Tag: ಪತ್ನಿ

  • ಪತ್ನಿ ಅಂದವಾಗಿದ್ದಾಳೆಂದು ಮೊಬೈಲ್ ಕೊಡದ ಶಿಕ್ಷಕ ಪತಿ, ನೇಣು ಬಿಗಿದು ಕೊಂದೇ ಬಿಟ್ಟ!

    ಪತ್ನಿ ಅಂದವಾಗಿದ್ದಾಳೆಂದು ಮೊಬೈಲ್ ಕೊಡದ ಶಿಕ್ಷಕ ಪತಿ, ನೇಣು ಬಿಗಿದು ಕೊಂದೇ ಬಿಟ್ಟ!

    ಬಳ್ಳಾರಿ: ಪತ್ನಿ ಚಂದವಾಗಿ, ಅಂದವಾಗಿದ್ದಾಳೆ. ಅವಳಿಗೆ ಮೊಬೈಲ್ ನೀಡಿದ್ರೆ ಬೇರೆಯವರ ಜೊತೆ ಮಾತನಾಡುತ್ತಾಳೆಂದು ಅನುಮಾನಪಡುತ್ತಿದ್ದ ಶಿಕ್ಷಕ ಪತಿಯೊಬ್ಬ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

    ಹೂವಿನಹಡಗಲಿ ತಾಲೂಕಿನ ಕುಂಬಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪ್ರೌಢ ಶಾಲೆಯ ಶಿಕ್ಷಕ ನಾಗರಾಜ್, ತನ್ನ ಪತ್ನಿಯನ್ನು ನೇಣು ಬಿಗಿದು ನಂತರ ಹೃದಯಾಘಾತವೆಂದು ಬಿಂಬಿಸಲು ಹೋಗಿ ಸಿಕ್ಕಿಬಿದ್ದಿದ್ದಾನೆ.

    ಶಿಕ್ಷಕ ನಾಗರಾಜ್ ಚೆನ್ನಗಿರಿಯ ಹೆಬ್ಬಾಳಗೇರಿಯ ನೇತ್ರಾವತಿಯೊಂದಿಗೆ ಕಳೆದ ವರ್ಷವಷ್ಟೆ ಮದುವೆಯಾಗಿದ್ದ. ಆದ್ರೆ ಮದುವೆಯಾದ ನಂತರ ಪತ್ನಿಯನ್ನು ಸದಾ ಅನುಮಾನಿಸುತ್ತಿದ್ದ ನಾಗರಾಜ್, ಪತ್ನಿಯನ್ನು ತವರು ಮನೆಗೂ ಸಹ ಕಳುಹಿಸದೆ, ಮೊಬೈಲ್ ನಲ್ಲಿ ಮಾತನಾಡಲು ಅವಕಾಶ ನೀಡುತ್ತಿರಲಿಲ್ಲ. ಅಲ್ಲದೇ ವರದಕ್ಷಿಣೆ ತಗೆದುಕೊಂಡು ಬಾ ಎಂದು ಪೀಡಿಸುತ್ತಿದ್ದ ಎನ್ನಲಾಗಿದೆ.

    ಪತಿಯ ಕಿರುಕುಳಕ್ಕೆ ಸೊಪ್ಪು ಹಾಕದ ನೇತ್ರಾವತಿ, ತವರು ಮನೆಯಿಂದ ವರದಕ್ಷಿಣೆ ತರಲು ನಿರಾಕರಿಸಿದ್ದರು. ಹೀಗಾಗಿ ನಾಗರಾಜ್ ಬುಧುವಾರ ರಾತ್ರಿ ಪತ್ನಿಗೆ ಹಡಗಲಿಯ ಇಸ್ಲಾಂಪೇಟೆಯ ಮನೆಯಲ್ಲಿ ಹಲ್ಲೆ ಮಾಡಿ ನೇಣು ಬಿಗಿದು ಕೊಲೆ ಮಾಡಿದ್ದಾನೆ. ನಂತರ ಪತ್ನಿಗೆ ಹೃದಯಾಘಾತವಾಗಿದೆ ಎಂದು ಬೀಗರಿಗೆ ಫೋನ್ ಮಾಡಿ ಕರೆಸಿದ್ದಾನೆ. ನೇತ್ರಾವತಿಯ ಪೋಷಕರು ಅಳಿಯನ ಮನೆಗೆ ಬಂದು ನೋಡಿದಾಗ ಮಗಳನ್ನು ನೇಣು ಬಿಗಿದು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

    ಇಷ್ಟಾದ್ರೂ ಆಗಿದ್ದು ಆಗಿ ಹೋಗಿದೆ ಎಂದು ರಾಜಿ ಮಾಡಿಸುವ ಪ್ರಯತ್ನವನ್ನು ನಾಗರಾಜ್ ಮಾಡಿದ್ದ. ರಾಜಿಯಾಗದ ಹಿನ್ನಲೆಯಲ್ಲಿ ನಾಗರಾಜ್ ಇದೀಗ ತೆಲೆಮರೆಸಿಕೊಂಡಿದ್ದಾನೆ.

    ಘಟನೆಯ ಕುರಿತು ಹೂವಿನಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹಳಿಯಾಳ ಪಿಎಸ್‍ಐ ಪತ್ನಿ ಆತ್ಮಹತ್ಯೆಗೆ ಶರಣು

    ಹಳಿಯಾಳ ಪಿಎಸ್‍ಐ ಪತ್ನಿ ಆತ್ಮಹತ್ಯೆಗೆ ಶರಣು

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪಿಎಸ್‍ಐ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

    ಪಿಎಸ್‍ಐ ಮಲ್ಲಪ್ಪ ಎಸ್ ಹೂಗಾರ ಅವರ ಪತ್ನಿ ವಿಜಯಲಕ್ಷ್ಮಿ ಹೂಗಾರ(28) ಆತ್ಮಹತ್ಯೆ ಮಾಡಿಕೊಂಡವರು. ರಾತ್ರಿ ಪಾಳಿ ಮುಗಿಸಿ ಬೆಳಗ್ಗೆ ಪಿಎಸ್‍ಐ ಮನೆಗೆ ವಾಪಾಸ್ಸಾದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಸುಮಾರು 7.30ರ ಸಮಯಕ್ಕೆ ವಿಜಯಲಕ್ಷ್ಮೀ ಆತ್ಮಹತ್ಯೆಗೆ ಶರಣಾಗಿರಬಹುದೆಂದು ತಿಳಿದುಬಂದಿದೆ.

    ಪಿಎಸ್‍ಐ ಮಲ್ಲಪ್ಪ ಎಸ್ ಹೂಗಾರ ಮತ್ತು ವಿಜಯಲಕ್ಷ್ಮಿ ಅವರಿಗೆ 6 ವರ್ಷಗಳ ಹಿಂದೆ ಮದುವೆಯಾಗಿತ್ತು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮಲ್ಲಪ್ಪ ಅವರಿಗೆ ಮಂಗಳವಾರ ನೈಟ್ ಶಿಫ್ಟ್ ಕೆಲಸ ಇತ್ತು. ಹೀಗಾಗಿ ಅವರು ಇಂದು ಬೆಳಗ್ಗೆ ಕೆಲಸ ಮುಗಿಸಿ ಮನೆಗೆ ಬಂದು ನೋಡಿದಾಗ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಪತ್ನಿ ಮನೆಯ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದನನ್ನು ಕಂಡ ಪಿಎಸ್‍ಐ ಕಿರುಚಾಡಿದ್ದಾರೆ. ಪಿಎಸ್‍ಐ ಕೂಗುವ ಧ್ವನಿ ಕೇಳಿ ಪಕ್ಕದ ಕ್ವಾಟ್ರಸ್‍ನಲ್ಲಿದ್ದ ಸಿಪಿಐ ಧಾವಿಸಿದ್ದು, ಕೂಡಲೇ ವಿಜಯಲಕ್ಷ್ಮಿ ಅವರನ್ನು ನೇಣಿನಿಂದ ಬಿಡಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಆದರೆ ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಆತ್ಮಹತ್ಯೆಗೆ ನಿಖರ ಕಾರಣವೇನೆಂದು ತಿಳಿದುಬಂದಿಲ್ಲ. ಸರ್ಕಾರಿ ಆಸ್ಪತ್ರೆಗೆ ವಿಧಾನಪರಿಷತ್ ಸದಸ್ಯ ಎಸ್.ಎಲ್ ಘೋಟ್ನೆಕರ, ಮಾಜಿ ಶಾಸಕ ಸುನೀಲ ಹೆಗಡೆ, ತಹಶೀಲ್ದಾರ ವಿದ್ಯಾಧರ ಗುಳಗುಳೆ ಭೇಟಿ ನೀಡಿದ್ದಾರೆ.

  • ಜೀವಂತ ಗಂಡನ ತಿಥಿ ಮಾಡಿ ಪ್ರಿಯಕರ ಜೊತೆಗೂಡಿ ಕೋಟಿ ಹಣ ಲೂಟಿ- ತುಮಕೂರಿನಲ್ಲಿ ನ್ಯಾಯಕ್ಕಾಗಿ ಪತಿ ಅಲೆದಾಟ

    ಜೀವಂತ ಗಂಡನ ತಿಥಿ ಮಾಡಿ ಪ್ರಿಯಕರ ಜೊತೆಗೂಡಿ ಕೋಟಿ ಹಣ ಲೂಟಿ- ತುಮಕೂರಿನಲ್ಲಿ ನ್ಯಾಯಕ್ಕಾಗಿ ಪತಿ ಅಲೆದಾಟ

    ತುಮಕೂರು: ಆಸ್ತಿಗೋಸ್ಕರ ಗಂಡ ಬದಕಿದ್ರು ಸತ್ತೋಗಿದ್ದಾನೆ ಅಂತ ಊರಿಗೆಲ್ಲಾ ಕರೆದು ತಿಥಿ ಊಟ ಹಾಕಿಸಿರೋ ವಿಲಕ್ಷಣ ಘಟನೆ ತುಮಕೂರಿನಲ್ಲಿ ನಡೆದಿದೆ.

    ಗುಬ್ಬಿ ತಾಲೂಕಿನ ಸಿಎಸ್ ಪುರದ ರಾಮಚಂದ್ರಯ್ಯ 30 ವರ್ಷಗಳ ಹಿಂದೆ ಜಯಮ್ಮ ಅನ್ನೋರನ್ನ ಮದ್ವೆಯಾಗಿದ್ರು. 5 ಕೋಟಿಗೂ ಹೆಚ್ಚು ಬೆಲೆಬಾಳೋ ಆಸ್ತಿ ಹೊಂದಿರೋ ಇವರಿಗೆ ಮದ್ವೆ ವಯಸ್ಸಿಗೆ ಬಂದಿರೋ ಇಬ್ಬರು ಮಕ್ಕಳು ಇದ್ದಾರೆ.

    ಆದ್ರೆ ಜಯಮ್ಮ ಆಸೆ ಮಾತ್ರ ಆನೆ ಗಾತ್ರದ್ದು. ಗಂಡನಿಗೆ ಸ್ವಲ್ಪ ಅನಾರೋಗ್ಯ ಹಿಡಿದಿದ್ದೇ ತಡ ಅವರನ್ನ ಮನೆಯಿಂದ ಹೊರಹಾಕಿ, ತನ್ನ ಪ್ರಿಯಕರ ಹಾಗೂ ತನ್ನ ಸಂಬಂಧಿಕರ ಜೊತೆ ಸೇರಿಕೊಂಡು ಆಸ್ತಿ ಲಪಟಾಯಿಸಲು ಗಂಡನ ಹೆಸರಲ್ಲಿ ಊರಿಗೆಲ್ಲಾ ತಿಥಿ ಊಟ ಹಾಕಿಸಿ ಮಜಾ ಮಾಡ್ತಿದ್ದಾರೆ.

    ಈ ವಿಷಯ ಗೊತ್ತಾಗಿ ಗಂಡ ಊರಿಗೆ ಬಂದ್ರೆ ಅವರನ್ನ ಬೆದರಿಸಿ ಹಲ್ಲು ಮುರಿಯುವ ಹಾಗೆ ಹೊಡೆದು 10 ವರ್ಷ ಇತ್ತ ತಲೆ ಹಾಕದಂತೆ ನೋಡಿಕೊಂಡ್ರು. ಕಡೆಗೆ ಈ ವಿಷಯ ಊರಿಗೆಲ್ಲಾ ಗೊತ್ತಾಗಿ ಜಯಮ್ಮಳಿಗೆ ಜನರೇ ಛೀಮಾರಿ ಹಾಕಿದ್ದಾರೆ.

    ಸದ್ಯ ಗಂಡ ರಾಮಚಂದ್ರ ನಾನು ಬದುಕಿದ್ದೀನಿ ಅಂತ ಪ್ರೂವ್ ಮಾಡೋಕೆ ಅವರಿಗೆ ಶಿಕ್ಷೆ ಕೊಡಿಸೋಕೆ ಹೋರಾಡ್ತಿದ್ದಾರೆ.

  • ಬೇಕೇ ಬೇಕು ಗಂಡ ಬೇಕೆಂದು ಪ್ರತಿಭಟನೆ ಕುಳಿತ ಪತ್ನಿ

    ಬೇಕೇ ಬೇಕು ಗಂಡ ಬೇಕೆಂದು ಪ್ರತಿಭಟನೆ ಕುಳಿತ ಪತ್ನಿ

    ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ಗೃಹಿಣಿಯೊಬ್ಬರು ಗಂಡ ಬೇಕೆಂದು ಪತಿಯ ಮನೆಯ ಮುಂದೆ ಧರಣಿ ಕುಳಿತಿದ್ದಾರೆ.

    ವೇದ ಎಂಬವರೇ ಪತಿ ಮನೆಯ ಮುಂದೆ ಧರಣಿ ಕುಳಿತ ಗೃಹಿಣಿ. ಹೊಳೆಗೆರೆ ಗ್ರಾಮದ ವೇದರನ್ನು ಒಂದೂವರೆ ವರ್ಷದ ಹಿಂದೆ ಶೆಟ್ಟಿಹಳ್ಳಿ ಗ್ರಾಮದ ಮಂಜುನಾಥ್ ಅವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ಕೂಡ ಎರಡೂ ಗ್ರಾಮಸ್ಥರ ಗುರು-ಹಿರಿಯರ ಸಮ್ಮುಖದಲ್ಲಿಯೇ ನಡೆದಿತ್ತು.

    ಆದರೆ ಮದುವೆಯಾದ 3 ತಿಂಗಳ ನಂತರ ಪತಿ ಮಂಜುನಾಥ್ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ತವರು ಮನೆ ಸೇರಿದ್ದರು. ಈ ಸಂಬಂಧ ಹಿರಿಯರ ಸಮ್ಮುಖದಲ್ಲಿ ನ್ಯಾಯ ಪಂಚಾಯ್ತಿ ಮಾಡಿದರೂ ಸಂಸಾರ ಸರಿಯಾಗಿರಲಿಲ್ಲ. ಇನ್ನು ವರದಕ್ಷಿಣೆ ತರಲು ಸಾಧ್ಯವಾಗದೇ ಇದ್ದಲ್ಲಿ ವಿಚ್ಛೇದನ ಪತ್ರಕ್ಕೆ ಸಹಿ ಹಾಕುವಂತೆ ಬೆದರಿಕೆ ಹಾಕಲಾಗುತ್ತಿದೆ. ಈ ಸಂಬಂಧ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ, ನನ್ನ ಪತಿಯೊಂದಿಗೆ ಸಂಸಾರ ನಡೆಸಲು ಅವಕಾಶ ಕಲ್ಪಿಸಬೇಕೆಂದು ದೂರು ದಾಖಲಿಸಿದ್ದೇನೆ. ಇದೂವರೆಗೂ ಪೊಲೀಸರು ಮಾತ್ರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ವೇದ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

    ಸದ್ಯ ನನಗೆ ನನ್ನ ಗಂಡ ಬೇಕೆಂದು ವೇದ ಪತಿ ಮಂಜುನಾಥ್ ಮನೆಯ ಮುಂದೆ ಧರಣಿ ಕುಳಿತಿದ್ದಾರೆ.

  • ಪತ್ನಿಯ ಗುಪ್ತಾಂಗಕ್ಕೆ ಬೆಂಕಿ ಹಚ್ಚಿ ವಿಕೃತಿ ಮೆರೆದ ಪತಿ

    ಪತ್ನಿಯ ಗುಪ್ತಾಂಗಕ್ಕೆ ಬೆಂಕಿ ಹಚ್ಚಿ ವಿಕೃತಿ ಮೆರೆದ ಪತಿ

    ದಾವಣಗೆರೆ: ಪತ್ನಿಯ ಗುಪ್ತಾಂಗಕ್ಕೆ ಬೆಂಕಿ ಹಚ್ಚಿ ಪತಿಯೊಬ್ಬ ವಿಕೃತಿ ಮೆರೆದಿರುವ ಘಟನೆ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ನಂದಿಬೇವೂರು ಗ್ರಾಮದಲ್ಲಿ ನಡೆದಿದೆ.

    ತಿಪ್ಪನಾಯ್ಕ್ ಪತ್ನಿಗೆ ಬೆಂಕಿ ಇಟ್ಟು ವಿಕೃತಿ ಮೆರೆದ ಪತಿ. ಸಂತ್ರಸ್ತೆ ಲಕ್ಷ್ಮಿಬಾಯಿ ತೀವ್ರ ಸುಟ್ಟ ಗಾಯಗಳಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಈ ದಂಪತಿಗೆ ಆರು ವರ್ಷಗಳ ಹಿಂದೆ ಮದುವೆಯಾಗಿದ್ದು, ಒಬ್ಬ ಮಗ ಕೂಡ ಇದ್ದಾನೆ.

    ಆರೋಪಿ ತಿಪ್ಪನಾಯ್ಕ್ ಪ್ರತಿನಿತ್ಯ ಕುಡಿದು ಲಕ್ಷ್ಮಿಬಾಯಿ ಮೇಲೆ ಹಲ್ಲೆ ನಡೆಸುತ್ತಿದ್ದನು. ತಿಪ್ಪನಾಯ್ಕ್ ಅನುಮಾನದ ಬುದ್ಧಿ ಹೊಂದಿದ್ದು, ಪ್ರತಿದಿನ ಪತ್ನಿಯ ಶೀಲ ಶಂಕಿಸಿ ಹೊಡೆಯುತ್ತಿದ್ದ. ಒಂದೆಡರು ಬಾರಿ ಸೀಮೆ ಎಣ್ಣೆ ಸುರಿದು ಕೊಲೆಗೂ ಯತ್ನಿಸಿದ್ದಾನೆ. ಆದರೆ ಆತನ ಸಹೋದರ-ಸಹೋರದನ ಪತ್ನಿ ಬಂದು ಕಾಪಾಡಿದ್ದರು. ಕೊನೆಗೆ ಲಕ್ಷ್ಮಿಬಾಯಿ ಪತಿಯ ಅನುಮಾನ ಬುದ್ಧಿಯಿಂದ ಬೇಸತ್ತು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.

    ವಿಚ್ಛೇದನಕ್ಕೆ ಅರ್ಜಿ ಸಲ್ಲಿದ ಬಳಿಕ ತಿಪ್ಪನಾಯ್ಕ್ ಪತ್ನಿಯ ಮನವೊಲಿಸಿ ಮನೆಗೆ ವಾಪಸ್ ಕರೆತಂದಿದ್ದ. ಆದರೂ ತಿಪ್ಪಾನಾಯ್ಕನಿಗೆ ಅನುಮಾನದ ಬುದ್ಧಿ ಹೋಗಿರಲಿಲ್ಲ. ಸೋಮವಾರ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಲಕ್ಷ್ಮಿಬಾಯಿಯನ್ನು ತಡೆದು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ನಂತರ ಸಹೋದರ ಲಕ್ಷ್ಮಿಬಾಯಿಯನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಈ ಸಂಬಂಧ ಹರಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮೊದಲ ಹೆಂಡತಿಗೆ ಕೈಕೊಟ್ಟು, ಅಪ್ರಾಪ್ತೆಯನ್ನು 2ನೇ ಮದ್ವೆಯಾದ ಕೆಎಸ್‍ಆರ್ ಟಿಸಿ ಕಂಡಕ್ಟರ್

    ಮೊದಲ ಹೆಂಡತಿಗೆ ಕೈಕೊಟ್ಟು, ಅಪ್ರಾಪ್ತೆಯನ್ನು 2ನೇ ಮದ್ವೆಯಾದ ಕೆಎಸ್‍ಆರ್ ಟಿಸಿ ಕಂಡಕ್ಟರ್

    ಚಾಮರಾಜನಗರ: ಪತಿರಾಯ ಎರಡು ಮಕ್ಕಳಾದ ನಂತರ ಮೊದಲ ಹೆಂಡತಿಗೆ ಕೈಕೊಟ್ಟು ಅಪ್ರಾಪ್ತೆಯನ್ನು ಮದುವೆಯಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

    ರವಿಕುಮಾರ್ (45) ಎಂಬಾತನೇ ಆಪ್ರಾಪ್ತ ಬಾಲಕಿಯನ್ನು ಮದುವೆಯಾದ ವ್ಯಕ್ತಿ. ರವಿಕುಮಾರ್ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಕೆಎಸ್‍ಆರ್ ಟಿಸಿ ನಿಗಮದಲ್ಲಿ ನಿರ್ವಾಹಕನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ರವಿಕುಮಾರ್ 2003 ರಲ್ಲಿ ಪದ್ಮಾವತಿ ಎಂಬವರನ್ನು ಮೊದಲ ಮದುವೆಯನ್ನು ಗುರು ಹಿರಿಯರ ಸಮ್ಮುಖದಲ್ಲಿಯೇ ಆಗಿದ್ದನು. ಇಬ್ಬರ ಮದುವೆ ಸಾಕ್ಷಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

    ಆದರೆ ರವಿಕುಮಾರ್ ಇತ್ತೀಚೆಗೆ ಯಾರಿಗೂ ಗೊತ್ತಾಗದಂತೆ 16 ವರ್ಷದ ನಿತ್ಯಶ್ರೀ (ಹೆಸರು ಬದಲಾಯಿಸಿದೆ) ಎಂಬ ಬಾಲಕಿಯನ್ನು ಮದುವೆ ಆಗಿದ್ದಾರೆ. ನಿತ್ಯಶ್ರೀ ಗುಂಡ್ಲುಪೇಟೆ ತಾಲೂಕಿನ ಬೋಗಯ್ಯನ ಹುಂಡಿ ನಿವಾಸಿಯಾಗಿದ್ದು, ನಂಜನಗೂಡಿನ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಾಳೆ.

    ಪತಿಯ ಎರಡನೇ ಮದುವೆ ವಿಷಯ ತಿಳಿದ ಮೊದಲ ಪತ್ನಿ ಪದ್ಮಾವತಿ ಅವರು ಮೈಸೂರು ನಗರ ಕಮಿಷನರ್ ಬಳಿ ದೂರು ಸಲ್ಲಿಸಿದ್ದಾರೆ.

     

     

  • ಪತ್ನಿ ಮೇಲೆ ಬಲಾತ್ಕಾರಕ್ಕೆ ಯತ್ನಿಸಿದ ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೈದ ಗಂಡ

    ಪತ್ನಿ ಮೇಲೆ ಬಲಾತ್ಕಾರಕ್ಕೆ ಯತ್ನಿಸಿದ ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೈದ ಗಂಡ

    ಚಿಕ್ಕಬಳ್ಳಾಪುರ: ವಿವಾಹಿತ ಮಹಿಳೆ ಮೇಲೆ ಬಲಾತ್ಕಾರಕ್ಕೆ ಯತ್ನಿಸಿದ ವ್ಯಕ್ತಿಯ ಮೇಲೆ ಮಹಿಳೆಯ ಗಂಡ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

    ಜಿಲ್ಲೆಯ ಗುಡಿಬಂಡೆ ತಾಲೂಕು ರಾಮಕೃಷ್ಣಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ರಾಮು ಎಂಬಾತನ ಪತ್ನಿಯ ಮೇಲೆ ಈಶ್ವರ್ ಕಣ್ಣು ಹಾಕಿದ್ದ. ನಂತರ ಶುಕ್ರವಾರ ಮಧ್ಯಾಹ್ನ ಬಲತ್ಕಾರಕ್ಕೆ ಯತ್ನಿಸಿದ್ದಾನೆ.

    ಮನೆಗೆ ಬಂದ ನಂತರ ಮಧ್ಯಾಹ್ನ ನಡೆದ ಘಟನೆ ತಿಳಿದ ರಾಮು, ಮಧ್ಯರಾತ್ರಿಯಲ್ಲಿ ತನ್ನ ಬೆಂಬಲಿಗರ ಗುಂಪು ಕಟ್ಟಿಕೊಂಡು ಈಶ್ವರ್ ಮನೆ ಹಾಗೂ ಸಂಬಂಧಿಕರ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾನೆ.

    ಘಟನೆಯಲ್ಲಿ ಈಶ್ವರ್ ಸೇರಿದಂತೆ ನಾಲ್ವರು ಸಂಬಂಧಿಕರು ತೀವ್ರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಈ ಸಂಬಂಧ ರಾಮು ಸೇರಿದಂತೆ 5 ಮಂದಿಯನ್ನ ಬಂಧಿಸಿರುವ ಗುಡಿಬಂಡೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

  • ಕಾಂಗ್ರೆಸ್ ನಿಂದ ಯೋಗೇಶ್‍ಗೌಡ ಪತ್ನಿ ಹೈಜಾಕ್?- ರಾತ್ರೋರಾತ್ರಿ ಕರೆದೊಯ್ದು ಪಕ್ಷ ಸೇರುವಂತೆ ಬೆದರಿಕೆ ಆರೋಪ

    ಕಾಂಗ್ರೆಸ್ ನಿಂದ ಯೋಗೇಶ್‍ಗೌಡ ಪತ್ನಿ ಹೈಜಾಕ್?- ರಾತ್ರೋರಾತ್ರಿ ಕರೆದೊಯ್ದು ಪಕ್ಷ ಸೇರುವಂತೆ ಬೆದರಿಕೆ ಆರೋಪ

    ಹುಬ್ಬಳ್ಳಿ: ಯೋಗೇಶ್‍ಗೌಡ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಯೋಗೇಶ್ ಪತ್ನಿ ಮಲ್ಲಮ್ಮರನ್ನು ಕಾಂಗ್ರೆಸ್ ಹೈಜಾಕ್ ಮಾಡಿದೆ ಎಂಬ ಆರೋಪ ಕೇಳಿಬರುತ್ತಿದೆ.

    ಗುರುವಾರ ರಾತ್ರೋ ರಾತ್ರಿ ಯೋಗೇಶ್ ಗೌಡ ಪತ್ನಿ ಮಲ್ಲಮ್ಮರನ್ನು ಕಾಂಗ್ರೆಸ್ ನಾಯಕರು ಕರೆದೊಯ್ದಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಯ ಸುರೇಶಗೌಡ ಹಾಗೂ ನಾಗರಾಜ ಗೌರಿಯ ಮೂಲಕ ಕಾಂಗ್ರೆಸ್‍ಗೆ ಸೇರ್ಪಡೆಯಾಗುವಂತೆ ಒತ್ತಾಯಿಸಿದ್ದು, ಜೀವ ಬೆದರಿಕೆ ಒಡ್ಡಿ ಕಾಂಗ್ರೆಸ್‍ಗೆ ಸೇರ್ಪಡೆ ಮಾಡಿಕೊಳ್ಳುವ ಯತ್ನ ನಡೆದಿದೆ ಎಂದು ಯೋಗೇಶ್‍ಗೌಡ ಸಹೋದರ ಗುರುನಾಥ ಗೌಡ ಆರೋಪಿಸಿದ್ದಾರೆ.

    ಇಂದು ಬೆಳಗ್ಗೆ ಸಿದ್ದರಾಮಯ್ಯ ಸಮ್ಮುಖದಲ್ಲಿ ಮಲ್ಲಮ್ಮರನ್ನು ಕಾಂಗ್ರೆಸ್‍ಗೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ಆದರೆ ಕಳೆದ 15 ದಿನಗಳಿಂದ ನಿರಂತರವಾಗಿ ಕ್ರಾಂಗೆಸ್‍ಗೆ ಸೇರ್ಪಡೆಯಾಗುವಂತೆ ಒತ್ತಾಯಪಡಿಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.

    ಕಳೆದ ವರ್ಷ ಯೋಗೇಶ್‍ಗೌಡ ಹತ್ಯೆಯಾಗಿದ್ದರು. ಈ ಸಂಬಂಧ ಸಚಿವ ವಿನಯ್ ಕುಲಕರ್ಣಿ ಮೇಲೆ ಕೊಲೆ ಆರೋಪ ಕೇಳಿ ಬಂದಿತ್ತು.

  • ಮೋದಿ ರ‍್ಯಾಲಿಯಲ್ಲಿ ಭಾಗವಹಿಸಿದ್ದಕ್ಕೆ ಪತ್ನಿಗೆ ತಲಾಕ್ ನೀಡಿದ ಪತಿ!

    ಮೋದಿ ರ‍್ಯಾಲಿಯಲ್ಲಿ ಭಾಗವಹಿಸಿದ್ದಕ್ಕೆ ಪತ್ನಿಗೆ ತಲಾಕ್ ನೀಡಿದ ಪತಿ!

    ಲಕ್ನೋ: ಉತ್ತರ ಪ್ರದೇಶದ ಮಹಿಳೆಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿಯಲ್ಲಿ ಭಾಗವಹಿಸಿದಕ್ಕೆ ಪತಿ ತ್ರಿವಳಿ ತಲಾಕ್ ನೀಡಿದ್ದಾನೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.

    ಉತ್ತರ ಪ್ರದೇಶ ಮುಸ್ಲಿಂ ಮಹಿಳೆ ಫಿರಾ ಎಂಬವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ತ್ರಿವಳಿ ತಲಾಕ್ ನಿಷೇಧ ಕ್ರಮವನ್ನ ಬೆಂಬಲಿಸಲು ಮೋದಿ ಅವರು ನಡೆಸಿದ ರ‍್ಯಾಲಿಯಲ್ಲಿ ಭಾಗವಹಿಸಿದ್ದರು.

    ಆದರೆ, ಫಿರಾ ಪತಿ ಡ್ಯಾನಿಶ್ ಸಂಬಂಧಿ ಮಹಿಳೆಯೊಂದಿಗೆ ಆಕ್ರಮ ಸಂಬಂಧ ಹೊಂದಿದ್ದು, ಮಗುವನ್ನು ಸಹ ಹೊಂದಿದ್ದಾರೆ. ಇದರಿಂದ ಆತ ಪ್ರತಿದಿನವೂ ತನಗೆ ತಲಾಕ್ ನೀಡುವಂತೆ ಹಿಂಸೆ ನೀಡುತ್ತಿದ್ದ. ಅಲ್ಲದೇ ನಾನು ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿಯಲ್ಲಿ ಭಾಗವಹಿಸಿ ವಾಪಸ್ ಬಂದ ನಂತರ ಮೋದಿ ನನ್ನನ್ನು ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿ ನನ್ನ ಮಗುವಿನೊಂದಿಗೆ ನಮ್ಮಿಬ್ಬರನ್ನು ಹೊಡೆದು ಮನೆಯಿಂದ ಹೊರ ಹಾಕಿರುವುದಾಗಿ ತಿಳಿಸಿದ್ದಾರೆ.

    ಆದರೆ ಪತ್ನಿಯ ಆರೋಪವನ್ನು ನಿರಾಕರಿಸಿರುವ ಡ್ಯಾನಿಶ್, ತನ್ನ ಪತ್ನಿ ಆಕ್ರಮ ಸಂಬಂಧ ಹೊಂದಿದ್ದಳು. ಆಕೆ ಜಿನ್ಸ್ ಪ್ಯಾಂಟ್ ಧರಿಸುತ್ತಿದ್ದಳು. ಅಲ್ಲದೇ ಆಕೆಯ ಚಿಕ್ಕಪ್ಪ ನನಗೆ ತೊಂದರೆ ನೀಡುತ್ತಿದ್ದ ಮತ್ತು ಹಲ್ಲೆಗೈದಿದ್ದಾನೆ. ನಾನು ತಲಾಕ್ ನೀಡುವುದಕ್ಕೂ ಮೋದಿ ರ‍್ಯಾಲಿಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.

  • ನನ್ನ ಪತ್ನಿ ಅಪಾರ ದೈವ ಭಕ್ತೆ, ದಿನಾಲೂ ದೇವರ ಪೂಜೆ ಮಾಡ್ತಾಳೆ: ಸಿಎಂ

    ನನ್ನ ಪತ್ನಿ ಅಪಾರ ದೈವ ಭಕ್ತೆ, ದಿನಾಲೂ ದೇವರ ಪೂಜೆ ಮಾಡ್ತಾಳೆ: ಸಿಎಂ

    ತುಮಕೂರು: ನನ್ನ ಪತ್ನಿ ಅಪಾರ ದೈವ ಭಕ್ತೆ. ದಿನಾಲೂ ದೇವರ ಪೂಜೆ ಮಾಡ್ತಾಳೆ. ಆ ಪೂಜೆಯ ಫಲವಾಗಿಯೇ ನನಗೆ ಎಲ್ಲಾ ಸ್ಥಾನ ಮಾನ ಸಿಕ್ಕಿದ್ದೆ ಅನ್ನುತ್ತಾಳೆ. ಅದು ನಿಜವೋ ಸುಳ್ಳೋ ಗೊತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ತುಮಕೂರು ಜಿಲ್ಲೆ ಮಧುಗಿರಿಯಲ್ಲಿ ನಡೆದ ವಿವಿಧ ಕಾಮಗಾರಿಗಳ ಚಾಲನೆ ಹಾಗೂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರ್ತಾಳೆ. ಹಾಗಾಗಿಯೆ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ನವ ಜೋಡಿಗಳಿಗೆ ಕಿವಿಮಾತು ಹೇಳಿದ್ರು.

    ರಾಜಕಾರಣಿಗಳು, ದೊಡ್ಡ-ದೊಡ್ಡ ಶ್ರೀಮಂತರು ಅರಮನೆಯಲ್ಲಿ ಮದುವೆ ಮಾಡಿಕೊಳ್ತಾರೆ. ಆದ್ರೆ ನಾನು ನನ್ನ ಸಹೋದನ ಮಕ್ಕಳ ಮದುವೆಯನ್ನು ಸರಳವಾಗಿ ಹಳ್ಳಿಯಲ್ಲೆ ಮಾಡಿದ್ದೇನೆ. ಹೆಚ್ಚಿನದಾಗಿ ಯಾರಿಗೂ ಆಮಂತ್ರಣವನ್ನೂ ನೀಡಿಲ್ಲ ಎಂದು ತಮ್ಮ ಸರಳತೆಯನ್ನು ಸಮರ್ಥಿಸಿಕೊಂಡರು. ಇದನ್ನೂ ಓದಿ: ಬಹಿರಂಗವಾಗಿ ಪತ್ನಿ ಮೇಲೆ ಪ್ರೀತಿ ತೋರಿಸಿದ ಸಿಎಂ!

    ಮಾಜಿ ಪ್ರಧಾನಿಗಳೇ ನನ್ನ ನೇತೃತ್ವದ ಸರ್ಕಾರ ಭ್ರಷ್ಟಾಚಾರ ಮುಕ್ತ ಸರ್ಕಾರ ಎಂದು ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಹೀಗಿರುವಾಗ ಬಿಜೆಪಿಯವರು ನಮ್ಮ ಎಲ್ಲಾ ಒಳ್ಳೆಯ ಕೆಲಸದಲ್ಲೂ ಹುಳುಕು ಹುಡುಕುತ್ತಾರೆ. ಅಲ್ಲದೆ ಪೂರ್ವ ದಿಕ್ಕಿನಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ, ಮುಂದಿನ ಬಾರಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದು ಅಷ್ಟೆ ಸತ್ಯ ಎಂದು ಹೇಳುವ ಮೂಲಕ ಅತಿಯಾದ ಆತ್ಮವಿಶ್ವಾಸ ತೋರಿದ್ದಾರೆ.