Tag: ಪತ್ನಿ

  • ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪತ್ನಿಯನ್ನು ಬಿಗಿದಪ್ಪಿದ ಪತಿ!

    ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪತ್ನಿಯನ್ನು ಬಿಗಿದಪ್ಪಿದ ಪತಿ!

    ಚಿಕ್ಕಬಳ್ಳಾಪುರ: ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಪತ್ನಿ ಆತ್ಮಹತ್ಯೆಗೆ ಯತ್ನಿಸಿದ್ದು, ಬೆಂಕಿಯಿಂದ ಒದ್ದಾಡುತ್ತಿದ್ದ ಪತ್ನಿಯನ್ನು ಬಿಗಿದಪ್ಪಿ ಹಿಡಿದ ಕಾರಣ ಪತಿಯೂ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಪಟ್ಟಣದಲ್ಲಿ ನಡೆದಿದೆ.

    ನಗರದ 35 ವರ್ಷದ ಚಂದ್ರಕಲಾ ಆತ್ಮಹತ್ಯೆಗೆ ಯತ್ನಿಸಿದ್ದು, ಪತಿ ಶಂಕರ್ ಪತ್ನಿಯನ್ನ ರಕ್ಷಿಸಲು ಮುಂದಾಗಿದ್ದಾರೆ. ಘಟನೆಯಲ್ಲಿ ಚಂದ್ರಕಲಾ ದೇಹದ ಶೇ.80 ರಷ್ಟು ಹಾಗೂ ಪತಿ ಶಂಕರ್ ಶೇ.30 ರಷ್ಟು ಭಾಗ ಸುಟ್ಟು ಹೋಗಿದ್ದು, ಬಾಗೇಪಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಸದ್ಯ ಪ್ರಾಥಮಿಕ ಚಿಕಿತ್ಸೆ ನಂತರ ಇಬ್ಬರನ್ನ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾವ ಕಾರಣಕ್ಕೆ ಪತ್ನಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ.

  • ಪತ್ನಿ ಜೊತೆ ಜಗಳವಾಡಿ ಬೆಂಕಿ ಹಚ್ಚಿಕೊಂಡು ಪೊಲೀಸ್ ಠಾಣೆಗೆ ಓಡಿ ಬಂದ ಪತಿ

    ಪತ್ನಿ ಜೊತೆ ಜಗಳವಾಡಿ ಬೆಂಕಿ ಹಚ್ಚಿಕೊಂಡು ಪೊಲೀಸ್ ಠಾಣೆಗೆ ಓಡಿ ಬಂದ ಪತಿ

    ಚಿಕ್ಕಬಳ್ಳಾಪುರ: ಪತ್ನಿಯ ಜೊತೆ ಜಗಳವಾಡಿದ್ದ ಪತಿಯೊಬ್ಬ ಮೈ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಪೊಲೀಸ್ ಠಾಣೆಗೆ ಓಡಿ ಬಂದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಗ್ರಾಮದಲ್ಲಿ ನಡೆದಿದೆ.

    ನಗರ್ಲು ಗ್ರಾಮದ ರಘು ಎಂಬಾತ ಮದ್ಯದ ದಾಸನಾಗಿದ್ದು, ಬುಧವಾರ ರಾತ್ರಿ ಪತ್ನಿ ಸುಜಾತ ತಾಯಿ ವೆಂಕಟಮ್ಮಳ ಮೇಲೆ ಹಲ್ಲೆ ಮಾಡಿ ಜಗಳ ಮಾಡಿದ್ದಾನೆ. ಇಂದು ಬೆಳಗ್ಗೆ ಪಾತಪಾಳ್ಯ ಪೊಲೀಸ್ ಠಾಣೆ ಬಳಿ ಇರುವ ತೋಪಿನಲ್ಲಿ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ.

    ಬೆಂಕಿ ಹಚ್ಚಿಕೊಂಡ ರಘು ಪಾತಪಾಳ್ಯ ಪೊಲೀಸ್ ಠಾಣೆಗೆ ಓಡಿ ಬಂದು ಠಾಣೆಯ ಎದುರು ಕಾಪಾಡಿ ಕಾಪಾಡಿ ಎಂದು ಹೇಳಿ ಕುಸಿದುಬಿದ್ದಿದ್ದಾನೆ. ಕೂಡಲೇ ರಕ್ಷಣೆಗೆ ಧಾವಿಸಿದ ಪೊಲೀಸರು ಬೆಂಕಿ ನಂದಿಸಿ, ಗಾಯಾಳು ರಘುನನ್ನು ಅಂಬುಲೆನ್ಸ್ ಮೂಲಕ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.

    ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

  • ಪತ್ನಿ ಶೀಲ ಶಂಕಿಸಿ ಜಗಳವಾಡಿದ ಪತಿಗೆ ಬೆಂಕಿ ಹಚ್ಚಿದ ಪತ್ನಿ, ಮಕ್ಕಳು

    ಪತ್ನಿ ಶೀಲ ಶಂಕಿಸಿ ಜಗಳವಾಡಿದ ಪತಿಗೆ ಬೆಂಕಿ ಹಚ್ಚಿದ ಪತ್ನಿ, ಮಕ್ಕಳು

    ಕೊಪ್ಪಳ: ಪತ್ನಿ ಶೀಲ ಶಂಕಿಸಿ ಜಗಳವಾಡಿದ ಪತಿಗೆ ಆತನ ಪತ್ನಿ ಹಾಗೂ ಮಕ್ಕಳು ಸೇರಿ ಬೆಂಕಿ ಹಚ್ಚಿರೋ ಘಟನೆ ಕೊಪ್ಪಳ ದಲ್ಲಿ ನಡೆದಿದೆ.

    ಯಲಬುರ್ಗಾ ತಾಲೂಕಿನ ಹರಿಶಂಕರಬಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪ್ರಭಯ್ಯ ಹಿರೇಮಠ್ ಎಂಬ ವ್ಯಕ್ತಿಗೆ ಪತ್ನಿ ದಾಕ್ಷಾಯಣಿ, ಮಕ್ಕಳಾದ ಕುಮಾರಸ್ವಾಮಿ, ವೀರಯ್ಯ ಹಾಗೂ ತಮ್ಮನ ಪತ್ನಿ ಸುಮಿತ್ರಾ ಎನ್ನುವವರು ಬೆಂಕಿ ಹಚ್ಚಿದ್ದಾರೆ. ಅದೃಷ್ಟವಶಾತ್ ಪ್ರಭಯ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿ ಹಚ್ಚಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

    ಪ್ರಭಯ್ಯ ಮೂಲತಃ ಗದಗ ಜಿಲ್ಲೆ ರೋಣ ತಾಲೂಕಿನ ನರೇಗಲ್ ನಿವಾಸಿ. ಕಳೆದ ಐದು ವರ್ಷಗಳಿಂದ ಹರಿಶಂಕರಬಂಡಿಯಲ್ಲಿ ವಾಸವಾಗಿದ್ದರು. ಇಂದು ಮುಂಜಾನೆ ಹೆಂಡತಿಯೊಂದಿಗೆ ಜಗಳ ಮಾಡಿಕೊಂಡಿದ್ದು, ಇದರಿಂದ ರೊಚ್ಚಿಗೆದ್ದ ಪತ್ನಿ ಹಾಗೂ ಮಕ್ಕಳು ಪ್ರಭಯ್ಯನಿಗೆ ಬೆಂಕಿ ಹಚ್ಚಿದ್ದರು.

    ಸದ್ಯ ಪ್ರಭಯ್ಯನಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಕುಕನೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

                                                                             ವೀರಯ್ಯ
                                                                          ಕುಮಾರಸ್ವಾಮಿ
                                                                              ದಾಕ್ಷಾಯಣಿ
                                                                            ಸುಮಿತ್ರಾ

  • ಅತ್ತ ಗಂಡ ಜಪಾನ್‍ಗೆ ಹೋದ, ಇತ್ತ ಹೆಂಡ್ತಿ ಸೂಸೈಡ್ ಮಾಡ್ಕೊಂಡ್ಳು

    ಅತ್ತ ಗಂಡ ಜಪಾನ್‍ಗೆ ಹೋದ, ಇತ್ತ ಹೆಂಡ್ತಿ ಸೂಸೈಡ್ ಮಾಡ್ಕೊಂಡ್ಳು

    ಬೆಂಗಳೂರು: ಅತ್ತೆ-ಮಾವನ ಕಿರುಕುಳಕ್ಕೆ ಬೇಸತ್ತು ಒಂದೂವರೆ ವರ್ಷದ ಹಿಂದೆಯಷ್ಟೇ ಮದುವೆ ಆಗಿದ್ದ ಮಹಿಳೆ ಆತ್ಮಹತ್ಯೆ ಮಾಡ್ಕೊಂಡಿದ್ದಾರೆ.

    ಬೆಂಗಳೂರಿನ ಆರ್ ಆರ್ ನಗರದಲ್ಲಿರುವ ಟೆಂಪಲ್ ಬೆಲ್ಸ್ ಪ್ರೀಮಿಯರ್ ಅಪಾರ್ಟ್ ಮೆಂಟ್‍ನಲ್ಲಿ 24 ವರ್ಷದ ನಿರ್ಮಲ ಎಂಬವರು ನೇಣಿಗೆ ಶರಣಾಗಿದ್ದಾರೆ. ಒಂದೂವರೆ ವರ್ಷದ ಹಿಂದೆಯಷ್ಟೇ ಮೈಸೂರಿನ ನಿರ್ಮಲ ಬೆಂಗಳೂರಿನ ವಿಶ್ವನಾಥ್ ಎಂಬವರನ್ನು ಮದುವೆಯಾಗಿದ್ರು. ಜಪಾನಲ್ಲಿ ಕೆಲಸ ಮಾಡ್ತಿರೋ ವಿಶ್ವನಾಥ್ ಆಗಾಗ ಬೆಂಗಳೂರಿಗೆ ಬಂದು ಹೋಗುತ್ತಿದ್ದರು.

    ವಿಶ್ವನಾಥ್ ಎರಡು ದಿನಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದು ಜಪಾನ್‍ಗೆ ವಾಪಸ್ಸಾಗಿದ್ದರು. ಡೆತ್‍ನೋಟ್‍ನಲ್ಲಿ ನನ್ನ ಸಾವಿಗೆ ಅತ್ತೆ ಪ್ರೇಮ, ಮಾವ ನಾಗರಾಜ್ ಕಿರುಕುಳವೇ ಕಾರಣ ಎಂದು ನಿರ್ಮಲ ಬರೆದಿಟ್ಟಿದ್ದಾರೆ. ಆದರೆ ಪೊಲೀಸರು ಬರೋದಕ್ಕೂ ಮೊದಲೇ ಡೆತ್‍ನೋಟ್ ಹರಿದು ಕಸದ ಬುಟ್ಟಿಗೆ ಎಸೆಯಲಾಗಿದೆ. ಹರಿದು ಹೋಗಿದ್ದ ಡೆತ್ ನೋಟ್ ಕಲೆಹಾಕಿರೋ ಆರ್‍ಆರ್ ನಗರ ಪೊಲೀಸರು ಅತ್ತೆ-ಮಾವ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

  • ಅಡುಗೆ ಮಾಡಿಲ್ಲವೆಂದು ಕೋಲು, ಕಲ್ಲಿನಿಂದ ಹೊಡೆದು ಪತ್ನಿಯನ್ನ ಬರ್ಬರವಾಗಿ ಕೊಂದ

    ಅಡುಗೆ ಮಾಡಿಲ್ಲವೆಂದು ಕೋಲು, ಕಲ್ಲಿನಿಂದ ಹೊಡೆದು ಪತ್ನಿಯನ್ನ ಬರ್ಬರವಾಗಿ ಕೊಂದ

    ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಪತಿರಾಯನೊಬ್ಬ ಪತ್ನಿಯನ್ನು ಬರ್ಬರವಾಗಿ ಕೊಲೆಗೈದ ಘಟನೆ ನೆಲಮಂಗಲ ತಾಲೂಕಿನ ಸೂಲಕುಂಟೆ ಗ್ರಾಮದಲ್ಲಿ ನಡೆದಿದೆ.

    ಲಕ್ಷ್ಮೀ ನರಸಮ್ಮ(40) ಮೃತ ದುರ್ದೈವಿ. ಕುಡಿದ ಅಮಲಿನಲ್ಲಿ ಪತಿ ವೆಂಕಟೇಶ್ ಈ ಕೃತ್ಯ ಎಸಗಿದ್ದಾನೆಂದು ಹೇಳಲಾಗುತ್ತಿದೆ. ಕುಡಿದ ಮತ್ತಿನಲ್ಲಿದ್ದ ಪತಿ ವೆಂಕಟೇಶ್ ಮನೆಯಲ್ಲಿ ಅಡುಗೆ ಮಾಡಿಲ್ಲವೆಂದು ಸಿಟ್ಟಾಗಿ ಕೋಲಿನಿಂದ ಮತ್ತು ಕಲ್ಲಿನಿಂದ ಲಕ್ಷ್ಮೀ ನರಸಮ್ಮಗೆ ಹೊಡೆದು ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ನರಸಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಆರೋಪಿ ಪತಿ ವೆಂಕಟೇಶ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಲ್ಲಿನಿಂದ ಹೊಡೆದು ಗಂಡನನ್ನು ಕೊಂದ ಪತ್ನಿ ಅರೆಸ್ಟ್

    ಕಲ್ಲಿನಿಂದ ಹೊಡೆದು ಗಂಡನನ್ನು ಕೊಂದ ಪತ್ನಿ ಅರೆಸ್ಟ್

    ಜಮ್ಮು: 5 ಮಕ್ಕಳ ತಾಯಿಯೊಬ್ಬಳು ತನ್ನ ಗಂಡನೊಂದಿಗೆ ಜಗಳವಾಡಿ ಬಳಿಕ ಆತನ ತಲೆಗೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದು, ಆರೋಪಿ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಮೊಹಮ್ಮದ್ ಖಾಸಿಮ್(43) ಕೊಲೆಯಾದ ವ್ಯಕ್ತಿ. ಜನವರಿ 1ರಂದು ಚಸ್ಸಾನಾ ಪ್ರದೇಶದ ತಲ್ಯಾರ್‍ನಲ್ಲಿ ಖಾಸಿಮ್ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರು ಪತ್ನಿ ಸಬ್ಝಾ ಬೇಗಂಳನ್ನು ಬಂಧಿಸಿದ್ದಾರೆ.

    ವಿಚಾರಣೆ ವೇಳೆ ಆರೋಪಿ ಪತ್ನಿ ಗಂಡನನ್ನು ಕೊಲೆ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾಳೆ. ಆಗಾಗ ಮನೆಯಲ್ಲಿ ಜಗಳವಾಗ್ತಿತ್ತು ಎಂದು ಹೇಳಿದ್ದಾಳೆ. ಕೊಲೆ ನಡೆದ ದಿನವೂ ಇಬ್ಬರ ಮಧ್ಯೆ ಜಗಳವಾಗಿದ್ದು, ಮನೆಯ ಹೊರಗಡೆ ಸಬ್ಝಾ ಕಲ್ಲು ತೆಗೆದುಕೊಂಡು ಗಂಡನ ತಲೆಗೆ ಹಲವು ಬಾರಿ ಹೊಡೆದಿದ್ದಾಳೆ. ಪರಿಣಾಮ ಖಾಸಿಮ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ಮಲಗಿದ್ದಾಗ ಹೊದಿಕೆಯಿಂದ್ಲೇ ಕುತ್ತಿಗೆ ಬಿಗಿದು ಹೆತ್ತ ತಾಯಿಯನ್ನೇ ಕೊಲೆಗೈದ!

    ಮಲಗಿದ್ದಾಗ ಹೊದಿಕೆಯಿಂದ್ಲೇ ಕುತ್ತಿಗೆ ಬಿಗಿದು ಹೆತ್ತ ತಾಯಿಯನ್ನೇ ಕೊಲೆಗೈದ!

    ಚಿತ್ತೂರು: ಮದ್ಯಪಾನಕ್ಕೆ ಹಣ ನೀಡಲು ನಿರಾಕರಿಸಿದ ತಾಯಿಯನ್ನೇ 29 ವರ್ಷದ ಯುವಕನೊಬ್ಬ ಕೊಲೆಗೈದ ಆಘಾತಕಾರಿ ಘಟನೆಯೊಂದು ಆಂಧ್ರಪ್ರದೇಶದಲ್ಲಿ ನಡೆದಿದೆ.

    ಈ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಶಿವಿನಿ ಕುಪ್ಪಂ ಎಂಬಲ್ಲಿ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಾಯಿ ಬೆಲ್ಲಮ್ಮ(50) ತನ್ನ ಮಗ ಜೆ ಸುಬ್ರಹ್ಮಣ್ಯಂ ಕೈಯಿಂದ್ಲೇ ಕೊಲೆಯಾಗಿದ್ದಾರೆ.

    ಏನಿದು ಘಟನೆ?: ಆರೋಪಿ ಸುಬ್ರಹ್ಮಣ್ಯಂಗೆ ಕುಡಿತದ ಚಟವಿತ್ತು. ಹೀಗಾಗಿ ಪತ್ನಿ ದೂರವಾದ ಬಳಿಕ ಈತ ಪಕ್ಕದ ಗ್ರಾಮದಲ್ಲಿ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದನು. ಪ್ರತೀ ದಿನ ಮದ್ಯಪಾನ ಮಾಡಲು ಹಣ ಕೊಡುವಂತೆ ತಾಯಿಯನ್ನು ಪೀಡಿಸುತ್ತಿದ್ದನು.

    ಅಂತೆಯೇ ಸೋಮವಾರವೂ ಕೂಡ ತಾಯಿಯ ಬಳಿ ಬಂದು ಹಣ ಕೇಳಿದ್ದಾನೆ. ಆದ್ರೆ ತಾಯಿ ಮಾತ್ರ ಆತನಿಗೆ ಹಣ ನೀಡಲು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡಿದ್ದ ಮಗ ಸುಬ್ರಹ್ಮಣ್ಯಂ ತಾಯಿ ಮಲಗಿದ್ದ ಸಂದರ್ಭದಲ್ಲಿ ಹೊದಿಕೆಯನ್ನು ಆಕೆಯ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಮಂಗಳವಾರ ಬೆಳಗ್ಗೆ ತಾಯಿಯನ್ನು ನೋಡಲೆಂದು ಬೆಲ್ಲಮ್ಮ ಮಗಳು ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಮೃತ ಬೆಲ್ಲಮ್ಮ ಅವರಿಗೆ ಒಂದು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ಇವರಲ್ಲಿ 1.5 ಎಕರೆ ಜಮೀನಿದೆ. ಕಳೆದ ತಿಂಗಳಷ್ಟೇ ಆಟೋ ರಿಕ್ಷಾ ಖರೀದಿಸಲು ತಾಯಿ ದೊಡ್ಡ ಮಗನಿಗೆ 50,000 ನೀಡಿದ್ದರು. ಇದರಿಂದ ಕೋಪಗೊಂಡಿದ್ದ ಎರಡನೇ ಮಗ ಸುಬ್ರಹ್ಮಣ್ಯಂ ತನಗೂ ಹಣ ಕೊಡುವಂತೆ ಹಾಗೂ ಆಸ್ತಿಯನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಒತ್ತಡ ಹೇರಿದ್ದನು ಎಂಬುದಾಗಿ ವರದಿಯಾಗಿದೆ.

    ಸದ್ಯ ತಾಯಿ ಕೊಲೆ ಪ್ರಕರಣ ಸಂಬಂಧ ಮಗಳು ಸ್ಥಳೀಯ ಪೊಲೀಸ್ ಠಾಣೆಯನ್ನು ದೂರು ದಾಖಲಿಸಿದ್ದಾರೆ. ಮೃತ ಬೆಲ್ಲಮ್ಮ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.

  • ಬೇರೆ ಮನೆ ಮಾಡುವಂತೆ ಮಡದಿಯಿಂದ ಒತ್ತಾಯ- ಸೆಲ್ಫಿ ವಿಡಿಯೋ ಮಾಡಿಟ್ಟು ಪತಿ ಸೂಸೈಡ್

    ಬೇರೆ ಮನೆ ಮಾಡುವಂತೆ ಮಡದಿಯಿಂದ ಒತ್ತಾಯ- ಸೆಲ್ಫಿ ವಿಡಿಯೋ ಮಾಡಿಟ್ಟು ಪತಿ ಸೂಸೈಡ್

    ಬೆಂಗಳೂರು: ಪತ್ನಿ, ಅತ್ತೆ, ಮಾವ ಮತ್ತು ಪೊಲೀಸರ ಕಿರುಕುಳ ತಾಳಲಾರದೇ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.

    ಬೆಂಗಳೂರಿನ ಶ್ರೀರಾಮಪುರದ ನಿವಾಸಿ ಭರತ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈ ಹಿಂದೆ ಭರತ್ ತನ್ನ ಪತ್ನಿ ಮಂಜೇಶ್ವರಿಗೆ ಕೆಲಸಕ್ಕೆ ಹೋಗಬೇಡ, ಮನೆಯಲ್ಲೇ ಇದ್ದು ತಾಯಿ ಮತ್ತು ಮಕ್ಕಳನ್ನು ನೋಡಿಕೋ ಎಂದಿದ್ದರಂತೆ. ಇಷ್ಟಕ್ಕೇ ರಂಪಾಟ ಮಾಡಿದ ಮಂಜೇಶ್ವರಿ, ಅತ್ತೆ ಕಲಾ, ಮಾವ ಅಶೋಕ್ ಬೇರೆ ಮನೆ ಮಾಡುವಂತೆ ರಂಪಾಟ ಮಾಡಿದರು.

    ಇದಕ್ಕೆ ಪತಿ ಭರತ್ ಒಪ್ಪದಿದ್ದಾಗ ರಾಜಾಜಿನಗರ ಪೊಲೀಸರಿಗೆ ದೂರು ನೀಡಿ, ಲಂಚ ನೀಡಿದ್ದಾರೆ. ಅಂತೆಯೇ ಪೊಲೀಸರು ಭರತ್ ಗೆ ಥಳಿಸಿ, ಹೆಂಡತಿ ಹೇಳಿದ ಹಾಗೆ ಕೇಳು ಇಲ್ಲ ಅಂದರೆ ಅಷ್ಟೇ ಎಂದು ಎಚ್ಚರಿಸಿ, ಕೊನೆಗೆ ಇಬ್ಬರನ್ನೂ ಬೇರೆ ಮಾಡಿ ಕಳುಹಿಸಿದ್ದಾರೆ.

    ಆದರೆ 1 ವರ್ಷದ ಮಗನನ್ನು ಬಿಟ್ಟಿರಲು ಸಾಧ್ಯವಾಗದೇ ಭರತ್ ಸೆಲ್ಫಿ ವಿಡಿಯೋ ಮಾಡಿಟ್ಟು, ಆತ್ಮಹತ್ಯೆಗೆ ಶರಣಾಗಿದ್ದಾರೆ

    ವಿಡಿಯೋದಲ್ಲೇನಿದೆ?: ಪತ್ನಿ ಹಾಗೂ ನನ್ನ ಅತ್ತೆ ಮಾವ ನನಗೆ ತುಂಬಾ ಕಷ್ಟ ಕೊಟ್ಟಿದ್ದಾರೆ. ಅಲ್ಲದೇ ನನ್ನಿಂದ ನನ್ನ ಮಗುವನ್ನು ದೂರ ಮಾಡಿದ್ದಾರೆ. ಆದ್ರೆ ಮಗೂಗೆ ನಾನಿಲ್ಲದೇ ಇರಕ್ಕಾಗಲ್ಲ. ಕಳೆದ ವಾರ ನಾನು ಶಬರಿಮಲೆಗೆ ಹೋಗಿದ್ದೆ. ಆ ವೇಳೆ ನನ್ನ ಬಿಟ್ಟಿರಲಾರದೆ ಅವನಿಗೆ ಜ್ವರನೇ ಬಂದಿತ್ತು. ಅವನಿಗೆ ನನ್ನ ಬಿಟ್ಟಿರಕ್ಕಾಗಲ್ಲ. ಆದ್ರೆ ಈ ಪೊಲೀಸರು ನನ್ನಿಂದ ನನ್ನ ಮಗನನ್ನು ದೂರ ಮಾಡಿದ್ರು. ಯಾವ ಜಾಗದಲ್ಲಿ ಗಂಡಸರಿಗೆ ಬೆಲೆ ಇಲ್ಲವೋ, ಆತನಿಗೆ ಸಪೋರ್ಟ್ ಇಲ್ಲವೋ ಹಾಗೂ ಎಲ್ಲಾ ಹೆಂಗಸರಿಗೇ ಸಪೋರ್ಟ್ ಮಾಡ್ತಾರೋ.. ನನ್ನ ತಾಯಿಗೆ ಸ್ಟ್ರೋಕ್ ಆಗಿದೆ. ಹೀಗಾಗಿ ಅವರನ್ನು ಚೆನ್ನಾಗಿ ನೋಡಿಕೊಳ್ಳು ಅಂತ ಹೇಳಿದ್ದು ತಪ್ಪಾ?. ನಾನು ಅವರನ್ನು ನೋಡಿಕೊಳ್ಳಲ್ಲ. ನನ್ನ ಬೇರೆ ಮನೆ ಮಾಡಿ ಕರೆದುಕೊಂಡು ಹೋಗು ಅಂತಾ ಪತ್ನಿ ಹೇಳಿದ್ಳು. ತಂದೆ ತಾಯಿನೂ ನನ್ನ ಬಳಿ ಜಗಳ ಆಡಿದ್ರು ಅಂತ ವಿಡಿಯೋ ಮೂಲಕ ತನ್ನ ದುಃಖ ತೋಡಿಕೊಂಡಿದ್ದಾರೆ.

  • ಜಗಳವಾಡಿ ಮನೆ ಬಿಟ್ಟು ಹೋಗ್ತಿದ್ದ ಹೆಂಡ್ತಿಗೆ ಚಿನ್ನದ ಒಡವೆ ಕೊಡು ಎಂದ ಪತಿ- ನಡುಬೀದಿಯಲ್ಲಿ ರಂಪಾಟ

    ಜಗಳವಾಡಿ ಮನೆ ಬಿಟ್ಟು ಹೋಗ್ತಿದ್ದ ಹೆಂಡ್ತಿಗೆ ಚಿನ್ನದ ಒಡವೆ ಕೊಡು ಎಂದ ಪತಿ- ನಡುಬೀದಿಯಲ್ಲಿ ರಂಪಾಟ

    ತುಮಕೂರು: ಒಡವೆ ವಿಚಾರವಾಗಿ ನಡು ಬೀಡಿಯಲ್ಲಿ ಗಂಡ-ಹೆಂಡತಿ ಜಗಳವಾಡಿರುವ ಘಟನೆ ಜಿಲ್ಲೆಯ ಸರಸ್ವತಿಪುರಂನಲ್ಲಿ ನಡೆದಿದೆ.

    ತುಮಕೂರು ನಗರದ ಸರಸ್ವತಿಪುರಂ ನಿವಾಸಿಗಳಾದ ವಿನೋದಾ, ರಾಜು ಬೀದಿಯಲ್ಲಿ ಜಗಳ ಮಾಡಿಕೊಂಡ ದಂಪತಿ. ವಿನೋದಾ ಪತಿಯೊಂದಿಗೆ ಜಗಳವಾಡಿಕೊಂಡು ಮನೆ ಬಿಟ್ಟು ಹೋಗುತ್ತಿದ್ದು, ಈ ಸಂದರ್ಭದಲ್ಲಿ ವಿನೋದಾ ಆಟೋ ಹತ್ತಿ ಕುಳಿತ್ತಿದ್ದಾರೆ. ಆದರೆ ಪತ್ನಿಯನ್ನ ತಡೆಯಲು ರಾಜು ಮುಂದಾಗಿದ್ದು, ತಾನು ಆಟೋ ಹತ್ತಿ ಕುಳಿತ್ತಿದ್ದಾರೆ.

    ಈ ವೇಳೆ ರಾಜು ವಿನೋದಾ ಧರಿಸಿದ್ದ ಚಿನ್ನದ ಒಡವೆಗಳನ್ನು ಬಿಚ್ಚಿ ಕೊಡುವಂತೆ ಕೇಳಿದ್ದಾರೆ. ಇದರಿಂದ ಕುಪಿತಗೊಂಡ ವಿನೋದಾ ನಡು ಬೀದಿ ಎಂದು ನೋಡದೇ ಪತಿಗೆ ಮನಸೋ ಇಚ್ಛೆ ಬೈದು, ಥಳಿಸಿದ್ದಾರೆ. ಕೊನೆಗೆ ತಾನೇ ಆಟೋದಿಂದ ಇಳಿದು ವಿನೋದಾ ಹೊರಟಿದ್ದಾರೆ. ಅದೇ ಆಟೋ ಹತ್ತಿ ಪತಿ ಅಲ್ಲಿಂದ ಹೋಗಿದ್ದಾರೆ. ಈ ಗಂಡ ಹೆಂಡತಿ ಜಗಳವನ್ನು ಸುತ್ತಾಮುತ್ತಾ ಜನ ನೋಡಿಕೊಂಡು ಸುಮ್ಮನಾಗಿದ್ದಾರೆ.

  • ಇಬ್ಬರು ಮಕ್ಕಳಿಗೆ ವಿಷವುಣಿಸಿ ತಾನೂ ವಿಷ ಸೇವಿಸಿದ ತಾಯಿ -ಮಕ್ಕಳ ಸಾವು

    ಇಬ್ಬರು ಮಕ್ಕಳಿಗೆ ವಿಷವುಣಿಸಿ ತಾನೂ ವಿಷ ಸೇವಿಸಿದ ತಾಯಿ -ಮಕ್ಕಳ ಸಾವು

    ತುಮಕೂರು: ಮದ್ಯವ್ಯಸನಿ ಪತಿಯ ಕಿರುಕುಳಕ್ಕೆ ಬೇಸತ್ತ ಪತ್ನಿ ತನ್ನಿಬ್ಬರು ಮಕ್ಕಳಿಗೆ ವಿಷ ಉಣಿಸಿ ತಾನೂ ವಿಷ ಸೇವಿಸಿದ ಘಟನೆ ತುಮಕೂರು ಜಿಲ್ಲೆ ಶಿರಾದ ತಾವರೆಕೆರೆಯಲ್ಲಿ ನಡೆದಿದೆ.

    ಘಟನೆಯಲ್ಲಿ 9 ವರ್ಷದ ವಿದ್ಯಾ, 5 ವರ್ಷದ ಭವ್ಯಾ ಮೃತಪಟ್ಟಿದ್ದಾರೆ. ತಾಯಿ ಸುಹಾಸಿನಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಪತಿ ನಾಗೇಶ್ ಮದ್ಯವ್ಯಸನಿಯಾಗಿದ್ದು, ತೀವ್ರ ಕಿರುಕುಳ ನೀಡುತಿದ್ದ ಎನ್ನಲಾಗಿದೆ.

    ನಾಗೇಶ್ ದಂಪತಿಗೆ ಮೂವರು ಹೆಣ್ಣುಮಕ್ಕಳಿದ್ದು, ಅವರ ಪೋಷಣೆ ಕಷ್ಟವಾಗಿತ್ತು. ಇದರಿಂದ ನೊಂದ ಸುಹಾಸಿನಿ ಪತಿ ಹಾಗೂ ಮೊದಲ ಮಗಳು ಸಂಧ್ಯಾ ಮನೆಯಲ್ಲಿಲ್ಲದ ವಿಷ ಕುಡಿದು ಮಕ್ಕಳಿಗೂ ವಿಷ ಉಣಿಸಿದ್ದಾರೆ.

    ತಕ್ಷಣ ವಿಷ ಸೇವಿಸಿದ ಮೂವರನ್ನೂ ಸ್ಥಳೀಯರು ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮಕ್ಕಳು ತಡರಾತ್ರಿ ಅಸುನೀಗಿದ್ದಾರೆ.

    ಸದ್ಯ ತಾಯಿ ಸುಹಾಸಿನಿ ಸ್ಥಿತಿ ಗಂಭೀರವಾಗಿದೆ.