Tag: ಪತ್ನಿ

  • ಪತ್ನಿಗೆ ಕಿರುಕುಳ, ಅಕ್ರಮ ಸಂಬಂಧ ಆರೋಪ ನಿರಾಕರಿಸಿದ ಮಹಮದ್ ಶಮಿ

    ಪತ್ನಿಗೆ ಕಿರುಕುಳ, ಅಕ್ರಮ ಸಂಬಂಧ ಆರೋಪ ನಿರಾಕರಿಸಿದ ಮಹಮದ್ ಶಮಿ

    ನವದೆಹಲಿ: ಟೀಂ ಇಂಡಿಯಾ ವೇಗಿ ಮಹಮದ್ ಶಮಿ ತಮ್ಮ ವಿರುದ್ಧ ಪತ್ನಿ ಮಾಡಿರುವ ಕೌಟುಂಬಿಕ ಹಿಂಸೆ ಮತ್ತು ಅಕ್ರಮ ಸಂಬಂಧದ ಆರೋಪವನ್ನು ನಿರಾಕರಿಸಿದ್ದಾರೆ.

    ಈ ಕುರಿತು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ತನ್ನ ಗೌರವಕ್ಕೆ ಧಕ್ಕೆ ತರಲು ಈ ಆರೋಪಗಳನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ.

    ಮಹಮದ್ ಶಮಿ ಅವರ ಪತ್ನಿ ಹಾಸಿನ್ ಜೋಹನ್ ಅವರು ಪತಿ ಹಾಗೂ ಆತನ ಕುಟುಂಬ ಸದಸ್ಯರು ತಮಗೆ ಕಿರುಕುಳ ನೀಡುತ್ತಿದ್ದಾರೆ. ಪತಿ ಶಮಿ ಅವರು ಸಹ ಆಫ್ರಿಕಾ ಸರಣಿಯಿಂದ ಹಿಂದುರುಗಿದ ನಂತರ ತಮಗೆ ದೈಹಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದ್ದರು.

    https://www.facebook.com/CircleofCricket.MDShami/posts/1696050590488023

    ಮಹಮದ್ ಶಮಿ ಹಾಗೂ ಅವರ ಕುಟುಂಬದ ವಿರುದ್ಧ ಈ ಕುರಿತು ದೂರು ದಾಖಲಿಸಲಾಗುವುದು ಎಂದು ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ. ಮಾಧ್ಯಮ ವರದಿಯ ಪ್ರಕಾರ ಹಾಸಿನ್ ಅವರಿಗೆ ಪತಿ ಶಮಿ ಅವರ ಕುಟುಂಬ ಸದಸ್ಯರು ಕೆಲ ದಿನಗಳಿಂದ ಕಿರುಕುಳ ನೀಡುತ್ತಿದ್ದು, ಕೆಲವು ವೇಳೆ ಮುಂಜಾನೆ 2 ಗಂಟೆವರೆಗೂ ಇದು ಮುಂದುವರೆಯುತ್ತಿತ್ತು. ಅಲ್ಲದೆ ಕೊಲೆ ಮಾಡಲು ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿದೆ.

     ಕುಟುಂಬದ ಭವಿಷ್ಯದ ದೃಷ್ಟಿಯಿಂದ ಇದನ್ನು ತಡೆದುಕೊಂಡಿದ್ದೆ, ಆದರೆ ಶಮಿ ಕಿರುಕುಳದಿಂದ ಬೇಸತ್ತು ಅವರ ವಿರುದ್ಧ ದೂರು ನೀಡುವುದಾಗಿ ಪತ್ನಿ ತಿಳಿಸಿದ್ದಾರೆ.

  • ಮಲಗಿದ್ದ ವೇಳೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪತ್ನಿಯ ಬರ್ಬರ ಹತ್ಯೆಗೈದು ಪೊಲೀಸರಿಗೆ ಶರಣಾದ!

    ಮಲಗಿದ್ದ ವೇಳೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪತ್ನಿಯ ಬರ್ಬರ ಹತ್ಯೆಗೈದು ಪೊಲೀಸರಿಗೆ ಶರಣಾದ!

    ಗದಗ: ಪತ್ನಿಯ ಶೀಲ ಶಂಕಿಸಿ ಪತಿಯೇ ಪತ್ನಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ  ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋವನಾಳ ಗ್ರಾಮದಲ್ಲಿ ನಡೆದಿದೆ.

    30 ವರ್ಷದ ಶಿವಲೀಲಾ ಪಟ್ಟೇದ್ ಪತಿಯಿಂದಲೇ ಕೊಲೆಯಾದ ದುರ್ದೈವಿ. ಆರೋಪಿ ಪತಿ ನಾಗರಾಜ್ ಪಟ್ಟೇದ್ ಕೌಟುಂಬಿಕ ಕಲಹಗಳ ಹಿನ್ನೆಲೆಯಲ್ಲಿ ಶಿವಲೀಲಾ ಮಲಗಿದ್ದ ವೇಳೆ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದಾನೆ.

    ಆರೋಪಿ ನಾಗರಾಜ್ ಹಲವು ದಿನಗಳಿಂದ ಪತ್ನಿಯ ಶೀಲವನ್ನು ಶಂಕಿಸಿಸುತ್ತಿದ್ದನು. ಈ ಬಗ್ಗೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಶನಿವಾರ ರಾತ್ರಿ ಕೂಡ ಇದೇ ವಿಚಾರಕ್ಕೆ ಇಬ್ಬರ ನಡುವೆ ಜೋರಾದ ಜಗಳ ನಡೆದಿದೆ. ನಂತರ ಶಿವಲೀಲಾ ಮಲಗಿದ್ದಾರೆ. ಈ ವೇಳೆ ಪತಿ ನಾಗರಾಜ್ ಪತ್ನಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.

    ಪತ್ನಿಯನ್ನು ಕೊಲೆ ಮಾಡಿದ ನಂತರ ತಾನೇ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಈ ಘಟನೆ ಸಂಬಂಧ ಲಕ್ಷ್ಮೇಶ್ವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಪತಿಯ ಐಎಎಸ್ ಅಧಿಕಾರ, ಪತ್ನಿಯ ದರ್ಬಾರ್- ಕನ್ನಡ ಬರದಿದ್ರೂ ಸಹೋದರನಿಂದ ಆ್ಯಂಕರಿಂಗ್

    ಪತಿಯ ಐಎಎಸ್ ಅಧಿಕಾರ, ಪತ್ನಿಯ ದರ್ಬಾರ್- ಕನ್ನಡ ಬರದಿದ್ರೂ ಸಹೋದರನಿಂದ ಆ್ಯಂಕರಿಂಗ್

    ಬೆಂಗಳೂರು: ಪತಿ ಐಎಎಸ್ ಅಧಿಕಾರಿಯಾದರೆ ಪತ್ನಿಯ ಅದೃಷ್ಟವೇ ಬದಲಾಗುತ್ತೆ. ಇದಕ್ಕೆ ತಾಜಾ ಉದಾಹರಣೆ ಐಎಎಸ್ ಅಧಿಕಾರಿ ಪಂಕಜ್ ಕುಮಾರ್ ಪಾಂಡೆ ಅಂಡ್ ಫ್ಯಾಮಿಲಿ.

    ವಾರ್ತಾ ಇಲಾಖೆಯ ಪ್ರಭಾರ ಇನ್‍ಜಾರ್ಜ್ ಆಗಿರುವ ಐಎಎಸ್ ಅಧಿಕಾರಿ ಪಂಕಜ್ ಕುಮಾರ್ ‘ಫ್ಯಾಮಿಲಿ ಪ್ಯಾಕೇಜ್’ಗೆ ತಮ್ಮ ಅಧಿಕಾರ ಬಳಸಿ ಗಿಫ್ಟ್ ಕೊಟ್ಟಿದ್ದಾರೆ. ಪಾಂಡೆಯವರ ಪತ್ನಿ ಅನುಜಾ ಮೇಡಂ ಹಾಗೂ ಅವರ ಫ್ಯಾಮಿಲಿ ವಿಧಾನಸೌಧದಲ್ಲಿ ಇತ್ತೀಚಿಗೆ ನಡೆದ ಫಿಲ್ಮಂ ಫೆಸ್ಟಿವಲ್‍ನಲ್ಲಿ ಮಿಂಚಿದ್ದೇ ಮಿಂಚಿದ್ದು. ಕನ್ನಡಿಗರಿಗೆ ಪರಿಚಯವೇ ಇಲ್ಲದ ಪಂಕಜ್ ಪತ್ನಿಯ ಸಹೋದರ ಆಶೀಶ್ ದುಬೆಗೆ ಅಂದು ಕರೀನಾ ಕಪೂರ್ ಕಾರ್ಯಕ್ರಮದ ಆಂಕರಿಂಗ್‍ನ ಚಾನ್ಸ್ ಸಿಕ್ಕಿತ್ತು.

    ಅಷ್ಟೇ ಅಲ್ಲದೆ ಅಂದು ಮಹಿಳಾ ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡಿ ಸುದ್ದಿಯಾಗಿದ್ದ ಪಂಕಜ್ ಪತ್ನಿ ಅನುಜಾ, ಫಿಲ್ಮಂ ಫೆಸ್ಟಿವಲ್‍ಗೆ ಬಂದಿದ್ದ ಬಾಲಿವುಡ್ ಬೆಡಗಿ ಕರೀನಾರನ್ನು ಗ್ಯಾಪ್‍ನಲ್ಲಿ ಮೀಟ್ ಆಗಿ ತಮ್ಮ ಕಂಪನಿ ಲಾಪ್ಟಿ ಸ್ಪೆಕ್ಟ್ರಮ್‍ಗೆ ಪ್ರಮೋಶನ್ ಟಾಕ್ ಕೂಡ ಮಾಡಿಸಿದ್ದರು. ಜೊತೆಗೆ ಬ್ಯುಸಿ ಬಾಲಿವುಡ್ ಬೆಡಗಿ ಜೊತೆ ಸಕುಟುಂಬ ಸಮೇತರಾಗಿ ಲಂಚ್ ಕೂಡ ಮಾಡಿದ್ದರು.

  • ಪತ್ನಿಯ ಗುಪ್ತಾಂಗಕ್ಕೆ ಚಾಕು ಹಾಕಲು ಯತ್ನಿಸಿದ ಗಂಡ ಅರೆಸ್ಟ್

    ಪತ್ನಿಯ ಗುಪ್ತಾಂಗಕ್ಕೆ ಚಾಕು ಹಾಕಲು ಯತ್ನಿಸಿದ ಗಂಡ ಅರೆಸ್ಟ್

    ಬೆಂಗಳೂರು: ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಪತಿ ಆಕೆಯ ಗುಪ್ತಾಂಗಕ್ಕೆ ಚಾಕು ಹಾಕಲು ಯತ್ನಿಸಿದ ಘಟನೆ ಬೆಂಗಳೂರಿನ ಆನೆಪಾಳ್ಯ ಮುಖ್ಯರಸ್ತೆಯಲ್ಲಿ ನಡೆದಿದೆ.

    ನದೀಮ್ ಪಾಷಾ ಕೊಲೆ ಮಾಡಲು ಯತ್ನಿಸಿದ ಆರೋಪಿ. ನದೀಮ್ 5 ವರ್ಷಗಳ ಹಿಂದೆ ಆಯಿಷಾಳನ್ನು ಮದುವೆಯಾಗಿದ್ದನು. ಆದರೆ ಆಯಿಷಾ ಬೇರೊಬ್ಬನ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದಳು. ಕಳೆದ ವಾರ ತಡರಾತ್ರಿ ಮನೆಗೆ ಬಂದಾಗ ಗೆಳೆಯನ ಜೊತೆ ಆಯಿಷಾ ಸಿಕ್ಕಿ ಬಿದ್ದಿದ್ದಳು.

    ಪತ್ನಿ ಬೇರೊಬ್ಬ ಪುರುಷನ ಜೊತೆ ಇರುವುದನ್ನು ಕಣ್ಣಾರೆ ಕಂಡ ನದೀಮ್ ಪಾಷಾ ಆತನ ಮೇಲೆ ಹಲ್ಲೆಗೆ ಯತ್ನಿಸಿದ್ದ. ಈ ವೇಳೆ ಆತ ತಪ್ಪಿಸಿಕೊಳ್ಳಲು ಆಯಿಷಾ ನೆರವಾಗಿದ್ದಳು.

    ಇದಾದ ಬಳಿಕ ನದೀಮ್ ತನ್ನ ಪತ್ನಿ ಆಯಿಷಾ ಮೇಲೆ ದ್ವೇಷ ಬೆಳೆಸಿಕೊಂಡಿದ್ದ. ತನಗೆ ಮೋಸ ಮಾಡಿದವಳಿಗೆ ತಕ್ಕ ಶಾಸ್ತಿ ಮಾಡಬೇಕೆಂದು ಫೆ.24ರ ಬೆಳಗ್ಗೆ ಪತ್ನಿಯ ಚಾಕು ಹಾಕಲು ಯತ್ನಿಸಿದ್ದನು. ಎರಡೂ ಕಾಲಿನ ತೊಡೆಗೆ ಚಾಕು ಹಾಕಿ ಕೊಲೆ ಮಾಡಲು ಯತ್ನಿಸಿದ್ದಾನೆ.

    ಆಯಿಷಾ ದೇಹದ 12 ಕಡೆ ನದೀಮ್ ಚಾಕುವಿನಿಂದ ಚುಚ್ಚಿದ್ದ. ಗಾಯಗೊಂಡಿದ್ದ ಆಯಿಷಾಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿ ನದೀಮ್ ಪಾಷಾನನ್ನು ಪೊಲೀಸರು ಈಗ ಬಂಧಿಸಿದ್ದಾರೆ.

  • ಪತ್ನಿಯನ್ನು ಕೊಂದು ಮೃತದೇಹಕ್ಕೆ ಬೆಂಕಿ ಹಚ್ಚಿ, ಕಿವಿಯನ್ನು ಜೇಬಲ್ಲಿ ಇಟ್ಕೊಂಡು ಠಾಣೆಗೆ ಬಂದ ಪತಿ!

    ಪತ್ನಿಯನ್ನು ಕೊಂದು ಮೃತದೇಹಕ್ಕೆ ಬೆಂಕಿ ಹಚ್ಚಿ, ಕಿವಿಯನ್ನು ಜೇಬಲ್ಲಿ ಇಟ್ಕೊಂಡು ಠಾಣೆಗೆ ಬಂದ ಪತಿ!

    ಚಿಕ್ಕಬಳ್ಳಾಪುರ: ಶೀಲ ಶಂಕಿಸಿದ ಪತಿ ತನ್ನ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಆಕೆಯ ಎರಡು ಕಿವಿಯನ್ನು ಕತ್ತರಿಸಿಕೊಂಡು ಮೃತದೇಹಕ್ಕೆ ಬೆಂಕಿ ಹಚ್ಚಿ, ಪೊಲೀಸ್ ಠಾಣೆಗೆ ಆಗಮಿಸಿರೋ ಭಯಾನಕ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಚಿಕ್ಕದಾಸೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಆದಿನಾರಾಯಣಪ್ಪ ಎಂಬಾತ ಪತ್ನಿ ವೆಂಕಟಲಕ್ಷಮ್ಮ ಎಂಬಾಕೆಯನ್ನು ಕೊಲೆ ಮಾಡಿದ್ದಾನೆ. ಅಂದಹಾಗೆ ಪತ್ನಿಯ ಶೀಲವನ್ನ ಶಂಕಿಸಿದ ಪತಿ ಆದಿನಾರಾಯಣ ಪ್ಲಾನ್ ಮಾಡಿ ಇಂದು ಬೆಳಿಗ್ಗೆ ಆಕೆಯನ್ನ ಗ್ರಾಮದ ಹೊರವಲಯದ ತನ್ನ ಜಮೀನು ಬಳಿ ಕರೆದುಕೊಂಡು ಹೋಗಿ ಕೃತ್ಯ ಎಸಗಿದ್ದಾನೆ.

    ಮೊದಲು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ನಂತರ ಆಕೆಯ ಎರಡು ಕಿವಿಯನ್ನ ಕಟ್ ಮಾಡಿಕೊಂಡು ಜೇಬನಲ್ಲಿಟ್ಟಿಕೊಂಡಿದ್ದಾನೆ. ತದ ನಂತರ ಅಲ್ಲೇ ಇದ್ದ ಸೌದೆಗೆ ಮೃತದೇಹ ಹಾಕಿ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾನೆ.

    ಇಷ್ಟೆಲ್ಲ ಭೀಕರ ಕೃತ್ಯ ನಡೆಸಿದ ಆದಿನಾರಾಯಣ ಕೊನೆಗೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಆದಿನಾರಾಯಣನ ಮಾತು ಕೇಳಿ ಬೆಚ್ಚಿ ಬಿದ್ದ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡುವಷ್ಟರಲ್ಲಿ ಮೃತದೇಹ ಶೇ. 90ರಷ್ಟು ಸುಟ್ಟು ಕರಕಲಾಗಿತ್ತು. ಈ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ತ್ರಿವಳಿ ತಲಾಖ್ ನೀಡ್ತೀನಿ ಅನ್ನೋದಾಗಿ ಬೆದರಿಕೆ ಹಾಕಿದ್ದ ಪತಿ ಅಂದರ್

    ತ್ರಿವಳಿ ತಲಾಖ್ ನೀಡ್ತೀನಿ ಅನ್ನೋದಾಗಿ ಬೆದರಿಕೆ ಹಾಕಿದ್ದ ಪತಿ ಅಂದರ್

    ಬೆಂಗಳೂರು: ಪತ್ನಿಗೆ ತ್ರಿವಳಿ ತಲಾಖ್ ನೀಡುವುದಾಗಿ ಬೆದರಿಕೆ ಹಾಕಿದ್ದ ಪತಿಯನ್ನು ಬಂಧಿಸುವಲ್ಲಿ ಕೆ.ಆರ್.ಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

    ರಿಯಾಜ್ ಬಂಧಿತ ಪತಿಯಾಗಿದ್ದು, ಈತನ ವಿರುದ್ಧ ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪತ್ನಿ ಶಬ್ನಂ ದೂರು ದಾಖಲಿಸಿದ್ದರು.

    2004ರಲ್ಲಿ ರಿಯಾಜ್ ಮತ್ತು ಶಬ್ನಂ ಜೋಡಿ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಮದುವೆಯಾಗಿದ್ದರು. ವರದಕ್ಷಿಣೆಗಾಗಿ ಹಲವು ಭಾರಿ ಪೀಡಿಸಿದ್ದ ಪತಿ ರಿಯಾಜ್ ವರದಕ್ಷಣೆ ನೀಡದಿದ್ದರೆ ತ್ರಿವಳಿ ತಲಾಖ್ ನೀಡುವುದಾಗಿ ಬೆದರಿಕೆ ಹಾಕಿದ್ದ.

    ವೃತಿಯಲ್ಲಿ ಇಂಜಿನಿಯರ್ ಆಗಿರುವ ರಿಯಾಜ್ ಕೆಲಸದ ನಿಮಿತ್ತ ಒರಿಸ್ಸಾದ ಭುವನೇಶ್ವರ್ ಹಾಗೂ ವಿದೇಶಕ್ಕೂ ತೆರಳಿರುವುದಾಗಿ ಸುಳ್ಳು ಹೇಳಿದ್ದ. ಪಾಸ್ ಪೋರ್ಟ್ ಇಲ್ಲದೆಯೇ ವಿದೇಶಕ್ಕೆ ತೆರಳುವ ಕುರಿತು ಅನುಮಾನಗೊಂಡ ಶಬ್ನಂ, ಪತಿ ಕುರಿತು ಆತ ಕೆಲಸ ಮಾಡುವ ಕಂಪೆನಿಯಲ್ಲಿ ವಿಚಾರಿಸಿದ್ದಾಳೆ. ಈ ವೇಳೆ ರಿಯಾಜ್ ನಗರದಲ್ಲೇ ಮತ್ತೊಂದು ಮಹಿಳೆ ಜೊತೆ ಆಕ್ರಮ ಸಂಬಂಧವಿರುವ ಅಂಶ ಬೆಳಕಿಗೆ ಬಂದಿದೆ. ಇದನ್ನೂ ಓದಿ: ತ್ರಿವಳಿ ತಲಾಖ್ ನಿಷೇಧ – ಸುಪ್ರೀಂನಿಂದ ಮಹತ್ವದ ತೀರ್ಪು

    ರಿಯಾಜ್ ಆಕ್ರಮ ಸಂಬಂಧ ಹೊಂದಿರುವ ಮಹಿಳೆಗೆ ನಗರದಲ್ಲೇ ಮತ್ತೊಂದು ಮನೆ ಮಾಡಿಕೊಟ್ಟಿದ್ದಾನೆ. ಅಲ್ಲದೇ ಈಗಾಗಲೇ ತ್ರಿವಳಿ ತಲಾಖ್ ಕೇಂದ್ರ ಸರ್ಕಾರ ನಿಷೇಧ ಮಾಡಿದ್ದರೂ ತ್ರಿವಳಿ ತಲಾಖ್ ನೀಡುವುದಾಗಿ ಬೆದರಿಕೆ ಹಾಕುತ್ತಿದ್ದ ಕಾರಣ ಪತ್ನಿ ರಿಯಾಜ್ ವಿರುದ್ಧ ದೂರು ದಾಖಲಿಸಿದ್ದಾರೆ. ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ವಿಷಯ ತಿಳಿಯುತ್ತಿದಂತೆ ರಿಯಾಜ್ ನಾಪತ್ತೆಯಾಗಿದ್ದ. ಪ್ರಕರಣದ ವಿಚಾರಣೆ ನಡೆಸಿದ ಕೆ.ಆರ್.ಪುರ ಪೊಲೀಸರು ರಿಯಾಜ್ ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಸ್ಪೀಡ್ ಪೋಸ್ಟ್ ನಲ್ಲಿ ತಲಾಖ್ ನೀಡಿದ್ದ ಪತಿ ವಿರುದ್ಧ ಗೆದ್ದು ಅನಿಷ್ಟ ಪದ್ದತಿಗೆ ಮುಕ್ತಿ ಹಾಡಿದ್ದು ಈ ಮಹಿಳೆ

  • ತವರು ಮನೆಯಿಂದ ಹೆಂಡ್ತಿ ಬಾರದಕ್ಕೆ ಮಗಳಿಗೆ ಬೆಂಕಿ ಹಚ್ಚಿದ ತಂದೆ!

    ತವರು ಮನೆಯಿಂದ ಹೆಂಡ್ತಿ ಬಾರದಕ್ಕೆ ಮಗಳಿಗೆ ಬೆಂಕಿ ಹಚ್ಚಿದ ತಂದೆ!

    ಲಕ್ನೌ: ಪತ್ನಿ ತವರು ಮನೆಯಿಂದ ಬರಲಿಲ್ಲ ಎಂದು ತಂದೆಯೊಬ್ಬ ತನ್ನ 9 ವರ್ಷದ ಮಗಳಿಗೆ ಬೆಂಕಿ ಹಚ್ಚಿದ ಘಟನೆ ಉತ್ತರ ಪ್ರದೇಶದ ಮೈನುಪುರಿಯಲ್ಲಿ ನಡೆದಿದೆ.

    ಸತೇಂದ್ರ ರಾಥೋಡ್ ಈ ಕೃತ್ಯವೆಸಗಿದ ಆರೋಪಿ. ತವರು ಮನೆಯಿಂದ ಪತ್ನಿ ಬಂದಿಲ್ಲ ಎಂದು ಕೋಪಗೊಂಡು ಮಗಳ ಮೈಮೇಲೆ ಸೀಮೆಎಣ್ಣೆ ಸುರಿದು ಜೀವಂತವಾಗಿ ಸುಡಲು ಯತ್ನಿಸಿದ್ದಾನೆ. ಮನೆಯ ಮುಂದೆಯೇ ಬೆಂಕಿ ಹಚ್ಚಿದ್ದು, ಬಾಲಕಿ ಕೂಗಿಕೊಳ್ಳುತ್ತಿದ್ದಂತೆ ಅಕ್ಕಪಕ್ಕದ ಮನೆಯವರು ಓಡಿ ಬಂದಿದ್ದಾರೆ.

    ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇನ್ನೂ ಬಾಲಕಿಯ ತಾಯಿ ತನ್ನ ತವರು ಮನೆಯಿಂದ ಹಿಂತಿರುಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗಳ ಜೊತೆ ಇದ್ದು ಆಕೆಯ ಆರೈಕೆ ಮಾಡುತ್ತಿದ್ದಾರೆ.

    ಪತ್ನಿಯ ಮೇಲಿನ ಕೋಪಕ್ಕೆ ಮಗಳಿಗೆ ಬೆಂಕಿ ಹಚ್ಚಿದ ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

  • ಚಿಕ್ಕಮ್ಮನ ಮಗನೊಂದಿಗೆ ಆಕ್ರಮ ಸಂಬಂಧ-ಅಡ್ಡಿ ಬಂದ ಪತಿಯ ಕೊಲೆ!

    ಚಿಕ್ಕಮ್ಮನ ಮಗನೊಂದಿಗೆ ಆಕ್ರಮ ಸಂಬಂಧ-ಅಡ್ಡಿ ಬಂದ ಪತಿಯ ಕೊಲೆ!

    ಹೈದರಾಬಾದ್: ಪತ್ನಿಯೊಬ್ಬಳು ತನ್ನ ಆಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನೇ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.

    ಹರಿಪ್ರಸಾದ್ ಕೊಲೆಯಾದ ದುರ್ದೈವಿ. ಪತಿಯನ್ನೇ ಕೊಲೆ ಮಾಡಿದ ಮಹಿಳೆ ಹೆಸರು ಹಿಮಚಂದು. ಕಳೆದ ಎಂಟು ವರ್ಷಗಳ ಹಿಂದೆ ಇಬ್ಬರಿಗೂ ವಿವಾಹವಾಗಿತ್ತು. ದಂಪತಿಗೆ ಮೂರು ಹೆಣ್ಣು ಮಕ್ಕಳು ಇದ್ದಾರೆ.

    ಏನಿದು ಘಟನೆ: ಹಿಮಚಂದು ಜನಿಸಿದ ಬಳಿಕ ಆಕೆಯ ತಾಯಿ ಮೃತ ಪಟ್ಟಿದ್ದರು. ಇದರಿಂದ ಹಿಮಚಂದು ತಂದೆ ಎರಡನೇ ವಿವಾಹವಾಗಿದ್ದರು. ಹಿಮಚಂದು ಅವರ ಚಿಕ್ಕಮ್ಮನಿಗೆ ಒಂದು ಗಂಡು ಮಗು ಜನಿಸಿತ್ತು. ಕೆಲ ವರ್ಷಗಳ ನಂತರ ಹಿಮಚಂದುಳನ್ನು ಹರಿಪ್ರಸಾದ್ ಎಂಬವರ ಜೊತೆ ಮದುವೆ ಮಾಡಲಾಗಿತ್ತು.

    ಹರಿಪ್ರಸಾದ್ ಮೂಲತಃ ಕಾಕಿನಾಡ ಜಿಲ್ಲೆಯ ರಮಣಯ್ಯ ನಗರದಲ್ಲಿ ಕಾರು ಚಾಲಕರಾಗಿ ಜೀವನ ನಡೆಸುತ್ತಿದ್ದರು. ಮದುವೆ ನಂತರ ಇಬ್ಬರ ನಡುವಿನ ಜೀವನ ಉತ್ತಮವಾಗಿತ್ತು. ಆದರೆ ಕಳೆದ ಕೆಲ ದಿನಗಳಿಂದ ತನ್ನ ತಂದೆಯ ಮಗ, ಅಂದರೆ ತಮ್ಮ ಭಾನುಪ್ರಸಾದ್, ಹಿಮಚಂದ್ರ ನಡುವೆ ಆಕ್ರಮ ಸಂಬಂಧ ಉಂಟಾಗಿತ್ತು. ಇದನ್ನು ತಿಳಿದ ಹರಿಪ್ರಸಾದ್ ಪತ್ನಿಗೆ ಎಚ್ಚರಿಕೆ ನೀಡಿದ್ದರು. ಆದರೆ ತನ್ನ ಆಕ್ರಮ ಸಂಬಂಧಕ್ಕೆ ಅಡ್ಡಿಪಡಿಸಿದ ಪತಿ ವಿರುದ್ಧ ಕೋಪಗೊಂಡ ಆಕೆ ಭಾನುಪ್ರಸಾದ್ ಜೊತೆ ಸೇರಿ ಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ.

    ಪತಿಯನ್ನು ಕೊಲೆ ಮಾಡಿದ ನಂತರ ಭಾನುಪ್ರಸಾದ್ ಹಾಗೂ ಆತನ ಸ್ನೇಹಿತರ ಜೊತೆ ಸೇರಿ ಮೃತದೇಹವನ್ನು ನಗರದ ಹೊರವಲಯದ ಕಸ ವಿಲೇವಾರಿ ಸ್ಥಳದಲ್ಲಿ ಹಾಕಿ ಬೆಂಕಿ ಹಚ್ಚಿ ಸುಟ್ಟುಹಾಕಿದ್ದರು.

    ಹರಿಪ್ರಸಾದ್ ಮೊಬೈಲ್ ಇದ್ದಕ್ಕಿದ್ದ ಹಾಗೇ ಸ್ವಿಚ್ ಆಫ್ ಆಗಿದ್ದನ್ನು ಗಮನಿಸಿದ ಆತನ ಸಹೋದರ ಹಿಮಚಂದುಳ ಬಳಿ ವಿಚಾರಿಸಿದ್ದಾರೆ. ಆದರೆ ತನ್ನ ಆತ್ತಿಗೆ ಇಂದ ಸರಿಯಾದ ಉತ್ತರ ಲಭಿಸಿದ ಕಾರಣ ಆತ ಸ್ಥಳೀಯ ಪೊಲೀಸರಿಗೆ ಹರಿಪ್ರಸಾದ್ ಕಾಣೆಯಾದ ಬಗ್ಗೆ ದೂರು ನೀಡಿದ್ದರು.

    ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ನಗರದ ಹೊರವಲಯದಲ್ಲಿ ಅರ್ಧ ಸುಟ್ಟು ಹೋಗಿದ್ದ ಮೃತದೇಹ ಹರಿಪ್ರಸಾದ್ ಅವರದ್ದೇ ಎಂದು ಗುರುತಿಸಿದ್ದರು. ನಂತರದ ವಿಚಾರಣೆಯಲ್ಲಿ ಹರಿಪ್ರಸಾದ್ ಪತ್ನಿ ಹಿಮಚಂದ್ರ ಹಾಗೂ ಭಾನುಪ್ರಸಾದ್ ಕೊಲೆ ಆರೋಪಿಗಳು ಎಂದು ತಿಳಿದುಬಂದಿತ್ತು. ಪ್ರಸ್ತುತ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಕೊಲೆ ಮಾಡಲು ಸಹಕಾರ ನೀಡಿದ್ದ ಭಾನುಪ್ರಸಾದ್ ಇಬ್ಬರು ಸ್ನೇಹಿತರನ್ನು ವಶಕ್ಕೆ ಪಡೆದಿದ್ದಾರೆ.

  • ಪತ್ನಿಯ ಎದುರೇ ಪತಿಯ ಮುಖಕ್ಕೆ ಸ್ಟ್ರೇ ಎರಚಿ ಲಾಂಗು, ಮಚ್ಚಿನಿಂದ ಬರ್ಬರ ಕೊಲೆ!

    ಪತ್ನಿಯ ಎದುರೇ ಪತಿಯ ಮುಖಕ್ಕೆ ಸ್ಟ್ರೇ ಎರಚಿ ಲಾಂಗು, ಮಚ್ಚಿನಿಂದ ಬರ್ಬರ ಕೊಲೆ!

    ಬೆಂಗಳೂರು: ಮನೆಗೆ ನುಗ್ಗಿ ಪತ್ನಿ ಎದುರೇ ಪತಿಯನ್ನು ಬರ್ಬರವಾಗಿ ಕೊಲೆಗೈದ ಬಳಿಕ ಮೂಟೆ ಕಟ್ಟಿ ಬಿಸಾಕಿದ ಘಟನೆ ನಗರದ ಕುರುಬರಹಳ್ಳಿಯಲ್ಲಿ ನಡೆದಿದೆ.

    28 ವರ್ಷದ ನರಸಿಂಹ ಕೊಲೆಯಾದ ಮೃತ ದುರ್ದೈವಿ. ನರಸಿಂಹ ಕುರುಬರ ಹಳ್ಳಿಯಲ್ಲಿ ಪಾನಿ ಪುರಿ ಅಂಗಡಿ ನಡೆಸುತ್ತಿದ್ದ ನರಸಿಂಹ ಅವರ ಮನೆಗೆ ನುಗ್ಗಿದ ಮೂವರು ದುಷ್ಕರ್ಮಿಗಳು ಪತ್ನಿಯ ಎದುರೇ ಮುಖಕ್ಕೆ ಸ್ಪ್ರೇ ಹಾಕಿ, ಮಚ್ಚು-ಲಾಂಗ್ ಬೀಸಿ ಕೊಲೆ ಮಾಡಿ ಬಳಿಕ ಶವವನ್ನು ಮೂಟೆ ಕಟ್ಟಿ ಮನೆಯ ಬಾತ್ ರೂಮ್ ನಲ್ಲೇ ಎಸೆದು ಹೋಗಿದ್ದಾರೆ.

    ಘಟನಾ ಸ್ಥಳಕ್ಕೆ ಡಾಗ್ ಸ್ಕ್ವಾಡ್ ಪಿಂಗರ್ ಪ್ರಿಂಟ್ ಅವರು ದೌಡಾಯಿಸಿದ್ದು, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

  • ಜೀವನಾಂಶದ ಹಣ ಕೊಡಲಾಗದೇ ವಿಚ್ಛೇದಿತ ಪತ್ನಿಯನ್ನೇ ಪೀಸ್ ಪೀಸ್ ಮಾಡಿ ಕೊಂದೇಬಿಟ್ಟ!

    ಜೀವನಾಂಶದ ಹಣ ಕೊಡಲಾಗದೇ ವಿಚ್ಛೇದಿತ ಪತ್ನಿಯನ್ನೇ ಪೀಸ್ ಪೀಸ್ ಮಾಡಿ ಕೊಂದೇಬಿಟ್ಟ!

    ಚಿಕ್ಕಬಳ್ಳಾಪುರ: ವಿಚ್ಛೇದಿತ ಪತ್ನಿಗೆ ಜೀವನಾಂಶದ ಹಣ ಕೊಡಲಾಗದ  ಪತಿ ಆಕೆಯನ್ನು ಕೊಲೆ ಮಾಡಿ ರುಂಡ-ಮುಂಡ ಬೇರ್ಪಡಿಸಿ ಹೂತು ಹಾಕಿರುವ ಆಘಾತಕಾರಿ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಬೊಮ್ಮಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.

    30 ವರ್ಷದ ಲಕ್ಷ್ಮೀ ಹತ್ಯೆಯಾದ ಮಹಿಳೆ. 34 ವರ್ಷದ ರಾಜೇಶ್ ಕೃತ್ಯ ಎಸಗಿದ ಪತಿ. ಮೃತ ಲಕ್ಷ್ಮೀ ಹಾಗೂ ರಾಜೇಶ್ ಗೆ ಮದುವೆಯಾಗಿ 8 ವರ್ಷಗಳು ಕಳೆದಿವೆ. ಮದುವೆಯಾಗಿ ಹೆರಿಗೆಗೆ ಎಂದು ಲಕ್ಷ್ಮೀ ಮೊದಲ ವರ್ಷದ ನಂತರ ತವರು ಮನೆಗೆ ಹೋಗಿದ್ದರು. ಆದರೆ ಈ ವೇಳೆ ಆರೋಪಿ ರಾಜೇಶ್ ಮತ್ತೊಂದು ಮದುವೆಯಾಗಿದ್ದ. ಇದೇ ಕಾರಣಕ್ಕೆ ಇಬ್ಬರು ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು.

    ಪ್ರಕರಣದಲ್ಲಿ ನ್ಯಾಯಾಲಯ ಲಕ್ಷ್ಮೀಗೆ ಪ್ರತಿ ತಿಂಗಳು 1,500 ರೂ. ಜೀವನಾಂಶದ ಹಣ ನೀಡುವಂತೆ ಆದೇಶಿಸಿತ್ತು. ಮೊದಲ ಎರಡು ತಿಂಗಳು ಜೀವನಾಂಶ ಕೊಟ್ಟ ರಾಜೇಶ್ ಮತ್ತೆ ಕೊಟ್ಟಿರಲಿಲ್ಲ. ಆದರೆ ಕಳೆದ ಒಂದು ವರ್ಷದ ಹಿಂದೆ ಜೀವನಾಂಶ ಕೊಡಲು ಆಗುವುದಿಲ್ಲ ಜೊತೆಯಲ್ಲಿ ಬಂದು ಸಂಸಾರ ಮಾಡು ನಾನೇ ಸಾಕುತ್ತೇನೆ ಎಂದು ಪತ್ನಿ ಲಕ್ಷ್ಮೀಯನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಆದರೆ ಕಳೆದ 10 ದಿನಗಳ ಹಿಂದ ಲಕ್ಷ್ಮೀ ನಾಪತ್ತೆಯಾಗಿದ್ದರು. ಹೀಗಾಗಿ ಗಂಡ ರಾಜೇಶ್ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪತ್ನಿ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದ.

    ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರಿಗೆ ದೂರುದಾರ ಪತಿ ರಾಜೇಶ್ ಕೊಲೆ ಮಾಡಿರುವ ಅಘಾತಕಾರಿ ಅಂಶ ತಿಳಿದುಬಂದಿದೆ. ಈ ಕುರಿತು ಪೊಲೀಸರ ವಿಚಾರಣೆ ವೇಳೆ ರಾಜೇಶ್ ಸತ್ಯ ಬಿಚ್ಚಿಟ್ಟಿದ್ದಾನೆ. ಕಿರಾತಕ ಗಂಡ ರಾಜೇಶ್ ತನ್ನ ಹೆಂಡತಿಯನ್ನ ರುಂಡ-ಮುಂಡ ಬೇರ್ಪಡಿಸಿ ಕೊಲೆ ಮಾಡಿದ್ದ. ಅಲ್ಲದೇ ಪತ್ನಿಯ ರುಂಡವನ್ನ ಸುಟ್ಟು ಹಾಕಿ ಮುಂಡವನ್ನು ಪೀಸ್ ಪೀಸ್ ಮಾಡಿ ಗುಂಡಸಂದ್ರ ಕೆರೆಯಲ್ಲಿ ಹೂತು ಹಾಕಿದ್ದ. ಸದ್ಯ ಆರೋಪಿಯ ನೀಡಿದ ಮಾಹಿತಿ ಮೇಲೆ ದೊಡ್ಡಬಳ್ಳಾಪುರ ಉಪವಿಭಾಗ ಅಧಿಕಾರಿ ಮಹೇಶ್ ಬಾಬು ನೇತೃತ್ವದಲ್ಲಿ ಮೃತದೇಹದ ಭಾಗಗಳಿಗಾಗಿ ಕೆರೆಯಲ್ಲಿ ಹುಡುಕಾಟ ನಡೆಸಲಾಗಿದೆ.