Tag: ಪತ್ನಿ

  • ಹೆಣ್ಣು ಮಗು ಹುಟ್ಟಿದ್ದಕ್ಕೆ ಪತ್ನಿಗೆ ಕರೆಂಟ್ ಶಾಕ್ ನೀಡಿ ಕೊಲೆಗೆ ಯತ್ನಿಸಿದ ಟೆಕ್ಕಿ

    ಹೆಣ್ಣು ಮಗು ಹುಟ್ಟಿದ್ದಕ್ಕೆ ಪತ್ನಿಗೆ ಕರೆಂಟ್ ಶಾಕ್ ನೀಡಿ ಕೊಲೆಗೆ ಯತ್ನಿಸಿದ ಟೆಕ್ಕಿ

    ಹೈದರಾಬಾದ್: ಹೆಣ್ಣು ಮಗುವಿಗೆ ಜನ್ಮ ನೀಡಿದ ಕಾರಣಕ್ಕೆ ಟೆಕ್ಕಿಯೊಬ್ಬ ತನ್ನ ಪತ್ನಿಗೆ ಕರೆಂಟ್ ಶಾಕ್ ನೀಡಿ ಕೊಲೆ ಮಾಡಲು ಯತ್ನಿಸಿದ ಘಟನೆ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ನಡೆದಿದೆ.

    ರಾಜರತ್ನಂ ಎಂಬ ಟೆಕ್ಕಿಯೇ ತನ್ನ ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿದ ವ್ಯಕ್ತಿ. ಪ್ರಸ್ತುತ ಈ ಕುರಿತು ರಾಜರತ್ನಂ ಪತ್ನಿ ಪ್ರಶಾಂತಿ ಪತಿ ವಿರುದ್ಧ ಶನಿವಾರ ಕೃಷ್ಣ ಜಿಲ್ಲೆಯ ಪೆನಮಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಕಳೆದ ಎರಡು ವರ್ಷಗಳ ಹಿಂದೆ ದಂಪತಿ ಮದುವೆಯಾಗಿದ್ದರು. ಈ ದಂಪತಿಗೆ ಈಗಾಗಲೇ ಒಂದು ಗಂಡು ಮಗು ಇದ್ದು, ಜನವರಿ 28 ರಂದು ಪ್ರಶಾಂತಿ ಅವರು ಎರಡನೇ ಹೆರಿಗೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

    ಹೆಣ್ಣು ಮಗು ಜನಿಸಿದ ನಂತರ ರಾಜರತ್ನಂ ಪತ್ನಿಗೆ ಹೆಚ್ಚಿನ ವರದಕ್ಷಿಣೆ ತರುವಂತೆ ಕಿರುಕುಳ ನೀಡಲು ಆರಂಭಿಸಿದ್ದ. ಮೂಲಗಳ ಪ್ರಕಾರ ಟೆಕ್ಕಿ ಕಚೇರಿಗೆ ತೆರಳದೆ ಮನೆಯಲ್ಲೇ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ.

    ಪತ್ನಿ ಮಲಗಿರುವ ವೇಳೆ ಆಕೆಯ ಕೈಗೆ ವೈರ್ ಸುತ್ತಿದ್ದ ರಾಜರತ್ನಂ ಕರೆಂಟ್ ಶಾಕ್ ನೀಡಲು ಪ್ರಯತ್ನಿಸಿದ್ದ. ಆದರೆ ಪ್ರಶಾಂತಿ ಎಚ್ಚರಗೊಂಡಿದ್ದರಿಂದ ಘಟನೆಯಿಂದ ಪರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    ಈ ವೇಳೆ ಪ್ರಶಾಂತಿ ಅವರ ಮೇಲೆ ರಾಜರತ್ನಂ ಹಲ್ಲೆ ನಡೆಸಿದ್ದು, ಅವರ ಮುಖ, ಕತ್ತು ಮತ್ತು ಕೈಗಳ ಮೇಲೆ ಗಾಯವಾಗಿದೆ. ಪತಿ ಹಲವು ದಿನಗಳಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆ ನೀಡಿದ್ದಾನೆ ಎಂದು ಪ್ರಶಾಂತಿ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

  • ದುಷ್ಕರ್ಮಿಗಳ ಮೇಲೆ ಗುಂಡು ಹಾರಿಸಿ ಪತಿ ಜೀವ ರಕ್ಷಿಸಿದ ಪತ್ನಿ- ವಿಡಿಯೋ ವೈರಲ್

    ದುಷ್ಕರ್ಮಿಗಳ ಮೇಲೆ ಗುಂಡು ಹಾರಿಸಿ ಪತಿ ಜೀವ ರಕ್ಷಿಸಿದ ಪತ್ನಿ- ವಿಡಿಯೋ ವೈರಲ್

    ಲಕ್ನೋ: ಪತಿ ಮೇಲೆ ಹಲ್ಲೆ ನಡೆಸುತ್ತಿದ್ದ ದುಷ್ಕರ್ಮಿಗಳ ಮೇಲೆ ಪತ್ನಿ ಗುಂಡು ಹಾರಿಸುವ ಮೂಲಕ ಪತಿಯ ಜೀವ ರಕ್ಷಣೆ ಮಾಡಿದ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.

    ನಗರದ ಸ್ಥಳೀಯ ನಿವಾಸಿ ಅಬಿದ್ ಅಲಿ ಎಂಬವರು ಭಾನುವಾರ ತಮ್ಮ ನಿವಾಸದ ಮುಂದೆ ನಿಂತಿದ್ದ ವೇಳೆ 6 ಮಂದಿ ದುಷ್ಕರ್ಮಿಗಳ ಗುಂಪು ಅವರ ಮೇಲೆ ಹಲ್ಲೆ ನಡೆಸಿದೆ. ಈ ವೇಳೆ ಮನೆ ಹೊರಗೆ ಪತಿ ಮೇಲೆ ಹಲ್ಲೆ ಮಾಡುತ್ತಿದ್ದನ್ನು ಕಂಡ ಪತ್ನಿ ರಿವಾಲ್ವರ್ ನಿಂದ ದುಷ್ಕರ್ಮಿಗಳ ಮೇಲೆ ಗುಂಡು ಹಾರಿಸಿದ್ದಾರೆ.

    ಪತ್ನಿ ಫೈರ್ ಮಾಡಿದ್ದನ್ನು ನೋಡಿ ಭಯಗೊಂಡ ದುಷ್ಕರ್ಮಿಗಳು ಅಲ್ಲಿಂದ ಓಡಿ ಹೋಗಿದ್ದಾರೆ ಈ ಎಲ್ಲಾ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಕಾರಣ ಅಬಿದ್ ಅಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳೆ ವೃತ್ತಿಯಲ್ಲಿ ವಕೀಲರಾಗಿದ್ದು, ಪರವನಾಗಿ ಹೊಂದಿರುವ ಪಿಸ್ತೂಲ್ ಹೊಂದಿದ್ದರು.

    ಘಟನೆ ವೇಳೆ ಹಲ್ಲೆ ನಡೆಸಿದ ದುಷ್ಕರ್ಮಿಗಳು ದಂಪತಿಯನ್ನು ಕೊಲೆ ಮಾಡುವ ಬೆದರಿಕೆಯನ್ನು ಹಾಕಿದ್ದಾರೆ ಎನ್ನಲಾಗಿದೆ. ಈ ಕುರಿತು ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ ಸಂದರ್ಭದಲ್ಲಿ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದರು. ಆದರೆ ಈ ಪ್ರಕರಣ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಲಕ್ನೋದ ಕಕೋರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    https://www.youtube.com/watch?v=fPhSiI4KtwM

     

     

  • ಪತಿಯ ಕಿರುಕುಳದಿಂದ ಬೇಸತ್ತು ಟ್ವಿಟ್ಟರ್ ನಲ್ಲಿ ಪೊಲೀಸರ ಮೊರೆ ಹೋದ ಪತ್ನಿ!

    ಪತಿಯ ಕಿರುಕುಳದಿಂದ ಬೇಸತ್ತು ಟ್ವಿಟ್ಟರ್ ನಲ್ಲಿ ಪೊಲೀಸರ ಮೊರೆ ಹೋದ ಪತ್ನಿ!

    ಮುಂಬೈ: ಪತಿಯ ಕಿರುಕುಳದಿಂದ ಬೇಸತ್ತ ಮಹಿಳೆಯೊಬ್ಬರು ವಿಡಿಯೋ ಮಾಡಿ ಟ್ವಿಟ್ಟರ್ ಮೂಲಕ ಪೊಲೀಸರ ಸಹಾಯ ಕೇಳಿದ ಘಟನೆಯೊಂದು ಮುಂಬೈನ್ ಖಾರ್ ನಲ್ಲಿ ನಡೆದಿದೆ.

    ಮಹಿಳೆಯ ಪತಿ ಅಟೋಮೊಬೈಲ್ ಉದ್ಯಮಿ ಆಗಿದ್ದು, ಈತನ ಕಿರುಕುಳದಿಂದ ಮುಕ್ತಿ ಕೊಡುವಂತೆ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಮಹಿಳೆಯ ವಿಡಿಯೋವನ್ನ ಚಿತ್ರತಯಾರಕ ಅಶೋಕ್ ಪಂಡಿತ್ ಹಂಚಿಕೊಂಡಿದ್ದಾರೆ.

    ವಿಡಿಯೋದಲ್ಲೇನಿದೆ?: ನನ್ನ ಪತಿಯಿಂದ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳಕ್ಕೆ ಒಳಗಾಗಿದ್ದೇನೆ. ಆತ ನನಗೆ ಹಲವು ವರ್ಷಗಳಿಂದ ಕಿರುಕುಳ ನೀಡುತ್ತಲೇ ಬಂದಿದ್ದಾನೆ. ನನ್ನ ಮಕ್ಕಳಿಗೋಸ್ಕರ ನಾನು ಅವನ ಜೊತೆ ಬದುಕುತ್ತಾ ಇದ್ದೀನಿ. ಆದ್ರೆ ಆತ ನನಗೆ ಪ್ರತಿನಿತ್ಯ ತೊಂದರೆ ಕೊಡುವುದರಿಂದ ನನ್ನ ಬದುಕನ್ನು ನಾಶ ಮಾಡ್ತಿದ್ದಾನೆ ಅಂತ ಮಹಿಳೆ ವಿಡಿಯೋ ಮೂಲಕ ಕಣ್ಣೀರು ಹಾಕಿದ್ದಾರೆ.

    ಅಲ್ಲದೇ ಈ ಕುರಿತು ನಾನು ಈಗಾಗಲೇ ಪತಿ ವಿರುದ್ಧ ಎಫ್‍ಐಆರ್ ದಾಖಲಿಸಿದ್ದೇನೆ. ಆದ್ರೆ ಪೊಲೀಸರು ಇದೂವರೆಗೂ ಆತನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಅಂತ ಅವರು ಆರೋಪಿಸಿದ್ದಾರೆ.

    ಹೀಗಾಗಿ ಆತನ ಕಿರುಕುಳದಿಂದ ನನಗೆ ಮುಕ್ತಿ ದೊರಕಿಸಿ ಕೊಡಿ. ಇದರಿಂದ ನನಗೆ ನ್ಯಾಯ ಸಿಗಲಿಲ್ಲವೆಂದರೆ ನಾಳೆಯೇ ನಾನು ಖಾರ್ ನಲ್ಲಿ ಬೀದಿಗೆ ಬೀಳುತ್ತೇನೆ. ಹೀಗಾಗಿ ದಯವಿಟ್ಟು ನನಗೆ ನ್ಯಾಯ ದೊರಕಿಸಿ ಕೊಡಿ ಎಂದು ಮಹಿಳೆ ಬೇಡಿಕೊಂಡಿದ್ದಾರೆ.

    ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, ಮಹಿಳೆ ಮತ್ತು ಆಕೆಯ ಪತಿಯ ನಡುವಿನ ಕೌಟುಂಬಿಕ ಕಲಹ ಇದಕ್ಕೆ ಕಾರಣ ಅಂತ ಹೇಳಿದ್ದಾರೆ.

    ಈ ದಂಪತಿಗೆ ಈಗಾಗಲೇ ಮೂವರು ಮಕ್ಕಳಿದ್ದು, ಇವರು ಮುಂಬೈನ ಖಾರ್ ಪ್ರದೇಶದಲ್ಲಿರೋ ಡೂಪ್ಲೆಕ್ಸ್ ಅಪಾರ್ಟ್ ವೊಂದರಲ್ಲಿ ವಾಸವಾಗಿದ್ದಾರೆ. ಇದರಲ್ಲಿ ಪತಿ ಮತ್ತು ಇಬ್ಬರು ಮಕ್ಕಳು 11 ಫ್ಲೋರ್ ನಲ್ಲಿ ವಾಸವಾಗಿದ್ರೆ, ಹೆಣ್ಣು ಮಗಳೊಂದಿಗೆ ಪತ್ನಿ 12ನೇ ಮಹಡಿಯಲ್ಲಿ ಇದ್ದಾರೆ. ಇತ್ತೀಚೆಗಷ್ಟೇ ಮಹಿಳೆ ಪತಿಯ ವಿರುದ್ಧ 2 ದೂರು ದಾಖಲು ಮಾಡಿದ್ದಾರೆ. ಅದರಲ್ಲಿ ಒಂದು ಮನೆ ಇಬ್ಭಾಗ ಮಾಡಿದ್ದಕ್ಕಾದ್ರೆ ಇನ್ನೊಂದು ಬೆದರಿಕೆಗಾಗಿ ದೂರು ದಾಖಲಿಸಿದ್ದಾರೆ. ಘಟನೆ ಸಂಬಂಧ ತನಿಖೆ ನಡೆಸಿ, ಕ್ರಮ ಕೈಗೊಳ್ಳುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

    https://twitter.com/ashokepandit/status/960028253279965184

  • ಪತ್ನಿಯ ಕೊಂದು ಬೆಡ್ ಬಾಕ್ಸ್ ನಲ್ಲಿಟ್ಟ ಪತಿ- 18 ದಿನದ ನಂತ್ರ ಪೊಲೀಸ್ರಿಗೆ ದೇಹ ಪತ್ತೆ

    ಪತ್ನಿಯ ಕೊಂದು ಬೆಡ್ ಬಾಕ್ಸ್ ನಲ್ಲಿಟ್ಟ ಪತಿ- 18 ದಿನದ ನಂತ್ರ ಪೊಲೀಸ್ರಿಗೆ ದೇಹ ಪತ್ತೆ

    ನವದೆಹಲಿ: ಪತ್ನಿಯನ್ನು ಕೊಂದು ಬಳಿಕ ಆಕೆಯ ಶವವನ್ನು ಬೆಡ್ ಬಾಕ್ಸ್ ನಲ್ಲಿ ಮುಚ್ಚಿಟ್ಟಿದ್ದ ಆರೋಪಿ ಪತಿಯನ್ನು ಪೊಲೀಸರು ಬಂಧಿಸಿರುವ ಘಟನೆ ದೆಹಲಿಯ ತುಘಲಕಾಬಾದ್ ನಲ್ಲಿ ನಡೆದಿದೆ.

    30 ವರ್ಷದ ಮರಿಯಾ ಪತಿಯಿಂದಲೇ ಕೊಲೆಯಾದ ದುರ್ದೈವಿ. ಈಗ ಆರೋಪಿ ಪತಿ ಸುರೇಶ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸುರೇಶ್ ಬೇರೊಬ್ಬ ಹುಡುಗಿಯನ್ನು ಮದುವೆಯಾಗಿದ್ದನು. ಹೀಗಾಗಿ ಮೊದಲನೇ ಪತ್ನಿಯನ್ನು ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಸುರೇಶ್ ಬೇರೆ ಹುಡುಗಿಯ ಜೊತೆ ಮದುವೆಯಾಗಿದ್ದು, ಆಕೆಯ ಜೊತೆ ಜೀವನ ನಡೆಸಲು ಮೊದಲನೇ ಪತ್ನಿ ಮರಿಯಾ ಅಡ್ಡಿಯಾಗುತ್ತಾಳೆ ಎಂದು ಜನವರಿ 11 ರಂದು ಮರಿಯಾರನ್ನು ಕೊಂದು ತನ್ನ ರೂಮಿನ ಹಾಸಿಗೆಯ ಬಾಕ್ಸ್ ನಲ್ಲಿ ಹಾಕಿ ಮುಚ್ಚಿಟ್ಟಿದ್ದಾನೆ. ನಂತರ ಸುಮಾರು ದಿನಗಳಾದ ಮೇಲೆ ಪಕ್ಕದ ಮನೆಯವರಿಗೆ ಶವದ ವಾಸನೆ ಬಂದಿದೆ. ಹೀಗಾಗಿ ಅವರು ಮರಿಯಾ ಮನೆಗೆ ಬಂದು ನೋಡಿದಾಗ ಬಾಗಿಲು ಲಾಕ್ ಆಗಿತ್ತು. ಈ ಬಗ್ಗೆ ಆಕೆಯ ಸಹೋದರನಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪತಿಯೇ ಬೆಂಗಳೂರಿಗೆ ಹೋಗಿದ್ದಾಳೆ ಎಂದು ಮೆಸೇಜ್ ಮಾಡಿದ್ದಾನೆ.

    ಆದ್ರೆ ನೆರೆ ಮನೆಯವರಿಗೆ ಅವನ ಮಾತಿನ ಮೇಲೆ ನಂಬಿಕೆ ಬಾರದೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಪೊಲೀಸರು ಜನವರಿ 29 ರಂದು ಬಂದು ಮನೆಯಲ್ಲಿ ಹುಡುಕಾಡಿದಾಗ ಹಾಸಿಗೆ ಬಾಕ್ಸ್ ನಲ್ಲಿ ಮರಿಯಾ ದೇಹ ಪತ್ತೆಯಾಗಿದೆ. ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದು, ಕೂಡಲೇ ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

  • ಅಪರಿಚಿತರನ್ನು ಮನೆಗೆ ಕರೆತಂದು ಸಲುಗೆಯಿಂದ ಮಾತಾಡು, ಹಣ ವಸೂಲಿ ಮಾಡಿ ನನ್ನ ಕೈಗೆ ಕೊಡು ಎಂದ ಗಂಡ

    ಅಪರಿಚಿತರನ್ನು ಮನೆಗೆ ಕರೆತಂದು ಸಲುಗೆಯಿಂದ ಮಾತಾಡು, ಹಣ ವಸೂಲಿ ಮಾಡಿ ನನ್ನ ಕೈಗೆ ಕೊಡು ಎಂದ ಗಂಡ

    ಮೈಸೂರು: ಅಪರಿಚಿತರನ್ನು ಮನೆಗೆ ಕರೆತಂದು ಸಲುಗೆಯಿಂದ ಮಾತಾಡಿ ಹಣ ವಸೂಲಿ ಮಾಡುವಂತೆ ಪತಿಯೇ ಪತ್ನಿ ಮೇಲೆ ಒತ್ತಡ ಹೇರಿ ಕಿರುಕುಳ ನೀಡುತ್ತಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ನಂಜನಗೂಡು ತಾಲೂಕಿನ ಎಚಗುಡ್ಲ ಗ್ರಾಮದ ಅಯ್ಯಪ್ಪ ಎಂಬಾತನೇ ತನ್ನ ಪತ್ನಿ ರತ್ನಮ್ಮಗೆ ಈ ರೀತಿ ಕಿರುಕುಳ ನೀಡುತ್ತಿರುವ ಪತಿ. ಮೈಸೂರು ತಾಲೂಕಿನ ಉದ್ಭೂರು ಗ್ರಾಮದ ರತ್ನಮ್ಮ, ಎಚಗುಂಡ್ಲ ಗ್ರಾಮದ ಅಯ್ಯಪ್ಪನನ್ನು 6 ವರ್ಷಗಳ ಹಿಂದೆ ಮದುವೆಯಾಗಿದ್ದರು. ಒಂದು ಮಗುವಿನ ತಂದೆಯಾದ ಅಯ್ಯಪ್ಪ ಕುಡಿತದ ಚಟಕ್ಕೆ ದಾಸನಾಗಿದ್ದ. ಆಗಾಗ ಅಯ್ಯಪ್ಪ ಹಣಕ್ಕಾಗಿ ಪತ್ನಿಯನ್ನು ಪೀಡಿಸುತ್ತಿದ್ದು, ಅಪರಿಚಿತರನ್ನು ಮನೆಗೆ ಕರೆತಂದು ಸತ್ಕಾರ ಮಾಡುವ ನೆಪದಲ್ಲಿ ಸಲುಗೆಯಿಂದ ಮಾತಾಡಿ ಹಣ ವಸೂಲಿ ಮಾಡುವ ಪ್ಲಾನ್ ಮಾಡಿದ್ದ. ಅದಕ್ಕೆ ಪತ್ನಿಯನ್ನೇ ದಾಳವಾಗಿ ಬಳಸಿಕೊಳ್ಳಲು ಮುಂದಾಗಿದ್ದ.

    ಇದಕ್ಕೆ ಪತ್ನಿ ಒಪ್ಪದ ಕಾರಣ ಆಕೆಯ ಮೇಲೆಯೇ ಇಲ್ಲ ಸಲ್ಲದ ಆರೋಪಗಳನ್ನು ಹೊರೆಸಲು ಮುಂದಾಗಿದ್ದ. ಇದರಿಂದ ಹೆದರಿದ ರತ್ನಮ್ಮ ತವರು ಮನೆ ಸೇರಿದ್ದರು. ಗ್ರಾಮದ ಮುಖಂಡರಿಂದ ನ್ಯಾಯ ಸಿಗದ ಕಾರಣ ರತ್ನಮ್ಮ ಈಗ ಪೊಲೀಸರ ಮೊರೆ ಹೋಗಿದ್ದಾರೆ. ಕುಡುಕ ಪತಿಯಿಂದ ರಕ್ಷಣೆ ನೀಡಿ ತನ್ನ ಮಗುವನ್ನು ಕೊಡಿಸುವಂತೆ ಅಳಲು ತೋಡಿಕೊಂಡಿದ್ದಾರೆ.

  • ನನ್ನ ಹೆಂಡ್ತಿ  ಹೊಡಿತಾಳೆ, ಅವಳನ್ನ ಕಂಡ್ರೆ ಭಯ, ಡೈವೊರ್ಸ್ ಕೊಡಿ – ಹೈಕೋರ್ಟ್ ನಲ್ಲಿ ಕಣ್ಣೀರಿಟ್ಟ ಟೆಕ್ಕಿ ಪತಿ

    ನನ್ನ ಹೆಂಡ್ತಿ ಹೊಡಿತಾಳೆ, ಅವಳನ್ನ ಕಂಡ್ರೆ ಭಯ, ಡೈವೊರ್ಸ್ ಕೊಡಿ – ಹೈಕೋರ್ಟ್ ನಲ್ಲಿ ಕಣ್ಣೀರಿಟ್ಟ ಟೆಕ್ಕಿ ಪತಿ

    ಬೆಂಗಳೂರು: ನನ್ನ ಹೆಂಡತಿ ತುಂಬಾ ಜೋರು, ಅವಳ ಜೊತೆ ನನಗೆ ಬದುಕಲು ಆಗುತ್ತಿಲ್ಲ ಅಂತಾ ನ್ಯಾಯಮೂರ್ತಿಗಳ ಮುಂದೆ ಟೆಕ್ಕಿ ಪತಿ ಕಣ್ಣೀರು ಹಾಕಿದ್ದಾರೆ.

    ಕರ್ನಾಟಕ ಹೈಕೋರ್ಟ್ ಇಂತಹದೊಂದು ಅಪರೂಪದ ಪ್ರಕರಣಕ್ಕೆ ಸಾಕ್ಷಿಯಾಗಿದೆ. ಅಮೆರಿಕಾದಲ್ಲಿ ನೆಲೆಸಿರೋ ಬೆಂಗಳೂರಿನ ಟೆಕ್ಕಿಯೊಬ್ಬರು, ನನಗೆ ಹೆಂಡ್ತಿನಾ ಕಂಡ್ರೆ ಭಯ, ಅವಳು ನನಗೆ ಹೊಡೀತಾಳೆ, ಅವಳ ಮುಖ ನೋಡಿದ್ರೆನೆ ನನಗೆ ಭಯ ಆಗುತ್ತದೆ. ಹಾಗಾಗಿ ನನಗೆ ಡೈವೋರ್ಸ್ ಕೊಡಿ ಅಂತ ಜಡ್ಜ್ ಬಳಿ ಬೇಡಿಕೊಂಡಿದ್ದಾರೆ.

    ನ್ಯಾಯಾಧೀಶರು ಹೇಳಿದ್ದೇನು?: ಭಾವನೆಗಳು ಬೆರೆತಾಗ ಮಾತ್ರ ಗಂಡ ಹೆಂಡತಿ ಸಂಸಾರ ಮಾಡಲು ಸಾಧ್ಯವಾಗುತ್ತದೆ. ಗಂಡ ಅಮೆರಿಕಾದಲ್ಲಿ ಇದ್ದರೂ ಅಲ್ಲಿಂದಲೇ ಪ್ರೀತಿಯಿಂದ ಇರೋದನ್ನ ನೋಡಿದ್ದೇವೆ. ಆದ್ರೆ ಮಾನಸಿಕ ತೊಂದರೆಗಳು ಆಗುವುದು ಸಾಮಾನ್ಯ, ಎಲ್ಲಾ ಸಮಯದಲ್ಲೂ ಒಂದೇ ರೀತಿ ಇರಲು ಸಾಧ್ಯವಿಲ್ಲ.ಮಾನಸಿಕ ತಜ್ಞರಾದ ಶಾಹ ಎಂಬವರು ಬಳಿ ಕೌನ್ಸೆಲಿಂಗ್ ಮಾಡಿಸಿಕೊಳ್ಳಿ.ಪ್ರೀತಿ ಇಲ್ಲದವರ ಬಳಿ ಇರಲೂ ಯಾರಿಗೂ ಸಾಧ್ಯವಿಲ್ಲ. ಹಾಗೇನಾದ್ರು ಇದ್ರೆ ಅವರನ್ನು ನಾಯಿಯಂತೆ ನೋಡಿಕೊಳ್ಳುತ್ತಾರೆ. ಆರೋಪಗಳನ್ನು ಮಾಡುವುದನ್ನು ಬಿಡಬೇಕು, ಹಿಂದೆ ನಡೆದಿದ್ದನ್ನು ಮರೆಯಬೇಕು.. ಗಂಡನಿಗೆ ಇಚ್ಛೆ ಇಲ್ಲ ಅಂದ್ರೆ ನ್ಯಾಯಾಲಯ ಒತ್ತಾಯಪೂರ್ವಕವಾಗಿ ಒಂದೇ ಕಡೆ ಇರಿ ಎಂದು ಹೇಳಲು ಸಾಧ್ಯವಿಲ್ಲ. ಇದು ಒಂದು ದಿನದ ಜೀವನವಲ್ಲ, ಪ್ರೀತಿ ಇಲ್ಲದ ಮೇಲೆ ಭಾವನೆಗಳು ಬೆರೆಯದೇ ಸಂಸಾರ ನಡೆಸಲು ಸಾಧ್ಯವಿಲ್ಲ ಅಂತಾ ಹೇಳಿದ್ದಾರೆ.

    ಈ ರೀತಿಯಾಗಿ ಬುದ್ದಿವಾದ ಹೇಳಿದ ಜಡ್ಜ್, ಕೊನೆಗೆ ಮಧ್ಯಸ್ಥಿಕಾ ಕೇಂದ್ರಕ್ಕೆ ತೆರಳಿ ಸಮಸ್ಯೆ ಪರಿಹರಿಸಿಕೊಳ್ಳಿ. ಅಲ್ಲಿಯೂ ಪರಿಹಾರ ದೊರೆಯದೆ ಹೋದರೆ ಮತ್ತೆ ಬನ್ನಿ ಅಂತ ಹೇಳಿ ಪ್ರಕರಣವನ್ನ ಮುಂದೂಡಿದ್ದಾರೆ.

  • ಕುಡಿದ ಮತ್ತಿನಲ್ಲಿ ಕಟ್ಟಿಗೆಯಿಂದ ಪತ್ನಿಯ ಕತ್ತು ಹಿಸುಕಿ ಕೊಲೆ- ಮೈ ಮೇಲಿದ್ದ ಚಿನ್ನಾಭರಣ ಸಮೇತ ಪತಿ ಪರಾರಿ

    ಕುಡಿದ ಮತ್ತಿನಲ್ಲಿ ಕಟ್ಟಿಗೆಯಿಂದ ಪತ್ನಿಯ ಕತ್ತು ಹಿಸುಕಿ ಕೊಲೆ- ಮೈ ಮೇಲಿದ್ದ ಚಿನ್ನಾಭರಣ ಸಮೇತ ಪತಿ ಪರಾರಿ

    ವಿಜಯಪುರ: ಕುಡಿದ ಮುತ್ತಿನಲ್ಲಿ ಪತಿ ಕಟ್ಟಿಗೆಯಿಂದ ಪತ್ನಿಯ ಕತ್ತು ಹಿಸುಕಿ ಕೊಲೆಗೈದಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಬಂಕಲಗಿ ಗ್ರಾಮದಲ್ಲಿ ನಡೆದಿದೆ.

    ಸಿದ್ದಮ್ಮ ಸಂಗಠಾಣ (24) ಪತಿಯಿಂದಲೇ ಹತ್ಯೆಯಾದ ದುರ್ದೈವಿ. ಆರೋಪಿ ಪತಿ ಬಸವರಾಜ್ ಸಂಗಠಾಣ ಈ ಕೃತ್ಯ ಎಸಗಿದ್ದಾನೆ. ಕೊಲೆಗೈದ ನಂತರ ಪತ್ನಿ ಮೈಮೇಲಿದ್ದ ಆಭರಣಗಳ ಸಮೇತ ಪಾಪಿ ಪತಿ ಬಸವರಾಜ್ ಪರಾರಿಯಾಗಿದ್ದಾನೆ.

    ಬಸವರಾಜ್ ಮತ್ತು ಸಿದ್ದಮ್ಮ ಸಂಗಾಠಾಣ ಮದುವೆಯಾಗಿ ಮೂರು ವರ್ಷಗಳಾಗಿತ್ತು. ಆರೋಪಿ ಬಸವರಾಜ್ ಕುಡಿತಕ್ಕೆ ದಾಸನಾಗಿದ್ದ. ಭಾನುವಾರ ರಾತ್ರಿ ಕುಡಿದು ಮನೆಗೆ ಬಂದಿದ್ದಾನೆ. ಕುಡಿದ ಮತ್ತಿನಲ್ಲಿ ಏಕಾಏಕಿ ಅಲ್ಲೇ ಪಕ್ಕದಲ್ಲಿದ್ದ ಕಟ್ಟಿಗೆಯನ್ನು ತೆಗೆದುಕೊಂಡು ಸಿದ್ದಮ್ಮನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಭಯಗೊಂಡು ಪತ್ನಿಯ ಮೈಮೇಲಿದ್ದ ಆಭರಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ.

    ಇನ್ನು ಮನೆಯಿಂದ ಹೊರ ಬಂದಿಲ್ಲ ಎಂದು ಮುಂಜಾನೆ ಸಂಬಂಧಿಕರು ಹೋಗಿ ನೋಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣವೇ ಸಂಬಂಧಿಕರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದ ಸಿಂದಗಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿ ಪತಿಗಾಗಿ ಬಲೆ ಬೀಸಿದ್ದಾರೆ.

  • ಪತ್ನಿಯ ಲವ್ವರ್ ಅಂದ್ಕೊಂಡು 14ರ ಮಗನ ಮೇಲೆಯೇ ಕೊಡಲಿಯಿಂದ ಹಲ್ಲೆಗೈದ ಅಪ್ಪ!

    ಪತ್ನಿಯ ಲವ್ವರ್ ಅಂದ್ಕೊಂಡು 14ರ ಮಗನ ಮೇಲೆಯೇ ಕೊಡಲಿಯಿಂದ ಹಲ್ಲೆಗೈದ ಅಪ್ಪ!

    ಹೈದರಾಬಾದ್: ಪತ್ನಿಯ ಪ್ರಿಯಕರ ಅಂದುಕೊಂಡು ಅಪ್ಪನೇ 14 ವರ್ಷದ ಮಗನ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿರುವ ಆಘಾತಕಾರಿ ಘಟನೆ ಆಂಧ್ರ ಪ್ರದೇಶದ ಕುರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.

    14ರ ಹರೆಯದ ಪರಶುರಾಮ ತಂದೆಯಿಂದಲೇ ಹಲ್ಲೆಗೊಳಗಾದ ಹುಡುಗ. ಈ ಘಟನೆ ಬೆಥಾಮೆರ್ಲಾ ಮಂಡಲ್ ಗುತುಪಲ್ಲೆ ಗ್ರಾಮದಲ್ಲಿ ಶುಕ್ರವಾರ ನಡೆದಿದ್ದು, ತಂದೆ ಸೋಮಣ್ಣ ಪತ್ನಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿ ಅಂದುಕೊಂಡು ಹಲ್ಲೆ ಮಾಡಿದ್ದಾನೆ.

    ನಡೆದಿದ್ದೇನು?
    ಸೋಮಣ್ಣ ಮತ್ತು ರಮಲಕ್ಷ್ಮೀ ಇಬ್ಬರು ಗ್ರಾಮದಲ್ಲಿ ಕೃಷಿ ಕಾರ್ಮಿಕರಾಗಿದ್ದರು. ಈ ದಂಪತಿಗೆ ನಾಲ್ಕು ಮಕ್ಕಳಿದ್ದು, ಸೋಮಣ್ಣನಿಗೆ ತನ್ನ ಪತ್ನಿ ಅದೇ ಗ್ರಾಮದ ಬೇರೊಬ್ಬ ವ್ಯಕ್ತಿಯ ಜೊತೆ ಅನೈತಿಕ ಸಂಬಂಧ ಇದೆ ಎಂಬ ಅನುಮಾನವಿತ್ತು. ಈ ವಿಚಾರವಾಗಿ ಆಗಾಗ ಇಬ್ಬರ ಮಧ್ಯೆ ಜಗಳ ಕೂಡ ನಡೆಯುತ್ತಿತ್ತು. ಶುಕ್ರವಾರ ಸೋಮಣ್ಣ ಕುಡಿದು ಮನೆಗೆ ರಾತ್ರಿ ಬಂದಿದ್ದಾನೆ. ಆಗ ಪತ್ನಿ ಲಕ್ಷ್ಮಿ ತನ್ನ ಮಗ ಪರುಶರಾಮನ ಜೊತೆ ಮಲಗಿದ್ದರು. ಆದರೆ ಸೋಮಣ್ಣ ತನ್ನ ಮಗನನ್ನು ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಬೇರೊಬ್ಬ ವ್ಯಕ್ತಿ ಎಂದು ತಿಳಿದು ಕೋಪಗೊಂಡು ಅಲ್ಲೇ ಪಕ್ಕದಲ್ಲಿದ್ದ ಕೊಡಲಿಯಿಂದ ಮಲಗಿದ್ದ ಮಗನ ಕೈ ಮತ್ತು ಭುಜಗಳಿಗೆ ಹೊಡೆದಿದ್ದಾನೆ.

    ಪರಶುರಾಮ ಅಪ್ಪ ಹಲ್ಲೆ ಮಾಡಿದ ಬಳಿಕ ಕೂಗಿಕೊಂಡು ಹಾಸಿಗೆಯಿಂದ ಕೆಳಗೆ ಬಿದ್ದಿದ್ದಾನೆ. ನಂತರ ಹಲ್ಲೆ ಮಾಡಿದ್ದು ಮಗನಿಗೆ ಎಂದು ತಿಳಿದು ಕಣ್ಣೀರಿಟ್ಟು ನೆರೆಹೊರೆಯವರ ಸಹಾಯ ಪಡೆದು ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆದರೆ ಕೊಡಲಿಯಿಂದ ಹಲ್ಲೆ ಮಾಡಿದ್ದರಿಂದ ಗಂಭೀರವಾಗಿ ಪೆಟ್ಟಾಗಿದ್ದು, ವೈದ್ಯರು ತೀವ್ರ ಗಾಯಗಳಾಗಿದೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಬಳಿಕ ಕಾರ್ನೂಲ್‍ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವೈದ್ಯರು ಹುಡುಗನ ಸ್ಥಿತಿ ತೀರ ಗಂಭೀರವಾಗಿದೆ ಎಂದು ಹೇಳಿದ್ದಾರೆ.

    ಈ ಘಟನೆ ಸಂಬಂಧ ಪೊಲೀಸರು ಆರೋಪಿ ಸೋಮಣ್ಣ ವಿರುದ್ಧ ಐಪಿಸಿ ಸೆಕ್ಷನ್ 307ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಮೊಬೈಲ್ ನಲ್ಲಿ ಬ್ಯುಸಿಯಾಗಿ ಊಟ ರೆಡಿ ಮಾಡಲು ಮರೆತಿದ್ದ ಪತ್ನಿಯನ್ನು ಬರ್ಬರವಾಗಿ ಕೊಂದೇ ಬಿಟ್ಟ!

    ಮೊಬೈಲ್ ನಲ್ಲಿ ಬ್ಯುಸಿಯಾಗಿ ಊಟ ರೆಡಿ ಮಾಡಲು ಮರೆತಿದ್ದ ಪತ್ನಿಯನ್ನು ಬರ್ಬರವಾಗಿ ಕೊಂದೇ ಬಿಟ್ಟ!

    ಕೋಲ್ಕತ್ತಾ: ಸಾಮಾಜಿಕ ಜಾಲತಾಣ ಹೆಚ್ಚಾಗಿ ಬಳಕೆ ಮಾಡುತ್ತಿದ್ದ ಪರಿಣಾಮ ಮಹಿಳೆಯೊಬ್ಬರು ಮಧ್ಯಾಹ್ನ ಅಡುಗೆ ಮಾಡಲು ಮರೆತಿದ್ದರಿಂದ ಸಿಟ್ಟುಗೊಂಡ ಪತಿ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿದ ಆಘಾತಕಾರಿ ಘಟನೆಯೊಂದು ನಡೆದಿದೆ.

    ಈ ಘಟನೆ ಗುರುವಾರ ಕೋಲ್ಕತ್ತಾದ ಚೆಟ್ಲಾ ಪ್ರದೇಶದ ಅಲಿಪೊರೆ ರಸ್ತೆಯಲ್ಲಿ ನಡೆದಿದೆ. ಘಟನೆ ಸಂಬಂಧ ಆರೋಪಿ ಪತಿ ಸುರಜಿತ್ ಪಾಲ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಪತಿ ಆತನ 36 ವರ್ಷದ ಪತ್ನಿಗೆ ಅಕ್ರಮ ಸಂಬಂಧವಿದೆ. ಹೀಗಾಗಿ ಪತ್ನಿ ಟುಂಪಾ ತನ್ನ ಹೆಚ್ಚಿನ ಸಮಯವನ್ನು ಸಾಮಾಜಿಕ ಜಾಲತಾಣದಲ್ಲೇ ಕಳೆಯತ್ತಾಳೆ ಅಂತ ಶಂಕಿಸಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಏನಿದು ಘಟನೆ?:
    ಜನವರಿ 24ರಂದು ಸುರಜಿತ್ ಮಧ್ಯಾಹ್ನ ಊಟಕ್ಕಾಗಿ ಮನೆಗೆ ಬಂದಿದ್ದಾನೆ. ಈ ವೇಳೆ ಪತ್ನಿ ತನ್ನ ಮೊಬೈಲ್ ನಲ್ಲಿ ಬ್ಯುಸಿಯಾಗಿದ್ದಳು. ಹೀಗಾಗಿ ಅಡುಗೆ ಮಾಡುವುದನ್ನು ಮರೆತಿದ್ದಳು. ಪರಿಣಾಮ ಸಿಟ್ಟುಗೊಂಡ ಪತಿರಾಯ ಚಾಕು ತೋರಿಸಿ ಬೆದರಿಸಿದ್ದಾನೆ. ಆದ್ರೂ ಆಕೆ ಮೊಬೈಲ್ ನಲ್ಲೇ ಬ್ಯುಸಿಯಾಗಿದ್ದಳು. ಇದರಿಂದ ಮತ್ತಷ್ಟು ಕೋಪಗೊಂಡ ಪತಿ ಸುರಜಿತ್ ತನ್ನ ಕೈಯಲ್ಲಿದ್ದ ಚಾಕುವಿನಿಂದ ಆಕೆಯ ತಲೆಗೆ ಹಲವು ಬಾರಿ ಇರಿದ್ದಾನೆ. ಅಲ್ಲದೇ ಟವೆಲ್ ನಿಂದ ಆಕೆಯ ಕುತ್ತಿಗೆಗೆ ಬಿಗಿದು ಕೊಲೆಗೈದಿದ್ದಾನೆ.

    ಹೀಗೆ ಮಾಡಿದ ಬಳಿಕ ತಾನೇನು ಮಾಡುತ್ತಿದ್ದೇನೆಂದು ತಿಳಿದ ಸುರಜಿತ್, ತನ್ನ ಕೈಯ ಮಣಿಕಟ್ಟನ್ನು ಕುಯ್ದುಕೊಳ್ಳುವ ಮೂಲಕ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಇದು ಸಾಧ್ಯವಾಗದಾಗ ನಂತರ ಗಾಯಗಳಾದ ಕಡೆ ಬ್ಯಾಂಡೇಜ್ ಸುತ್ತಿದ್ದಾನೆ. ಅಲ್ಲದೇ ನಗರದ ಮೂಲಕ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಈತನ ಮೇಲೆ ಅನುಮಾನಗೊಂಡ ಪೊಲೀಸರು ಬಂಧಿಸಿದ್ದಾರೆ.

     

    ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅದರಲ್ಲಿ ಓರ್ವ ಮದುವೆಗೆಂದು ನಗರದ ಕಡೆ ತೆರಳಿದ್ದನು. ಇನ್ನೋರ್ವ ಕಾಲೇಜು ಓದುತ್ತಿದ್ದು, ಕಾಲೇಜಿನಿಂದ ಬಂದ ಬಳಿಕ ಕೊಲೆಯಾಗಿ ರಕ್ತದ ಮಡುವಿನಲ್ಲಿ ಬಿದ್ದಿರುವ ತನ್ನ ತಾಯಿಯ ದೇಹವನ್ನು ನೋಡಿ ದಂಗಾಗಿದ್ದಾನೆ.

    ಪತ್ನಿ ಟುಂಪಾ ಫೇಸ್ ಬುಕ್ ಮತ್ತು ವಾಟ್ಸಪ್ ನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದುದರಿಂದ ಆಕೆಗೆ ಬೇರೊಬ್ಬನ ಜೊತೆ ಸಂಬಂಧವಿದೆಯೆಂದು ಶಂಕಿಸಿ ಪತಿ ಸರ್ಜಿತ್ ಕೃತ್ಯ ಎಸಗಿರಬಹುದು ಅಂತ ಸ್ಥಳಿಯ ನಿವಾಸಿಗಳು ತಿಳಿಸಿದ್ದಾರೆ. ಕೆಲ ದಿನಗಳ ನಾದಿನಿ ಜೊತೆ ಗಂಡನಿಗೆ ಅಕ್ರಮ ಸಂಬಂಧ ಇರುವ ವಿಚಾರ ಟುಂಪಾಗೆ ಗೊತ್ತಾಗಿದೆ ಎನ್ನಲಾಗಿದೆ.

  • ಶೀಲ ಶಂಕಿಸಿ ಪತ್ನಿಯ ಮುಖಕ್ಕೆ ಆಸಿಡ್ ಎರಚಿದ ಪಾಪಿ ಪತಿ

    ಶೀಲ ಶಂಕಿಸಿ ಪತ್ನಿಯ ಮುಖಕ್ಕೆ ಆಸಿಡ್ ಎರಚಿದ ಪಾಪಿ ಪತಿ

    ಜೈಪುರ್: ಪತ್ನಿಯ ಶೀಲದ ಮೇಲೆ ಸಂಶಯ ಪಟ್ಟು ಆಕೆಯ ಮೇಲೆ ಆಸಿಡ್ ಎರಚಿದ ಘಟನೆ ಶನಿವಾರ ಸಂಜೆ ರಾಜಸ್ಥಾನದ ಜೈಪುರ್ ಜಿಲ್ಲೆಯ ಮಾಲಾಪದದಲ್ಲಿ ನಡೆದಿದೆ.

    ಭಾಗಿರಥಿ ಮಹಾಲಿಕ್ (45) ಪತ್ನಿಗೆ ಆಸಿಡ್ ಹಾಕಿದ ಆರೋಪಿ ಪತಿ. ಆಸಿಡ್ ದಾಳಿಯಿಂದ 40 ವರ್ಷದ ಮಹಿಳೆಯ ಮುಖ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಮಹಿಳೆ ಆಸಿಡ್ ದಾಳಿಯಿಂದ ಬಳಲುತ್ತಿದ್ದಾಗ ಅಕ್ಕಪಕ್ಕದ ಮನೆಯವರು ರಕ್ಷಿಸಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲೆ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ನನ್ನ ತಂದೆ, ತಾಯಿಯ ಶೀಲದ ಮೇಲೆ ಯಾವಾಗಲೂ ಸಂಶಯಪಡುತ್ತಿದ್ದನು. ಮನೆಗೆ ಬಂದ ತಕ್ಷಣ ನನ್ನ ತಾಯಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಚಿತ್ರಹಿಂಸೆ ನೀಡುತ್ತಿದ್ದನು ಎಂದು 20 ವರ್ಷದ ಮಗಳೇ ತಂದೆಯ ವಿರುದ್ಧ ದೂರು ನೀಡಿದ್ದು, ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

    ಈ ಘಟನೆ ಶನಿವಾರ ನಡೆದಿದ್ದು, ಮನೆಗೆ ಬಂದ ತಕ್ಷಣ ಭಾಗಿರಥಿ ತನ್ನ ಹೆಂಡತಿಯ ಜೊತೆ ಜಗಳವಾಡಿ ಆಕೆಯ ಮೇಲೆ ಆಸಿಡ್ ಎರಚಿದ್ದಾನೆ. ಭಾನುವಾರ ಪೊಲೀಸರು ಭಾಗಿರಥಿಯನ್ನು ವಶಕ್ಕೆ ಪಡೆದಿದ್ದಾರೆ. ನಂತರ ಭಾಗಿರಥಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಆತನ ಜಾಮೀನು ಅರ್ಜಿಯನ್ನು ಕೂಡ ತಿರಸ್ಕರಿಸಿದೆ ಎಂದು ಜೈಪುರ್ ನ ಉಪ-ವಿಭಾಗದ ಪೊಲೀಸ್ ಅಧಿಕಾರಿಯಾದ ಪ್ರಶಾಂತ್ ಕುಮಾರ್ ಮಾಲಾ ತಿಳಿಸಿದ್ದಾರೆ.