ಚಂಡೀಗಢ: ಪತಿ ಬೇರೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆಂದು ಆರೋಪಿಸಿ ಪತ್ನಿ ಆತನ ಮರ್ಮಾಂಗವನ್ನೇ ಕಟ್ ಮಾಡಿ ಶೌಚಾಲಯದಲ್ಲಿ ಎಸೆದಿರುವ ವಿಚಿತ್ರ ಘಟನೆಯೊಂದು ಪಂಜಾಬ್‍ನ ಜಲಂಧರ್‍ನ ಜೋಗಿಂಧರ್ ನಗರದಲ್ಲಿ ನಡೆದಿದೆ.
ಆಜಾದ್ ಸಿಂಗ್ ಪತ್ನಿಯಿಂದ ದಾಳಿಗೊಳಗಾದ ಪತಿ. ತೀವ್ರವಾಗಿ ಅಸ್ವಸ್ಥಗೊಂಡಿರುವ ಆಜಾದ್‍ರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆಜಾದ್ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ:ಸದಾ ಸೆಕ್ಸ್ ಗೆ ಪೀಡಿಸುತ್ತಿದ್ದ ಪತ್ನಿಯನ್ನ ಕೊಂದ ಪತಿ
ಸೋಮವಾರ ರಾತ್ರಿ ಅಜಾದ್ ಮಲಗಿದ್ದ ವೇಳೆ ಪತ್ನಿ ಸುಖವಂತ್ ಕೌರ್, ಕಬ್ಬಿಣದ ರಾಡ್ ನಿಂದ ಪತಿಯ ತಲೆಗೆ ಹೊಡೆದಿದ್ದಾಳೆ. ಹಲ್ಲೆಯ ಬಳಿಕ ಪ್ರಜ್ಞೆ ಕಳೆದುಕೊಂಡ ಆಜಾದ್‍ನ ಮರ್ಮಾಂಗವನ್ನ ಚಾಕುವಿನಿಂದ ಕಟ್ ಮಾಡಿ ಶೌಚಾಲಯದಲ್ಲಿ ಎಸೆದಿದ್ದಾಳೆ. ಆಜಾದ್‍ರನ್ನು ಆಸ್ಪತ್ರೆಗೆ ದಾಖಲಿಸಿದಾಗ ತೀವ್ರ ರಕ್ತಸ್ರಾವ ಆಗಿತ್ತು. ಆಜಾದ್ ಸ್ಥಿತಿ ಗಂಭೀರವಾಗಿದೆ ಎಂದು ಜಲಂಧರ್ ಎಸಿಪಿ ಸತೀಂಧರ್ ಕುಮಾರ್ ಹೇಳಿದ್ದಾರೆ.
ರಾಯ್‍ಪುರ: ಸದಾ ಸೆಕ್ಸ್ ಗೆ ಪೀಡಿಸುತ್ತಿದ್ದ ಪತ್ನಿಯನ್ನು ಪತಿ ಕೊಲೆ ಮಾಡಿರುವ ವಿಚಿತ್ರ ಘಟನೆಯೊಂದು ಛತ್ತೀಸ್‍ಗಢ ರಾಜ್ಯದ ಬಿಸ್ಲಾಪುರದಲ್ಲಿ ನಡೆದಿದೆ. ಕೊಲೆಯ ಬಳಿಕ ಪತಿ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಆರೋಪಿ ಹೇಳುವಂತೆ ತನ್ನ ಪತ್ನಿ ನಿಮೊಫೋಮೇನಿಯಾ (ಸೆಕ್ಸ್ ನಲ್ಲಿ ಅತಿ ಆಸಕ್ತಿ) ಎಂಬ ರೋಗದಿಂದ ಬಳಲುತ್ತಿದ್ದಳು. ಹೀಗಾಗಿ ಪತ್ನಿ ಸಮಯವಲ್ಲದ ಸಮಯದಲ್ಲಿ ಪತಿ ಜೊತೆ ಸೆಕ್ಸ್ ಗಾಗಿ ಪೀಡಿಸುತ್ತಿದ್ದಳು. ಪತ್ನಿಯ ಈ ವರ್ತನೆಯಿಂದ ಬೇಸತ್ತ ಪತಿ ರಾತ್ರಿ ಕೊಲೆ ಮಾಡಿ ಮನೆಯ ಅಡುಗೆ ಕೋಣೆಯಲ್ಲಿಯೇ ಶವವನ್ನು ಹೂತಿದ್ದಾನೆ. ಬೆಳಗ್ಗೆ ತನ್ನ ತಪ್ಪಿನ ಅರಿವಾಗಿ ಠಾಣೆಗೆ ತೆರಳಿ ತಪ್ಪೊಪ್ಪಿಕೊಂಡಿದ್ದಾನೆ ಪೊಲೀಸರು ತಿಳಿಸಿದ್ದಾರೆ.
ಬೆದರಿಕೆ ಹಾಕ್ತಿದ್ದಳು: ಕೆಲವೊಂದು ಸಮಯದಲ್ಲಿ ಲೈಂಗಿಕ ಕ್ರಿಯೆಗೆ ನಿರಾಕರಿಸಿದ್ರೆ ವರದಕ್ಷಿಣೆ ಕಿರುಕುಳ ಅಡಿ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಪತಿಗೆ ಬೆದರಿಕೆ ಹಾಕುತ್ತಿದ್ದಳು. ಪತ್ನಿಯ ಇಚ್ಚೆಯನ್ನು ಪೂರ್ಣಗೊಳಿಸಲು ಆರೋಪಿ ತನ್ನ ಸ್ನೇಹಿತರನ್ನು ಆಕೆ ಬಳಿ ಹಲವು ಬಾರಿ ಕಳುಹಿಸಿದ್ದನು. ಇದೇ ವಿಷಯಕ್ಕೆ ಆರೋಪಿ ಫ್ರೆಂಡ್ಸ್ ಸರ್ಕಲ್ ನಲ್ಲಿ ಅವಮಾನಕ್ಕೆ ಗುರಿಯಾಗಿದ್ದನು. ಇದನ್ನೂ ಓದಿ:ಸೆಕ್ಸ್ ತಿರಸ್ಕರಿಸಿದ್ದಕ್ಕೆ ಯುವಕನ ಮರ್ಮಾಂಗವನ್ನೇ ಕತ್ತರಿಸಿದ್ಳು ಯುವತಿ!
ನಿಮೊಫೋಮೇನಿಯಾದಿಂದ ಬಳಲುವ ವ್ಯಕ್ತಿ ಅಥವಾ ಮಹಿಳೆ ಲೈಂಗಿಕ ಕ್ರಿಯೆಗಾಗಿ ಹಾತೊರೆಯುತ್ತಿರುತ್ತಾರೆ. ಈ ರೋಗದಿಂದ ಬಳಲುವ ವ್ಯಕ್ತಿ ಲೈಂಗಿಕ ವಿಷಯದಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಂಡು ವಿಚಿತ್ರ ಬೇಡಿಕೆಯನ್ನು ಇಟ್ಟುಕೊಂಡಿರುತ್ತಾರೆ.
ಮೈಸೂರು: ಬ್ಯಾಂಕ್ ಅಧಿಕಾರಿಗಳ ನೊಟೀಸ್ ಗೆ ಹೆದರಿ ರೈತ ಕುಟುಂಬವೊಂದು ವಿಷ ಸೇವಿಸಲು ಮುಂದಾದ ಘಟನೆ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ.
ಹಾಡ್ಯ ಗ್ರಾಮದ ರೈತ ಶಿವಣ್ಣ ಕುಟುಂಬದಿಂದ ಆತ್ಮಹತ್ಯೆಗೆ ಯತ್ನ ನಡೆದಿದೆ. ಮೂರು ಹೆಣ್ಣುಮಕ್ಕಳು, ಪತ್ನಿ ಹಾಗೂ ಮಗನ ಜೊತೆ ಬ್ಯಾಂಕಿನ ಮುಂಭಾಗದಲ್ಲಿ ವಿಷ ಕುಡಿಯಲು ಮುಂದಾಗಿದ್ದ ಶಿವಣ್ಣ ಅವರನ್ನು ಮನವೊಲಿಸುವಲ್ಲಿ ರೈತ ಮುಖಂಡರು ಯಶಸ್ವಿಯಾಗಿದ್ದಾರೆ.
2011 ರಲ್ಲಿ ಶಿವಣ್ಣ ನಂಜನಗೂಡಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಜಮೀನಿನ ಪತ್ರಗಳನ್ನು ಅಡವಿಟ್ಟು ಟ್ರ್ಯಾಕ್ಟರ್ ಖರೀದಿಗಾಗಿ 7 ಲಕ್ಷ ರೂ. ಸಾಲ ಪಡೆದಿದ್ದರು. ಅಲ್ಪ-ಸ್ವಲ್ಪ ಸಾಲ ತೀರಿಸಿದ ಶಿವಣ್ಣ ಪೂರ್ತಿ ಹಣ ಮರುಪಾವತಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಬ್ಯಾಂಕಿನ ಅಧಿಕಾರಿಗಳು ಏಕಾಏಕಿ ಕ್ರಮ ತೆಗೆದುಕೊಳ್ಳಲು ಮುಂದಾಗಿ, ನೋಟಿಸ್ ನೀಡದೆ ಟಾಂಟಾಂ ಹೊಡೆಸುವುದಾಗಿ ಬೆದರಿಕೆ ಹಾಕಿದ್ದರು.
ಗೌರವಕ್ಕೆ ಅಂಜಿದ ಶಿವಣ್ಣ, ಕುಟುಂಬ ಸಮೇತ ನಂಜನಗೂಡಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಮುಂದೆ ವಿಷ ಸೇವಿಸಲು ಬಾಟಲಿ ಸಮೇತ ಹಾಜರಾಗಿದ್ದರು. ಈ ವೇಳೆ ಬ್ಯಾಂಕಿಗೆ ಧಾವಿಸಿದ ರೈತ ಮುಖಂಡರು ಬ್ಯಾಂಕ್ ಅಧಿಕಾರಿಗಳೊಂದಿಗೆ ಮಾತನಾಡಿ ಶಿವಣ್ಣ ಕುಟುಂಬದ ನೆರವಿಗೆ ನಿಂತಿದ್ದಾರೆ.
ಮಂಡ್ಯ: ರೈತ ಬಂಧು ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ಪತ್ನಿ ಸುನೀತ ಪುಟ್ಟಣ್ಣಯ್ಯ ಹಾಗೂ ಮಗ ದರ್ಶನ್ ಅವರು ಪುಟ್ಟಣ್ಣಯ್ಯ ಅವರೊಂದಿಗಿನ ಕೊನೆ ಕ್ಷಣಗಳನ್ನು ನೆನೆದು ಕಣ್ಣೀರಾಗುತ್ತಿದ್ದಾರೆ.
ಮಗ ದರ್ಶನ್ ತಂದೆಗೆ ಚುನಾವಣೆಯಲ್ಲಿ ಸಹಾಯ ಮಾಡಲು ಅಮೇರಿಕಾದಿಂದ ಬಂದು ಕೆಲವೇ ದಿನಗಳಾಗಿತ್ತು. ಕೊನೆಯ ಬಾರಿಗೆ ದರ್ಶನ್ ತಂದೆಯೊಂದಿಗೆ ಫೋನಿನಲ್ಲಿ ಮಾತನಾಡಿದ್ದರು. ಇದೀಗ ತನ್ನ ತಂದೆಯ ಕಾಲುಚೀಲವನ್ನು ಕೈಯಾರೆ ಬಿಚ್ಚಿದ್ದನ್ನು ನೆನೆದು ಮಗ ದರ್ಶನ್ ಕಣ್ಣೀರು ಹಾಕಿದ್ರು.
ಪತ್ನಿ ಸುನೀತ ಅವರು ಇಡೀ ದಿನ ಪುಟ್ಟಣ್ಣಯ್ಯ ಅವರ ಜೊತೆಯಿದ್ದರಂತೆ. ಬೇಬಿ ಬೆಟ್ಟದಲ್ಲಿ ನಡೆದ ಕಾರ್ಯಕ್ರಮಕ್ಕೂ ಜೊತೆಯಲ್ಲೇ ಹೋಗಿದ್ರಂತೆ. ಆದ್ರೆ ಚೆನ್ನಾಗಿಯೇ ಇದ್ದ ಪುಟ್ಟಣ್ಣಯ್ಯ ಅವರು ಸಾವನ್ನಪ್ಪಿದ್ದು ಸಂಕಟ ತಂದಿದೆ ಎಂದು ದುಃಖಿಸಿದ್ರು.
ಅಮೇರಿಕಾದಲ್ಲಿರಿರುವ ಹೆಣ್ಣಮಕ್ಕಳು ಮತ್ತು ಕುಟುಂಬಸ್ಥರು ಬರಬೇಕಾಗಿರುವುದರಿಂದ ಅಂತ್ಯಕ್ರಿಯೆ ಬುಧವಾರ ನಡೆಯುತ್ತದೆ. ತಡವಾಗಿ ಅಂತ್ಯಕ್ರಿಯೆ ನಡೆಯುತ್ತಿರುವುದಕ್ಕೆ ಅಭಿಮಾನಿಗಳು ಕ್ಷಮಿಸಬೇಕು ಪುಟ್ಟಣ್ಣಯ್ಯ ಪತ್ನಿ ಸುನೀತ ಮನವಿ ಮಾಡಿಕೊಂಡ್ರು.
ವೇದಿಕೆಯಲ್ಲಿಯೇ ಹೃದಯಾಘಾತ: ರೈತ ಬಂಧು, ಅಭಿಮಾನಿಗಳಲ್ಲಿ ಮೇಲುಕೋಟೆ ಮಾಣಿಕ್ಯ ಎಂದೇ ಖ್ಯಾತರಾಗಿದ್ದ ಕೆ.ಎಸ್.ಪುಟ್ಟಣ್ಣಯ್ಯ ಅವರು ಓರ್ವ ಕಬಡ್ಡಿ ಹಾಗೂ ಕುಸ್ತಿ ಪಟುವಾಗಿದ್ದರು. ಮಂಡ್ಯ ಜಿಲ್ಲೆಯ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಕಬಡ್ಡಿ ಪಂದ್ಯ ವೀಕ್ಷಣೆಗೆ ಆಗಮಿಸಿದ್ದರು. ಈ ಪಂದ್ಯದಲ್ಲಿ ಪುಟ್ಟಣ್ಣಯ್ಯ ಬೆಂಬಲಿತ ಪಾಂಡವಪುರ ಟೀಂ ಗೆದ್ದಿತ್ತು. ಹೀಗಾಗಿ ಗೆದ್ದ ತಂಡವನ್ನು ಸನ್ಮಾನಿಸಲು ಪುಟ್ಟಣ್ಣಯ್ಯ ವೇದಿಕೆ ಮೇಲೆ ಆಸೀನರಾಗಿದ್ದರು.
ಅಭಿಮಾನಿಗಳು, ಸ್ಥಳೀಯ ಮುಖಂಡರೊಂದಿಗೆ ಕುಳಿತು ಖುಷಿಯಾಗಿಯೇ ಪಂದ್ಯ ವೀಕ್ಷಿಸಿದ್ದ ಪುಟ್ಟಣ್ಣಯ್ಯರಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದೆ. ನೋಡನೋಡುತ್ತಿದ್ದಂತೆ ವೇದಿಕೆಯಲ್ಲೇ ಕುಸಿದು ಬಿದ್ದ ಅವರನ್ನು ಕೂಡಲೇ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯ್ತು. ಆದ್ರೆ ವಿಧಿ ಅದಾಗಲೇ ಪುಟ್ಟಣ್ಣಯ್ಯ ಬದುಕಿನ ಹೋರಾಟವನ್ನು ಕಿತ್ತುಕೊಂಡು ಬಿಟ್ಟಿತ್ತು. ಬಳಿಕ ಪುಟ್ಟಣ್ಣಯ್ಯ ಮೃತದೇಹವನ್ನು ಹುಟ್ಟೂರು ಕ್ಯಾತನಹಳ್ಳಿಗೆ ರವಾನಿಸಲಾಯಿತು. ಈ ವೇಳೆ ಸಾವಿರಾರು ಅಭಿಮಾನಿಗಳು ಅಗಲಿದ ನಾಯಕನ ಅಂತಿಮ ದರ್ಶನಕ್ಕೆ ಮುಗಿಬಿದ್ದರು. ಇನ್ನು ನಟ ದರ್ಶನ್ ರಾತ್ರೋರಾತ್ರಿ ಪುಟ್ಟಣ್ಣಯ್ಯರ ಅಂತಿಮ ದರ್ಶನ ಪಡೆದರು. ಈ ವೇಳೆ ಪೊಲೀಸರು ಅಭಿಮಾನಿಗಳನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.
ಶಿವಮೊಗ್ಗ: ತವರು ಮನೆಯವರು ಆಸ್ತಿಯನ್ನು ತನ್ನ ಹೆಸರಿಗೆ ಬರೆಯಲಿಲ್ಲ ಎಂಬ ಕಾರಣಕ್ಕೆ ಪತಿಯೇ ಪತ್ನಿಗೆ ವಿಷ ಕುಡಿಸಿ ಕೊಂದ ಆಘಾತಕಾರಿ ಘಟನೆ ಶಿವಮೊಗ್ಗ ತಾಲೂಕು ಮಂಡಘಟ್ಟದಲ್ಲಿ ನಡೆದಿದೆ.
ಹೊನ್ನಾಳಿ ತಾಲೂಕು ಗೋವಿನಕೋವಿ ಗ್ರಾಮದ ರಾಜಪ್ಪ ಎಂಬವರ ಮಗಳು, ಎಂಜಿನಿಯರಿಂಗ್ ಪದವೀಧರೆ ನಳಿನಾ ವರದಕ್ಷಿಣೆ ದಾಹಕ್ಕೆ ಬಲಿಯಾದ ಯುವತಿ. ಈಕೆ ಏಳು ತಿಂಗಳ ಗರ್ಭಿಣಿಯಾಗಿದ್ದು, ಮಗು ಕೂಡಾ ಮೃತಪಟ್ಟಿದೆ.
ರಾಜಪ್ಪ- ಕಮಲಮ್ಮ ಅವರ ಏಕೈಕ ಮಗಳು ನಳಿನಾ ಅವರನ್ನು ಚೇತನ್ ಪ್ರೀತಿಸುವ ನಾಟಕ ಮಾಡಿ, ಕಳೆದ ಏಪ್ರಿಲ್ ನಲ್ಲಿ ಮೈಸೂರಿಗೆ ಕರೆದುಕೊಂಡು ಹೋಗಿ ಮದುವೆ ಆಗಿದ್ದನು. ಅಂದಿನಿಂದಲೂ ವರದಕ್ಷಿಣೆ ಹಣಕ್ಕಾಗಿ ಪೀಡಿಸುತ್ತಿದ್ದ. ತವರು ಮನೆ ಆಸ್ತಿಯಲ್ಲಿ ಪಾಲು ತೆಗೆದುಕೊಳ್ಳಲು ಒತ್ತಾಯ ಮಾಡಿದ್ದನು ಎನ್ನಲಾಗಿದೆ.
ಕೊನೆಗೆ ತವರು ಮನೆಯವರು ಪಾಲು ಕೊಟ್ಟರೂ ಜಂಟಿ ಖಾತೆ ಮಾಡಿದರು. ಆದರೆ ಈ ಎಲ್ಲಾ ಆಸ್ತಿ ಮಾರಾಟ ಮಾಡಬೇಕು. ನನ್ನ ಹೆಸರಿಗೇ ಆಸ್ತಿ ಬರೆಯಿರಿ ಎಂದು ಚೇತನ್ ಒತ್ತಾಯಿಸಿದ್ದ. ಇದಕ್ಕೆ ಒಪ್ಪದಿದ್ದಾಗ ತನ್ನ ತಾಯಿ, ಅಜ್ಜನ ಜೊತೆ ಸೇರಿ ನಳಿನ ಗೆ ಬಲವಂತವಾಗಿ ವಿಷ ಕುಡಿಸಿದ್ದಾನೆ. ಚಿಕಿತ್ಸೆ ಫಲಕಾರಿಯಾಗದೆ ನಳಿನ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಪ್ರೀತಿ ಮಾಡಿ ಮದುವೆ ಆಗಿ ವಿಷ ಕುಡಿಸಿದ ಪತಿ ಚೇತನ್, ಆತನ ತಾಯಿ ಲತಾ, ಕೃತ್ಯಕ್ಕೆ ಕೈ ಜೋಡಿಸಿದ ಅಜ್ಜ ಹಾಲಪ್ಪರನ್ನು ಕುಂಸಿ ಪೊಲೀಸರು ಬಂಧಿಸಿದ್ದಾರೆ.
ಹೈದರಾಬಾದ್: ಪತ್ನಿ ಬೇರೆಯವರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆಂಬ ವಿಷಯ ತಿಳಿದು ಬೇಸತ್ತ ಪತಿ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರಪ್ರದೇಶದ ಕರ್ನೂಲ್‍ನಲ್ಲಿ ನಡೆದಿದೆ.
ವಿನಯ್ ಕುಮಾರ್(24) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ವಿನಯ್ ಗೋನೆಗಾಂಡ್ಲಾ ಗ್ರಾಮದ ನಿವಾಸಿಯಾಗಿದ್ದು, 2017ರ ನವೆಂಬರ್ 1 ರಂದು ಸೌಜನ್ಯ ಜೊತೆ ಮದುವೆಯಾಗಿದ್ದನು. ನಂತರ ಸೌಜನ್ಯಳಿಗೆ ಬೇರೆಯವನ ಜೊತೆ ಅಕ್ರಮ ಸಂಬಂಧ ಇದೆ ಎಂದು ಶಂಕಿಸಿ ಪ್ರತಿನಿತ್ಯ ಜಗಳವಾಡುತ್ತಿದ್ದ.
ದಿನನಿತ್ಯ ಇಬ್ಬರ ನಡುವೆ ಜಗಳವಾಗುತ್ತಿದ್ದ ಕಾರಣ ವಿನಯ್ ಪತ್ನಿ ಕೆಲವು ತಿಂಗಳ ಹಿಂದೆ ತನ್ನ ತವರು ಮನೆಯನ್ನು ಸೇರಿದ್ದಳು. ನಂತರ ಸೌಜನ್ಯ ಅವರ ಪೋಷಕರು ವಿಜಯ್‍ಗೆ ಕರೆ ಮಾಡಿ ಆಕೆಯ ಆರೋಗ್ಯ ಸರಿಯಿಲ್ಲ ಹಾಗೂ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ಕರೆ ಮಾಡಿದ್ದಾರೆ.
ತನ್ನ ಪತ್ನಿ ಸೌಜನ್ಯಳನ್ನು ನೋಡಲು ವಿನಯ್ ತನ್ನ ಸಹೋದರ ವಂಶಿಕೃಷ್ಣ ಜೊತೆ ಆಸ್ಪತ್ರೆಗೆ ಭೇಟಿ ನೀಡಿದ್ದಾನೆ. ಆಗ ವಿನಯ್ ಹಾಗೂ ಸೌಜನ್ಯ ನಡುವೆ ಮತ್ತೆ ಜಗಳ ನಡೆದಿದೆ. ಜಗಳವಾಡಿದ ನಂತರ ವಿನಯ್ ಕರ್ನೂಲ್ ಹೊರವಲಯದಲ್ಲಿರುವ ಮಧುನಗರದ ಕಾರ್ಬೈಡ್ ಫ್ಯಾಕ್ಟರಿಗೆ ಹೋಗಿ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರೈಲ್ವೇ ಸಿಬ್ಬಂದಿ ಮೃತದೇಹವನ್ನು ನೋಡಿ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ರಾಂಚಿ: ಪತಿ ಸಾಹಸ ಮಾಡಿ ನಾಪತ್ತೆಯಾಗಿದ್ದ ಪತ್ನಿಯನ್ನು 24 ದಿನಗಳ ನಂತರ ಪತ್ತೆ ಹಚ್ಚಿರುವ ಘಟನೆ ಜಾರ್ಖಂಡ್ ನ ಜಮ್ಶೆದ್‍ಪುರನಲ್ಲಿ ನಡೆದಿದೆ.
ಮನೋಹರ ನಾಯಕ್ ತನ್ನ ಪತ್ನಿಗಾಗಿ 24 ದಿನಗಳಲ್ಲಿ ಸುಮಾರು 600 ಕಿಲೋಮೀಟರ್ ಸೈಕಲ್ ನಲ್ಲಿ ಸುತ್ತಾಡಿ ಕೊನೆಗೂ ಪತ್ನಿಯನ್ನು ಹುಡುಕಿದ್ದಾರೆ. ಇವರು ಮುಸಬಾನಿ ಬಾಲಿಗೊಡಾ ಗ್ರಾಮದವರು. ಇವರ ಪತ್ನಿ ಅನಿತಾ ಜನವರಿ 14ರಂದು ಸಂಕ್ರಾಂತಿ ಹಬ್ಬಕ್ಕೆಂದು ಕುಮಾರ್ಸಾಲ್ ಹಳ್ಳಿಯ ತವರಿಗೆ ಹೋಗಿದ್ದಾಗ ಕಾಣೆಯಾಗಿದ್ದರು.
ಆದರೆ ಎರಡು ದಿನಗಳಾದರೂ ಪತ್ನಿ ಹಿಂದಿರುಗದಿದ್ದಾಗ ಮನೋಹರ್, ಮುಸಬಾನಿ ಮತ್ತು ದುಮಾರಿಯಾ ಪೊಲೀಸ್ ಠಾಣೆಗಳಿಗೆ ದೂರು ನೀಡಿದ್ದರು. ಮನೋಹರ್ ಕಾರ್ಮಿಕರಾಗಿದ್ದು, ಪತ್ನಿ ಬಗ್ಗೆ ಪೊಲೀಸರಿಗೆ ಯಾವುದೇ ಸುಳಿವು ಸಿಗದಿದ್ದಾಗ ಕೊನೆಗೆ ತಾವೇ ಪತ್ನಿಯನ್ನ ಹುಡುಕುವ ದೃಢ ನಿರ್ಧಾರ ಮಾಡಿದರು. ಮನೋಹರ್ ಪತ್ನಿ ಅನಿತಾ ಅವರ ಮಾನಸಿಕ ಸ್ಥಿತಿ ಚೆನ್ನಾಗಿರಲಿಲ್ಲ ಹಾಗೂ ಅವರಿಗೆ ಸರಿಯಾಗಿ ಮಾತನಾಡಲು ಬರುತ್ತಿರಲಿಲ್ಲವಾದ ಕಾರಣ ತಾನಾಗಿಯೇ ಪತ್ನಿಯನ್ನ ಹುಡುಕಿ ಹೊರಟರು.
ನಾನು ನನ್ನ ಹಳೆಯ ತುಕ್ಕು ಹಿಡಿದ ಸೈಕಲ್ ರಿಪೇರಿ ಮಾಡಿ ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಪ್ರಯಾಣಿಸಿದೆ. ಎಷ್ಟು ದೂರ ಬಂದಿದ್ದೇನೆ ಎಂಬುದು ನನಗೆ ಗೊತ್ತಿರಲಿಲ್ಲ ಎಂದು ಮನೋಹರ್ ಹೇಳಿದ್ದಾರೆ.
ಮನೋಹರ್ ದಿನಕ್ಕೆ 25 ಕಿ.ಮೀ. ದೂರ ಸೈಕಲ್ ತುಳಿದು 24 ದಿನಗಳಲ್ಲಿ ಸುಮಾರು 65 ಗ್ರಾಮಗಳನ್ನು ಸುತ್ತಾಡಿದ್ದಾರೆ. ಆದ್ರೆ ನಿಂತರವಾಗಿ ಪತ್ನಿಯನ್ನ ಹುಡುಕಿದರೂ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಕೊನೆಗೆ ಪತ್ನಿಯ ಫೋಟೋವನ್ನು ಸ್ಥಳೀಯ ಪತ್ರಿಕೆಗಳಿಗೆ ನೀಡಿ ಕಾಣೆಯಾದ ವ್ಯಕ್ತಿಗಳ ಅಂಕಣದಲ್ಲಿ ಪ್ರಕಟಿಸಲು ಕೇಳಿದ್ದರು. ಫೋಟೋ ನೋಡಿದವರೊಬ್ಬರು ಮನೋಹರ್ ಪತ್ನಿ ಕೊಲ್ಕತ್ತಾದ ಖರಗ್‍ಪುರದಲ್ಲಿ ರಸ್ತೆಬದಿಯ ಅಂಗಡಿಯೊಂದರಲ್ಲಿ ಕುಳಿತಿರುವುದನ್ನ ನೋಡಿ ಗುರುತು ಹಿಡಿದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಅಲ್ಲಿಂದ ಮುಸಬಾನಿ ಪೊಲೀಸರಿಗೆ ಮಾಹಿತಿ ರವಾನೆಯಾಗಿದ್ದು, ಅವರು ಮನೋಹರ್ ಗೆ ಮಾಹಿತಿ ತಿಳಿಸಿದ್ದಾರೆ. ಮನೋಹರ್ ಅಲ್ಲಿಗೆ ಹೋಗಿ ತಮ್ಮ ಪತ್ನಿಯನ್ನು ಮನೆಗೆ ಕರೆತಂದಿದ್ದಾರೆ.
ನಾವು ಕೂಡಲೇ ಅಧಾರ್ ಕಾರ್ಡ್ ಸಮೇತ ಅಲ್ಲಿಗೆ ಹೋಗುವಂತೆ ಮನೋಹರ್ ಗೆ ಹೇಳಿದೆವು. ಫೆಬ್ರವರಿ 10ರಂದು ಮನೋಹರ್ ಹಾಗೂ ಪತ್ನಿ ಅನಿತಾ ಜೊತೆಯಾಗಿದ್ದಾರೆ ಎಂದು ಮುಸಬಾನಿ ಎಸ್‍ಹೆಚ್‍ಓ ಸುರೇಶ್ ಲಿಂಡಾ ಹೇಳಿದ್ದಾರೆ. ಫೆಬ್ರವರಿ 11ರಂದು ದಂಪತಿ ಮನೆಗೆ ವಾಪಸ್ ಬಂದಿದ್ದಾರೆ.
ಲಕ್ನೋ: ಪತಿ ನಿರಂತರವಾಗಿ ವಾಟ್ಸಪ್ ಚಾಟ್ ಮಾಡೋದನ್ನು ನೋಡಿದ ಪತ್ನಿ 10 ನಿದ್ದೆ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಉತ್ತರ ಪ್ರದೇಶ ರಾಜ್ಯದ ಗಾಜಿಯಾಬಾದ್ ಜಿಲ್ಲೆಯ ಲಜ್ಪತ್ ನಗರದಲ್ಲಿ ಗುರುವಾರ ನಡೆದಿದೆ.
ಪವಿತ್ರಾ (ಹೆಸರು ಬದಲಾಯಿಸಲಾಗಿದೆ) ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಪವಿತ್ರಾ 12 ವರ್ಷಗಳ ಹಿಂದೆಯೇ ಮನೋಜ್ (ಹೆಸರು ಬದಲಾಯಿಸಲಾಗಿದೆ) ಎಂಬವರೊಂದಿಗೆ ಮದುವೆ ಆಗಿತ್ತು. ದಂಪತಿಗೆ ಎರಡು ಮಕ್ಕಳು ಸಹ ಇವೆ. ಕೆಲವು ದಿನಗಳಿಂದ ಮನೋಜ್ ತನ್ನ ಜೊತೆ ಕೆಲಸ ಮಾಡುವ ಮಹಿಳಾ ಸಹೋದ್ಯೋಗಿಯೊಂದಿಗೆ ನಿರಂತರವಾಗಿ ವಾಟ್ಸಪ್ ನಲ್ಲಿ ಚಾಟ್ ಮಾಡುತ್ತಾರೆ ಎಂದು ಪವಿತ್ರಾ ಆರೋಪಿಸುತ್ತಾರೆ.
ಗುರುವಾರ ರಾತ್ರಿಯೂ ಸಹ ಪತಿ ಮನೋಜ್ ಸಹೋದ್ಯೋಗಿಯೊಂದಿಗೆ ಚಾಟ್ ಮಾಡುತ್ತಿರುವುದನ್ನು ನೋಡಿದ ಪತ್ನಿ 10 ನಿದ್ದೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಪವಿತ್ರಾರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಪವಿತ್ರಾ ಹೇಳಿಕೆ ಆಧಾರಿಸಿ ಪತಿ ಮನೋಜ್‍ರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕೋಲ್ಕತ್ತಾ: ಪತಿಯೊಬ್ಬ ಪತ್ನಿ ತವರು ಮನೆಯಿಂದ ವರದಕ್ಷಿಣೆ ತರಲಿಲ್ಲ ಎಂದು ಆಕೆಯ ಕಿಡ್ನಿಯನ್ನು ಮಾರಾಟ ಮಾಡಿರುವ ವಿಚಿತ್ರ ಘಟನೆಯೊಂದು ಪಶ್ಚಿಮ ಬಂಗಾಳ ರಾಜ್ಯದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
28 ವರ್ಷದ ರಿಟಾ ಸರ್ಕಾರ್ ಕಿಡ್ನಿ ಕಳೆದುಕೊಂಡ ಪತ್ನಿ. ರಿಟಾ ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ರಿಟಾ ಪತಿ ಮತ್ತು ಬಾಮೈದನನ್ನು ಬಂಧಿಸಿದ್ದಾರೆ. 12 ವರ್ಷಗಳ ಹಿಂದೆ ಬಿಸ್ವಜಿತ್ ಸರ್ಕಾರ್ ಎಂಬಾತನೊಂದಿಗೆ ರಿಟಾ ಅವರ ಮದುವೆಯಾಗಿತ್ತು. ಮದುವೆ ಬಳಿಕ ಪತಿ ಮತ್ತು ಮಾವ ವರದಕ್ಷಿಣೆ ತರುವಂತೆ ಪ್ರತಿನಿತ್ಯ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು.
ಕಿಡ್ನಿ ಮಾರಾಟ ಮಾಡಿದ್ದು ಹೇಗೆ?: ಎರಡು ವರ್ಷಗಳ ಹಿಂದೆ ರಿಟಾ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಈ ವೇಳೆ ರಿಟಾ ಪತಿ ಕೊಲ್ಕತ್ತಾದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ರು. ವೈದ್ಯರು ರಿಟಾ ಅಪೆಂಡಿಕ್ಸ್ ನಿಂದ ಬಳಲುತ್ತಿದ್ದಾರೆ ಎಂದು ಪತಿಗೆ ತಿಳಿಸಿದ್ದಾರೆ. ಇದೇ ಸಮಯವನ್ನು ದುರುಪಯೋಗ ಮಾಡಿಕೊಂಡ ರಿಟಾ ಪತಿ ಶಸ್ತ್ರ ಚಿಕಿತ್ಸೆ ವೇಳೆ ವೈದ್ಯರೊಂದಿಗೆ ಸೇರಿಕೊಂಡು ಪತ್ನಿಯ ಕಿಡ್ನಿ ತೆಗೆದು ಮಾರಾಟ ಮಾಡಿದ್ದಾನೆ.
ಅಪೆಂಡಿಕ್ಸ್ ಶಸ್ತ್ರ ಚಿಕಿತ್ಸೆ ಬಳಿಕ ರಿಟಾ ನೋವಿನಿಂದ ಬಳಲುತ್ತಿದ್ದರು. ಆದ್ರೆ ಪತಿರಾಯ ಮಾತ್ರ ಕೋಲ್ಕತ್ತಾದಲ್ಲಿ ಸರ್ಜರಿ ನಡೆದಿರುವ ಬಗ್ಗೆ ಯಾರಿಗೂ ಹೇಳದಂತೆ ಪತ್ನಿಗೆ ಎಚ್ಚರಿಕೆ ಕೊಟ್ಟಿದ್ದ. ರಿಟಾ ಹೊಟ್ಟೆ ನೋವಿನಿಂದ ಬಳಲುತ್ತಿದ್ದರೂ ನಿರ್ಲಕ್ಷ್ಯ ಮಾಡಿದ್ದ.
ಹೊಟ್ಟೆ ನೋವಿನಿಂದ ಬಳಲುತ್ತಿದ್ದ ರಿಟಾರನ್ನು ನೋಡಿದ ಪೋಷಕರು ಉತ್ತರ ಬಂಗಾಲ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ರಿಟಾರನ್ನು ಪರೀಶಿಲಿಸಿದ ವೈದ್ಯರು ಒಂದು ಕಿಡ್ನಿ ಇಲ್ಲವೆಂಬ ವಿಷಯ ತಿಳಿಸಿದ್ದಾರೆ. ಅಲ್ಲಿಂದ ಹಿಂದಿರುಗಿ ಬಂದ ರಿಟಾ ಮಲಡಾದಲ್ಲಿರುವ ನರ್ಸಿಂಗ್ ಹೋಮ್ ನ ವೈದ್ಯರ ಭೇಟಿಯಾಗಿದ್ದಾರೆ. ಈ ವೇಳೆ ವೈದುರು ಒಂದು ಕಿಡ್ನಿ ಮಾತ್ರ ತೆಗೆಯಲಾಗಿದ್ದು, ಪ್ರಾಣಾಪಾಯವೇನಿಲ್ಲ ಎಂಬ ಸಲಹೆ ನೀಡಿದ್ದಾರೆ.
ನನ್ನ ದೇಹದಿಂದ ಕಿಡ್ನಿ ತೆಗೆದಿದ್ದು ಹೇಗೆ ಎಂಬುದನ್ನು ಯೋಚಿಸಿದಾಗ ಎರಡು ವರ್ಷಗಳ ಹಿಂದೆ ನಡೆದಿರುವ ಅಪೆಂಡಿಕ್ಸ್ ಶಸ್ತ್ರ ಚಿಕಿತ್ಸೆಯ ನೆನಪಾಯಿತು. ಚಿಕಿತ್ಸೆಯ ಬಳಿಕ ಪತಿಯ ವರ್ತನೆ, ಶಸ್ತ್ರ ಚಿಕಿತ್ಸೆ ನಡೆದಿರುವ ಬಗ್ಗೆ ಯಾರಿಗೂ ಹೇಳದಂತೆ ನೀಡಿದ್ದ ಎಲ್ಲ ಎಚ್ಚರಿಕೆಯ ಮಾತುಗಳು ಅನುಮಾನ ಮೂಡಿಸಿದವು ಎಂದು ರಿಟಾ ಹೇಳಿದ್ದಾರೆ.
ಪತಿ ವಿರುದ್ಧ ದೂರು: ತನ್ನ ಕಿಡ್ನಿ ಕಳ್ಳತನ ಆಗಿದ್ದರ ಬಗ್ಗೆ ರಿಟಾ ತನ್ನ ಪೋಷಕರ ಸಹಾಯದೊಂದಿಗೆ ಉತ್ತರ ಬಂಗಾಳದ ಫರಕ್ಕ ಪೊಲೀಸ್ ಠಾಣೆಯಲ್ಲಿ ಪತಿ, ಮಾವ, ಅತ್ತೆ ಮತ್ತು ಬಾಮೈದನ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನ್ವಯ ಮುರ್ಷಿದಾಬಾದ್ ನಗರದಲ್ಲಿ ಬಟ್ಟೆ ವ್ಯಾಪಾರಿಯಾಗಿರುವ ರಿಟಾ ಪತಿ ಬಿಸ್ವಜಿತ್ ಸರ್ಕಾರ್ ಮತ್ತು ಬಾಮೈದ ಶ್ಯಾಮಲ್ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ರಿಟಾ ಅತ್ತೆ ಬುಲ್‍ರಾಣಿ ಮತ್ತು ಮಾವ ಎಸ್ಕೇಪ್ ಆಗಿದ್ದಾರೆ.
ತಪ್ಪೊಪ್ಪಿಕೊಂಡ ಪತಿ: ಪೊಲೀಸ್ ವಿಚಾರಣೆ ವೇಳೆ ಬಿಸ್ವಜಿತ್ ಪತ್ನಿಯ ಕಿಡ್ನಿಯನ್ನು ಛತ್ತೀಸ್‍ಘಢ ರಾಜ್ಯದ ಉದ್ಯಮಿಯೊಬ್ಬರಿಗೆ ಮಾರಿಕೊಂಡಿದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಇನ್ನು ರಿಟಾ ಸರ್ಜರಿ ನಡೆದಿರುವ ಖಾಸಗಿ ಆಸ್ಪತ್ರೆಯ ಮೇಲೆ ಪೊಲೀಸರು ದಾಳಿ ನಡೆಸಲಾಗಿದೆ ಎಂದು ಫರಕ್ಕ ಠಾಣೆಯ ಹೆಸರು ಹೇಳಲು ಇಚ್ಚಿಸದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ತನಿಖೆಗೆ ವಿಶೇಷ ಟೀಂ: ಕಿಡ್ನಿ ಸಮಗಲಿಂಗ್ ಗ್ಯಾಂಗ್‍ವೊಂದು ನಗರದಲ್ಲಿ ಈ ರೀತಿಯ ಚಟುವಟಿಕೆ ನಡೆಸುತ್ತಿರುವ ಶಂಕೆ ವ್ಯಕ್ತವಾಗಿದೆ. ಹಾಗಾಗಿ ಕಿಡ್ನಿ ದಂಧೆಯ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲು ವಿಶೇಷ ಟೀಮ್ ರಚನೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ರಿಟಾ 2005ರಲ್ಲಿ ಬಿಸ್ವಜಿತ್ ನೊಂದಿಗೆ ಮದುವೆಯಾಗಿದ್ದು, ವರದಕ್ಷಿಣೆ ಹಣಕ್ಕಾಗಿ ಪತಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ. ರಿಟಾ ಮತ್ತು ಬಸ್ವಜಿತ್‍ಗೆ 11 ವರ್ಷದ ಒಬ್ಬ ಮಗನು ಇದ್ದಾನೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 19(ಹಣಕ್ಕಾಗಿ ಮಾನವ ಅಂಗಗಳ ಮಾರಾಟ), ಸೆಕ್ಷನ್ 21 (ಹಣಕ್ಕಾಗಿ ಅಂಗಗಳ ಮಾರಾಟ ಕಾನೂನು ಉಲ್ಲಂಘನೆ), ಸೆಕ್ಷನ್ 307 (ಕೊಲೆಗೆ ಯತ್ನ) ಮತ್ತು ಸೆಕ್ಷನ್ 498(ವಿವಾಹಿತ ಮಹಿಳೆಯ ಅಸಹಾಯಕತೆಯ ದುರುಪಯೋಗ) ಅನ್ವಯ ಪ್ರಕರಣ ದಾಖಲಾಗಿದೆ.
ಜೈಪುರ: ಪ್ರಧಾನಿ ನರೇಂದ್ರ ಮೋದಿಯವರ ಪತ್ನಿ ಜಶೋದಾ ಬೆನ್ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರ್ ಅಪಘಾತಕ್ಕೊಳಗಾದ ಘಟನೆ ರಾಜಸ್ತಾನದಲ್ಲಿ ನಡೆದಿದೆ.
ಈ ಘಟನೆ ಕೋಟಾ- ಚಿತ್ತೂರ್ ಹೆದ್ದಾರಿಯಿಂದ ಸುಮಾರು 55 ಕಿ.ಮೀ ದೂರದಲ್ಲಿ ನಡೆದಿದ್ದು, ಘಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪತ್ನಿ ಜಶೋದಾ ಬೆನ್ ಅಪಾಯದಿಂದ ಪಾರಾಗಿದ್ದಾರೆ.
ಘಟನೆ ನಡೆದ ಕೂಡಲೇ ಜಶೋದಾ ಬೆನ್ ಅವರನ್ನು ಪ್ರಾಥಮಿಕ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಸದ್ಯ ಅವರು ಅಪಾಯದಿಂದ ಪಾರಾಗಿದ್ದು, ಆರೋಗ್ಯವಾಗಿದ್ದಾರೆ ಅಂತ ಚಿತ್ತೋರ್ ಗಢ್ ನ ಉಪವಿಭಾಗೀಯ ಮ್ಯಾಜಿಸ್ಟ್ರೇಟರ್ ಸುರೇಶ್ ಕಾರ್ತಿಕ್ ತಿಳಿಸಿದ್ದಾರೆ.
ಕಾರಿನಲ್ಲಿ ಒಟ್ಟು 7 ಮಂದಿ ಪ್ರಯಾಣಿಸುತ್ತಿದ್ದು, ಅವರೆಲ್ಲರೂ ಸಂಬಂಧಿಕರೆಂದು ತಿಳಿದುಬಂದಿದೆ. ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಾಲಕ ಜಯೇಂದ್ರ ಸಣ್ಣಪುಟ್ಟ ಗಾಯಗಳಾಗಿವೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಇವರೆಲ್ಲರೂ ಗುಜರಾತ್ ನ ಬರನ್ ಎಂಬಲ್ಲಿನ ಅತ್ರು ಗೆ ಪ್ರವಾಸ ಬೆಳೆಸಿದ್ದರು ಎಂಬುದಾಗಿ ವರದಿಯಾಗಿದೆ.
ಘಟನೆ ಕುರಿತು ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ಹಾಗೂ ಮಾಜಿ ಸಂಸದೆ ರಮ್ಯಾ ಟ್ವೀಟ್ ಮಾಡಿದ್ದಾರೆ. ಜಶೋದಾ ಬೆನ್ ಅವರು ಶೀಘ್ರ ಗುಣಮುಖರಾಗುವಂತೆ ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.