Tag: ಪತ್ನಿ

  • ಪತ್ನಿಯನ್ನು ಹಗ್ಗದಿಂದ ಬಿಗಿದು ಕೊಲೆ ಮಾಡಿದ ಪತಿ ಈಗ ಪೊಲೀಸರ ವಶಕ್ಕೆ

    ಪತ್ನಿಯನ್ನು ಹಗ್ಗದಿಂದ ಬಿಗಿದು ಕೊಲೆ ಮಾಡಿದ ಪತಿ ಈಗ ಪೊಲೀಸರ ವಶಕ್ಕೆ

    ಬೆಂಗಳೂರು: ಪತಿಯೇ ತನ್ನ ಪತ್ನಿಯನ್ನು ಹಗ್ಗದಿಂದ ಬಿಗಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೆ.ಆರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಶೀಗೆಹಳ್ಳಿ ಪ್ರಿಯಾಂಕನಗರದಲ್ಲಿ ನಡೆದಿದೆ.

    ನೀಲ (25) ಕೊಲೆಯಾಗಿರುವ ದುರ್ದೈವಿ. ಇಂದು ಬೆಳಗಿನ ಜಾವ ಘಟನೆ ನಡೆದಿದ್ದು, ಪತಿ ದೊರೆ ಹಗ್ಗದಿಂದ ಪತ್ನಿಯ ಕುತ್ತಿಗೆಯನ್ನು ಬಿಗಿದು ಕೊಲೆ ಮಾಡಿದ್ದಾನೆ. ಕೆಲಸಕ್ಕೆ ಹೋಗದೇ ಮನೆಯಲ್ಲಿ ಇರುತ್ತಿದ್ದ ಪತಿ ಪ್ರತಿದಿನ ಪತ್ನಿಯನ್ನು ಹಿಂಸಿಸುತ್ತಿದ್ದ. ಅಷ್ಟೇ ಅಲ್ಲದೇ ನಿತ್ಯ ಕುಡಿದು ಗಲಾಟೆ ಮಾಡುತ್ತಿದ್ದ.

    ಗುರುವಾರ ರಾತ್ರಿಯೂ ಸಹ ಇಬ್ಬರ ನಡುವೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ಹೋಗಿ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿದೆ. ಆದರೆ ಕೊಲೆ ಮಾಡಿದ ಬಳಿಕ ಎಂದಿನಂತೆ ಸ್ನೇಹಿತರೊಂದಿಗೆ ಏನೂ ತಿಳಿಯದಂತೆ ಓಡಾಡಿಕೊಂಡಿದ್ದ. ನಂತರ ನನ್ನ ಹೆಂಡತಿ ಮೇಲೆಳುತ್ತಿಲ್ಲ ಎಂದು ಸ್ನೇಹಿತರಿಗೆ ತಿಳಿಸಿದ್ದಾನೆ.

    ಅನುಮಾನಗೊಂಡು ಸ್ಥಳೀಯರು ವಿಚಾರಿಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿ ಈಗ ಕೆ.ಆರ್.ಪುರ ಪೊಲೀಸರ ವಶದಲ್ಲಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

  • ಅಪಘಾತದಲ್ಲಿ ಪತಿ ಸಾವು- ಮನನೊಂದು 5ನೇ ಮಹಡಿಯಿಂದ ಜಿಗಿದ ಪತ್ನಿ- ವಿಡಿಯೋ ನೋಡಿ

    ಅಪಘಾತದಲ್ಲಿ ಪತಿ ಸಾವು- ಮನನೊಂದು 5ನೇ ಮಹಡಿಯಿಂದ ಜಿಗಿದ ಪತ್ನಿ- ವಿಡಿಯೋ ನೋಡಿ

    ಗಾಂಧಿನಗರ: 38 ವರ್ಷದ ಮಹಿಳೆಯೊಬ್ಬರು ಪತಿಯ ಸಾವಿನಿಂದ ಮನನೊಂದು 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಸೂರತ್‍ನ ಸಿಟಿ ಲೈಟ್ ಏರಿಯಾದ ನಿವಾಸಿ ಶ್ವೇತಾ ಸುರೇಖಾ ಆತ್ಮಹತ್ಯೆಗೆ ಶರಣಾದ ಗೃಹಿಣಿ. ನಗರದಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ ಶ್ವೇತಾ ಪತಿ ಆನಂದ್ ನಾವಲ್ ಸುರೇಕಾ ಶುಕ್ರವಾರ ಮಗ್ದಲ್ಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಆನಂದ್ ಕೆಲಸದ ನಿಮಿತ ಶುಕ್ರವಾರ ಬೆಳಗ್ಗೆ ಸುಮಾರು 8.30ಕ್ಕೆ ಅಭವ ಗ್ರಾಮಕ್ಕೆ ತೆರಳಿದ್ದರು. ಗ್ರಾಮದಿಂದ ಹಿಂದಿರುಗುವಾಗ ಲಾರಿಯೊಂದು ಆನಂದ್ ಮೇಲೆಯೇ ಹರಿದಿತ್ತು.

    ಪತಿಯ ಸಾವಿನಿಂದ ಮನನೊಂದ ಶ್ವೇತಾ ಸೋಮವಾರ ಬೆಳಗ್ಗೆ 8.30ಕ್ಕೆ ತಾವು ವಾಸವಿದ್ದ ಫ್ಲ್ಯಾಟ್‍ನ ಬಾತ್‍ರೂಮ್ ಕಿಟಕಿಯಿಂದ ಧುಮುಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶ್ವೇತಾ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ದೃಶ್ಯಾವಳಿಗಳು ಅಪಾರ್ಟ್ ಮೆಂಟ್‍ನ ಸಿಸಿಟಿವಿಯಲ್ಲಿ ಸೆರೆಯಾಗಿವೆ.

    ವಿಡಿಯೋದಲ್ಲಿ ಏನಿದೆ?: ಅಪಾರ್ಟ್ ಮೆಂಟ್ ಗ್ರೌಂಡ್ ಫ್ಲೋರ್ ನಲ್ಲಿ ಯುವಕನೊಬ್ಬ ಹೋಗುತ್ತಿರುವಾಗ ಮೊದಲಿಗೆ ಬಾತ್‍ರೂಮಿನ ಗ್ಲಾಸ್ ಕೆಳಗೆ ಬಿದ್ದಿದೆ. ಕೂಡಲೇ ಯುವಕ ಮೇಲೆ ನೋಡಿದಾಗ ಮಹಿಳೆ ಜಿಗಿಯುತ್ತಿರುವುದನ್ನು ನೋಡಿದ್ದಾರೆ. ಮಹಿಳೆ ಜಿಗಿಯುತ್ತಿದ್ದಂತೆ ಗಾಬರಿಗೊಂಡ ಯುವಕ ಮತ್ತೊಬ್ಬ ವ್ಯಕ್ತಿ ಇಬ್ಬರೂ ಸೇರಿಕೊಂಡು ಶ್ವೇತಾರನ್ನು ಹಿಡಿಯಲು ಯತ್ನಿಸಿದ್ದಾರೆ. ಕ್ಷಣಾರ್ಧದಲ್ಲಿ ಶ್ವೇತಾ ಕೆಳಗೆ ಬಿದ್ದಿದರಿಂದ ತಲೆಗೆ ಗಂಭೀರ ಗಾಯವಾಗಿ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶ್ವೇತಾರನ್ನು ರಕ್ಷಿಸಲು ಮುಂದಾಗಿದ್ದ ಯುವಕನ ಮೊಳಕಾಲು ಮತ್ತು ಕೈಗೆ ಗಾಯಗಳಾಗಿವೆ.

    ಶುಕ್ರವಾರ ಪತಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರಿಂದ ಶ್ವೇತಾ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು. ಶ್ವೇತಾ ಸುರೇಕಾ ಬಾತ್‍ರೂಮ್ ಕಿಟಿಕಿಯಿಂದ ಧುಮುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಉಮ್ರಾ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

  • ಗಂಡ ಬರೋದು ಲೇಟ್ ಅಂತಾ ಲವರ್ ನ ಕರೆಸಿದ್ಳು- ಮಂಚದ ಕೆಳಗೆ ಇನಿಯ ಸಿಕ್ಕಿಬಿದ್ದಾಗ ಪತಿಯನ್ನೇ ಕೊಂದ್ಳು

    ಗಂಡ ಬರೋದು ಲೇಟ್ ಅಂತಾ ಲವರ್ ನ ಕರೆಸಿದ್ಳು- ಮಂಚದ ಕೆಳಗೆ ಇನಿಯ ಸಿಕ್ಕಿಬಿದ್ದಾಗ ಪತಿಯನ್ನೇ ಕೊಂದ್ಳು

    ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಕೊಂದಿದ್ದ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.

    ಮಹೇಶ್ ಶಿಂಧೆ ಕೊಲೆಯಾದ ಪತಿ. ಪತ್ನಿ ದೀಪಾಲಿ ಮತ್ತು ಪ್ರಿಯಕರ ರಾಜ್‍ಕುಮಾರ್ ಬಂಧಿತ ಆರೋಪಿಗಳು. ಜನವರಿ 8ರಂದು ನಗರದ ಹುಳಿಮಾವು ಮನೆಯಲ್ಲಿ ಮಹೇಶ್ ಶಿಂಧೆ ಕೊಲೆಯಾಗಿತ್ತು. ಅಂದು ಅನುಮಾನಾಸ್ಪದ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪೊಲೀಸ್ ವಿಚಾರಣೆ ವೇಳೆ ದೀಪಾಲಿ ಮತ್ತು ರಾಜ್‍ಕುಮಾರ್ ಇಬ್ಬರು ಸತ್ಯವನ್ನು ಬಾಯಿಬಿಟ್ಟಿದ್ದಾರೆ.

    ಜ.8 ಆಗಿದ್ದೇನು?: ಮಹೇಶ್ ಶಿಂಧೆ ನಗರದಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದರು. ಮಹೇಶ್ ಪತ್ನಿ ಗಾರ್ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದರು. ಇದೇ ಗಾರ್ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದ ರಾಜ್‍ಕುಮಾರ್ ಎಂಬಾತನೊಂದಿಗೆ ದೀಪಾಲಿ ಅನೈತಿಕ ಸಂಬಂಧ ಹೊಂದಿದ್ದಳು. ಪತಿ ಪ್ರತಿದಿನ ಮನೆಗೆ ತಡವಾಗಿ ಬರ್ತಾರೆಂದು ಹುಳಿಮಾವಿನಲ್ಲಿ ತನ್ನ ಮನೆಗೆ ರಾಜ್‍ಕುಮಾರ್ ನನ್ನು ಕರೆಸಿಕೊಂಡಿದ್ದಾಳೆ. ಆದ್ರೆ ಅಂದು ಮಹೇಶ್ ಸಂಜೆ 7.30ಕ್ಕೆ ಮನೆಗೆ ಆಗಮಿಸಿದ್ದಾರೆ. ಪತಿ ಮನೆಗೆ ಆಗಮಿಸುತ್ತಿದ್ದಂತೆ ರಾಜ್‍ಕುಮಾರ್ ನನ್ನು ಬೆಡ್ ರೂಮಿನ ಮಂಚದ ಕೆಳಗೆ ಬಚ್ಚಿಟ್ಟಿದ್ದಾಳೆ.

    ಮಂಚದ ಕೆಳಗೆ ಸಿಕ್ಕ: ರಾಜ್‍ಕುಮಾರ್ ನನ್ನು ಮಂಚದ ಕೆಳಗೆ ಬಚ್ಚಿಟ್ಟು ದೀಪಾಲಿ ಬಾಗಿಲನ್ನು ತೆರೆದಿದ್ದಾಳೆ. ಮನೆಗ ಬಂದ ಮಹೇಶ್‍ಗೆ ಪತ್ನಿ ನಡುವಳಿಕೆಯ ಅನುಮಾನ ಬಂದಿದೆ. ಮನೆಯನ್ನೆಲ್ಲಾ ಹುಡುಕಾಡಿದಾಗ ಮಂಚದ ಕೆಳಗೆ ರಾಜ್‍ಕುಮಾರ್ ಸಿಕ್ಕಿಬಿದ್ದಿದ್ದಾನೆ. ಪತ್ನಿಯ ಅಕ್ರಮ ಸಂಬಂಧ ಬಯಲಾಗುತ್ತಿದ್ದಂತೆ ಮಹೇಶ್ ಇಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಎಲ್ಲಿ ತಮ್ಮ ಅಕ್ರಮ ಸಂಬಂಧ ಬಯಲಾಗುತ್ತೆ ಎಂಬ ಭಯದಿಂದ ದೀಪಾಲಿ ಮತ್ತು ರಾಜ್‍ಕುಮಾರ್ ಇಬ್ಬರೂ ಸೇರಿಕೊಂಡು ಮಹೇಶ್ ಕುತ್ತಿಗೆಯನ್ನು ಹಿಸುಕಿ ಕೊಲೆ ಮಾಡಿದ್ದಾರೆ. ಕೊಲೆಯ ನಂತರ ಅನುಮಾನಬಾರದಂತೆ ನಿದ್ದೆ ಮಾಡುತ್ತಿರುವಂತೆ ಮಹೇಶ್‍ರನ್ನು ಮಲಗಿಸಿ ರಾಜ್‍ಕುಮಾರ್ ಹೊರಹೋಗಿದ್ದಾನೆ.

    ರಾಜ್‍ಕುಮಾರ್

    ಮಕ್ಕಳಿಗೆ ತಂದೆಗೆ ಹುಷಾರಿಲ್ಲ ಅಂದ್ಳು: ಸಂಜೆ ಟ್ಯೂಷನ್ ಬಳಿಕ ದೀಪಾಲಿ ಮಕ್ಕಳು ಮನೆಗೆ ಬಂದಿದ್ದಾರೆ. ಮನೆಯಲ್ಲಿ ತಂದೆ ಮಲಗಿರೋದನ್ನು ಕಂಡ ಮಕ್ಕಳು ಅಪ್ಪಾ ಅಂತಾ ಎಬ್ಬಿಸಲು ಹೋದಾಗ, ಅಪ್ಪನಿಗೆ ಹುಷಾರಿಲ್ಲ ತೊಂದ್ರೆ ಕೊಡ್ಬೇಡಿ ಅಂತಾ ದೀಪಾಲಿ ಹೇಳಿದ್ದಾಳೆ. ಮನೆಗೆ ವೈದ್ಯರನ್ನು ಕರೆಸಿ ಪತಿಯನ್ನು ತೋರಿಸಿದಾಗ, ಡಾಕ್ಟರ್ ಮಹೇಶ್ ಸಾವನ್ನಪ್ಪಿರೋದನ್ನು ದೃಢಪಡಿಸಿದ್ದಾರೆ.

    ವೈದ್ಯರು ಪತಿಯ ಸಾವನ್ನು ದೃಢಪಡಿಸುತ್ತಿದ್ದಂತೆ ದೀಪಾಲಿ ಹುಳಿಮಾವು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾಳೆ. ಮನೆಗೆ ಬಂದ ಪೊಲೀಸರು ಅನುಮಾನಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಪೊಲೀಸರ ತನಿಖೆ ವೇಳೆ ಪತಿಯನ್ನು ಕೊಲೆ ಮಾಡಿರುವುದಾಗಿ ಅಂತಾ ದೀಪಾಲಿ ಒಪ್ಪಿಕೊಂಡಿದ್ದಾಳೆ. ಸದ್ಯ ದೀಪಾಲಿ ಮತ್ತು ರಾಜ್‍ಕುಮಾರ್ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

  • ನ್ಯಾಯ ಕೊಡ್ಸಿ, ಇಲ್ಲಾಂದ್ರೆ ಆತ್ಮಹತ್ಯೆ ಮಾಡ್ಕೋತೀನಿ- ಇಲಿಯಾಸ್ ಪತ್ನಿ ಹೆಸರಲ್ಲಿ ಬರೆದ ಪತ್ರ ವೈರಲ್

    ನ್ಯಾಯ ಕೊಡ್ಸಿ, ಇಲ್ಲಾಂದ್ರೆ ಆತ್ಮಹತ್ಯೆ ಮಾಡ್ಕೋತೀನಿ- ಇಲಿಯಾಸ್ ಪತ್ನಿ ಹೆಸರಲ್ಲಿ ಬರೆದ ಪತ್ರ ವೈರಲ್

    ಮಂಗಳೂರು: ಟಾರ್ಗೆಟ್ ಗ್ರೂಪ್ ಲೀಡರ್ ಇಲಿಯಾಸ್ ಹತ್ಯೆ ಪ್ರಕರಣದಲ್ಲಿ ನ್ಯಾಯ ಕೊಡಿಸುವಂತೆ ಕೇಳಿ ಇಲಿಯಾಸ್ ಪತ್ನಿ ಹೆಸರಲ್ಲಿ ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪತ್ರದಲ್ಲಿ ದಾವೂದ್, ಸಫ್ವಾನ್ ಸೇರಿದಂತೆ ಉಳ್ಳಾಲ ನಗರಸಭಾ ಸದಸ್ಯನೊಬ್ಬನ ಹೆಸರು ಉಲ್ಲೇಖವಾಗಿದೆ. ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕು. ಇಲ್ಲದಿದ್ದರೆ ನಾನು ನೇಣಿಗೆ ಶರಣಾಗಿ ಸಾಯುತ್ತೇನೆಂದು ಪತ್ರದಲ್ಲಿ ಇಲಿಯಾಸ್ ಪತ್ನಿ ಫರ್ಜಾನಾ ಹೆಸರಲ್ಲಿ ಬರೆಯಲಾಗಿದೆ. ಇದನ್ನೂ ಓದಿ: ಇಲ್ಯಾಸ್ ಹತ್ಯೆಗೆ ಪ್ರತೀಕಾರ ತೀರಿಸದೇ ಬಿಡಲ್ಲ: ಬ್ಯಾರಿ ಭಾಷೆಯ ಆಡಿಯೋ ವೈರಲ್

    ಹತ್ಯೆ ಆರೋಪಿಗಳಿಗೆ ಸಚಿವ ಯು.ಟಿ.ಖಾದರ್ ಆಪ್ತನಾಗಿರುವ ನಗರಸಭಾ ಸದಸ್ಯ ಉಸ್ಮಾನ್ ಕಲ್ಲಾಪು ಬೆಂಗಾವಲಿದ್ದಾನೆ ಎಂಬಂತೆ ಬಿಂಬಿಸಿ ಸುದ್ದಿ ಹರಡಲಾಗುತ್ತಿದೆ. ಅಲ್ಲದೆ ದಾವೂದ್ ತನ್ನನ್ನು ಕೊಲ್ಲಲು ಸಂಚು ಹೂಡಿದ್ದಾನೆ. ಆತನಿಗೆ ಸಫ್ವಾನ್, ಉಸ್ಮಾನ್ ಕಲ್ಲಾಪು, ರಹೀಮ್ ಮಂಚಿಲ ಸಪೋರ್ಟ್ ಇದೆ. ಆದರೆ ತಾನು ಮಾತ್ರ ಇನ್ನು ಯಾವುದೇ ಜಗಳ ಮಾಡುವುದಿಲ್ಲ ಅಂತಾ ಇಲಿಯಾಸ್ ಕೆಲವು ದಿನಗಳ ಹಿಂದೆ ಹೇಳಿಕೊಂಡಿದ್ದನೆಂದು ಪತ್ರದಲ್ಲಿ ಬರೆದಿದ್ದಾರೆ. ಇದನ್ನೂ ಓದಿ: ಸಚಿವ ಖಾದರ್ ಜೊತೆ ಕಾಣಿಸಿಕೊಂಡಿದ್ದ ಇಲಿಯಾಸ್ ನ ಬರ್ಬರ ಹತ್ಯೆ

    ನನಗೆ ನ್ಯಾಯ ಕೊಡಿಸಬೇಕು. ಇಲ್ಲದಿದ್ದರೆ ನನ್ನ ಸಾವಿಗೆ ನೀವೇ ಹೊಣೆಯಾಗುತ್ತೀರಿ ಅಂತಾ ಫರ್ಜಾನಾ ಹೆಸರಲ್ಲಿ ಬರೆದಿರುವ ಪತ್ರ ವಾಟ್ಸಪ್ ಗ್ರೂಪ್ ಗಳಲ್ಲಿ ತಲ್ಲಣ ಮೂಡಿಸಿದೆ. ಆದರೆ ಪತ್ರ ಆಕೆಯೇ ಬರೆದಿದ್ದಾರಾ ಹಾಗೂ ಯಾರಿಗೆ ಬರೆದ ಪತ್ರ ಅನ್ನೋದು ಸ್ಪಷ್ಟವಾಗಿಲ್ಲ. ಇದನ್ನೂ ಓದಿ: ಯುಟಿ ಖಾದರ್ ಜೊತೆ ದೀಪಕ್ ಹತ್ಯೆಯ ಆರೋಪಿ ಕುಳಿತಿರುವ ಫೋಟೋ ವೈರಲ್

     

  • 1.50 ಲಕ್ಷ ರೂ.ಗೆ ತನ್ನ ಹಸುಗೂಸನ್ನೇ ಮಾರಲು ಯತ್ನಿಸಿದ ಕುಡುಕ ತಂದೆ

    1.50 ಲಕ್ಷ ರೂ.ಗೆ ತನ್ನ ಹಸುಗೂಸನ್ನೇ ಮಾರಲು ಯತ್ನಿಸಿದ ಕುಡುಕ ತಂದೆ

    ಕೊಪ್ಪಳ: ಕುಡುಕ ತಂದೆ ತನ್ನ 7 ತಿಂಗಳ ಹಸುಗೂಸನ್ನು ಮಾರಾಟ ಮಾಡಲು ಯತ್ನಿಸಿದ್ದು, ತಾಯಿಯಿಂದಾಗಿ ಮಾರಾಟ ವಿಚಾರ ಬೆಳಕಿಗೆ ಬಂದಿದೆ.

    ಗದಗ ಜಿಲ್ಲೆ ಅಣ್ಣಿಗೇರಿ ಗ್ರಾಮದ ಖಾದರ್ ತನ್ನ ಹಸುಗೂಸನ್ನು ಮಾರಲು ಯತ್ನಿಸಿದ ವ್ಯಕ್ತಿ. ಖಾದರ್ ರೂ. 1.50 ಲಕ್ಷಕ್ಕೆ ತನ್ನ ಹಸುಗೂಸನ್ನು ಮಾರಾಟ ಮಾಡಲು ಯತ್ನಿಸಿದ್ದಾನೆ.

    ಖಾದರ್ ಹುಬ್ಬಳ್ಳಿಯ ಓರ್ವ ವ್ಯಕ್ತಿಗೆ ಹಸುಗೂಸು ಮಾರಾಟ ಮಾಡಲು ಯತ್ನಿಸಿದ್ದಾಗ ಪತ್ನಿ ರುಕ್ಸಾನಾ ಅದನ್ನು ವಿರೋಧಿಸಿದ್ದಾರೆ. ಪತಿಯ ಕೃತ್ಯಕ್ಕೆ ಹೆದರಿ ರುಕ್ಸಾನಾ ತನ್ನ ಮಕ್ಕಳನ್ನು ಕೊಪ್ಪಳದ ತಾಯಿ ಮನೆಯಲ್ಲಿ ಬಿಟ್ಟಿದ್ದರು. ಮಕ್ಕಳನ್ನು ನೋಡಲು ಬಂದವಳಿಗೆ ಸ್ವತಃ ತವರು ಮನೆಯವರೇ ಥಳಿಸುತ್ತಿದ್ದರು. ಮಕ್ಕಳನ್ನು ಹಣಕೊಟ್ಟು ಕರೆದುಕೊಂಡು ಹೋಗು ಎಂದು ಬೆದರಿಸುತ್ತಿದ್ದರು.

    ಕೊಪ್ಪಳ ರೈಲ್ವೇ ನಿಲ್ದಾಣಕ್ಕೆ ಆಗಮಿಸಿದಾಗ ಅಲ್ಲಿಗೂ ಬಂದು ಹಲ್ಲೆಗೆ ಯತ್ನಿಸಿದ್ದಾರೆ. ಆಗ ಸ್ಥಳೀಯರು ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಯಾಕೆ ಹಲ್ಲೆ ನಡೆಸಿದ್ದಾರೆ ಎಂದು ಸ್ಥಳಿಯರು ಪ್ರಶ್ನೆ ಮಾಡಿದಾಗ ಮಗನ ಮಾರಾಟದ ವಿಚಾರವನ್ನು ರುಕ್ಸನಾ ಬಾಯಿಬಿಟ್ಟಿದ್ದಾರೆ.

    ಸದ್ಯ ರುಕ್ಸನಾ ಮತ್ತು ಮಕ್ಕಳು ಕೊಪ್ಪಳದ ಮಕ್ಕಳ ಸಹಾಯವಾಣಿ ವಶದಲ್ಲಿದ್ದು, ಮಕ್ಕಳ ಸಹಾಯವಾಣಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

  • ನೆಲಕ್ಕೆ ಬಿದ್ರೂ ಬಿಡ್ಲಿಲ್ಲ..ಚೈನ್ ಕಸಿದೇ ಬಿಟ್ಟ- ಬೆಳ್ಳಂಬೆಳಗ್ಗೆ ಇನ್ಸ್ ಪೆಕ್ಟರ್ ಪತ್ನಿಯ ಸರಗಳವು -ವಿಡಿಯೋ ನೋಡಿ

    ನೆಲಕ್ಕೆ ಬಿದ್ರೂ ಬಿಡ್ಲಿಲ್ಲ..ಚೈನ್ ಕಸಿದೇ ಬಿಟ್ಟ- ಬೆಳ್ಳಂಬೆಳಗ್ಗೆ ಇನ್ಸ್ ಪೆಕ್ಟರ್ ಪತ್ನಿಯ ಸರಗಳವು -ವಿಡಿಯೋ ನೋಡಿ

    ಬೆಂಗಳೂರು: ನಗರದಲ್ಲಿ ಸರಗಳ್ಳವರ ಹಾವಳಿಗೆ ಕೊನೆಯೇ ಇಲ್ಲ ಎನ್ನುವುದಕ್ಕೆ ಇಂದು ಮತ್ತೊಮ್ಮೆ ಸಾಕ್ಷಿಯಾಗಿದೆ. ನಗರದ ಮೂರು ಕಡೆಗಳಲ್ಲಿ ಸರಗಳ್ಳತನ ಪ್ರಕರಣ ನಡೆದಿದೆ.

    ಸಂಕ್ರಾಂತಿ ಹಬ್ಬದ ದಿನವಾದ ಇಂದೇ ಪೊಲೀಸ್ ಇನ್ಸ್ ಪೆಕ್ಟರ್ ಪತ್ನಿಯದ್ದೇ ಸರಗಳ್ಳತನ ಮಾಡಿದ ಘಟನೆ ಬೆಂಗಳೂರಿನ ಪೀಣ್ಯದ ಎಚ್‍ಎಮ್‍ಟಿ ಲೇಔಟ್‍ನಲ್ಲಿ ನಡೆದ್ರೆ, ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೌಗಂಧಿಕ 45 ಗ್ರಾಂ ಸರ ಕಸಿದು ಪರಾರಿಯಾಗಿದ್ದಾರೆ.

    ಇನ್ಸ್ ಪೆಕ್ಟರ್ ಕೆಂಚೇಗೌಡ ಪತ್ನಿ ಗಂಗಮ್ಮ ಮನೆಯ ಮುಂದೆ ರಂಗೋಲಿ ಹಾಕುತ್ತಿದ್ದ ವೇಳೆ ಏಕಾಏಕಿ ಮಹಿಳೆಯ ಮೇಲೆರಗಿದ ಸರಗಳ್ಳ ಕತ್ತಿಗೆ ಕೈ ಹಾಕಿ ಮಹಿಳೆ ಸಮೇತ 70 ಗ್ರಾಂ ಸರವನ್ನು ಎಳೆದೊಯ್ದಿದ್ದಾನೆ. ಕಳ್ಳ ಸರ ಎಳೆಯುವ ವೇಳೆ ಮಹಿಳೆ ನೆಲಕ್ಕೆ ಬಿದ್ದರೂ ಬಿಡದ ಸರಗಳ್ಳ ಕೊನೆಗೆ ಸರ ಕಸಿದು ಎಸ್ಕೇಪ್ ಆಗಿದ್ದಾನೆ.

    ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ಕಳ್ಳನನ್ನು ಒಂದು ಕಿಲೋಮೀಟರ್‍ನಷ್ಟು ದೂರ ಇನ್ಸ್ ಪೆಕ್ಟರ್ ಕೆಂಚೇಗೌಡ ಓಡಿ ಬೆನ್ನತ್ತಿದ್ದಾರೆ. ಆದರೂ ಆತ ಕೂದಳೆಲೆ ಅಂತರದಲ್ಲಿ ಓಡಿ ಪಲ್ಸರ್‍ನಲ್ಲಿ ಪರಾರಿಯಾಗಿದ್ದಾನೆ.

    ಪೀಣ್ಯದಲ್ಲಿ ಮತ್ತೊಂದು ಘಟನೆ ನಡೆದಿದ್ದು, ಆದ್ರೆ ಶಾರದಮ್ಮನ ಸಮಯ ಪ್ರಜ್ಞೆಯಿಂದ ಕಳ್ಳತನ ಕೈ ತಪ್ಪಿದೆ. 80 ಗ್ರಾಂ ತೂಕದ ಸರಗಳ್ಳತನಕ್ಕೆ ಯತ್ನಿಸಿದ್ದು, ಪತಿ ಹನುಮಂತರಾಯಪ್ಪ ಪತ್ನಿಯ ರಕ್ಷಣೆಗೆ ಧಾವಿಸಿದ್ದಾರೆ. ಪರಿಣಾಮ ಸರಗಳ್ಳತನ ಕೈತಪ್ಪಿದ್ದು, ಪತ್ನಿಯ ರಕ್ಷಣೆಗೆ ಬಂದ ಪತಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂಬುದಾಗಿ ತಿಳಿದುಬಂದಿದೆ.

    ಈ ಮೂರು ಘಟನೆ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=70qyeBboCWY

     

  • ಹೆಂಡ್ತಿ ತಮ್ಮಂದಿರ ಮೇಲಿನ ಕೋಪಕ್ಕೆ ಹೊಸ ಬೈಕ್‍ನ್ನ ಸುಟ್ಟ ಗಂಡ

    ಹೆಂಡ್ತಿ ತಮ್ಮಂದಿರ ಮೇಲಿನ ಕೋಪಕ್ಕೆ ಹೊಸ ಬೈಕ್‍ನ್ನ ಸುಟ್ಟ ಗಂಡ

    ಚಿಕ್ಕಬಳ್ಳಾಪುರ: ಹೆಂಡತಿ ತಮ್ಮಂದಿರ ಮೇಲಿನ ಕೋಪಕ್ಕೆ ಹೊಸ ಬೈಕ್ ಗೆ ಗಂಡನೊರ್ವ ಬೆಂಕಿ ಹಾಕಿರುವ ಘಟನೆ ಚಿಕ್ಕಬಳ್ಳಾಪುರ ನಗರದ ಗಂಗನಮಿದ್ದೆ ಬಳಿ ನಡೆದಿದೆ.

    ಗಂಗನಮಿದ್ದೆ ನಿವಾಸಿ ಸೋಮಶೇಖರ್ ಬೈಕ್‍ಗೆ ಬೆಂಕಿ ಹಚ್ಚಿರುವ ಪತಿ. ಸೋಮಶೇಖರ್ ದೊಡ್ಡಬಳ್ಳಾಪುರ ತಾಲೂಕಿನ ಮೋಪರಹಳ್ಳಿ ಗ್ರಾಮದ ಶೈಲಜಾ ಎಂಬವರನ್ನು ಮದುವೆಯಾಗಿ 12 ವರ್ಷಗಳು ಕಳೆದಿವೆ. ಆದ್ರೆ ಕಳೆದ ಒಂದು ವರ್ಷದಿಂದ ಶೈಲಜಾ ಗಂಡನ ಮನೆ ಬಿಟ್ಟು ತವರು ಮನೆ ಸೇರಿದ್ದಾರೆ. ಪತ್ನಿ ತವರು ಸೇರಿದ ಬಳಿಕ ಸೋಮಶೇಖರ್ ಕೂಡ ಅಲ್ಲಿಯೇ ಹೋಗಿ ವಾಸವಾಗಿದ್ದಾರೆ.

    ಆರು ತಿಂಗಳ ಹಿಂದೆ ಸೋಮಶೇಖರ್ ಸಾಲ ಮಾಡಿ ಪ್ಯಾಷನ್ ಪ್ರೋ ಬೈಕ್ ಖರೀದಿಸಿದ್ರು. ಆದ್ರೆ ಬೈಕ್ ಖರೀದಿಸಿದ ನಂತರ ಸೋಮಶೇಖರ್‍ಗಿಂತ ಆತನ ಭಾಮೈದರು ಹೆಚ್ಚಾಗಿ ಚಲಾಯಿಸುತ್ತಿದ್ದರು. ಸೋಮಶೇಖರ್ ಬೈಕಿಗೆ ಪೆಟ್ರೋಲ್ ಹಾಕಿಸಿಕೊಂಡು ಬಂದರೆ ಭಾಮೈದರು ಬೈಕ್ ತೆಗೆದುಕೊಂಡು ಹೋಗಿ ಪೆಟ್ರೋಲ್ ಖಾಲಿಯಾದ ಬಳಿಕ ಮನೆಯ ಮುಂದೆ ತಂದು ನಿಲ್ಲಿಸುತ್ತಿದ್ರು ಎಂದು ಹೇಳಲಾಗುತ್ತಿದೆ.

    ಬೈಕ್ ಸಂಬಂಧ ಈ ಹಿಂದೆ ಸೋಮಶೇಖರ್, ಪತ್ನಿ ಮತ್ತು ಆಕೆಯ ಸೋದರರೊಂದಿಗೆ ಗಲಾಟೆಗಳು ನಡೆದಿವೆ. ಈ ಘಟನೆಯಿಂದಾಗ ಪತ್ನಿಯ ಮೇಲೆ ಕೋಪಗೊಂಡ ಸೋಮಶೇಖರ್ ಇಂದು ಬೆಳಗ್ಗೆ ಕುಡಿದ ಅಮಲಿನಲ್ಲಿ ಬೈಕ್ ಇದ್ರೇ ತಾನೇ ಗಲಾಟೆ ಅಂತ ಬೈಕ್ ಗೆ ಬೆಂಕಿ ಹಾಕಿ ಸುಟ್ಟು ಹಾಕಿದ್ದಾರೆ. ಗ್ರಾಮಸ್ಥರು ಕೂಡಲೇ ಅಗ್ನಿಶಾಮಕದಳ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಬೆಂಕಿ ನಂದಿಸುವಷ್ಟರಲ್ಲಿ ಹೊಸ ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ.

  • ಪ್ರೀತಿಸಿ ಮದ್ವೆಯಾಗಿ 2 ತಿಂಗಳು ಕಳೆಯುವ ಮುನ್ನವೇ ಪತಿ ನಾಪತ್ತೆ

    ಪ್ರೀತಿಸಿ ಮದ್ವೆಯಾಗಿ 2 ತಿಂಗಳು ಕಳೆಯುವ ಮುನ್ನವೇ ಪತಿ ನಾಪತ್ತೆ

    ಕೋಲಾರ: ಪ್ರೀತಿಸಿ ಮದುವೆಯಾಗಿ ಎರಡು ತಿಂಗಳು ಕಳೆಯುವ ಮುನ್ನವೇ ನಾಪತ್ತೆಯಾದ ಪತಿಗಾಗಿ ಪತ್ನಿ ಏಕಾಂಗಿ ಹೋರಾಟಕ್ಕೆ ಮುಂದಾಗಿದ್ದು, ಈಗ ದಯಾಮರಣಕ್ಕೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ.

    ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಬಂಟಹಳ್ಳಿ ಗ್ರಾಮದ ಪ್ರತಿಮಾ ಹೋರಾಟ ಮಾಡುತ್ತಿರುವ ಗೃಹಿಣಿ. ಶಶಿಕುಮಾರ್ ಮತ್ತು ಪ್ರತಿಮಾ ಮೂರು ವರ್ಷಗಳಿಂದ ಒಬ್ಬರನೊಬ್ಬರನ್ನು ಪ್ರೀತಿಸುತ್ತಿದ್ದರು. ಇವರಿಬ್ರು ಜೊತೆಯಾಗಿರುವ ಫೋಟೋಗಳನ್ನು ಕೆಲವರು ಫೇಸ್‍ಬುಕ್‍ನಲ್ಲಿ ಹಾಕಿದ್ದರಿಂದ ಮನೆಯಲ್ಲಿ ಇಬ್ಬರ ಪ್ರೀತಿಯ ವಿಚಾರ ಬೆಳಕಿಗೆ ಬಂದಿತ್ತು. ಶಶಿಕುಮಾರ್ ಪೋಷಕರು ದಲಿತ ಹುಡುಗಿ ಎಂದು ಮದುವೆಗೆ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಎರಡು ತಿಂಗಳ ಹಿಂದೆ ಪೊಲೀಸ್ ಠಾಣೆ ಆವರಣದಲ್ಲಿರುವ ದೇವಾಲಯದಲ್ಲಿ ಗ್ರಾಮದ ಹಿರಿಯರು ಮದುವೆ ಮಾಡಿಸಿದ್ದರು.

    ಆದ್ರೆ ಮದುವೆಯಾಗಿ ಎರಡು ತಿಂಗಳು ಕಳೆಯುವಷ್ಟರಲ್ಲಿ ಶಶಿಕುಮಾರ್ ನನ್ನು ಆತನ ಪೋಷಕರು ಅಪಹರಿಸಿದ್ದಾರೆ ಎನ್ನಲಾಗಿದೆ. ಸದ್ಯ ಪ್ರತಿಮಾ ಕಾಣೆಯಾಗಿರುವ ಪತಿಯನ್ನು ಹುಡುಕಿಕೊಡುವಂತೆ ಮಾಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

     

  • ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಆತ್ಮಹತ್ಯೆ ಶರಣಾದ ಪತಿ!

    ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಆತ್ಮಹತ್ಯೆ ಶರಣಾದ ಪತಿ!

    ಬೆಂಗಳೂರು: ಪತ್ನಿಯ ಶೀಲ ಶಂಕಿಸಿದ ಪತಿ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಈ ವೇಳೆ ಪತ್ನಿ ಸಾವನ್ನಪ್ಪಿದ್ದಾಳೆ ಎಂದು ಭಾವಿಸಿದ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನಡೆದಿದೆ.

    ರಾಮಮೂರ್ತಿ ನಗರದ ನಿವಾಸಿ ಹೆನ್ರೀ ಫರ್ನಾಂಡಿಸ್ (35) ಮೃತ ವ್ಯಕ್ತಿಯಾಗಿದ್ದು, ಪತ್ನಿ ಚಿತ್ರಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿತ್ರಾ ಅವರಿಗೆ ಪ್ರಸ್ತುತ ಕೆಆರ್ ಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಏನಿದು ಘಟನೆ?: ಪತಿ ಹೆನ್ರೀ ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದು, ಕಳೆದ ಕೆಲ ತಿಂಗಳಿಂದ ಪತಿ-ಪತ್ನಿ ನಡುವೆ ಆಗಾಗ ಜಗಳ ನಡೆಯುತಿತ್ತು. ಶುಕ್ರವಾರ ಬೆಳಗ್ಗೆ ಕೆ.ಆರ್.ಪುರ ದೇವಸಂದ್ರದ ಪೋಷಕರ ಮನೆಯಿಂದ ಚಿತ್ರಾರನ್ನು ರಾಮಮೂರ್ತಿನಗರದ ಸೆಂಟ್ ಆನ್ಸ್ ಶಾಲೆ ಬಳಿಯ ಮನೆಗೆ ಕರೆಕೊಂಡು ಬಂದಿದ್ದಾನೆ. ನಂತರ ತಮ್ಮ ಇಬ್ಬರು ಮಕ್ಕಳನ್ನ ಶಾಲೆಗೆ ಕಳುಹಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಗಲಾಟೆ ಆರಂಭವಾಗಿದ್ದು, ಜಗಳ ವಿಕೋಪಕ್ಕೆ ತಿರುಗಿ ಹೆನ್ರೀ ತನ್ನ ಪತ್ನಿ ತಲೆ ಹಾಗೂ ಬಲಗೈಗೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಚಿತ್ರಾ ಮನೆಯಲ್ಲೇ ಕುಸಿದು ಬಿದ್ದು ಪ್ರಜ್ಞೆ ತಪ್ಪಿದ್ದಾರೆ. ಪತ್ನಿ ಸಾವನ್ನಪ್ಪಿದ್ದಾಳೆ ಎಂದು ತಿಳಿದ ಹೆನ್ರೀ ಫೆರ್ನಂದೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಶುಕ್ರವಾರ ಸಂಜೆ ವೇಳೆಗೆ ಚಿತ್ರಾ ಅವರ ಸಹೋದರ ಮನೆಗೆ ಕರೆ ಮಾಡಿದ್ದು, ಯಾರೂ ಕರೆಯನ್ನು ಸ್ವೀಕರಿಸಿದ ಕಾರಣ ಅನುಮಾನಗೊಂಡು ಮನೆಗೆ ಬಂದು ನೋಡಿದ ವೇಳೆ ಘಟನೆ ಬೆಳಕಿಗೆ ಬಂದಿದೆ. ಕೆ.ಆರ್.ಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಿದ್ದಾರೆ.

  • ಗರ್ಲ್ ಫ್ರೆಂಡ್ ಜೊತೆ ಸೇರಿ ತಾಯಿ, ಪತ್ನಿ ಮೇಲೆ ಹಲ್ಲೆಗೆ ಯತ್ನಿಸಿದ ವ್ಯಕ್ತಿ

    ಗರ್ಲ್ ಫ್ರೆಂಡ್ ಜೊತೆ ಸೇರಿ ತಾಯಿ, ಪತ್ನಿ ಮೇಲೆ ಹಲ್ಲೆಗೆ ಯತ್ನಿಸಿದ ವ್ಯಕ್ತಿ

    ಬೆಂಗಳೂರು: ಗರ್ಲ್ ಫ್ರೆಂಡ್ ಜೊತೆ ಸೇರಿಕೊಂಡು ಪತ್ನಿ ಹಾಗೂ ತನ್ನ ತಾಯಿಯ ಮೇಲೆ ಪತಿರಾಯನೊಬ್ಬ ಹಲ್ಲೆ ಮಾಡಲು ಯತ್ನಿಸಿದ ಘಟನೆ ಬೆಂಗಳೂರಿನ ಪುಲಿಕೇಶಿನಗರದಲ್ಲಿ ನಡೆದಿದೆ.

    ರೋಹಿತ್ ತನ್ನ ಕುಟುಂಬದವರ ಮೇಲೆ ಹಲ್ಲೆಗೆ ಯತ್ನಿಸಿರೋ ವ್ಯಕ್ತಿ. ರೋಹಿತ್ ತನ್ನ ಪ್ರೇಯಸಿ ಅಬಂತಿಕಾ ಜೊತೆ ಸೇರಿ ಪತ್ನಿ ಸ್ನೇಹಾ ಹಾಗೂ ತಾಯಿ ನಂದಾರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಆರು ವರ್ಷಗಳ ಹಿಂದೆ ಸ್ನೇಹಾ ಅವರನ್ನ ಮದುವೆಯಾಗಿದ್ದ ರೋಹಿತ್, ಇತ್ತೀಚಿನ ದಿನಗಳಲ್ಲಿ ಅಬಂತಿಕಾಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ.

    ಈ ಬಗ್ಗೆ ಮನೆಯಲ್ಲಿ ಪ್ರಶ್ನಿಸಿದ್ದಕ್ಕೆ ತಾಯಿ ಮತ್ತು ಹೆಂಡತಿ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ ಈ ಭೂಪ. ಪ್ರೇಯಸಿ ಮಾತಿಗೆ ಮರುಳಾಗಿ ಪತ್ನಿ ಸ್ನೇಹಾಗೆ ಡೈವೋರ್ಸ್ ನೀಡುವಂತೆ ಪದೇ ಪದೇ ಕಿರುಕುಳ ನೀಡುತ್ತಿದ್ದಾನೆ. ಇದಕ್ಕೆ ಒಲ್ಲೆ ಎಂದಾಗ ಸಾಕಷ್ಟು ಬಾರಿ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ.

    ಮಂಗಳವಾರ ರಾತ್ರಿ ರೋಹಿತ್ ಮತ್ತು ಅಬಂತಿಕಾ ಇಬ್ಬರು ಸೇರಿ ಮನೆ ಹತ್ತಿರ ಬಂದು ಗಲಾಟೆ ಮಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಪತ್ನಿ ಸ್ನೇಹ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ.

    ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರೋ ಪುಲಿಕೇಶಿ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.