Tag: ಪತ್ನಿ

  • ಪತಿಯನ್ನು ಕೊಂದು, ಪ್ರೇಮಿಯನ್ನೇ ತನ್ನ ಗಂಡ ಎಂದು ನಂಬಿಸಲು ಆತನ ಮುಖಕ್ಕೆ ಆ್ಯಸಿಡ್ ಸುರಿದ ಪತ್ನಿ

    ಪತಿಯನ್ನು ಕೊಂದು, ಪ್ರೇಮಿಯನ್ನೇ ತನ್ನ ಗಂಡ ಎಂದು ನಂಬಿಸಲು ಆತನ ಮುಖಕ್ಕೆ ಆ್ಯಸಿಡ್ ಸುರಿದ ಪತ್ನಿ

    ಹೈದರಾಬಾದ್: ತೆಲಂಗಾಣದ ನಗರ್ ಕರ್ನೂಲ್ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ನಡೆದ ಸುಧಾಕರ್ ರೆಡ್ಡಿ ಎಂಬವರ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಟ್ವಿಸ್ಟ್ ಬೆಳಕಿಗೆ ಬರುತ್ತಿದೆ.

    ಮೃತ ಸುಧಾಕರ್ ರೆಡ್ಡಿಯವರು ನಗರ್ ಕರ್ನೂಲ್ ನ ಹೌಸಿಂಗ್ ಬೋರ್ಡ್ ಕಾಲೋನಿಯ ತಮ್ಮ ಮನೆಯಲ್ಲಿ ಶುಕ್ರವಾರ ಕೊಲೆಯಾಗಿದ್ದರು. ಸುಧಾಕರ್ ರೆಡ್ಡಿ ರನ್ನು ಆತನ ಪತ್ನಿ ಸ್ವಾತಿ ಹಾಗೂ ಪತ್ನಿಯ ಪ್ರಿಯಕರ ರಾಜೇಶ್ ಎಂಬುವರು ಸೇರಿ ಕೊಲೆ ಮಾಡಿದ್ದಾರೆ.

    ಕ್ರಷರ್ ವ್ಯಾಪಾರ ಮಾಡುತ್ತಿದ್ದ ಸುಧಾಕರ್ ರೆಡ್ಡಿ ವ್ಯಾಪಾರ ಕೆಲಸದ ಮೇಲೆ ಹೈದರಾಬಾದ್ ತೆರಳಿದ್ದರು. ಈ ಸಮಯದಲ್ಲಿ ಸ್ವಾತಿ ತನ್ನ ಗಂಡ ಮನೆಯಲ್ಲಿ ಇಲ್ಲ ಎಂಬುದನ್ನ ತಿಳಿಸಿ, ತನ್ನ ಪ್ರೀಯಕರನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಆದರೆ ಅಂದು ಮನೆಗೆ ವಾಪಸ್ ಆದ ಸುಧಾಕರ್ ರೆಡ್ಡಿ ಕೈಗೆ ಸ್ವಾತಿ ಹಾಗೂ ರಾಜೇಶ್ ಸಿಕ್ಕಿಬಿದ್ದಿದ್ದು, ಇಬ್ಬರ ನಡುವಿನ ಆಕ್ರಮ ಸಂಬಂಧ ಪತಿಗೆ ತಿಳಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಸುಧಾಕರ್ ರೆಡ್ಡಿ ಮನೆಗೆ ವಂದ ವೇಳೆ ಸಿಕ್ಕಿಬಿದ್ದ ಸ್ವಾತಿ ಹಾಗೂ ರಾಜೇಶ್ ಸೇರಿ ಆತನನ್ನು ಕೊಲೆ ಮಾಡಿ, ದೇಹವನ್ನು ನವಾಬ್ ಪೇಟ್ ಪ್ರದೇಶ ಸಮೀಪವಿದ್ದ ಅರಣ್ಯ ಪ್ರದೇಶದಕ್ಕೆ ಕಾರಿನಲ್ಲಿ ತೆಗೆದುಕೊಂಡು ಹೋಗಿ ಸುಟ್ಟು ಹಾಕಿದ್ದಾರೆ. ನಂತರ ಮನೆಗೆ ಬಂದ ಸ್ವಾತಿ ತನ್ನ ಗಂಡನ ಬಟ್ಟೆಗಳನ್ನು ರಾಜೇಶ್ ಗೆ ನೀಡಿ ಆತನ್ನು ತನ್ನ ಗಂಡನ ಹಾಗೇ ಸಿದ್ಧಪಡಿಸಿ, ಆತನನ್ನು ಯಾರು ಗುರುತು ಹಿಡಿಯದಂತೆ ಮಾಡಲು ಆತನ ಮುಖದ ಮೇಲೆ ಆ್ಯಸಿಡ್ ಎರಚಿದ್ದಾಳೆ.

    ನಂತರ ಗುರುತು ಸಿಗದ ದುಷ್ಕರ್ಮಿಗಳು ಮನೆಗೆ ಬಂದು ತನ್ನ ಪತಿ ಸುಧಾಕರ್ ರೆಡ್ಡಿ ಅವರ ಮೇಲೆ ದಾಳಿ ಮಾಡಿದ್ದಾರೆ ಎಂದು ಹೇಳಿ, ಗಾಯಗೊಂಡ ಸುಧಾಕರ್ ರೆಡ್ಡಿ ಅಲಿಯಾಸ್ ರಾಜೇಶ್ ನನ್ನ ಹೈದರಾಬಾದಿನ ಡಿಆರ್ ಟಿಓ ಆಸ್ಪತ್ರೆಗೆ ದಾಖಲಿಸಿದ್ದಾಳೆ.

    ಘಟನೆ ಕುರಿತು ನ್ಯಾಯಾಧೀಶರ ಎದುರು ಹೇಳಿಕೆಯನ್ನು ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಧಾಕರ್ ರೆಡ್ಡಿಯನ್ನು ನೋಡಲು ಬಂದ ಕುಟುಂಬ ಸದಸ್ಯರು ಮುಖದ ಮೇಲೆ ತೀವ್ರ ಸುಟ್ಟ ಗಾಯವಾಗಿದ್ದರಿಂದ ಆತನ್ನು ಗುರುತಿಸಲು ವಿಫಲರಾಗುತ್ತಾರೆ. ಆದರೆ ಸುಧಾಕರ್ ರೆಡ್ಡಿ ತಾಯಿ ಮಗನ ವರ್ತನೆ ನೋಡಿ ಸಂಶಯಗೊಂಡಿದ್ದರೂ, ಆದರೆ ಮಗ ತೀವ್ರವಾಗಿ ಗಾಯಗೊಂಡಿರುವುದರಿಂದ ಹೀಗೆ ಮಾತನಾಡುತ್ತಿದ್ದಾನೆ ಎಂದು ತಿಳಿದ ಅವರು ಅದನ್ನು ನಿರ್ಲಕ್ಷ್ಯ ಮಾಡಿದ್ದರು.

    ಘಟನೆ ಬೆಳಕಿಗೆ ಬಂದಿದ್ದು ಹೇಗೆ: ಆಸ್ಪತ್ರೆ ಚಿಕಿತ್ಸೆ ಪಡೆದ ನಂತರ ಸುಧಾಕರ್ ರೆಡ್ಡಿ ಅಲಿಯಾಸ್ ರಾಜೇಶ್ ನ ಕೈ ಬೆರಳುಗಳ ಹೆಬ್ಬೆಟ್ಟು ಗುರುತನ್ನು ಆಸ್ಪತ್ರೆಯ ಆಡಳಿತ ಮಂಡಳಿ ಪಡೆಯುತ್ತಾರೆ. ಆದರೆ ಆತನ ಕೈ ಬೆರಳುಗಳ ಗುರುತು ಸುಧಾಕರ್ ಅವರ ಕೈಬೆರಳಿನ ಗುರುತು ಹೊಂದಾಣಿಕೆ ಆಗದ ಕಾರಣ ಪ್ರಕರಣದ ಸತ್ಯಾಂಶ ಬೆಳಕಿಗೆ ಬಂದಿದೆ.

     

  • ಯುವಕರೊಂದಿಗೆ ಸೆಕ್ಸ್ ಮಾಡುವಾಗ ಪತ್ನಿ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪತಿರಾಯ!

    ಯುವಕರೊಂದಿಗೆ ಸೆಕ್ಸ್ ಮಾಡುವಾಗ ಪತ್ನಿ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪತಿರಾಯ!

    ಹೈದರಾಬಾದ್: ಶಿಕ್ಷಣ ಕ್ಷೇತ್ರದಲ್ಲಿ ಗುರುತಿಸಿಕೊಂಡ ವ್ಯಕ್ತಿಯೊಬ್ಬ ಬೇರೆಯವರಿಗೆ ಮಾದರಿ ಆಗುವುದರ ಬದಲು ಕಳಂಕವಾಗಿದ್ದಾನೆ. ಹೌದು, ಪತಿರಾಯನೊಬ್ಬ ತನಗಿಂತ ಚಿಕ್ಕ ವಯಸ್ಸಿನ ಯುವಕರೊಂದಿಗೆ ಸೆಕ್ಸ್ ನಲ್ಲಿ ತೊಡಗಿದ್ದಾಗ ಪತ್ನಿಯ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿದ್ದಾನೆ.

    ಅಂಕುಶ್ ಎಂಬಾತನೇ ಯುವಕರೊಂದಿಗೆ ಸೆಕ್ಸ್ ನಲ್ಲಿ ತೊಡಗಿದ್ದಾಗ ಸಿಕ್ಕಿಬಿದ್ದ ಸಲಿಂಗಿ ಪತಿ. ಅಂಕುಶ್ ಹೈದರಾಬಾದ್ ನಗರದ ಅರುಣಾ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕನಾಗಿ ಕೆಲಸ ಮಾಡಿಕೊಂಡಿದ್ದು, ಪತ್ನಿಯೊಂದಿಗೆ ಸೈದಾಬಾದ್ ನ ಪುಸಲಬಸ್ಥಿ ಏರಿಯಾದಲ್ಲಿ ವಾಸವಾಗಿದ್ದನು. ನಗರದ ಕುಕಟಪಲ್ಲಿಯಲ್ಲಿ ಬಾಡಿಗೆಗೆ ಫ್ಲ್ಯಾಟ್ ಪಡೆದುಕೊಂಡು ಯುವಕರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿದ್ದನು.

    ಅಂಕುಶ್ ಮೂಲತಃ ಜಹೀರಾಬಾದ್ ನಿವಾಸಿಯಾಗಿದ್ದು, 2014ರಲ್ಲಿ ದೀಪಿಕಾ ಎಂಬವರನ್ನು ಮದುವೆ ಆಗಿದ್ದನು. ಮದುವೆ ನಂತರ ಸೈದಾಬಾದ್ ನಲ್ಲಿ ಪತ್ನಿಯೊಂದಿಗೆ ವಾಸವಾಗಿದ್ದನು. ನನ್ನ ಪತಿ ಯುವಕರೊಂದಿಗೆ ಸೆಕ್ಸ್ ನಲ್ಲಿ ಭಾಗಿಯಾಗುತ್ತಾ ಸಲಿಂಗಿ(ಗೇ)ಯಾಗಿ ಬದಲಾಗಿದ್ದಾನೆ. ಕುಕಟಪಲ್ಲಿಯಲ್ಲಿರುವ ಬಾಡಿಗೆ ಫ್ಲ್ಯಾಟ್ ನಲ್ಲಿ ಯುವಕರೊಂದಿಗೆ ಸೆಕ್ಸ್ ನಲ್ಲಿ ತೊಡಗಿದ್ದಾಗ ನನ್ನ ಕೈಗೆ ಸಿಕ್ಕಿದ್ದಾನೆ. ಈ ಕುರಿತು ಪತಿಯನ್ನು ಪತ್ನಿ ದೀಪಿಕಾ ಪ್ರಶ್ನಿಸಿದಾಗ ಆಕೆಯನ್ನು ನಿರ್ಜನ ಸ್ಥಳಕ್ಕೆ ಕರೆದುಕೊಂಡು ಹೋಗಿ ಬಂಧಿಯಾಗಿ ಇರಿಸಿದ್ದನು. ಅಲ್ಲದೇ ತನ್ನ ಪತಿ ನನಗೆ ಮಾನಸಿಕವಾಗಿಯೂ ಮತ್ತು ದೈಹಿಕವಾಗಿಯೂ ಕಿರುಕುಳ ನೀಡುತ್ತಿದ್ದಾನೆ ಎಂದು ದೀಪಿಕಾ ಆರೋಪಿಸುತ್ತಿದ್ದಾರೆ.

    ಹಲವಾರು ಸಂದರ್ಭಗಳಲ್ಲಿ ಅಂಕುಶ್ ಪೋಷಕರು ಮತ್ತು ಸೋದರ ಸಂಬಂಧಿಗಳು ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಹತ್ತು ದಿನಗಳ ಹಿಂದೆ ಈ ಬಗ್ಗೆ ಸೈದಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಆದರೆ ಇದೂವರೆಗೂ ಪೊಲೀಸರು ಪತಿ ಮತ್ತು ಆತನ ಪೋಷಕರ ವಿರುದ್ಧ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ದೀಪಿಕಾ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

  • 5 ವರ್ಷ ಪ್ರೀತಿಸಿ, 17 ವರ್ಷ ಸಂಸಾರ ಮಾಡ್ದ ಪತ್ನಿಯಿಂದ ಪತಿ ಹತ್ಯೆಗೆ ಸುಪಾರಿ!

    5 ವರ್ಷ ಪ್ರೀತಿಸಿ, 17 ವರ್ಷ ಸಂಸಾರ ಮಾಡ್ದ ಪತ್ನಿಯಿಂದ ಪತಿ ಹತ್ಯೆಗೆ ಸುಪಾರಿ!

    ಬೆಂಗಳೂರು: ಐದು ವರ್ಷ ಪ್ರೀತಿಸಿ ನಂತರ 17 ವರ್ಷ ಸಂಸಾರ ಮಾಡಿದ ಪತ್ನಿ ತನ್ನ ಪ್ರಿಯಕರನ ಜೊತೆಗೂಡಿ ಪತಿಯ ಕೊಲೆಗೆ ಸ್ಕೆಚ್ ಹಾಕಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ಸಮೀಪದ ಕುದುರೆಗೆರೆ ಕಾಲೋನಿಯಲ್ಲಿ ನಡೆದಿದೆ.

    ಪಾಂಡುರಂಗ ಮತ್ತು ಮಂಜುಳ 17 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪಾಂಡುರಂಗ ಚಿಕ್ಕದೊಂದು ಗಾರ್ಮೆಂಟ್ಸ್ ಕಾರ್ಖಾನೆಯನ್ನು ನಡೆಸಿ ಜೀವನ ಸಾಗಿಸುತ್ತಿದ್ದರು.

    ಕೆಲವು ದಿನಗಳ ಹಿಂದೆ ಗಾರ್ಮೆಂಟ್ಸ್ ಗೆ ಶ್ರೀನಿವಾಸ್ ಎಂಬಾತ ಹೊಸದಾಗಿ ಕೆಲಸಕ್ಕೆ ಸೇರಿದ್ದ. ಕೆಲಸಕ್ಕೆ ಸೇರಿದ ನಂತರ ಆತನ ಜೊತೆ ಮಂಜುಳ ಸ್ನೇಹ ಬೆಳೆಸಿದ್ದಾಳೆ. ಇವರ ಸ್ನೇಹ ಪ್ರೀತಿಗೆ ತಿರುಗಿ ಪತಿಯನ್ನೇ ಕೊಲೆ ಮಾಡುವ ಹಂತಕ್ಕೆ ತಲುಪಿದೆ.

    ಪತಿಗೆ ಕೆಲವು ದಿನಗಳಿಂದ ಇವರ ಮೇಲೆ ಅನುಮಾನವಿತ್ತು. ಒಂದು ದಿನ ಪತ್ನಿ ತನ್ನ ಫೋನ್ ಬಿಟ್ಟು ಹೊರಗೆ ಹೋಗಿದ್ದ ಸಂದರ್ಭದಲ್ಲಿ ಆಕೆಯ ಫೋನಿನ ವಾಯ್ಸ್ ಕಾಲ್ ರೆಕಾರ್ಡ್ ಪರಿಶೀಲಿಸಿದಾಗ ಕೊಲೆಗೆ ಪ್ಲಾನ್ ಮಾಡಿದ್ದ ವಿಚಾರ ಪಾಂಡುರಂಗಗೆ ಗೊತ್ತಾಗಿದೆ. ಪತಿಗೆ ಈ ವಿಚಾರ ತಿಳಿಯುತ್ತಿದ್ದಂತೆ ಪತ್ನಿ ಶ್ರೀನಿವಾಸ್ ಜೊತೆ ಮಕ್ಕಳನ್ನು ಬಿಟ್ಟು ಪರಾರಿಯಾಗಿದ್ದಾಳೆ.

    ಪತ್ನಿ ಓಡಿ ಹೋದ ಬಳಿಕ ಪತಿ ಸಾಕ್ಷಿ ಸಮೇತ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೆಲ ದಿನಗಳ ಹಿಂದೆಯೇ ಇಬ್ಬರ ವಿರುದ್ಧ ದೂರು ನೀಡಿದ್ದಾರೆ. ಆದರೆ ದೂರು ನೀಡಿದ್ದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಇವರಿಬ್ಬರು ಸೇರಿ ನನ್ನನ್ನು ಹತ್ಯೆ ಮಾಡುತ್ತಾರೆ. ಆಮೇಲೆ ನನ್ನ ಇಬ್ಬರು ಮಕ್ಕಳು ಅನಾಥರಾಗುತ್ತಾರೆ. ಆದ್ದರಿಂದ ಪೊಲೀಸರು ಕೂಡಲೇ ಸೂಕ್ತ ಕ್ರಮಕೈಗೊಂಡು ನನಗೆ ರಕ್ಷಣೆ ನೀಡಬೇಕೆಂದು ಪಾಂಡುರಂಗ ಒತ್ತಾಯಿಸಿದ್ದಾರೆ.

     

  • ಪತ್ನಿ ಶವವನ್ನು 10 ಕಿ.ಮೀ ಹೊತ್ತೊಯ್ದಿದ್ದ ವ್ಯಕ್ತಿ ಈಗ ಹೇಗಿದ್ದಾರೆ ಗೊತ್ತಾ?

    ಪತ್ನಿ ಶವವನ್ನು 10 ಕಿ.ಮೀ ಹೊತ್ತೊಯ್ದಿದ್ದ ವ್ಯಕ್ತಿ ಈಗ ಹೇಗಿದ್ದಾರೆ ಗೊತ್ತಾ?

    ಭುವನೇಶ್ವರ: ಕಳೆದ ವರ್ಷ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ವ್ಯವಸ್ಥೆ ಸಿಗದೇ ಸುಮಾರು 10 ಕಿ.ಮೀ ದೂರದವರೆಗೆ ತನ್ನ ಹೆಗಲ ಮೇಲೆ ಪತ್ನಿಯ ಶವ ಸಾಗಿಸಿ ಸುದ್ದಿಯಾಗಿದ್ದ ಒಡಿಶಾದ ದಾನಾ ಮಾಝಿ ಜೀವನ ಇದೀಗ ಪೂರ್ತಿ ಬದಲಾಗಿದೆ.

    ಹೌದು. ಹೊಸ ಮನೆ ಕಟ್ಟುತ್ತಿರೋ ಮಾಝಿ, ಎರಡನೇ ಮದುವೆಯಾಗಿ ಸದ್ಯ 65 ಸಾವಿರ ರೂ. ಮೌಲ್ಯದ ಹೊಸ ಹೊಂಡಾ ಬೈಕ್ ಕೂಡ ಖರೀದಿ ಮಾಡಿದ್ದಾರೆ. ಕಳೆದ ಆಗಸ್ಟ್ ತಿಂಗಳಿನಲ್ಲಿ ಮಾಝಿ ಪತ್ನಿ ಅಮಾಂಗ್ ಡಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆದ್ರೆ ಇವರ ಮೃತ ದೇಹವನ್ನು ಮನೆಗೆ ಸಾಗಿಸಲು ಆಸ್ಪತ್ರೆ ಸಿಬ್ಬಂದಿ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಿರಲಿಲ್ಲ. ಹೀಗಾಗಿ ಮಾಝಿ , ಬಟ್ಟೆಯಿಂದ ಸುತ್ತಲಾಗಿದ್ದ ತನ್ನ ಪತ್ನಿಯ ಮೃತದೇಹವನ್ನ ಹೆಗಲ ಮೇಲೆ ಹೊತ್ತು, ಮಗಳೊಂದಿಗೆ 10 ಕಿ. ಮೀ ದೂರದವರೆಗೆ ನಡೆದಿದ್ದರು. ಈ ರೀತಿ ಸಾಗುತ್ತಿರುವ ಮಾಝಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಇಡೀ ದೇಶವೇ ಮರುಕ ವ್ಯಕ್ತಪಡಿಸಿತ್ತು. ಈ ಫೋಟೋವನ್ನು ನೋಡಿದ ಬಹ್ರೈನ್ ಪ್ರಧಾನಿ ಮಾಝಿಯ ಅಸಾಹಯಕ ಸ್ಥಿತಿಯನ್ನು ಕಂಡು ಅವರೂ ಸಹಾಯಕ್ಕೆ ಮುಂದಾದ್ರು.

    ಅಂತೆಯೇ ಪ್ರಧಾನಿ ರಾಜಕುಮಾರ ಖಲಿಫಾ ಬಿನ್ ಸ್ಮಾನ್ ಅಲ್ ಖಲೀಫಾ, ಮಾಝಿಗೆ 9 ಲಕ್ಷ ರೂ. ನೆರವು ನೀಡಿದ್ದರು. ಹಾಗೆಯೇ ಕೆಲ ವ್ಯಕ್ತಿಗಳು ಹಾಗೂ ಹಲವು ಸಂಘ-ಸಂಸ್ಥೆಗಳು ಕೂಡ ಮಾಝಿಗೆ ನೆರವು ನೀಡಿದ್ದವು. ಹೀಗಾಗಿ ಸದ್ಯ ಮಾಝಿ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಸರ್ಕಾರದ ಪ್ರಧಾನ ಮಂತ್ರಿ ಗ್ರಾಮೀಣ ಅವಾಜ್ ಯೋಜನೆ ವತಿಯಿಂದ ಮನೆ ಕೂಡ ನಿರ್ಮಾಣವಾಗುತ್ತಿದೆ. ಸದ್ಯ ಅವರು ಗ್ರಾಮದ ಅಂಗನವಾಡಿಯೊಂದರಲ್ಲಿ ವಾಸ್ತವ್ಯ ಹೂಡಿದ್ದಾರೆ.

    ಇನ್ನು ಮಾಝಿಯ ಮೂವರು ಹೆಣ್ಣು ಮಕ್ಕಳಿಗೆ ಶಾಲೆಯೊಂದು ಉಚಿತ ಶಿಕ್ಷಣ ನೀಡುತ್ತಿದೆ. ಹೀಗಾಗಿ ಮಕ್ಕಳು ಆ ಶಾಲೆಯ ಹಾಸ್ಟೆಲ್ ನಲ್ಲಿ ವಾಸವಾಗಿದ್ದಾರೆ. ಈ ಮಧ್ಯೆ ಮಾಝಿ ಎರಡನೇ ಮದುವೆಯಾಗಿದ್ದಾರೆ. ಸದ್ಯ ಪತ್ನಿ ಅಲಮಟಿ ಡೀ ಗರ್ಭಿಣಿಯಾಗಿದ್ದಾರೆ.

    ಹೊಸ ಮನೆಯ ಬಳಿಕ ಸುತ್ತಾಡಲು ಹೊಸ ಬೈಕ್ ಬೇಕು ಅಂತ ಹೇಳಿದ್ದರು. ಹೀಗಾಗಿ ಅವರು ಸದ್ಯ ಹೊಸ ಹೊಂಡಾ ಬೈಕ್ ಖರೀದಿ ಮಾಡಿದ್ದಾರೆ ಅಂತ ಹೊಂಡಾ ಬೈಕ್ ಶೋ ರೂಮ್ ಮಾಲಕ ಮನೋಜ್ ಅಗರ್‍ವಾಲ್ ಹೇಳಿದ್ದಾರೆ.

    ಒಟ್ಟಿನಲ್ಲಿ ಮಾಝಿ ಜೀವನ ಸಂಪೂರ್ಣ ಬದಲಾಗಿದ್ದು, ಗ್ರಾಮಸ್ಥರು ಮಾತ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಯಾಕಂದ್ರೆ ಮಾಝಿಗೆ ಸರ್ಕಾರ, ಸಂಘ ಸಂಸ್ಥೆಗಳು ನೆರವು ನೀಡಿದ್ದರಿಂದ ಅವರ ಜೀವನ ಶೈಲಿಯೇ ಬದಲಾಗಿದೆ. ಆದರೆ ಗ್ರಾಮಕ್ಕೆ ಯಾವುದೇ ಸವಲತ್ತು ಸಿಕ್ಕಿಲ್ಲ ಅಂತ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

    ಆದ್ರೆ ಮಾಝಿಗೆ ಬೈಕ್ ಚಾಲನೆ ಬರದ ಕಾರಣ ಸಂಬಂಧಿಯ ಹಿಂದೆ ಬೈಕ್‍ನಲ್ಲಿ ಕೂರಬೇಕಿದೆ. ಹೀಗಾಗಿ ಮಾಝಿಗೆ ಈಗ ಬೈಕ್ ಚಾಲನೆ ಕಲಿಯೋ ಬಗ್ಗೆಯೇ ಚಿಂತೆ.

    https://www.youtube.com/watch?v=Jh2S18AyIiY

    https://www.youtube.com/watch?v=I2xPTfluFqI

     

  • ಹೆಂಡ್ತಿಯನ್ನ ಕೊಂದು ಆಸ್ಪತ್ರೆಗೆ ತಂದ – ಸ್ಟ್ರೆಚ್ಚರ್ ಮೇಲೆ ಹಾಕಿ ಎಸ್ಕೇಪ್ ಆದ ಕಿರಾತಕ

    ಹೆಂಡ್ತಿಯನ್ನ ಕೊಂದು ಆಸ್ಪತ್ರೆಗೆ ತಂದ – ಸ್ಟ್ರೆಚ್ಚರ್ ಮೇಲೆ ಹಾಕಿ ಎಸ್ಕೇಪ್ ಆದ ಕಿರಾತಕ

    ಯಾದಗಿರಿ: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿ ಶವ ತೆಗೆದುಕೊಂಡು ಹೋಗಿ ಜಿಲ್ಲಾಸ್ಪತ್ರೆಯಲ್ಲಿ ಬಿಟ್ಟು ಪರಾರಿಯಗಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.

    ಶಹಾಪುರ ತಾಲೂಕಿನ ಖಾನಾಪುರ ಗ್ರಾಮದವನಾದ ವೆಂಕಟೇಶ ಕೊಲೆ ಮಾಡಿ ಪರಾರಿಯಾಗಿರುವ ವ್ಯಕ್ತಿ. ಬೆಂಗಳೂರಿನ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುವಾಗ ಯಾದಗಿರಿಯ ಸುರಪುರ ತಾಲೂಕಿನ ರುಕ್ಮಾಪುರ ಗ್ರಾಮದರಾದ ಶಾಂತಮ್ಮ ಹಾಗೂ ವೆಂಕಟೇಶ್ ಮಧ್ಯೆ ಪ್ರೇಮವಾಗಿತ್ತು. ವೆಂಕಟೇಶನಿಗೆ ಮೊದಲೇ ವಿವಾಹವಾಗಿ ಮೂರು ಮಕ್ಕಳಿದ್ದರು. ಮೇ ತಿಂಗಳಲ್ಲಿ ಶಾಂತಮ್ಮ ಜೊತೆ ಪ್ರೇಮ ವಿವಾಹವಾಗಿದ್ದನು.

    ಇಬ್ಬರ ನಡುವೆ ಕೌಟುಂಬಿಕ ಕಲಹವಿತ್ತು ಹಾಗೂ ಸೋಮವಾರ ರಾತ್ರಿ ಮನೆಯಲ್ಲಿ ಪರಸ್ಪರ ಜಗಳ ಮಾಡಿಕೊಂಡಿದ್ದರು ಎನ್ನಲಾಗಿದೆ. ಹೀಗಾಗಿ ಪಾಪಿ ಪತಿ ಶಾಂತಮ್ಮರನ್ನ ಕೊಲೆ ಮಾಡಿ ಬೈಕ್ ಮೇಲೆ ಶವ ಹೊತ್ತು ತಂದು ಜಿಲ್ಲಾಸ್ಪೆಯಲ್ಲಿ ಬಿಸಾಕಿ ಹೋಗಿದ್ದಾನೆ. ಶವ ಹೊತ್ತು ತರುವ ದೃಶ್ಯ ಜಿಲ್ಲಾಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಆರೋಪಿ ವೆಂಕಟೇಶ ಹಣದಾಸೆಗಾಗಿ ಮಗಳನ್ನು ಕೊಲೆ ಮಾಡಿದ್ದಾನೆಂದು ಶಾಂತಮ್ಮ ಪೋಷಕರು ಆರೋಪಿಸಿದ್ದಾರೆ. ಸ್ಥಳಕ್ಕೆ ವಡಗೇರಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

  • ಫಸ್ಟ್ ನೈಟ್‍ನಲ್ಲೇ ರಾಕ್ಷಸನಾದ ಪತಿ- ಚೂರಿಯಿಂದ ಇರಿದು, ಅಂಗಾಂಗ ಕಚ್ಚಿ ಹಲ್ಲೆ

    ಫಸ್ಟ್ ನೈಟ್‍ನಲ್ಲೇ ರಾಕ್ಷಸನಾದ ಪತಿ- ಚೂರಿಯಿಂದ ಇರಿದು, ಅಂಗಾಂಗ ಕಚ್ಚಿ ಹಲ್ಲೆ

    ಹೈದರಾಬಾದ್: ಮದುವೆಯಾದ ಮೊದಲ ರಾತ್ರಿಯೇ ಗಂಡನೊಬ್ಬ ಪತ್ನಿಯ ಜೊತೆ ರಾಕ್ಷಸನಂತೆ ನಡೆದುಕೊಂಡು ಆಕೆಯನ್ನು ಹಿಂಸಿಸಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ಮೋತರಂಗನಪಲ್ಲಿ ಗ್ರಾಮದ ಗಂಗಾಧರ ನೆಲ್ಲೂರು ಬ್ಲಾಕ್‍ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಪತ್ನಿಯನ್ನ ಚೂರಿಯಿಂದ ಇರಿದು, ದೇಹದ ಭಾಗಗಳನ್ನು ಕಚ್ಚಿ, ಮುಖ ಮತ್ತು ಸೂಕ್ಷ್ಮ ಭಾಗಗಳನ್ನ ಗುದ್ದಿ ಪತಿ ವಿಕೃತಿ ಮೆರೆದಿದ್ದಾನೆ.

    ಹಲ್ಲೆಗೊಳಗಾದ 24 ವರ್ಷದ ನವವಿವಾಹಿತೆಯ ಸ್ಥಿತಿ ಗಂಭೀರವಾಗಿದ್ದು, ಚಿತ್ತೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಆಕೆಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಚೆನ್ನೈನ ಅಪೋಲೋ ಆಸ್ಪತ್ರೆಗೆ ರವಾನಿಸಲಾಗಿದೆ. ಶನಿವಾರದಂದು ರಾಕ್ಷಸ ಪತಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    ನಡೆದಿದ್ದೇನು: ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಆರೋಪಿಗೆ ಎಂಬಿಎ ಪದವೀಧರೆಯ ಜೊತೆ ಗುರುವಾರ ಮದುವೆಯಾಗಿತ್ತು. ವರದಕ್ಷಿಣೆ ಎಂದು ಹುಡುಗಿಯ ಕುಟುಂಬಸ್ಥರು 1 ಕೋಟಿ ರೂ. ಕೊಟ್ಟಿದ್ದಾಗಿ ಹೇಳಿದ್ದಾರೆ. ಆದರೆ ಶುಕ್ರವಾರ ಮೊದಲ ರಾತ್ರಿ ಏರ್ಪಡಿಸಿದ್ದರು. ವಧು ಪತಿಯ ರೂಮಿಗೆ ಹೋಗಿದ್ದಾರೆ. ಆಕೆ ರೂಮಿಗೆ ಬರುತ್ತಿದ್ದಂತೆ ಆರೋಪಿ ಏಕಾಏಕಿ ಮುಖಕ್ಕೆ ಹೊಡೆಯಲು ಆರಂಭಿಸಿದ್ದಾನೆ. ನಂತರ ಚಾಕುವಿನಿಂದ ಇರಿದು, ಅಂಗಾಂಗಗಳನ್ನ ಕಚ್ಚಿದ್ದಲ್ಲದೆ ಸೂಕ್ಷ್ಮ ಭಾಗಗಳಿಗೆ ಗುದ್ದಿ ಗಾಯಗೊಳಿಸಿದ್ದಾನೆಂದು ವಧು ಹೇಳಿದ್ದಾರೆ. ಪ್ರಾಣಾಪಾಯದ ಭಯದಿಂದ ವಧು ಕೂಡಲೇ ರೂಮಿನಿಂದ ತಪ್ಪಿಸಿಕೊಂಡು ಹೊರಬಂದಿದ್ದಾರೆ.

    ನನ್ನ ಮಗಳು ಹೇಗೋ ಅವನಿಂದ ತಪ್ಪಿಸಿಕೊಂಡು ರೂಮಿನಿಂದ ಹೊರಗೆ ಬಂದಳು. ಹೊರ ಬಂದಾಗ ಅವಳು ಗಾಬರಿಯಾಗಿದ್ದಳು. ಮುಖವೆಲ್ಲಾ ಊದಿಕೊಂಡಿತ್ತು. ತಕ್ಷಣ ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದೆವು ಎಂದು ವಧುವಿನ ತಾಯಿ ತಿಳಿಸಿದ್ದಾರೆ.

  • ಪತ್ನಿಯ ಹತ್ಯೆಗೆ ಸುಪಾರಿ – ಕೊಲೆಗೂ ಮುನ್ನವೇ ಪೊಲೀಸ್ ಅತಿಥಿಯಾದ ಪತಿ, ಸುಪಾರಿ ಗ್ಯಾಂಗ್

    ಪತ್ನಿಯ ಹತ್ಯೆಗೆ ಸುಪಾರಿ – ಕೊಲೆಗೂ ಮುನ್ನವೇ ಪೊಲೀಸ್ ಅತಿಥಿಯಾದ ಪತಿ, ಸುಪಾರಿ ಗ್ಯಾಂಗ್

    ಬೆಂಗಳೂರು: ಪತ್ನಿಯನ್ನು ಕೊಲ್ಲಲು ಸುಪಾರಿ  ನೀಡಿದ ಪತಿ ಹಾಗೂ ಸುಪಾರಿ  ಹಂತಕರ ತಂಡವನ್ನು ವೈಯಾಲಿಕಾವಲ್ ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.

    ಪತಿ ನರೇಂದ್ರಬಾಬು ಹಾಗೂ ಸುಪಾರಿ ಗ್ಯಾಂಗ್ ನ ಸದಸ್ಯರಾದ ಚಿನ್ನಸ್ವಾಮಿ ಮತ್ತು ಅಭಿಲಾಷ್ ಬಂಧಿತ ಆರೋಪಿಗಳು. ನರೇಂದ್ರಬಾಬು ಎಂಬಾತ ತನ್ನ ಪತ್ನಿ ವಿನುತಾರನ್ನು ಕೊಲೆ ಮಾಡಲು ಸುಪಾರಿ ನೀಡಿದ್ದ. ಇದರಂತೆ ಗುರುವಾರ ನಗರದ ವೈಯಾಲಿಕಾವಲ್ ನಲ್ಲಿ ವಿನುತಾರನ್ನು ಕೊಲೆ ಮಾಡಲು ಆಟೋದಲ್ಲಿ ಕಾದು ಕುಳಿತಿದ್ದ ವೇಳೆ ಸುಪಾರಿ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.

    ಪತಿ ಹಾಗೂ ಪತ್ನಿಯ ನಡುವಿನ ಕೌಟುಂಬಿಕ ಕಲಹವೇ ಕೊಲೆ ಯತ್ನಕ್ಕೆ ಪ್ರಮುಖ ಕಾರಣ ಎಂದು ತಿಳಿದು ಬಂದಿದೆ. ಕಳೆದ ಐದು ವರ್ಷಗಳಿಂದ ದಂಪತಿ ದೂರ ವಾಸಿಸುತ್ತಿದ್ದರು. ಆದರೆ ವಿನುತಾ ಪತಿಯ ಆಸ್ತಿಯಲ್ಲಿ ಪಾಲು ಬೇಕು ಎಂದು ಗಲಾಟೆ ಮಾಡಿದ್ದರು. ಇದೇ ವಿಚಾರಕ್ಕೆ ವೈಯಾಲಿಕಾವಲ್ ಪೊಲೀಸ್ ಸ್ಟೇಷನ್ ಅಲ್ಲಿ ಇಬ್ಬರ ಮೇಲೂ ಐದು ದೂರು ದಾಖಲಾಗಿದೆ.

    ಈ ನಡುವೆ ವಿನುತಾ ಕಳೆದ 6 ತಿಂಗಳ ಹಿಂದೆ ನರೇಂದ್ರಬಾಬು ಮನೆಯಲ್ಲಿ ಸೇರಿಕೊಂಡು ಆತನನ್ನು ಹೊರಹಾಕಿ ಆಸ್ತಿ ಲಪಟಾಯಿಸುವ ಪ್ಲಾನ್ ಮಾಡಿದ್ದರು. ಇದರಿಂದ ಆರೋಪಿ ನರೇಂದ್ರಬಾಬುವಿಗೆ ವಾಸಿಸಲು ಮನೆ ಇರಲಿಲ್ಲ. ಹೀಗಾಗಿ ನರೇಂದ್ರಬಾಬು 15 ಲಕ್ಷ ರೂ. ಗಳಿಗೆ ಪತ್ನಿಯ ಕೊಲೆ ಮಾಡಲು ಸುಪಾರಿ ನೀಡಿದ್ದ. ಅದರಂತೆ ಹಂತಕರಿಗೆ ಎರಡು ಲಕ್ಷ ರೂ. ಅಡ್ವಾನ್ಸ್ ಸಹ ನೀಡಿದ್ದ.

    ಕಳೆದ ಎರಡು ದಿನಗಳ ಹಿಂದೆ ಆಟೋದಲ್ಲಿ ಸುಪಾರಿ ಹಂತಕರು ಮಾರಾಕಾಸ್ತ್ರಗಳೊಂದಿಗೆ ಹೊಂಚು ಹಾಕಿದ್ದರು. ಆದರೆ ಅಂದು ಕೊಲೆ ಸಾಧ್ಯವಾಗಿರಲಿಲ್ಲ. ಕೊಲೆ ಬಗ್ಗೆ ಮಾಹಿತಿ ಪಡೆದ ವೈಯಾಲಿಕಾವಲ್ ಪೊಲೀಸರು ತಕ್ಷಣವೇ ಎಚ್ಚೆತ್ತು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಪ್ರತಿ ದಿನ ಪತ್ನಿಗೆ ನೀನು ದಪ್ಪಗೆ ಇದ್ದೀಯ ಎಂದು ಪತಿ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸರಗೊಂಡಿದ್ದ ವಿನುತಾ ಈ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನುವ ಮಾಹಿತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಪ್ರಸ್ತುತ ವೈಯಾಲಿಕಾವಲ್ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

  • ಅಡುಗೆಯಲ್ಲಿ ಸ್ವಲ್ಪ ಎಣ್ಣೆ ಜಾಸ್ತಿ ಆಗಿದ್ದಕ್ಕೆ ಪತ್ನಿ ಮುಖಕ್ಕೆ ಕುದಿಯುವ ಎಣ್ಣೆ ಎರಚಿ, ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚಿದ!

    ಅಡುಗೆಯಲ್ಲಿ ಸ್ವಲ್ಪ ಎಣ್ಣೆ ಜಾಸ್ತಿ ಆಗಿದ್ದಕ್ಕೆ ಪತ್ನಿ ಮುಖಕ್ಕೆ ಕುದಿಯುವ ಎಣ್ಣೆ ಎರಚಿ, ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚಿದ!

    ಕಲಬುರಗಿ: ಅಡುಗೆಯಲ್ಲಿ ಎಣ್ಣೆ ಜಾಸ್ತಿ ಹಾಕಿದಕ್ಕೆ ಕೋಪಗೊಂಡ ಪತಿ ಕುದಿಯುವ ಅಡುಗೆ ಎಣ್ಣೆಯನ್ನು ಪತ್ನಿಯ ಮುಖಕ್ಕೆ ಎರಚಿದ್ದಲ್ಲದೇ, ಮೈ ಮೇಲೆ ಸೀಮೆ ಎಣ್ಣೆ ಸುರಿದು ಆಕೆಯನ್ನು ಕೊಲೆ ಮಾಡಲು ಯತ್ನಿಸಿದ ಅಮಾನವೀಯ ಘಟನೆ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದಲ್ಲಿ ನಡೆದಿದೆ.

    ಅಡುಗೆಯಲ್ಲಿ ಎಣ್ಣೆ ಜಾಸ್ತಿ ಹಾಕಿದ್ದಕ್ಕೆ ಪತಿ ಭೀಮಾಶಂಕರ್ ನರಸಕ್ಕಿ ಪ್ರಿಯಾಂಕಾಳಿಗೆ(25) ಬೆಂಕಿ ಹಚ್ಚಿದ್ದಾನೆ. ಗಂಡನಿಂದ ಬೆಂಕಿಯಲ್ಲಿ ಬೆಂದು ಸಾವು ಬದುಕಿನ ನಡುವೆ ಪ್ರಿಯಾಂಕಾ ಈಗ ಹೋರಾಡುತ್ತಿದ್ದು, ಶೇ.50ಕ್ಕಿಂತ ಹೆಚ್ಚು ಸುಟ್ಟ ಗಾಯಗೊಂಡಿರುವ ಆಕೆಯನ್ನು ಕಲಬುರಗಿಯ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

    ಮೂರು ವರ್ಷದ ಹಿಂದೆ ಪ್ರಿಯಾಂಕಾ ಮತ್ತು ಭೀಮಾಶಂಕರ್ ಮದುವೆ ನಡೆದಿದ್ದು, ಇವರ ದಾಂಪತ್ಯ ಜೀವನಕ್ಕೆ ಹದಿನೆಂಟು ತಿಂಗಳ ಮುದ್ದಾದ ಹೆಣ್ಣು ಮಗುವೂ ಸಾಕ್ಷಿಯಾಗಿದೆ. ಆದರೆ ಮದುವೆಯಾದ ಆರಂಭದಿಂದಲೂ ಹೆಂಡತಿಗೆ ಕಿರುಕುಳ ನೀಡುತ್ತಲೇ ಬಂದಿರುವ ಭೀಮಾಶಂಕರ್ ಹಲವು ಬಾರಿ ಮನಬಂದಂತೆ ಥಳಿಸಿದ್ದ.

    ಆದರೆ ಮಂಗಳವಾರ ಅಡುಗೆಯಲ್ಲಿ ಎಣ್ಣೆ ಜಾಸ್ತಿ ಹಾಕಿದ್ದಳು ಅನ್ನುವ ಕಾರಣಕ್ಕೆ ಒಲೆಯ ಮೇಲೆ ಕುದಿಯುತ್ತಿರುವ ಎಣ್ಣೆಯ ಪಾತ್ರೆಯನ್ನು ಮುಖಕ್ಕೆ ಎಸೆದಿದ್ದಾನೆ. ಅಲ್ಲದೇ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಸದ್ಯ ಆರೋಪಿ ಭೀಮಾಶಂಕರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • ಡೈವೋರ್ಸ್ ನೀಡಲು ಮುಂದಾಗಿದ್ದ ಪತ್ನಿಯನ್ನು ಹೆದರಿಸಲು ವಿಷ ಸೇವಿಸಿದ ಪತಿ

    ಡೈವೋರ್ಸ್ ನೀಡಲು ಮುಂದಾಗಿದ್ದ ಪತ್ನಿಯನ್ನು ಹೆದರಿಸಲು ವಿಷ ಸೇವಿಸಿದ ಪತಿ

    ಚಿಕ್ಕಬಳ್ಳಾಪುರ: ಡೈವೋರ್ಸ್ ನೀಡಲು ನಿರ್ಧರಿಸಿರುವ ಪತ್ನಿಯನ್ನು ಹೆದರಿಸಲು ಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯಲ್ಲಿ ನಡೆದಿದೆ.

    ಮೂಲತಃ ಬೆಂಗಳೂರಿನ ಲೊಟ್ಟಗೊಲ್ಲಹಳ್ಳಿ ನಿವಾಸಿ ರಾಜು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಟಿ.ದಾಸರಹಳ್ಳಿ ನಿವಾಸಿಯಾಗಿರುವ ಮೋನಿಷಾರನ್ನು ಪ್ರೀತಿಸಿದ್ದ ರಾಜು 2014 ರಲ್ಲಿ ಗೋರವನಹಳ್ಳಿ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ನಂತರ ತಮ್ಮ ವಿವಾಹವನ್ನು ರಿಜಿಸ್ಟರ್ ಮಾಡಿಸಿದ್ದರು.

    ಕೆಲ ದಿನಗಳಿಂದ ಪತಿ ರಾಜು ಹಾಗೂ ಪತ್ನಿ ಮೋನಿಷಾ ನಡುವೆ ಹೊಂದಾಣಿಕೆ ಇಲ್ಲದೇ ಮೋನಿಷಾ ಗಂಡನನ್ನು ತೊರೆದು ತವರು ಮನೆ ಸೇರಿದ್ದರು. ಅಲ್ಲದೇ ಪತಿ ರಾಜು ಜೊತೆ ಮತ್ತೆ ಜೀವನ ನಡೆಸಲು ಇಷ್ಟವಿಲ್ಲದ ಎಂದು ಹೇಳಿ ಮೋನಿಷಾ ವಿಚ್ಛೇದನ ನೀಡಲು ನಿರ್ಧರಿಸಿದ್ದರು.

    ಬುಧವಾರ ಕೆಲಸದ ನಿಮಿತ್ತ ಸ್ನೇಹಿತನ ಜೊತೆ ರಾಜು ಚಿಕ್ಕಬಳ್ಳಾಪುರಕ್ಕೆ ಬಂದಿದ್ದರು. ಈ ವೇಳೆ ತನ್ನ ಪತ್ನಿ ಡೈವೋರ್ಸ್ ನೀಡಲು ಮುಂದಾಗುತ್ತಿರುವ ವಿಚಾರವನ್ನು ಸ್ನೇಹಿತನಿಗೆ ತಿಳಿಸಿದ್ದಾರೆ. ಈ ಹಿಂದೆಯೂ ಒಮ್ಮೆ ಮೋನಿಷಾ ಮನೆ ಬಿಟ್ಟು ಹೋಗಿದ್ದಾಗ ಆಕೆಯನ್ನು ಬೆದರಿಸಲು ಆತ್ಮಹತ್ಯೆಗೆ ಯತ್ನಿಸಿದ್ದ ಕುರಿತು ತಿಳಿಸಿದ್ದಾರೆ. ಮತ್ತೆ ಇದೇ ಉಪಾಯವನ್ನು ಅನುಸರಿಸಿರುವ ರಾಜು ಚಿಕ್ಕಬಳ್ಳಾಪುರದ ಬಿಬಿ ರಸ್ತೆಯಲ್ಲಿ ಸ್ನೇಹಿತ ಕಾರು ನಿಲ್ಲಿಸಿ ಊಟಕ್ಕೆ ತೆರಳಿದ್ದ ಸಂದರ್ಭದಲ್ಲಿ ಕಾರಿನಲ್ಲೇ ಇಲಿ ಪಾಷಾಣ ಹಾಗೂ ಡೆಟಾಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ಊಟ ಮುಗಿಸಿ ಬಂದ ರಾಜು ಸ್ನೇಹಿತ ಕಾರಿನಲ್ಲಿ ಡೆಟಾಲ್ ವಾಸನೆ ಬರುವುದನ್ನು ಕಂಡು ಆತ್ಮಹತ್ಯೆ ಯತ್ನಿಸಿದ ರಾಜುರನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

     

     

  • ಪಿಎಸ್‍ಐ ವಿರುದ್ಧ ಅಕ್ರಮ ಸಂಬಂಧದ ಆರೋಪ- ಮೊದಲ ಪತ್ನಿಯಿಂದ ಮನೆ ಮುಂದೆ ಧರಣಿ

    ಪಿಎಸ್‍ಐ ವಿರುದ್ಧ ಅಕ್ರಮ ಸಂಬಂಧದ ಆರೋಪ- ಮೊದಲ ಪತ್ನಿಯಿಂದ ಮನೆ ಮುಂದೆ ಧರಣಿ

    ಹಾವೇರಿ: ಪಿಎಸ್‍ಐ ವಿರುದ್ಧ ಅಕ್ರಮ ಸಂಬಂಧದ ಆರೋಪ ಮಾಡಿ ಮೊದಲ ಪತ್ನಿ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿರುವ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದ ಮೃತ್ಯುಂಜಯ ನಗರದಲ್ಲಿ ನಡೆದಿದೆ.

    ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ಪಿಎಸ್‍ಐ ಟಿ.ಮಂಜಣ್ಣ ವಿರುದ್ಧ ಅಕ್ರಮ ಸಂಬಂಧದ ಆರೋಪ ಮಾಡಲಾಗಿದೆ. ಮಂಜಣ್ಣ ಅವರ ಮೊದಲ ಪತ್ನಿ ಸ್ವಪ್ನಾ ಈ ಆರೋಪ ಮಾಡಿದ್ದು, ಮಕ್ಕಳು ಮತ್ತು ಸಂಬಂಧಿಕರ ಸಮೇತ ತನ್ನ ಗಂಡನ ಮನೆ ಮುಂದೆ ಧರಣಿ ಕುಳಿತಿದ್ದಾರೆ.

    ಪಿಎಸ್‍ಐ ಮಂಜಣ್ಣ ಸ್ವಪ್ನಾ ಅವರ ಆರೋಪ ಅಲ್ಲಗಳೆದಿದ್ದಾರೆ. ಮನೆಗೆ ಸಂಬಂಧಿಕರು ಬಂದಿದ್ದರೂ ಅಕ್ರಮ ಸಂಬಂಧದ ಪಟ್ಟವನ್ನು ಸ್ವಪ್ನಾ ಕಟ್ಟುತ್ತಿದ್ದಾಳೆ. ಕೋರ್ಟಿನಲ್ಲಿ ವಿಚ್ಛೇದನ ಆಗಿದೆ ಹಾಗೂ ಕೆವಿಟ್ ಕೂಡ ಸಲ್ಲಿಸಿದ್ದೇನೆ. ಆದರೂ ಪದೇ ಪದೇ ಸ್ವಪ್ನಾ ಗಲಾಟೆ ಮಾಡುತ್ತಿದ್ದಾಳೆ ಎಂದು ಪಿಎಸ್‍ಐ ತಿಳಿಸಿದ್ದಾರೆ.

    ರಾಣೇಬೆನ್ನೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಸಿಪಿಐ ಮಂಜುನಾಥ ನಲವಾಗಿಲ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.