಾತಾ ಹನಿಮೂನ್ ಗಾಗಿ ಮಾರಿಷಸ್ ಗೆ ಹೋಗಿದ್ದಾರೆ. ವಿದೇಶದಲ್ಲಿ ಪತ್ನಿಗೆ ಬಲವಂತವಾಗಿ ಮದ್ಯ ಕುಡಿಸಿ, ಸೆಕ್ಸ್ ಫಿಲ್ಮಂಗಳನ್ನು ತೋರಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಅಷ್ಟೇ ಅಲ್ಲದೇ ಬೆಂಗಳೂರಿಗೆ ಬಂದ ನಂತರವು ಪ್ರತಿದಿನ ಸೆಕ್ಸ್ ಗೆ ಪೀಡಿಸುತ್ತಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

    ವಿಡಿಯೋ ಮಾಡ್ತಿದ್ದ: ಇನ್ನೂ ಇಷ್ಟಕ್ಕೆ ಸುಮ್ಮನಾಗದ ಕೃಷ್ಣಕುಮಾರ್ ಮನೆಯಲ್ಲಿ ಪತ್ನಿಯ ನಗ್ನ ವಿಡಿಯೋ ಮಾಡುವ ಮೂಲಕ ಚಿತ್ರಹಿಂಸೆ ನೀಡಿದ್ದಾನೆ. ಕೃಷ್ಣಕುಮಾರ್ ತನ್ನ ಹಳೆಯ ಗರ್ಲ್ ಫ್ರೆಂಡ್ಸ್ ಗಳ ಹೆಸರಿನ ಮೂಲಕ ತನ್ನ ಪತ್ನಿಯನ್ನು ಕರೆದು ಮಾನಸಿಕವಾಗಿಯೂ ಹಿಂಸೆ ಕೊಟ್ಟಿದ್ದಾನೆ.

    ಗಂಡನ ಕಿರುಕುಳ ನೀಡುತ್ತಿದ್ದರೆ ಏರ್‍ಪೋರ್ಟ್ ನಲ್ಲಿ ಕಸ್ಟಮ್ ಅಧೀಕ್ಷಕಿಯಾಗಿರುವ ಅತ್ತೆ ಸ್ವರ್ಣಕಲಾ ಮಾತ್ರ ವರದಕ್ಷಿಣೆ ತರುವಂತೆ ಪೀಡಿಸಿದ್ದಾಳೆ. ಗಂಡನ ಕಿರುಕುಳ ಬಗ್ಗೆ ಅತ್ತೆಗೆ ಹೇಳಿದರೆ ಸಹಿಸಿಕೊಂಡು ಹೋಗು ಎಂದು ತಿಳಿಸಿದ್ದಾಳೆ. ಗಂಡ ಸಿಗರೇಟಿನಿಂದ ಕೈ ಸುಟ್ಟರೆ, ಅತ್ತೆ ನನ್ನ ಮೇಲೆ ಹಲ್ಲೆ ನಡೆಸುತ್ತಾರೆ ಅಂತಾ ಸುಜಾತಾ ಹೇಳಿದ್ದಾರೆ.

    ಇದನ್ನೂ ಓದಿ: ನೀಚ ಟೆಕ್ಕಿಗೆ ಪತ್ನಿಯೇ ಬೆಡ್ ಕಾಫಿ: ವಿಕೃತಕಾಮಿಗೆ ದಿನವೆಲ್ಲ ಸೆಕ್ಸ್ ಬೇಕೇ ಬೇಕಂತೆ!

    ಗಂಡ ಮತ್ತು ಅತ್ತೆಯ ಕಿರುಕುಳ ತಾಳಲಾರದೇ ಸುಜಾತಾ ವಿಜಯನಗರ ಪೊಲೀಸ್ ಸ್ಟೇಷನ್ ಹಾಗೂ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ತಮ್ಮ ವಿರುದ್ಧ ದೂರು ನೀಡಿದ್ದಾಳೆ ಎಂಬ ಕೋಪದಿಂದ ತಾಯಿ ಮತ್ತು ಮಗ ಇಬ್ಬರೂ ಸೇರಿ ಸುಜಾತಾರನ್ನು ಅವರ ಸಾಮಾನುಗಳ ಸಹಿತ ಮನೆಯಿಂದ ಹೊರಹಾಕಿದ್ದಾರೆ.

    ಸುಜಾತಾರನ್ನು ಹೊರಹಾಕಿದ್ದ ಬಗ್ಗೆ ಆಕೆಯ ತಾಯಿ ಪ್ರಶ್ನಿಸಿದ್ದಾರೆ. ಈ ವೇಳೆ ಸ್ವರ್ಣಕಲಾ ಸುಜಾತಾರ ತಾಯಿಯ ಕೈಯನ್ನು ಕುಯ್ದು ಹಲ್ಲೆ ನಡೆಸಿದ್ದಾರೆ. ಸುಜಾತಾ ತನ್ನ ಪತಿಯ ಮನೆಯ ಮುಂದೆಯೇ ಕುಳಿತು ಪ್ರತಿಭಟನೆ ಮಾಡುತ್ತಿದ್ದಾರೆ.

    ಇದನ್ನೂ ಓದಿ: ಹೆಂಡತಿಯೊಂದಿಗಿನ ಸೆಕ್ಸ್ ಲೈವ್ ಸ್ಟ್ರೀಮಿಂಗ್ ಮಾಡಿದ ಟೆಕ್ಕಿ ಬಂಧನ 

    ಇದನ್ನೂ ಓದಿ: ನಾಯಿ ಜೊತೆ ಸೆಕ್ಸ್ ನಡೆಸುವಂತೆ ಪತ್ನಿಗೆ ಪತಿ ಚಿತ್ರಹಿಂಸೆ 

    ಸ್ವರ್ಣ ಕಲಾ-ಅತ್ತೆ

  • ಹೆಂಡ್ತಿಯಿಂದ ಬೇಸತ್ತು ಜೈಲಿಗೆ ಹೋಗಲು ಎಸಿಪಿ ಮುಖಕ್ಕೆ ಪಂಚ್ ಕೊಟ್ಟ

    ಹೆಂಡ್ತಿಯಿಂದ ಬೇಸತ್ತು ಜೈಲಿಗೆ ಹೋಗಲು ಎಸಿಪಿ ಮುಖಕ್ಕೆ ಪಂಚ್ ಕೊಟ್ಟ

    ಜೈಪುರ: ಪತ್ನಿಯ ಕಾಟದಿಂದ ತಪ್ಪಿಸಿಕೊಳ್ಳಲು ಪತಿಯೊಬ್ಬ ಎಸಿಪಿ ಒಬ್ಬರಿಗೆ ಮುಖಕ್ಕೆ ಪಂಚ್ ಕೊಟ್ಟು ಜೈಲು ಸೇರಿರುವ ವಿಚಿತ್ರ ಘಟನೆ ಶಿಪ್ರಾ ಪೊಲೀಸ್ ಠಾಣೆಯಲ್ಲಿ ನಡೆದಿದೆ.

    30 ವರ್ಷದ ಯೋಗೇಶ್ ಗೋಯಲ್ ಎಂಬ ವ್ಯಕ್ತಿ ಗುರುವಾರ ಶಿಪ್ರಾ ಪೊಲೀಸ್ ಠಾಣೆಗೆ ಬಂದಿದ್ದಾನೆ. ಠಾಣೆಗೆ ಬಂದವನು ನೇರವಾಗಿ ಪೊಲೀಸರಿಗೆ ನನ್ನನ್ನು ಬಂಧಿಸಿ, ನಾನು ನನ್ನ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದೇನೆ ಎಂದು ಹೇಳಿದ್ದಾನೆ. ಅಷ್ಟರಲ್ಲೇ ಠಾಣೆಗೆ ಬಂದ ಯೋಗೇಶ್ ಪತ್ನಿಯೂ ಸಹ ಪತಿಯ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ.

    ಈ ವೇಳೆ ಠಾಣೆಯಲ್ಲಿದ್ದ ಎಸಿಪಿ ದೇಶ್‍ರಾಜ್ ಯಾದವ್ ಇಬ್ಬರನ್ನೂ ಕೂರಿಸಿ ರಾಜಿ ಪಂಚಾಯ್ತಿ ಮಾಡಲು ಮುಂದಾಗಿದ್ದಾರೆ. ದೂರು ದಾಖಲಿಸುವದಕ್ಕಿಂತ ಇಬ್ಬರನ್ನೂ ಸಮಾಧಾನಪಡಿಸಲು ಎಸಿಪಿ ದೇಶ್‍ರಾಜ್ ಪ್ರಯತ್ನಿಸಿದ್ದಾರೆ.

    ಎಸಿಪಿ ಇಬ್ಬರ ಜಗಳವನ್ನು ಇತ್ಯರ್ಥಿಸುವಾಗಿ ಯೋಗೇಶ್ ನೇರವಾಗಿ ಎಸಿಪಿ ಮುಖಕ್ಕೆ ಹೊಡೆದಿದ್ದಾನೆ. ಇದರ ತೀವ್ರತೆಗೆ ಎಸಿಪಿಯವರ ಮೂಗು ಮತ್ತು ತುಟಿಯಿಂದ ರಕ್ತ ಬರಲಾರಂಭಿಸಿತು ಎಂದು ಸ್ಟೇಶನ್ ಆಫೀಸರ್ ಮುಖೇಶ್ ಚೌಧರಿ ತಿಳಿಸಿದ್ದಾರೆ.

    ಯೋಗೇಶ್ ವಾಲ್ಲೇಡ್ ನಗರದಲ್ಲಿ ಸ್ವಂತ ಅಂಗಡಿಯೊಂದನ್ನು ಹೊಂದಿದ್ದು, ಪತಿ-ಪತ್ನಿ ನಡುವೆ ವೈಮನಸ್ಸು ಉಂಟಾಗಿತ್ತು. ಹೀಗಾಗಿ ಇಬ್ಬರೂ ಒಬ್ಬರ ವಿರುದ್ಧ ಒಬ್ಬರು ದೂರು ದಾಖಲಿಸಲು ಠಾಣೆಗೆ ಬಂದಿದ್ದರು. ಈ ವೇಳೆ ಎಸಿಪಿ ಅವರ ಮೇಲೆ ಹಲ್ಲೆ ನಡೆಸಿ ಪತಿರಾಯ ಕೊನೆಗೂ ಜೈಲು ಸೇರಿದ್ದಾನೆ.

    ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಆರೋಪಿ ಯೋಗೇಶ್ ವಿರುದ್ಧ ದೂರು ದಾಖಲಾಗಿದೆ.