Tag: ಪತ್ನಿ

  • ಜೆಡಿಎಸ್ ಅಭ್ಯರ್ಥಿಗಳಿಗೆ ಪತ್ನಿಯರೇ ಪ್ರತಿಸ್ಪರ್ಧಿಗಳು

    ಜೆಡಿಎಸ್ ಅಭ್ಯರ್ಥಿಗಳಿಗೆ ಪತ್ನಿಯರೇ ಪ್ರತಿಸ್ಪರ್ಧಿಗಳು

    ರಾಯಚೂರು: ಜಿಲ್ಲೆಯ ಮಸ್ಕಿ ಮತ್ತು ಲಿಂಗಸಗೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳಿಗೆ ಅವರ ಪತ್ನಿಯರೇ ಪ್ರತಿಸ್ಪರ್ಧಿಗಳಾಗಿದ್ದಾರೆ.

    ಮಸ್ಕಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರಾಜಾ ಸೋಮನಾಥ್ ನಾಯಕ್ ನಾಮಪತ್ರ ಸಲ್ಲಿಸಿದ್ದಾರೆ. ಜೊತೆಗೆ ತಮ್ಮ ಪತ್ನಿ ತಾರಾರಾಣಿ ಅವರಿಂದಲೂ ಜೆಡಿಎಸ್ ಪಕ್ಷದಿಂದಲೇ ನಾಮಪತ್ರ ಹಾಕಿಸಿದ್ದಾರೆ. ಲಿಂಗಸುಗೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿದ್ದಪ್ಪ ಬಂಡಿ ಹಾಗೂ ತಮ್ಮ ಪತ್ನಿ ಗಂಗಾ ಬಂಡಿ ಇಬ್ಬರೂ ನಾಮಪತ್ರಗಳನ್ನ ಸಲ್ಲಿಸಿದ್ದಾರೆ.

    ಲಿಂಗಸಗೂರಿನ ಬಿಜೆಪಿ ಅಭ್ಯರ್ಥಿಗೆ ಸಹೋದರನ ಮಗನೇ ಎದುರಾಳಿಯಾಗಿದ್ದಾನೆ. ಆದ್ರೆ ಒಂದೇ ಪಕ್ಷದಿಂದ ಒಂದೇ ಮನೆಯಲ್ಲಿನ ಇಬ್ಬಿಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ಈ ರೀತಿಯಾಗಿ ಪತ್ನಿಯರು ನಾಮಪತ್ರ ಸಲ್ಲಿಸೋದಕ್ಕೆ ಜ್ಯೋತಿಷಿಗಳು ಕಾರಣ ಎನ್ನಲಾಗಿದ್ದು, ಪತ್ನಿಯರಿಂದಲೂ ನಾಮಪತ್ರ ಹಾಕಿಸಿದರೆ ಒಳ್ಳೆಯದು ಅಂತ ಈ ಇಬ್ಬರು ಅಭ್ಯರ್ಥಿಗಳು ಎರಡು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ಲಿಂಗಸಯಗೂರಿನ ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್ ತಮ್ಮ ಸಹೋದರನ ಪುತ್ರ ದೇವರಾಜ್ ದೋತ್ರೆ ಬಿಜೆಪಿ ಪಕ್ಷದಿಂದಲೇ ತಮ್ಮ ಉಮೇದುಗಾರಿಕೆ ಸಲ್ಲಿಸಿದ್ದಾರೆ. ಒಂದು ವೇಳೆ ತಮ್ಮ ನಾಮಪತ್ರ ತಿರಸ್ಕೃತವಾದ್ರೆ ಇರಲಿ ಅಂತ ಸಹೋದರನ ಪುತ್ರನಿಂದಲೂ ನಾಮಪತ್ರ ಹಾಕಿಸಿದ್ದಾರೆ ಎನ್ನಲಾಗಿದೆ.

  • ತನ್ನ 2 ತಿಂಗ್ಳ ಮಗುವನ್ನು ಕೊಂದ 17 ವರ್ಷದ ತಂದೆ!

    ತನ್ನ 2 ತಿಂಗ್ಳ ಮಗುವನ್ನು ಕೊಂದ 17 ವರ್ಷದ ತಂದೆ!

    ನವದೆಹಲಿ: 17 ವರ್ಷದ ತಂದೆಯೊಬ್ಬ ತನ್ನ 2 ತಿಂಗಳ ಮಗುವನ್ನೇ ಬರ್ಬರವಾಗಿ ಕೊಲೆಗೈದಿರುವ ಅಮಾನವೀಯ ಘಟನೆಯೊಂದು ದೆಹಲಿಯ ಮಂಗೋಲ್ ಪುರಿ ಎಂಬಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಪತ್ನಿಯ ಅಕ್ರಮ ಸಂಬಂಧದಿಂದಾಗಿ ಮಗು ಹುಟ್ಟಿದೆ ಅಂತ ಅನುಮಾನಗೊಂಡ ಪತಿ ಗಂಡು ಮಗುವನ್ನು ಹೊಡೆದು ಕೊಲೆಗೈದಿದ್ದಾನೆ. ಮಗುವಿನ ತಂದೆ- ತಾಯಿ ಇಬ್ಬರೂ ಅಪ್ರಾಪ್ತರಾಗಿದ್ದು, 10 ತಿಂಗಳ ಹಿಂದೆಯಷ್ಟೆ ಮದುವೆಯಾಗಿತ್ತು ಅಂತ ಪೊಲೀಸರು ತಿಳಿಸಿದ್ದಾರೆ.

    ಘಟನೆ ನಡೆದ ಸಂದರ್ಭದಲ್ಲಿ ತಾಯಿ ಮಗುವನ್ನು ತಂದೆಯ ಬಳಿ ಬಿಟ್ಟು ಪಾಲಿಕಾ ಬಜಾರ್ ಗೆ ಕೆಲಸ ಹುಡುಕಿಕೊಂಡು ಹೋಗಿದ್ದರು. ವಾಪಸ್ ಮನೆಗೆ ಬಂದಾಗ ಯಾವುದೇ ಚಲನವಲನವಿಲ್ಲದೇ ಮಗು ಅಂಗಾತವಾಗಿ ಬಿದ್ದಿರುವುದನ್ನು ಕಂಡು ತಾಯಿ ಶಾಕ್ ಆಗಿದ್ದಾರೆ. ಆದ್ರೆ ಅದೇ ಸಮಯದಲ್ಲಿ ಪತಿ ನಾಪತ್ತೆಯಾಗಿದ್ದನು. ಕೂಡಲೇ ಆಕೆ ಸ್ಥಳೀಯ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಹೋದ್ರು. ಆದ್ರೆ ಮಗು ಅದಾಗಲೇ ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದರು.

    ಘಟನೆಯಿಂದ ಗಾಬರಿಗೊಂಡ ಆಕೆ ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೇ ತನ್ನ ಪತಿಯೇ ಈ ಕೃತ್ಯ ಎಸಗಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.

    17 ವರ್ಷದ ಯುವಕ ಮಾತ್ರ, ತನ್ನ ಪತ್ನಿಗೆ ಅಕ್ರಮ ಸಂಬಂಧವಿದೆ. ಹೀಗಾಗಿ ಈ ಮಗು ನನ್ನದಲ್ಲ ಅಂತ ಹೇಳಿದ್ದಾನೆ. ಅಲ್ಲದೇ ಮೊಬೈಲ್ ಕಳವು ಮಾಡಿರುವಂತಹ ಹಲವು ಪ್ರಕರಣಗಳು ಈತನ ಮೇಲಿದ್ದು, ಸದ್ಯ ಈತ ನಿರುದ್ಯೋಗಿಯಾಗಿದ್ದಾನೆ.

  • ಪತ್ನಿಯನ್ನು ಕೊಂದು 11 ಪೀಸ್ ಮಾಡಿ ಬೇರೆ ಬೇರೆ ಕಡೆ ಹೂಳುವಾಗ ಸಿಕ್ಕಿಬಿದ್ದ!

    ಪತ್ನಿಯನ್ನು ಕೊಂದು 11 ಪೀಸ್ ಮಾಡಿ ಬೇರೆ ಬೇರೆ ಕಡೆ ಹೂಳುವಾಗ ಸಿಕ್ಕಿಬಿದ್ದ!

    ಸೂರತ್: ಪತಿಯೊಬ್ಬ ತನ್ನ ಪತ್ನಿಯನ್ನು ಬರ್ಬರವಾಗಿ ಕೊಲೆಗೈದು ಬಳಿಕ ಆಕೆಯನ್ನು ದೇಹವನ್ನು 11 ಪೀಸ್ ಗಳನ್ನಾಗಿ ಮಾಡಿ ನಗರದ ಬೇರೆ ಬೇರೆ ಕಡೆಗಳಲ್ಲಿ ಹೂಳುತ್ತಿದ್ದ ಸಂದರ್ಭದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆಯೊಂದು ಇಂದು ಬೆಳಕಿಗೆ ಬಂದಿದೆ.

    ಈ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದ್ದು, ಮೃತ ದುರ್ದೈವಿ ಮಹಿಳೆಯನ್ನು ಝುಲೇಕಾ ಎಂದು ಗುರುತಿಸಲಾಗಿದೆ. ಈಕೆ ಆರೋಪಿ ಶಹನವಾಜ್ ಶೇಖ್ ನ ಎರಡನೇ ಪತ್ನಿಯಾಗಿದ್ದಾರೆ.

    ಘಟನೆ ವಿವರ: ಶಹನವಾಜ್ ಗೆ ತನ್ನ ಎರಡನೇ ಪತ್ನಿಯಾಗಿರೋ ಝುಲೇಖಾ ಜೊತೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ. ಜಗಳ ತಾರಕಕ್ಕೇರಿದ್ದರಿಂದ ಸಿಟ್ಟುಗೊಂಡ ಪತಿ ಆಕೆಯನ್ನು ಕೊಲೆಗೈದು 11 ಪೀಸ್ ಗಳನ್ನಾಗಿ ಮಾಡಿ ನಗರದ ಬೇರೆ ಬೇರೆ ಕಡೆಗಳಲ್ಲಿ ಹೂತು ಹಾಕುತ್ತಿದ್ದನು. ಇದನ್ನು ನೋಡಿದ ಪೇದೆಯೊಬ್ಬರು ಸ್ಥಳಕ್ಕೆ ತೆರಳಿದ್ದಾರೆ. ಆತನನ್ನು ಪ್ರಶ್ನಿಸಿದಾಗ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

    ಶಹನವಾಜ್ ಮೊದಲು ಪತ್ನಿ ಕೂಡ ಇವರ ಜೊತೆಗೆ ವಾಸಿಸುತ್ತಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಎರಡನೇ ಪತ್ನಿ ಝುಲೇಕಾ ಕ್ಯಾತೆ ತೆಗೆದಿದ್ದಾರೆ. ಹೀಗಾಗಿ ಸಿಟ್ಟಿಗೆದ್ದ ಶಹನವಾಜ್ ತನ್ನ ಎರಡನೇ ಪತ್ನಿಯನ್ನು ಪೀಸ್ ಪೀಸ್ ಮಾಡಿದ್ದಾನೆ ಅಂತ ಪೊಲೀಸರು ತಿಳಿಸಿದ್ದಾರೆ.

  • ಮಗಳನ್ನೇ ಪತ್ನಿ ಮಾಡಿಕೊಂಡ, ಆಕೆಗೆ ಮಗು ನೀಡಿ ಇಬ್ಬರನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ!

    ಮಗಳನ್ನೇ ಪತ್ನಿ ಮಾಡಿಕೊಂಡ, ಆಕೆಗೆ ಮಗು ನೀಡಿ ಇಬ್ಬರನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ!

    ವಾಷಿಂಗ್ಟನ್: ವ್ಯಕ್ತಿಯೊಬ್ಬ ತನ್ನ ಮಗಳನ್ನೇ ಪತ್ನಿಯನ್ನಾಗಿ ಮಾಡಿ, ಆಕೆಗೆ ಒಂದು ಗಂಡು ಮಗು ನೀಡಿ ನಂತರ ಇಬ್ಬರನ್ನು ಕೊಲೆ ಮಾಡಿ ಅತ್ಮಹತ್ಯೆ ಮಾಡಿಕೊಂಡ ಘಟನೆ ಅಮೇರಿಕಾದ ಕನೆಕ್ಟಿಕಟ್‍ನಲ್ಲಿ ನಡೆದಿದೆ.

    ಸ್ಟೀವನ್ ವಾಲ್ಟರ್(42) ಕೊಲೆ ಮಾಡಿ, ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಸ್ಟೀವನ್ ತನ್ನ ಮಗಳು ಕೈಟಿ ಫ್ಲಡಾಲ್‍ನನ್ನು ಮದುವೆಯಾಗಿದ್ದನು. ಸ್ಟೀವನ್ ಕೈಟಿಯ ದತ್ತು ತಂದೆ ಆಂಟೋನಿ ಫಯ್ಯುಸ್ಕೋ(56) ನನ್ನು ಕೂಡ ಕೊಲೆ ಮಾಡಿ, ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಏನಿದು ಕಹಾನಿ?: ಕೊಲೆಯಾದ ಕೈಟಿ ಚಿಕ್ಕವಳಿದ್ದಾಗ ಆಂಟೋನಿ ಎಂಬವವರು ಆಕೆಯನ್ನು ದತ್ತು ಪಡೆದುಕೊಂಡಿದ್ದರು. ಕೈಟಿ ದೊಡ್ಡವಳಾದ ಮೇಲೆ ತನ್ನ ಸ್ವಂತ ತಂದೆ-ತಾಯಿಯ ಪತ್ತೆಗೆ ಮುಂದಾಗಿದ್ದಳು. ಹೀಗೆ ಸೋಶಿಯಲ್ ಮೀಡಿಯಾದ ಮೂಲಕ ಸ್ವೀವನ್ ವಾಲ್ಟರ್ ಎಂಬಾತನೇ ತನ್ನ ತಂದೆಯೆಂದು ಪತ್ತೆ ಮಾಡಿದ್ದಾಳೆ. ಪರಿಚಯಗೊಂಡ ಸ್ಟೀವನ್ ತನ್ನ ಮಗಳೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದನು. ಪರಿಣಾಮ ಕೈಟಿ ಸಹ ಮಗುವಿಗೆ ಜನ್ಮ ನೀಡಿದ್ದಳು.

    ಕೈಟಿ ಗರ್ಭವತಿಯಾದ ವಿಷಯ ತಿಳಿದ ಆಕೆಯ ನಿಜವಾದ ತಾಯಿ ಇಬ್ಬರ ಸಂಬಂಧಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇಬ್ಬರ ಅನೈತಿಕ ಸಂಬಂಧ ವಿರೋಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರನ್ನು ಸಹ ದಾಖಲಿಸಿದ್ದರು. ಅಷ್ಟರಲ್ಲೇ ಸ್ಟೀವನ್ ಹಾಗೂ ಕೈಟಿ ಮದುವೆ ಮಾಡಿಕೊಳ್ಳಲು ಎಲ್ಲ ತಯಾರಿ ನಡೆಸಿಕೊಳ್ಳುತ್ತಿದ್ದರು. ನಂತರ ಪೊಲೀಸರು ಇಬ್ಬರನ್ನೂ ಬಂಧಿಸಿದ್ದರು. ಮುಂದಿನ ದಿನಗಳಲ್ಲಿ ಇಬ್ಬರು ಮತ್ತೆ ಒಂದಾಗುವುದಿಲ್ಲ ಎಂಬ ಷರತ್ತಿನ ಮೇಲೆ ಮಾರ್ಚ್ ತಿಂಗಳಿನಲ್ಲಿ ಅವರನ್ನು ಬಿಡುಗಡೆ ಮಾಡಲಾಗಿತ್ತು.

    ಕೈಟಿ ದೂರವಾಗಿದ್ದಕ್ಕೆ ಕೋಪಗೊಂಡ ಸ್ಟೀವನ್: ಇತ್ತ ಕೈಟಿ ದೂರವಾಗುತ್ತಿದ್ದಂತೆ ಕೋಪಗೊಂಡ ಸ್ಟೀವನ್ ಆಕೆಯನ್ನು ಕೊಲೆ ಮಾಡಲು ಮುಂದಾದನು. ಸ್ಟೀವನ್ ತನ್ನ ತಾಯಿಗೆ ಫೋನ್ ಮಾಡಿ ತಾನು 7 ತಿಂಗಳ ನನ್ನ ಮಗುವನ್ನು, ನೆಕ್ಟಿಕಟ್‍ನಲ್ಲಿ ತನ್ನ ಪತ್ನಿ(ಮಗಳು) ಹಾಗೂ ಆಕೆಯ ದತ್ತು ತಂದೆಯನ್ನು ಕೊಂದಿದ್ದೇನೆ ಅಂತಾ ಹೇಳಿದ್ದಾನೆ. ಇದ್ರಿಂದ ಭಯಬೀತಳಾದ ಸ್ಟೀವನ್ ತಾಯಿ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ.

    ಮಾಹಿತಿ ಪಡೆದ ಪೊಲೀಸರು ಸ್ಟೀವನ್ ಮನೆಗೆ ತೆರಳಿದಾಗ ಅಲ್ಲಿ 7 ತಿಂಗಳ ಮಗುವಿನ ಮೃತದೇಹ ಪತ್ತೆಯಾಗಿದೆ. ಇನ್ನೂ ಪಶ್ಚಿಮ ಕನೆಕ್ಟಿಕಟ್‍ನ ಪಿಕ್‍ಅಪ್ ಟ್ರಕ್‍ವೊಂದರಲ್ಲಿ ಕೈಟಿ ಹಾಗೂ ಆಕೆಯ ದತ್ತು ತಂದೆಯ ಮೃತದೇಹ ಸಿಕ್ಕಿತ್ತು. ಇನ್ನೂ ಸ್ಟೀವನ್‍ನ ಮೃತದೇಹ ಮಿನಿ ವ್ಯಾನ್‍ನಲ್ಲಿ ಕಂಡು ಬಂದಿದ್ದು, ಆತನ ಮೃತದೇಹದಲ್ಲಿ ಗುಂಡುಗಳು ಪತ್ತೆಯಾಗಿದೆ. ಇದರ ಆಧಾರದ ಮೇಲೆ ಸ್ಟೀವನ್ ಮೂವರನ್ನು ಕೊಂದು, ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

  • ಲವ್ವರ್ ಗೆ 2ಲಕ್ಷ ರೂ. ಸುಪಾರಿ ಕೊಟ್ಟು ಪತಿಯನ್ನೇ ಬರ್ಬರವಾಗಿ ಹತ್ಯೆ ಮಾಡಿಸಿ ಜೈಲುಪಾಲಾದ್ಳು!

    ಲವ್ವರ್ ಗೆ 2ಲಕ್ಷ ರೂ. ಸುಪಾರಿ ಕೊಟ್ಟು ಪತಿಯನ್ನೇ ಬರ್ಬರವಾಗಿ ಹತ್ಯೆ ಮಾಡಿಸಿ ಜೈಲುಪಾಲಾದ್ಳು!

    ಹೈದರಾಬಾದ್: ಸನಾತ್ ನಗರ ಪೊಲೀಸರು 43 ವರ್ಷ ವಯಸ್ಸಿನ ಚಾಲಕ ಮೊಹದ್ ಖಜಾ ಅವರ ಅನುಮಾನಾಸ್ಪದ ಸಾವಿನ ನಿಗೂಢತೆಯನ್ನು ಪತ್ತೆಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

    ಮಹಿಳೆಯೊಬ್ಬರು ಪೊಲೀಸ್ ಠಾಣೆಗೆ ತನ್ನ ಪತಿ ನಾಪತ್ತೆಯಾಗಿರುವುದಾಗಿ ದೂರು ನೀಡಿದ ಬಳಿಕ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕೊನೆಗೂ ಸಾವಿನ ನಿಗೂಢ ರಹಸ್ಯವನ್ನು ಬಯಲು ಮಾಡಿದ್ದಾರೆ.

    ಅಪರಿಚಿತ ಶವ ಪತ್ತೆ: ಈ ಮೊದಲು ಫೆಬ್ರವರಿ 21 ಪೊಲೀಸರಿಗೆ ಅಪರಿಚಿತ ಶವವೊಂದು ರೈಲ್ವೇ ಹಳಿಯಲ್ಲಿ ಪತ್ತೆಯಾಗಿರುವ ಮಾಹಿತಿ ಇತ್ತು. ಪತ್ತೆಯಾದ ಮೃತ ದೇಹದ ಮೇಲೆ ಆಗಿದ್ದ ಗಾಯಗಳನ್ನು ಪರಿಶೀಲಿಸಿದ ನಂತರ ರೈಲಿನ ಅಪಘಾತದಲ್ಲಿ ಸಾಯಲಿಲ್ಲವೆಂದು ಪೊಲೀಸರು ಶಂಕಿಸಿದ್ದರು. ರೈಲ್ವೇ ಹಳಿಯ ಕೆಲವು ಮೀಟರ್ ದೂರದಲ್ಲಿ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. ಬಳಿಕ ರೈಲಿನ ಹಳಿಯ ಮೇಲೆ ತಂದು ಎಸೆಯಲಾಗಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು.

    ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಇತ್ತ ಒಂದು ವಾರದ ನಂತರ ಎಸ್.ಆರ್ ನಗರ್ ಪೊಲೀಸ್ ಠಾಣೆಯಲ್ಲಿ ಸಲ್ಹಾ ಮಹಿಳೆ ನಾಪತ್ತೆ ದೂರನ್ನು ನೀಡಿದ್ದಾರೆ. ಹೀಗಾಗಿ ಪೊಲೀಸರು ಪತ್ತೆಯಾಗಿದ್ದ ದೇಹವನ್ನು ಖಜಾ ಎಂದು ಗುರುತಿಸಿದ್ದಾರೆ.

    ಮೃತ ದೇಹ ಪತ್ತೆಯಾದ ಸ್ಥಳದಲ್ಲಿ ಬಂಡೆಯ ಮೇಲೆ ಮತ್ತು ಟ್ರ್ಯಾಕ್ ಗಳ ಮೇಲೆ ಇದ್ದ ರಕ್ತದ ಕಲೆಗಳನ್ನು ಪರಿಶೀಲಿಸಿ ನಂತರ ಈ ಪ್ರಕರಣವನ್ನು ಸನಾತ್ ನಗರ ಪೊಲೀಸರಿಗೆ ವರ್ಗಾಯಿಸಿದ್ದಾರೆ. ಸನತ್ ನಗರ ಪೊಲೀಸರು ವಿಚಾರಣೆ ಆರಂಭಿಸಿ ನಗರದ ವಿವಿಧ ಭಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ಆಗ ಖಾಜಾ ಇತರರೊಂದಿಗೆ ಮದ್ಯ ಸೇವಿಸುತ್ತಿದ್ದುದ್ದು ವಿಡಿಯೋದಲ್ಲಿ ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರು ಖಾಜಾ ಜೊತೆ ಇದ್ದವರನ್ನು ಗುರುತಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ಕೊಲೆ ಬೆಳಕಿಗೆ ಬಂದಿದ್ದು ಹೇಗೆ: ವಿಚಾರಣೆಯಲ್ಲಿ ಹತ್ಯೆಯ ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಖಾಜಾ ಅವರ ಪತ್ನಿಯ ಅನೈತಿಕ ಸಂಬಂಧದ ಬಗ್ಗೆ ತಿಳಿದಿತ್ತು. ಗೀಗಾಗಿ ಆತ ಪತ್ನಿ ಸಂಬಧ ಬೆಳೆಸಿದ್ದ ಮೊಹದ್ ತಬ್ರೇಜ್ ಖುರೇಷಿಯಿಂದ ದೂರವಿರುವಂತೆ ಎಚ್ಚರಿಸಿದ್ದಾನೆ. ಇದರಿಂದ ಕೋಪಗೊಂಡ ಪತ್ನಿ ಅವನನ್ನು ಕೊಲ್ಲಲು ಪ್ಲಾನ್ ಮಾಡಿದ್ದಾಳೆ. ಪತಿಯನ್ನು ಕೊಲ್ಲಲು ತಬ್ರೇಜ್ ಅವರು ಸಯ್ಯದ್ ಮುಜೀಬ್ ಸ್ನೇಹಿತರನ್ನು ಸಂಪರ್ಕಿಸಿ 2 ಲಕ್ಷ ರೂ. ಸುಪಾರಿ ಕೊಟ್ಟಿದ್ದಾಳೆ. ನಂತರ ಅವರು ಅಕ್ಬರ್ ಬೈಗ್, ಅಯಾಜ್ ಮತ್ತು ಶೇಕ್ ಜಹೀರ್ ಎಂಬವರಿಗೆ ಸುಪಾರಿ ಕೊಟ್ಟಿದ್ದಾರೆ.

    ಫೆಬ್ರವರಿ 20 ರಂದು ಖಜಾ ಮತ್ತು ಮುಜೀಬ್ ಹೆಚ್ಚು ಮದ್ಯ ಖರೀದಿಸಿ ಬೊರಾಬಂಡಾದಲ್ಲಿ ರೈಲ್ವೆ ಟ್ರ್ಯಾಕ್ ಬಳಿ ಬಂದಿದ್ದಾರೆ. ಅಲ್ಲಿ ಅಯಾಜ್, ಅಕ್ಬರ್ ಮತ್ತು ಜಹೀರ್ ಇವರ ಜೊತೆ ಸೇರಿಕೊಂಡಿದ್ದಾರೆ. ಬಳಿಕ ಎಲ್ಲರೂ ಒಟ್ಟಾಗಿ ಸೇರಿದ್ದು, ಖಾಜಾ ಅತಿಯಾಗಿ ಕುಡಿದಿದ್ದಾನೆ. ಆಗ ಮುಜೀಬ್ ಮತ್ತು ಆಯಾಜ್ ಖಜಾರನ್ನು ತಳ್ಳಿ ಅವನ ತಲೆಯನ್ನು ಬಂಡೆಗಳ ಮೂಲಕ ಹೊಡೆದಿದ್ದಾರೆ. ನಂತರ ಅವರು ದೇಹವನ್ನು ರೈಲ್ವೇ ಟ್ರ್ಯಾಕ್ ಬಳಿ ಎಸೆದು ಸ್ಥಳದಿಂದ ಪರಾರಿಯಾಗಿರುವುದಾಗಿ ಅವರು ಬಾಯ್ಬಿಟ್ಟಿದ್ದಾರೆ.

    ಇದೀಗ ಮಹಿಳೆಯ ದೂರಿನ ನೀಡಿದ ಬಳಿಕ ತನಿಖೆ ಮುಂದುವರಿಸಿದ ಪೊಲಿಸರಿಗೆ, ಮೃತ ವ್ಯಕ್ತಿಯ ಪತ್ನಿಯೇ ಕ್ರೂರವಾಗಿ ಕೊಲೆ ಮಾಡಿದ್ದಾಳೆ ಅನ್ನೋದು ಸ್ಪಷ್ಟವಾಗಿದೆ. ಹೀಗಾಗಿ ಖಜಾ ಪತ್ನಿ ಸಲ್ಹಾ ಬೇಗಮ್ ಜೊತೆ ಮೊಹದ್ ತಬ್ರೇಜ್ ಖುರೇಷಿ ಮತ್ತು ಇತರು ನಾಲ್ವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

  • ಮದ್ವೆಯಾಗಿ 11 ವರ್ಷವಾದ್ಮೇಲೆ ಪ್ರಿಯಕರನೊಂದಿಗೆ ಓಡಿಹೋದ 3 ಮಕ್ಕಳ ತಾಯಿ!

    ಮದ್ವೆಯಾಗಿ 11 ವರ್ಷವಾದ್ಮೇಲೆ ಪ್ರಿಯಕರನೊಂದಿಗೆ ಓಡಿಹೋದ 3 ಮಕ್ಕಳ ತಾಯಿ!

    ಪಾಟ್ನಾ: ಮದುವೆಯಾಗಿ 11 ವರ್ಷಗಳ ನಂತರ 3 ಮಕ್ಕಳ ತಾಯಿಯೊಬ್ಬಳು ತನ್ನ ಪ್ರಿಯಕರ ಜೊತೆ ಓಡಿಹೋದ ಘಟನೆ ಬಿಹಾರದ ಮುಂಗೇರ್ ಜಿಲ್ಲೆಯ ಈಸ್ಟ್ ಕಾಲೋನಿನಲ್ಲಿ ನಡೆದಿದೆ.

    ಮನೋಜ್ ಕುಮಾರ್ ಎಂಬವರ ಪತ್ನಿ ಪಕ್ಕದ್ಮನೆ ಯುವಕನ ಜೊತೆ ಓಡಿಹೋಗಿದ್ದಾಳೆ. ಮನೋಜ್ ಕುಮಾರ್ ವೃತ್ತಿಯಲ್ಲಿ ವಿಡಿಯೋಗ್ರಾಫರ್ ಆಗಿದ್ದು, ಈ ದಂಪತಿಗೆ ಎರಡು ಗಂಡು ಹಾಗೂ ಒಂದು ಹೆಣ್ಣು ಮಗುವಿದೆ.

                                  ಪತಿ ಮನೋಜ್ ಕುಮಾರ್

    ಮನೋಜ್ ಕೆಲಸದ ಮೇಲೆ ಬೇರೆ ಊರಿಗೆ ತೆರಳಿದ್ದ ಸಂದರ್ಭದಲ್ಲಿ ಆತನ ಪತ್ನಿ ತನ್ನ ಇಬ್ಬರು ಮಕ್ಕಳ ಜೊತೆ ಪಕ್ಕದ್ಮನೆ ಯುವಕನ ಜೊತೆ ಓಡಿ ಹೋಗಿದ್ದಾಳೆ. ಪತ್ನಿ ಓಡಿಹೋದ ಮೇಲೆ ಮನೋಜ್ ಏಪ್ರಿಲ್ 8ರಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮನೋಜ್ ಪೊಲೀಸ್ ಠಾಣೆಯಿಂದ ಡಿಐಜಿ ಕಚೇರಿವರೆಗೂ ದೂರು ನೀಡಿದ್ದರು. ಆದರೆ ಅವರ ದೂರಿಗೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಮನೋಜ್‍ಗೆ ಪೊಲೀಸ್ ಅಧಿಕಾರಿಯಿಂದ ಕೇವಲ ಆಶ್ವಾಸನೆಯಷ್ಟೇ ಸಿಕ್ಕಿದೆ ಎಂಬುದಾಗಿ ವರದಿಯಾಗಿದೆ.

    ಪುಸ್ತಕ ತರಬೇಕೆಂದ ಅಣ್ಣಂದಿರ ಜೊತೆ ಹೋದ ಅಮ್ಮ ಮತ್ತೆ ಹಿಂದಿರುಗಲಿಲ್ಲ ಎಂದು ಮನೋಜ್ ಕುಮಾರ್ ಮಗಳು ತಿಳಿಸಿದ್ದಾಳೆ.

  • ಮಚ್ಚಿನಿಂದ ಕೊಚ್ಚಿ ಪತ್ನಿ, ಅತ್ತೆಯನ್ನು ಬರ್ಬರವಾಗಿ ಕೊಲೆಗೈದ!

    ಮಚ್ಚಿನಿಂದ ಕೊಚ್ಚಿ ಪತ್ನಿ, ಅತ್ತೆಯನ್ನು ಬರ್ಬರವಾಗಿ ಕೊಲೆಗೈದ!

    ತುಮಕೂರು: ತನ್ನ ಅತ್ತೆ ಮತ್ತು ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಆಘಾತಕಾರಿ ಘಟನೆಯೊಂದು ತುಮಕೂರಿನ ಪಾವಗಡ ತಾಲೂಕಿನ ಗೌಡಿ ಹಟ್ಟಿಯಲ್ಲಿ ನಡೆದಿದೆ.

    ರಾಮಾಂಜಿನಮ್ಮ(50), ನಾಗಮಣಿ(28) ಕೊಲೆಯಾದ ದುರ್ದೈವಿಗಳು. ಮಂಜುನಾಥ್ (30) ಹತ್ಯೆಗೈದ ಆರೋಪಿ.

    ದಿನಗೂಲಿ ಕೆಲಸ ಮಾಡುತ್ತಿದ್ದ ಮಂಜುನಾಥ್, ಪತ್ನಿ ನಾಗಮಣಿಯನ್ನು ವರಿಸಿ 6 ವರ್ಷವಾಗಿತ್ತು. ಆ ಬಳಿಕ ಪತ್ನಿಗೆ ಅಕ್ರಮ ಸಂಬಂಧವಿದೆಯೆಂದು ಶಂಕಿಸಿದ್ದನು. ಈ ವಿಚಾರವಾಗಿ ಕುಡಿದು ಬಂದು ಗಲಾಟೆ ಕೂಡ ಮಾಡುತ್ತಿದ್ದನು.

    ನಾಗಮಣಿ ಅವರು ತವರು ಮನೆಗೆ ತೆರಳಿದ್ದ ಸಂದರ್ಭದಲ್ಲಿ ಮಂಜುನಾಥ್ ಕುಡಿದು ಆಕೆಯ ಮನೆಗೆ ಹೋಗಿದ್ದಾನೆ. ಅಲ್ಲದೇ ಅಕ್ರಮ ಸಂಬಂಧ ವಿಚಾರವಾಗಿ ಮತ್ತೆ ತಗಾದೆ ತೆಗೆದಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದಿದ್ದು, ಮಂಜುನಾಥ್, ಮಚ್ಚಿನಿಂದ ಕೊಚ್ಚಿ ಪತ್ನಿಯನ್ನು ಬರ್ಬರವಾಗಿ ಕೊಲೆಗೈದಿದ್ದಾನೆ. ಈ ವೇಳೆ ನಾಗಮಣಿ ತಾಯಿ ಅಡ್ಡಬಂದಿದ್ದರಿಂದ ಇದರಿಂದ ಸಿಟ್ಟುಗೊಂಡ ಮಂಜುನಾಥ್ ಅತ್ತೆಯ ಮೇಲೂ ಮಚ್ಚು ಬೀಸಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡ ಅತ್ತೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಮಂಜುನಾಥ್ -ನಾಗಮಣಿ ದಂಪತಿಗೆ ಮಗನೊಬ್ಬನಿದ್ದು, ಇದೀಗ ತಾಯಿಯನ್ನು ಕಳೆದುಕೊಂಡಿದ್ದಾನೆ.

    ಸ್ಥಳಕ್ಕೆ ಪಾವಗಡ ಪೊಲೀಸರ ಭೇಟಿ, ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವಿವಾಹವಾದ ಮೂರೇ ವಾರಕ್ಕೆ ಮಹಿಳೆ ಅನುಮಾನಾಸ್ಪದ ಸಾವು!

    ವಿವಾಹವಾದ ಮೂರೇ ವಾರಕ್ಕೆ ಮಹಿಳೆ ಅನುಮಾನಾಸ್ಪದ ಸಾವು!

    ಬೆಂಗಳೂರು: ಮೂರು ವಾರದ ಹಿಂದೆ ಮದುವೆಯಾಗಿದ್ದ ಮಹಿಳೆ ಅನುಮಾನಸ್ಪದವಾಗಿ ಮೃತಪಟ್ಟ ಘಟನೆ ಕೆಆರ್ ಪುರದ ರೈಲ್ವೆ ಕ್ವಾಟ್ರಸ್ ನಲ್ಲಿ ನಡೆದಿದೆ.

    ಮೃತ ದುರ್ದೈವಿ ನವವಿವಾಹಿತೆಯನ್ನು ರಮಿತಾ ಎಂದು ಗುರುತಿಸಲಾಗಿದೆ. ಈಕೆ ವೋಲ್ವೋ ಸಂಸ್ಥೆಯ ಉದ್ಯೋಗಿಯಾಗಿದ್ದರು.

    ಮೂರು ವಾರಗಳ ಹಿಂದೆಯಷ್ಟೇ ರಮಿತಾ ರೈಲ್ವೆ ಸಿಬ್ಬಂದಿ ನರೇಶ್ ನನ್ನು ಪ್ರೀತಿಸಿ ಮದುವೆ ಆಗಿದ್ದರು. ಆದ್ರೆ ಇದೀಗ ರಮಿತಾ ಮೃತಪಟ್ಟಿದ್ದು, ಕೊಲೆ ಮಾಡಿ ನೇಣು ಬಿಗಿದಿರುವ ಶಂಕೆ ವ್ಯಕ್ತವಾಗುತ್ತಿದೆ. ಈ ಸಂಬಂಧ ಕೆಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅನುಮಾನಪಟ್ಟಿದ್ದಕ್ಕೆ ಮೈದುನನ ಜೊತೆ ಸೇರಿ ಪತ್ನಿಯಿಂದಲೇ ಪತಿಯ ಕೊಲೆ!

    ಅನುಮಾನಪಟ್ಟಿದ್ದಕ್ಕೆ ಮೈದುನನ ಜೊತೆ ಸೇರಿ ಪತ್ನಿಯಿಂದಲೇ ಪತಿಯ ಕೊಲೆ!

    ಲಕ್ನೋ: ಪತ್ನಿಯೊಬ್ಬಳು ತನ್ನ ಮೈದುನ ಜೊತೆ ಸೇರಿ ಪತಿಯನ್ನೇ ಗುಂಡಿಕ್ಕಿ ಕೊಂದ ಘಟನೆ ಉತ್ತರಪ್ರದೇಶದ ಬಾಂದಾ ಜಿಲ್ಲೆಯಲ್ಲಿ ನಡೆದಿದೆ.

    ದಿನೇಶ್ ಯಾದವ್(30) ಕೊಲೆಯಾದ ವ್ಯಕ್ತಿ. ಸ್ಯೋಯದ್ ಗ್ರಾಮದಲ್ಲಿ ಗುರುವಾರ ಸುಮಾರು 3.45ಕ್ಕೆ ದಿನೇಶ್ ಹೊಲದಲ್ಲಿ ಕೆಲಸ ಮಾಡುತ್ತಿದ್ದನು. ಆಗ ಆತನನ್ನು ಹಿಂದಿನಿಂದ ಗುಂಡಿಕ್ಕಿ ಕೊಲೆ ಮಾಡಿದ್ದರು. ಗುಂಡೇಟಿಗೆ ದಿನೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

    ದಿನೇಶ್ ತಂದೆ ಈ ಕೊಲೆಗೆ ಸಂಬಂಧಪಟ್ಟಂತೆ ಇಬ್ಬರು ಅಪರಿಚಿತರ ಮೇಲೆ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಕಮಾಸಿನ್ ಠಾಣೆ ಪೊಲೀಸರು ವಿಚಾರಣೆ ಶುರು ಮಾಡಿದ್ದರು. ಈ ಕೇಸ್ ವಿಚಾರಣೆ ಶುರು ಮಾಡಿದ ದಿನದಿಂದ ದಿನೇಶ್ ಪತ್ನಿ ಬಿಜಮಾ ದೇವಿ ಮೇಲೆ ಅನುಮಾನ ಮೂಡಿದೆ.

    ಬಿಜಮಾ ಹಾಗೂ ಆಕೆಯ ಮೈದುನ ಅಕಿಲೇಶ್ ಯಾದವ್ ನನ್ನು ವಿಚಾರಣೆ ಮಾಡಿದ್ದಾಗ ಸತ್ಯಾಂಶ ಹೊರಬಂದಿದೆ ಎಂದು ಬಬೇರೂ ಕ್ಷೇತ್ರದ ಹಿರಿಯ ಪೊಲೀಸ್ ಅಧಿಕಾರಿ ಓಂಪ್ರಕಾಶ್ ಹಾಗೂ ಕಮಾಸಿನ್ ಹಿರಿಯ ಅಧಿಕಾರಿ ರಾಕೇಶ್ ಪಾಂಡೆ ತಿಳಿಸಿದ್ದಾರೆ.

    ಬಿಜಮಾ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ. ದಿನೇಶ್ ನನ್ನ ಮೇಲೆ ಯಾವಾಗಲೂ ಅನುಮಾನಪಡುತ್ತಿದ್ದ. ಅಷ್ಟೇ ಅಲ್ಲದೇ ನನ್ನ ಮೇಲೆ ಹಲ್ಲೆ ನಡೆಸುತ್ತಿದ್ದ. ನನಗೆ ಆತನ ತಾತ, ಚಿಕ್ಕಪ್ಪ ಹಾಗೂ ಗ್ರಾಮದ ಹಿರಿಯರ ಜೊತೆ ಅಕ್ರಮ ಸಂಬಂಧವಿದೆ ಎಂದು ಆರೋಪಿಸುತ್ತಿದ್ದ. ಇದ್ದರಿಂದ ನಾನು ಬೇಸತ್ತು ಆತನ ಕೊಲೆ ಮಾಡಲು ನಿರ್ಧರಿಸಿದೆ ಎಂದು ಬಿಜಮಾ ಪೊಲೀಸರ ಹತ್ತಿರ ತಿಳಿಸಿದ್ದಾಳೆ.

    ದಿನೇಶ್ ಹಾಗೂ ಬಿಜಮಾ ಮದುವೆಯಾಗಿ ಮೂರು ವರ್ಷವಾಗಿತ್ತು. ಅಖಿಲೇಶ್ ತನ್ನ ಅಣ್ಣನನ್ನು ಕೊಂದು ಆತ ಜೈಲಿಗೆ ಹೋಗಿ ಬಂದ ನಂತರ ಆತನನ್ನು ಮದುವೆಯಾಗುವುದ್ದಾಗಿ ಬಿಜಮಾ ಅಖಿಲೇಶ್‍ಗೆ ತಿಳಿಸಿದ್ದಳು. ಅಖಿಲೇಶ್ ಪುಣೆಯಲ್ಲಿ ಕೆಲಸ ಮಾಡುತ್ತಿದ್ದು, ಕೆಲ ದಿನಗಳ ಹಿಂದೆ ತನ್ನ ಮನೆಗೆ ಬಂದಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

  • ಪತ್ನಿಯೊಂದಿಗೆ ಸಿಕ್ಕಿಬಿದ್ದ ಯುವಕನನ್ನ ಮರಕ್ಕೆ ಕಟ್ಟಿ ಅರೆನಗ್ನಗೊಳಿಸಿ ಥಳಿಸಿದ ಪತಿ – ವಿಡಿಯೋ ವೈರಲ್

    ಪತ್ನಿಯೊಂದಿಗೆ ಸಿಕ್ಕಿಬಿದ್ದ ಯುವಕನನ್ನ ಮರಕ್ಕೆ ಕಟ್ಟಿ ಅರೆನಗ್ನಗೊಳಿಸಿ ಥಳಿಸಿದ ಪತಿ – ವಿಡಿಯೋ ವೈರಲ್

    ಜೈಪುರ: ಪತ್ನಿಯೊಂದಿಗೆ ಸಿಕ್ಕಿಬಿದ್ದ ಯುವಕನನ್ನು ಪತಿ ಗ್ರಾಮದ ಮರವೊಂದಕ್ಕೆ ಕಟ್ಟಿ ಹಾಕಿ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ರಾಜಸ್ಥಾನದ ಬಾಂಸವಾಡ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ತನ್ನ ಪತ್ನಿಯ ಜೊತೆ ಯುವಕ ಇರೋದನ್ನ ಕಂಡ ಪತಿ ಕೋಪಗೊಂಡು ಆತನನ್ನು ಹೊರತಂದು ಮರಕ್ಕೆ ಕಟ್ಟಿ ಅರೆ ನಗ್ನಗೊಳಿಸಿ ಹೊಡೆದಿದ್ದಾನೆ.

    ಯುವಕನಿಗೆ ಥಳಿಸುತ್ತಿರುವ ಸುದ್ದಿ ಕೆಲವೇ ಕ್ಷಣಗಳಲ್ಲಿ ಗ್ರಾಮದ ತುಂಬೆಲ್ಲಾ ಹರಡಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಗ್ರಾಮಸ್ಥರು ಯುವಕನನ್ನು ಬಿಡಿಸಲು ಮುಂದಾಗಿಲ್ಲ. ಈ ವೇಳೆ ಗ್ರಾಮದ ಕೆಲ ಯುವಕರು ತಮ್ಮ ಮೊಬೈಲ್ ನಲ್ಲಿ ಹಲ್ಲೆಯ ದೃಶ್ಯಗಳನ್ನು ಸೆರೆ ಹಿಡಿದುಕೊಂಡಿದ್ದಾರೆ.

    ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಯುವಕನನ್ನು ರಕ್ಷಣೆ ಮಾಡಿದ್ದಾರೆ. ಪೊಲೀಸ್ ವಿಚಾರಣೆಯಲ್ಲಿ ಪಂಚಾಯಿತಿ ವಿವಾದಕ್ಕೆ ಸಂಬಂಧಿಸಿದ ಹಿನ್ನೆಲೆಯಲ್ಲಿ ಯುವಕನನ್ನು ಥಳಿಸಲಾಗಿದೆ. ಈ ಸಂಬಂಧ ಗ್ರಾಮದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ ಅಂತಾ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ಹಲ್ಲೆ ಮಾಡಿರುವ ವ್ಯಕ್ತಿ ಮಾತ್ರ ಯುವಕ ನನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಅಂತಾ ದೂರು ನೀಡಿದ್ದರೆ ಇತ್ತ ಯುವಕ ಸಹ ಹಲ್ಲೆ ಮಾಡಿದವರ ವಿರುದ್ಧ ದೂರು ದಾಖಲಿಸಿದ್ದಾನೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.